Monthly Archives: March 2024

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಶ್ರೀವಚನ ಭೂಷಣ ಶಾಸ್ತ್ರವು ನಮ್ ಪೆರುಮಾಳ್ ಆದೇಶದ ಮೇರೆಗೆ ಕರುಣಾಮಯವಾಗಿ ರಚಿಸಲ್ಪಟ್ಟಿದೆ ಎಂದು ಮಾನವಾಲ ಮಾಮುನಿಗಳು ಹೇಳಿರುವುದರಿಂದ, ಮೇಲೆ ಉಲ್ಲೇಖಿಸಿದ ಘಟನೆಯು ಒಬ್ಬರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡುತ್ತದೆ. ಈ ಬಗ್ಗೆ ಕಲಿತವರೊಂದಿಗೆ ಪರಿಶೀಲಿಸುವುದು ಉತ್ತಮ. ಮಾನವಾಲಾ ಮಾಮುನಿಗಳು, ಶ್ರೀವಚನ ಭೂಷನಂ ಅವರ ಭಾಷ್ಯದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ:

“ಸಂಸಾರಿಗಳು ಅನುಭವಿಸಿದ ದುಃಖಗಳನ್ನು ನೋಡುತ್ತಾ, ಅವರನ್ನು ಉನ್ನತೀಕರಿಸುವ ಸಲುವಾಗಿ, ಪಿಳ್ಳೈ ಲೋಕಾಚಾರ್ಯರು, ತಮ್ಮ ಮಹಾನ್ ಕರುಣೆಯಿಂದ ಅನೇಕ ಪ್ರಭಂಧಗಳನ್ನು ರಚಿಸಿದರು. ಪೂರ್ವಾಚಾರ್ಯರು ಸಂಪೂರ್ಣ ಗೌಪ್ಯವಾಗಿ ನೀಡಿದ ನಿಗೂಢ ಪ್ರವಚನಗಳನ್ನು ನೆನಪಿಸಿಕೊಳ್ಳುತ್ತಾ, ಅವರು ತಮ್ಮ ಹಿಂದಿನ ಕೃತಿಗಳಲ್ಲಿ ಆ ಅರ್ಥಗಳನ್ನು ಬಹಿರಂಗಪಡಿಸಿಲ್ಲ ಎಂದು ಖಚಿತಪಡಿಸಿಕೊಂಡರು. ಅವರ ಕರುಣೆಗಿಂತ ಹೆಚ್ಚಾಗಿ, ಪೆರುಮಾಳ್ ಅವರು ಕರುಣೆಯಿಂದ ಕೇಳಿದ್ದರಿಂದ, ಪಿಳ್ಳೈ ಲೋಕಾಚಾರ್ಯರು ದಯಾಪೂರ್ವಕವಾಗಿ ಶ್ರೀವಚನ ಭೂಷಣಂ ವನ್ನು ರಚಿಸಿದರು.

