ತತ್ತ್ವ ತ್ರಯಮ್ – ಈಶ್ವರ – ಭಗವಂತನೆಂದರೆ ಯಾರು?

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಶೀರ್ಷಿಕೆ

ಇಲ್ಲಿಯವರೆಗೂ ನಾವು ಚಿತ್‍ನ ಸ್ವರೂಪವನ್ನು ನೋಡಿದೆವು. (……….) ಮತ್ತು ಅಚಿತ್‍ನ ಸ್ವರೂಪವನ್ನು ನೋಡಿದೆವು,(…..)

ಈ ಲೇಖನವನ್ನು ಪ್ರೆಸೆಂಟೇಶನ್‍ನ ಮೂಲಕ ಕೂಡಾ ನೋಡಬಹುದಾಗಿದೆ. (……………….)

ಈಶ್ವರ ತತ್ವವನ್ನು ಬುದ್ಧಿವಂತ ಮನುಜರ ಬೋಧನೆಯಿಂದ ಅರ್ಥಮಾಡಿಕೊಳ್ಳುವುದು

ನಾವು ಮೂರು ರೀತಿಯ ತತ್ವಗಳನ್ನು (ಚಿತ್, ಅಚಿತ್, ಈಶ್ವರ) ಪಿಳ್ಳೈ ಲೋಕಾಚಾರ್‍ಯರ ದಿವ್ಯ ಗ್ರಂಥವಾದ “ ತತ್ತ್ವ ತ್ರಯ”ದ ಮೂಲಕ ಮತ್ತು ಮಣವಾಳ ಮಾಮುನಿಗಳ ಸುಂದರವಾದ ವ್ಯಾಖ್ಯಾನದ ಸಹಾಯದಿಂದ ತಿಳಿದುಕೊಳ್ಳೋಣ.

ಪರಿಚಯ

ಮೊದಲು ಎಂಪೆರುಮಾನರ ಸ್ವರೂಪಮ್ (ವಿಶಿಷ್ಟವಾದ ಗುಣ) ವನ್ನು ವಿಸ್ತಾರವಾಗಿ ವಿವರಿಸಲಾಗಿದೆ. ಅದು ಅನ್ಯ ತತ್ವಗಳಿಗಿಂತಾ ಸಂಪೂರ್ಣವಾಗಿ ವಿಭಿನ್ನವಾದುದು. ಅದನ್ನು ನಿಮ್ಮ ಮುಂದೆ ಇರಿಸಲಾಗಿದೆ.

ಸ್ವರೂಪಮ್ : ನಿಜ ಗುಣ

 • ಗುಣದಲ್ಲಿ ಈಶ್ವರನು
  • ಯಾವ ಅಶುಭ ಗುಣಗಳಿಗೂ ಆಶ್ರಿತನಲ್ಲ (ಇದರ ಅರ್ಥ ಎಲ್ಲಾ ಶುಭ ಗುಣಗಳಿಗೂ ಆಶ್ರಿತನಾಗಿರುವನು)
  • ಅವನು ಇವುಗಳಿಂದ ಬಂಧಿತನಾಗಿಲ್ಲ
   • ಸಮಯ – ಭೂತ, ವರ್ತಮಾನ ಮತ್ತು ಭವಿಷ್ಯದಲ್ಲೂ ಅಸ್ತಿತ್ವದಲ್ಲಿರುವನು
   • ಜಾಗ – ಎಲ್ಲಾ ಕಡೆಯಲ್ಲಿಯೂ ಆಧ್ಯಾತ್ಮಿಕ ಮತ್ತು ಲೌಕಿಕ ಜಗತ್ತಿನಲ್ಲಿಯೂ ಎಲ್ಲೆಲ್ಲಿಯೂ ವ್ಯಾಪಿಸಿರುವನು
   • ವಸ್ತುಗಳು – ಎಲ್ಲಾ ಪ್ರಸ್ತುತ ಇರುವ ವಸ್ತುಗಳ ಆತ್ಮವಾಗಿರುವನು
  • ಸಂಪೂರ್ಣ ಜ್ಞಾನ ಮತ್ತು ಅಪರಿಮಿತ ಆನಂದದ ಆಶ್ರಯವಾಗಿರುವನು
  • ಹಲವು ಕಲ್ಯಾಣ ಗುಣಗಳ ವಾಸಸ್ಥಾನವಾಗಿರುವನು ಉದಾ: ಜ್ಞಾನ, ಸಂಪತ್ತು, ಶಕ್ತಿ ಮುಂತಾದುವುಗಳು
  • ಸೃಷ್ಟಿ, ಸ್ಥಿತಿ ಮತ್ತು ಲಯದ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬನೇ ನಿರ್ವಹಿಸುವವನು
  • ನಾಲ್ಕು ವಿಧದ ಯಾಚಕರಿಗೆ ಆಶ್ರಯವಾಗಿರುವವನು (ಭಗವದ್ಗೀತೆಯ 7.16 ಕಣ್ಣನ್ ಎಂಪೆರುಮಾನರು ಅವರೇ ಹೇಳಿರುವ ಹಾಗೆ)
   • ಆರ್ತ – ಸಂಕಟದಲ್ಲಿರುವವರಿಗೆ
   • ಅರ್ಥಾರ್ಥಿ – ಹೊಸ ಸಂಪತ್ತಿಗಾಗಿ ಆಸೆ ಪಡುವವರಿಗೆ
   • ಜಿಜ್ಞಾಸುರ್ – ಕೈವಲ್ಯಕ್ಕಾಗಿ ಬೇಡುವವರಿಗೆ
   • ಜ್ಞಾನಿ – ನಿಜ ಭಕ್ತರಿಗೆ
  • ನಾಲ್ಕು ಪುರುಷಾರ್ಥಗಳನ್ನು (ಗುರಿ) ಅನುಗ್ರಹಿಸುವವನು – ಧರ್ಮ, ಅರ್ಥ, ಕಾಮ , ಮೋಕ್ಷ
  • ಹಲವು ದಿವ್ಯ ರೂಪಗಳನ್ನು ಹೊಂದಿರುವವನು
  • ಶ್ರೀಮಹಾಲಕ್ಷ್ಮಿ, ಭೂದೇವಿ ಮತ್ತು ನೀಳಾದೇವಿಯರಿಗೆ ಪ್ರೀತಿಯ ಪತಿಯಾಗಿರುವವನು
 • ಅವನು ಎಲ್ಲಾ ಚಿತ್ ಮತ್ತು ಅಚಿತ್‍ಗಳಿಗೆ ನಿಯಂತ್ರಕನಾಗಿರುವ ಆತ್ಮವಾಗಿರುತ್ತಾನೆ, ಆದರೆ ಆ ವಸ್ತುಗಳು ಅವನನ್ನು ಯಾವ ರೀತಿಯಲ್ಲೂ ಪ್ರಭಾವಿಸಲು ಸಾದ್ಯವಿಲ್ಲ, ಹೇಗೆ ಜೀವಾತ್ಮವು ಬದಲಾಗುವ ಶರೀರದಿಂದ ಪ್ರಭಾವಗೊಳ್ಳದಿರುವ ಹಾಗೆ.

