Monthly Archives: September 2022

ಅಂತಿಮೋಪಾಯ ನಿಷ್ಠೈ – 1 – ಆಚಾರ್ಯ / ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಅಂತಿಮೋಪಾಯ ನಿಷ್ಠೈ

ಮಣವಾಳ ಮಾಮುನಿಗಳಿನ ತನಿಯನ್ (ಪೆರಿಯ ಪೆರುಮಾಳ್ ರಚಿತ)


ಶ್ರೀಶೈಲೇಶ ದಯಾ ಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |
ಯತೀನ್ದ್ರ ಪ್ರವಣಮ್ ವಂದೇ ರಮ್ಯ ಜಾಮಾತರಮ್ ಮುನಿಮ್ ||

ಪೊನ್ನಡಿಕ್ಕಾಲ್ ಜೀಯರ್ ತನಿಯನ್ (ದೊಡ್ಡಯನ್ಗಾರ್ ಅಪ್ಪೈ ರಚಿತ)


ರಮ್ಯ ಜಾಮಾತೃ ಯೋಗೀನ್ದ್ರ ಪಾದರೇಖಾ ಮಯಮ್ ಸದಾ |
ತತಾ ಯತ್ತಾತ್ಮ ಸತ್ತಾದಿಮ್ ರಾಮಾನುಜ ಮುನಿಮ್ ಭಜೇ

ಪರವಸ್ತು ಪಟ್ಟರ್ಪಿರಾನ್ ಜೀಯರ್ ತನಿಯನ್ಗಳು


ರಮ್ಯ ಜಾಮಾತೃ ಯೋಗೀನ್ದ್ರ ಪಾದ ಸೇವೈಕ ಧಾರಕಮ್
ಭಟ್ಟನಾಥ ಮುನಿಮ್ ವಂದೇ ವಾತ್ಸಲ್ಯಾದಿ ಗುಣಾರ್ಣವಮ್

ಕಾಂತೋಪಾಯನ್ತೃಯಮಿನಃ ಕರುಣಾಮೃತಾಬ್ದೇಃ
ಕಾರುಣ್ಯಶೀತಲ ಕಟಾಕ್ಷ ಸುಧಾನಿಧಾನಮ್
ತನ್ನಾಮ ಮಂತ್ರಕೃತ ಸರ್ವಹಿತೋಪದೇಶಮ್
ಶ್ರೀಭಟ್ಟನಾಥಮುನಿ ದೇಶಿಕಮ್ ಆಶ್ರಯಾಮಿ

ಉಪನಿಶದಮೃತಾಬ್ದೇರುದ್ಧೃತಾಮ್ ಸಾರವಿದ್ಬಿಃ
ಮಧುರಕವಿಮುಖೈಸ್ತಾಮ್ ಆಂತಿಮೋಪಾಯ ನಿಷ್ಠಾಮ್ |
ಉಪದಿಶತಿ ಜನೇಬ್ಯೋ ಯೋ ದಯಾಪೂರ್ಣದೃಷ್ಠಿಃ
ಬಜಹೃದಯ ಸದಾ ತ್ವಮ್ ಭಟ್ಟನಾಥಮ್ ಮುನೀಂದ್ರಂ ||

ರುಚಿರ ವರಮುನೀಂದ್ರೇಣಾತರೇಣೋಪತಿಷ್ಟಾಮ್
ಅಕೃತ ಕೃತಿವರಿಷ್ಠಾಮ್ ಅಂತಿಮೋಪಾಯ ನಿಷ್ಠಾಮ್ |
ತಮಿಹ ನಿಖಿಲ ಜಂತು ಉತ್ತರಣೋತ್ಯುಕ್ತಚಿತ್ತಮ್
ಪ್ರತಿದಿನಮ್ ಅಬಿವಂದೇ ಭಟ್ಟನಾಥಂ ಮುನೀಂದ್ರಮ್ ||

ನಮೋಸ್ತು ಭಟ್ಟನಾಥಾಯ ಮುನಯೇ ಮುಕ್ತಿದಾಯಿನೇ |
ಯೇನೈವಮ್ ಅಂತಿಮೋಪಾಯನಿಷ್ಠಾ ಲೋಕೇ ಪ್ರತಿಷ್ಠಿತಾ
||

ತಾತೊನ್ಱುಮ್ ತಾರ್ಬುಯತ್ತಾನ್ ಮಣವಾಳ ಮುನಿ ತನತು
ಪಾದಮ್ ಪರವುಮ್ ಪಟ್ಟರ್ಪಿರಾನ್ ಮುನಿ ಪಲ್ಕಲೈಯುಮ್
ವೇದಂಗಳುಮ್ ಚಿಲ ಪುರಾಣನ್ಗಳುಮ್ ತಮಿೞ್ ವೇದಿಯರುಮ್
ಓದುಮ್ ಪೊರುಳ್ ಅಂತಿಮೋಪಾಯ ನಿಷ್ಠೈ ಉರೈತ್ತವನೇ!

ಅನ್ತಿಮೋಪಾಯ ನಿಷ್ಠಾಯಾ ವಕ್ತಾ ಸೌಮ್ಯವರೋ ಮುನಿಃ
ಲೇಕಸ್ಯಾನ್ವಯೋ ಮೇ ಅತ್ರ ಲೇಖನೀತಾಲಪತ್ರವತ್

ಈ ಅಂತಿಮೋಪಾಯ ನಿಷ್ಠೆ (ಗ್ರಂಥವು) ಮಣವಾಳ ಮಾಮುನಿಗಳಿಂದ ಉಪದೇಶಿಸಲ್ಪಟ್ಟಿದೆ . ಇದರಲ್ಲಿ ನನ್ನ ಭಾಗವು (ಅವರ) ವಚನವನ್ನು ಬರೆಯುವ ಲೇಖನೀ ಹಾಗು ತಾಳಪತ್ರಗಳಂತಷ್ಟೇ.

ಎನ್ತೈ ಮಣವಾಳ ಯೋಗಿ ಎನಕ್ಕುರೈತ್ತ
ಅನ್ತಿಮೋಪಾಯ ನಿಷ್ಠೈಯಾಮತನೈಚ್
ಚಿನ್ತೈ ಚೆಯ್ತು ಇನ್ಗೆಲ್ಲಾರುಮ್ ವಾೞ ಎೞುತಿ ವೈತ್ತೇನ್ ಇಪ್ಪುವಿಯಿಲ್
ನಲ್ಲಱಿವೊನ್ಱಿಲ್ಲಾತ ನಾನ್

ನನಗೆ ಜ್ಞಾನ ಪಿತಾವಾದ ಮಣವಾಳ ಮಾಮುನಿಗಳ ಅಂತಿಮೋಪಾಯ-ನಿಷ್ಠೆ ವಿಷಯವಾದ ಉಪದೇಶವನ್ನು ಚಿಂತಿಸಿ, ಅಂತಹ ಪ್ರಾಜ್ಞನಲ್ಲದ ನಾನು ಅದನ್ನು ಈ ಭೂಮಿಯಲ್ಲಿ ಎಲ್ಲರ ಹಿತಕ್ಕಾಗಿ ಬರೆಯುತಿದ್ದೇನೆ.

(ಪರವಸ್ತು ಪಟ್ಟರ್ಪಿರಾನ್ ಜೀಯರ್ ಮಾಮುನಿಗಳ ಉಪದೇಶ ರತಿನ ಮಾಲೆಯ 2ನೇ ಪಾಸುರವನ್ನು ಉದಾಹರಿಸುತಿದ್ದಾರೆ)
ಕಟ್ರೋರ್ಗಳ್ ತಾಮುಗಪ್ಪರ್ ಕಲ್ವಿ ತನ್ನಿಲ್ ಆಚೈಯುಳ್ಳೋರ್
ಪೆಟ್ರೋಮ್ ಎನ ಉಗಂಧು
ಪಿನ್ಬು ಕಱ್ಪರ್
ಮಟ್ರೋರ್ಗಳ್ ಮಾಚ್ಚರ್ಯತ್ತಾಲ್ ಇಗೞಿಲ್ ವನ್ತತೆನ್ ನೆಂಜೆ ನೆನ್ಜೇ
ಇಗೞ್ಗೈ ಆಚ್ಚರ್ಯಮೋ ತಾನ್ ಅವರ್ಕ್ಕು.

(ವಿಷಯಜ್ಞಾನವನ್ನು)ಕಲಿತವರೂ ಪ್ರಾಜ್ಞಾರಾದ ವಿದ್ವಾಂಸರು ಈ ಗ್ರಂಥವನ್ನು ನೋಡಿ ಹರ್ಷಿಸುವರು, ಕಲಿಯಲು ಇಚ್ಛಿಸುವವರು ಆನಂದಿಸಿ ಕಲಿಯುವರು. ಆದರೆ ಕೆಲವರು ಮಾತ್ಸರ್ಯದಿಂದ ಈ ಗ್ರಂಥವನ್ನು ನಿಂದಿಸಬಹುದು, ಆದರೆ (ವಿಷಯದ ವೈಭವವನ್ನರಿಯಲು ಪಕ್ವರಲ್ಲದ) ಅವರ ನಿಂದೆಯಲ್ಲಿ ಏನಾದರು ಆಶ್ಚರ್ಯವಿದಯೇ ?

