ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಪರಿಚಯ

ಶ್ರಿವೈಷ್ಣವ ಆಗುವುದು ಹೆಗೆ?

ಪುರ್ವಾಚಾರ್ಯರ್ಗಳು ಹೆಳಿರುವ ಪ್ರಕಾರ, ಶ್ರಿವೈಷ್ಣವರಾಗಲು ಒಂದು ಕಾರ್ಯ ವಿಧಾನವಿದೆ – ಅದೆ ಪಂಚ ಸಂಸ್ಕಾರ (ಸಂಪ್ರದಾಯಕ್ಕೆ ಉಪಕ್ರಮ)

ಸಂಸ್ಕಾರ ವೆಂದರೆ ಶುದ್ಧೀಕರಿಸುವ ಪ್ರಕ್ರಿಯೆ.  ಸಂಪ್ರದಾಯಕ್ಕೆ ಉಪಕ್ರಮಿಸಲು ಅನರ್ಹರಾದವರನ್ನು, ಅರ್ಹತೆಹೊ೦ದಿರುವರಾಗಿ ಮಡುವ ಪ್ರಕ್ರಿಯೆ. ಸಂಪ್ರದಾಯಕ್ಕೆ ಉಪಕ್ರಮ.  ಈ ಪ್ರಕ್ರಿಯೆಯ ಮೂಲಕ ಶ್ರಿವೈಷ್ಣವರಾಗುತ್ತಾರೆ.  ಬ್ರಾಹ್ಮಣರ ಕುಟಂಬದಲ್ಲಿ ಹುಟ್ಟಿ, ಬ್ರಹ್ಮ ಯಗ್ಯದ ಮೂಲಕ ಹೆಗೆ ಸುಲಭವಾಗಿ ಬ್ರಾಹ್ಮಣರಾಗಬಹುದೊ – ಹಾಗೆಯೆ, ಶ್ರಿವೈಷ್ಣವ ಕುಟುಂಬದಲ್ಲಿ ಹುಟ್ಟಿ ಪಂಚ ಸಂಸ್ಕಾರದಿಂದ ಶ್ರಿವೈಷ್ಣವರಾಗಬಹುದು.

ಆದರೆ, ಶ್ರಿವೈಷ್ಣವದಲ್ಲಿ ಇರುವ ವಿಷೇಶವೇನೆಂದರೆ, ಶ್ರಿವೈಷ್ಣವರಾಗಲು ಶ್ರಿವೈಷ್ಣವ ಕುಟಂಬದಲ್ಲಿ ಹುಟ್ಟಬೆಕಿಲ್ಲ – ಎಕೆಂದರೆ, ಶ್ರಿವೈಷ್ಣವತ್ವವು ಆತ್ಮಕ್ಕೆ ಸಂಬಂಧಿಸಿರುವುದು – ಬ್ರಾಹ್ಮಣ್ಯಮ್ ದೆಹಕ್ಕೆ/ಶರೀರಕ್ಕೆ ಸಂಬಂಧಿಸಿರುವುದು. ಶ್ರೀವೈಶ್ಣವದಲ್ಲಿ, ಯಾವುದೇ ತರಹದ ಭೇದ (ಜಾತಿ, ನಂಬಿಕೆ, ರಾಷ್ಟ್ರೀಯತೆ, ವರ್ಗ, ಸಿರಿವಂತರು, ದರಿದ್ರರು, ಇತ್ಯಾದಿ) ಮಾಡುವುದಿಲ್ಲ. ಯಾರಾದರೂ ಮುಕ್ತಿ/ಮೋಕ್ಷದಕಡೆ ಹೊಗಲು ಹಂಬಲಿಸುತ್ತಾರೊ, ಅಂತವರೆಲ್ಲಾ ಶ್ರಿವೈಷ್ಣವತ್ವವನ್ನು ಸ್ವೀಕರಿಸಬಹುದು. ಪ್ರಾಮುಖ್ಯವಾಗಿ ಗಮನಿಸಬೆಕಾಗಿರುವುದು – ಶ್ರಿವೈಷ್ಣವರಾದಮೇಲೆ ದೇವತಾನ್ತರಮ್ (ಬ್ರಹ್ಮಾ, ಶಿವ, ದುರ್ಗಾ, ಸುಬ್ರಮಣ್ಯ, ಇಂದ್ರ, ವರುಣ,ಇತ್ಯಾದಿ) ಮೇಲೆ ಮತ್ತು ದೇವತಾನ್ತರಮ್ ಸಂಬಂಧಿಗಳೊಡನೆ, ಸಂಭಂದವನ್ನು ತಪ್ಪಿಸಬೇಕು.

ಪಂಚ ಸಂಸ್ಕಾರಮ್

ಪಂಚ ಸಂಸ್ಕಾರಮ್ / ಸಮಾಸ್ರಯಣಮ್ – ಎಂಬ ಕಾರ್ಯವಿಧಾನ/ಪ್ರಕ್ರಿಯೆ ಸಾಸ್ತ್ರದಲ್ಲಿ ವಿವರಣೆ ಕೊಡಲ್ಪಟ್ಟಿದೆ. ಈ ಪ್ರಕ್ರಿಯೆ (ಪಂಚ ಸಂಸ್ಕಾರಮ್ / ಸಮಾಸ್ರಯಣಮ್) ಒಬ್ಬ ವ್ಯಕ್ತಿಯನ್ನು ಶ್ರಿವೈಷ್ಣವ ಆಗಲು ಸಿದ್ಧಗೊಳಿಸುತ್ತದೆ. ಈ ಕೆಳಗೆ ಹೆಳಿರುವ ಶ್ಲೋಕ, ಪಂಚ ಸಂಸ್ಕಾರದ ವಿವಿಧ ಅಂಶಗಳನ್ನು ವಿವರಿಸುತ್ತದೆ:

“ತಾಪ: ಪುಣ್ಡ್ರ: ತತಾ ನಾಮ: ಮಂತ್ರೋ ಯಾಗಸ್ಚ ಪಂಚ ಮ:”

ಪಂಚ ಸಂಸ್ಕಾರಮ್ / ಸಮಾಸ್ರಯಣದಲ್ಲಿ ಇರುವ ಪಂಚ ಕಾರ್ಯಗಳು:

 • ತಾಪ:(ಬಿಸಿ)-ಶಂಖ ಚಕ್ರ ಲಾನ್ಚನ – ತೋಳುಗಳ ಮೆಲೆ ಶಂಖ ಮತ್ತು ಚಕ್ರ ಮುದ್ರಾಧಾರಣ. ಇದು ನಮ್ಮನ್ನು ಎಂಪೆರುಮಾನರ ಸ್ವತ್ತು ಎಂದು ಗುರುತಿಸುತ್ತದೆ. ಪಾತ್ರೆಯ ಮೇಲೆ ಹೇಗೆ ಒಡೆಯ/ಯಜಮಾನರ ಲಾನ್ಚನದ ಚಿಹ್ನೆ ಹಾಕುತ್ತಾರೊ, ಹಾಗೆಯೆ ನಮ್ಮ ತೋಳುಗಳ ಮೆಲೆ ಎಂಪೆರುಮನರ ಲಾನ್ಚನದ ಚಿಹ್ನೆ ಆಕಿಕೊಳ್ಳುವುದು.
 • ಪುಣ್ಡ್ರ: (ಚಿಹ್ನೆ) – ದ್ವಾದಶ ಊರ್ದ್ವ ಪುಣ್ಡ್ರ ದಾರನ – ದೆಹದ ಹನ್ನೆರಡು ಭಾಗದಳ್ಳಿ ಊರ್ದ್ವ ಪುಣ್ಡ್ರಮ್ (ತಿರುಮಣ್,ಶ್ರೀಚೂರ್ಣಮ್) ಇಟ್ಟುಕೊಳ್ಳುವುದು
 • ತತಾ ನಾಮ:- ದಾಸ್ಯ ನಾಮ – ಆಚಾರ್ಯ ಕೊಡುವ ದಾಸ್ಯ ನಾಮ (ರಾಮಾನುಜ ದಾಸನ್, ಮದುರಕವಿ ದಾಸನ್, ಶ್ರಿವೈಷ್ಣವ ದಾಸನ್)
 • ಮಂತ್ರ – ಮಂತ್ರ ಉಪದೇಶ – ಆಚಾರ್ಯರಿಂದ ಮಂತ್ರೋಪದೆಶವನ್ನು ಪಡೆದುಕೊಳ್ಳುವುದು. ಮಂತ್ರವೆಂದರೆ – ಜಪಿಸುವವರು ಕಷ್ಟಗಳಿಂದ ಮುಕ್ತಿ ಒಂದುವುದು. ಆಚಾರ್ಯರು – ತಿರುಮಂತ್ರಮ್, ದ್ವಯಮ್,  ಚರಮ ಶ್ಲೊಕವನ್ನು ಉಪದೇಶಿಸುತ್ತಾರೆ. ಇದನ್ನು ಜಪಿಸುವುದರಿಂದ ಸಂಸಾರದಿಂದ ಮುಕ್ತಿ ಪಡೆಯಬಹುದು.
 • ಯಾಗ – ದೇವ ಪೂಜಾ – ತಿರುವಾರಾದನೆ ಎಂಪೆರುಮಾನ್ ಪೋಜೆ ಮಡುವ ಕ್ರಮ. ಇದನ್ನು ಆಚಾರ್ಯರಿಂದ ಕಲಿತುಕೊಳ್ಳುವುದು.

ಪೂರ್ವಾಗತ್ಯ:

ಆಕಿಂಚನ್ಯಮ್ (ನಾವು ಅಸಮರ್ಥರು ಇಂದು ಪರಿಗಣಿಸುವಿಕೆ) ಮತ್ತು ಅನನ್ಯ ಗತಿತ್ವಮ್ (ಯಾವುದೇ ದಾರಿ/ಮಾರ್ಗ ಇಲ್ಲ), ಇವೆರಡು ಎಂಪೆರುಮಾನ್ ಪಾದಗಳಿಗೆ ಶರಣಾಗಳು ಪ್ರಮುಖವಾದ ಪೂರ್ವಾಗತ್ಯ. ಇಂತಹ ಸ್ತಿತಿಯಲ್ಲಿ ಮಾತ್ರ ಪರಿಪೋರ್ನವಾಗಿ ಎಂಪೆರುಮಾನ್ ಪಾದಗಳಿಗೆ ಶರಣಾಗಬಹುದು ಮತ್ತು ನಮ್ಮನ್ನು ಸಂಸಾರದಿಂದ ಮೇಲೆತ್ತಲು ಎಂಪೆರುಮಾನ್ನನಿಂದಲೆ ಸಾದ್ಯ.