ಅವನ ಕಲ್ಯಾಣ ಗುಣಗಳು

 • ಅವನ ಅತ್ಯದ್ಭುತವಾದ ದಿವ್ಯ ಶುಭ ಗುಣಗಳು
  • ಶಾಶ್ವತ – ಅವುಗಳು ಎಂದೆಂದಿಗೂ ಇರುತ್ತವೆ
  • ಅಗಣಿತವಾದದ್ದು – ಅವುಗಳು ಎಣಿಸಲು ಸಾಧ್ಯವಾಗುವುದಿಲ್ಲ
  • ಅಪರಿಮಿತವಾದದ್ದು – ಅವುಗಳನ್ನು ಸಂಪೂರ್ಣವಾಗಿ ವಿವರಿಸಲು ಸಾಧ್ಯವಾಗದಷ್ಟು ವಿಸ್ತಾರ
  • ಕಾರಣವಿಲ್ಲದ್ದು – ಅವನ ದಿವ್ಯ ಗುಣಗಳು ಯಾವುದಾದರೂ ಹೊರಗಿನ ವಸ್ತುಗಳಿಂದ ಪ್ರಚೋದಿತವಾದುದ್ದಲ್ಲ, ಅವುಗಳು ಸಹಜವಾಗಿ ಇರುವಂಥದ್ದು.
  • ನ್ಯೂನ್ಯತೆರಹಿತ – ಅವುಗಳಿಗೆ ಯಾವ ರೀತಿಯ ನ್ಯೂನ್ಯತೆಗಳಿಲ್ಲ
  • ಹೋಲಿಕೆರಹಿತವಾದದ್ದು – ಎಂಪೆರುಮಾನರಿಗೆ ಯಾರೂ ಸಮನಾಗಿಯೋ, ಹೆಚ್ಚಾಗಿಯೋ ಇಲ್ಲದಿರುವುದರಿಂದ ಅವರ ದಿವ್ಯ ಗುಣಗಳಿಗೂ ಸಹ ಸಮ ಮತ್ತು ಹೆಚ್ಚು ಇರುವುದಿಲ್ಲ.
 • ಅವನ ಮೂರು ವಿಧವಾದ ಕಲ್ಯಾಣ ಗುಣಗಳು
  • ಅವನ ಭಕ್ತರಿಗೆ ಮತ್ತು ಅವನನ್ನು ಇಷ್ಟ ಪಡುವವರಿಗೆ
   • ವಾತ್ಸಲ್ಯಮ್ – ತಾಯಿಯಂತೆ ತಾಳ್ಮೆ
ತಿರುವೇಂಕಟ ಮುಡೈಯಾನ್ ಅವರ ವಾತ್ಸಲ್ಯಕ್ಕೇ ಹೆಸರಾದವರು
 • ಸೌಶೀಲ್ಯಮ್
ಶ್ರೀರಾಮನು ಸೌಶೀಲ್ಯಕ್ಕೇ ಪ್ರಸಿದ್ಧವಾದವನು. ಅವರು ಗುಹ ಹಾಗೂ ಹನುಮಂತನೊಂದಿಗೆ ಸಹಜವಾಗಿ ಮಿಲನವಾಗುತ್ತಿರುವುದು.
 • ಸೌಲಭ್ಯಮ್ – ಸುಲಭವಾಗಿ ದೊರಕುವ
ಕಣ್ಣನ್ ಎಂಪೆರುಮಾನರು ತಮ್ಮ ಸೌಲಭ್ಯವನ್ನು ತೋರಿಸುತ್ತಿರುವುದು.
 • ಮಾರ್ದವಮ್ – ಕರಗುವ (ದೇಹ ಮತ್ತು ಹೃದಯದಲ್ಲಿಯೂ)
   • ಆರ್ಜವಮ್ – ಪ್ರಾಮಾಣಿಕ
  • ಅವನಿಗೂ ಅವನ ಭಕ್ತರಿಗೂ ಕೆಡುಕನ್ನು ಯೋಚಿಸುವವರಿಗೆ
   • ಶೌರ್‍ಯಮ್ – ಧೈರ್‍ಯ
   • ವೀರ್ಯ – ಶಕ್ತಿ/ ಬಲವಾದ ಮುಂತಾದುವು
  • ಎಲ್ಲರಿಗೂ ಸಾಮಾನ್ಯವಾದದ್ದು
   • ಜ್ಞಾನ – ಎಲ್ಲವನ್ನೂ ಸಂಪೂರ್ಣವಾಗಿ ಬಲ್ಲವನು
   • ಶಕ್ತಿ – ವೀರ್ಯ
   • ಬಲ – ಎಲ್ಲವನ್ನೂ ಬೆಂಬಲಿಸುವ ಶಕ್ತಿ
   • ಐಶ್ವರ್‍ಯ – ನಿಯಂತ್ರಿಸುವ ಶಕ್ತಿ
   • ವೀರ್ಯ – ಎಲ್ಲವನ್ನೂ ನಿಭಾಯಿಸಿದರೂ, ತನ್ನನ್ನು ತಾನು ಬದಲಾಯಿಸದ ಗುಣ (ಅವಿಕಾರ)
   • ತೇಜಸ್ – ಒಂದೊಂದನ್ನೂ ನಿಭಾಯಿಸುವ ಸಾಮರ್ಥ್ಯ
 • ಕಲ್ಯಾಣ ಗುಣಗಳು ಮತ್ತು ಆ ಗುಣಗಳು ಯಾರನ್ನು ಕುರಿತು
  • ಅವನ ಜ್ಞಾನಮ್ – ಯಾರು ತನ್ನನ್ನು ತಾನು ಅಜ್ಞಾನಿ ಎಂದು ಅರಿತುಕೊಂಡಿರುತ್ತನೋ
  • ಅವನ ಶಕ್ತಿ – ದೈನ್ಯದಲ್ಲಿರುವವರ ಸಹಾಯಕ್ಕಾಗಿ ಉಪಯೋಗಿಸುವನು
  • ಅವನ ಕ್ಷಮೆ (ತಪ್ಪನ್ನು ಮನ್ನಿಸುವುದು) – ಯಾರು ತಾವು ತಪ್ಪನ್ನು ಮಾಡಿರುವುದಾಗಿ ಮನವರಿಕೆ ಮಾಡಿಕೊಳ್ಳುತ್ತಾರೋ
  • ಅವನ ಕೃಪೆ – ಯಾರು ಕಷ್ಟದಲ್ಲಿರುವರೆಂದು ಮನಗೊಳ್ಳುತ್ತಾರೋ
  • ಅವನ ವಾತ್ಸಲ್ಯಮ್ – ಯಾರು ತಮ್ಮನ್ನು ತಾವು ನ್ಯೂನ್ಯತೆಗಳಿರುವವರು ಎಂದು ಅರಿತುಕೊಳ್ಳುತ್ತಾರೋ
  • ಅವನ ಶೀಲಮ್ – ಯಾರು ತಮ್ಮನ್ನು ತಾವು ಕೀಳಾಗಿ ಪರಿಗಣಿಸುತ್ತಾರೋ
  • ಅವನ ಆರ್ಜವಮ್ – ಯಾರು ತಮ್ಮನ್ನು ತಾವು ಅಪ್ರಾಮಾಣಿಕವಾಗಿ ಪರಿಗಣಿಸುತ್ತಾರೋ ಅವರಿಗೆ ಸಹಾಯ ಮಾಡಲು
  • ಅವನ ಸೌಹಾರ್ದಮ್ – ಯಾರು ತಮ್ಮನ್ನು ತಾವು ಒಳ್ಳೆಯವನೆಂದು ತಿಳಿದುಕೊಂಡಿಲ್ಲವೋ
  • ಅವನ ಮಾರ್ದವಮ್ – ಭಗವಂತನಿಂದ ಅಗಲಿಕೆಯನ್ನು ಯಾರು ತಡೆದುಕೊಳ್ಳಲಾಗುವುದಿಲ್ಲವೋ
  • ಅವನ ಸೌಲಭ್ಯಮ್ – ಯಾರು ಅವನನ್ನು ನೋಡಲು ಬಯಸುತ್ತಾರೋ
  • ಮುಂತಾದುವು
 • ಅವನ ಗುಣಗಳನ್ನು ತೋರ್ಪಡಿಸುವುದು ಈ ಮೂಲಕ
  • ಅವನು ಸಂಕಟದಲ್ಲಿರುವ ಜೀವಾತ್ಮಗಳಿಗೆ (ಆತ್ಮಗಳಿಗೆ) ನಿರಂತರವಾಗಿ ಕಾಳಜಿಯನ್ನು ತೋರಿಸುವನು ಮತ್ತು ಅವರ ಯೋಗಕ್ಷೇಮವನ್ನು ಯಾವಾಗಲೂ ಗಮನಿಸುವನು.
  • ಅವರು ಕಷ್ಟದಲ್ಲಿರುವಾಗ ನಿರಂತರವಾಗಿ ಸಹಾಯ ಮಾಡಲು ಪ್ರಯತ್ನಿಸುವನು.
  • ಯಾರು ಅವನಿಗೆ ಶರಣಾಗತರಾಗುತ್ತಾರೋ,
   • ಅವನು ಅವರಲ್ಲಿರುವ ನ್ಯೂನ್ಯತೆಗಳನ್ನು ನೋಡುವುದಿಲ್ಲ, ಅವುಗಳು ಅವರ ಜನ್ಮ, ಅಜ್ಞಾನ, ಕ್ರಿಯೆ, ಇತ್ಯಾದಿಗಳಿಂದ  ಬಂದಿರುತ್ತವೆ.
   • ಅವರೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಥವಾ ಬೇರೆಯವರು ಅವರನ್ನು ರಕ್ಷಿಸಲು ಸಾಧ್ಯವಿಲ್ಲದಾಗ , ಅವನು ತಾನೇ ರಕ್ಷಿಸುತ್ತಾನೆ.
   • ಅವನು ಅನೇಕ ಪವಾಡಗಳನ್ನು , ಚತುರತೆಗಳನ್ನು ಮಾಡಿ ಅವರನ್ನು ಒಲಿಸಿಕೊಳ್ಳುತ್ತಾನೆ. ಹೇಗೆ ಕಣ್ಣನ್ ಎಂಪೆರುಮಾನರು ಸಾಂದೀಪನಿ ಮುನಿಗೆ ಅವರ ಮೃತ ಮಗನನ್ನು ಬದುಕಿಸಿ ತಂದ ಹಾಗೆ, ಬ್ರಾಹ್ಮಣನ ಮಕ್ಕಳನ್ನು ಶ್ರೀ ಮಹಾಲಕ್ಷ್ಮಿಯಿಂದ ತಿರುಗಿ ತಂದು ಬಿಟ್ಟ ಹಾಗೆ (ಕೃಷ್ಣನ ದಿವ್ಯ ದೃಷ್ಟಿ ಪರಮಪದದಲ್ಲಿ ಬೀಳಲು).
   • ಅವನು ತನ್ನ ಭಕ್ತರಿಗಾಗಿ ಸಂಪೂರ್ಣ ಯಾವಾಗಲೂ ಇರುತ್ತಾನೆ.
   • ಅವನು ತನ್ನ ಭಕ್ತರಿಗೆ ಸಹಾಯ ಮಾಡಿದ ಮೇಲೆ, ಸ್ವಯಮ್ ತೃಪ್ತಿಯಾಗುತ್ತಾನೆ – ತನ್ನದೇ ಒಂದು ವೈಯಕ್ತಿಕ ಗುರಿ ತಲುಪಿದ ಹಾಗೆ.
   • ಅವನು ಭಕ್ತರಿಗೆ ತನ್ನಿಂದಾದ ಪ್ರಯೋಜನವನ್ನು ಗಮನಕ್ಕೆ ತೆಗೆದುಕೊಳ್ಳದೆ, ಅವರ ಸ್ವಲ್ಪವೇ ಆದ ಮೌಲ್ಯಗಳನ್ನು ಪರಿಗಣಿಸುವನು ಮತ್ತು ಶರಣಾಗತರಿಗೆ ಬಹು ಕಾಲದಿಂದ ಉಳಿದ ಲೌಕಿಕ ಸಂಪತ್ತಿನ ಮೇಲೆ ಆಸೆಯನ್ನು ಮರೆಯಲು ಸಹಕರಿಸುವನು.
   • ಅವನು ಅವರ ತಪ್ಪುಗಳನ್ನು ಪರಿಗಣಿಸದೇ ಹೇಗೆ ಒಬ್ಬ ಗಂಡ ತನ್ನ ಪ್ರೀತಿಯ ಮಡದಿ ಮಕ್ಕಳ ತಪ್ಪುಗಳನ್ನು ಪರಿಗಣಿಸುವುದಿಲ್ಲವೂ ಹಾಗೆ.
   • ಶ್ರೀ ಮಹಾಲಕ್ಷ್ಮಿಯೇ ಬಂದು ಶರಣಾಗತರ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದರೂ ಅವನು ಅದನ್ನು ಪರಿಗಣಿಸುವುದಿಲ್ಲ.
   • ಅವನು ಅವರ ನ್ಯೂನ್ಯತೆಗಳನ್ನು ಅತ್ಯಂತ ಪ್ರೀತಿಯಿಂದ ತೆಗೆದುಕೊಳ್ಳುವನು. ಹೇಗೆ ಒಬ್ಬ ಮನುಷ್ಯ ತನ್ನ ಪ್ರೀತಿಯ ಸಂಗಾತಿಯ ಬೆವರನ್ನು ಅಸಹ್ಯಿಸುವುದಿಲ್ಲವೋ ಹಾಗೆ.
   • ಶರಣಾಗತರಿಂದ ಬೇರ್ಪಡಿಕೆಯು ಅವನಿಗೆ ಶರಣಾಗತರಿಗಿಂತಲೂ ಅತ್ಯಂತ ಅವೇದ್ಯನೀಯ.
   • ಒಂದು ಹಸುವು ಹೊಸ ಕರುವು ಹುಟ್ಟಿದಾಗ ಹೇಗೆ ತನ್ನ ಇತರ ಬೆಳೆದ ಕರುಗಳನ್ನು ಒದ್ದು ದೂರಮಾಡುತ್ತದೆಯೋ, ಹಾಗೆ ಎಂಪೆರುಮಾನರು ಒಂದು ಹೊಸ ಜೀವಾತ್ಮವು ಶರಣಾಗತಿಗೆ ಬಂದಾಗ ಶ್ರೀಮಹಾಲಕ್ಷ್ಮಿಯನ್ನೂ ನಿತ್ಯಸೂರಿಗಳನ್ನೂ , ತಳ್ಳಿಬಿಡುತ್ತಾರೆ.

