Monthly Archives: December 2021

ಪಿಳ್ಳೈ ಲೋಕಾಚಾರ್‍ಯರ ತತ್ತ್ವ ತ್ರಯದ ಪರಿಚಯ

ಶ್ರೀಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ ವರವರ ಮುನಯೇ ನಮಃ  ಶ್ರೀ ವಾನಾಚಲ ಮಹಾಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಶೀರ್ಷಿಕೆ

ನಾವು ಈಗ ಅಪೂರ್ವ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್ಯರ ಬಗ್ಗೆ ಒಂದು ನೋಟ ಹರಿಸೋಣ ಮತ್ತು ಅವರ ದಿವ್ಯ ಸಾಹಿತ್ಯವಾದ ತತ್ತ್ವ ತ್ರಯಮ್ ಅನ್ನು ಮತ್ತು ಇಂತಹ ಅದ್ಭುತ ಕೃತಿಗೆ ಮಣವಾಳ ಮಾಮುನಿಗಳ್ ಬರೆದಿರುವ ಅತ್ಯಂತ ಸುಂದರವಾದ ವ್ಯಾಖ್ಯಾನ ಅವತಾರಿಕಾ (ವ್ಯಾಖ್ಯಾನದ ಪರಿಚಯ) ವನ್ನು ಗಮನಿಸೋಣ.

ಎಂಪೆರುಮಾನಾರ್ ಪಿಳ್ಳೈ ಲೋಕಾಚಾರ್‍ಯರ್ ಮತ್ತು ಮನವಾಳ ಮಾಮುನಿಗಳ್

ತತ್ತ್ವ ತ್ರಯಮ್‍, ಕುಟ್ಟಿಭಾಷ್ಯವೆಂದೂ  ಪ್ರಸಿದ್ಧಿಯಾಗಿದೆ. (ಶ್ರೀಭಾಷ್ಯಮ್‍ನ ಒಂದು ಚಿಕ್ಕದಾದ ನಿರೂಪಣೆ) . ಎಂಪೆರುಮಾನಾರರು ಬ್ರಹ್ಮ ಸೂತ್ರಮ್‍ಗೆ ಬಹಳ ವಿಸ್ತಾರವಾದ ವಿವರಣೆಯನ್ನು ನೀಡಿದ್ದಾರೆ. ಇದು ಶ್ರೀಭಾಷ್ಯಮ್ ಎಂದೇ ಪ್ರಸಿದ್ಧವಾಗಿದೆ. ಮತ್ತು ಎಂಪೆರುಮಾನಾರರು ಶ್ರೀ ಭಾಷ್ಯಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಏಕೆಂದರೆ, ಇದು ನಮ್ಮ ವಿಶಿಷ್ಟಾದ್ವೈತ ಸಿದ್ಧಾಂತದ ಎಲ್ಲಾ ಬಹು ಅತ್ಯಗತ್ಯವಾದ ತತ್ತ್ವಗಳನ್ನೂ ಅತ್ಯಂತ ಸರಳವಾಗಿ ಸೂತ್ರಗಳನ್ನು ಸ್ಥೂಲವಾದ ಚಿತ್ರಣವನ್ನು ತಮಿೞಿನಲ್ಲಿ ಹೊಂದಿದೆ. ಈ ಗ್ರಂಥವು ಮೂರು ಮೂಲಾಧಾರವಾದ ತತ್ತ್ವಗಳನ್ನು ವಿವರಿಸಿದೆ. ಅವುಗಳು ಚಿತ್ (ಜೀವಾತ್ಮಗಳು), ಅಚಿತ್ (ವಸ್ತುಗಳು) ಮತ್ತು ಈಶ್ವರನ್. ಇದರ ಒಂದು ಸೂಕ್ಷ್ಮ ವಿವರಣೆಯನ್ನು ಇಲ್ಲಿ ನೋಡಬಹುದು. https://srivaishnavagranthamskannada.wordpress.com/thathva-thrayam/

ಇದರ ಹಿನ್ನೆಲೆಯಲ್ಲಿ ನಾವು ಈಗ ತತ್ತ್ವ ತ್ರಯಮ್‍ನ ಅನುವಾದವನ್ನು, ಈ ಗ್ರಂಥಕ್ಕೆ ಮಾಮುನಿಗಳ್ ನೀಡಿದ ಅದ್ಭುತವಾದ  ಪರಿಚಯವನ್ನು ನೋಡೋಣ.

“ಅನಾದಿ ಮಾಯಯಾ ಸುಪ್ತಃ” ದಲ್ಲಿ ಉಲ್ಲೇಖಿಸಿರುವ ಹಾಗೆ, ನಮಗೆ ನೆನಪಿನಲ್ಲಿರುವ ಕಾಲದಿಂದಲೂ ಹಿಂದೆ, ಈ ಸಂಸಾರದಲ್ಲಿರುವ  ಜೀವಾತ್ಮಗಳು, ಅಜ್ಞಾನವನ್ನು (ಕತ್ತಲೆಯನ್ನು) ತರುವ ವಸ್ತುಗಳೊಂದಿಗೆ ಇರುವ ಲಗತ್ತಿನಿಂದ ಬುದ್ಧಿಯು ಸಂಪೂರ್ಣವಾಗಿ ಅದರ ವಶವಾಗಿ , ಜೀವಾತ್ಮದ ಸಹಜ ಸ್ವಭಾವವಾದ ಜ್ಞಾನದಿಂದ ಮತ್ತು ಆನಂದದಿಂದ ಭರಿತವಾಗಿ, ಭಗವಂತನ ಆನಂದಕ್ಕಾಗಿಯೇ ಅಸ್ತಿತ್ವದಲ್ಲಿರುವುದನ್ನು ಮತ್ತು ತಾವುಗಳು ವಸ್ತುಗಳಿಂದ ಬೇರೆಯಾಗಿರುವುದನ್ನು ಮರೆತು ಬಿಡುತ್ತದೆ.

ಸರಿಯಾಗಿ ಅರ್ಥಮಾಡಿಕೊಳ್ಳದೆ,

 • ಜೀವಾತ್ಮವು “ದೇವೋಹಮ್ ಮನುಷ್ಯೋಹಮ್” (ನಾನು ಒಬ್ಬ ದೇವ, ನಾನು ಒಬ್ಬ ಮನುಷ್ಯ) ಮತ್ತು ನಿರ್ಜೀವ ದೇಹವನ್ನೇ ನಾನು ಎಂದು ತಿಳಿದುಕೊಳ್ಳುವುದು.
 • ದೇಹದಿಂದ ತಾನು ಬೇರೆ ಎಂದು ಅರ್ಥ ಮಾಡಿಕೊಂಡರೂ , “ಈಶ್ವರೋಹಮ್ ಅಹಮ್ ಭೋಗಿ” (ನಾನೇ ನಿಯಂತ್ರಕ , ನಾನೇ ಆನಂದಪಡುವವನು), ಮತ್ತು ಅವನು ತಾನು ಸಂಪೂರ್ಣವಾಗಿ ಸ್ವತಂತ್ರವೆಂದು ಯೋಚಿಸಲು ಆರಂಭಿಸುತ್ತಾನೆ.
 • ತಾನು ಭಗವಂತನ ಅನುಯಾಯಿ (ಸೇವಕ) ಎಂದು ಅರ್ಥೈಸಿಕೊಂಡರೂ, ಅವನು ಲೌಕಿಕ ಆನಂದದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ , ಕೈಂಕರ್‍ಯಕ್ಕೆ ಬದಲಾಗಿ.