ಪೇರಾರುಲಾಲ ಪೆರುಮಾಳ್ (ಕಾಂಚಿ ದೇವ ಪೆರುಮಾಳ್) ಮನಪ್ಪಕ್ಕಂನಲ್ಲಿ ವಾಸಿಸುತ್ತಿದ್ದ ನಂಬಿಯನ್ನು ಕರುಣೆಯಿಂದ ನೋಡಿ ಮತ್ತು ಅವರ ಕನಸಿನಲ್ಲಿ ಕೆಲವು ಅರ್ಥಗಳನ್ನು ಸೂಚಿಸಿದರು. ಅವರು ನಂಬಿಗೆ ಒಂದು ದಿನ ಹೇಳಿದರು “ನೀನು ಎರಡು ನದಿಗಳ ಮಧ್ಯದಲ್ಲಿ ನೆಲೆಸು; ಅಲ್ಲಿ ನಾವು ನಿಮಗೆ ಹೆಚ್ಚಿನ ಅರ್ಥಗಳನ್ನು ಸ್ಪಷ್ಟ ಪಡಿಸುವ ರೀತಿಯಲ್ಲಿ ಹೇಳುತ್ತೇವೆ . ನಂಬಿ ಶ್ರೀರಂಗವನ್ನು ತಲುಪಿದರು (ಇದು ಎರಡು ನದಿಗಳಾದ ಕೊಲ್ಲಿಡಂ ಮತ್ತು ಕಾವೇರಿ ನಡುವೆ ಇದೆ). ಪ್ರತಿದಿನ ಅಲ್ಲಿ ಪೆರುಮಾಳ್‌ ಅನ್ನು ಪೂಜಿಸುತ್ತಾ, ದೇವರಾಜ ಪೆರುಮಾಳ್ ಹೇಳಿದ ಅರ್ಥಗಳನ್ನು ಯಾರೂ ಕೇಳದೆ, ಏಕಾಂತ ಸ್ಥಳದಲ್ಲಿ, ದೇವಸ್ಥಾನದಲ್ಲಿ [ ಕಾಟ್ ಅಲಗಿಯ ಸಿಂಗರ್ ದೇವಸ್ಥಾನದಲ್ಲಿ] ಪುನರಾವರ್ತಿಸುತ್ತಿದ್ದರು. ಪಿಳ್ಳೈ ಲೋಕಾಚಾರ್ಯರು ತಮ್ಮ ಶಿಷ್ಯರೊಂದಿಗೆ ಒಂದು ದಿನ ಅಕಸ್ಮಾತ್ತಾಗಿ ಆ ಸ್ಥಳವನ್ನು ತಲುಪಿದರು. ಅವರು ತಮ್ಮ ಶಿಷ್ಯರಿಗೆ ಶಾಸ್ತ್ರದ ನಿಗೂಢ ಅರ್ಥಗಳನ್ನು ಕಲಿಸಲು ಪ್ರಾರಂಭಿಸಿದರು. ದೇವ ಪೆರುಮಾಳ್ ಹೇಳಿದ ಅರ್ಥಗಳಿಗೆ ಇವು ಸಮಾನವಾದುದನ್ನು ಕಂಡು ಮನಪ್ಪಕ್ಕಂ ನಂಬಿ ತಮ್ಮ ಸ್ಥಳದಿಂದ ಹೊರಬಂದು ಪಿಳ್ಳೈ ಲೋಕಾಚಾರ್ಯರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರು ಲೋಕಾಚಾರ್ಯರನ್ನು ಕೇಳಿದರು “ನೀವು ಅವರೇ?” [ಅರ್ಥ – ನೀವೇ ಪೇರಾರುಲಾಲ ಪೆರುಮಾಳಾ ? ] ಲೋಕಾಚಾರ್ಯರು ಉತ್ತರಿಸಿದರು “ಹೌದು; ಯಾಕೆ ಕೇಳುತ್ತಿರಿ?” ನಂಬಿ ಅವರಿಗೆ ಪೇರಾರುಲಾಲ ಪೆರುಮಾನ್ ಈ ಎಲ್ಲಾ ಅರ್ಥಗಳನ್ನು ಹೇಗೆ ಸೂಚಿಸಿದ್ದಾರೆ ಮತ್ತು ಅವರು ಏನು ಮಾಡಲು ಹೇಳಿದರು ಎಂಬುದನ್ನು ವಿವರಿಸಿದರು. ಲೋಕಾಚಾರ್ಯರು ಈ ಮಾತುಗಳನ್ನು ಕೇಳಿ ಸಂತೋಷಪಟ್ಟರು ಮತ್ತು ನಂಬಿಯನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು ಮತ್ತು ಅವರಿಗೆ ಎಲ್ಲಾ ನಿಗೂಢ ಅರ್ಥಗಳನ್ನು ಹೇಳಿದರು. ಒಂದು ದಿನ, ಪೆರುಮಾಳ್ ನಂಬಿಯ ಕನಸಿನಲ್ಲಿ ಬಂದು, ಈ ಅರ್ಥಗಳನ್ನು ಮರೆತುಬಿಡದ ಹಾಗೆ ಇವುಗಳನ್ನು ಬರೆಯಲು ತಮ್ಮ ಸೂಚನೆಯಂತೆ ಲೋಕಾಚಾರ್ಯರಿಗೆ ತಿಳಿಸಲು ಹೇಳಿದರು. ಲೋಕಾಚಾರ್ಯರು ಇದನ್ನು ಪೆರುಮಾಳ್ ಅವರ ಆದೇಶವೆಂದು ಸ್ವೀಕರಿಸಿದರು ಮತ್ತು ಅದನ್ನು ಪಾಲಿಸಲು ಒಪ್ಪಿದರು.
(ಇಲ್ಲಿಯವರೆಗೆ ಮನವಾಲಾ ಮಾಮುನಿಗಳ ಮಾತುಗಳಿವೆ- ಶ್ರೀವಚನ ಭೂಷಣ ಪ್ರಬಂಧದ ಪರಿಚಯಾತ್ಮಕ ವ್ಯಾಖ್ಯಾನದಲ್ಲಿ )