ಅವನ ಕಾರಣತ್ವಮ್ – ಅವನೇ ಎಲ್ಲದಕ್ಕೂ ಮೂಲ ಕಾರಣನಾಗಿರುವುದು

ಮೊದಲ ಮೂಲ ಪುರುಷನಾದ ಬ್ರಹ್ಮನು ಮಹಾವಿಷ್ಣುವಿನ ನಾಭಿಯಿಂದ ಜನ್ಮ ಪಡೆಯುತ್ತಿರುವುದು
 • ಭಗವಂತನೇ ಎಲ್ಲಾ ಲೋಕಗಳಿಗೂ ಕಾರಣನಾಗಿರುವುದು
 • ಕೆಲವರು ಹೇಳುತ್ತಾರೆ, ಪರಮಾಣು (ಅಣುವಿನ ಬಹು ಚಿಕ್ಕದಾದ ಭಾಗ) ವೇ ಈ ಸೃಷ್ಟಿಗೆ ಕಾರಣವೆಂದು.
 • ಆದರೆ ಇದು ಬರಿಯ ತರ್ಕಕ್ಕೆ ಮತ್ತು ಶಾಸ್ತ್ರಕ್ಕೆ ತದ್ವಿರುದ್ಧವಾಗಿದೆ, ಅವುಗಳನ್ನು ಸೃಷ್ಟಿಯ ಮೂಲಭೂತವನ್ನಾಗಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ.
 • ವಸ್ತುಗಳಿಗೆ ಜ್ಞಾನವಿಲ್ಲದ್ದರಿಂದ , ಅವುಗಳು ಭಗವಂತನ ಸಹಾಯವಿಲ್ಲದೆ ಪರಿವರ್ತನೆಯಾಗಲು ಸಾಧ್ಯವಿಲ್ಲದ್ದರಿಂದ ಅವು ಸೃಷ್ಟಿಯ ಕಾರಣವಾಗಲು ಸಾಧ್ಯವಿಲ್ಲ.
 • ಬದ್ಧ ಚೇತನಗಳು (ಜೀವಾತ್ಮ – ಪ್ರತಿಯೊಂದು ಆತ್ಮ) ಬ್ರಹ್ಮ, ರುದ್ರ ಇತ್ಯಾದಿಗಳು ಸೃಷ್ಟಿಯ ಪ್ರಮುಖ ಕಾರಣವಾಗಲು ಸಾಧ್ಯವಿಲ್ಲ. ಅವರು ಕರ್ಮದಿಂದ ಬಂಧಿಸಲ್ಪಟ್ಟಿರುತ್ತಾರೆ ಮತ್ತು ಅವರೆಲ್ಲರೂ ಸಂಕಷ್ಟವನ್ನು ಹೊಂದಿರುತ್ತಾರೆ. ಅವರೆಲ್ಲರೂ ಸೃಷ್ಟಿಯ ಪ್ರಮುಖ ಕಾರಣವಲ್ಲ, ಆದ್ದರಿಂದ ಈಶ್ವರನೇ ಸೃಷ್ಟಿಯ ಪ್ರಮುಖ ಕಾರಣವಾಗಿರುತ್ತಾನೆ.
 • ಅವನು ಅಜ್ಞಾನದಿಂದ, ಕರ್ಮದಿಂದ, ಬೇರೆಯವರ ಆಣತಿಯಿಂದ ಕಾರಣವಾಗಿಲ್ಲದೇ, ಅವನು ತನ್ನ ಸ್ವತಃ ಇಚ್ಛೆ ಮತ್ತು ಸಂಕಲ್ಪದಿಂದ ಕಾರಣವಾಗಿರುತ್ತಾನೆ.
 • ಸೃಷ್ಟಿ, ಸ್ಥಿತಿ ಮತ್ತು ಸಂಹಾರ (ಲಯ) ಅವನ ಸ್ವತಃ ಇಚ್ಛೆಯಿಂದ ಆಗುವುದರಿಂದ, ಇವುಗಳಿಂದ ಅವನಿಗೆ ಸ್ವಲ್ಪ ಕೂಡಾ ಸಂಕಟವಿರುವುದಿಲ್ಲ.
 • ಈ ಪೂರ್ತಿ ಪ್ರಕ್ರಿಯೆಯು ಅವನ ಸಂತೋಷಕ್ಕಾಗಿ ಮತ್ತು ಅವನ ಕಾಲಕ್ಷೇಪಕ್ಕಾಗಿ.
 • ಆದರೆ ಈ ಕಾಲಕ್ಷೇಪದಲ್ಲಿ ಸಂಹಾರ(ಪ್ರಲಯ ಕಾಲ)ದಲ್ಲಿ ಅಡಚಣೆಯಾಗುತ್ತದೆಯೇ? ಸಂಹಾರವೂ ಸಹ ಅವನ ಕಾಲಹರಣದ ಅಂದು ಭಾಗವಾಗಿರುವುದರಿಂದ ಅದು ಅಡಚಣೆಯಾಗುವುದಿಲ್ಲ. ಮಾಮುನಿಗಳು ಅತಿ ಸುಂದರವಾಗಿ ಇದನ್ನು ನಿಜ ಉದಾಹರಣೆಯ ಸಮೇತ ವಿವರಿಸಿದ್ದಾರೆ. – ಮಕ್ಕಳು ಮರಳಿನಲ್ಲಿ ಅರಮನೆಯನ್ನು ಕಟ್ಟಿ ಆಟವಾಡುವಾಗ, ಆಟದ ಕೊನೆಯಲ್ಲಿ ಅವರು ಅದನ್ನು ಆಟದಲ್ಲೇ ಆನಂದದಿಂದ ಹೊಡೆದು ಉರುಳಿಸುವ ಹಾಗೆ , ಭಗವಂತನಿಗೆ ಪ್ರಲಯವೂ ಸಹ ಒಂದು ಆಟ (ಕಾಲಕ್ಷೇಪ).
 • ಅವನು ತನ್ನ ದೇಹದ ಭಾಗವನ್ನೇ ಲೌಕಿಕ ಜಗತ್ತನ್ನಾಗಿ ಮಾರ್ಪಡಿಸಿದ ಕಾರಣ ಅವನೇ ಈ ಸೃಷ್ಟಿಯ ಮೂಲ ಲೌಕಿಕ ಕಾರಣ. ಇದರಲ್ಲಿ 3 ಕಾರಣಗಳಿವೆ: ಉಪಾದಾನ ಕಾರಣಮ್ (ಲೌಕಿಕ ವಸ್ತುಗಳ ಕಾರಣ), ನಿಮಿತ್ತ ಕಾರಣಮ್ (ನೆಪದ ಕಾರಣ), ಸಹಕಾರಿ ಕಾರಣಮ್ (ಬೆಂಬಲಿಸುವ ಇತರ ಕಾರಣಗಳು). ಉದಾಹರಣೆಗೆ , ಮಣ್ಣಿನ ಕೊಡವನ್ನು ಮಾಡಬೇಕಾದರೆ, ಮರಳು ಮತ್ತು ತೇವಾಂಶದ ಮಣ್ಣು ಲೌಕಿಕ ಕಾರಣ, ಮಡಿಕೆಯನ್ನು ಮಾಡುವ ಕುಂಬಾರ ನಿಮಿತ್ತ ಕಾರಣ, ಅವನ ಕೋಲು ಮತ್ತು ಚಕ್ರ ಸಹಕಾರಿ ಕಾರಣಗಳು.
 • ಅವನ ಸ್ವರೂಪವು ಬದಲಾಗುವುದಿಲ್ಲದ ಕಾರಣ ಅವನನ್ನು ನಿರ್ವಿಕಾರ (ಬದಲಾಗುವುದಿಲ್ಲ) ಎಂದೂ ಹೆಸರು.
 • ಆದರೆ ಅವನ ಶರೀರ (ಚಿತ್ ಮತ್ತು ಅಚಿತ್‍ಗಳು) ಪರಿವರ್ತನೆಯನ್ನು ಹೊಂದುತ್ತವೆ. ಜೇಡದ ಹುಳು ತನ್ನ ಎಂಜಲಿನಿಂದ ಜಾಲವನ್ನು ಹೆಣೆಯುತ್ತದೆ. ಅದನ್ನು ತಾನೇ ನುಂಗುತ್ತದೆ. ಇದನ್ನು ಒಂದು ಸಾಧಾರಣ ಜೇಡವು ಮಾಡಬೇಕಾದರೆ, ಸರ್ವ ಶಕ್ತನಾದ ಈಶ್ವರನ್ ಏಕೆ ಮಾಡಬಾರದು?