“ಯೋನ್ಯಾಥಾ ಸಂತಮಾನಮ್ ಅನನ್ಯಥಾ ಪ್ರತಿಪಥ್ಯದೇ, ಕಿಮ್ ತೇನ ನ ಕೃತಮ್ ಪಾಪಮ್ ಚೋರೇನಾತ್ಮಬಹಾರಿಣಾ” ದಲ್ಲಿ ಹೇಳಿರುವಂತೆ, ಜೀವಾತ್ಮವು ತನ್ನ ನಿಜ ಸ್ವರೂಪವನ್ನು ಅನರ್ಥೈಸಿಕೊಂಡು, ಎಲ್ಲಾ ಪಾಪಗಳಿಗಿಂತಾ ಹೆಚ್ಚಾಗಿರುವ (ಬೇರೆ ಪಾಪಗಳಿಗೂ ಕಾರಣವಾಗುವ) ಪಾಪವು ಭಗವಂತನ ಆಸ್ತಿಯಾಗಿರುವ ಜೀವಾತ್ಮವನ್ನು ಕದ್ದು, (ತನ್ನದೆಂದು ತಿಳಿದು) ಮತ್ತು ಅಗೌಣವಾದ ಮತ್ತು ತಾತ್ಕಾಲಿಕವಾದ ಲೌಕಿಕ ಆನಂದಗಳಿಗೆ ತನ್ನನ್ನು ತೊಡಗಿಸಿಕೊಳ್ಳುವುದು.

“ವಿಚಿತ್ರಾ ದೇಹಾ ಸಂಪತ್ತಿರ್ ಈಶ್ವರಾಯ ನಿವೇದಿತಮ್, ಪೂರ್ವಮೇವ ಕೃತಾ ಬ್ರಹ್ಮನ್ ಹಸ್ತಪಾದಾದಿ ಸಂಯುಕ್ತಾ” ದಲ್ಲಿ ಹೇಳಿರುವಂತೆ ಜೀವಾತ್ಮವು ಪ್ರಳಯ ಕಾಲದಲ್ಲಿ ನಿರ್ಜೀವ ವಸ್ತುವಿನಂತೆ ಮಲಗಿರುವಾಗ ಅವುಗಳಿಗೆ ಇಂದ್ರಿಯ ಜ್ಞಾನ ಮತ್ತು ದೇಹವಿಲ್ಲದ ಕಾರಣ, ಲೌಕಿಕವಾದ ಆನಂದದಲ್ಲೂ ಮತ್ತು ಮೋಕ್ಷಕ್ಕೆ ಪ್ರಯತ್ನ ಪಡಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಕರುಣಾಮಯನಾದ ಸರ್ವೇಶ್ವರನು ಇಂದ್ರಿಯಗಳು ಮತ್ತು ದೇಹವನ್ನು ಹೊಂದಿರುವ  ಜೀವಾತ್ಮಗಳನ್ನು ಭಗವಂತನ ಚರಣ ಕಮಲಗಳನ್ನು ಸೇರಲು ಆರಂಭಿಸುವ ಕ್ರಿಯೆಯನ್ನು ಮಾಡುತ್ತಾನೆ.

ನಮ್ಮಾಳ್ವಾರರು ಶ್ರೀರಂಗನಾಥರ ಕಲ್ಯಾಣ ಗುಣವಾದ ವ್ಯೂಹ ಸೌಹಾರ್ದಮ್ ನನ್ನು ( – ಎಂದರೆ ಎಲ್ಲಾ ಜೀವಾತ್ಮಗಳ ಏಳಿಗೆಯನ್ನು ಬಯಸುವುದು) ಆನಂದಿಸುತ್ತಾರೆ.

ಜೀವಾತ್ಮವು ,ತನ್ನ ದೇಹವನ್ನು ಮತ್ತು ಇಂದ್ರಿಯಗಳನ್ನು ಭಗವಂತನನ್ನು ಸನ್ನಿಹಿಸಲು ಪ್ರಯತ್ನ ಪಡದೆ , ನಮ್ಮಾಳ್ವಾರರು ತಿರುವಾಯ್ಮೊೞಿ 3.2.1 ರಲ್ಲಿ ಹೇಳಿರುವ ಹಾಗೆ “ಅನ್ನಾಲ್ ನೀ ತಂದ ಆಕ್ಕೈಯಿನ್ ವಾೞಿ ಉೞಲ್ವೇನ್” ಇದು ದೈಹಿಕ ಮತ್ತು ಇಂದ್ರಿಯಗಳ ಆನಂದಕ್ಕೆ ಉಪಯೋಗಿಸಲ್ಪಡುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ದೋಣಿಯನ್ನೂ ಕೋಲನ್ನೂ , ನದಿಯನ್ನು ದಾಟಲು ಕೊಟ್ಟರೆ , ಅವನು ಅದನ್ನು ಉಪಯೋಗ ಪಡಿಸಿಕೊಳ್ಳದೇ ಹೇಗೆ ಆ ನದಿಯ ದಿಕ್ಕಿಗೇ ಹರಿದು ಸಮುದ್ರದಲ್ಲಿ ಬೀಳುವಂತೆ. ಈ ದೇಹವನ್ನೂ ಇಂದ್ರಿಯಗಳನ್ನೂ ಈ ಸಂಸಾರದಿಂದ ಮೇಲೆತ್ತಲು ಕೊಡಲಾಗಿದೆ, ಆದರೆ ಈ ಸಂಸಾರದಲ್ಲಿಯೇ ಆನಂದ ಪಡಲು ಉಪಯೋಗಿಸಿಕೊಳ್ಳುತ್ತಿರುವಂತೆ. ಜೀವಾತ್ಮವು ಬಹಳ ಹಿಂದಿನಿಂದಲೂ ಕೊನೆಯಿಲ್ಲದ ಪಾಪ ಕರ್ಮಗಳಿಂದ , ಅಜ್ಞಾನದಿಂದ ಹಲವು ಜನ್ಮಗಳನ್ನು ಪಡೆಯುತ್ತದೆ. ಆ ಜನ್ಮಗಳಲ್ಲಿ ಬಹಳ ಹಿಂಸಾಜನಕವಾದ ಯಾತನೆಗಳನ್ನು ಅನುಭವಿಸುತ್ತದೆ. (ತಾಪತ್ರಯಮ್ – ಮೂರು ವಿಧವಾದ ಯಾತನೆಗಳು) ಅದನ್ನು ಅರ್ಥ ಮಾಡಿಕೊಳ್ಳದೇ ಕರ್ಮದಲ್ಲಿ ವ್ಯಸ್ತಗೊಳ್ಳುತ್ತಾನೆ. ಹಲವು ಹಂತಗಳನ್ನು ತಲುಪುತ್ತಾನೆ, ಅವು ಗರ್ಭ (ತಾಯಿಯ ಹೊಟ್ಟೆಯಲ್ಲಿರುವುದು) ,ಜನ್ಮ (ಹುಟ್ಟುವುದು), ಬಾಲ್ಯ ( ಶಿಶುವಾಗಿ ತನ್ನನ್ನು ತಾನು ಆರೈಕೆ ಮಾಡಿಕೊಳ್ಳಲಾಗದ) , ಯೌವನ (ಇಂದ್ರಿಯಗಳ ಸಂತೋಷಕ್ಕಾಗಿ ಉಪಯೋಗಿಸುವನು) , ವಾರ್ದಕ (ಮುಪ್ಪು) , ಮರಣ (ಸಾವು) ಮತ್ತು ನರಕ (ಯಾತನೆಗಳಿಂದ ಕೂಡಿದ ಲೋಕದಲ್ಲಿ) ಮತ್ತು ಅಲ್ಲಿಂದ ಕೊನೆಯಿಲ್ಲದ ಹಿಂಸೆಗಳನ್ನು ಅನುಭವಿಸುತ್ತಾನೆ. ಈ ರೀತಿ ಜೀವಾತ್ಮವು ಕೊನೆಯಿಲ್ಲದ ಯಾತನೆಗಳನ್ನು ಈ ಸಂಸಾರವೆಂಬ ಸಾಗರದಲ್ಲಿ (ತೊಂದರೆಗಳಿಂದ ಕೂಡಿದ) ಅನುಭವಿಸುತ್ತಿರುವಾಗ, ಅತ್ಯಂತ ಕರುಣಾಮಯಿಯಾದ ಭಗವಂತನು , ಎಲ್ಲರ ಹಿತಚಿಂತಕನಾದವನು ಮತ್ತು ನಿರಂತರವಾಗಿ ಜೀವಾತ್ಮವನ್ನು ಮೇಲೆತ್ತಲು ಪ್ರಯತ್ನಿಸುವವನು ಜೀವಾತ್ಮವನ್ನು ನೋಡಿ ಸಹಾನುಭೂತಿಯನ್ನು ಹೊಂದಿ, “ಏವಮ್ ಸಂಸೃತಿ ಚಕ್ರಾಸ್ಥೇ ಬ್ರಾಮ್ಯಮಾಣೇ ಸ್ವಕರ್ಮಭಿಃ ಜೀವೇ ದುಃಖಾಕುಲೇ ವಿಷ್ಣೋಃ ಕೃಪಾ ಕಾಪಿ ಉಪಜಾಯತೇ” ನಲ್ಲಿ ಹೇಳಿರುವಂತೆ ಅವನ ದಿವ್ಯ ಹೃದಯದಲ್ಲಿರುವ ಶ್ರೇಷ್ಠ ಸಹಾನುಭೂತಿಯಿಂದ “ಜಾಯಮಾನಮ್ ಹಿ ಪುರುಷಮ್ ಯಮ್  ಪಶ್ಯೇನ್ ಮಧುಸೂಧನಃ ಸಾತ್ವಿಕಸ್ ಸ ತು ವಿಗ್ಯೇಯಸ್ ಸ ವೈ ಮೋಕ್ಷಾರ್ಥ ಚಿಂತಕಃ” ನಲ್ಲಿ ಹೇಳಿರುವಂತೆ ಭಗವಂತನು ಜೀವಾತ್ಮವನ್ನು ಜನ್ಮ ಪಡೆಯುವಾಗ ಈ ಸಂಸಾರದಿಂದ ಹೇಗೆ ಮೇಲೆತ್ತಪಡಬೇಕು ಎಂದು ಉಪದೇಶಿಸಿ ಹರಸುವನು. ಮುಮುಕ್ಷುವಿಗೆ (ಮೋಕ್ಷವನ್ನು ಬಯಸುವವನಿಗೆ) ಸರಿಯಾದ ನಿಜ ಜ್ಞಾನವಿಲ್ಲದೆ ಮೋಕ್ಷವನ್ನು ಹೊಂದಲು ಸಾಧ್ಯವಿಲ್ಲ.