ಪಂಚ ಸಂಸ್ಕಾರದ ಧ್ಯೇಯ/ಗುರಿ:

 • ಷಾಸ್ತ್ರ ಹೆಳುತ್ತದೆ – “ತತ್ವ ಜ್ಞಾನಾನ್ ಮೋಕ್ಷ ಲಾಭ” – ಯಾರು ತತ್ವ ಜ್ಞಾನವನ್ನು (ಬ್ರಹ್ಮ ಜ್ಞಾನ) ಪಡೆದುಕೊಳ್ಳುತ್ತಾನೊ, ಅಂತವರು ಮೋಕ್ಷ ಹೊಂದುತ್ತಾರೆ. ಆಚಾರ್ಯರಿಂದ “ಅರ್ತ ಪಂಚಕಂ”ನಲ್ಲಿ (ಬ್ರಹ್ಮಮ್ – ದೈವ, ಜೀವಾತ್ಮಾ – ಚೈತನ್ಯ, ಉಪಾಯಮ್ – ಮಾರ್ಗ, ಉಪೇಯಮ್ – ಫಲ, ವಿರೋದಿ – ಫಲಕ್ಕೆ ಯಾವುದು ವಿಘ್ನ/ಅಡಚಣೆ) ಇರುವ ಮಹತ್ವಪೂರ್ಣವಾದ ಜ್ಞಾನವನ್ನು ಮಂತ್ರೋಪದೆಶದ ಮೂಲಕ ಪಡೆದುಕೊಳ್ಳುವುದರಿಂದ, ಅಂತಿಮ ಉದ್ದೇಶ/ಮೂಲ ಗುರಿಗೆ (ಶ್ರಿಯ:ಪತಿಗೆ ಈ ಲೀಲಾ ವಿಭೂತಿಯಲ್ಲಿ ಕೈನ್ಕರ್ಯ ಮಾಡುವ) ಅರ್ಹತೆ/ಯೋಗ್ಯತೆ ಬರುವುದು. ನಾವು ಭಗವಂತನ ಮೆಲೆ ಪರಿಪೋರ್ಣವಾಗಿ ಆಶ್ರಿತರಾಗಿದ್ದೆವೆ ಎಂಬುದನ್ನು ಒಪ್ಪಿ ತಿಳಿದುಕೊಳ್ಳುವುದೆ ನಿಜವಾದ ಜ್ಞಾನ.
 • ಈ ಸದ್ಯದ ಸಂಸಾರದ ಜೀವನದಲ್ಲಿ, ಆಚಾರ್ಯರ ಮತ್ತು ಶ್ರಿವೈಷ್ಣವರ ಕೈನ್ಕರ್ಯ ಮಾಡುವುದು.  ತಿರುವಾರಾದಣೆ ಮೋಲಕ ಅರ್ಛವತಾರ ಎಂಪೆರುಮಾನನ ಕೈನ್ಕರ್ಯ ಮಾಡುವುದು.
 • ಈ ಮಹತ್ವವಾದ ಸಂದೇಶವನ್ನು ಮತ್ತಿತರರಿಗೆ ಹಂಚಿಕೊಂಡು, ಮತ್ತಿತರರಿಗೂ ಇದರ ಲಾಭ ಪಡೆದುಕೊಳ್ಳಳು ಸಹಾಯ ಮಾಡುವುದು.  ಶ್ರೀ ರಾಮಾನುಜರ ಒಂದು ಪ್ರಮುಖವಾದ ಆದೇಶವೇನೆಂದರೆ, ಶ್ರೀ ವೈಷ್ಣವರು ಮೊದಲು ಶ್ರೀ ಭಾಶ್ಯಮ್, ತಿರುವಾಇಮೊಳ್ಹಿಯನ್ನು ಕಲಿತು, ಅದನ್ನು ಬೇರೆಯವರಿಗೆ ಕಲಿಸಿಕೊಡಬೆಕು.

ಆಚಾರ್ಯರು, ಜೀವಾತ್ಮ ಮತ್ತು ಪರಮಾತ್ಮದ ಸಂಯೋಜನೆ ಮಡಿಸಿಕೊಡುತ್ತಾರೆ. ನಮ್ಮನ್ನು ಪ್ರಪನ್ನರೆಂದು ಕರೆಯಲ್ಪಟ್ಟರು, ಶ್ರೀ ರಾಮಾನುಜರು ಮತ್ತು ಎಲ್ಲಾ ಪೂರ್ವಿಕರು ನಮಗೆ ತೋರಿಸಿಕೊಟ್ಟಿರುವುದು ಎನ್ನಂದರೆ, ನಾವು ಆಚಾರ್ಯ ನಿಶ್ಟರೆಂದು – ಅಂದರೆ ನಾವು ಆಚಾರ್ಯರನ್ನೆ ಎಲ್ಲದಕ್ಕು ಸಂಪೋರ್ನವಾಗಿ ಅವಲಂಬಿಸುತ್ತೇವೆ.ಈ ಪಂಚ ಸಂಸ್ಕಾರದಿಂದ ಜೀವಾತ್ಮದ ನಿಜವಾದ ಜನನ ಎಂದು ಪರಿಗಣಿಸಲಾಗಿದೆ, ಏಕೆಂದರೆ, ಆ ಪಂಚ ಸಂಸ್ಕಾರದ ಸಮಯದಲ್ಲಿ ಜೀವಾತ್ಮ ಅದರ ನಿಜವಾದ ಲಕ್ಷಣ/ಸ್ವಭಾವವನ್ನು ಅರಿತುಕೊಂಡು ಎಂಪೆರುಮಾನ್ಗೆ ಶರಣಗುತ್ತದೆ. ಈ ದೈವಿಕ ಸಂಭಂದ, ಗಂಡ (ಪರಮಾತ್ಮ) ಹಂಡತಿಯ (ಜೀವಾತ್ಮ) ಸಂಬಂಧದಂತೆ.  ಇಂತಹ ದೈವಿಕ ಸಂಭಂಧವಿರುವುದಕ್ಕೆ, ಬೇರೆ ದೆವತೆಯರಿಂದ ದೂರವಿರಬೆಕೆಂದು ಹೆಳಳ್ಪಟ್ಟಿದೆ.

ಶ್ರಿವೈಷ್ಣವ ಸಿಧ್ಧಾಂತ ಹೆಳುವುದು ಎನೆಂದರೆ, ಸಂಸಾರವನ್ನು ಬಿಟ್ಟು ಪರಮ ಪದಕ್ಕೆ ಹೋಗಿ ಶ್ರಿಯ:ಪ್ಪಥಿಯ ಕೈನ್ಕರ್ಯವನ್ನು ಸದಾ ಮಡುವುದು.

ಯಾರು ಪಂಚ ಸಂಸ್ಕಾರ ಮಾಡಬಹುದು?

ಶ್ರೀ ವೈಷ್ಣವಮ್ ಒಂದು ಚಿರಂತನವಾದ ಸಿದ್ದಾಂತವಾದರು, ಇದನ್ನು ಕಳೆಯೇರಿ/ಹೊಸದಾಗಿಸಿದ್ದು ಆಳ್ವಾರ್, ಆಚಾಯರ್ಗಳು. ಶ್ರೀ ರಾಮಾನುಜರು, ಶಾಸ್ತ್ರಗಳನ್ನು ಅಧ್ಯಯಣ ಮಾಡಿ, ಪೂರ್ವಿಕರ ಆದೆಶಧಂತೆ (ನಾತಮುನಿಗಳ್, ಆಳವಂದಾರ್, ಇತ್ಯದಿ), ನಿಯಮಗಳನ್ನು ಪುಣರ್-ಸ್ಥಾಪಣೆ ಮಡಿದರು.  ಶ್ರೀ ರಾಮಾನುಜರು, 74 ಸಿಂಹಾಸನಾದಿಪತಿಯರನ್ನು (ಆಚಾರ್ಯರ್) ಸ್ಥಾಪಣೆ ಮಾಡಿದರು.  ಆವರಿಗೆ (74 ಸಿಂಹಾಸನಾದಿಪತಿಯರು), ಯಾರು ಈ ಜೀವನದ ನಿಜವಾದ ಗುರಿ (ಸಂಸಾರವನ್ನು ಬಿಟ್ಟು ಪರಮ ಪದದಕ್ಕೆ ಹೊಗುವ ಗುರಿ) ತಿಳಿದಿದೆಯೊ,ಅಂಥವರಿಗೆ ಪಂಚ ಸಂಸ್ಕಾರಮಾಡಲು ಅಧಿಕರಾ ನೀಡಿದರು

ಯಾರು ಈ 74 ಸಿಂಹಾಸನಾದಿಪತಿಯರ ಪರಂಪರೆಯಲಿ ಬರುತ್ತಾರೊ, ಅವರಿಗೆ ಪಂಚ ಸಂಸ್ಕಾರ ಮಡಲು ಅಧಿಕರಾ ಇದೆ. ಶ್ರೀ ರಾಮಾನುಜರು (ಮತ್ತು ಮಣವಾಳ ಮಾಮುನಿಗಳ್) ಕೆಲವು ಮಠವನ್ನು ಸ್ಥಾಪಿಸಿ, ಅದಕ್ಕೆ ಮುಖ್ಯಸ್ಥರಾಗಿ ಜೀಯರ್ ಸ್ವಾಮಿಗಳು, ಅವರು ಮತ್ತು ಅವರ (ಜೀಯರ್ ಸ್ವಾಮಿಗಳ) ಪರಂಪರೆಯಲ್ಲಿ ಬರುವ ಎಲ್ಲಾ ಸ್ವಾಮಿಗಳೂ, ಯಾರಿಗೆ ಶ್ರೀವೈಷ್ಣವರಾಗಬೆಕೊ, ಅಂಥವರಿಗೆ ಪಂಚ ಸಂಸ್ಕಾರವನ್ನು ಮಾಡಲು ಅಧಿಕಾರ ನೀಡಿದ್ದಾರೆ.

ಪಂಚ ಸಂಸ್ಕಾರ / ಸಮಾಸ್ರಯನಮ್ ಮಾಡಿಕೊಳ್ಳುವ ದಿನದ ವಿಧಿ ವಿಧಾನಗಳು:

 • ಬೆಳಗಿನಜಾವಾ ಬೇಗನೆ ಎದ್ದೇಳಬೇಕು
 • ಶ್ರೀಮನ್ ನಾರಾಯಣನ್, ಆಳ್ವಾರರ ಮತ್ತು ಆಚಾರ್ಯರನ್ನು ಧ್ಯಾನಿಸಬೆಕು. ಮುಖ್ಯವಾದ ದಿನ – ನಿಜವಾದ ಜ್ಞಾನ ಉಟ್ಟುವ ದಿನ
 • ನಿತ್ಯ ಕರ್ಮಾನುಶ್ಟಾನವನ್ನು ಮುಗಿಸಬೆಕು (ಸ್ನಾನ, ಊರ್ದ್ವ ಪುಣ್ಡ್ರ ದಾರಣ, ಸಂದ್ಯಾ ವಂದನ, ಇತ್ಯಾದಿ)
 • ಸಮಯಕ್ಕೆ ಸರಿಯಗಿ ಅಥವ ಸ್ವಲ್ಪ ಬೇಗನೆ ಆಚಾರ್ಯರ ಮಠ/ತಿರುಮಾಳಿಗೈ ಸೇರಿಕೊಳ್ಳಬೆಕು. ಸಾದ್ಯವಾದಸ್ಟು ಹೂವು, ಹನ್ನು, ವಸ್ತ್ರ, ಸಂಭಾವನೆ, ಇತ್ತ್ಯಾದಿಗಳನ್ನು ತಗೆದುಕಂಡು ಹೊಗುವುದು.
 • ಸಮಾಸ್ರಯನಮ್ ಮಾಡಿಸಿಕೊಳ್ಳುವುದು
 • ಆಚಾರ್ಯರ ಶ್ರೀಪಾದ ತೀರ್ಥವನ್ನು ಸ್ವೇಕರಿಸುವುದು
 • ಆಚಾರ್ಯರ ಆದೇಶವನ್ನು ಗಮನವಿಟ್ಟು ಕೆಳಿ ಒಪ್ಪಿಕೊಳ್ಳುವುದು
 • ಆಚಾರ್ಯರ ಮಠ/ತಿರುಮಾಳಿಗೈನಲ್ಲಿ ಪ್ರಸಾದವನ್ನು ಸ್ವೇಕರಿಸುವುದು
 • ಆಚಾರ್ಯರ ಮಠ/ತಿರುಮಾಳಿಗೈನಲ್ಲಿ ಆದಿನ ಉಳಿದು ಗುರು ಪರಂಪರೆ, ಸಂಪ್ರದಾಯ, ಇತ್ತ್ಯಾದಿಗಳನ್ನು ಆಚಾರ್ಯರಿಂದ ಕೇಳಿ ತಿಳಿದುಕೊಳ್ಳುವುದು.
 • ಪಂಚ ಸಂಸ್ಕಾರ / ಸಮಾಶ್ರಯಣಮ್ ಮಾಡಿಸಿಕೊಂಡ ದಿನವು, ಬೆರೆ ಎಲ್ಲಾ ಕೆಲಸವನ್ನು ಬಧಿಗಿಟ್ಟು, ಆ ದಿನ ಬರೆ ಧ್ಯಾನ, ಗುರು ಪರಂಪರೆಯ್ಗೆ ಕೃತಜ್ಞತೆ ಸಲ್ಲಿಸುವುದು, ಇತ್ತ್ಯಾದಿಗಳಲ್ಲಿ ತೊಡಗಿಸಿಕೊಳ್ಳುವುದು.

