ಶ್ರೀಕೃಷ್ಣನ ಲೀಲೆಗಳ ಸಾರಾಂಶ ಭಾಗ – 3 – ಪೂತನ ಸಂಹಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ

ಶ್ರೀಕೃಷ್ಣ ಲೀಲೆಗಳ ಸಾರಾಂಶ

<< ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ

ಶ್ರೀಕೃಷ್ಣನು ಗೋಕುಲದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದನು. ತಾಯಿ ಯಶೋದೆ, ನಂದಗೋಪರು ಮತ್ತು ಗೋಪಾಲಕರು ಅವನಿಗೆ ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು.

ಕಂಸನು ತನ್ನ ಸಂಹಾರವು ಶ್ರೀಕೃಷ್ಣನಿಂದ ಸಂಭವಿಸುತ್ತದೆ ಎಂದು ತಿಳಿದು, ಅವನು ಪೂತನಿಯೆಂಬ ರಾಕ್ಷಸಿಗೆ ನಗರಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಎಲ್ಲಾ ಕಡೆ ಇದ್ದ ಮಕ್ಕಳನ್ನು ಕೊಲ್ಲುವಂತೆ ಆದೇಶಿಸಿದನು. ಆಗ ಪೂತನಿಯು ತನ್ನ ರಾಕ್ಷಸಿರೂಪ ಮರೆಮಾಡಿ, ಆಕೆ ಸುಂದರ ದೇವತಾಸ್ತ್ರೀ ರೂಪವನ್ನು ಧರಿಸಿ ಗೋಕುಲಕ್ಕೆ ಹೋದಳು. ಯಶೋದೆಯು ಶ್ರೀಕೃಷ್ಣನನ್ನು ಮಲಗಿಸಿ, ತನ್ನ ಕಾರ್ಯಗಳಲ್ಲಿ ನಿರಿತಳಾದಳು. ಆ ಸಮಯದಲ್ಲಿ ಪೂತನಿಯು ಶ್ರೀಕೃಷ್ಣನಿದ್ದ ಸ್ಥಳಕ್ಕೆ ಬಂದಳು. ಈ ಹಿಂದೆ ಅವಳು ಶ್ರೀಕೃಷ್ಣನನ್ನು ಕೊಲ್ಲುವ ಉದ್ದೇಶದಿಂದ ತನ್ನ ಸ್ತನಗಳಲ್ಲಿ ವಿಷ-ಮಿಶ್ರತ-ಹಾಲನ್ನು ಇರಿಸಿಕೊಂಡಿದ್ದಳು.

ಶ್ರೀಕೃಷ್ಣನಿಗೆ ಆವಳ ಆಗಮನದ ಉದ್ದೇಶ ಅರ್ಥವಾಯಿತು. ಆಕೆಯನ್ನು ಸೂಕ್ತ ರೀತಿಯಲ್ಲಿ ಸಂಹಾರ ಮಾಡುವುದಾಗಿ ನಿರ್ಧರಿಸಿದನು. ಆಕೆಯು ಸುಂದರ ದೇವತೆಯಂತೆ ಕಾಣುತ್ತಿದ್ದರಿಂದ, ಅಲ್ಲಿ ಯಾರೂ ಅವಳನ್ನು ಅನುಮಾನಿಸಲಿಲ್ಲ.ಅವಳು ಶ್ರೀಕೃಷ್ಣನನ್ನು ಮೇಲಕ್ಕೆತ್ತಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅವನಿಗೆ ಸ್ತನ್ಯಪಾನ ಮಾಡಿಸಿದಳು. ಅವನು ಸಹ ತನ್ನ ತಾಯಿಯ ಹಾಲನ್ನು ಸೇವಿಸುವಂತೆ, ಅವಳ ಹಾಲನ್ನು ಆತುರದಿಂದ ಸೇವಿಸಿದನು.ಆದರೆ ಶೀಘ್ರದಲ್ಲೇ, ಅವನು ಅದರ ಮೂಲಕ ಪೂತನಿಯ ಪ್ರಾಣವನ್ನು ಹೀರಲು ಪ್ರಾರಂಭಿಸಿದನು ಮತ್ತು ಅವಳನ್ನು ಸಂಹರಿಸಿದನು. ಅವಳು “ಹಾ” ಎಂದು ಕೂಗಿದಳು ಮತ್ತು ತನ್ನ ಬೃಹತ್ ರಾಕ್ಷಸರೂಪದಿಂದ ಕೆಳಗೆ ಬಿದ್ದು ಸತ್ತಳು. ಅದನ್ನು ನೋಡಿದ ಯಶೋದೆ ಓಡಿ ಬಂದು ಆತನನ್ನು ಮೇಲೆತ್ತಿ ಸಮಾಧಾನಪಡಿಸಿದಳು.