ಧುಃಖಮಯವಾದ ಈ ಸಂಸಾರದಲ್ಲಿ ಜನ್ಮಮರಣಗಳ ಚಕ್ರದಲ್ಲಿ ಎಲ್ಲರು ತಿರುಗುತಿದ್ದಾರೆ. ಒಂದು ಕ್ಷಣದಲ್ಲಿ ನಾವು ಮಾಡುವ ಕರ್ಮದ ಫಲವನ್ನು ಭುಜಿಸಲು ಸಾವಿರಾರು ಜನ್ಮಗಳಲ್ಲು ತೀರದು (ಒಂದು ಕ್ಷಣದಲ್ಲಿ ನಾವು ಕಣ್ಣಿಗೆ ಕಾಣದ ಹಲವಾರು ಜಂತುಗಳನ್ನು ಕೊಲ್ಲುತಿರಬಹುದು ಹಾಗು ಅಯಾ ಪಾಪದ ಫಲವನ್ನು ಅನುಭವಿಸಲು ಸಾವಿರಾರು ಜನ್ಮಗಳಲ್ಲಿ ಜನಿಸಬೇಕಾಗುವುದು ). ಹಾಗು ತಮ್ಮನ್ನು ಸ್ಥಿರಗೊಳಿಸಿ ಸಂಸಾರದಿಂದ ಬಿಡಿಸಿಕೋಳ್ಳಲಾಗದಂಥಹ ಕ್ರೂರವಾದ ಸ್ಥಳ. ಅಚ್ಛೇದ್ಯವಾದ ಜನನ-ಮರಣಗಳ ಚಕ್ರದ ಹಾಗು ಕರ್ಮಫಲದ ವಿಷಯದಲ್ಲಿ ಭ್ರಮಿತರಾಗಿದ್ದಾರೆ. ಆಚಾರ್ಯರು ಇಂತವರನ್ನು ಅನುಗ್ರಹಿಸಿ ಸಂಸಾರದಿಂದು ಉದ್ಧರಿಸುತ್ತಾರೆ. ಆತ್ಮಜ್ಞಾನವಿಲ್ಲದವರನ್ನು (ಸತತವಾಗಿ ಶರೀರದಿಂದ ಬೇರಲ್ಲರೆಂದು ಭಾವಿಸುವವರನ್ನು) ತಮ್ಮ ನಿರ್ಹೇತುಕಕೃಪೆಯಿಂದ ಉದ್ಧರಿಸುವರು. ಆಚಾರ್ಯನು ಪರಿಗ್ರಾಹ್ಯ (ಉಪಾದೇಯ) ಹಾಗು ಪರಿತ್ಯಾಜ್ಯಗಳನ್ನು (ಹೇಯ) ತಿಳಿದು ಶಿಷ್ಯರನ್ನು ನಿಜವಾಗಲೂ ರಕ್ಷಿಸುವನು. ಸಂಸಾರತರಣಕ್ಕೆ ಉತಮ್ಮ ಮಾರ್ಗವೆಂದು ಆಚಾರ್ಯರ ಪಾದಪಂಕಜಗಳನ್ನು ಆಶ್ರಯಿಸುವವರು ಸತ್ಯವಾಗಲು ಭಾಗ್ಯವಂತರು. ಅನ್ತಿಮೋಪಾಯ-ನಿಷ್ಠೆಯಲ್ಲಿ ನಿಂತ ಶಿಷ್ಯರಿಗೆ ಅತ್ಯಗತ್ಯವಾದ ವಿಷಯಗಳಾವೇಂದು ಈ ಪ್ರಬಂದವು ವಿವರಿಸುತ್ತದೆ.

 • ಆಚರ್ಯನನ್ನು ಧ್ಯಾನಿಸುವುದು ಹಾಗು ಅವರ ದಿವ್ಯ ನಾಮಗಳಾನ್ನು, ಜ್ಞಾನವನ್ನು, ಅಭಿಮಾನಾದಿಗಳನ್ನು, ಅವರ ಅವತರ ಹಾಗು ಕಾರ್ಯಗಳನ್ನು ಶ್ಲಾಘಿಸುವುದು.
 • ಆಚಾರ್ಯನು ವಾಸಿಸುವ ದಿವ್ಯದೇಶವನ್ನು ಶ್ಲಾಘಿಸುವುದು.
 • ಆಚಾರ್ಯನ ಪಾದಪಂಕಜಗಳನ್ನೆ ಪರಮನಿಃಶ್ರೇಯಸಿಗೆ ಉಪಾಯವೆಂದು ಸ್ವೀಕರಿಸುವುದು.
 • ಆಚಾರ್ಯನ ದಿವ್ಯ ವಿಗ್ರಹವನ್ನು ಧ್ಯಾನಿಸುವುದು ಹಾಗು ಸ್ತುತಿಸುವುದು ಹಾಗು ಅವರ ಶಾರೀರ ಅವಶ್ಯಕತೆಗಳನ್ನು ನೆರವೇರಿಸುವುದರಲ್ಲಿರುವ ಸೇವೆಯನ್ನೇ ಅಂತಿಮೋಪಾಯ(ಚರಮೋಪಾಯ/ಆಚಾರ್ಯ) ನಿಷ್ಠನು ಉಪೇಯವೆಂದು ಭಾವಿಸಬೇಕು.
 • ಆಚಾರ್ಯನಿಗೆ ಮನೋ-ವಾಕ್-ಕಾಯಗಳಿಂದ ಆಚಾರ್ಯನ ದಿವ್ಯ ವಿಗ್ರಹವನ್ನು ಸತತವಾಗಿ ಸೇವಿಸುವುದು ಹಾಗು ಇನಂತಹ ಅಮೂಲ್ಯ ಕೈಂಕರ್ಯಗಳನ್ನು ಮಾಡುವುದನ್ನು ರಸಿಸುವುದು.
 • ಶಿಷ್ಯನು ಮಾಡಿದ ಕೈಂಕರ್ಯವನ್ನು ಸ್ವೀಕರಿಸಿ ಪ್ರೀತರದ ಆಚರ್ಯರ ದರ್ಶನ-ಜನಿತವಾದ ಅಶೀರ್ವಾದದಿಂದ ಆನಂದಿಸುವುದು.
 • ಸತತವಾಗಿ ಆಚಾರ್ಯನ ಮಂಗಳಾಶಾಸನವನ್ನು ಮಾಡುವುದು.

[ಅನುವಾದಕರ ಟಿಪ್ಪಣಿ: ಮುಂದಿನ ಭಾಗದಲ್ಲಿ ಆಚಾರ್ಯಕೃಪಾ-ವೈಭವನ್ನು ಹಾಗು ಶಿಷ್ಯನ ಆಚರಣೆಯ ವಿಷಯದಲ್ಲಿ ಹಲವಾರು ಪ್ರಮಾಣಗಳಿಂದ ಉದಾಹರಿಸಿದ್ದಾರೆ. ಪ್ರಮಾಣಗಳ ಅರ್ಥವು ನಂತರ ಸಂಗೃಹೀತವಾಗಿದೆ.]