ಪಂಚ ಸಂಸ್ಕಾರ ಶುರುವೊ ಅಥವ ಕೊಣೆಯೊ?

ಸಾದಾರಣವಾಗಿ, ಸಮಾಸ್ರಯಣಮ್ ಒಂದು ಸಾದಾರಣ ಕರ್ಮ/ಕ್ರಿಯೆ ಮತ್ತು ಅದನ್ನು ಮಾಡಿದರೆ ಅಲ್ಲಿಗೆ ಎಲ್ಲಾ ಮುಗಿಯಿತು ಎಂಭ ತಪ್ಪು ಕಲ್ಪನೆ ಇದೆ. ಅದು ಸಂಪೋರ್ನವಾದ ತಪ್ಪು ಕಲ್ಪನೆ.  ಪಂಚ ಸಂಸ್ಕಾರ ಶ್ರಿವೈಷ್ಣವಕ್ಕೆ ಇಡುವ ಮೊದಲ ಹೆಜ್ಜೆ / ಶ್ರಿವೈಷ್ಣವ ಪ್ರಯಾಣದ ಶುರು. ಅಂತಿಮ ಗುರಿಯನ್ನು ನಿರ್ಧಾರಿಸುತ್ತದೆ (ಚಿರಂತನವಾದ ಶ್ರಿಯ:ಪ್ಪಥಿಯ ಕೈನ್ಕರ್ಯ ಪರಮ ಪದದಲ್ಲಿ) ಮತ್ತು ನಮ್ಮ ಪೂರ್ವಾಚಾರ್ಯರ್ಗಳು ನಿರ್ಧಿಶ್ಟವಾದ ಕ್ರಮವನ್ನು ನೀಡಿದ್ದಾರೆ – ಆಚಾರ್ಯರ ಮೂಲಕ ಭಗವಂತನೆ ಎಲ್ಲಾವೆಂದು ಒಪ್ಪಿಕೊಂಡು ಮತ್ತು ಆಚಾರ್ಯರು ತೋರಿಸಿಕೊಡುವ ನೀತಿ, ಸೂತ್ರ, ವಿಧಿ, ಸಿಧ್ಧಾಂತವನ್ನೆಲ್ಲಾ ಸ್ವ ಇಛ್ಛೆಇಂದ ಮತ್ತು ಸಂಪೋರ್ಣ ಖುಶಿಇಂದ ಪಾಲಿಸಬೆಕು. ಇ ಸಿದ್ದಾಂತವು ಜೀವಾತ್ಮದ ನಿಜವಾದ ಲಕ್ಷಣಕ್ಕೆ ಸಂಪೋರ್ಣವಾಗಿ ಒಂದುಕೊಳ್ಳುತ್ತದೆ. ಇದನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕಂಡು ಮೆಲೇರಬೆಕು.

ಸೂತ್ರ 116, ಮುಮುಕ್ಶುಪ್ಪಡಿಯಲ್ಲಿ, ಪಿಳ್ಳೈ ಲೋಕಾಚಾರ್ಯರು, ಶ್ರೀವೈಷ್ಣವನ (ಯರಿಗೆ ಪಂಚ ಸಂಸ್ಕಾರ ಅಗಿರುವುದೊ) ನಡತೆಯನ್ನು ಎತ್ತಿತೋರಿಸಿದ್ದಾರೆ:

 • ಲೌಕಿಕತ್ವವನ್ನು ಸಂಪೋರ್ಣವಾಗಿ ಬಿಡಿಸಿಕೊಳ್ಳುವುದು
 • ಶ್ರೀಮನ್ ನಾರಾಯಣನೊಬ್ಭಣೆ ಆಶ್ರಯವೆಂದು ಇರುವುದು
 • ಚಿರಂತನವಾದ ಕೈನ್ಕರ್ಯದ ಮೇಲೆ ಧ್ರುಡವಾದ ನಂಭಿಕೆ
 • ಸಧಾಕಾಲ ಆ ಚಿರಂತನವಾದ ಕೈನ್ಕರ್ಯದ ಮೇಲೆ ಕಡುಬಯಕೆವಿರುವುದು
 • ಇ ಭೂಮಿಮೆಲಿರುವವರೆಗು, ಸದಾಕಾಲ ದಿವ್ಯ ದೆಶದಲ್ಲಿ ಇದ್ದು, ಅಲ್ಲಿಯ ಎಂಪೆರುಮಾನನ ಸೇವೆ ಮಾಡುವುದು
 • ಸದಾಕಾಲ ಮೇಲೆ ಸೂಚಿಸಿರುವ ನಡತೆಯುಳ್ಳ ಭಾಗವತೋತ್ತಮರ ಸೇವೆ ಮತ್ತು ಅಂಥವರ ಜೊತೆ ಸಂತೋಷವಾಗಿ ಇರುವುದು
 • ಸದಾಕಾಲ ತಿರುಮಂತ್ರಮ್ ಮತ್ತು ದ್ವಯ ಮಹಾ ಮಂತ್ರದ ಮೆಲೆ ಮನಸ್ಸು ಇರುವಿಕೆ.
 • ನಮ್ಮ ಆಚಾರ್ಯರ ಮೇಲೆ ಅಥಿಯಾದ ಭಕ್ತಿ, ಪ್ರೀತಿ
 • ಎಂಪೆರುಮಾನ್ ಮತ್ತು ಆಚರ್ಯರ ಮೆಲೆ ಅತಿಯಾಗಿ ಕೃತಜ್ಞರಾಗಿರಬೇಕು
 • ಸಾತ್ವಿಕ ಶ್ರೀವೈಷ್ಣವರ ಸಹವಾಸ

ಈ ಮೇಲೆ ತಿಳಿಸಿರುವುದರ ಬಗ್ಗೆ ಸಂಪೋರ್ಣವಾದ ಮತ್ತು ಧೀರ್ಗವಾದ ವಿವರಣೆಗೆ, ನೋಡಿ: http://ponnadi.blogspot.in/2012/08/srivaishnava-lakshanam-5.html .

ನಾವು ಭಗವತ್ ರಾಮಾನುಜರಿಗೆ ಕೃತಜ್ಞರಾಗಿರಬೇಕು. ಶ್ರೀ ರಾಮಾನುಜರು, ಪಂಚ ಸಂಸ್ಕಾರವನ್ನು ಬಹಳಾ ಉನ್ನತ ಮಟ್ಟದಲ್ಲಿ ಸಂಸ್ಥಾರೂಪಿಸಿ ಮತ್ತು ಅದನ್ನು ಅವರ ಶಿಷ್ಯರ (74 ಸಿಂಹಾಸನಾದಿಪತಿಗಳು) ಮೂಲಕ ಪ್ರಚಾರ ಮಾಡಿದರು. ಎಲ್ಲಾ ಜೀವಾತ್ಮದ ಅಜ್ಞಾನವನ್ನು (ಲೌಕಿಕ ಜೀವನದ ಮೆಲೆ ಆಕರ್ಶಣೆ ಮತ್ತು ಅದರ ನೈಸರ್ಗಿಕ ಗುಣವಾದ ಎಂಪೆರುಮಾನ್ಗೆ ಮಂಗಳಾಶಾಸನಮ್ (ಯೋಗಕ್ಷೇಮಕ್ಕೆ ಪ್ರಾಥಣೆ) ತೊರುವಿಕೆ) ನೊಡಿ, ಶ್ರೀ ರಾಮಾನುಜರು, ಇನ್ಥಹ ಅಜ್ಞಾನ ಜೀವಾತ್ಮದ ಮೇಲಿನ ಅಗಾಧ ಸಹಾನುಭೂತಿಇಂದ ಇದೆಲ್ಲವನ್ನು ಮಾಡಿದರು. ಮುಂದೆ ಬರುವ ಲೇಖನಗಳಲ್ಲಿ ತುಂಭಾ ವಿಶಯದಬಗ್ಗೆ ತಿಳಿದುಕೊಳ್ಳಭಹುದು.

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: http://ponnadi.blogspot.in/2015/12/simple-guide-to-srivaishnavam-pancha-samskaram.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪರಿಚಯ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

srivaishna-guruparamparai

ಶ್ರೀಮನ್ ನಾರಾಯಣನು, ತನ್ನ ಅತಿಯಾದ ಕರುಣೆಯಿಂದ, ಸಂಸಾರಿಗಳನ್ನು (ಮರಣ-ಜನನ ಎಂಬ ಸುಳಿಯಲ್ಲಿ ಸಿಲಿಕಿರುವ ಜೀವಾತ್ಮ) ಉದ್ದರಿಸಲು, ಬ್ರಹ್ಮನಿಗೆ ಸೃಷ್ಟಿಸುವ ಸಮಯದಲ್ಲಿ ಶಾಸ್ತ್ರವನ್ನು (ವೇದವನ್ನು) ತಿಳಿಯಪಡಿಸುತ್ತಾನೆ.  ವೇದವು, ವೈದಿಕರಿಗೆ ಉನ್ನತವಾದ ಪ್ರಮಾಣವು. ಪ್ರಮಾತಾ (ಆಚಾರ್ಯನ್), ಪ್ರಮೇಯವನ್ನು (ಎಮ್ಪೆರುಮಾನ್) ಪ್ರಮಾಣದಿಂದ ಮಾತ್ರ (ಶಾಸ್ತ್ರ) ನಿರ್ಧರಿಸಲಾಗುವುದು. ಎಂಬೆರುಮಾನ್ ತನ್ನ “ಅಕಿಲ ಹೇಯ ಪ್ರತ್ಯನೀಕತ್ವಮ್” (ಎಲ್ಲಾ ಕೆಟ್ಟ ಗುಣಗಳಿಗೆ ವಿರುದ್ಧ ಗುಣಗಳು) ಮತ್ತು “ಕಲ್ಯಾಣೈಕತಾನತ್ವಮ್” (ಎಲ್ಲಾ ಕಲ್ಯಾಣ ಗುಣಗಳು ಅವನಲ್ಲಿ ವಾಸವಾಗಿದೆ) ಎಂಬ ಗುಣಗಳಿಂದ ಹೇಗೆ ಬೆರೆಲ್ಲದರಿಂದ ಪ್ರತ್ಯೇಕಿಸುತ್ತಾನೊ, ಹಾಗೆಯೆ ವೇದಕ್ಕು, ಬೆರೆಲ್ಲಾ ಪ್ರಮಾಣಗಳಿಗಿಂತ ಪ್ರತ್ಯೇಕವಾದ ಗುಣಗಳಿವೆ:

 • ಅಪೌರುಶೇಯತ್ವಮ್ – ಯಾರಿಂದಲೂ, ಸೃಷ್ಟಿಸಲ್ಪಟ್ಟಿಲ್ಲಾ (ಪ್ರತಿ ಒಂದು ಸೃಷ್ಟಿಯ ಸಮಯದಲ್ಲು ಎಂಪೆರುಮಾನ್, ವೇದವನ್ನು ಬ್ರಹ್ಮನಿಗೆ ಹೇಳಿಕೊಡುತ್ತಾನೆ. ಅದನ್ನು ಮುಂದಕ್ಕೆ ಬ್ರಹ್ಮ ದೆವರು ಪ್ರಸರಿಸುತ್ತಾರೆ),  ಆದ್ದರಿಂದ, ಒಬ್ಬ ವ್ಯಕ್ತಿಯ ತಪ್ಪಾಗುವ ಅನುಭವ/ಗ್ರಹಿಕೆ ಇದರಲ್ಲಿ ಬಾರದು.
 • ನಿತ್ಯಮ್ – ಶಾಶ್ವತವಾದದು – ಆರಂಭ ಮತ್ತು ಕೊನೆ ಇಲ್ಲದ – ವೇದದ ಅಧಿಪತಿಯಾದ ಎಂಪೆರುಮನ್, ಈ ಗುಣವನ್ನು ಮತ್ತೆ ಮತ್ತೆ ತಿಳಿಸುತ್ತಾನೆ
 • ಸ್ವತ ಪ್ರಾಮಾಣ್ಯತ್ವಮ್ – ಎಲ್ಲಾ ವೇದವಾಕ್ಯವು ಸ್ವಯಂಪೂರ್ಣ – ಬೆರೇನು ಬೆಕಿಲ್ಲಾ ಇದರ ಸತ್ವವನ್ನು ಸಾಬೀತುಮಾಡಲು

ವೇದವು ಒಂದು ವ್ಯಾಪಕವಾದ ಗ್ರಂಥ. ಸಾಮಾನ್ಯ ಮನುಷ್ಯನ ಸೀಮಿತ ಜ್ಞಾನ ಅರಿತ ವೇದವ್ಯಾಸ ದೆವರು, ವೇದವನ್ನು 4 ವೇದಗಳಾಗಿ ವಿಭಜಿಸಿದರು – ಋಗ್ವೇದ , ಯಜುರ್, ಸಾಮ ಮತ್ತು ಅತರ್ವಣ ವೇದ.