ತಿರುಪ್ಪಾವೈ ಸೇರಿದಂತೆ ಕೆಲವು ಪ್ರಬಂಧಗಳಿಗೆ ಅಳಗಿಯ ಮನವಾಲ್ ಪೆರುಮಾಳ್ ನಾಯನಾರ್ ಕರುಣೆಯಿಂದ ವ್ಯಾಖ್ಯಾನವನ್ನು ಬರೆದರು. ಇದನ್ನು ಗಮನದಲ್ಲಿಟ್ಟುಕೊಂಡು, ಜೀಯರ್ [ನಮ್ಮ ಸಂಪ್ರದಾಯದಲ್ಲಿ ಜೀಯರ್ ಎಂಬ ಪದವು ಮನವಾಲಾ ಮಾಮುನಿಗಳನ್ನು ಉಲ್ಲೇಖಿಸುತ್ತದೆ], ಅವರ ಪ್ರಬಂಧಂ ಉಪದೇಶ ರತ್ತಿನಮಾಲೈನಲ್ಲಿ ಬರೆದಿದ್ದಾರೆ “ಸೀರಾಲ್ ವೈಯ ಗುರುವಿನ್ ತಂಬಿ ಮನ್ನು ಮನವಾಲಾ ಮುನಿ ಸೇಯ್ಯುಂ ಅವೈ ತಾನುಂ ಸಿಲೈ” (ಅವರ ಸಹಾನುಭೂತಿಯ ಗುಣದಿಂದ, ಪಿಳ್ಳೈ ಲೋಕಾಚಾರ್ಯರ ಸಹೋದರ, ಮಾನವಲಾ ಪೆರುಮಾಳ್ ನಾಯನಾರ್ ಅವರು ಕೆಲವು ವ್ಯಾಖ್ಯಾನಗಳನ್ನು ಬರೆದಿದ್ದಾರೆ).

ಹೀಗೆ, ಲೋಕಾಚಾರ್ಯರು ಮತ್ತು ಅಳಗಿಯ ಮನವಾಳ ಪೆರುಮಾಳ್ ನಾಯನರು ಪ್ರಾಪಂಚಿಕ ವಿಷಯಗಳ ಬಗ್ಗೆ ಸಂಪೂರ್ಣ ನಿರ್ಲಿಪ್ತತೆಯಿಂದ ಜೀವಿಸುತ್ತಿದ್ದಾಗ, ಮನವಾಳ ಪೆರುಮಾಳ್ ನಾಯನಾರ್ ಅವರು ಶ್ರೀವೈಕುಂಠವನ್ನು ಪಡೆದರು. ಪಿಳ್ಳೈ ಲೋಕಾಚಾರ್ಯರು, ಅಗಲಿಕೆಯಿಂದ ತುಂಬಾ ದುಃಖಿತರಾಗಿ, ಮನವಾಳ ಪೆರುಮಾಳ್ ನಾಯನಾರ್ ಅವರ ತಲೆಯನ್ನು ತಮ್ಮ ಮಡಿಲಲ್ಲಿ ಇಟ್ಟುಕೊಂಡು ಹೇಳಿದರು “ಮುಡುಂಬೈ ಮಹಾನ್ ಕುಲದ ಮನವಾಳ ಪೆರುಮಾಳ್ ಕೂಡ ಶ್ರೀವೈಕುಂಠಂಗೆ ಹೊರಟರೆ, ಎಂಟು ಅಕ್ಷರಗಳ ಆಂತರಿಕ ಅರ್ಥವನ್ನು ಯಾರು ಬಹಿರಂಗಪಡಿಸುತ್ತಾರೆ. [ಅಷ್ಟಾಕ್ಷರಂ, ತಿರುಮಂತ್ರಂ ಎಂದೂ ಕರೆಯುತ್ತಾರೆ] ಮತ್ತು ಮಾಮ್ ಪದದ ಅರ್ಥವನ್ನು ತಿಳಿಸಿಕೊಡುತ್ತಾರೆ [ಶ್ರೀ ಭಗವತ್ಗೀತೆ 18.66 ರಲ್ಲಿ ಕೃಷ್ಣನ್ನು ಹೇಳಿದಂತೆ, ಮಾಮ್ ಏಕಂ ಶರಣಂ ವ್ರಜ]?”.

ಅಳಗಿಯ ಮನವಾಳ ಪೆರುಮಾಳ್ ನಾಯನಾರ್‌ ಅವರ ತನಿಯನ್ :

ದ್ರಾವಿಡಾ೦ನಾಯ ಹೃದಯಂ ಗುರುಪರ್ವಕ್ರಮಾಗತಂ
ರಮ್ಯಜಾಮಾತೃ ದೇವೇನ ಧರ್ಷಿತಂ ಕೃಷ್ಣ ಸೂನುನಾ

(ದೈವಿಕ ಗ್ರಂಥ೦ ಆಚಾರ್ಯ ಹೃದಯವನ್ನು ಕರುಣಾಪೂರ್ವಕವಾಗಿ ಅಳಗಿಯ ಮನವಾಳ ಪೆರುಮಾಳ್ ನಾಯನರು ರಚಿಸಿದ್ದಾರೆ, ಅವರು ವಡಕ್ಕುತ್ ತಿರುವೀದಿ ಪ್ಪಿಳ್ಳೈ ಅವರ ಪುತ್ರರಾಗಿದ್ದಾರೆ, ಅವರನ್ನು ಕೃಷ್ಣನೆಂದು ಕರೆಯುತ್ತಿದ್ದರು)

ಅಡಿಯೇನ್ ಸುಭದ್ರಾ ಬಾಲಾಜಿ

ಮೂಲ : https://srivaishnavagranthams.wordpress.com/2021/07/28/yathindhra-pravana-prabhavam-13/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಪಿಳ್ಳೈ ಲೋಕಾಚಾರ್ಯರ ಹಿರಿಮೆ