ಯಾರಾದರೂ ನಿಜವಾದ ಜ್ಞಾನವನ್ನು ಪಡೆಯಲು ಎರಡು ದಾರಿಗಳಿವೆ, ಶಾಸ್ತ್ರದಿಂದ ಮತ್ತು ಉಪದೇಶದಿಂದ.

ಶಾಸ್ತ್ರಗಳಿಂದ ಕಲಿತುಕೊಳ್ಳಲು ಈ ಪರಿಮಿತಿಗಳಿವೆ.

 • “ಶಾಸ್ತ್ರ ಜ್ಞಾನಮ್ ಬಹು ಕ್ಲೇಶಮ್” ನಲ್ಲಿ ಹೇಳಿರುವಂತೆ ಶಾಸ್ತ್ರಮ್ ಕೊನೆಯಿಲ್ಲದ್ದಾಗಿದೆ ಮತ್ತು ಬಹಳ ತದ್ವಿರುದ್ಧವಾದ ಗೊಂದಲವನ್ನುಂಟುಮಾಡುವ ಹೇಳಿಕೆಗಳಿವೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಶಾಸ್ತ್ರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಕ್ಲಿಷ್ಟವಾದ ಪದಗಳನ್ನು ಕಲಿಯಲು ಕಷ್ಟವಾಗುತ್ತದೆ. ಆದ್ದರಿಂದ ಇದು ಕಷ್ಟ ಸಾಧ್ಯ.
 • ಆದರೂ ಒಬ್ಬರು ಈ ಕಷ್ಟಗಳನ್ನು ಅನುಭವಿಸಿ ಶಾಸ್ತ್ರಗಳನ್ನು ಕಲಿಯಲು ಹೋದರೆ, “ಅನಂತ ಭಾರಮ್ ಬಹುವೇದಿತವ್ಯಮ್ ಅಲ್ಪಚ್ಛ ಕಾಲೋ ಭಹವಚ್ಛ ವಿಘ್ನಾಃ “ನಲ್ಲಿ ಹೇಳಿರುವ ಹಾಗೆ, ಕಲಿಯಲು ಬಹಳಷ್ಟು ಇವೆ. ಆದರೆ ಜೀವಾತ್ಮಗಳಿಗೆ (ಬಂಧ ಆತ್ಮಗಳಿಗೆ) ಬುದ್ಧಿಯು ಸ್ವಲ್ಪವೇ ಇರುವುದು ಮತ್ತು ಜೀವನ ಅವಧಿಯೂ ಕೂಡಾ. ಮತ್ತು ಶಾಸ್ತ್ರವನ್ನು ಕಲಿಯಲು ಎಷ್ಟು ತೊಂದರೆಗಳು.
 • ಕೊನೆಯಲ್ಲಿ, ಸ್ತ್ರೀಯರು ಮತ್ತು ಶೂದ್ರರು ಮುಮುಕ್ಷುವಾಗಲು (ಮೋಕ್ಷವನ್ನು ಪಡೆಯುವ ಆಸೆಯನ್ನು ಹೊಂದಿರುವವರು) ಅರ್ಹತೆ ಹೊಂದಿದ್ದರೂ, ಶಾಸ್ತ್ರವನ್ನು ಕಲಿಯಲು ಅರ್ಹರಾಗಿರುವುದಿಲ್ಲ.

ಗುರುವಿನ ಮೂಲಕ ಕಲಿಯಲು ಈ ಪರಿಮಿತಿಗಳು ಇರುವುದಿಲ್ಲ. (ಏಕೆಂದರೆ ಅವರಿಗೆ ಶಾಸ್ತ್ರದ ಸಾರಾಂಶ ಮತ್ತು ಉದ್ದೇಶ ಅರ್ಥವಾಗಿರುತ್ತದೆ. ಮತ್ತು ಅವರು ಅದನ್ನು ತಮ್ಮ ಹಿಂಬಾಲಕರಿಗೆ / ಶಿಷ್ಯರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ವಿವರಿಸುತ್ತಾರೆ.)