ವೇದಾಂತವೆ, ವೇದದ ಸಾರ.  ಉಪನಿಷದ್ಗಳ ಸಂಗ್ರಹವೆ ವೇದಾಂತಮ್ – ಇವುಗಳು ದೇವರ (ಎಂಪೆರುಮನ್)ತುಂಬ ಆಳವಾದ ವಿಷಯವನ್ನು ತಿಳಿಸುತ್ತವೆ. ಉಪನಿಷದ್ಗಳು ಮಹಾನ್ ಋಷಿಗಳ ಕೊಡುಗೆ – ಆ ಮಹಾನ್ ಋಷಿಗಳು ಬ್ರಹ್ಮನನ್ನು (ಎಂಪೆರುಮನ್) ತುಂಬ ಧೀರ್ಗವಾಗಿ ಮತ್ತು ಬೇರೆ ಅಂಶಗಳಿಂದ ವಿಶ್ಲೇಷಿಸಿದ್ದಾರೆ. ವೇದವು, ಆರಾಧನೆಯ ವಿಧಿ ವಿಧಾನಗಳನ್ನು ತಿಳಿಸಿಕೊಡುತ್ತದೆ, ವೇದಾಂತವು-ಯಾರಿಗೆ ಆರಾಧನೆಯೊ, ಅವನ ಬಗ್ಗೆ ತಿಳಿಸಿಕೊಡುತ್ತದೆ. ಉಪನಿಷದ್ಗಳಲ್ಲಿ, ಪ್ರಾಕಾರಗಳು ಬಹಳ ಇವೆ, ಅದರಲ್ಲಿ ಪ್ರಮುಖವಾದದು:

 • ಐತರೇಯ
 • ಬ್ರುಹದಾರಣ್ಯಕ
 • ಛಾನ್ದೋಗ್ಯ
 • ಇಶ
 • ಕೇನ
 • ಕಠ
 • ಕೌಶೀದಿಕಿ
 • ಮಹಾ ನಾರಾಯಣ
 • ಮಾನ್ಡುಕ್ಯ
 • ಮುಂಡಕ
 • ಪ್ರಶ್ಣ
 • ಸುಭಾಲ
 • ಸ್ವೇತಸ್ವತಾರ
 • ತೈತ್ತ್ರಿಯ

ವೇದವ್ಯಾಸ ದೆವರ ಮತ್ತೊಂದು ಕೊಡುಗೆ – ಬ್ರಹ್ಮ ಸೂತ್ರಮ್ – ಇದು ಕೂಡ ವೇದಾಂತದ ಒಂದು ಭಾಗ – ಇದು ಉಪನಿಷದ್ಗಳ ಸಾರ. ವೇದ ಅನಂತವು, ವೇದಾಂತವನ್ನು ಅರ್ಥ ಮಡಿಕೊಳ್ಳಳು ತುಂಬ ಕಷ್ಟ (ಸಾಮನ್ಯ ಮನುಷ್ಯನ ಜ್ಞಾನ ವೇದ/ವೇದಾಂತದ ಸಾರದ ಅರ್ಥವನ್ನು ತಪ್ಪಾಗಿತಿಳಿದುಕೊಳ್ಳಳು ಸಾದ್ಯವಿದೆ).  ಅದಕ್ಕಾಗಿ, ವೇದ/ವೇದಾಂತವನ್ನು ಸ್ಮೃತಿ, ಇತಿಹಾಸ ಮತ್ತು ಪುರಾಣ.

 • ಸ್ಮೃತಿ – ಎಲ್ಲಾ ದರ್ಮ ಶಾಸ್ತ್ರಗಳ ಸಂಗ್ರಹಣೆ ಸ್ಮೃತಿ.  ಮಹಾನ್ ಋಷಿಗಳಾದ ಮನು, ವಿಷ್ಣು ಹಾರಿತ, ಯಾಗ್ಯವಲ್ಕ್ಯ..ಸಂಗ್ರಹಿಸಿರುವ ಗ್ರಂಥ
 • ಇತಿಹಾಸ – ಮಹಾಭಾರತ ಮತ್ತು ಶ್ರೀ ರಾಮಾಯಣ – ಶ್ರೀ ರಾಮಾಯಣವನ್ನು ಶರಣಾಗತಿ ಶಾಸ್ತ್ರವೆಂದು ಮತ್ತೆ ಮಾಹಾಭಾರತವನ್ನು ಪಂಚಮೋ ವೇದವೆಂದು ಪರಿಗಣಿಸಲ್ಪಟ್ಟಿದೆ
 • ಪುರಾಣ – 18 ಮುಖ್ಯವಾದ ಪುರಾಣಗಳ ಸಂಗ್ರಹ – (ಬ್ರಹ್ಮ ಪುರಾಣಮ್, ಪದ್ಮ ಪುರಾಣಮ್, ವಿಷ್ಣು ಪುರಾಣಮ್, ಇತ್ಯಾದಿ) ಮತ್ತು ಬಹುಸಂಖ್ಯೆಯ ಉಪ (ಮಿನೊರ್) ಪುರಾಣಗಳ ಸಂಗ್ರಹ (ಬ್ರಹ್ಮ ದೆವರಿಂದ). ಈ 18 ಮುಖ್ಯವಾದ ಪುರಾಣಗಳಲ್ಲಿ, ಬ್ರಹ್ಮ ದೇವರು ಹೇಳಿದಂತೆ – ಯಾವಾಗ ಬ್ರಹ್ಮ ದೇವರು ಸತ್ವ ಗುಣದಲ್ಲಿರುತ್ತಾರೊ, ಆಗ ವಿಷ್ಣುವನ್ನು ವೈಭವೀಕರಿಸುತ್ತಾರೆ, ಯಾವಾಗ ಬ್ರಹ್ಮ ದೇವರು ರಜೋ ಗುಣದಲ್ಲಿರುತ್ತಾರೊ, ಆಗ ಸ್ವಯಂ (ಅಹಮ್) ವೈಭವೀಕರಿಸುತ್ತಾರೆ, ಯಾವಾಗ ಬ್ರಹ್ಮ ದೇವರು ತಮೊ ಗುಣದಲ್ಲಿರುತ್ತಾರೊ ಆಗ ಶಿವ, ಅಗ್ನಿ, ಇತ್ಯಾದಿಯರನ್ನು ವೈಭವೀಕರಿಸುತ್ತಾರೆ.

ಇವೆಲ್ಲ ಇರವುದು ನಮ್ಮ ಜ್ಞಾನ ಬೆಳಸಿಕೊಳ್ಳಲು, ಆದರೆ ಮನುಷ್ಯ ಸಂಸಾರದ ಸಾಗರದಲ್ಲಿ ಮುಳುಗಿ, ಸಂಸಾರ ಎನ್ನುವ ಮಾಯೆಯಲ್ಲಿ ಇದ್ದಾನೆ. ಎಂಪೆರುಮನ್ ತಾನೆ ಸ್ವತಹ ಜನಿಸಿ (ಅವತಾರವೆತ್ತಿ) ಬಂದಾಗ, ಅವನ ಮೆಲೆ ಮನುಷ್ಯನಿಗೆ ಇರೊ ಅವಮರಿಯಾದೆ, ಕೊಪ, ಅವನ ಮೇಲೆ ಜಗಳ – ಇವೆಲ್ಲವನ್ನು ಅನುಭವಿಸುತ್ತಾನೆ. ಇದನ್ನು ಕಂಡ ಪರಮಾತ್ಮ, ಜೀವಾತ್ಮವನ್ನು ಸೃಷ್ಟಿಸುವುದು ಸೂಕ್ತವೆಂದು, ಕೆಲವು ಆಯ್ದ ಜೀವಾತ್ಮವನ್ನು ಸೃಷ್ಟಿಸಿ, ಅವರಿಗೆ ದೋಷವಿಲ್ಲದ ದೈವಿಕ ಜ್ಞಾನವನ್ನು ಕೊಡುತ್ತಾನೆ. ಈ ಜೀವತ್ಮಾಗಳೆ ಆಳ್ವಾರ್ಗಳಾಗಿ ಪ್ರಸಿದ್ಧವಾಗುತ್ತಾರೆ (ಆಳ್ವಾರ್ – ಭಗವಂತನ ಅನುಭವದಲ್ಲಿ ಅಭಿಯುಕ್ತರಾಗಿರುವರು ಎಂದು ಅರ್ಥ).  10 ಆಳ್ವಾರ್ಗಳಿದ್ದು, ಇವರಲ್ಲಿ ಮುಖ್ಯಸ್ಥರಾಗಿ ನಮ್ಮಾಳ್ವಾರ್ ((ಪ್ರಪನ್ನ ಕುಲ ಕೂಟಸ್ತರ್/ವೈಷ್ಣವ ಕುಲಪತಿ))- 10 ಆಳ್ವಾರ್ಗಳು:

 • ಪೊಯ್ಗೈ ಆಳ್ವಾರ್
 • ಭೂತತ್ತಾಳ್ವಾರ್
 • ಪೇಯಾಳ್ವಾರ್
 • ತಿರುಮಳ್ಹಿಸೈ ಆಳ್ವಾರ್
 • ನಮ್ಮಾಳ್ವಾರ್
 • ಕುಲಸೇಕರ ಆಳ್ವಾರ್
 • ಪೆರಿಯಾಳ್ವಾರ್
 • ತೊಣ್ಡರಡಿಪ್ಪೊಡಿ ಆಳ್ವಾರ್
 • ತಿರುಪ್ಪಾಣಾಳ್ವಾರ್
 • ತಿರುಮನ್ಗೈ ಆಳ್ವಾರ್

ಮದುರಕವಿ ಆಳ್ವಾರ್ (ನಮ್ಮಾಳ್ವಾರ್ ಶಿಷ್ಯ) ಮತ್ತು ಆಂಡಾಳ್ (ಪೆರಿಯಾಳ್ವಾರ್ ಪುತ್ತ್ರಿ), ಇವರನ್ನು ಆಳ್ವಾರ್ ಗೋಷ್ಠಿಗೆ ಸೇರಿಸಲ್ಪಟ್ಟಿದೆ. ಭಗವಂತನ ಕ್ರುಪಾಕಟಾಕ್ಷ ಮತ್ತು ದೈವಿಕ ಜ್ಞಾನ ಹೊಂದಿರುವ ಆಳ್ವಾರ್ಗಳು, ಎಂಪೆರುಮನ್/ಭಗವಂತನ ದೈವಿಕ ಜ್ಞಾನವನ್ನು ಉಪದೇಶಿಸಿದರು.  ಭಗವತ್ ಅನುಭವದಲ್ಲಿ ಮುಳಿಗಿರುವ ಆಳ್ವಾರ್ಗಳು, ಅವರ ದೃಷ್ಟಿಯು  ಎಂಪೆರುಮಾನರ ಮಂಗಳಾಶಾಸನದಮೇಲೆ.