ಸೃಷ್ಟಿ, ಸ್ಥಿತಿ, ಸಂಹಾರಮ್

ಈ ಎಲ್ಲಾ ಚಟುವಟಿಕೆಗಳಿಗೂ ನಿಯಂತ್ರಕ ಭಗವಂತನು. ಸಮಷ್ಟಿ ಸೃಷ್ಟಿ (ಪಂಚ ಭೂತಗಳ ಸೃಷ್ಟಿಯವರೆಗೂ) ಭಗವಂತನು ತಾನೇ ಪ್ರತ್ಯಕ್ಷವಾಗಿ ಮಾಡುತ್ತಾನೆ. ವ್ಯಷ್ಟಿ ಸೃಷ್ಟಿ (ವಿವಿಧ ಜೀವಿಗಳು, ಅಭಿವ್ಯಕ್ತವಾಗುವ ಸೃಷ್ಟಿ) ಇತರ ಜೀವಿಗಳ ಅಂತರ್ಯಾಮಿಯಾಗಿ ಭಗವಂತನೇ ಪರೋಕ್ಷವಾಗಿ ಮಾಡುತ್ತಾನೆ.

ಸೃಷ್ಟಿ

 • ಸೃಷ್ಟಿಯು ಇವುಗಳನ್ನು ಒಳಗೊಂಡಿದೆ.
  • ಸೂಕ್ಷ್ಮ ವಸ್ತುಗಳನ್ನು ಸ್ಥೂಲ ವಸ್ತುಗಳನ್ನಾಗಿ ಪರಿವರ್ತಿಸುತ್ತದೆ.
  • ಜೀವಾತ್ಮಗಳಿಗೆ ದೇಹವನ್ನೂ ಇಂದ್ರಿಯಗಳನ್ನೂ ಕೊಡುತ್ತದೆ.
  • ಜೀವಾತ್ಮದ ಜ್ಞಾನವನ್ನು ವಿಸ್ತರಿಸುತ್ತದೆ.
 • ಸೃಷ್ಟಿಯು ಬ್ರಹ್ಮ, ಪ್ರಜಾಪತಿ, ಸಮಯ ಮತ್ತು ಎಲ್ಲಾ ಜೀವಿಗಳ ಒಳ ಆತ್ಮದಲ್ಲಿ ಹೊಕ್ಕಿ ಅದರ ಮೂಲಕ ಆಗುತ್ತದೆ.
 • ಸೃಷ್ಟಿಯು ರಜೋ ಗುಣದಿಂದ ಮಾಡಲ್ಪಟ್ಟಿದೆ. ( ಆಸೆಯ ಮೂಲಕ)

ಸ್ಥಿತಿ (ಪೋಷಣೆ)

 • ಸ್ಥಿತಿಯು ಇವುಗಳನ್ನು ಒಳಗೊಂಡಿದೆ:
  • ಜೀವಾತ್ಮಗಳನ್ನು ಅವುಗಳೊಳಗಿಂದಲೇ ಸಕಾರಾತ್ಮಕ ಉದ್ದೇಶದಿಂದ , ಎಲ್ಲಾ ರೀತಿಯ ಪರಿಸ್ಥಿತಿಯಲ್ಲೂ ಪೋಷಿಸಲಾಗಿದೆ, ಹೇಗೆ ನೀರು ಭತ್ತದ ಬೆಳೆಯನ್ನು ಪೋಷಿಸುತ್ತದೆಯೋ ಹಾಗೆ.
 • ಸ್ಥಿತಿಯು ಇವರಿಂದ ಮಾಡಲ್ಪಟ್ಟಿದೆ.
  • ವಿಷ್ಣುವನ್ನು ಮೊದಲುಗೊಂಡು ಅನೇಕ ಅವತಾರಗಳು ಭೂಮಿಯ ಮೇಲೆ ಇಳಿದು ಬರುವುದರಿಂದ (ಮಹಾವಿಷ್ಣುವೇ ಸೃಷ್ಟಿಯ ಮೊದಲ ಅವತಾರ).
  • ಜೀವಾತ್ಮಗಳನ್ನು ಒಳ್ಳೆಯ ದಾರಿಯಲ್ಲಿ ಮಾರ್ಗದರ್ಶಿಸಲು
  • ಸಮಯ ಮತ್ತಿತರ ಎಲ್ಲಾ ಜೀವಿಗಳ  ಅಂತರಾತ್ಮವಾಗಿದ್ದುಕೊಂಡು.
 • ಸ್ಥಿತಿಯು ಸತ್ವ ಗುಣದಿಂದ ಮಾಡಲ್ಪಟ್ಟಿದೆ.

ಸಂಹಾರಮ್ (ಪ್ರಳಯ)

 • ಸಂಹಾರವು ಈ ಕ್ರಿಯೆಗಳನ್ನು ಒಳಗೊಂಡಿದೆ
  • ಜೀವಾತ್ಮಗಳನ್ನು ಸೂಕ್ಷ್ಮರೀತಿಗೆ ಕೊಂಡೊಯ್ದು , ಅವರ ಲೌಕಿಕ ವಸ್ತುಗಳ ಮೇಲಿನ ಆಸೆಯನ್ನು ಕಡಿತಗೊಳಿಸುತ್ತದೆ. ಈ ಸನ್ನಿವೇಶವು ತನ್ನ ಗುರಿ ತಪ್ಪಿದ, ನಿಯಂತ್ರಣಕ್ಕೆ ಬಾರದ ಮಗನನ್ನು ಅವನ ಉದ್ಧಾರಕ್ಕಾಗಿ ಅವನನ್ನು ಕೂಡಿ ಹಾಕಿದಂತೆ ಇರುತ್ತದೆ.
 • ಸಂಹಾರವು ರುದ್ರನ, ಅಗ್ನಿಯ, ಕಾಲದ ಅಂತರ್‍ಯಾಮಿಯಾಗಿ ನಡೆಸಲಾಗಿದೆ.
 • ಸಂಹಾರವು ತಮೋ ಗುಣದಿಂದ ಮಾಡಲಾಗಿದೆ. (ಅಜ್ಞಾನದಿಂದ)