ಈ ತತ್ತ್ವವನ್ನು ವಿಚಾರ ಮಾಡಿದಾಗ, ಅತ್ಯಂತ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್‍ಯರು ಎಲ್ಲಾ ಶಾಸ್ತ್ರಗಳಲ್ಲೂ ಪಾಂಡಿತ್ಯ ಹೊಂದಿರುವವರು ಮತ್ತು ಎಲ್ಲಾ ಜೀವಾತ್ಮಗಳನ್ನೂ ಮೇಲೆತ್ತಲು ಕೇಂದ್ರೀಕೃತರಾದವರು ಮೂರು ವಿಧವಾದ ವಸ್ತುಗಳ ಸಹಜ (ನಿಜ) ಸ್ವರೂಪ ಮತ್ತು ಅವುಗಳ ಗುಣಗಳನ್ನು ಅತ್ಯಂತ ಸರಳವಾದ ಬಗೆಯಲ್ಲಿ ಮತ್ತು ಖಚಿತವಾಗಿ ವಿವರಿಸಿದ್ದಾರೆ. (ಚಿತ್, ಅಚಿತ್ ಮತ್ತು ಈಶ್ವರ). ಈ ತತ್ತ್ವಗಳು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿವೆ ಎಂದು ಗಮನಿಸಿ. ಆದರೆ ಅವುಗಳು ಎಲ್ಲರಿಗೂ ಸುಲಭವಾಗಿ ದೊರಕದು. ಆದ್ದರಿಂದ ಶ್ರೇಷ್ಠವಾದ ಕೃಪೆಯಿಂದ ಪಿಳ್ಳೈ ಲೋಕಾಚಾರ್‍ಯರು ತಮ್ಮ ಪ್ರಬಂಧದಲ್ಲಿ ಈ ತತ್ತ್ವಗಳನ್ನು ಶೇಖರಿಸಿದ್ದಾರೆ (ಸಂಗ್ರಹಿಸಿದ್ದಾರೆ) – ತತ್ತ್ವ ತ್ರಯಮ್ ನಲ್ಲಿ.

ಈ ಬಹು ಕ್ಲಿಷ್ಟವಾದ ತತ್ತ್ವಗಳನ್ನು ಸುಲಭವಾದ ಮಾರ್ಗದಲ್ಲಿ ಬರೆದಿರುವುದಕ್ಕೆ ಉದ್ದೇಶವೇನೆಂದರೆ , ಹಿಂದಿನ ಆಚಾರ್‍ಯರು ಅವರು – ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್, ಪೆರಿಯವಾಚ್ಚಾನ್ ಪಿಳ್ಳೈ ಮುಂತಾದವರೂ ಕೂಡಾ ತಮ್ಮ ನಿಜವಾದ ಜ್ಞಾನವನ್ನು ತಾವು ತಿಳಿದಿರುವುದನ್ನು ಸುಲಭವಾದ ಸರಳ ರೀತಿಯಲ್ಲಿ ಎಲ್ಲಾ ಜೀವಾತ್ಮಗಳ ಅಭಿವೃದ್ಧಿಗಾಗಿ ಬಹಿರಂಗ ಪಡಿಸುವುದು. ನಮ್ಮ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಉಂಟಾಗಬಹುದು. -ನಮ್ಮ ಪೂರ್ವಾಚಾರ್‍ಯರೆಲ್ಲರೂ

 • ಅಹಂಕಾರದಿಂದ ಸಂಪೂರ್ಣವಾಗಿ ಹೊರತಾಗಿದ್ದರು .
 • ಎಲ್ಲಾ ಜೀವಾತ್ಮಗಳ ಅಭಿವೃದ್ಧಿ ಒಳತನ್ನು ಸದಾ ಚಿಂತಿಸುವವರಾಗಿದ್ದರು.
 • ತಮ್ಮ ವ್ಯಕ್ತಿಗತವಾದ ಪ್ರಸಿದ್ಧಿಯನ್ನು , ಒಳಿತನ್ನು ಎಂದಿಗೂ ಅಪೇಕ್ಷಿಸುತ್ತಿರಲಿಲ್ಲ.

ಆದರೆ ಬಹಳಷ್ಟು ಆಚಾರ್‍ಯರು ಏಕೆ ಅದೇ ವಿಷಯದ ಮೇಲೆ ಬರೆದಿದ್ದಾರೆ? ಅವರೆಲ್ಲರೂ ಮೊದಲನೆಯ ಗ್ರಂಥವನ್ನೇ ಒಪ್ಪಿಕೊಂಡು ಅದರ ಮೇಲೆ ತತ್ತ್ವಗಳನ್ನು ಮಾತ್ರ ವಿವರಿಸಿರಬಹುದಷ್ಟೇ? (ಇದರ ಮೇಲೆ ಮಾಮುನಿಗಳ ಅತ್ಯಂತ ಸುಂದರವಾದ ವಿವರಣೆಗಾಗಿ ಇಲ್ಲಿ ನೋಡಿ).

 • ಆಳ್ವಾರರು ಏಕಕಂಠರ್ (ಒಂದೇ ಕತ್ತು ಮತ್ತು ಅನೇಕ ಮುಖಗಳು – ಇದರ ಅರ್ಥ ಅವರೆಲ್ಲರೂ ಒಂದೇ ತತ್ತ್ವವನ್ನು ವಿವರಿಸಿದ್ದಾರೆ. ) ಹಲವು ಆಳ್ವಾರರು ಒಂದೇ ತತ್ತ್ವವನ್ನು ವಿವರಿಸಿದಾಗ, ಆ ತತ್ತ್ವವು ಇನ್ನೂ ನಂಬಿಕೆಗೆ ಅರ್ಹವಾಗುತ್ತದೆ. ನಂಬಿಕೆಗೆ ಅರ್ಹವಾದ ವ್ಯಕ್ತಿಗಳು ಆ ವಿಷಯವನ್ನೇ ವೈಭವೀಕರಿಸಲು ಆ ವಿಷಯವು ಮತ್ತಷ್ಟು ಬಲವಾಗಿ ಸ್ಥಾಪಿತವಾಗುತ್ತದೆ. ಅದೇ ರೀತಿಯಲ್ಲಿ, ಏಕಕಂಠರಾದ ಅನೇಕ ಆಚಾರ್‍ಯರುಗಳು ಒಂದೇ ತತ್ತ್ವವನ್ನು ಅನೇಕ ಗ್ರಂಥಗಳಲ್ಲಿ ವಿವರಿಸಿದಾಗ, ಅತ್ಯಂತ ದಡ್ಡನಾದ ವ್ಯಕ್ತಿಯೂ ಸಹ ಅನೇಕ ಶ್ರೇಷ್ಠ ವ್ಯಕ್ತಿಗಳು ಒಂದೇ ವಿಷಯವನ್ನು ಬರೆದಿರುವುದನ್ನು ಕಂಡು , ಅದರ ಸತ್ಯದ ಬಗ್ಗೆ ಮನವರಿಕೆಯಾಗುತ್ತದೆ.
 • ಮತ್ತು, ಯಾವ ವಿಷಯವು ಸೂಕ್ಷ್ಮವಾಗಿ ಒಂದು ಗ್ರಂಥದಲ್ಲಿ ಬರೆದಿದ್ದರೆ, ಇನ್ನೊಂದು ಗ್ರಂಥದಲ್ಲಿ ವಿಸ್ತಾರವಾದ ವಿವರಣೆಯಿರುತ್ತದೆ. ಆದ್ದರಿಂದ ಬೇರೆ ಬೇರೆ ಗ್ರಂಥಗಳು ಒಂದಕ್ಕೊಂದು ಪೂರಕವಾಗಿರುತ್ತದೆ.