ಜೀವಾತ್ಮಾವನ್ನು ಸಂಸಾರದಿಂದ ಮೇಲೆತ್ತಲು, ಎಂಪೆರು ಮಾನ್, ಆಚಾರ್ಯರನ್ನು ತರುತ್ತಾನೆ (ನಾತಮುನಿಗಳಿಂದ ಶುರುವಾಗಿ ಮಣವಾಳ ಮಾಮುನಿಗಳ್ (ಶ್ರೀ ವರವರಮುನಿ) ವರೆಗೆ) ಭಗವತ್ ರಾಮಾನುಜರು, ಆದಿಷೇಶನ ಅವತಾರ ವಿಶೆಷ. ಇವರು ಗುರು ಪರಂಪರೆಯ ಮದ್ಯಸ್ತಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಭಗವತ್ ರಾಮಾನುಜರು, ಶ್ರೀವೈಷ್ಣವ ಸಂಪ್ರದಾಯ ಮತ್ತು ವಿಶಿಷ್ಠಾದ್ವೈತ ಸಿದ್ದಾಂತವನ್ನು ಮಹತ್ವದ/ಅತ್ಯುನ್ನತ ಮಟ್ಟಕ್ಕೆ ಎತ್ತಿಡಿದ ಮಹಾನ್ ಆಚಾರ್ಯರು. ಮಹಾನ್ ಋಷಿಗಳನ್ನು (ಪರಾಸರ, ವ್ಯಾಸ, ದ್ರಮಿಡ, ಟಂಕ, ಇತ್ಯಾದಿ) ಅನುಕರಿಸಿದ ಭಗವತ್ ರಾಮಾನುಜರು, ವಿಶಿಷ್ಠಾದ್ವೈತ ಸಿದ್ಧಾಂತವನ್ನು ದೃಢವಾಗಿ ಪ್ರತಿಷ್ಠಿಸಿದರು. ಭಗವತ್ ರಾಮಾನುಜರು, 74 ಆಚಾರ್ಯರ್ಗಳನ್ನ, ಸಿಂಹಾಸನಾದಿಪತಿಗಳಾಗಿ ಸ್ಥಾಪಿಸಿ, ಅವರುಗಳಿಗೆ (ಸಿಂಹಾಸನಾದಿಪತಿಗಳಾಗಿ) ಮಾರ್ಗದರ್ಶನ ನೀಡಿರುತ್ತಾರೆ, ಏನೆಂದರೆ – ಯಾರಿಗೆ ಎಂಪೆರುಮಾನ್ನನ್ನು ಮತ್ತು ಆ ದೈವಿಕ/ದಿವ್ಯ ಜ್ಞಾನವನ್ನು ತಿಳಿದುಕೊಳ್ಳಲು ಆಸೆ/ಶ್ರದ್ದೆ ಇದೆಯೊ, ಅಂತವರಿಗೆ ಶ್ರೀವೈಷ್ಣವತ್ವಕ್ಕೆ ಕರೆತರಬೆಕು. ಭಗವತ್ ರಾಮಾನುಜರಿಂದಲೆ, ಈ ಸಂಪ್ರದಾಯವು ಪ್ರಸಿದ್ಧವಾಗಿ “ಶ್ರೀ ರಾಮಾನುಜ ದರ್ಶನಮ್” ಎಂದು ಕರೆಯಲ್ಪಟ್ಟಿತು. ಆನಂತರದಲ್ಲಿ, ಅವರೆ ಮತ್ತೆ “ಮಣವಾಳ ಮಾಮುನಿಗಳ್” ಆಗಿ ಅವತರಿಸಿ, ದಿವ್ಯ ಪ್ರಬಂಧ ಮತ್ತು ಅದರ ಅರ್ಥವನ್ನು ಪ್ರಚಾರಮಾಡಿದರು.

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: http://ponnadi.blogspot.in/2015/12/simple-guide-to-srivaishnavam-introduction.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

pramanam-sastram

ಕೆಲವು ಮೂಲ ಪದಗಳು (ಶ್ರಿವೈಷ್ಣವ ಪರಿಭಾಷೆ):

 • ಆಚಾರ್ಯ, ಗುರು – ಆಧ್ಯಾತ್ಮಿಕ ಗುರು – ತಿರುಮಂತ್ರ ಉಪದೇಶ ಕೊಡುವವರು
 • ಶಿಷ್ಯ – ಗುರುವಿನ ಕೆಳಗೆ ಅಭ್ಯಾಸ ಮಡುವವನು
 • ಭಗವಾನ್ / ಭಗವಂತ – ಶ್ರೀಮನ್ ನಾರಾಯಣನ್
 • ಅರ್ಚೈ/ಅರ್ಚಾ – ಎಮ್ಪೆರುಮಾನರ ದಯೆಯುಳ್ಳ/ಕರುಣಾಮಯವಾದ ದೈವಿಕ ವಿಗ್ರಹಗಳು – ದೇವಾಲದಲ್ಲಿ, ಮನೆಯಲ್ಲಿ, ಮಠದಲ್ಲಿ ಇರುವ ದೈವಿಕ ವಿಗ್ರಹಗಳು
 • ಎಮ್ಪೆರುಮಾನ್, ಪೆರುಮಾಳ್, ಈಶ್ವರ – ಭಗವಾನ್ / ಭಗವಂತ/ ನನ್ನ ಒಡೆಯ
 • ಎಮ್ಪೆರುಮಾನಾರ್ – ಶೀ ರಾಮಾನುಜ – ಭಗವಾನ್ / ಭಗವಂತ / ಎಮ್ಪೆರುಮಾನ್-ಗಿನ್ತಲು ಹೆಚ್ಚು ಸಹಾನುಭೂತಿಯುಳ್ಳವರು (ಮೇಲುಮ್ ಕರುಣೈಯುಳ್ಳವರ್)
 • ಪಿರಾನ್ – ದಯೆ / ಒಲವು ಕೊಡುವವನು – ದಯವು / ಸಾದಗಮಾಯ್ ಇರುಪ್ಪವನ್
 • ಪಿರಾಟ್ಟಿ, ತಾಯಾರ್ – ಶ್ರೀ ಮಹಾಲಕ್ಷ್ಮೀ
 • ಮೂಲವರ್ – ಎಮ್ಪೆರುಮಾನ್ ಅವರ ಪವಿತ್ರವಾದ, ಗರ್ಭಗುಡಿಯೊಳಗೆ ಸ್ಥಾಪಿಸಿರುವ ವಿಗ್ರಹ
 • ಉತ್ಸವರ್ – ಎಮ್ಪೆರುಮಾನ್ ಅವರ ಪಂಚಲೋಹ (ಬೆರೆ ಲೋಹದಲ್ಲೂ ಇರಬಹುದು) ವಿಗ್ರಹ- ಮೆರವಣಿಗೆಗೆ ಹೋಗುವ ವಿಗ್ರಹಗಳು
 • ಅಳ್ವಾರ್ಗಳು – ಸದಾ ಭಕ್ತಿಯಲ್ಲಿ ಮುಳುಗಿರುವವರು – ಭಗವಂತನ ಪರಿಪೂರ್ಣ ಆಶೀರ್ವಾದ ಹಾಗೂ ಅನುಗ್ರಹ ಪಡೆದ ವೈಷ್ಣವ ಸಂತರು. ಇವರುಗಳು ದ್ವಾಪರ ಯುಗದ ಹಂತದಿಂದ ಕಲಿ ಯುಗದ ಆರಂಭದವರೆಗೂ, ದಕ್ಷಿಣ (ಸೌತ್) ಭಾರತದಲ್ಲಿ ಜೀವಿಸಿದರು
 • ಪೂರ್ವಾಚಾರ್ಯರ್ – ಶ್ರಿಮನ್ ನಾರಾಯಣನಿಂದ ಶ್ರೀವೈಷ್ಣವ ಸಂಪ್ರದಾಯದಲ್ಲಿ ಬಂದಿರುವ ಆಧ್ಯಾತ್ಮಿಕ ಗುರುಗಳು
 • ಭಾಗವತರು, ಶ್ರೀವೈಷ್ಣವರು – ಭಗವನ್ ಶ್ರಿಮನ್ ನಾರಾಯಣನ ಸೇವಕರು
 • ಅರೈಯರ್ – ಇವರು ಶ್ರೀವೈಷ್ಣವರು – ಭಗವಂತನ ಮುಂದೆ ದಿವ್ಯ ಪ್ರಬಂಧಗಳನ್ನು ಹಾಡಿನಲ್ಲಿ ಹಾಗು ಭಾವಭಂಗಿಯಲ್ಲಿ ಹೇಳುವವರು
 • ಓರಾಣ್ ವಳಿ ಆಚಾರ್ಯರ್ಗಳು – ಕೆಲವು ಆಯ್ಕೆಯ ಆಚಾರ್ಯರ್ಗಳು – ಪೆರಿಯ ಪೆರುಮಾಳ್ ರಿಂದ ಮಣವಾಳ ಮಾಮುನಿಗಳವರೆಗೂ ಸಂಪ್ರದಾಯವನ್ನು ನಡೆಸಿಕೊಂಡು ಬಂದವರು:
  • ಪೆರಿಯ ಪೆರುಮಾಳ್
  • ಪೆರಿಯ ಪಿರಾಟ್ಟಿ
  • ಸೇನೈ ಮುದಲಿಆರ್
  • ನಮ್ಮಾಳ್ಹ್ವಾರ್
  • ನಾಥಮುನಿಗಳ್
  • ಉಯ್ಯಕ್ಕೊನ್ಡಾರ್
  • ಮಣಕ್ಕಾಲ್ ನಮ್ಬಿ
  • ಆಳವನ್ದಾರ್ (ಯಾಮುನಾಚಾರ್ಯ)
  • ಪೆರಿಯ ನಮ್ಬಿ
  • ಎಮ್ಪೆರುಮಾನಾರ್ (ಭಗವತ್ ರಾಮಾನುಜ)
  • ಎಮ್ಬಾರ್
  • ಭಟ್ಟರ್
  • ನನ್ಜೀಯರ್
  • ನಮ್ಪಿಳ್ಳೈ
  • ವಡಕ್ಕು ತಿರುವೀದಿ ಪಿಳ್ಳೈ
  • ಪಿಳ್ಳೈ ಲೋಕಾಚಾರ್ಯರ್
  • ತಿರುವಾಇಮೊಳ್ಹಿ ಪಿಳ್ಳೈ
  • ಅಳಗಿಯ ಮನವಾಳ ಮಾಮುನಿಗಳ್ (ಶ್ರೀ ವರವರಮುನಿ)
 • ದಿವ್ಯ ಪ್ರಬಂಧಮ್ – ಆಳ್ವಾರರುಗಳ ಪಾಶುರಗಳನ್ನು ಅರುಳಿಚ್ಹೆಯಲ್ ಎಂದು ಕರೆಯಲ್ಪಡುತ್ಹದೆ
 • ದಿವ್ಯ ದಂಪತಿ – ಶ್ರೀಮನ್ ನಾರಾಯಣನ್ ಮತ್ತು ಶ್ರೀ ಮಹಾಲಕ್ಷ್ಮೀ
 • ದಿವ್ಯ ದೇಶಮ್ – ಆಳ್ವಾರ್ಗಳು ವೈಭವೀಕರಿಸಿದ ಭಗವಂತನ ಕ್ಷೇತ್ರ
 • ದಿವ್ಯ ಸೂಕ್ತಿ, ಶ್ರೀ ಸೂಕ್ತಿ – ಭಗವಂತ/ಆಳ್ವಾರ್/ಆಚಾರ್ಯನ್ ಮಾತುಗಳು/ಉಪದೇಶಗಳು
 • ಅಭಿಮಾನ ಸ್ಥಳಗಳು – ಪೂರ್ವಾಚಾರ್ಯರ್ಗಳಿಗೆ ಪ್ರಿಯವಾದ ಭಗವಂತನ ಸ್ಥಳಗಳು
 • ಪಾಶುರಮ್ – ಪದ್ಯ/ಶ್ಲೋಕ
 • ಪದಿಗಮ್ – ದಶಕ(10 ಪದ್ಯಗಳ/ಪಾಶುರಮ್ ಸಂಗ್ರಹ)
 • ಪತ್ತು – ನೂರು (100 ಪಾಶುರಮ್/ಪದ್ಯಗಳ ಸಂಗ್ರಹ)