ಅನಂತ ಪಾರಮ್ ಬಹುವೇದಿತವ್ಯಮ್ ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ |
ಯತ್ಸಾರಭೂತಮ್ ತದುಪಾಸಿತವ್ಯಮ್ ಹಂಸೋ ಯಥಾ ಕ್ಷೀರಮಿವಾಮ್ಬುಮಿಶ್ರಮ್ ||
ಅಸಾರಮಲ್ಪಸಾರಞ್ಚ ಸಾರಮ್ ಸಾರತರಮ್ ತ್ಯಜೇತ್ |
ಭಜೇತ್ ಸಾರತಮಮ್ ಶಾಸ್ತ್ರಮ್ ರತ್ನಾಕರ ಇವಾಮೃತಮ್ ||
ತತ್ಕರ್ಮ ಯನ್ನ ಬಂಧಾಯ ಸಾವಿದ್ಯಾ ಯಾ ವಿಮುಕ್ತಯೇ |
ಆಯಾಸಾಯಾಪರಮ್ ಕರ್ಮ ವಿದ್ಯಾನ್ಯಾ ಶಿಲ್ಪನೈಪುಣಮ್ ||
ಶಾಸ್ತ್ರಜ್ಞಾನಮ್ ಬಹುಕ್ಲೇಶಮ್ ಭುದ್ಧೇಶ್ಚಲನಕಾರಣಮ್ |
ಉಪದೇಶಾದ್ಧರಿಮ್ ಬುದ್ಧ್ವಾ ವಿರಮೇತ್ ಸರ್ವಕರ್ಮಸು ||
ಆದ್ಯಾನಮ್ ಸದೃಶೇ ಕಥಮ್ ವಿಸದೃಶೇ ದೇಹೇ ಭವತ್ಯಾತ್ಮನಃ
ಸದ್ಬುದ್ದೇಸ್ಸ ಚ ಸಂಗಮಾದಪಿ ಭವೇದೌಷ್ಣ್ಯಮ್ ಯಥಾಪಾಥಸಿ |
ಕೋ ವಾ ಸಂಗತಿಹೇತುರೇವಮನಯೋಃ ಕರ್ಮಾದಶಾಮ್ಯೇತ್ ಕುತಃ
ತದ್ಬೃಮಾದಿಗಮಾತ್ ಸ ಸಿದ್ಯತಿ ಮಹಾನ್ ಕಸ್ಮಾತ್ ಸದಾಚಾರ್ಯತಃ ||
ಅನಾಚಾರ್ಯೋಪಲಬ್ದಾಹಿ ವಿದ್ಯೇಯಮ್ ನಶ್ಯತಿ ಧ್ರುವಮ್ |
ಶಾಸ್ತ್ರಾದಿಷು ಸುದೃಷ್ಟಾಪಿ ಸಾಂಗಾಸಹ ಪಲೋದಯಾ |
ನ ಪ್ರಸೀದತಿ ವೈವಿದ್ಯಾ ವಿನಾ ಸದುಪದೇಶತಃ ||
ದೈವಾಧೀನಮ್ ಜಗತ್ಸರ್ವಮ್ ಮಂತ್ರಾಧೀನಮ್ ತು ದೈವತಮ್ |
ತನ್ಮನ್ತ್ರಮ್ ಬ್ರಾಹ್ಮಣಾದೀನಮ್ ತಸ್ಮಾದ್ಬ್ರಾಹ್ಮಣದೈವತಮ್ ||
ವೃಥೈವ ಭವತೋ ಯಾತಾ ಭೂಯಸೀ ಜನ್ಮ ಸಂತತಿಃ |
ತಸ್ಯಾಮನ್ಯತಮಮ್ ಜನ್ಮ ಸಂಚಿಂತ್ಯ ಶರಣಮ್ ವ್ರಜ ||
ಪಾಪಿಷ್ಠಃ ಕ್ಷತ್ರಬಂಧುಶ್ಚ ಪುಂಡರೀಕಶ್ಚ ಪುಣ್ಯಕೃತ್ |
ಆಚಾರ್ಯವತ್ತಯಾ ಮುಕ್ತೌ ತಸ್ಮಾದಾಚಾರ್ಯವಾನ್ ಭವೇತ್ ||
ಬ್ರಹ್ಮಣ್ಯೇವ ಸ್ಥಿತಮ್ ವಿಶ್ವಮ್ ಓಂಕಾರೇ ಬ್ರಹ್ಮ ಸಂಸ್ಥಿತಮ್ |
ಆಚಾರ್ಯಾತ್ ಸ ಚ ಓಂಕಾರಸ್-ತಸ್ಮಾದಾಚಾರ್ಯವಾನ್ ಭವೇತ್ ||
ಆಚಾರ್ಯಸ್ಸ ಹರಿಸ್ಸಾಕ್ಷಾತ್ ಚರರೂಪಿನಸಂಶಯಃ |
ತಸ್ಮಾದ್ಭಾರ್ಯಾದಯಃ ಪುತ್ರಾಸ್ತಮೇಕಮ್ ಗುರುಮಾಪ್ನುಯು: ||
ಸಾಕ್ಷಾನ್ನಾರಾಯಣೋ ದೇವಾಃ ಕೃತ್ವಾ ಮರ್ತ್ಯಮಯೀಮ್ ತನುಮ್ |
ಮಗ್ನಾನುದ್ಧರತೇ ಲೋಕಾನ್ ಕಾರುಣ್ಯಾಚ್ಛಾಸ್ತ್ರಪಾಣಿನಾ ||
ತಸ್ಮಾದ್ಭಕ್ತಿರ್ಗುರೌ ಕಾರ್ಯಾ ಸಂಸಾರಭಯಭೀರುಣಾ ||
ಗುರುರೇವ ಪರಮ್ ಬ್ರಹ್ಮ ಗುರುರೇವ ಪರಾ ಗತಿಃ |
ಗುರುರೇವ ಪರಾವಿದ್ಯಾ ಗುರುರೇವ ಪರಮ್ ಧನಮ್ ||
ಗುರುರೇವ ಪರಃಕಾಮೋ ಗುರುರೇವ ಪರಾಯಣಮ್ |
ಯಸ್ಮಾತ್ತದುಪದೇಷ್ಟಾಸೌ ತಸ್ಮಾದ್ಗುರುತರೋ ಗುರುಃ ||
ಅರ್ಚನೀಯಶ್ಚ ಪೂಜ್ಯಶ್ಚ ಕೀರ್ತನೀಯಶ್ಚ ಸರ್ವದಾ |
ದ್ಯಾಯೇಜ್ಜಪೇನ್ನಮೇದ್ಭಕ್ತ್ಯಾ ಭಜೇದಭ್ಯರ್ಚಯೇನ್ಮುದಾ ||
ಉಪಾಯೋಪೇಯಭಾವೇನ ತಮೇವ ಶರನಮ್ ವ್ರಜೇತ್ |
ಇತಿ ಸರ್ವೇಷು ವೇದೇಷು ಸರ್ವಶಾಸ್ತ್ರೇಷು ಸಮ್ಮತಮ್ ||
ಯೇನ ಸಾಕ್ಷಾದ್ಭಗವತಿ ಜ್ಞಾನದೀಪಪ್ರದೇ ಗುರೌ |
ಮರ್ತ್ಯಬುದ್ಧಿಃ ಕೃತಾ ತಸ್ಯ ಸರ್ವಮ್ ಕುಂಜರ ಶೌಚವತ್ ||
ಯೋ ದದ್ಯಾದ್ಭಗವದ್ ಜ್ಞಾನಮ್ ಕುರ್ಯಾದ್ಧರ್ಮೋಪಸೇವನಮ್ |
ಕೃತ್ಸ್ನಾಮ್ ವಾ ಪೃಥಿವೀಮ್ ದದ್ಯಾನ್ನ ತತುಲ್ಯಮ್ ಕಥಂಚನ ||
ಐಹಿಕಾಮುಷ್ಮಿಕಮ್ ಸರ್ವಮ್ ಗುರುರಷ್ಟಾಕ್ಷರಪ್ರದಃ |
ಇತ್ಯೇವಮ್ ಯೇನ ಮನ್ಯನ್ತೇ ತ್ಯಕ್ತವ್ಯಾಸ್ತೇ ಮನೀಷಿಭಿಃ ||
ಯೇನೈವ ಗುರುಣಾಯಸ್ಯ ನ್ಯಾಸವಿದ್ಯಾ ಪ್ರದೀಯತೇ |
ತಸ್ಯ ವೈಕುಂಠ ದುಗ್ಧಾಬ್ದಿದ್ವಾರಕಾಸ್ಸರ್ವ ಏವ ಸಃ ||
ಯತ್ ಸ್ನಾತಮ್ ಗುರುಣಾ ಯತ್ರ ತೀರ್ಥಮ್ ನಾನ್ಯತ್ ತತೋಧಿಕಮ್ |
ಯಚ್ಚ ಕರ್ಮ ತದರ್ಧಮ್ ತದ್ವಿಷ್ಣೋರಾರಾದನಾತ್ಪರಮ್ ||
ಪಶುರ್ಮನುಷ್ಯಃ ಪಕ್ಷೀ ವಾ ಯೇ ಚ ವೈಷ್ಣವಸಂಶ್ರಯಾಃ |
ತೇನೈವ ತೇ ಪ್ರಯಾಸಂತಿ ತದ್ವಿಷ್ಣೋಃ ಪರಮಮ್ ಪದಮ್ ||
ಬಾಲಮೂಕಜಡಾಂಧಶ್ಚ ಪಂಗವೋ ಬಧಿರಾಸ್ತದಾ |
ಸದಾಚಾರ್ಯೇಣ ಸಂದೃಷ್ಟಾಃ ಪ್ರಾಪ್ನುವಂತಿ ಪರಾಂಗತಿಮ್ ||
ಯಮ್ ಯಮ್ ಸ್ಪೃಶತಿ ಪಾಣಿಭ್ಯಾಮ್ ಯಮ್ ಯಮ್ ಪಶ್ಯತಿ ಚಕ್ಷುಷಾ |
ಸ್ಥಾವರಾಣ್ಯಪಿ ಮುಚ್ಯನ್ತೇ ಕಿಮ್ಪುನರ್ಬಾಂಧವಾಜನಾಃ ||
ಅಂಧೋನಂಧಗ್ರಹಣವಶಗೋ ಯಾತಿ ರಂಗೇಶ ಯದ್ವತ್
ಪಂಗುರ್ನೌಕಾಕುಹರನಿಹಿತೋ ನೀಯತೇ ನಾವಿಕೇನ |
ಭುಙ್ಕ್ತೇ ಭೋಗಾನವಿದಿತನೃಪಸ್ಸೇವಕಸ್ಯಾರ್ಭಕಾದಿಃ
ತ್ವತ್ಸಂಪ್ರಾಪ್ತೌ ಪ್ರಭವತಿ ತಥಾ ದೇಶಿಕೋ ಮೇ ದಯಾಳುಃ ||
ಸಿದ್ಧಮ್ ಸಥಸಂಪ್ರಧಾಯೇ ಸ್ಥಿರಧಿಯಮನಘಮ್ ಶ್ರೋತ್ರಿಯಮ್ ಬ್ರಹ್ಮನಿಷ್ಟಮ್
ಸತ್ತ್ವಸ್ಥಮ್ ಸತ್ಯವಾಚಮ್ ಸಮಯನಿಯತಯಾ ಸಾಧುವೃತ್ತ್ಯಾ ಸಮೇತಮ್ |
ಡಂಭಾಸೂಯಾದಿಮುಕ್ತಮ್ ಜಿತವಿಷಯಗಣಮ್ ದೀರ್ಘಬಂಧುಮ್ ದಯಾಲುಮ್
ಸ್ಖಾಲಿತ್ಯೇ ಶಾಶಿತಾರಮ್ ಸ್ವಪರಹಿತಪರಮ್ ದೇಶಿಕಮ್ ಭೂಷ್ಣುರೀಪ್ಸೇತ್ ||
ಉತ್ಪಾದಕಬ್ರಹ್ಮಪಿತ್ರೋರ್ಗರೀಯಾನ್ ಬ್ರಹ್ಮತಃಪಿತಾ |
ಸ ಹಿ ವಿದ್ಯಾತಸ್ತಮ್ ಜನಯತಿ ತಚ್ಛ್ರೇಷ್ಟಮ್ ಜನ್ಮ |
ಶರೀರಮೇವ ಮಾತಾಪಿತರೌ ಜನಯತಃ |
ದೇಹಕೃನ್ಮನ್ತ್ರಕೃನ್ನ ಸ್ಯಾತ್ ಮನ್ತ್ರಸಂಸ್ಕಾರಕೃತ್ ಪರ: |
ತೌ ಚೇನ್ನಾತ್ಮವಿದೌ ಸ್ಯಾತಾಮ್ ಅನ್ಯಸ್ತ್ವಾತ್ಮವಿದಾತ್ಮಕೃತ್ ||
ನಾಚಾರ್ಯಕುಲಜಾತೋಪಿ ಜ್ಞಾನಭಕ್ತ್ಯಾದಿ ವರ್ಜಿತಃ |
ನ ವಯೋಜಾತಿಹೀನಶ್ಚ ಪ್ರಕೃಷ್ಟಾನಾಮ್ ಅನಾಪದಿ ||
ಕಿಮಪ್ಯತ್ರಾಭಿಜಾಯನ್ತೇ ಯೋಗಿನಃ ಸರ್ವಯೋನಿಷು |
ಪ್ರತ್ಯಕ್ಷಿತಾತ್ಮನಾಥಾನಾಂ ನೈಷಾಮ್ ಚಿನ್ತ್ಯಮ್ ಕುಲಾದಿಗಮ್ ||
ಭಿನ್ನನಾವಶ್ರಿತೋ ಜನ್ತುರ್ಯಥಾ ಪಾರಮ್ ನಗಚ್ಛತಿ |
ಅಂಧಶ್ಚನ್ಧಕರಾಲಂಬಾತ್ ಕೂಪಾನ್ತೇ ಪತಿತೋಯಥಾ ||
ಜ್ಞಾನಹೀನಮ್ ಗುರುಮ್ ಪ್ರಾಪ್ಯ ಕುತೋ ಮೋಕ್ಷಮವಾಪ್ನುಯಾತ್ |
ಆಚಾರ್ಯೋ ವೇದಸಂಪನ್ನೋ ವಿಷ್ಣುಭಕ್ತೋ ವಿಮತ್ಸರಃ |
ಮಂತ್ರಜ್ಞೋ ಮಂತ್ರಭಕ್ತಶ್ಚ ಸದಾ ಮನ್ತ್ರಾಶ್ರಯಶ್ಶುಚಿಃ ||
ಸತ್ಸಂಪ್ರದಾಯ ಸಂಯುಕ್ತೋ ಬ್ರಹ್ಮವಿದ್ಯಾವಿಶಾರದಃ |