ಈ ತತ್ತ್ವಗಳು ಒಬ್ಬರೇ ಆಚಾರ್‍ಯರು ಅನೇಕ ಗ್ರಂಥಗಳನ್ನು ಒಂದೇ ತತ್ತ್ವದ ಮೇಲೆ ಆಧಾರವಾಗಿ ಬರೆದಿರುವುದಕ್ಕೂ ಅನ್ವಯಿಸುತ್ತದೆ. ಈ ತತ್ತ್ವಗಳು ಬೇರೆ ಬೇರೆ ಗ್ರಂಥಗಳಲ್ಲಿ ಸರಿಯಾಗಿ ಸ್ಥಾಪಿತಗೊಂಡು ಒಂದಕ್ಕೊಂದು ಪೂರಕವಾಗಿರುತ್ತದೆ.

ಪಿಳ್ಳೈ ಲೋಕಾಚಾರ್‍ಯರ್ ಮತ್ತು ಮಾಮುನಿಗಳ್ – ಶ್ರೀ ಪೆರುಂಬುದೂರ್

ಈ ರೀತಿಯಾಗಿ ತತ್ತ್ವತ್ರಯದ ಅದ್ಭುತವಾದ ಪರಿಚಯವು ಸಮಾಪ್ತಿಯಾಗುತ್ತದೆ. ಈ ಗ್ರಂಥವು ಅತ್ಯಂತ ಕ್ಲಿಷ್ಟವಾದ ನಮ್ಮ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಅತ್ಯಂತ ಸರಳವಾದ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಮಾಮುನಿಗಳ ಅತಿ ಸುಂದರವಾದ ನಿಖರವಾದ ವ್ಯಾಖ್ಯಾನದಿಂದ ಈ ಗ್ರಂಥವು ಶ್ರೇಷ್ಠ ರೀತಿಯಲ್ಲಿ ಸವಿಯಲು ಆನಂದಮಯವಾಗಿದೆ. ಈ ಗ್ರಂಥವನ್ನು ಆಚಾರ್‍ಯರ ಮೂಲಕ ಕೇಳಿಸಿಕೊಳ್ಳುವುದರಿಂದ ತತ್ತ್ವಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಮಂಜಸವಾಗಿದೆ. ನಾವು ಈ ಶ್ರೇಷ್ಠ ಆಚಾರ್‍ಯರ ಚರಣ ಕಮಲಗಳಿಗೆ ವಂದಿಸಿ ಅವರಿಂದ ಆಶೀರ್ವಾದವನ್ನು ಪಡೆಯೋಣ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://ponnadi.blogspot.com/2013/10/aippasi-anubhavam-pillai-lokacharyar-tattva-trayam.html

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ವಿರೋಧಿ ಪರಿಹಾರನ್ಗಳ್ – 1 ಬುನಾದಿ

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮ

ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ . ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಇಂಗ್ಲಿಷ್ ಅನುವಾದವನ್ನು ಪಾಲಿಸಿ ಕನ್ನಡ ಅನುವಾದವನ್ನು  ವೀಕ್ಷಿಸುತ್ತಿದ್ದೇವೆ.  ಇಡೀ ಸರಣಿಯನ್ನು https://srivaishnavagranthamskannada.wordpress.com/virodhi-pariharangal/ ನಲ್ಲಿ ವೀಕ್ಷಿಸಬಹುದು.

 1. ಸ್ವರ್ಗತ್ತುಕ್ಕು ಸಂಸಾರಂ ವಿರೋಧಿ (ஸ்வர்க்கத்துக்கு ஸம்ஸாரம் விரோதி) -ಸಂಸಾರಂ ( ಇಲ್ಲಿ  ಇದು ಪ್ರಸ್ತುತ ದೇಹಕ್ಕೆ ಸಂಪರ್ಕ ಹೊಂದಿದ ) ಸ್ವರ್ಗ ಸುಖಗಳಿಗೆ  ಅಡ್ಡಿಯಾಗಿದೆ .

ಸ್ವರ್ಗ ಎಂದರೆ ಸಾಮಾನ್ಯವಾಗಿ ದೇವತೆಗಳ ಸ್ವರ್ಗೀಯ ಗ್ರಹಗಳು . ಇಂದ್ರನ ಗ್ರಹವನ್ನು ಸ್ವರ್ಗ ಎಂದು ಕರೆಯಲಾಗಿದೆ. ಈ ಭೂಲೋಕದಲ್ಲಿ ಇಲ್ಲದಿರುವಂತ ಸಂತೋಷಗಳು ಸ್ವರ್ಗದಲ್ಲಿ ತುಂಬಿವೆ. ಆದರೆ ಸ್ವರ್ಗದ ಮಾರ್ಗ ಪಡೆಯಲು, ಅನೇಕ ತಪಸ್ಸುಗಳನ್ನು ಮಾಡಬೇಕು. ಸಂಸಾರಂ, ಈ ಸಂದರ್ಭದಲ್ಲಿ ಭೂಲೋಕದಲ್ಲಿ ಕರ್ಮ ಫಲದಿಂದ ಇರುವ ಬದುಕು. ಇವಗಳನ್ನು ಸಾಮಾನ್ಯವಾಗಿ ತಪಸ್ಸಿಗೆ ಅಡ್ಡಿ ಎಂದು ಭಾವಿಸಲಾಗಿದೆ. ಸ್ವಂತ ದೇಹ, ದೈಹಿಕ ಸಂಬಂಧಿಗಳು (ಹೆಂಡತಿ, ಮಕ್ಕಳು, ಇತ್ಯಾದಿ), ಆಸ್ತಿಗಳು (ಭೂಮಿ, ಸಂಪತ್ತು, ಇತ್ಯಾದಿ) ತಪಸ್ಸಿಗೆ ಅಡಚಣೆಗಳು ಮತ್ತು ಆದ್ದರಿಂದ  ಅವುಗಳನ್ನು  ತ್ಯಜಿಸಬೇಕು.

ಐಹಿಕ ಸಂತೋಷಗಳು- ಸ್ವರ್ಗಕ್ಕೆ ಅಡೆತಡೆ

ಅನುವಾದಕರ ಟಿಪ್ಪಣಿ- “ಜ್ಯೋತಿಷ್ಟೋಮೇನ ಸ್ವರ್ಗ ಕಾಮೋ ಯಜೇತ “ ಸ್ವರ್ಗವನ್ನು ಅಪೇಕ್ಷಿಸುವವರು ಜ್ಯೋತಿಷ್ಟೋಮವನ್ನು ಮಾಡಬೇಕಾದ ಮುಖ್ಯಾಂಶಗಳನ್ನು ನೆನಪಿಸಿಕೊಳ್ಳಬಹುದು – ಇದು ಅತ್ಯಂತ ಕಠಿಣತೆಯ ಅಗತ್ಯವಿರುವ ಒಂದು  ರೀತಿಯ ಹೋಮ/ಯಾಗ

2. ಸ್ವರ್ಗೇಚ್ಚುವುಕ್ಕು ಐಹಿಕ ಸುಕಂ ವಿರೋಧಿ (ஸ்வர்க்கேச்சுவுக்கு ஐஹிக ஸுகம் விரோதி) ಪರಲೋಕದ ಸುಖಗಳನ್ನು ಬಯಸುವವರಿಗೆ ಈ ಭೂಮಂಡಲದಲ್ಲಿ ಸುಖಭೋಗಗಳು ಅಡ್ಡಿಯಾಗುತ್ತವೆ.

