ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೧

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ನಂಪಿಳ್ಳೈ ನಂತರ, ವಡಕ್ಕು ತಿರುವೀದಿಪ್ಪಿಳ್ಳೈ ಅವರು ಎಂಪೆರುಮಾನಾರ್ ದರ್ಶನದ ಉಸ್ತುವಾರಿ ವಹಿಸಿದ್ದಾಗ, ಅವರ ಶಿಷ್ಯರು ಅವರನ್ನು “ಆತ್ಮದ (ಸಂವೇದನಾಶೀಲ ಘಟಕ)” ಮೂಲ ಸ್ವರೂಪವೇನು ಎಂದು ಕೇಳಿದರು. ಅವರು ಉತ್ತರಿಸಿದರು, “ಅಹಂಕಾರದ (ಸ್ವತಂತ್ರ) ಕೊಳೆಯನ್ನು ತೆಗೆದುಹಾಕಿದಾಗ, ಆತ್ಮಕ್ಕೆ ಅಳಿಸಲಾಗದ ಹೆಸರು ಅಡಿಯೆನ್ (ಸೇವಕ) ಎಂದು ಎಲ್ಲರಿಗೂ ತಿಳಿದಿದೆ” ಎಂದು ಹೇಳಿದರು. ಆತ್ಮವು ‘ನಾನು ಈಶ್ವರನ್ (ಎಲ್ಲರನ್ನೂ ಮತ್ತು ಎಲ್ಲವನ್ನೂ ನಿಯಂತ್ರಿಸುವವನು)’ ಎಂಬ ಆಲೋಚನೆಯಿಂದ ಬೇರ್ಪಟ್ಟಾಗ, ಅದರ ಮೂಲಭೂತ ಗುರುತು ‘ನಾನ್ನು ಸೇವಕ’ ಎಂದು ಸೂಚಿಸುತ್ತದೆ. ಎಲ್ಲಾ ವೇದಗಳನ್ನು, ಎಲ್ಲಾ ಶಾಸ್ತ್ರಗಳನ್ನು, ಎಲ್ಲಾ ಆಳ್ವಾರರ ಪಾಶುರಂಗಳನ್ನು ಮತ್ತು ಎಲ್ಲಾ ಆಚಾರ್ಯರ ದಿವ್ಯ ವಾಕ್ಯಗಳನ್ನು ವಿಶ್ಲೇಷಿಸಿದ ನಂತರ, ಶ್ರೀವೈಷ್ಣವರಿಗೆ ಮೋಕ್ಷವನ್ನು (ಶ್ರೀವೈಕುಂಟಂ) ಪಡೆಯಲು ದೃಢವಾದ ಆಚಾರ್ಯಭಿಮಾನಂ (ಶಿಷ್ಯನು ಕರುಣೆಗೆ ಅರ್ಹನೆಂದು ಒಬ್ಬರ ಆಚಾರ್ಯರಿಂದ ಗುರುತಿಸುವಿಕೆ ) ಬಿಟ್ಟು ಬೇರೆ ಯಾವುದೇ ಮಾರ್ಗಗಳಿಲ್ಲ ಮತ್ತು ದೃಢವಾದ ಭಗವತ್ ಅಪಚಾರವನ್ನು (ಭಗವಂತನ ಭಕ್ತನ ಮೇಲಿನ ಅಪರಾಧ) ಹೊರತಾಗಿ ಮೋಕ್ಷಕ್ಕೆ ಯಾವುದೇ ಅಡಚಣೆಯಿಲ್ಲ. ಅವರು ತಮ್ಮ ಶಿಷ್ಯರಿಗೆ ಹೇಳಿದರು, ತಮ್ಮ ಆಚಾರ್ಯ ನಂಪಿಳ್ಳೈ ಅವರನ್ನು ಉಲ್ಲೇಖಿಸಿ “ಶಾಶ್ವತ ಅಸ್ತಿತ್ವವು ದೃಢವಾದ ಭಾಗವತ ಅಪಚಾರದವರೆಗೆ ಮಾತ್ರ ಉಳಿಯುವುದಿಲ್ಲವೇ? “. “ಶಾಶ್ವತವಾದ ಆಚಾರ್ಯಭಿಮಾನಂ ಎಂದರೆ ಆಚಾರ್ಯರ ಮಾತುಗಳನ್ನು ತನ್ನ ನಿಯಮಿತ ಚಟುವಟಿಕೆಗಳಲ್ಲಿ ಅನುಸರಿಸುವುದು ಮತ್ತು ಆಚಾರ್ಯನೇ ಸಾಧನ ಮತ್ತು ಗುರಿ ಎಂಬ ನಂಬಿಕೆಯಲ್ಲಿ ದೃಢವಾಗಿರುವುದು ಮತ್ತು ಭಾಗವತನಿಗೆ (ಭಗವಂತನ ಭಕ್ತ) ಮಾಡಿರುವ ಶಾಶ್ವತ ಅಪರಾಧಗಳಿಗೆ ಪ್ರಾಯಶ್ಚಿತ್ತ ಪಟ್ಟು ಕ್ಷಮೆಯನ್ನು ಯಾಚಿಸದೇ ಇರುವುದು ; ಅಂತಹ ಕ್ರಿಯೆಯು ಆತ್ಮಾನ ಅಸ್ತಿತ್ವವನ್ನು ಕತ್ತಲೆ ಮಾಡುತ್ತದೆ, ಆತ್ಮವನ್ನು ಸುಟ್ಟ ಬಟ್ಟೆಯ ತುಂಡಿನಂತೆ ಮಾಡುತ್ತದೆ [ಸುಟ್ಟ ಬಟ್ಟೆಯ ತುಂಡು ಎಲ್ಲಾ ದಿಕ್ಕುಗಳಲ್ಲಿಯೂ ಹಾರಿಹೋಗುವಾಗ ಗಾಳಿಯು ಅದರ ಮೇಲೆ ಬೀಸುವವರೆಗೂ ಸಾಮಾನ್ಯವೆಂದು ತೋರುತ್ತದೆ] ಮತ್ತು ಅದನ್ನು ನಾಶಪಡಿಸುತ್ತದೆ( ನಮ್ಮ ಹೊರನೋಟವು ಭಕ್ತನಂತೆ ಕಂಡರೂ, ಭಾಗವತನಿಗೆ ಮಾಡಿದ ಅಪಚಾರಕ್ಕೆ ಕ್ಷಮೆ ಕೇಳದಿದ್ದರೆ ನಮಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ).