ಶ್ರೀ ವೈಷ್ಣವರು ಸಾಮಾನ್ಯವಾಗಿ ಉಪಯೊಗಿಸುವ ಪದಗಳು – ಅದರ ನಿರ್ದಿಷ್ಟ ಅರ್ಥಗಳು

 • ಕೋಯಿಲ್ – ಶ್ರೀರಂಗಂ
 • ತಿರುಮಲೈ – ತಿರುವೆಂಕಟಮ್, ತಿರುಮಾಲಿರುನ್ಚೋಲೈ
 • ಪೆರುಮಾಳ್ ಕೋಯಿಲ್ – ಕಾಂಚೀಪುರಂ
 • ಪೆರುಮಾಳ್ – ಶ್ರೀ ರಾಮ
 • ಇಳಯ ಪೆರುಮಾಳ್ – ಲಕ್ಷ್ಮಣ
 • ಪೆರಿಯ ಪೆರುಮಾಳ್ – ಶ್ರೀರಂಗನಾಥನ್ (ಮೂಲವರ್)
 • ನಮ್ಪೆರುಮಾಳ್ – ಶ್ರೀರಂಗನಾಥನ್ (ಉತ್ಸವರ್)
 • ಆಳ್ವಾರ್ – ನಮ್ಮಾಳ್ಹ್ವಾರ್
 • ಸ್ವಾಮಿ – ಶ್ರೀ ರಾಮಾನುಜ
 • ಜೀಯರ್, ಪೆರಿಯ ಜೀಯರ್ – ಮಣವಾಳ ಮಾಮುನಿಗಳ್
 • ಗುಣಮ್ – ಭಗವತ್ ಗುಣಗಳು
  • ಪರತ್ವಮ್ – ಪ್ರಾಬಲ್ಯ
  • ಸೌಲಭ್ಯಮ್ – ಸುಲಭವಾಗಿ ಲಭಿಸುವ
  • ಸೌಶೀಲ್ಯಮ್ – ಹೃದಯ ವೈಶಾಲ್ಯ
  • ಸೌಂದರ್ಯಮ್ – ದೈಹಿಕ ಸೌಂದರ್ಯ
  • ವಾತ್ಸಲ್ಯಮ್ – ವಾತ್ಸಲ್ಯ
  • ಮಾಧುರ್ಯಮ್ – ಮಾಧುರ್ಯ
  • ಕೃಪೈ, ಕರುಣೈ, ದಯಾ, ಅನುಕಂಪ – ಕರುಣೆ,ದಯೆ
 • ರೂಪಮ್ – ಆಕಾರ/ರೂಪ
 • ಸ್ವರೂಪಮ್ – ಸ್ವಭಾವ
 • ಮೋಕ್ಷಮ್ – ಮೋಕ್ಷ – ಸಂಸಾರ ಬಂಧನದಿಂದ ಬಿಡುಗಡೆ.
  • ಭಗವತ್ ಕೈಂಕರ್ಯ ಮೋಕ್ಷಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೆಲೆ ಶಾಶ್ವತವಾಗಿ ಪರಮಪದದಲ್ಲಿ ಸೇವೆಯಲ್ಲಿ ತೊಡಗಿರುವುದು.
  • ಕೈವಲ್ಯಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಸ್ವಯಂ ಸ೦ತೋಷದಲ್ಲಿ ಕಳೆಯುವುದು
 • ಕರ್ಮ – ಕ್ರಿಯೆ – ಪುಣ್ಯ / ಪಾಪ ಎಂತಲೂ ಅರ್ಥ
 • ಶಾಸ್ತ್ರಮ್ – ನಮ್ಮ ದಿನ ನಿತ್ಯ ಕರ್ಮ/ಕ್ರಿಯೆಗಳಿಗೆ ಮಾರ್ಗದರ್ಶನ ಕೊಡುವ ಅಧಿಕೃತ ಗ್ರಂಥಗಳು – ವೇದ, ವೇದಾಂತ, ಪಂಚರಾತ್ರಮ್, ಇತಿಹಾಸ, ಪುರಾಣ, ಆಳ್ವಾರ್ ದಿವ್ಯ ಪ್ರಬಂಧಗಳು, ಆಚಾರ್ಯರ್ಗಳ ಕೃತಿಗಳು– ಸ್ತೋತ್ರ, ವ್ಯಾಖ್ಯಾನ
 • ಕರ್ಮ ಯೋಗಮ್, ಜ್ಞಾನ ಯೋಗಮ್, ಭಕ್ತಿ ಯೋಗಮ್ – ಭಗವಂತನನ್ನು ಸೇರಲು ಮಾರ್ಗ
 • ಪ್ರಪತ್ತಿ, ಶರಣಾಗತಿ – ಶರಣಾಗತಿ – ಭಗವಂತನೆ ಉಪಾಯ
 • ಆಚಾರ್ಯ ನಿಷ್ಟೈ – ಪ್ರಪನ್ನನು ಆಚಾರ್ಯರ ಪಾದ ಕಮಲದಲ್ಲಿ ಆಶ್ರಯ ಪಡೆದಿರುವುದರಿಂದ ಅವರನ್ನು ಆಚಾರ್ಯ ನಿಷ್ಟರ್ಗಳೆಂದು ಕರೆಯುವರು
 • ಆಚಾರ್ಯ ಅಭಿಮಾನಮ್ – ಆಚಾರ್ಯರ ಅಭಿಮಾನ ಪಡೆಯುವುದು
 • ಪಂಚ ಸಂಸ್ಕಾರಮ್ (ಸಮಾಶ್ರಯಣಮ್) – ನಮ್ಮನ್ನು ಸಂಸಾರ ಮತ್ತು ಪರಮಪದ ಕೈಂಕರ್ಯ/ಸೇವೆಗೆ ಸಿದ್ಧಪಡಿಸಲು ನಡೆಯುವ ಶುದ್ಧೀಕರಣ ಪ್ರಕ್ರಿಯೆ. ಇದರಲ್ಲಿ ಕೆಳಗಿನ ವಿಷಯಗಳು ಒಳಗೊಂಡಿದೆ:
  • ತಾಪ (ಬಿಸಿ)- ಶಂಖ ಚಕ್ರ ಲಾಂಚನಮ್ – ನಮ್ಮ ಭುಜದ ಮೇಲೆ ಇಡುವ ಶಂಖ ಚಕ್ರ ಮುದ್ರಣ. ನಾವು ಎಂಬೆರುಮಾನಾರ್ ಸ್ವತ್ತು ಎಂದು ಗುರುತಿಸಬಲ್ಲದು.
  • ಪುಣ್ಡ್ರ (ಚಿಹ್ನೆ) – ದ್ವಾದಶ ಊರ್ಧ್ವ ಪುಣ್ಡ್ರ ಧಾರಣಮ್ – ದೇಹದ 12 ಅಂಗಾಂಗಗಳಲ್ಲಿ ತಿರುಮಣ್ ಮತು ಶ್ರೀಚೂರ್ಣವನ್ನು ಧರಿಸಿಕೊಳ್ಳುವುದು.
  • ನಾಮ (ಹೆಸರು) – ದಾಸ್ಯ ನಾಮಮ್ – ಆಚಾರ್ಯರ್ ಹೊಸ ಹೆಸರನ್ನು ಇಡುವುದು – ರಾಮಾನುಜ ದಾಸನ್, ಶ್ರಿವೈಷ್ಣವ ದಾಸನ್, ಮಧುರಕವಿ ದಾಸನ್.
  • ಮಂತ್ರ – ಮಂತ್ರೋಪದೇಶಮ್ – ಆಚಾರ್ಯರಿಂದ ರಹಸ್ಯ ಮಂತ್ರೋಪದೇಶ ಪಡೆಯುವುದು – ಮಂತ್ರ ಎಂದರೆ ದುಃಖ/ಸಂಕಟವನ್ನು ಶಮನಗೊಳಿಸುವ ಶಕ್ತಿ. ಕೆಳಗಿನ 3 ರಹಸ್ಯ ಮಂತ್ರಗಳು ನಮ್ಮನ್ನು ಸಂಸಾರ ಬಂಧನದಿಂದ ಬಿಡುಗಡೆ ಮಾಡುತ್ತದೆ:
   • ತಿರುಮಂತ್ರಮ್
   • ದ್ವಯಮ್
   • ಚರಮಶ್ಲೋಕಮ್
  • ಯಾಗ – ದೇವ ಪೂಜಾ – ತಿರುವಾರಾಧನ ಕ್ರಮವನ್ನು ಕಲಿಯುವುದು
  • ಹೆಚ್ಚಿನ ವಿವರಗಳಿಗಾಗಿ – http://ponnadi.blogspot.in/2015/12/rahasya-thrayam.html
 • ಕೈಂಕರ್ಯಮ್ – ಭಗವಾನ್, ಆಳ್ವಾರ್, ಆಚಾರ್ಯನ್, ಭಾಗವತರ ಸೇವೆ
 • ತಿರುವಾರಾಧನಮ್ – ಎಮ್ಪೆರುಮಾನ್ ಪೂಜೆ
 • ತಿರುವುಳ್ಳಮ್ – ದೈವಿಕ ಹೃದಯ / ಬಯಕೆ
 • ಶೇಷಿ – ಒಡೆಯ/ಯಜಮಾನ
 • ಶೇಷ – ಸೇವಕ
 • ಶೇಷತ್ವಮ್ – ಎಂಪೆರುಮಾನ್ ಸೇವೆಗೆ ಸಿದ್ಧವಾಗಿ ಇರುವುದು
 • ಪಾರತಂತ್ರಿಯಮ್ – ಎಂಬೆರುಮಾನ್ (ಭಗವಂತ) ಸೇವೆಗೆ ಸಂಪೂರ್ಣವಾಗಿ ಮೀಸಲಾಗಿರುವುದು
 • ಸ್ವಾತಂತ್ರಿಯಮ್ – ಸ್ವತಂತ್ರ
 • ಪುರುಷಕಾರಮ್ – ಶಿಫಾರಸು/ಸೂಚನೆ/ಸಮಾಧಾನ – ಅರ್ಹತೆ ಇಲ್ಲದ ಜೀವಾತ್ಮಾವನ್ನು ಒಪ್ಪಿಕೊಳ್ಳಲು ಶ್ರೀ ಮಹಾಲಕ್ಷ್ಮೀ ಅಮ್ಮನವರು (ತಾಯಾರ್), ಎಂಪೆರುಮಾನಿಗೆ (ಭಗವಂತ) ಶಿಫಾರಸು ಮಾಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆಚಾರ್ಯರನ್ನು ಶ್ರೀ ಮಹಾಲಕ್ಷ್ಮೀ ಅಮ್ಮನವರ (ತಾಯಾರ್) ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇದನ್ನು ಯಾರು ನಿರ್ವಹಿಸುತ್ತಾರೋ, ಅವರಿಗೆ ಕೆಳಗಿನ 3 ಗುಣಗಳು ಇರಬೆಕು:
  • ಕೃಪೈ – ಬಳಲುತ್ತಿರುವ ಜೀವಾತ್ಮಗಳ ಮೇಲೆ ಕರುಣೆ.
  • ಪಾರತಂತ್ರಿಯಮ್ – ಎಂಪೆರುಮಾನ್ (ಭಗವಂತ) ಸೇವೆಗೆ ಸಂಪೂರ್ಣವಾಗಿ ಆಶ್ರಿತಸ್ಥಿತಿಯಲ್ಲಿ ಇರುವುದು.
  • ಅನನ್ಯಾರ್ಹತ್ವಮ್ – ಸಂಪೂರ್ಣವಾಗಿ ಎಂಪೆರುಮಾನ್ (ಭಗವಂತ) ಸೇವೆಗೆ ಮೀಸಲಾಗಿರುವುದು
 • ಅನ್ಯ ಶೇಷತ್ವಮ್ – ಯಾರಿಗಾದರೂ ಸೇವೆ ಮಾಡುವುದು (ಎಂಪೆರುಮಾನ್ (ಭಗವಂತ) ಮತ್ತು ಭಾಗವತರನ್ನು ಬಿಟ್ಟು)
 • ವಿಷಯಾಂತರಮ್ – ಲೌಕಿಕ ಸಂತೋಷಗಳು/ವಿಶಯಗಳು
 • ದೇವತಾಂತರಮ್ – ಬೇರೆ/ಇತರ ಜೀವಾತ್ಮವನ್ನು ದೇವಾ ಎಂದು ತಪ್ಪಾಗಿ ತಿಳಿದುಕೊಳ್ಳುವುದು (ಎಂಪೆರುಮಾನ್ (ಭಗವಂತ) ) ಈ ಲೌಕಿಕ ಪ್ರಪಂಚವನ್ನು ಸುಗಮವಾಗಿ ಕಾರ್ಯಮಾಡಲು ಅನೇಕ ಜೀವಾತ್ಮವನ್ನು ನೇಮಕ ಮಾಡಿದ್ಹಾನೆ. ಅವರುಗಳು ಕೂಡ ಕರ್ಮಾನುಸಾರವಾಗಿ ಈ ಲೌಕಿಕ ಪ್ರಪಂಚಕ್ಕೆ ಬದ್ಧರಾಗಿರುತ್ತಾರೆ
 • ಸ್ವಗತ ಸ್ವೀಕಾರಮ್ – ಎಂಪೆರುಮಾನ್ (ಭಗವಂತ)/ಆಚಾರ್ಯರನ್ನು ಒಪ್ಪಿಕೊಳ್ಳುವುದು
 • ಪರಗತ ಸ್ವೀಕಾರಮ್ – ಭಗವಾನ್/ಆಚಾರ್ಯ ಅವರ ಸ್ವೈಚ್ಚೆ ಇಂದ ನಮ್ಮನ್ನು ಒಪ್ಪಿಕೊಳ್ಳುವುದು..
 • ನಿರ್ಹೇತುಕ ಕ್ರುಪಾ – ಜೀವಾತ್ಮನ ಪ್ರಚೋದನೆ ಇಲ್ಲದೆ ಭಗವಂತನ ನಿರಂತರ ಕರುಣೆ
 • ಸಹೇತುಕ ಕ್ರುಪಾ – ಜೀವಾತ್ಮನ ಸ್ವಂತ ಪ್ರಯತ್ನದಿಂದ ಭಗವಂತನ ನಿರಂತರ ಕರುಣೆಗೆ ಪ್ರಚೋದಿಸುವುದು
 • ನಿತ್ಯ – ನಿತ್ಯ ಸೂರಿಯರು – ಪರಮಪದದಲ್ಲಿ ಎಮ್ಪೆರುಮಾನ್ ಸೇವೆ ಸದಾಕಾಲ ನಿರಂತರವಾಗಿ ಮಾಡುವವರು. ಆವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
 • ಮುಕ್ತ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡು ಕ್ರಮೇಣ ಕರ್ಮಗಳಿಂದ ಮುಕ್ತನಾಗಿ ಪರಮಪದವನ್ನು ಸೇರುವ ಜೀವಾತ್ಮ. ಇದರಿಂದ ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
 • ಬದ್ದ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡಿರುವವರು – ಸಂಸಾರಿ
 • ಮುಮುಕ್ಷು – ಮೋಕ್ಷವನ್ನು ಇಚ್ಚೇ ಪಡುವವರು
 • ಪ್ರಪನ್ನ – ಎಂಪೆರುಮಾನ್/ಭಗವಂತನಿಗೆ ಶರಣಾಗತನಾಗಿರುವವ:
  • ಆರ್ತ ಪ್ರಪನ್ನ – ಲೌಕಿಕ ಪ್ರಪಂಚದ ದುಃಖಗಳಿಂದ ಒಮ್ಮೆಗೆ ಬಿಡುಗಡೆ/ಮುಕ್ತಿ ಒಂದಬೇಕು ಎಂಬ ಇಇಚ್ಚೇ ಉಳ್ಳವವರು
  • ದ್ರುಪ್ತ ಪ್ರಪನ್ನ – ಭಗವಂತನಲ್ಲಿ ಶರಣಾಗತಿಯಾಗಿ, ಭಗವಂತನಿಗೂ ಮತ್ತು ಭಾಗವತರಿಗೂ ಸ್ವಲ್ಪ ಕಾಲ ಈ ಲೌಕಿಕ ಪ್ರಪಂಚದಲ್ಲಿ ಸೇವೆ ಮಾಡಿ, ನಂತರ ಕ್ರಮೇಣ ಪರಮಪದದಲ್ಲಿ ಸೇವೆ ಮಾಡಲು ಇಚ್ಚೇ ಉಳ್ಳವರು
 • ತೀರ್ಥಮ್ – ಪವಿತ್ರ ತೀರ್ಥ
 • ಶ್ರೀಪಾದ ತೀರ್ಥಮ್ – ಚರಣಾಮ್ರುತಮ್ – ಆಚಾರ್ಯನ್ ಕಮಲ ಪಾದಗಳನ್ನು ತೊಳೆದಿರುವ ನೀರು/ತೀರ್ಥ
 • ಭೋಗಮ್ – ಭಗವಂತನಿಗೆ ನೈವೆದ್ಯಕ್ಕೆ ಇರುವ ಆಹಾರ (ಅಥವಾ ಯಾವುದಾದರು ತಿನ್ನುವ ಪದಾರ್ಥ)
 • ಪ್ರಸಾದಮ್ – ಭಗವಂತನಿಗೆ ನೈವೆದ್ಯವಾಗಿರುವ ಆಹಾರ. ಇದನ್ನು ತರುವಾಯ ಶ್ರೀವೈಶ್ಣವರು ಸೇವಿಸುತ್ಹಾರೆ
 • ಉಚ್ಚಿಶ್ಟಮ್ – ಉಳಿದಿರುವ ಪ್ರಸಾದಮ್ – ವಿನಿಯೋಗವಾಗಿ ಉಳಿದಿರುವ ಪ್ರಸಾದ – ಮತ್ತವರು ಉಂಡು ಉಳಿದಿರುವ ಪ್ರಸಾದವೆಂದು ಅರ್ಥವಾಗುತ್ತದೆ. ಸಂದರ್ಭವನ್ನು ನೋಡಿ ಅರ್ಥವನ್ನು ತಿಳಿಯಬೆಕು
 • ಪಡಿ – ಭೋಗಮ್
 • ಸಾತ್ತುಪ್ಪಡಿ – ತೇದ ಶ್ರೀಗಂಧ
 • ಶಟಾರಿ, ಶ್ರೀ ಸಟಕೋಪಮ್, ಇತ್ಯಾದಿ.. – ಶ್ರೀಮನ್ ನಾರಾಯಣನ ಪಾದ ಕಮಲಗಳು. ನಮ್ಮಾಳ್ವಾರರನ್ನು ಶ್ರೀ ಸಟಕೋಪಮ್ ಎಂದು ಕರೆಯಲಾಗುತ್ತದೆ. ಅವರನ್ನು ಎಂಪೆರುಮಾನ್ ಪಾದ ಕಮಲಗಳೆಂದು ಪರಿಗಣಿಸಲಾಗಿದೆ
  ಮದುರಕವಿಗಳ್ – ನಮ್ಮಾಳ್ಹ್ವಾರ್ ಪಾದ ಕಮಲ.