ಹಿಂದಿನ ಬಿಂದುವನ್ನು ಹೋಲುತ್ತದೆ. ಪರಲೋಕದಲ್ಲಿ ಸುಖಭೋಗಗಳನ್ನು ಅನುಭವಿಸುವ ಇಚ್ಛೆಯುಳ್ಳವನಿಗೆ ಈ ಲೋಕದಲ್ಲಿನ ವ್ಯವಹಾರ/ಆನಂದಗಳು ಅಡ್ಡಿಗಳಾಗಿವೆ. ಐಹಿಕ ಭೋಗಗಳ ಕಡೆಗೆ ಹೆಚ್ಚು ಬಾಂಧವ್ಯವಿದ್ದರೆ, ಅದು ಸ್ವರ್ಗೀಯ ವಾಸಸ್ಥಾನಗಳನ್ನು ಅನುಸರಿಸುವುದನ್ನು ಮಿತಿಗೊಳಿಸುತ್ತದೆ.

3. ಆತ್ಮಾನುಭವತ್ತುಕ್ಕು ಸ್ವರ್ಗಾನುಭವಂ ವಿರೋಧಿ (ஆத்மானுபவத்துக்கு ஸ்வர்க்கானுபவம் விரோதி )  ಒಬ್ಬರ ಸ್ವಂತ ಆತ್ಮವನ್ನು ಆನಂದಿಸಲು ಸ್ವರ್ಗೀಯ ಆನಂದವು ಒಂದು ಅಡಚಣೆಯಾಗಿದೆ.

ಸ್ವರ್ಗಾನುಭವ – ಆತ್ಮಾನುಭವಕ್ಕೆ ಅಡಚಣೆ

ಆತ್ಮಾನುಭವ ಕೈವಲ್ಯಂ ಎಂಬ ಒಂದು ಬಗೆಯ ಮೋಕ್ಷ. ಕೈವಲ್ಯಂ ಎಂದರೆ ವಿರಜಾ ನದಿಯನ್ನು ದಾಟಿ ಶ್ರೀವೈಕುಂಠವನ್ನು ತಲುಪುವುದು , ಭೌತಿಕ ದೇಹದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದು ಮತ್ತು ಆತ್ಮವನ್ನು ಆನಂದಿಸುವುದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು (ಜೀವಾತ್ಮ) . ಸಂಸಾರದಲ್ಲಿ (ಲೀಲಾ ವಿಭೂತಿ -ಭೌತಿಕ ಲೋಕ  ) ಮರುಜನ್ಮ ಇಲ್ಲದಿರುವುದರಿಂದ ಇದನ್ನು ಮೋಕ್ಷದ ಒಂದು ಬಗೆ ಎಂದು ಭಾವಿಸಲಾಗಿದೆ. ಸ್ವರ್ಗದಲ್ಲಿನ ಆನಂದವು ಪುಣ್ಯಗಳಿರುವವರೆಗೆ ಮಾತ್ರ ಇರುತ್ತದೆ (ಪೂಜ್ಯ ಕರ್ಮ). “ಕ್ಷೀಣೇ  ಪುಣ್ಯೇ ಮರ್ತ್ಯಲೋಕಂ ವಿಶಂತಿ “ ಎಂದು ವಿವರಿಸಿದ  ಹಾಗೆ ಸದ್ಗುಣಗಳು ದಣಿದ ನಂತರ, ಸಂಸಾರದಲ್ಲಿ ಕೆಟ್ಟ ಪ್ರಯಾಣವನ್ನು ಮುಂದುವರಿಸಲು ಒಬ್ಬರು ಐಹಿಕ ಗ್ರಹಗಳಿಗೆ ಹಿಂತಿರುಗಬೇಕು.

4. ಆತ್ಮಾನುಭಾವಕಾಮನುಕ್ಕು ಸ್ವರ್ಗಮ್ ವಿರೋಧಿ ( ஆத்மானுபவகாமனுக்கு ஸ்வர்க்கம் விரோதி) –  ತನ್ನನ್ನು ತಾನು ಆನಂದಿಸಲು ಬಯಸುವವನಿಗೆ ಸ್ವರ್ಗೀಯ ವಾಸಸ್ಥಾನಗಳ ಬಯಕೆಯು ಒಂದು ಅಡಚಣೆಯಾಗಿದೆ.

ದಯವಿಟ್ಟು ಹಿಂದಿನ ಅಂಶದ ವಿವರಣೆಯನ್ನು ನೋಡಿ.

5. ಭಗವತ್ ಅನುಭವತ್ತುಕ್ಕು ಆತ್ಮಾನುಭವಂ ವಿರೋಧಿ ( பகவத் அனுபவத்துக்கு ஆத்மானுபவம் விரோதி) – ಸ್ವಂತ ಆತ್ಮವನ್ನು ಆನಂದಿಸುವುದು ಭಗವಂತನನ್ನು ಆನಂದಿಸಲು ಅಡ್ಡಿಯಾಗಿದೆ

ತನ್ನನ್ನು ತಾನು ಆನಂದಿಸುವುದು- ಭಗವತ್ ಅನುಭವಕ್ಕೆ ಅಡಚಣೆ

ಭಗವತ್ ಅನುಭವ ಎಂದರೆ ಭಗವಾನ್ ಅನ್ನು ಅವರ ದಿವ್ಯ ಗುಣಗಳು, ಸುಂದರ ರೂಪಗಳು , ಉಭಯ ವಿಭೂತಿ ಐಶ್ವರ್ಯ ( ಎರಡೂ  ಲೋಕಗಳನ್ನು ನಿಯಂತ್ರಿಸುವ ಶಕ್ತಿ ) -ನಿತ್ಯ ವಿಭೂತಿ ( ಆದ್ಯಾತ್ಮಿಕ ಲೋಕ  ) ಮತ್ತು ಲೀಲಾ  ವಿಭೂತಿ ( ಭೌತಿಕ ಲೋಕ  ) ಇತ್ಯಾದಿಗಳನ್ನು ಆನಂದಿಸುವುದು. ಇಂತಹ ಸಂತೋಷವುಳ್ಳ ಅನುಭವಗಳು ಅವನ ಕಡೆಗೆ  ಪ್ರೀತಿಗೆ(ಭಕ್ತಿ, ಪ್ರೀತಿ, ಬಾಂಧವ್ಯ) ಕಾರಣವಾಗುತ್ತದೆ. ಸಂತೋಷ ಅನುಭವದಿಂದ ಬಂದ ಅಂತಹ ಬಾಂದವ್ಯ  ಭಗವಾನ್ ಕಡೆಗೆ ಕೈಂಕರ್ಯಕ್ಕೆ (ಸೇವೆ) ಕಾರಣವಾಗುತ್ತದೆ. ಅಂತಹ ಪ್ರೀತಿಯ ಸೇವೆಯು ಮತ್ತೆ ಶಾಶ್ವತ ಆನಂದಕ್ಕೆ ಕಾರಣವಾಗುತ್ತದೆ. ಪರಮಪದದಲ್ಲಿ (ಶ್ರೀ ವೈಕುಂಠಂ) ಅಂತಹ ಆನಂದವನ್ನು ಅನಿಯಮಿತ ಆನಂದದಾಯಕ ಮೋಕ್ಷಂ ಎಂದು ಕರೆಯಲಾಗುತ್ತದೆ. ಒಬ್ಬರ ಸ್ವಂತ ಆತ್ಮವನ್ನು ಆನಂದಿಸುವುದು ಆನಂದದಾಯಕವಾಗಿದ್ದರೂ, ಭಗವತ್ ಅನುಭವಕ್ಕೆ ಹೋಲಿಸಿದರೆ, ಇದು ತುಂಬಾ ಅತ್ಯಲ್ಪವಾಗಿದೆ. ಹೀಗಾಗಿ, ಭಗವತ್ ಅನುಭವಕ್ಕೆ ತನ್ನನ್ನು ಆನಂದಿಸುವ ಬಯಕೆ ಅಡ್ಡಿಯಾಗಿದೆ. ಭಾಷಾಂತರಕಾರರ ಟಿಪ್ಪಣಿ: ಜೀವಾತ್ಮವು ಸ್ವಾಭಾವಿಕವಾಗಿ ಜ್ಞಾನಮಯಂ (ಜ್ಞಾನದಿಂದ ತುಂಬಿದೆ) ಮತ್ತು ಆನಂದಮಯಮ್ (ಆನಂದದಿಂದ ತುಂಬಿದೆ ) ಆಗಿರುತ್ತದೆ . ಆದ್ದರಿಂದ, ಆತ್ಮವನ್ನು  ಆನಂದಿಸುವುದು ಆಸಕ್ತಿದಾಯಕ ನಿರೀಕ್ಷೆಯಂತೆ ಕಾಣಿಸಬಹುದು, ಆದರೂ ಆತ್ಮವು  ಸ್ವತಃ ಅಣು  ಸ್ವರೂಪಂ  (ಪರಮಾಣು ಸ್ವಭಾವ) ಆಗಿರುವುದರಿಂದ ಇದು ಬಹಳ ಅತ್ಯಲ್ಪವಾಗಿದೆ. ಆದರೆ ಭಗವಾನ್ ವಿಭು (ಶ್ರೇಷ್ಠ ಮತ್ತು ಎಲ್ಲಾ ವ್ಯಾಪಿಸಿರುವ) ಮತ್ತು ಅವನ ಜ್ಞಾನಮ್ ಮತ್ತು ಆನಂದವನ್ನು  ಆತ್ಮದ ಅತ್ಯಂತ ಸೀಮಿತವಾದ ಜ್ಞಾನಮ್ ಮತ್ತು ಆನಂದಕ್ಕೆ ಹೋಲಿಸಿದರೆ ಅಪರಿಮಿತವಾಗಿದೆ.