ಶ್ರೇಷ್ಠವಾದ ಪಿಳ್ಳೈ ಲೋಕಾಚಾರ್ಯರನ್ನು ನಮ್ಮಾಳ್ವಾರ್ ಅವರ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ಅವರ ಕಿರಿಯ ಸಹೋದರ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರ ಕೃಪೆಯಲ್ಲಿ ಬೆಳೆದರು. ಅವರು ಇಲಯ ಪೆರುಮಾಳ್ (ಲಕ್ಷ್ಮಣನ್) ಮತ್ತು ಪೆರುಮಾಳ್ (ಶ್ರೀ ರಾಮರ್) ಹಾಗೆಯೇ ಕೃಷ್ಣ ಮತ್ತು ಬಲರಾಮರಂತೆ ಒಟ್ಟಿಗೆ ಬೆಳೆದರು. ಈ ಕೆಳಗಿನ ಪಾಶುರಂ ಮೂಲಕ ಅವರನ್ನು ಒಟ್ಟಿಗೆ ನೋಡಿದ ಮೇಲೆ ಪ್ರಶಂಸಿಸಲಾಯಿತು :

ತಂಬಿಯುಡನ್ ಧಾಸಾರಥಿಯುಂ ಸಂಗವನ್ನಾ
ನಂಬಿಯುಡನ್ ಪಿನ್ ನಡೆಂದು ವಂದಾನುಂ – ಪೊಂಗುಪುನಲ್
ಒಂಗು ಮುಡುಂಬೈ ಉಳಗಾರಿಯನುಂ ಅರನ್
ಧಾಂಗು ಮಾನವಳಾನುಮೇ ಥಾನ್

(ಧಾಸರಥಿ (ಶ್ರೀ ರಾಮರು) ತನ್ನ ಕಿರಿಯ ಸಹೋದರ (ಲಕ್ಷ್ಮಣ) ಜೊತೆ ನಡೆದಂತೆ ಮತ್ತು ಶಂಖದ ಮೈಬಣ್ಣವನ್ನು ಹೊಂದಿದ್ದ ತನ್ನ ಸಹೋದರನೊಂದಿಗೆ ಕೃಷ್ಣನಡೆದಂತೆ, ಮುಡುಂಬೈ ಎಂಬ ಶ್ರೇಷ್ಠ ಕುಲದ ಉಲಗಾರಿಯನ್ (ಪಿಳ್ಳೈ ಲೋಕಾಚಾರ್ಯರು) ಮತ್ತು ಅಳಗಿಯ ಮನವಾಳನ್ ಒಟ್ಟಿಗೆ ನಡೆಯುತ್ತಿದ್ದರು)

ಅವರಿಬ್ಬರಲ್ಲಿ, ಪಿಳ್ಳೈ ಲೋಕಾಚಾರ್ಯರು ಹಲವಾರು ನಿಗೂಢ ಗ್ರಂಥಗಳನ್ನು (ಪ್ರಬಂಧಗಳು) ರಚಿಸಿದ್ದಾರೆ, ಇವುಗಳನ್ನು ಮಹಿಳೆಯರು ಮತ್ತು ಸಾಮಾನ್ಯರು ಉನ್ನತಿಗಾಗಿ ಕಲಿಯಬಹುದು, ಉದಾಹರಣೆಗೆ ತನಿಪ್ರಣವಂ, ತನಿಧ್ವಯಂ, ತನಿಚ್ಚರಮಂ, ಪರಂಧಪಡಿ , ಶ್ರೀಯ:ಪತಿಪಡಿ, ಯಾಧೃಚ್ಚಿಕಪ್ಪಡಿ , ಮುಮುಕ್ಷುಪ್ಪಾಡಿ , ಸಂಸಾರ ಸಾಮ್ರಾಜ್ಯಮ್ , ಸಾರಸಂಗ್ರಹಂ, ತತ್ವತ್ರಯಂ, ತತ್ವಶೇಖರಂ, ಪ್ರಪನ್ನಪರಿತ್ರಾಣಂ, ಪ್ರಮೇಯಶೇಖರಂ, ಅರ್ಚಿರಾಧಿ , ಅರ್ಥಪಂಚಕಂ, ನವವಿಧ ಸಂಬಂಧಂ, ನವರತ್ನಮಾಲೈ, ಶ್ರೀವಚನ ಭೂಷನ೦ ಇತ್ಯಾದಿ. ಅವರು ತಮ್ಮ ಕಿರಿಯ ಸಹೋದರನೊಂದಿಗೆ ವಾಸಿಸುತ್ತಿದ್ದ ಸಮಯದಲ್ಲಿ, ಶ್ರೇಷ್ಠ ಆಚಾರ್ಯರು ಪರಮಸಾತ್ವಿಕರಾದ (ಕೇವಲ ಸತ್ವ ಗುಣ ಅಥವಾ ಸಂಪೂರ್ಣವಾಗಿ ಉತ್ತಮ ಗುಣಗಳನ್ನು ಹೊಂದಿದ್ದಾರೆ) ಕುರಕುಲೋತ್ತಮ ಧಾಸರ್ ನಾಯನ್, ಮನಪ್ಪಕ್ಕತ್ತು ನಂಬಿ, ಕೊಲ್ಲಿ ಕಾವಲಧಾಸರ್ ಎಂದೂ ಕರೆಯಲ್ಪಡುತ್ತಿದ್ದ ಅಳಗಿಯ ಮನವಾಳಪ್ಪಿಲ್ಲೈ, ಕೊಟ್ಟೂರಿಲ್ ಅನ್ನರ್ , ತಿರುಮಲೈ ಆಳ್ವಾರ (ನಂತರ ಮನವಾಳ ಮಾಮುನಿಗಳಿಗೆ ಆಚಾರ್ಯರು), ವಿಲಂಜೊಲೈಪ್ ಪಿಳ್ಳೈ ಮತ್ತು ತಿರುಮಲೈ ಆಳ್ವಾರ್ ಅವರ ತಾಯಿಯಂತಹ ಪ್ರಸಿದ್ಧ ಮಹಿಳೆಯರು ಮತ್ತು ಇತರರು ಅವರ ದೈವಿಕ ಪಾದಗಳ ಅಡಿಯಲ್ಲಿ ಆಶ್ರಯ ಪಡೆದರು, ಎಂಪೆರುಮಾನ್ ಅನ್ನು ಸಹ ಪರಿಗಣಿಸದೆ ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಅವಸ್ಥೆಗಳಲ್ಲೂ ಅವರಿಗೆ ಉದಾತ್ತ ಸೇವೆಗಳನ್ನು ಮಾಡಿದರು.