ಅನನ್ಯಸಾಧನಶ್ಚೈವ ತಥಾನನ್ಯಪ್ರಯೋಜನಃ ||
ಬ್ರಾಹ್ಮಣೋ ವೀತರಾಗಶ್ಚ ಕ್ರೋಧಲೋಭವಿವರ್ಜಿತಃ |
ಸದ್ವೃತ್ತಶ್ಶಾಸಿತಾ ಚೈವ ಮುಮುಕ್ಷುಃ ಪರಮಾರ್ಥವಿತ್ ||
ಏವಮಾದಿಗುಣೋಪೇತ ಆಚಾರ್ಯಸ್ಸ ಉದಾಹೃತಃ |
ಆಚಾರ್ಯೋಪಿ ತಥಾ ಶಿಷ್ಯಮ್ ಸ್ನಿಗ್ಧೋ ಹಿತಪರಸ್ಸದಾ ||
ಪ್ರಬೋಧ್ಯ ಭೋದನೀಯಾನಿ ವೃತ್ತಮಾಚಾರಯೇತ್ ಸ್ವಯಮ್ |
ಉತ್ತಾರಯತಿ ಸಂಸಾರಾತ್ ತದುಪಾಯಪ್ಲವೇನ ತು ||
ಗುರುಮೂರ್ತಿಸ್ಥಿತಸ್ಸಾಕ್ಷಾದ್ ಭಗವಾನ್ ಪುರುಷೋತ್ತಮಃ |
ತ್ರಿರೂಪೋ ಹಿತಮಾಚಷ್ಟೇ ಮನುಷ್ಯಾಣಾಮ್ ಕಲೌ ಹರಿ: ||
ಗುರುಶ್ಚ ಸ್ವಪ್ನದೃಷ್ಟಶ್ಚ ಪೂಜಾನ್ತೇ ಚಾರ್ಚಕಾನನಾತ್ |
ಈಶ್ವರಸ್ಯ ವಶಸ್ಸರ್ವಂ ಮಂತ್ರಸ್ಯ ವಶ ಈಶ್ವರಃ |
ಮನ್ತ್ರೋ ಗುರುವಶೇ ನಿತ್ಯಮ್ ಗುರುರೇವೇಶ್ವರಸ್ಥಿತಿಃ ||
ಯೇಷ ವೈ ಭಗವಾನ್ ಸಾಕ್ಷಾತ್ ಪ್ರಧಾನಪುರುಷೇಶ್ವರ: |
ಯೋಗೀಶ್ವರೈರ್ವಿಮೃಗ್ಯಾಂಘ್ರಿರ್ಲೋಕೋ ಯಮ್ ಮನ್ಯತೇ ನರಮ್ ||
ನಾರಾಯಣಾಶ್ರಯೋ ಜೀವಸ್ಸೋಯಮಷ್ಟಾಕ್ಷರಾಶ್ರಯಃ |
ಅಷ್ಟಾಕ್ಶರಃ ಸದಾಚಾರ್ಯೇ ಸ್ಥಿತ ತ್ತಸ್ತಸ್ಮಾದ್ಗುರುಮ್ ಭಜೇತ್ ||
ದಯಾದಮಶಮೋಪೇತಮ್ ದೃಡಭಕ್ತಿಕ್ರಿಯಾಪರಮ್ |
ಸತ್ಯವಾಕ್ಛೀಲ ಸಂಪನ್ನಮೇವ ಕರ್ಮಸುಕೌಶಲಮ್ ||
ಜೀತೇನ್ದ್ರಿಯಮ್ ಸುಸನ್ತುಷ್ಟಮ್ ಕರುಣಾಪೂರ್ಣಮಾನಸಮ್ |
ಕುರ್ಯಾಲ್ಲಕ್ಷಣ ಸಮ್ಪನ್ನಮ್ ಆರ್ಜವಮ್ ಚಾರುಹಾಸಿನಮ್ |
ಏವಙ್ಗುಣೈಶ್ಚ ಸಮ್ಯುಕ್ತಮ್ ಗುರುಮ್ ವಿದ್ಯಾತ್ತು ವೈಷ್ಣವಮ್ |
ಸಹಸ್ರಶಾ ಖಾಧ್ಯಾಯೀ ಚ ಸರ್ವಯತ್ನೇಷು ದೀಕ್ಷಿತಃ |
ಕುಲೇ ಮಹತಿ ಜಾತೋಪಿ ನ ಗುರುಸ್ಸ್ಯಾತವೈಷ್ಣವಃ |
ಅಜ್ಞಾನ ತಿಮಿರಾನ್ದಸ್ಯ ಜ್ಞಾನಾಞ್ಜನ ಶಲಾಕಯಾ |
ಚಕ್ಷುರ್ನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ ||
ಮನ್ತ್ರಃ ಪ್ರಕೃತಿರಿತ್ಯುಕ್ತೋ ಹ್ಯರ್ಥಃ ಪ್ರಾಣ ಇತಿ ಸ್ಮೃತಃ |
ತಸ್ಮಾನ್ಮನ್ತ್ರ ಪ್ರದಾಚಾರ್ಯಾದ್ ಗರೀಯಾನ್ ಅರ್ಥತೋ ಗುರುಃ ||
ಗುಶಬ್ದಸ್ತ್ವನ್ಧಕಾರಸ್ಸ್ಯಾತ್ ರುಶಬ್ದಸ್ತನ್ನಿರೋಧಕಃ |
ಅನ್ದಕಾರನಿರೋಧಿತ್ವಾದ್ ಗುರುರಿತ್ಯಭೀದೀಯತೇ ||
ಶಿಷ್ಯಜ್ಞಾನಸಮ್ಯುಕ್ತಮ್ ನ ಶಿಕ್ಷಯತಿ ಚೇದ್ಗುರುಃ |
ಶಿಷ್ಯಾಜ್ಞಾನಾಕೃತಮ್ ಪಾಪಮ್ ಗುರೋರ್ಭವತಿ ನಿಶ್ಚಯಃ ||
ಲೋಭಾದ್ವಾಯದಿ ವಾ ಮೋಹಾಚ್ಚಿಷ್ಯಮ್ ಶಾಸ್ತಿ ನಯೋ ಗುರುಃ |
ತಸ್ಮಾತ್ ಸಂಶೃಣುತೇ ಯಶ್ಚ ಪ್ರಚ್ಯುತೌ ತಾವುಭಾವಪಿ ||
ಆಚಿನೋತಿ ಹಿ ಶಾಸ್ತ್ರಾರ್ಥಾನ್ ಆಚಾರೇ ಸ್ಥಾಪಯತ್ಯಪಿ |
ಸ್ವಯಮಾಚರತೇ ಯಸ್ತು ಆಚಾರ್ಯಸ್ಸೋಭಿದೀಯತೇ ||
ರವಿಸನ್ನಿಧಿಮಾತ್ರೇಣ ಸೂರ್ಯಕಾನ್ತೋ ವಿರಾಜತೇ |
ಗುರುಸನ್ನಿದಿ ಮಾತ್ರೇಣ ಶಿಷ್ಯಜ್ಞಾನಂ ಪ್ರಕಾಶತೇ ||
ಯಧಾಹಿ ವಹ್ನಿಸಮ್ಪರ್ಕ್ಕಾನ್ಮಲಮ್ ತ್ಯಜತಿ ಕಾಞ್ಚನಮ್ |
ತದೈವ ಗುರುಸಮ್ಪರ್ಕ್ಕಾತ್ ಪಾಪಮ್ ತ್ಯಜತಿ ಮಾನವಃ ||
ಸ್ನೇಹೇನ ಕೃಪಯಾ ವಾಪಿ ಮನ್ತ್ರೀ ಮನ್ತ್ರಮ್ ಪ್ರಯಚ್ಛತಿ |
ಗುರುರ್ಜ್ಞೇಯಶ್ಚ ಸಂಪೂಜ್ಯೋ ದಾನಮಾನಾದಿಭಿಸ್ಸದಾ ||
ಅನನ್ಯಶರನಾಂಚ ತಥಾ ವಾನನ್ಯ ಸೇವಿನಾಮ್
ಅನನ್ಯಸಾಧನಾನಾನ್ಚ ವಕ್ತವ್ಯಮ್ ಮನ್ತ್ರಮುತಮಮ್ ||
ಸಂವತ್ಸರಮ್ ತದರ್ಥಮ್ ವಾ ಮಾಸತ್ರಯ ಮದಾಪಿವಾ |
ಪರೀಕ್ಷ್ಯ ವಿವಿಧೋಪಾಯೈಃ ಕೃಪಯಾ ನಿಸ್ಸ್ಪೃಹೋ ವದೇತ್ ||
ನಾದೀಕ್ಷಿತಾಯ ವಕ್ತವ್ಯಮ್ ನಾ ಭಕ್ತಾಯ ನ ಮಾನಿನೇ |
ನಾಸ್ತಿಕಾಯ ಕೃತಘ್ನಾಯ ನ ಶ್ರದ್ಧಾವಿಮುಖಾಯ ಚ ||
ದೇಶಕಾಲಾದಿನಿಯಮಮ್ ಅರಿಮಿತ್ರದಿಶೋಧನಮ್ |
ನ್ಯಾಸಮುದ್ರಾದಿಕಮ್ ತಸ್ಯ ಪುರಶ್ಚರಣಕಮ್ ನ ತು ||
ನಸ್ವರಃ ಪ್ರಣವೋಂಗಾನಿ ನಾಪ್ಯನ್ಯ ವಿಧಯಸ್ತದಾ |
ಸ್ತ್ರೀಣಾನ್ಚ ಶೂದ್ರಜಾತೀನಾಮ್ ಮನ್ತ್ರಮಾತ್ರೊಕ್ತಿರಿಷ್ಯತೇ ||
ಋಷ್ಯಾದಿನ್ಚ ಕರನ್ಯಾಸಮ್ ಅಂಗನ್ಯಾಸಂ ಚ ವರ್ಜಯೇತ್ |
ಸ್ತ್ರೀಶೂದ್ರಾಶ್ಚವಿನೀತಾಶ್ಚೇನ್ಮನ್ತ್ರಮ್ ಪ್ರಣವವಾರ್ಜಿತಮ್ ||
ನ ದೇಶಕಾಲೌ ನಾವಸ್ಥಾಮ್ ಪಾತ್ರಶೂದ್ಧಿಂಚ ನೈ[ನೇ]ಚ್ಚತಿ |
ದ್ವಯೋಪದೇಶಕರ್ತಾತು ಶಿಷ್ಯದೋಷಮ್ ನ ಪಶ್ಯತಿ ||
ದುರಾಚರೋಪಿ ಸರ್ವಾಶೀ ಕೃತಘ್ನೋ ನಾಸ್ತಿಕಃ ಪುರಾಃ |
ಸಮಾಶ್ರಯೇದಾದಿದೇವಮ್ ಶ್ರದ್ಧಯಾ ಶರಣಮ್ ಯದಿ |
ನಿರ್ದೋಷಮ್ ವಿದ್ಧಿತಮ್ ಜಂತುಮ್ ಪ್ರಭವಾತ್ ಪರಮಾತ್ಮನಃ ||
ಮನ್ತ್ರರತ್ನಮ್ ದ್ವಯಮ್ ನ್ಯಾಸಮ್ ಪ್ರಪತ್ತಿಶ್ಶರಣಾಗತಿಃ |
ಲಕ್ಷ್ಮಿನಾರಾಯಣಂಚೇತಿ ಹಿತಮ್ ಸರ್ವಫಲಪ್ರದಮ್ ||
ನಾಮಾನಿ ಮನ್ತ್ರರತ್ನಸ್ಯ ಪರ್ಯಾಯೇಣ ನಿಬೋಧತಃ |
ತಸ್ಯೋಚ್ಚಾರಣ ಮಾತ್ರೇಣ ಪರಿತುಷ್ಟೋಸ್ಮಿ ನಿತ್ಯಶಃ ||
ಬ್ರಾಹ್ಮಣಾಃ ಕ್ಷತ್ರಿಯಾ ವೈಷ್ಯಾಸ್ಸ್ತ್ರಿಯಶ್ಶೂದ್ರಾಸ್ತಧೇತರಾಃ |
ತಸ್ಯಾಧಿಕಾರಿಣಸ್ಸರ್ವೇ ಮಮ ಭಕ್ತೋ ಭವೇದ್ಯದಿ ||
ಯಸ್ತು ಮನ್ತ್ರದ್ವಯಮ್ ಸಮ್ಯಗಧ್ಯಾಪಯತಿ ವೈಷ್ಣವಾನ್ |
ಆಚಾರ್ಯಸ್ಸ ತು ವಿಜ್ಞೇಯೋ ಭವಬಂಧವಿಮೋಚಕಃ ||
ನೃದೇಹಮಾದ್ಯಮ್ ಪ್ರತಿಲಭ್ಯ ದುರ್ಲಭಮ್ ಪ್ಲವಮ್ ಸುಕಲ್ಯಮ್ ಗುರುಕರ್ಣಧಾರಕಮ್ |
ಮಯಾನುಕೂಲೇನ ನಭಸ್ವತೇರ್ವಿತಮ್ ಪುಮಾನ್ ಭವಾಬ್ಧಿಮ್ ಸತರೇತ್ ನ ಆತ್ಮಹಾ ||
ಆಚಾರ್ಯಮ್ ಮಾಮ್ ವಿಜಾನೀಯಾನ್ನಾವಮನ್ಯೇತ ಕರ್ಹಿಚಿತ್ |
ನ ಮಾತ್ಯಭುಧ್ಯಾದೃಶ್ಯೇತ ಸರ್ವದೇವಮಯೋ ಗುರುಃ ||
ಅಥ ಶಿಷ್ಯಲಕ್ಷಣಮ್:-
ಮಾನುಷ್ಯಮ್ ಪ್ರಾಪ್ಯ ಲೋಕೇಸ್ಮಿನ್ ನ ಮುಕೋ ಬದಿರೋಪಿ ವಾ |
ನಾಪಕ್ರಮಾತಿ ಸಂಸಾರಾತ್ ಸ ಕಲು ಬ್ರಹ್ಮಹಾ ಭವೇತ್ ||
ಸದಾಚಾರ್ಯೋಪಸತ್ತ್ಯಾ ಚ ಸಾಭಿಲಾಷಸ್ತದಾತ್ಮಕಃ |
ತತ್ತ್ವಜ್ಞಾನನಿಧಿಮ್ ಸತ್ತ್ವನಿಷ್ಠಂ ಸದ್ಗುಣಸಾಗರಮ್ |
ಸತಾಮ್ ಗತಿಮ್ ಕಾರುಣಿಕಮ್ ತಮಾಚಾರ್ಯಮ್ ಯಥಾವಿಧಿ |
ಪ್ರಣಿಪಾತನಮಸ್ಕಾರಪ್ರಿಯವಾಗ್ಭಿಶ್ಚ ತೋಷಯನ್ |