6. ಭಗವತ್ ಅನುಭವ ಕಾಮನುಕ್ಕು ಆತ್ಮಾನುಭವ ಇಚ್ಛೈ ವಿರೋಧಿ ( பகவத் அனுபவ காமனுக்கு ஆத்மானுபவ இச்சை விரோதி) – ಭಗವತ್ ಅನುಭವವನ್ನು ಬಯಸುವವರಿಗೆ, ತನ್ನನ್ನು ತಾನು ಆನಂದಿಸುವುದು ಅಡಚಣೆಯಾಗಿದೆ.

ದಯವಿಟ್ಟು ಹಿಂದಿನ ಅಂಶದ ವಿವರಣೆಯನ್ನು ನೋಡಿ

7. ಗುಣನಿಷ್ಟನುಕ್ಕು ಗುಣಿ ವಿರೋಧಿ ( குணநிஷ்டனுக்கு குணி விரோதி)- ಭಗವಂತನ ಮಂಗಳಕರ ಗುಣಗಳ ಮೇಲೆ ಕೇಂದ್ರೀಕರಿಸಿದವರಿಗೆ, ಭಗವತ್ ಸ್ವರೂಪವು ಅಡಚಣೆಯಾಗಿದೆ.

ಭಗವಂತನ ಸ್ವರೂಪಂ ಅನುಭವಿಸುವುದು -, ಭಗವತ್ ಕಲ್ಯಾಣ ಗುಣಗಳನ್ನು ಅನುಭವಿಸಲು ಅಡಚಣೆಯಾಗಿದೆ.

ಗುಣನಿಷ್ಟನ್ – “ ಸದಾ ಪರಗುಣಾವಿಷ್ಟ “, ಎಂಪೆರುಮಾನಿನ ಮಂಗಳಕರ ಗುಣಗಳನ್ನು ನಿರಂತರವಾಗಿ ಆನಂದಿಸುತ್ತಿರುವವನು.ಜೀವಾತ್ಮ ಪರಬ್ರಹ್ಮವನ್ನು ಕಲ್ಯಾಣ ಗುಣಗಳೊಂದಿಗೆ  ಆನಂದಿಸುವಂತೆ ಪ್ರಮಾಣಗಳು  ”ಶೋಶ್ನುತ್ತೇ “ ಎಂಬ ಶ್ರುತಿ ನಮಗೆ ತಿಳಿಸುವುದು. ಭಗವಂತನ ದಿವ್ಯ ರೂಪಗಳನ್ನು ಅನುಭವಿಸುವುದೂ ಇದರಲ್ಲಿ ಸೇರಿದೆ. “ರಸೋವೈ  ಸ:” ಎಂದರೆ ಅವನ ಮಾಧುರ್ಯವನ್ನು ಪ್ರತಿನಿಧಿಸುತ್ತವೆ. ಇದನ್ನು ಅನುಭವಿಸುವ ಮೂಲಕ ಮುಕ್ತಾತ್ಮ (ವಿಮೋಚನೆಗೊಂಡ ಆತ್ಮ) ಆನಂದವನ್ನು ಪಡೆಯುತ್ತದೆ. ಎಂಪೆರುಮಾನ್ ತನ್ನ ದಿವ್ಯ ಲೀಲೆಗಳ ಮೂಲಕ ತನ್ನ ಕಲ್ಯಾಣ ಗುಣಗಳನ್ನು ತೋರಿಸುವರು. ತಿರುವೃತ್ತಮ್ 98ನೆ ಪಾಸುರಂ” ನೆಂಜಾಲ್ ನಿನೈಪ್ಪರಿತಾಲ್ – ವೆಣ್ಣೈಯುಣೆನ್ನುಂ ಈರಚ್ ಚೊಲ್ಲೇ “(நெஞ்சால் நினைப்பரிதால் – வெண்ணெயூணென்னும் ஈரச் சொல்லே), ತಿರುವಾಯ್ಮೊಳಿ 1.3.1 ಪಾಸುರಂ “ಎತ್ತಿಱಂ ! ಉರಲಿನೋಡು ಇಣೈಂದಿರುಂದೇಂಗಿಯ ಎಳಿವೇ  “ ( எத்திறம்! உரலினோடு இணைந்திருந்தேங்கிய எளிவே) ಇತ್ಯಾದಿ ಮೂಲಕ ನಮ್ಮಾಳ್ವಾರರು ಭಗವಾನಿನ ಗುಣಗಳನ್ನು ಅನುಭವಿಸುವುದನ್ನು ಅರ್ಥ ಮಾಡಿಕೊಳ್ಳಬಹುದು . ಇದನ್ನು ಪೆರಿಯ ತಿರುವಂದಾದಿ 86 “ ಚೀರ್ ಕಲಂದ ಚೊಲ್ “( சீர் கலந்த சொல் – ಭಗವಾನಿನ ಕಲ್ಯಾಣ ಗುಣಗಳಿಂದ ಮುಳುಗಿದ ಪದಗಳು ) ನಲ್ಲಿ  ವಿವರಿಸಲಾಗಿದೆ. ಗುಣಿ ಎಂದರೆ ಭಗವಾನಿನ ದಿವ್ಯ ಸ್ವರೂಪಂ  ( ಅದು ಗುಣಂ ಇರುವವರಿಗ್ರ ಗುಣಿ ಎಂದು ಹೇಳಲಾಗಿದೆ ). ಮಹಾಯೋಗಿಗಳಿಗೂ ಸಹ  ಈ ಭಗವತ್ ಸ್ವರೂಪಂ ಅರ್ಥ ಮಾಡಿಕೊಳ್ಳಲು ಕಷ್ಟ. ಹೀಗೆ ಭಗವತ್ ಸ್ವರೂಪದ ಮೇಲೆ ಕೇಂದ್ರೀಕರಿಸುವುದು ಭಗವತ್ ಗುಣಗಳನ್ನು ಅನುಭವಿಸಲು ಮತ್ತು ಆನಂದಿಸಲು ಅಡ್ಡಿಯಾಗುತ್ತದೆ. ಇದು ಮುಂದಿನ ಹಂತಕ್ಕೆ ಹೋಲುತ್ತದೆ.