ಹೀಗೆ, ಅವರಿಬ್ಬರೂ ಬದುಕುತ್ತಿರುವಾಗ, ಪಿಳ್ಳೈ ಲೋಕಾಚಾರ್ಯರು ತಮ್ಮ ಶಿಷ್ಯರಿಗೆ ಶ್ರೀವಚನ ಭೂಷಣದ ಕುರಿತು ಪ್ರವಚನ ನೀಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರು ತಮ್ಮ ಆಚಾರ್ಯ ಹೃದಯಂ ಎಂಬ ಕೃತಿಯನ್ನು ಪ್ರಾರಂಭಿಸಿದರು, ಇದನ್ನು ತಿರುವಾಯ್ಮೋಳಿ ಸಾರವೆಂದು ಪರಿಗಣಿಸಲಾಗಿದೆ ಅದಲಾದೆ ಶ್ರೀವಚನ ಭೂಷನದ ಸ್ಥಾಪನೆಗೆ ಅರ್ಥವಾಗಿದೆ. ಇವೆರಡೂ ಈಡುವಿನ ಅರ್ಥಗಳನ್ನು ತಿಳಿಸುವುದರಿಂದ, ಈಡುವಿನ ತನಿಯನ್ಗಳನ್ನು ಪಠಿಸುವಾಗ ಪಿಳ್ಳೈ ಲೋಕಾಚಾರಿಯರ್ ಮತ್ತು ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ತನಿಯನ್ಗಳನ್ನು ಪಠಿಸಲಾಗುತ್ತದೆ.