ಭಗವಂತನ ಸೃಷ್ಟಿಯ ಸಮಯದ ಶ್ರೇಷ್ಠ ಗುಣ

 • ಕೆಲವರು ಮಾತ್ರ ಆನಂದದಿಂದ ಮತ್ತೆ ಕೆಲವರು ಸಂಕಷ್ಟದಲ್ಲಿದ್ದರೆ, ಅದು ಭಗವಂತನು ಪಕ್ಷಪಾತಿಯಾಗಿಯೂ, ಕ್ರೂರಿಯಾಗಿಯೂ ತಿಳಿಸುವುದಲ್ಲವೆ?
 • ಇದು ಸಾಧ್ಯವೇ ಇಲ್ಲ – ಎಲ್ಲರಿಗೂ ಅವರವರ ದೇಹವು ಅವರವರ ಕರ್ಮದ ಅನುಸಾರವಾಗಿ ದೊರಕುತ್ತದೆ, ಎಲ್ಲಾ ಕ್ರಿಯೆಗಳೂ ಜೀವಾತ್ಮವನ್ನು ಮೇಲಿನ ಹಂತಕ್ಕೆ ಮೇಲೆತ್ತಲು/ ಉದ್ಧಾರ ಮಾಡಲು ಮಾಡಲಾಗುತ್ತದೆ. ಇದರಲ್ಲಿ ಪರಮಾತ್ಮನ ಪಕ್ಷಪಾತವೋ ಅಥವಾ ಕ್ರೂರತನವೋ ಇಲ್ಲವೇ ಇಲ್ಲ.
 • ನಮ್ಮಾಳ್ವಾರರು ತಿರುವಾಯ್ಮೊೞಿ – 3.2.1 ರಲ್ಲಿ ಹೇಳಿದ ಪ್ರಕಾರ ಭಗವಂತನು ಸೃಷ್ಟಿ, ಸ್ಥಿತಿ, ಸಂಹಾರವನ್ನು ದಿವ್ಯ ರೂಪದಲ್ಲಿ ಮಾಡುತ್ತಾನೆ.

ಭಗವಂತನ ಅನಂತ ರೂಪಗಳು

 • ಎಂಪೆರುಮಾನರ ದಿವ್ಯ ರೂಪವು
  • ಅತ್ಯಂತ ಆನಂದಕರವಾದದ್ದು, ಅವನ ಸ್ವರೂಪಮ್, ಗುಣ ಇತ್ಯಾದಿಗಳಿಗಿಂತಲೂ
  • ನಿರಂತರವಾದದ್ದು – ಯಾವಾಗಲೂ ಇರುವಂಥದ್ದು
  • ಒಂದೇರೀತಿ – ವೃದ್ಧತೆ ಮುಂತಾದುವುಗಳು ಬಾಧಿಸದು
  • ಶುಭ ರೀತಿಯ ಸತ್ವತೆಯಿಂದ ಮಾಡಲ್ಪಟ್ಟಿದ್ದು
  • ಅವನ ನಿಜ ಸ್ವಭಾವವನ್ನು ಪೂರ್ತಿಯಾಗಿ ತೋರಿಸುತ್ತದೆ, ನಮ್ಮ ದೇಹದಂತೆ ಆತ್ಮದ ಜ್ಞಾನವನ್ನು ಮರೆಮಾಚುವುದಿಲ್ಲ
  • ಶಾಶ್ವತವಾಗಿ ಪ್ರಕಾಶಿಸುವುದು
  • ಸುಂದರತೆ, ಮೃದುತ್ವ ಮುಂತಾದ ದಿವ್ಯ ಗುಣಗಳಿಗೆ ವಾಸಸ್ಥಾನವಾಗಿದೆ.
  • ಎಲ್ಲಾ ಯೋಗಿಗಳಿಂದಲೂ ಧ್ಯಾನಿಸಲ್ಪಡುತ್ತದೆ.
  • ಆ ರೂಪವು ನಮ್ಮನ್ನು ಇತರ ಎಲ್ಲಾ ವಸ್ತುಗಳ ಲಗತ್ತನ್ನು ತೆಗೆದು ಹಾಕುತ್ತದೆ
  • ಅದು ನಿತ್ಯಸೂರಿಗಳಿಂದ ಮತ್ತು ಮುಕ್ತಾತ್ಮಗಳಿಂದ ಆನಂದಿಸಲ್ಪಡುತ್ತದೆ.
  • ಅದು ನಮ್ಮ ಎಲ್ಲಾ ಕಷ್ಟಗಳನ್ನು ನೋವುಗಳನ್ನೂ ದೂರಮಾಡುತ್ತದೆ.
  • ಅದು ಎಲ್ಲಾ ಅವತಾರಗಳಿಗೂ ಮೂಲ.
  • ಎಲ್ಲರಿಗೂ ಅದು ಆಶ್ರಯವನ್ನು ಕೊಡುತ್ತದೆ
  • ದಿವ್ಯ ಆಯುಧಗಳಿಂದ (ಶಂಖು, ಚಕ್ರ, ಮುಂ..) ಮತ್ತು ಆಭರಣಗಳಿಂದ (ಮಾಲೆ, ಸರಗಳು ಇ..) ಅಲಂಕೃತವಾಗಿದೆ.
 • ಭಗವಂತನ ಸ್ವರೂಪವು ಐದು ವಿವಿಧ ಗುಂಪುಗಳನ್ನು ಹೊಂದಿದೆ, ಅವುಗಳು
  • ಪರತ್ವಮ್ – ಪರಮಪದದಲ್ಲಿರುವ ರೂಪ
  • ವ್ಯೂಹಮ್ – ಮುಖ್ಯವಾಗಿ ಲೌಕಿಕ ಜಗತ್ತಿನಲ್ಲಿರುವ ವ್ಯೂಹದಲ್ಲಿರುವ ರೂಪ
  • ವಿಭವಮ್ – ಎಂಪೆರುಮಾನರ ಅನೇಕ ಅವತಾರಗಳು
  • ಅಂತರ್ಯಾಮಿ – ಎಲ್ಲಾ ಜೀವಾತ್ಮಗಳ ಮತ್ತು ಅಚೇತನಗಳ ಹೃದಯದಿಂದಲೇ ಇದ್ದುಕೊಂಡು ನಿಯಂತ್ರಿಸುವುದು.
  • ಅರ್ಚೈ – ಮಂದಿರಗಳಲ್ಲಿ, ಮಠಗಳಲ್ಲಿ, ಮನೆಗಳಲ್ಲೂ ಸಹ ಅನೇಕ ಪೂಜ್ಯ ರೂಪವನ್ನು ಪಡೆದು ಆರಾಧಿಸಲ್ಪಡುವುದು.
  • ಇವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ :

ಪರತ್ವಮ್ :

 • ಪರಮಪದವು, ಕೊನೆಯಿಲ್ಲದ ಪರಮಾನಂದವು ಮತ್ತು ಅಸಂಖ್ಯೇಯ ಶುಭಗುಣಗಳನ್ನು ಹೊಂದಿರುವ, ಮತ್ತು ಕಾಲವು ನಿಯಂತ್ರಕನಾಗಿಲ್ಲದ ಪ್ರದೇಶವಾಗಿದೆ. ಸಂಸಾರದಲ್ಲಿ ಕಾಲವೇ ನಿಯಂತ್ರಕ – ನಾವು ಬಯಸಿದರೆ ಅಥವಾ ಬಯಸದಿದ್ದರೂ, ಕಾಲವು ಎಲ್ಲವನ್ನೂ ಪರಿವರ್ತನೆ ಮಾಡುತ್ತದೆ.
 • ಪರಮಪದದಲ್ಲಿ ಎಲ್ಲವೂ ಆಧ್ಯಾತ್ಮಿಕ.
 • ಇಲ್ಲಿ ದಿವ್ಯ ಸಂಗಾತಿಗಳಾದ ಶ್ರೀ ಮಹಾಲಕ್ಷ್ಮಿ, ಭೂದೇವಿ ಮತ್ತು ನೀಳಾದೇವಿಯ ಸಮೇತನಾಗಿರುವ ಭಗವಂತನೇ ಮುಖ್ಯ ಕೇಂದ್ರೀಯ.
 • ಅವನು ಅಲ್ಲಿರಲು ಮುಖ್ಯ ಕಾರಣವೇ ನಿತ್ಯಸೂರಿಗಳು (ಎಂದೆಂದಿಗೂ ಮುಕ್ತರಾದವರು) ಮತ್ತು ಮುಕ್ತಾತ್ಮಗಳು (ಒಂದು ಕಾಲದಲ್ಲಿ ಸಂಸಾರದಲ್ಲಿ ಬಂಧಿತರಾದವರು ಆದರೆ ಈಗ ಪರಮಪದದಲ್ಲಿ ಮುಕ್ತರಾದವರು.)
 • ಅವನ ಕಲ್ಯಾಣ ಗುಣಗಳು ಅವುಗಳೆಂದರೆ ಜ್ಞಾನ, ಶಕ್ತಿ ಮುಂತಾದುವುಗಳು ಸಂಪೂರ್ಣವಾಗಿ ತೋರ್ಪಡಿಕೆಯಾಗುವುದು ಪರಮಪದದಲ್ಲಿ.