ತತ್ಪ್ರಸಾದವಸೇನೈವ ತದಂಗೀಕಾರಲಾಭವಾನ್ |
ತದುಕ್ತತತ್ವಯಾಥಾತ್ಮ್ಯಜ್ಞಾನಾಮೃತ ಸುಸಂಭೃತಃ ||
ಅರ್ಥಮ್ ರಹಸ್ಯತ್ರಿತಯಗೋಚರಮ್ ಲಬ್ದವಾಹನಮ್ ||
ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ ನಿರ್ವೇದಮಾಯಾತ್ ನಾಸ್ತ್ಯಕೃತಃ
ಕೃತೇನ ತದ್ವಿಜ್ಞಾನಾರ್ಥಮ್ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿಸ್-
ಶ್ರೋತ್ರಿಯಮ್ ಬ್ರಹ್ಮನಿಷ್ಠಮ್ ತಸ್ಮೈ ಸ ವಿದ್ವಾನುಪಸನ್ನಾಯ ಸಮ್ಯಕ್-
ಪ್ರಾಶಾಂತಚಿತ್ತಾಯ ಶಮಾನ್ವಿತಾಯ ಯೇನಾಕ್ಷರಮ್ ಪುರುಷಮ್ ವೇದ ಸತ್ಯಮ್ ಪ್ರೋವಾಚ
ತಾಮ್ ತತ್ತ್ವತೋ ಬ್ರಹ್ಮವಿದ್ಯಾಮ್ ||
ಗುರುಮ್ ಪ್ರಕಾಶಯೇದ್ಧೀಮಾನ್ ಮಂತ್ರಮ್ ಯತ್ನೇನ ಗೋಪಯೇತ್ |
ಅಪ್ರಕಾಶಪ್ರಕಾಶಾಭ್ಯಾಮ್ ಕ್ಷೀಯೇತೇ ಸಂಪದಾಯುಷೀ ||
ಆಚಾರ್ಯಸ್ಯ ಪ್ರಸಾದೇನ ಮಮ ಸರ್ವಮಭೀಪ್ಸಿತಮ್ |
ಪ್ರಾಪ್ನುಯಾಮೀತಿ ವಿಶ್ವಾಸೋ
ಯಸ್ಯಾಸ್ತಿ ಸ ಸುಖೀಭವೇತ್ ||
ಆತ್ಮನೋ ಹ್ಯತಿನೀಚಸ್ಯ ಯೋಗಿಧ್ಯೇಯಪದಾರ್ಹತಾಮ್ |
ಕೃಪಯೈವೋಪಕರ್ತಾರಮ್ ಆಚಾರ್ಯಮ್ ಸಂಸ್ಮರೇತ್ ಸದಾ ||
ನ ಚಕ್ರಾದ್ಯಂ ಕನಮ್ ನೇಜ್ಯಾ ನ ಜ್ಞಾಮ್ ನ ವಿರಾಗತಾ |
ನ ಮಂತ್ರಃ ಪಾರಮೈಕಾಂತ್ಯಮ್ ತೈರ್ಯುಕ್ತೋ ಗುರುವಶ್ಯತಃ ||
ನಿತ್ಯಮ್ ಗುರುಮುಪಾಸೀತ ತದ್ವಚಃಶ್ರವಣೋತ್ಸುಕಃ |
ವಿಗ್ರಹಾಲೋಕನಪರಸ್ತಸ್ಯೈವಾಜ್ಞಾಪ್ರತೀಕ್ಷಕಃ ||
ಪ್ರಕ್ಷಾಲ್ಯ ಚರಣೌ ಪಾತ್ರೇ ಪ್ರಣಿಪತ್ಯೋಪಯುಜ್ಯ ಚ |
ನಿತ್ಯಮ್ ವಿಧಿವದರ್ಘ್ಯಾದ್ಯೈರಾದೃತೋಭ್ಯರ್ಚಯೇದ್ಗುರುಮ್ ||
ಶೃತಿಃ
ಆಚಾರ್ಯವಾನ್ ಪುರುಷೋ ವೇದ | ದೇವಮಿವಾಚಾರ್ಯಮುಪಾಸೀತ |
ಆಚಾರ್ಯಾಧೀನೊ ಭವ| ಆಚಾರ್ಯಾಧೀನಸ್ತಿಷ್ಟೇತ್ | ಆಚಾರ್ಯ ದೇವೊ ಭವ |
ಯಥಾ ಭಗವತ್ಯೇವಂವಕ್ತರಿ ವೃತಿಃ | ಗುರುದರ್ಶನೇ ಚೋತ್ತಿಷ್ಠೇತ್ |
ಗಚ್ಛನ್ತಮನುವ್ರಜೇತ್ |
ಶರೀರಮ್ ವಸು ವಿಜ್ಞಾನಮ್ ವಾಸಃ ಕರ್ಮ ಗುಣಾನಸೂನ್ |
ಗುರುವರ್ಥಮ್ ಧಾರಯೇದ್ಯಸ್ತು ಸ ಶಿಷ್ಯೋ ನೇತರಸ್ಸ್ಮೃತಃ ||
ದೀರ್ಘದಂಡನಮಸ್ಕಾರಮ್ ಪ್ರತ್ಯುತ್ಥಾನಮನನ್ತರಮ್ |
ಶರೀರಮರ್ಥಮ್ ಪ್ರಾಣಞ್ಚ ಸದ್ಗುರುಭ್ಯೋ ನಿವೇದಯೇತ್ ||
ಗುರ್ವರ್ಥಸ್ಯಾತ್ಮನಃ ಪುಂಸಃ ಕೃತಜ್ಞಸ್ಯ ಮಹಾತ್ಮನಃ |
ಸುಪ್ರಸನ್ನಸ್ಸದಾ ವಿಷ್ಣುರ್ಹೃದಿ ತಸ್ಯ ವಿರಾಜತೇ ||
ಮನ್ತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ ಭೇಷಜೇ ಗುರೌ |
ಯಾದೃಶೀ ಭಾವನಾ ಯತ್ರ ಸಿದ್ಧಿರ್ಭವತಿ ತಾದೃಶೀ ||
ಯಸ್ಯ ದೇವೇ ಪರಾಭಕ್ತಿರ್ ಯಥಾದೇವೇ ತಥಾ ಗುರೌ |
ತಸ್ಯೈ ತೇಕಧಿತಾ ಹ್ಯರ್ಥಾಃ ಪ್ರಕಾಶ್ಯನ್ತೇ ಮಹಾತ್ಮನಃ ||
ದರ್ಶನಸ್ಪರ್ಶವಚನೈಸ್ ಸಂಚಾರೇಣ ಚ ಸತ್ತಮಾಃ |
ಪೂತಮ್ ವಿಧಾಯ ಭುವನಮ್ ಮಾಮೇಷ್ಯನ್ತಿ ಗುರುಪ್ರಿಯಾಃ ||
ದೇಹಕೃನ್ಮನ್ತ್ರಕೃನ್ನ ಸ್ಯಾನ್ಮನ್ತ್ರಸಂಸ್ಕಾರಕೃತ್ಪರಃ |
ತೌ ಚೇನ್ನಾತ್ಮವಿದೌ ಸ್ಯಾತಾಮ್ ಅನ್ಯಸ್ತ್ವಾತ್ಮವಿದಾತ್ಮಕೃತ್ ||
ಅವೈಷ್ಣವೋಪದಿಷ್ಟಮ್ ಸ್ಯಾತ್ಪೂರ್ವಮ್ ಮನ್ತ್ರವರಮ್ ದ್ವಯಮ್ |
ಪುನಶ್ಚ ವಿಧಿನಾ ಸಮ್ಯಗ್ವೈಷ್ಣವಾದ್ಗ್ರಾಹಯೇದ್ಗುರೋಃ ||
ಅಥ ಸ್ತ್ರೀಶೂದ್ರಸಂಕೀರ್ಣನಿರ್ಮೂಲಪತಿತಾದಿಷು |
ಅನನ್ಯೇನಾನ್ಯದೃಷ್ಟೌ ಚ ಕೃತಾಪಿ ನ ಕೃತಾ ಭವೇತ್ ||
ಅತೋನ್ಯತ್ರಾನುವಿಧಿವತ್ ಕರ್ತವ್ಯಾ ಶರಣಾಗತಿಃ |
ದಂಡವತ್ ಪ್ರಣಮೇದ್ಭೂಮಾವುಪೇತ್ಯ ಗುರುಮನ್ವಹಮ್ |
ದಿಶೇ ವಾಪಿ ನಮಸ್ಕುರ್ಯಾತ್ ಯತ್ರಾಸೌ ವಸತಿ ಸ್ವಯಮ್ ||
ಆಚಾರ್ಯಾಯಾಹರೇದರ್ಥಾನಾತ್ಮಾನಂಚ ನಿವೇದಯೇತ್ |
ತದಧೀನಶ್ಚ ವರ್ತೇತ ಸಾಕ್ಷಾನ್ ನಾರಾಯಣೋ ಹಿಸಃ ||
ಸದ್ಭುದ್ಧಿಸ್ಸಾಧುಸೇವೀ ಸಮುಚಿತಚರಿತಸ್ ತತ್ವಭೋಧಾಭಿಲಾಷೀ |
ಶುಶ್ರೂಷುಸ್ತ್ಯಕ್ತಮಾನಃ ಪ್ರಣಿಪತನಪರಃ ಪ್ರಶ್ನಕಾಲಪ್ರತೀಕ್ಷಃ ||
ಶಾನ್ತೋ ದಾನ್ತೋನಸೂಯುಶ್ಶರಣಮುಪಗತಶ್ಶಾಸ್ತ್ರವಿಶ್ವಾಸಶಾಲೀ |
ಶಿಷ್ಯಃ ಪ್ರಾಪ್ತಃ ಪರೀಕ್ಷಾಂಕೃತವಿಧಭಿಮತಮ್ ತತ್ತ್ವತಃ ಶಿಕ್ಷಣೀಯಃ ||
ಯಸ್ತ್ವಾಚಾರ್ಯಪರಾಧೀನಸ್ಸದ್ವೃತ್ತೌ ಶಾಸ್ಯತೇ ಯದಿ |
ಶಾಸನೇ ಸ್ಥಿರವೃತ್ತಿಸ್ಸ ಶಿಷ್ಯಸ್ಸದ್ಭಿರುದಾಹೃತಃ ||
ಶಿಷ್ಯೋ ಗುರುಸಮೀಪಸ್ತೋ ಯತವಾಕ್ಕಾಯಮಾನಸಃ |
ಶುಶ್ರೂಷಯಾ ಗುರೋಸ್ತುಷ್ಟಿಮ್ ಕುರ್ಯಾನ್ನಿರ್ಧೂತಮತ್ಸರಃ ||
ಆಸ್ತಿಕೋ ಧರ್ಮಶೀಲಶ್ಚ ಶೀಲವಾನ್ ವೈಷ್ಣವಃ ಶುಚಿ: |
ಗಂಭೀರಶ್ಚತುರೋ ಧೀರಃ ಶಿಷ್ಯ ಇತ್ಯಭೀಧೀಯತೇ ||
ಆಸನಮ್ ಶಯನಮ್ ಯಾನಮ್ ತದೀಯಮ್ ಯಚ್ಚ ಕಲ್ಪಿತಮ್ |
ಗುರುಣಾಂಚ ಪದಾಕ್ರಮ್ಯ ನರೋ ಯಸ್ತ್ವಧಮಾಮ್ ಗತಿಮ್ ||
ಗೋಶ್ವೊಷ್ಟ್ರಯಾನಪ್ರಸಾದಪ್ರಸ್ತರೇಶು ಕಟೇಷು ಚ |
ನಾಸೀತ ಗುರುಣಾ ಸಾರ್ಧಮ್ ಶಿಲಾಫಲಕನೌಷುಚ ||
ಯಸ್ತಿಷ್ಟತಿ ಗುರುಣಾಂಚ ಸಮಕ್ಷಮಕೃತಾಂಜಲಿಃ |
ಸಮದೃಷ್ಟ್ಯಾ ತಥಾಜ್ಞಾನತ್ ಸ ಸದ್ಯೋ ನಿರಯಮ್ ವ್ರಜೇತ್ ||
ಆಸನಮ್ ಶಯನಮ್ ಯಾನಮ್ ಅಪಹಾಸಂಚ ಶೌನಕ |
ಅತಿಪ್ರಲಾಪಮ್ ಗರ್ವಂಚ ವರ್ಜಯೇದ್ಗುರುಸನ್ನಿಧೌ ||
ಯದೃಚ್ಛಯಾ ಶ್ರುತೋ ಮನ್ತ್ರಶ್ಚನ್ನೇನಾಥಛ ಲೇನ ವಾ |
ಪತ್ರೇಕ್ಷಿತೋ ವಾವ್ಯರ್ಥಸ್ಸ್ಯಾತ್ ತಮ್ ಜಪೇದ್ ಯದ್ಯನರ್ಥಕೃತ್ ||
ಮನ್ತ್ರೇ ತದ್ ದೇವತಾಯಾಂಚ ತಥಾ ಮನ್ತ್ರಪ್ರದೇ ಗುರೌ |
ತ್ರಿಷೂಭಕ್ತಿಸ್ಸದಾ ಕಾರ್ಯಾ ಸಾಹಿ ಪ್ರಥಮಸಾಧನಮ್||
ಅದಮೋ ದೇವತಾಭಕ್ತೋ ಮನ್ತ್ರಭಕ್ತಸ್ತು ಮದ್ಯಮಃ |
ಉತ್ತಮಸ್ತು ಸ ಮೇ ಭಕ್ತೋ ಗುರುಭಕ್ತೋತಮೋತ್ತಮಃ ||
ಶೃತಿಃ –
ಆಚಾರ್ಯಾನ್ಮಾ ಪ್ರಮದಃ! ಆಚಾರ್ಯಾಯ ಪ್ರಿಯಮ್ ಧನಮಾಹೃತ್ಯ |
ಗುರೋರ್ ಗುರುತರಂ ನಾಸ್ತಿ ಗುರೊರನ್ಯನ್ನ ಭಾವಯೇತ್ |
ಗುರೋರ್ ವಾರ್ಥಾಷ್ಯ ಕಥಯೇದ್ ಗುರೋರ್ನಾಮ ಸಾಧಾಜಪೇತ್ ||