ಇಬ್ಬರು ಸಹೋದರರು ತಮ್ಮ ಕೆಲಸಗಳಿಂದ ಪಡೆದ ಖ್ಯಾತಿ ಮತ್ತು ಅವರ ಕೃತಿಗಳನ್ನು ಕೇಳಲು ಜನರು ಅವರ ಅಡಿಯಲ್ಲಿ ಆಶ್ರಯ ಪಡೆದ ರೀತಿಯನ್ನು ಕೆಲವರು ಸಹಿಸಲಿಲ್ಲ. ತಮ್ಮ ಅಸೂಯೆಯಲ್ಲಿ, ಅವರು ನಮ್ ಪೆರುಮಾಳ್ ಗೆ ಮನವಿ ಮಾಡಿದರು, “ಓ ರಂಗನಾಥ! ಪಿಲ್ಲೈಲೋಕಾಚಾರ್ಯರು ಶ್ರೀವಚನ ಭೂಷನಂ ಎಂಬ ನಿಗೂಢ ಗ್ರಂಥವನ್ನು ಸಂಕಲಿಸಿದ್ದಾರೆ, ಇದು ದರ್ಶನದ ಅರ್ಥಗಳನ್ನು ನಿರರ್ಥಕವಾಗುವಂತೆ ಮಾಡುತ್ತಿದೆ.ಇದನ್ನು ಕೇಳಿದ ನಮ್ ಪೆರುಮಾಳ್ ಕೋಪಗೊಂಡರು ಮತ್ತು ಅರ್ಚಕರ ಮೂಲಕ ಪಿಳ್ಳೈ ಲೋಕಾಚಾರ್ಯರನ್ನು ಕರೆದರು. ಅವರು ಸ್ನಾನಕ್ಕೆ ಹೋಗಿದ್ದರಿಂದ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರಿಂದ ಕರೆಯಲ್ಪಟ್ಟ ಉದ್ದೇಶವನ್ನು ತಿಳಿದುಕೊಂಡು ಅವರೊಂದಿಗೆ ಪೆರುಮಾಳ್ ಸನ್ನಿಧಿಗೆ ಹೋದರು. ಪೆರುಮಾಳ್ ಅವರನ್ನು ಅರ್ಚಕರ ಮೂಲಕ ಕೇಳಿದರು “ಓ ನಾಯನಾರ್! ಸದಾಚಾರದ ಆಳ್ವಿಕೆಯನ್ನು ಸ್ಥಾಪಿಸಲು ನಾವು ಅಂತ್ಯವಿಲ್ಲದ ಅವತಾರಗಳನ್ನು ತೆಗೆದುಕೊಂಡಿಲ್ಲವೇ? ಅದನ್ನು ನಿರರ್ಥಕವಾಗಿಸಲು ನೀವು ನಿಗೂಢ ಗ್ರಂಥಗಳನ್ನು ಏಕೆ ಸಂಕಲಿಸುತ್ತಿದ್ದೀರಿ?” ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರು ಶ್ರೀವಚನ ಭೂಷನಂ ಸ್ಥಾಪನೆಗೆ ಪೂರಕವಾಗಿ ಸಂಕಲಿಸಿದ ಆಚಾರ್ಯ ಹೃದಯಂ ಪರಿಕಲ್ಪನೆಗಳನ್ನು ವಿವರಿಸುವ ಮೂಲಕ ಪ್ರತಿಕ್ರಿಯಿಸಿದರು. ಅವರು ತಮ್ಮ ವಿವರಣೆಯನ್ನು ಪೂರ್ಣಗೊಳಿಸಿದ ನಂತರ, ಪೆರುಮಾಳ್ ಬಹಳ ಸಂತೋಷಪಟ್ಟರು ಮತ್ತು “ಇವು ನಮ್ಮ ಅವತಾರಗಳಲ್ಲಿ ನಾವು ಹೇಳಿದ್ದಲ್ಲವೇ?” ಎಂದು ಕೇಳುವ ಮೂಲಕ ಅವರಿಗೆ ದೂರು ನೀಡಿದವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಅವರು ದೇವಾಲಯದ ಎಲ್ಲಾ ಗೌರವಗಳನ್ನು ನಾಯನಾರ್‌ಗೆ (ಪವಿತ್ರ ನೀರು, ದೈವಿಕ ಶಠಾರಿ , ತುಳಸಿ ಪ್ರಸಾದ ಇತ್ಯಾದಿ) ಅರ್ಪಿಸಿದರು ಮತ್ತು ಅವರನ್ನು ಪಲ್ಲಕ್ಕಿಯಲ್ಲಿ ಅವರ ನಿವಾಸಕ್ಕೆ ಕಳುಹಿಸಿದರು. ಇದನ್ನು ಕೇಳಿದ ನಂತರ, ಪಿಳ್ಳೈ ಲೋಕಾಚಾರ್ಯರು ಸಂತೋಷಪಟ್ಟರು ಮತ್ತು ತಿರುನೆಡುತಾನ್ಡಕ೦ ಪಾಶುರಂನಲ್ಲಿ ಹೇಳಿರುವಂತೆ “ವಲರ್ಥದನಾಲ್ ಪಯನ್ ಪೆಟ್ಟ್ರೆನ್ ” (ನಾನು ನಿನ್ನನ್ನು ಪೋಷಿಸುವುದರ ಪ್ರಯೋಜನವನ್ನು ನಾನು ಅರಿತುಕೊಂಡೆ) ಎಂದು ತನ್ನ ಸಹೋದರನನ್ನು ತಬ್ಬಿಕೊಂಡರು.