ವ್ಯೂಹಮ್:

 • ಭಗವಂತನು ಹೊಂದುವ ರೂಪಗಳು
  • ಪ್ರಕೃತಿಯಲ್ಲಿ ವ್ಯವಸ್ಥೆಯನ್ನು ಕಾಪಾಡಲು (ಸೃಷ್ಟಿ, ಸ್ಥಿತಿ, ಸಂಹಾರದ ಮೂಲಕ) ಲೌಕಿಕ ಜಗತ್ತಿನಲ್ಲಿ.
  • ಸಂಸಾರದಲ್ಲಿರುವ ಜೀವಾತ್ಮಗಳನ್ನು ಮಾರ್ಗದರ್ಶಿಸಲು / ಪೋಷಿಸಲು.
  • ಧ್ಯಾನಿಸುವವರಿಗೆ ಧ್ಯಾನದ ವಸ್ತುವಾಗಲು.
 • ಪರ ವಾಸುದೇವನ್ ಮೊದಲು ವ್ಯೂಹ ವಾಸುದೇವನಾಗಿ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಾನೆ.
 • ವ್ಯೂಹ ವಾಸುದೇವನು ವಿಸ್ತಾರವಾಗಿ ಮತ್ತೆ ಮೂರು ರೂಪಗಳನ್ನು ಧರಿಸುತ್ತಾನೆ – ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧನೆಂದು.
 • ಸಂಕರ್ಷಣ
  • ಜ್ಞಾನಮ್ ಮತ್ತು ಬಲಮ್ ಅವನಲ್ಲಿ ಪ್ರಧಾನವಾಗಿರುತ್ತದೆ.
  • ಅವನು ಜೀವ ತತ್ತ್ವದ (ಆತ್ಮದ) ಮೇಲೆ ಆಡಳಿತ ನಡೆಸುತ್ತಾನೆ ಮತ್ತು ಆತ್ಮದ ಹಾಗೂ ವಸ್ತುಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸುತ್ತಾನೆ . ಅವುಗಳಿಗೆ ರೂಪವನ್ನೂ, ಹೆಸರನ್ನೂ ಇಡಲು ಪ್ರಾರಂಭಿಸುತ್ತಾನೆ.
  • ಅವನು ಶಾಸ್ತ್ರವನ್ನು(ವೇದಮ್, ವೇದಾಂತಮ್ ಇತ್ಯಾದಿ) ಮತ್ತು ಸಂಹಾರಮ್ (ಪ್ರಳಯ) ಅನ್ನು ಪ್ರತಿಷ್ಠಾಪಿಸಲು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ.
  • ಅವನು ಮುಂದೆ ವಿಸ್ತಾರವಾಗಿ ಪ್ರದ್ಯುಮ್ನನ ರೂಪವನ್ನು ತಾಳುತ್ತಾನೆ.
 • ಪ್ರದ್ಯುಮ್ನ
  • ಇವನಲ್ಲಿ ಐಶ್ವರ್‍ಯ (ಸಂಪತ್ತು/ ನಿಯಂತ್ರಣ) ಮತ್ತು ವೀರ್ಯ (ಶಕ್ತಿ) ಪ್ರಧಾನವಾದ ಅಂಶ.
  • ಅವನು ಮನಸ್ ತತ್ತ್ವಮ್‍ನ(ಮನಸ್ಸಿನ) ಮೇಲೆ ಅಧಿಕಾರಿಯಾಗಿರುತ್ತಾನೆ.
  • ಅವನ ಜವಾಬ್ದಾರಿಗಳು
   • ಧರ್ಮದ ತತ್ತ್ವದ ಆಧಾರದ ಮೇಲೆ ಆದೇಶವನ್ನು ಕೊಡುವುದು
   • ಮನುಷ್ಯರನ್ನು ಸೃಷ್ಟಿಸುವುದು ಮತ್ತು ಅವರನ್ನು ಚತುರ್ ವರ್ಣವಾಗಿ ವಿಂಗಡಿಸುವುದು (ನಾಲ್ಕು ಭಾಗಗಳು – ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು)
   • ಒಳ್ಳೆಯತನದ ಮೇಲೆ ಕೇಂದ್ರೀಕೃತರಾಗಿರುವ ಎಲ್ಲಾ ಜನರನ್ನು ಸೃಷ್ಟಿಸುವುದು (ಅವರು ಕೊನೆಯಲ್ಲಿ ಭಗವಂತನಲ್ಲಿಗೆ ಕೊಂಡೊಯ್ಯುತ್ತಾರೆ.)
 • ಅನಿರುದ್ಧ
  • ಶಕ್ತಿ ಮತ್ತು ತೇಜಸ್ (ಯಾವುದನ್ನೂ ಪ್ರತ್ಯೇಕವಾಗಿ ನಿರ್ವಹಿಸುವುದು) ಇವನಲ್ಲಿ ಪ್ರಧಾನವಾದ ಗುಣಗಳು.
  • ಅವನ ಜವಾಬ್ದಾರಿಗಳು
   • ನಿಜವಾದ ಜ್ಞಾನವನ್ನು ಕೊಡುವುದು
   • ಸಮಯ, ಮತ್ತಿತರ ಘಟಕಗಳನ್ನು ಒಳ್ಳೆಯತನ (ಸತ್ವ), ಕಾಮ (ರಜಸ್) ಮತ್ತು ಅಜ್ಞಾನ (ತಮಸ್) ದ ಮಿಶ್ರಣದಿಂದ ಸೃಷ್ಟಿಸುವುದು.

ವಿಭವಮ್

ದಶಾವತಾರಮ್ – ಪ್ರಮುಖ ಹತ್ತು ಅವತಾರಗಳು
 • ಭಗವಂತನು ಅಸಂಖ್ಯಾತ ಅವತಾರಗಳನ್ನು ತಾಳುತ್ತಾನೆ.
 • ಅವನ ಅವತಾರಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು :
  • ಮುಖ್ಯ ಅವತಾರಗಳು
   • ಇವುಗಳು ಮುಮುಕ್ಷುಗಳಿಗೆ (ಮೋಕ್ಷವನ್ನು ಬಯಸುವವರಿಗೆ) ಅತ್ಯಂತ ಮುಖ್ಯವಾದ ಅವತಾರಗಳೆಂದು ಪರಿಗಣಿಸಲಾಗಿದೆ.
   • ಭಗವಂತನು ತಾನೇ ದಿವ್ಯ ರೂಪಗಳಾದ ಮತ್ಸ್ಯ, ಕೂರ್ಮ, ವರಾಹ ಮುಂತಾದ ಅವತಾರಗಳನ್ನು ತಾಳಲು ಇಳಿದು ಬರುತ್ತಾನೆ.
   • ಈ ರೂಪಗಳು ದಿವ್ಯ ಪದಾರ್ಥಗಳಿಂದ ಮಾಡಲ್ಪಟ್ಟಿವೆ. (ಪರಮಪದದ ಹಾಗೆ)
   • ಅವನು ತನ್ನ ಎಲ್ಲಾ ಕಲ್ಯಾಣ ಗುಣಗಳನ್ನು ಪರಮಪದದಲ್ಲಿರುವ ಹಾಗೆ ಧರಿಸಿರುತ್ತಾನೆ.
   • ಒಂದು ಬೆಂಕಿ ಕಡ್ಡಿಯಿಂದ ಒಂದು ದೀಪವನ್ನು ಹಚ್ಚಿದರೆ, ಆ ದೀಪವು ಬೆಂಕಿ ಕಡ್ಡಿಗಿಂತಲೂ ಹೆಚ್ಚಾಗಿ ಜ್ವಲಿಸುವಂತೆ ಅವನ ಅವತಾರಗಳು ಪರಮಪದದಲ್ಲಿರುವ ರೂಪಕ್ಕಿಂತಲೂ ಹೆಚ್ಚಾಗಿ ಹೊಳೆಯುತ್ತವೆ.
  • ಗೌಣ ಅವತಾರಗಳು
   • ಗೌಣಮ್ ಎಂದರೆ ಅವನ ಸ್ವರೂಪವನ್ನೋ ಅಥವಾ ಶಕ್ತಿಯನ್ನೋ ಜೀವಾತ್ಮಗಳಿಗೆ ಕೊಟ್ಟು ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸುವಂತೆ.
   • ಇವುಗಳು ಕಡಿಮೆ ಮುಖ್ಯತ್ವವನ್ನು ಹೊಂದಿದ್ದು , ಮುಮುಕ್ಷುಗಳಿಂದ ಆರಾಧಿಸಲ್ಪಡುವುದಿಲ್ಲ, ಏಕೆಂದರೆ ಈ ಅವತಾರಗಳ ಉದ್ದೇಶವು ನಿರ್ದಿಷ್ಟವಾದ ಕೆಲಸವನ್ನು ಮಾಡಲು ಮಾತ್ರವಾಗಿರುತ್ತದೆ.
   • ಎರಡು ಪಂಗಡಗಳು
    • ಸ್ವರೂಪ ಆವೇಶಮ್ – ಭಗವಂತನು ತನ್ನ ದಿವ್ಯ ಸ್ವರೂಪವನ್ನು ಜೀವಾತ್ಮಗಳಿಗೆ ಕೊಟ್ಟು ತನ್ನ ದಿವ್ಯ ರೂಪದಿಂದ ಇಳಿದು ಬರುವುದು. ಉದಾ: ಪರಶುರಾಮ ಇತ್ಯಾದಿ
    • ಶಕ್ತಿ ಆವೇಶಮ್ – ಭಗವಂತನು ತನ್ನ ಶಕ್ತಿಯನ್ನು ಮಾತ್ರ ಜೀವಾತ್ಮಗಳಿಗೆ ನಿರ್ದಿಷ್ಟ ಉದ್ದೇಶದಿಂದ ಕೊಡುವುದು. ಉದಾ: ಬ್ರಹ್ಮ, ರುದ್ರನ್, ವ್ಯಾಸ ಮುಂತಾದವರು.
 • ಅವನು ಅನೇಕ ಅವತಾರಗಳನ್ನು ಎತ್ತಿರುವುದರ ಕಾರಣ ಅವನ ದಿವ್ಯ ಆಸೆಯಿಂದ.
 • ಈ ಅವತಾರಗಳ ಉದ್ದೇಶವನ್ನು ಭಗವಂತನೇ ಭಗವದ್ಗೀತೆಯ 4.8 ರಲ್ಲಿ ವಿವರಿಸಿದ್ದಾನೆ
  • ಪರಿತ್ರಾಣಾಯ ಸಾಧೂನಾಮ್ – ಭಕ್ತರನ್ನು ರಕ್ಷಿಸಲು
  • ವಿನಾಶಾಯ ಚ ದುಶ್‍ಕೃತಾಮ್ – ಕೆಟ್ಟ ಜನರನ್ನು ನಾಶಮಾಡಲು
  • ಧರ್ಮ ಸಂಸ್ಥಾಪನಾರ್ಥಾಯ – ಧರ್ಮದ ತತ್ತ್ವಗಳನ್ನು ಸ್ಥಾಪಿಸಲು
 • ಭಗವಂತನು ಅವತಾರವನ್ನೆತ್ತಿದ್ದು ಋಷಿಯ ಶಾಪವೆಂದು ಕೆಲವು ಕಡೆಗಳಲ್ಲಿ ಹೇಳಲಾಗಿದೆ, ಆದರೆ ಅದು ಒಂದು ನೆಪ ಮಾತ್ರ ಮತ್ತು ನಿಜವಾದ ಕಾರಣ ಅವನ ದಿವ್ಯ ಆಸೆ ಮಾತ್ರ.