ಅರ್ಚನೀಯಶ್ಚ ವನ್ದ್ಯಶ್ಚ ಕೀರ್ತನೀಯಶ್ಚ ಸರ್ವದಾ |
ಧ್ಯಾಯೇಜ್ಜಪೇನ್ನಮೇದ್ ಭಕ್ತ್ಯಾ ಭಜೇದಬ್ಯರ್ಚಯೇನ್ಮುದಾ ||
ಉಪಾಯೋಪೇಯ ಭಾವೇನ ತಮೇವ ಶರ್ಣಮ್ ವ್ರಜೇತ್ |
ಇತಿ ಸರ್ವೇಷು ವೇದೇಷು ಸರ್ವಸದಸ್ತ್ರೇಷು
ಸಮ್ಮತಮ್ ||
ಯೇವಮ್ ದ್ವಯೋಪದೇಷ್ಟಾರಮ್ ಭಾವಯೇದ್ ಭುದ್ಧಿಮಾನ್ದಿಯಾ |
ಇಚ್ಛಾಪ್ರಕೃತ್ಯನುಗುಣೈರ್ ಉಪಚಾರೈಸ್ತಥೋಚಿತೈಃ ||
ಭಜನ್ನವಹಿತಶ್ಚಾಸ್ಯ ಹಿತಮಾವೇದಯೇದ್ರ: |
ಕುರ್ವೀತ ಪರಮಾಮ್ ಭಕ್ತಿಮ್ ಗುರೌ ತತ್ಪ್ರಿಯವತ್ಸಲಃ ||
ತದನಿಷ್ಠಾವಸಾದೀ ಚ ತನ್ನಾಮಗುಣಹರ್ಷಿತಃ |
ಶಾನ್ತೋನಸೂಯುಃ ಶ್ರದ್ಧಾವಾನ್ ಗುರ್ವರ್ಥಾಧ್ಯಾತ್ಮವೃತಿಕಃ ||
ಸುಚಿಃ ಪ್ರಿಯಹಿತೋ ದಾನ್ತಃ ಶಿಷ್ಯಸ್ಸೋಪರತಸ್ಸುಧೀಃ |
ನ ವೈರಾಗ್ಯಾತ್ಪರೋ ಲಾಭೋ ನ ಬೋಧಾದಪರಮ್ ಸೂಖಮ್ |
ನ ಗುರೋರಪರಸ್ತ್ರಾತಾ ನ ಸಂಸಾರಾತ್ ಪರೋ ರಿಪುಃ ||