  • ಶ್ರೀ ರಾಮಾನುಜಮ್ – ನಮ್ಮಳ್ವಾರರ ಪಾದ ಕಮಲ ಆಳ್ವಾರ್ ತಿರುನಗರಿಯಲ್ಲಿ
  • ಶ್ರೀ ರಾಮಾನುಜಮ್ – ಎಲ್ಲಾ ಆಳ್ವಾರರ ಪಾದ ಕಮಲ
  • ಮುದಲಿಯಾಣ್ಡಾನ್ – ಶ್ರೀ ರಾಮಾನುಜರ ಪಾದ ಕಮಲ
  • ಪೊನ್ನಡಿಯಾಮ್ ಸೆನ್ಕಮಲಮ್ – ಮಾಮುನಿಗಳ ಪಾದ ಕಮಲ
  • ಸಾಮಾನ್ಯವಾಗಿ ಪಟ್ಟ/ವಿಶ್ವಾಸಉಳ್ಳ ಶಿಶ್ಯನನ್ನು ಗುರುಗಳ ಪಾದ ಕಮಲವೆಂದು ಪರಿಗಣಿಸಲಾಗುತ್ತದೆ. ಉದಾಹರಣೆ: ಪರಾಸರ ಭಟ್ಟರ್ ಎಮ್ಬಾರರ ಪಾದ ಕಮಲ, ನನ್ಜೀಯರ್ ಭಟ್ಟರರ ಪಾದ ಕಮಲ, ನಂಪಿಳ್ಳೈ ನನ್ಜೀಯರರ ಪಾದ ಕಮಲ, ಇತ್ಯಾದಿ…
 • ವಿಭೂತಿ – ಸಂಪತ್ತು/ಸಿರಿ
 • ನಿತ್ಯ ವಿಭೂತಿ – ಪರಮಪದಮ್/ಶ್ರೀವೈಕುಂಟಮ್
 • ಲೀಲಾ ವಿಭೂತಿ – ಸಂಸಾರ – ಲೌಕಿಕ ಸಂತೋಷಗಳು/ ಲೌಕಿಕ ಪ್ರಪಂಚ
 • ಅಡಿಯೇನ್, ದಾಸನ್ – ನಾನು/ನನ್ನ ಅನ್ನುವ ಬದಲಿಗೆ ವಿನಮ್ರವಾಗಿ ಹೇಳುವುದು
 • ದೇವರೀರ್, ದೇವರ್, ಶ್ರೀಮಾನ್ – ಮತ್ಹೊಬ್ಬ ಶ್ರಿವೈಶ್ನವರನ್ನು ಕರೆಯುವ ವಿಧಿ – ನಿಮ್ಮ ಕೃಪೆ
 • ಎಳ್ಹುನ್ದರಳುತಲ್ – ಬರಬೆಕು, ಕುಳಿತುಕೊಳ್ಳಬೆಕು
 • ಕಣ್ ವಳರುತಲ್ – ನಿದ್ರಾವಸ್ಥೆ
 • ನೀರಾಟ್ಟಮ್ – ಸ್ನಾನ
 • ಶಯನಮ್ – ವಿರಮಿಸು
 • ಶ್ರೀಪಾದಮ್ – ಪಲ್ಲಕ್ಕಿಯಲ್ಲಿ ಭಗವಾನ್/ಆಳ್ವಾರ್/ಆಚಾರ್ಯರನ್ನು ಒಯ್ಯುವುದು
 • ತಿರುವಡಿ – ಪಾದ ಕಮಲ (ಹನುಮಂತ ಎಂದು ಆಗುತ್ತದೆ)
 • ವ್ಯಾಖ್ಯಾನಮ್ – ವ್ಯಾಖ್ಯಾನ
 • ಉಪನ್ಯಾಸಮ್ – ಉಪನ್ಯಾಸ
 • ಕಾಲಕ್ಷೇಪಮ್ – ಗ್ರಂಥಗಳಲ್ಲಿ ಇರುವುದನ್ನು ಓಧಿ, ಅಧರ ಮೂಲ ಪಠ್ಯದ ಆಧಾರದಮೆಲೆ, ಅರ್ಥ ಮತ್ತು ವಿವರಣೆಯನ್ನು ಕೊಡುವುದು
 • ಅಶ್ಟ ದಿಗ್ಗಜರ್ – ಶಿಷ್ಯರನ್ನು ಶ್ರೀವೈಶ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಮಣವಾಳ ಮಾಮುನಿಗಳವರು 8 ಆಚಾರ್ಯರ್ಗಳನ್ನು ಸ್ಥಾಪಿಸಿದರು.
 • 74 ಸಿಂಹಾಸನಾಧಿಪತಿ – ಶಿಷ್ಯರನ್ನು ಶ್ರೀವೈಶ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಶ್ರಿ ರಾಮಾನುಜರು 74 ಆಚಾರ್ಯರ್ಗಳನ್ನು ಸ್ಥಾಪಿಸಿದರು.