ಅಡಿಯೇನ್ ಸುಭದ್ರಾ ಬಾಲಾಜಿ

ಮೂಲ : https://srivaishnavagranthams.wordpress.com/2021/07/27/yathindhra-pravana-prabhavam-12/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ನಂಪಿಳ್ಳೈ ನಂತರ, ವಡಕ್ಕು ತಿರುವೀದಿಪ್ಪಿಳ್ಳೈ ಅವರು ಎಂಪೆರುಮಾನಾರ್ ದರ್ಶನದ ಉಸ್ತುವಾರಿ ವಹಿಸಿದ್ದಾಗ, ಅವರ ಶಿಷ್ಯರು ಅವರನ್ನು “ಆತ್ಮದ (ಸಂವೇದನಾಶೀಲ ಘಟಕ)” ಮೂಲ ಸ್ವರೂಪವೇನು ಎಂದು ಕೇಳಿದರು. ಅವರು ಉತ್ತರಿಸಿದರು, “ಅಹಂಕಾರದ (ಸ್ವತಂತ್ರ) ಕೊಳೆಯನ್ನು ತೆಗೆದುಹಾಕಿದಾಗ, ಆತ್ಮಕ್ಕೆ ಅಳಿಸಲಾಗದ ಹೆಸರು ಅಡಿಯೆನ್ (ಸೇವಕ) ಎಂದು ಎಲ್ಲರಿಗೂ ತಿಳಿದಿದೆ” ಎಂದು ಹೇಳಿದರು. ಆತ್ಮವು ‘ನಾನು ಈಶ್ವರನ್ (ಎಲ್ಲರನ್ನೂ ಮತ್ತು ಎಲ್ಲವನ್ನೂ ನಿಯಂತ್ರಿಸುವವನು)’ ಎಂಬ ಆಲೋಚನೆಯಿಂದ ಬೇರ್ಪಟ್ಟಾಗ, ಅದರ ಮೂಲಭೂತ ಗುರುತು ‘ನಾನ್ನು ಸೇವಕ’ ಎಂದು ಸೂಚಿಸುತ್ತದೆ. ಎಲ್ಲಾ ವೇದಗಳನ್ನು, ಎಲ್ಲಾ ಶಾಸ್ತ್ರಗಳನ್ನು, ಎಲ್ಲಾ ಆಳ್ವಾರರ ಪಾಶುರಂಗಳನ್ನು ಮತ್ತು ಎಲ್ಲಾ ಆಚಾರ್ಯರ ದಿವ್ಯ ವಾಕ್ಯಗಳನ್ನು ವಿಶ್ಲೇಷಿಸಿದ ನಂತರ, ಶ್ರೀವೈಷ್ಣವರಿಗೆ ಮೋಕ್ಷವನ್ನು (ಶ್ರೀವೈಕುಂಟಂ) ಪಡೆಯಲು ದೃಢವಾದ ಆಚಾರ್ಯಭಿಮಾನಂ (ಶಿಷ್ಯನು ಕರುಣೆಗೆ ಅರ್ಹನೆಂದು ಒಬ್ಬರ ಆಚಾರ್ಯರಿಂದ ಗುರುತಿಸುವಿಕೆ ) ಬಿಟ್ಟು ಬೇರೆ ಯಾವುದೇ ಮಾರ್ಗಗಳಿಲ್ಲ ಮತ್ತು ದೃಢವಾದ ಭಗವತ್ ಅಪಚಾರವನ್ನು (ಭಗವಂತನ ಭಕ್ತನ ಮೇಲಿನ ಅಪರಾಧ) ಹೊರತಾಗಿ ಮೋಕ್ಷಕ್ಕೆ ಯಾವುದೇ ಅಡಚಣೆಯಿಲ್ಲ. ಅವರು ತಮ್ಮ ಶಿಷ್ಯರಿಗೆ ಹೇಳಿದರು, ತಮ್ಮ ಆಚಾರ್ಯ ನಂಪಿಳ್ಳೈ ಅವರನ್ನು ಉಲ್ಲೇಖಿಸಿ “ಶಾಶ್ವತ ಅಸ್ತಿತ್ವವು ದೃಢವಾದ ಭಾಗವತ ಅಪಚಾರದವರೆಗೆ ಮಾತ್ರ ಉಳಿಯುವುದಿಲ್ಲವೇ? “. “ಶಾಶ್ವತವಾದ ಆಚಾರ್ಯಭಿಮಾನಂ ಎಂದರೆ ಆಚಾರ್ಯರ ಮಾತುಗಳನ್ನು ತನ್ನ ನಿಯಮಿತ ಚಟುವಟಿಕೆಗಳಲ್ಲಿ ಅನುಸರಿಸುವುದು ಮತ್ತು ಆಚಾರ್ಯನೇ ಸಾಧನ ಮತ್ತು ಗುರಿ ಎಂಬ ನಂಬಿಕೆಯಲ್ಲಿ ದೃಢವಾಗಿರುವುದು ಮತ್ತು ಭಾಗವತನಿಗೆ (ಭಗವಂತನ ಭಕ್ತ) ಮಾಡಿರುವ ಶಾಶ್ವತ ಅಪರಾಧಗಳಿಗೆ ಪ್ರಾಯಶ್ಚಿತ್ತ ಪಟ್ಟು ಕ್ಷಮೆಯನ್ನು ಯಾಚಿಸದೇ ಇರುವುದು ; ಅಂತಹ ಕ್ರಿಯೆಯು ಆತ್ಮಾನ ಅಸ್ತಿತ್ವವನ್ನು ಕತ್ತಲೆ ಮಾಡುತ್ತದೆ, ಆತ್ಮವನ್ನು ಸುಟ್ಟ ಬಟ್ಟೆಯ ತುಂಡಿನಂತೆ ಮಾಡುತ್ತದೆ [ಸುಟ್ಟ ಬಟ್ಟೆಯ ತುಂಡು ಎಲ್ಲಾ ದಿಕ್ಕುಗಳಲ್ಲಿಯೂ ಹಾರಿಹೋಗುವಾಗ ಗಾಳಿಯು ಅದರ ಮೇಲೆ ಬೀಸುವವರೆಗೂ ಸಾಮಾನ್ಯವೆಂದು ತೋರುತ್ತದೆ] ಮತ್ತು ಅದನ್ನು ನಾಶಪಡಿಸುತ್ತದೆ( ನಮ್ಮ ಹೊರನೋಟವು ಭಕ್ತನಂತೆ ಕಂಡರೂ, ಭಾಗವತನಿಗೆ ಮಾಡಿದ ಅಪಚಾರಕ್ಕೆ ಕ್ಷಮೆ ಕೇಳದಿದ್ದರೆ ನಮಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ).