ಈ ರೀತಿ ಎಲ್ಲರನ್ನೂ ಉಣಬಡಿಸುತ್ತಾ, ವಡಕ್ಕುತ್ ತಿರುವೀದಿಪ್ಪಿಳ್ಳೈ ಅವರು ತಮ್ಮ ದಿವ್ಯ ಪುತ್ರರಾದ ಪಿಳ್ಳೈ ಲೋಕಾಚಾರ್ಯರನ್ನು ಮತ್ತು ಅಳಗಿಯ ಮನವಾಳಪ್ಪೆರುಮಾಳ್ ನಾಯನ್ನರನ್ನು ದರ್ಷನದ ಸಿದ್ಧಾಂತಗಳನ್ನು ಹರಡಲು ಸಂಪೂರ್ಣವಾಗಿ ತೊಡಗಿಸಿಕೊಂಡರು ಮತ್ತು ಸ್ವಲ್ಪ ಸಮಯದ ನಂತರ, ದಿವ್ಯ ಸ್ಥಾನಕ್ಕೆ (ಶ್ರೀವೈಕುಂಟಂ) ನಂಪಿಳ್ಳೈ ಅವರ ದೈವಿಕ ಪಾದಗಳನ್ನು ಸ್ಮರಿಸುತ್ತಾ ಹೊರಟರು. ಪಿಳ್ಳೈ ಲೋಕಾಚಾರ್ಯರು ಬಹಳ ಸಂಕಟಕ್ಕೊಳಗಾದರು ಮತ್ತು “ನಾವು ಸಂಸ್ಕೃತ ಮತ್ತು ದ್ರಾವಿಡ ( ತಮಿಳು ) ವೇದಮ್ ಎರಡರೊಂದಿಗೂ ಸಂಪರ್ಕವನ್ನು ಹೊಂದಿದ್ದ ವಿಶಿಷ್ಟ ಘಟಕವನ್ನು ಕಳೆದುಕೊಂಡಿದ್ದೇವೆ” ಎಂದು ಹೇಳಿದರು ಮತ್ತು ಅಂತಿಮ ವಿಧಿಗಳನ್ನು ಸೂಕ್ತವಾದ ರೀತಿಯಲ್ಲಿ ನಿರ್ವಹಿಸಿದರು.

ವಡಕ್ಕು ತಿರುವೀದಿಪ್ಪಿಳ್ಳೈ ಅವರ ದೈವಿಕ ನಕ್ಷತ್ರವು ಸ್ವಾತಿ ಮತ್ತು ಅವರ ಥಣಿಯನ್
ಶ್ರೀಕೃಷ್ಣಪಾಧಪಾಧಭಜೇ ನಮಾಮಿ ಶಿರಸಾ ಸಧಾ l
ಯತ್ಪ್ರಸಾಧಪ್ರಭಾವೇನ ಸರ್ವಸಿದ್ಧಿರಭುನ್ ಮಮ ll

(ನಾನು ಆ ಶ್ರೀಕೃಷ್ಣನ (ವಡಕ್ಕು ತಿರುವೀದಿಪ್ಪಿಳ್ಳೈ ಎಂದೂ ಕರೆಯುತ್ತಾರೆ) ಅವರ ದಿವ್ಯ ಪಾದಕಮಲಗಳನ್ನು ನನ್ನ ತಲೆ ಬಾಗಿ ನಿರಂತರವಾಗಿ ಪೂಜಿಸುತ್ತೇನೆ, ಅವರ ಅದ್ಭುತವಾದ ಅನುಗ್ರಹದಿಂದ ನಾನು ಎಲ್ಲಾ ಪುರುಷಾರ್ಥಗಳನ್ನು (ಪ್ರಯೋಜನಗಳನ್ನು) ಪಡೆದಿದ್ದೇನೆ.

ಅಡಿಯೇನ್ ಸುಭದ್ರಾ ಬಾಲಾಜಿ

ಮೂಲ : https://srivaishnavagranthams.wordpress.com/2021/07/26/yathindhra-pravana-prabhavam-11/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

Leave a comment