ಆಚಾರ್ಯ ವೈಭವ ಪ್ರಕರ್ಣದ ಸಂಗ್ರಹ ಹಾಗು ಮುಖ್ಯ ಅಂಶಗಳು:

 • ನಮ್ಮ ಜೀವನದಲ್ಲಿ ಕಾಲವು ಅಲ್ಪವು ಹಾಗು ಆತ್ಮಸ್ವರೂಪವನ್ನು ಅರಿಯಲುರ್ ಹಲವಾರು ವಿಘ್ನಗಳಿವೆ. ನಾವು ನೀರು ಹಾಗು ಹಾಲನ್ನು ಬೇರ್ಪಡಿಸುವ ಹಂಸದಂತಿರಬೇಕು.
 • ಶಾಸ್ತ್ರವು ರತ್ನ ಭರಿತವಾದ ಸಾಗರದಂತಿದೆ, ಆದರೆ ಅದರಲ್ಲಿ ಅನಗತ್ಯ ಕಳೆಗಳು ಹಾಗು ಮೋಹಜನಕಗಳೂ ಇವೆ. ಅವಲ್ಲಿ ಅತ್ಯಮೂಲ್ಯವಾದ ರತ್ನವು ತಿರುಮಂತ್ರವು ಹಾಗು ಶಾಸ್ತ್ರದಲ್ಲಿ ರಹಸ್ಯವಾಗಿರುವ ಅದರ ಅರ್ಥವು. ಆತ್ಮಸ್ವರೂಪವನ್ನು ಬಯಿಸುವವನು ತಿರುಮಂತ್ರ ಹಾಗು ಅದರ ಅರ್ಥದ ಮೇಲೆ ಗಮನವಿಟ್ಟು ಹಾಗು ಅಪ್ರದಾನಭಾಗಗಳನ್ನು ನಿರ್ಲಕ್ಷಿಬೇಕು.
 • ಮೋಕ್ಷವಿಷಯದ ಜ್ಞಾನವು ನಿಜವಾದ ಜ್ಞಾನವು, ಶಾರೀರಕ ಸುಖಕ್ಕೆ ಉಪಯೋಗವಾಗಿರುವ ಉಳಿದ ಜ್ಞಾನವು ನಿಶ್ಪ್ರಯೋಜಕ.
 • ಪ್ರಮಾಣಗಳನ್ನು ಪರಿಶೀಲಿಸಿ ಶಾಸ್ತ್ರದ ಸಾರವನ್ನು ಅರಿಯುವುದ ಕ್ಲೇಷಕರ; ಸಾರವನ್ನು ಒಬ್ಬ ವಿದ್ವಾನಿಂದ ಕೇಳಿ ನಮ್ಮ ಜೀವನವನ್ನು ಆ ಉಪದೇಶವನ್ನು ಅನುಸರಿಸಿವುಶೆ ಬಹುಸುಲಭವಾದದ್ದು.
 • ಜಗತ್ತು ಭಗವದಧೀನದಲ್ಲಿದೆ, ಭಗವಾನ್ ತನ್ನ ಕರುಣೆಯಿಂದ ತಿರುಮಂತ್ರದ ವಶದಲ್ಲಿದ್ದಾನೆ ಹಾಗು ತಿರುಮಂತ್ರವು ಆಚಾರ್ಯನವಶದಲ್ಲಿರುವುದರಿಂದ ಆಚಾರ್ಯನು ಭಗವಾನಿಗೆ ತುಲ್ಯನು.
 • ಪಾಪಕೃತ್ತಾದ ಕ್ಷತ್ರಬಂದು ಹಾಗು ಪುಣ್ಯಕೃತ್ತಾದ ಪುಂಡರೀಕರಿಬ್ಬರೂ ಆಚಾರ್ಯನಿಂದ ಮೋಕ್ಷ ಹೋಂದಿದರಿಂದ ಎಲ್ಲರಿಂದಲೂ ಆಚಾರ್ಯನು ಆಶ್ರಯಣೀಯನು.
 • ಆಚಾರ್ಯನು ಸ್ವಯಮ್ ಭಗವಾನ್ ಶ್ರೀಹರಿಯು. ಸ್ವ-ಇಚ್ಛೆಯಿಂದ ಆಲಯದಲ್ಲಿ ಯಾವುದೆ ಚಲನವಿಲ್ಲದೆ ಇರುವ ಭಗವಾನಿನಂತಲ್ಲದೆ, ಆಚಾರ್ಯನು ಜಂಗಮ ಭಗವಾನಾಗಿರುವನು. ಆದ್ದರಿಂದ ಅವನಲ್ಲಿ ಪೂರ್ಣವಾದ ವಿಶ್ವಾಸವಿರಬೇಕು.
 • ಭಗವಾನ್ ಶ್ರೀಮನ್ನಾರಾಯಣೇ ಮರ್ತ್ಯರೂಪವನ್ನು ಧರಿಸಿ ( ತನ್ನ ಶಸ್ತ್ರದರ ಶ್ರೀರಾಮ ಕೃಷ್ಣಾದಿಗಳಂತಲ್ಲದೆ ) ಶಾಸ್ತ್ರಧರನಾಗಿ ಸಂಸಾರದಲ್ಲಿ ಮಗ್ನರನ್ನು ಉಧ್ದರಿಸುವನು. ಆದ್ದಾರಿಂದ ಸಂಸಾರದಿಂದ ಭೀತರು ಆಚಾರ್ಯನಲ್ಲಿ ಪೂರ್ಣ ನಿಷ್ಠೆಯನ್ನಿಡಬೇಕು.
 • ಪಶುವಾಗಲಿ ಮನುಷ್ಯನಾಗಲಿ ಪಕ್ಷಿಯಾಗಲಿ ವೈಷ್ಣವನ್ನು ಆಶ್ರಯಿಸುವುದರಿಂದ ನಿಶ್ಚಿತವಾಗಿ ಶ್ರೀಮಹಾವಿಷ್ಣುವಿನ ಲೋಕವನ್ನು ( ಪರಮಪದವನ್ನು ) ಹೊಂದುವರು.
 • ವೈಷ್ಣವನ ಕಟಾಕ್ಷವಾಗಲಿ ಸ್ಪರ್ಶದಿಂದಾಗಲಿ ಗಿಡ ಮರಗಳಿಗೂ ಮೋಕ್ಷವು ಖಚಿತವಾಗಿರುವಾಗ ಮನುಷ್ಯರ ಬಗ್ಗೆ ಹೇಳಬೇಕೆ? (ಅವರು ಖಚಿತವಾಗಿ ಸಂಸಾರದಿಂದ ಮುಕ್ತರಾಗುವರು.)
 • “ಗು” ಅಜ್ಞಾನವನ್ನು ಸೂಚಿಸುತ್ತದೆ “ರು” ಅದರ ನಿವಾರಣೆಯನ್ನು ಸೂಚಿಸುತ್ತದೆ. ಆದ್ದರಿಂದ ಅಜ್ಞಾನ ನಿವರ್ತಕನೆಂದು ಗುರುವಿನ ಅರ್ಥ
 • ಆಚಾರ್ಯನೆಂದರೆ ಯಾರು ಶಾಸ್ತ್ರವನ್ನು ಪೂರ್ಣವಾಗಿ ಅಧ್ಯಯನಮಾಡಿ, ಇತರರಿಗೂ ದೃಡವಾಗಿ ಬೋಧಿಸಿ ತಾನು ಯುಕ್ತವಾಗಿ ಅಚರಿಸುವವನು .
 • ಇತ್ಯಾದಿ ಹಲವಾರು ಪ್ರಮಾಣಗಳಿವೆ.