ಈ ರೀತಿ ಎಲ್ಲರನ್ನೂ ಉಣಬಡಿಸುತ್ತಾ, ವಡಕ್ಕುತ್ ತಿರುವೀದಿಪ್ಪಿಳ್ಳೈ ಅವರು ತಮ್ಮ ದಿವ್ಯ ಪುತ್ರರಾದ ಪಿಳ್ಳೈ ಲೋಕಾಚಾರ್ಯರನ್ನು ಮತ್ತು ಅಳಗಿಯ ಮನವಾಳಪ್ಪೆರುಮಾಳ್ ನಾಯನ್ನರನ್ನು ದರ್ಷನದ ಸಿದ್ಧಾಂತಗಳನ್ನು ಹರಡಲು ಸಂಪೂರ್ಣವಾಗಿ ತೊಡಗಿಸಿಕೊಂಡರು ಮತ್ತು ಸ್ವಲ್ಪ ಸಮಯದ ನಂತರ, ದಿವ್ಯ ಸ್ಥಾನಕ್ಕೆ (ಶ್ರೀವೈಕುಂಟಂ) ನಂಪಿಳ್ಳೈ ಅವರ ದೈವಿಕ ಪಾದಗಳನ್ನು ಸ್ಮರಿಸುತ್ತಾ ಹೊರಟರು. ಪಿಳ್ಳೈ ಲೋಕಾಚಾರ್ಯರು ಬಹಳ ಸಂಕಟಕ್ಕೊಳಗಾದರು ಮತ್ತು “ನಾವು ಸಂಸ್ಕೃತ ಮತ್ತು ದ್ರಾವಿಡ ( ತಮಿಳು ) ವೇದಮ್ ಎರಡರೊಂದಿಗೂ ಸಂಪರ್ಕವನ್ನು ಹೊಂದಿದ್ದ ವಿಶಿಷ್ಟ ಘಟಕವನ್ನು ಕಳೆದುಕೊಂಡಿದ್ದೇವೆ” ಎಂದು ಹೇಳಿದರು ಮತ್ತು ಅಂತಿಮ ವಿಧಿಗಳನ್ನು ಸೂಕ್ತವಾದ ರೀತಿಯಲ್ಲಿ ನಿರ್ವಹಿಸಿದರು.

ವಡಕ್ಕು ತಿರುವೀದಿಪ್ಪಿಳ್ಳೈ ಅವರ ದೈವಿಕ ನಕ್ಷತ್ರವು ಸ್ವಾತಿ ಮತ್ತು ಅವರ ಥಣಿಯನ್
ಶ್ರೀಕೃಷ್ಣಪಾಧಪಾಧಭಜೇ ನಮಾಮಿ ಶಿರಸಾ ಸಧಾ l
ಯತ್ಪ್ರಸಾಧಪ್ರಭಾವೇನ ಸರ್ವಸಿದ್ಧಿರಭುನ್ ಮಮ ll

(ನಾನು ಆ ಶ್ರೀಕೃಷ್ಣನ (ವಡಕ್ಕು ತಿರುವೀದಿಪ್ಪಿಳ್ಳೈ ಎಂದೂ ಕರೆಯುತ್ತಾರೆ) ಅವರ ದಿವ್ಯ ಪಾದಕಮಲಗಳನ್ನು ನನ್ನ ತಲೆ ಬಾಗಿ ನಿರಂತರವಾಗಿ ಪೂಜಿಸುತ್ತೇನೆ, ಅವರ ಅದ್ಭುತವಾದ ಅನುಗ್ರಹದಿಂದ ನಾನು ಎಲ್ಲಾ ಪುರುಷಾರ್ಥಗಳನ್ನು (ಪ್ರಯೋಜನಗಳನ್ನು) ಪಡೆದಿದ್ದೇನೆ.

ಅಡಿಯೇನ್ ಸುಭದ್ರಾ ಬಾಲಾಜಿ

ಮೂಲ : https://srivaishnavagranthams.wordpress.com/2021/07/26/yathindhra-pravana-prabhavam-11/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org