ಈ ಘಟನೆಯನ್ನು ಅನೇಕ ಕಡೆಗಳಲ್ಲಿ ಅನೇಕ ಆಳ್ವಾರರು ಬಹಳವಾಗಿ ಆನಂದಿಸಿದ್ದಾರೆ. ಆಳ್ವಾರರು ಪೂತನಿಯನ್ನು ಉದ್ದೇಶಿಸಿ ಹೇಳುವಾಗ ಅವರು “ಪೇಯ್”, ”ಪೇಯ್ಯಾಚ್ಚಿ”, ಮತ್ತು “ಪೂತನಿಯೈ” ಎಂಬ ಪದಗಳನ್ನು ಬಳಸಿದ್ದಾರೆ ಮತ್ತು ಆಕೆಯ ಕ್ರೂರ ಕೃತ್ಯದಿಂದಾಗಿ ಭಯಭೀತರಾಗಿದ್ದಾರೆ.
ಈ ಘಟನೆಯಲ್ಲಿರುವ ಅದ್ಭುತ ಸಾರವನ್ನು ನೋಡೋಣ:

  • ಶ್ರೀ ರಾಮಾವತಾರದಲ್ಲಿ, ಎಂಪೆರುಮಾನ್ ಮೊದಲು ತಾಟಕಿ ಎಂಬ ಹೆಣ್ಣು ರಾಕ್ಷಸನನ್ನು ಕೊಂದನು. ಇಲ್ಲಿ, ಕೃಷ್ಣಾವತಾರದಲ್ಲಿ, ಅವನು ಮೊದಲು ಪೂತನನನ್ನು ಕೊಂದನು.
  • ಅವಳು ಅವನ ಮೇಲೆ ಪ್ರೀತಿ ತೋರಿದಂತೆ ಅವನೂ ಅವಳ ಮೇಲೆ ಪ್ರೀತಿ ತೋರಿ ಅವಳ ಹಾಲು ಕುಡಿದನು.
    ಅವಳು(ಪೂತನಿಯು) ವಿಷವನ್ನು ಹೊಂದಿದ್ದರೂ, ಅವಳು ಅದನ್ನು ಕೃಷ್ಣನಿಗಾಗಿ ಮಾತ್ರ ಹೊಂದಿದ್ದಳು. ಆದುದರಿಂದ ಭಗವಂತನು ಅದನ್ನು ಉತ್ಸಾಹದಿಂದ ಸ್ವೀಕರಿಸಿದರು. ತನಗಾಗಿ ಪ್ರತ್ಯೇಕವಾಗಿ ಇರಿಸಲಾಗಿರುವ ಯಾವುದನ್ನಾದರೂ ಅವನು ಸ್ವೀಕರಿಸುತ್ತಾನೆ.
  • ಅವಳನ್ನು ಕೊಲ್ಲುವುದು ಅವನ ಉದ್ದೇಶವಲ್ಲ. ಆದರೆ ಅವಳು ದುಷ್ಟ ಉದ್ದೇಶದಿಂದ ಬಂದಿದ್ದರಿಂದ ಸಹಜವಾಗಿಯೇ ಅವನಿಂದ ಕೊಲ್ಲಲ್ಪಟ್ಟಳು.
  • ಎಂಪೆರುಮಾನ್‌ನಲ್ಲಿ/ಭಗವಂತನಲ್ಲಿ ಪ್ರೀತಿಯನ್ನು ಹೊಂದಿರುವಂತೆ ನಾವು ಎಷ್ಟೇ ಪರಿಪೂರ್ಣವಾಗಿ ನಟಿಸಿದರೂ, ಎಂಪೆರುಮಾನ್ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಆ ಆಲೋಚನೆಗಳನ್ನು ಛಿದ್ರಗೊಳಿಸುತ್ತಾನೆ.

ಅಡಿಯೇನ್ ಕಸ್ತೂರಿರಂಗನ್ ರಾಮಾನುಜ ದಾಸನ್

ಮೂಲ : https://srivaishnavagranthamstamil.wordpress.com/2023/08/24/krishna-leela-3/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

Leave a comment