ಶಿಷ್ಯ ಲಕ್ಷಣ ಪ್ರಕರ್ಣದ ಸಂಗ್ರಹ ಹಾಗು ಸಾರಾರ್ಥವು :

 • ಶಿಷ್ಯನು ತನ್ನ ಆಚರ್ಯನನ್ನು ಸದಸ್ಯವಾಗಿ ಶ್ಲಾಘಿಸಬೇಕು ಹಾಗು ಉಪದೇಶ ವಿಶೇಷಗಳನ್ನು ಆಸಕ್ತರಿಗೆ ಪ್ರತ್ಯೇಕವಾಗಿ ನೀಡಬೇಕು. ವಿಪರೀತವಾಗಿ ಮಾಡದಲ್ಲಿ ( ಆಚರ್ಯನನ್ನು ಪ್ರತ್ಯೇಕವಾಗಿ ಶ್ಲಾಘಿಸಿ, ಅವರ ಉಪದೇಶಗಳನ್ನು ಅವರಿಗೆ ತಕ್ಕ ಗೌರವ ನೀಡದೆ ಬೋಧಿಸಿದ್ದಲ್ಲಿ) ತನ್ನ ಸಂಪದಾದಿಗಳು ಕ್ಷಯಿಸುವವು.
 • ಶಿಷ್ಯನು ಶಾಸ್ತ್ರಪರತಂತ್ರನಾಗಿರಬೇಕು, ಭಗವದಾಜ್ಞೆಂತೆ ಸ್ವಧರ್ಮವನ್ನು ಪಾಲಿಸಬೇಕು, ಕೈಂಕರ್ಯೈಕಮನಸ್ಕನಾಗಿರಬೇಕು, ಶ್ರೀಮನ್ನಾರಾಯಣಲ್ಲಿ ಶರಣಾಗತನಾಗಿರಬೇಕು, ಶುಧ್ದನಾಗಿ, ಗಂಭೀರನಾಗಿ, ಚತುರನಾಗಿ, ಧೀರನಾಗಿರಬೇಕು. ಇಂತಹ ಶಿಷ್ಯರು ಆಚಾರ್ಯನ ನಿಜಶಿಷ್ಯರು.
 • ಶಿಷ್ಯನು ತನ್ನ ಶರೀರ, ಸಂಪತ್ತು, ಜ್ಞಾನ, ನಿವಾಸ, (ಮಾಡುವ)ಕಾರ್ಯಗಳು ಇತ್ಯಾದಿಗಳನ್ನು ಅಚಾರ್ಯನಲ್ಲಿ ನಿವೇಧಿಸಿ ಆಚಾರ್ಯನ ಇಚ್ಛೆಯಂತಿರಬೇಕು.
 • ಆಚಾರ್ಯನ ಮುಂದೆ ಅನಗತ್ಯ ವಿಚಾರ ಗರ್ವಾದಿಗಳನ್ನು ತ್ಯಜಿಸಬೇಕು.
 • ಶಿಷ್ಯನು (ಆಚಾರ್ಯನಿಂದ ಉಪದೇಶಿಸಲ್ಪಟ್ಟ) ಮಂತ್ರದಲ್ಲಿ, (ಮಂತ್ರದ ಉದ್ದೇಶ್ಯನಾದ ಭಗವಾನಿನಲ್ಲಿ) ದೇವತೆಯಲ್ಲಿ ಹಾಗು ಉಪದೇಶಿಸಿದ ಆಚರ್ಯನಲ್ಲಿ ಭಕ್ತಿಯನ್ನು ತೋರಬೇಕು. ಶಿಷ್ಯರಲ್ಲಿ ಮೋದಲ (ಅಧಮ) ವರ್ಗವು ದೇವತೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರುವರು. ನಂತರದ (ಮಧ್ಯಮ) ವರ್ಗದವರು ಮಂತ್ರದಲ್ಲಿ ಹೆಚ್ಚು ಆಸಕ್ತರಾಗಿರುವರು. ಕೋನೆಯ (ಉತ್ತಮ) ವರ್ಗದವರು ಆಚಾರ್ಯನಲ್ಲಿ ಹೇಚ್ಚು ಆಸಕ್ತರಾಗಿರುವರು.
 • ಶಿಷ್ಯನು ಆಚಾರ್ಯನಿಗೆ (ತನು ಕೋಡಲು ಇಚ್ಛಿಸುವುದಲ್ಲದೆ) ಅವರಿಗೆ ಪ್ರಿಯವಾದದ್ದನ್ನು ಸಮರ್ಪಿಸಬೇಕು
 • ಶಿಷ್ಯನು ಅನನ್ಯಮನಸ್ಕನಾಗಿ ಆಚಾರ್ಯನನ್ನೆ ಉದ್ದೇಶ್ಯನಾಗಿಡಬೇಕು. ಗುರುವಿನ ವಚನವನ್ನು ವಿಚಾರಿಸಿ ಪಾಲಿಸಬೇಕು, ಅವರ ನಾಮವನ್ನು ಸದಾ ಜಪಿಸಬೇಕು, ಅವರನ್ನು ಶ್ಲಾಘಿಸಬೇಕು, ಪ್ರಾರ್ಥಿಸಬೇಕು, ಧ್ಯಾನಿಸಬೇಕು ಹಾಗು ಹಾಡಬೇಕು. ಆವರನ್ನೆ ಉಪಾಯ ಉಪೇಯವನ್ನಾಗಿ ಭಾವಿಸಬೇಕು. ಇದೇ ಶಸ್ತ್ರಕ್ಕು ಅನುಗುಣವಾಗಿದೆ.
 • ಇತ್ಯಾದಿ ಪ್ರಮಾಣಾದಿಗಳಿವೆ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : http://ponnadi.blogspot.com/2013/06/anthimopaya-nishtai-1.html

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org