ತತ್ವಶಾಸ್ತ್ರದ ಸಂಬಂಧಿತ ಪದಗಳು:

 • ವಿಸಿಶ್ಟಾದ್ವೈತಮ್ – ಬ್ರಹ್ಮಮ್ (ಭಗವಾನ್)/ ಭಗವಂತನ ಚಿತ್ ಮತ್ತು ಅಚಿತ್ ಲಕ್ಷಣಗಳನ್ನು ವಿವರಿಸುವ ತತ್ವಶಾಸ್ತ್ರ
 • ಸಿದ್ಧಾಂತಮ್ – ಸಿದ್ಧಾಂತ
 • ಮಿತುನಮ್ – ದ೦ಪತಿಗಳು – ಪೆರುಮಾಳ್ ಮತ್ತು ಪಿರಾಟ್ಟಿ
 • ಏಕಾಯನಮ್ – ನಾರಾಯಣನ ಶ್ರಿಯ:ಪತಿತ್ವಕ್ಕೆ (ಶ್ರೀ ಮಹಾಲಕ್ಷ್ಮೀ ಅಮ್ಮನವರ ಒಡೆಯ) ಪ್ರಾಮುಖ್ಯತೆ ನೀಡದೆ, ಅವನ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದು
 • ಮಾಯಾವಾದಮ್ –
 • ಆಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳುವವರು
 • ನಾಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
 • ಭಾಹ್ಯ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
 • ಕುದ್ರುಶ್ಟಿ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಂಡು, ಅನುಕೂಲಕ್ಕೆತಕ್ಕಂತೆ ತಪ್ಪು ಅರ್ಥಕೊಡುವುದು
 • ಆಪ್ತ – ನಂಬಲರ್ಹ ಮೂಲ/ಜೊತೆ
 • ಪ್ರಮಾ – ಮಾನ್ಯ ಜ್ಞಾನ
 • ಪ್ರಮೇಯಮ್ – ಮಾನ್ಯ ಜ್ಞಾನದ ವಸ್ತು
 • ಪ್ರಮಾತಾ – ಮಾನ್ಯ ಜ್ಞಾನವನ್ನು ಕೊಡುವವರು
 • ಪ್ರಮಾಣಮ್ – ಮಾನ್ಯ ಜ್ಞಾನವನ್ನು ಪಡೆಯವ ರೀತಿ/ಮಾರ್ಗ
  • ಪ್ರತ್ಯಕ್ಷಮ್ – ಇಂದ್ರಿಯಗಳಿಂದ ನೇರ ವೀಕ್ಷಣೆಯನ್ನು ಪಡೆಯುವುದು
  • ಅನುಮಾನಮ್ – ಹಿಂದಿನ ವೀಕ್ಷಣೆಯ ಆಧಾರದಮೇಲೆ ಪಡೆದ ಜ್ಞಾನ
  • ಶಬ್ದಮ್ – ಶಾಸ್ತ್ರಗಳು ಹೆಳಿರುವ ಪದಗಳು/ವಾಕ್ಯಗಳು
 • ತತ್ವ ತ್ರಯಮ್ – ಪ್ರಪನ್ನನು ತಿಳಿದುಕೊಳ್ಳಬೆಕಾದ 3 ವಾಸ್ತವಿಕತೆ
  • ಚಿತ್, ಚೇತನಮ್, ಜೀವಾತ್ಮಾ – ಆತ್ಮ, ಚೇತನ, ಜೀವಾತ್ಮಾ
  • ಅಚಿತ್, ಅಚೇತನಮ್, ಪ್ರಕ್ರುತಿ – ಭೌತಿಕ ವಸ್ತು, ನಿರ್ಜೀವ
  • ಈಶ್ವರ – ಭಗವಾನ್ ಶ್ರೀಮನ್ ನಾರಾಯಣನ್.
  • ಹೆಚ್ಚಿನ ವಿವರಗಳಿಗಾಗಿ – http://ponnadi.blogspot.in/p/thathva-thrayam.html
 • ರಹಸ್ಯ ತ್ರಯಮ್- 3 ರಹಸ್ಯ ಮಂತ್ರಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವ ಮಂತ್ರಗಳು (ಹೆಚ್ಚಿನ ವಿವರಗಳಿಗಾಗಿ – http://ponnadi.blogspot.com/2015/12/rahasya-thrayam.html).
  • ತಿರುಮಂತ್ರಮ್ – ಅಶ್ಟಾಕ್ಷರ ಮಹಾ ಮಂತ್ರ
  • ದ್ವಯಮ್- ದ್ವಯ ಮಹಾ ಮಂತ್ರಮ್
  • ಚರಮ ಸ್ಲೋಕಮ್- “ಸರ್ವ ದರ್ಮಾನ್ ಪರಿತ್ಯಜ್ಯ…” ಗೀತಾ ಸ್ಲೋಕ. ರಾಮ ಚರಮ ಸ್ಲೋಕ (ಸಕ್ರುದೇವ ಪ್ರಪನ್ನಾಯ) ಮತ್ತು ವರಾಹ ಚರಮ ಸ್ಲೋಕ (ಸ್ತಿತೇ ಮನಸಿ).
 • ಅರ್ತ ಪಂಚಕಮ್ – 5 ಅಗತ್ಯಯುಳ್ಳ ತತ್ವಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವರು (ಹೆಚ್ಚಿನ ವಿವರಗಳಿಗಾಗಿ – http://ponnadi.blogspot.com/2015/12/artha-panchakam.html).
  • ಜೀವಾತ್ಮಾ- ಚೇತನಾತ್ಮಕ
  • ಪರಮಾತ್ಮಾ – ಭಗವಾಂತ
  • ಉಪೇಯಮ್, ಪ್ರಾಪ್ಯಮ್ – ಸಾಧಿಸಬೆಕಾದ ಗುರಿ – ಕೈಂಕರ್ಯಮ್
  • ಉಪಾಯಮ್ – ಗುರಿಯನ್ನು ಸಾಧಿಸಲು ಹಿಡಿದಿರುವ/ಉಪಯೊಗಿಸುವ ಮಾರ್ಗ
  • ವಿರೋಧಿ – ಗುರಿಯನ್ನು ಸಾಧಿಸುವಾಗ ಬರುವ ಅಡಚಣೆಗಳು
 • ಆಕಾರ ತ್ರಯಮ್ – ಜೀವಾತ್ಮಾ ಅವಶ್ಯವಾಗಿ ತಿಳಿದುಕೊಳ್ಳಬೆಕಾದ 3 ಗುಣಗಳು:
  • ಅನನ್ಯ ಸೇಶತ್ವಮ್ – ಭಗವಂತನೊಬ್ಭನೆ ಒಡೆಯನೆಂದು ಒಪ್ಪಿಕೊಳ್ಳುವುದು
  • ಅನನ್ಯ ಶರಣತ್ವಮ್ – ಭಗವಂತನೊಬ್ಭನೆ ಆಶ್ರಯ
  • ಅನನ್ಯ ಭೋಗ್ಯತ್ವಮ್ – ಭಗವಂತನೊಬ್ಭನೆ ಸಂತೋಶವನ್ನು ಅನುಭವಿಸುವುದು
 • ಸಾಮಾನಾದಿಕರಣ್ಯಮ್- ಒಂದು ಅಥವಾ ಹೆಚ್ಚಿನ ಲಕ್ಷಣ/ಗುಣಗಳಿಗೆ ಒಂದೇ ತಳಹದಿ/ಆಧಾರ ಹೊಂದಿರುವುದು. ಉದಾಹರಣೆ: ಮ್ರುದ್ ಗಟಮ್ (ಮಣ್ಣಿನ ಮಡಿಕೆ) – ಮಡಿಕೆ ಆಧಾರ, ಮಣ್ಣು ಮತ್ಹು ಮಡಿಕೆ 2 ಲಕ್ಷಣಗಳು. ಮತ್ತೊಂದು ಉದಾಹರಣೆ: “ಶುಕ್ಲ: ಪಟ:” (ಬಿಳಿ ಬಟ್ಟೆ) – ಬಟ್ಟೆ ಆಧಾರವಾಗುವುದು, ಇದರಲ್ಲಿ 2 ಗುಣ/ಲಕ್ಷಣ ಇದೆ “ಬಿಳಿ” & “ಬಟ್ಟೆ”. ಸಾಮಾನಾದಿಕರಣ್ಯಮ್ ಎನ್ನುವುದು ಒಂದು ವಿವರವಾದ ವಿಷಯ, ಸಂಸ್ಕ್ರುತ ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
 • ವೈಯದಿಕರಣ್ಯಮ್ – ಎರಡು ಅಥವಾ ಹೆಚ್ಚಿನ ಅಂಶಗಳಿಗೆ ವಿವಿಧ ಆಧಾರ/ತಳಹದಿಗಳು. ಇದು ವಿವರವಾದ ವಿಷಯ, ಸಂಸ್ಕ್ರುತ ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
 • ಸಮಶ್ಟಿ ಸೃಷ್ಟಿ – ಭಗವಂತನು ಪಂಚ ಭೂತಗಳಿಂದ ಸೃಷ್ಟಿ ಮಾಡಿ, ಅದಕ್ಕೆ ಬ್ರಹ್ಮನಾಗಿ/ಬ್ರಹ್ಮನಂತೆ ಜೀವಾತ್ಮವನ್ನು ಇಡುತ್ತಾನೆ. ಇಲ್ಲಿಯವರೆಗೆ ಸಮಶ್ಟಿ ಸೃಷ್ಟಿ ಎಂದು ಕರಿಯಲ್ಪಡುತ್ತದೆ.
 • ವ್ಯಶ್ಟಿ ಸೃಷ್ಟಿ – ಭಗವಂತನು ಬ್ರಹ್ಮನಿಗೆ, ಋಷಿಗಳಿಗೆ,ಇತ್ಯಾದಿ.., ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದುಕೊಂಡು) ವಿವಿಧವರ್ಣದ ರೂಪಗಳನ್ನು ಒಂದಿರುವ ಸೃಷ್ಟಿಗಳನ್ನು ಸೃಷ್ಟಿಸಲು ಅಧಿಕಾರ ನೀಡುವನು.
 • ವ್ಯಶ್ಟಿ ಸಂಹಾರಮ್- ಭಗವಂತನು ರುದ್ರರಿಗೆ (ಶಿವ), ಅಗ್ನಿ ದೆವರಿಗೆ, ಇತ್ಯಾದಿ, ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದುಕೊನ್ಡು) ನಾಶಮಾಡುವ ಅಧಿಕಾರ ನೀಡುವನು
 • ಸಮಶ್ಟಿ ಸಂಹಾರಮ್ – ಭಗವಂತನೆ ಎಲ್ಲಾ ಪಂಚ ಭೂತಗಳಿಂದ ಸೃಷ್ಟಿಸಿರುವ ಸೃಷ್ಟಿಯನ್ನು ಮತ್ತಿತರ ಎಲ್ಲಾ ಸೃಷ್ಟಿಗಳನ್ನು ತಾನೆ ನಾಶಪಡುವನು

ಹೆಚ್ಚಿನ ವಿವರಗಳಿಗೆ: http://kaarimaaran.com/downloads.html

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: https://srivaishnavagranthams.wordpress.com/readers-guide/

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org