ಅಂತರ್‍ಯಾಮಿ

 • ಅಂತರ್‍ಯಾಮಿ ಅಂದರೆ ಎಲ್ಲಾ ಕಡೆಯೂ ವ್ಯಾಪಿಸಿರುವುದು ಮತ್ತು ಒಳಗಿನಿಂದಲೇ ಎಲ್ಲರನ್ನೂ ನಿಯಂತ್ರಿಸುವುದು.
 • ಎಲ್ಲೆಲ್ಲಿ ಜೀವಾತ್ಮವು ಹೋಗುತ್ತದೆಯೋ ಅಲ್ಲೆಲ್ಲಾ ಭಗವಂತನೂ ಹೋಗುವನು, ಅವರನ್ನು ಮಾರ್ಗದರ್ಶಿಸಲು.
 • ಭಗವಂತನನ್ನು ಧ್ಯಾನಿಸಲು ಯಾರು ಇಚ್ಛಿಸುತ್ತಾರೋ, ಅವರ ಹೃದಯದಲ್ಲಿ ಭಗವಂತನು ತನ್ನ ದಿವ್ಯ ಮಡದಿಯರೊಂದಿಗೆ ತನ್ನ ದಿವ್ಯ ರೂಪದಲ್ಲಿ ದರ್ಶನವನ್ನು ಕೊಡುತ್ತಾನೆ.
 • ಅವನು ಜೀವಾತ್ಮಗಳನ್ನು ನಿರಂತರವಾಗಿ ಅವರ ಹೃದಯದಲ್ಲಿದ್ದುಕೊಂಡು ಕಾಪಾಡುವನು.

ಅರ್ಚೈ

108 ದಿವ್ಯ ದೇಶಮ್ , ಆಳ್ವಾರರಿಂದ ವೈಭವೀಕರಿಸಲ್ಪಟ್ಟಿದ್ದು
 • ಇದು ಭಗವಂತನ ಎಲ್ಲಾ ರೂಪಗಳ ಸಾರಾಂಶವೆಂದು ವಿವರಿಸಲಾಗಿದೆ.
 • ಪೊಯ್‍ಗೈ ಆಳ್ವಾರರು ಮುದಲ್ ತಿರುವಂದಾದಿಯ 44ನೆಯ ಪಾಸುರದಲ್ಲಿ ವಿವರಿಸಿರುವ ಹಾಗೆ ಎಂಪೆರುಮಾನರು ಭಕ್ತರಿಗಾಗಿ ಅವರು ಆಸೆ ಪಡುವ ರೂಪವನ್ನೇ ಧರಿಸುತ್ತಾರೆ ಎಂದು.
 • ಅರ್ಚಾವತಾರಮ್ ಎಂಬುದು ಎಲ್ಲಾ ಪ್ರದೇಶದಲ್ಲಿಯೂ, ಎಲ್ಲಾ ಕಾಲದಲ್ಲಿಯೂ ಎಲ್ಲರಿಗಾಗಿಯೂ ಅಸ್ಥಿತ್ವದಲ್ಲಿರುತ್ತದೆ. ಇದು ಬೇರೆ ರೂಪಗಳಿಗೆ ಇಲ್ಲ. (ಪರ, ವ್ಯೂಹಮ್ ಇತ್ಯಾದಿ) ಇವುಗಳು
  • ಕೆಲವು ದೇಶಗಳಲ್ಲಿ ಮಾತ್ರ (ಪರಮಪದಮ್ , ಕ್ಷೀರಾಬ್ಧಿ ಇತ್ಯಾದಿ)
  • ಕೆಲವು ಕಾಲದಲ್ಲಿ ಮಾತ್ರ (ತ್ರೇತಾಯುಗಮ್, ದ್ವಾಪರ ಯುಗಮ್ ಇತ್ಯಾದಿ)
  • ಕೆಲವು ಅಧಿಕಾರಿಗಳಿಗೆ ಮಾತ್ರ (ರಾಮಾವತಾರದಲ್ಲಿ ದಶರಥನಂತಹ ವ್ಯಕ್ತಿಗಳಿಗೆ)
 • ಅವನು ತನ್ನನ್ನು ಪೂಜಿಸುವವರ ತಪ್ಪುಗಳನ್ನು / ಅಪರಾಧಗಳನ್ನು ಅವನ ಕಾರಣವಿಲ್ಲದ ಕರುಣೆಯಿಂದಲೇ ಮನ್ನಿಸುವನು (ಅಲಕ್ಷಿಸುವನು).
 • ಅವನು ತನ್ನನ್ನು ಆರಾಧಿಸುವವರ ಮೇಲೆಯೇ ತನ್ನ ಚಟುವಟಿಕೆಗಳಿಗೆಲ್ಲದಕ್ಕೂ ಸಂಪೂರ್ಣವಾಗಿ ಅವಲಂಬಿಸಿರುವನು (ಉದಾ. ಸ್ನಾನ ಮಾಡುವುದು, ತಿನ್ನುವುದು, ಮಲಗುವುದು ಇತ್ಯಾದಿ)
 • ಅವನು ಬಹಳ ಗುಡಿಗಳಿಗೆ ಇಳಿದು ಬರುವನು, (ದಿವ್ಯ ದೇಶಮ್, ಅಭಿಮಾನ ಕ್ಷೇತ್ರಮ್, ಹಳ್ಳಿಗಳಲ್ಲಿ ಇರುವ ದೇವಸ್ಥಾನಗಳು ಮುಂತಾದುವು. – ಎಲ್ಲಾ ಕಡೆಯಲ್ಲಿಯೂ, ನಗರ, ಹಳ್ಳಿ, ದೇಶ, ಖಂಡ, ಗ್ರಹ ಮುಂತಾದುವುಗಳನ್ನು ಲೆಕ್ಕಿಸದೆ) , ಮಠಗಳು, ಮತ್ತು ನಮ್ಮ ಮನೆಗಳಲ್ಲಿಯೂ ಸಹ.
 • ಅರ್ಚಾವತಾರದ ಸಂಪೂರ್ಣ ಗುಣ
  • ಅವನು ತನ್ನ ಮಾಧುರ್‍ಯವನ್ನೂ (ರುಚಿಯನ್ನೂ) ಮತ್ತು ತನ್ನ ಮೇಲಿನ ಲಗತ್ತನ್ನು ಅರ್ಚಾವತಾರದ ಮೂಲಕ ಸೃಷ್ಟಿಸುವನು.
  • ಅವನು ಎಲ್ಲಾ ಕಲ್ಯಾಣ ಗುಣಗಳ ಆಶ್ರಯ – ಎಲ್ಲಾ ಗುಣಗಳೂ ಅವು ಸೌಶೀಲ್ಯಮ್, ಸೌಲಭ್ಯಮ್, ವಾತ್ಸಲ್ಯಮ್, ಮುಂತಾದುವು ಪೂರ್ತಿಯಾಗಿ ಇಲ್ಲಿ ಕಾಣ ಸಿಗುತ್ತದೆ. ಈ ಗುಣಗಳು ಪರಮಪದದಲ್ಲಿ ಸೂಕ್ಷ್ಮವಾಗಿರುತ್ತದೆ, ಏಕೆಂದರೆ ಪರಮಪದದಲ್ಲಿರುವ ಎಲ್ಲರೂ ಶುದ್ಧ ಮತ್ತು ಸಂಪೂರ್ಣ ಮನವರಿಕೆಯಾದವರು. (ಅರಿತವರು)
  • ಅವನು ಎಲ್ಲರಿಗೂ ಆಶ್ರಯ , ಅವರ ಜಾತಿ, ಜ್ಞಾನ, ಮುಂತಾದುವುಗಳನ್ನು  ಪರಿಗಣಿಸದೇ.
  • ಆಳ್ವಾರರು ಮತ್ತು ಆಚಾರ್‍ಯರು ವಿವರಿಸಿರುವ ಪ್ರಕಾರ ಅವನು ಸಂಪೂರ್ಣವಾಗಿ ಆನಂದಿಸಲ್ಪಡುವನು. ನಾವು ಈಗಾಗಲೇ ಆಳ್ವಾರ್/ಆಚಾರ್‍ಯರ ಅರ್ಚಾವತಾರ ಅನುಭವವನ್ನು ಆಸ್ವಾದಿಸಿದ್ದೇವೆ. ಇಲ್ಲಿ :
 • ಅವನ ಉದಾತ್ತ (ಧಾರಾಳ) ಮನಸ್ಸು ಅರ್ಚಾವತಾರದಲ್ಲಿ
  • ಅವನು ತಾನು ಸ್ವಾಮಿಯಾಗಿದ್ದರೂ ಮತ್ತು ಎಲ್ಲರೂ ಅವನ ಮೇಲೆ ಅವಲಂಬಿತವಾಗಿದ್ದರೂ, ಅವನು ತನ್ನನ್ನು ತಾನು ಭಕ್ತರ / ಆರಾಧಕರ ಅವಲಂಬಿತ ಎಂದು ತೋರಿಸಿಕೊಳ್ಳುತ್ತಾನೆ.
  • ಅವನು ದೇವರಾಗಿದ್ದರೂ, ಅವನು ತನ್ನನ್ನು ತಾನು ಹೀಗೆ ಪ್ರಸ್ತುತ ಪಡಿಸಿಕೊಳ್ಳುತ್ತಾನೆ.
   • ಅಜ್ಞಾನಿ – ಅವನು ಎಲ್ಲವನ್ನೂ ತನ್ನ ಭಕ್ತರ ಮೂಲಕವೇ ತಿಳಿದುಕೊಳ್ಳುವುದರಿಂದ
   • ಅಶಕ್ತ – ಅವನು ತನ್ನ ಎಲ್ಲಾ ಚಟುವಟಿಕೆಗಳಿಗೂ ಉದಾ: ಸ್ನಾನ ಮಾಡುವುದು, ತಿನ್ನುವುದು, ಸಿಂಗಾರ ಮಾಡಿಕೊಳ್ಳುವುದು ಮುಂತಾದುವುಗಳಿಗೂ ತನ್ನ ಭಕ್ತರಿಗಾಗಿ ನಿರೀಕ್ಷಿಸುತ್ತಾನೆ.
   • ಮೇಲೆ ವಿವರಿಸಿರುವಂತೆ ಅವನ ಭಕ್ತರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತಾನೆ.
  • ಆದರೂ, ಅವನು ಭಕ್ತರ ಮೇಲಿನ ಕಾರಣವಿಲ್ಲದ ಮತ್ತು ಅಪರಿಮಿತ ಕರುಣೆ, ಲಗತ್ತು ಮತ್ತು ಕನಿಕರದಿಂದ, ಅವನು ಅವರ ಎಲ್ಲಾ ಬಯಕೆಗಳನ್ನು ಪೂರೈಸುತ್ತಾನೆ, ಅವರಿಂದ ಏನನ್ನೂ ಅಪೇಕ್ಷಿಸದೇ. ಆದ್ದರಿಂದ ತನ್ನ ಶ್ರೇಷ್ಠ ಗುಣವಾದ ವಾತ್ಸಲ್ಯಮ್(ತಾಯಿಯ ಪ್ರೀತಿ, ತಾಳ್ಮೆ) ನನ್ನು ತೋರಿಸಿಕೊಳ್ಳುತ್ತಾನೆ.   

ಮುಕ್ತಾಯ

ಆದ್ದರಿಂದ ನಾವು ಚಿತ್, ಅಚಿತ್ ಮತ್ತು ಈಶ್ವರನೆಂಬ ಮೂರು ಘಟಕಗಳನ್ನು ಈಗ ಸಾಕಷ್ಟು ವಿಸ್ತಾರವಾಗಿ ನೋಡಿದ್ದೇವೆ. ಇದು ಬಹಳ ಕ್ಲಿಷ್ಟಕರವಾದ ವಿಷಯವಾಗಿದೆ. ಏಕೆಂದರೆ ಇದು ಅನೇಕ ತಾಂತ್ರಿಕ ಮತ್ತು ಆಳವಾದ ವಸ್ತುಗಳನ್ನು ಒಳಗೊಂಡಿದೆ. ನಾವು ದೊಡ್ಡ ಮಂಜಿನ ಗೆಡ್ಡೆಯ ತುದಿಯನ್ನು ಮಾತ್ರ ನೋಡಿದ್ದೇವೆ. ಕುಟ್ಟಿ ಭಾಷ್ಯಮ್ ಎಂದೇ ಪ್ರಸಿದ್ಧವಾಗಿರುವ (ಎಂಪೆರುಮಾನಾರರ ಶ್ರೀ ಭಾಷ್ಯಮ್‍ನ ಸಾರವನ್ನು ಒಳಗೊಂಡ) ಪಿಳ್ಳೈ ಲೋಕಾಚಾರ್‍ಯರ ದಿವ್ಯ ಗ್ರಂಥವಾದ ತತ್ತ್ವ ತ್ರಯಕ್ಕೆ ಮಾಮುನಿಗಳ ಅದ್ಭುತ ವ್ಯಾಖ್ಯಾನವನ್ನು ಕೇಳಿದರೆ/ ಓದಿದರೆ ಇನ್ನೂ ಹೆಚ್ಚು ವಿಷಯಗಳನ್ನೂ ಆಸ್ವಾದಿಸಬಹುದು. ಬನ್ನಿ, ನಾವೆಲ್ಲರೂ ಶ್ರೀಮನ್ ನಾರಾಯಣರನ್ನು, ಆಳ್ವಾರರನ್ನು ಮತ್ತು ಆಚಾರ್‍ಯರನ್ನು ನಮಗೆ ಈ ಶ್ರೇಷ್ಠವಾದ , ಎಲ್ಲದಕ್ಕಿಂತಲೂ ಹೆಚ್ಚು ಮೌಲ್ಯಯುತವಾದ ಸಾಹಿತ್ಯವನ್ನು ಕೊಟ್ಟಿರುವುದರಿಂದ ಇನ್ನೂ ಹೆಚ್ಚು ವೈಭವೀಕರಗೊಳಿಸೋಣ .

ಪಿಳ್ಳೈ ಲೋಕಾಚಾರ್‍ಯರು ಮತ್ತು ಮಣವಾಳ ಮಾಮುನಿಗಳ್ – ಶ್ರೀ ಪೆರುಂಬೂದೂರ್

ಅಡಿಯೇನ್ ಶ್ರೀ ಉ.ವೇ. ಪಿ.ಬಿ. ಸಂಪತ್ ಸ್ವಾಮಿಗಳಿಗೆ ಆಭಾರಿಯಾಗಿದ್ದೇನೆ. ಅಡಿಯೇನಿಗೆ ತತ್ವ ತ್ರಯಮ್‍ನ ಅರ್ಥವನ್ನೂ, ಸಾಹಿತ್ಯವನ್ನೂ ಹೇಳಿಕೊಟ್ಟಿರುವುದಕ್ಕಾಗಿ.

ಶ್ರೀಮತೇ ರಮ್ಯಜಾಮಾತೃ ಮುನೀಂದ್ರಾಯ ಮಹಾತ್ಮನೇ
ಶ್ರೀರಂಗವಾಸಿನೇ ಭೂಯಾತ್ ನಿತ್ಯಶ್ರೀ ನಿತ್ಯ ಮಂಗಳಮ್

ಮಂಗಳಾಶಾಸನ ಪರೈರ್ ಆಚಾರ್‍ಯೈ ಸತ್‍ಕೃತಾಯಾಸ್ತು ಮಂಗಳಮ್
ಸರ್ವೈಶ್ಚ ಪೂರ್ವೈರ್ ಆಚಾರ್‍ಯೈ ಸತ್‍ಕೃತಾಯಾಸ್ತು ಮಂಗಳಮ್

ಆಳ್ವಾರ್ ಎಂಪೆರುಮಾನಾರ್ ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಆಚಾರ್‍ಯರ್ ತಿರುವಡಿಗಳೇ ಶರಣಮ್

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://ponnadi.blogspot.com/2013/03/thathva-thrayam-iswara-who-is-god.html

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

1 thought on “ತತ್ತ್ವ ತ್ರಯಮ್ – ಈಶ್ವರ – ಭಗವಂತನೆಂದರೆ ಯಾರು?

 1. Pingback: 2022 – Jan – Week 2 – kOyil – SrIvaishNava Portal for Temples, Literature, etc

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s