8. ಕೈಂಕರ್ಯನಿಷ್ಟನುಕ್ಕು ಭಗವತ್ ಸೌಂದರ್ಯಂ ವಿರೋಧಿ ( கைங்கர்யநிஷ்டனுக்கு பகவத் ஸௌந்தர்யம் விரோதி) ಎಂಪೆರುಮಾನಿನ  ಸೇವೆಯತ್ತ ಗಮನಹರಿಸುವವರಿಗೆ, ಎಂಪೆರುಮಾನಿನ ಸೌಂದರ್ಯವು ಅಡಚಣೆಯಾಗಿದೆ.

ಎಂಪೆರುಮಾನಿನ  ಸೇವೆಯತ್ತ ಗಮನಹರಿಸುವುದು – ಸೇವೆ ಮಾಡುವುದಕ್ಕೆ ಅಡಚಣೆ ( ಇಳಯ ಪೆರುಮಾಳ್ ಸದಾ ಪೆರುಮಾಳಿಗೆ ಸೇವೆ ಸಲ್ಲಿಸುತ್ತಿದರು  )

ಕೈಂಕರ್ಯನಿಷ್ಟರ್ – ಇಳಯಪೆರುಮಾಳ್ (ಲಕ್ಷ್ಮಣ ) ಹೇಳಿದಂತೆ “ಅಹಂ ಸರ್ವಂ ಕರಿಷ್ಯಾಮಿ “ ( அஹம் ஸர்வம் கரிஷ்யாமி – ನಾನು ನಿಮಗೆ ಎಲ್ಲವನ್ನೂ ಮಾಡುವೆನು ) ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಎಲ್ಲಾ ಸಮಯದಲ್ಲೂ ಭಗವಂತನ ಮೇಲೆ ಸಂಪೂರ್ಣವಾಗಿ ಗಮನಹರಿಸಿರುವವನು. ಒಮ್ಮೆ ನಾವು ಅವನ ದೈವಿಕ ಸೌಂದರ್ಯವನ್ನು ಅನುಭವಿಸಲು ಪ್ರಾರಂಭಿಸಿದಾಗ, ನಮ್ಮ ದೃಷ್ಟಿ ಮತ್ತು ಮನಸ್ಸು ಅವನ ಮೇಲೆ ಸ್ಥಿರವಾಗಿರುತ್ತದೆ ಮತ್ತು ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುತ್ತದೆ. ಇದು ಎಂಪೆರುಮಾನ್‌ಗೆ ನಮ್ಮ ಸೇವೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಪಿಳ್ಳೈ ಲೋಕಾಚಾರ್ಯರು ಮುಮುಕ್ಷುಪ್ಪದಿ ಸೂತ್ರಂ 187 ರಲ್ಲಿ “ಸೌಂಧರ್ಯಂ ಅಂತರಾಯಮ್” (ஸௌந்தர்யம் அந்தராயம்) – ಭಗವಂತನ ಸೌಂದರ್ಯವು ಒಂದು ಅಡಚಣೆಯಾಗಿದೆ. ಸ್ವಾಭಾವಿಕ ಸ್ಥಾನವೆಂದರೆ – ಭಗವಾನ್ ಗುರು ಮತ್ತು ಜೀವಾತ್ಮನು ಸೇವಕ. ಭಗವಂತನ ಗುಣಗಳನ್ನು ಅನುಭವಿಸುವ ಮೂಲಕ, ಜೀವಾತ್ಮನು ಭಗವಂತನ ಕಡೆಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ತರುವಾಯ ಅಂತಹ ಮಹಿಮಾನ್ವಿತ ಎಂಪೆರುಮಾನ್‌ನ ಸೇವೆ ಮಾಡುವ ಬಯಕೆಯನ್ನು ಬೆಳೆಸಿಕೊಳ್ಳುತ್ತಾನೆ. ಇದು ಜೀವಾತ್ಮದ ಸ್ವರೂಪಕ್ಕೆ ಸರಿಹೊಂದುತ್ತದೆ, ಅದು ಶೇಷತ್ವಂ (ದ್ವಿತೀಯ/ಸೇವಕನಾಗಿರುವುದು). ಇದು ಅಪೇಕ್ಷಣೀಯವೂ ಆಗಿದೆ. ಒಮ್ಮೆ ಗಮನವು ಎಂಪೆರುಮಾನ್‌ನ ದಿವ್ಯ ಸೌಂದರ್ಯದತ್ತ ಸಾಗಿದರೆ ಅದು ಕೈಂಕರ್ಯವನ್ನು ಮಾಡಲು ಅಡ್ಡಿಯಾಗುತ್ತದೆ. ಹೀಗಾಗಿ, ಕೈಂಕರ್ಯವನ್ನು ಕೇಂದ್ರೀಕರಿಸಿದವರಿಗೆ ಭಗವಂತನ ಸೌಂದರ್ಯವು ಅಡಚಣೆಯಾಗಿದೆ.

9. ಭಾಗವತ ಕೈಂಕರ್ಯ ನಿಷ್ಟನುಕ್ಕು ಭಗವತ್ ಕೈಂಕರ್ಯಂ  ವಿರೋಧಿ (பாகவத கைங்கர்ய நிஷ்டனுக்கு பகவத் கைங்கர்யம் விரோதி) – ಭಾಗವತರ (ಭಕ್ತರಿಗೆ) ಸೇವೆಯಲ್ಲಿ ಗಮನಹರಿಸಿರುವವರಿಗೆ ಭಗವತ್ ಕೈಂಕರ್ಯ (ಭಗವಂತನ ಸೇವೆ) ಒಂದು ಅಡಚಣೆಯಾಗಿದೆ.

ಭಗವತ್ ಕೈಂಕರ್ಯ (ಭಗವಂತನ ಸೇವೆ) ಗಮನಹರಿಸುವವರಿಗೆ – ಭಾಗವತ ಕೈಂಕರ್ಯ ಅಡಚಣೆ

ಜೀವಾತ್ಮದ ಸ್ವಾಭಾವಿಕ ಸ್ಥಿತಿಯು ಭಗವತ್ ಧಾಸ್ಯತ್ವ (ಭಗವಾನ್‌ನ ಸೇವಕನಾಗಿರುವುದು) ಮತ್ತು ಸಂಪೂರ್ಣವಾಗಿ ಎಂಪೆರುಮಾನ್‌ನ ವಿಲೇವಾರಿಯಾಗಿರುವುದು. ಇನ್ನೂ ಮುಖ್ಯವಾದದ್ದು – ಸ್ವರೂಪ ಯಥಾತ್ಮ್ಯಮ್ (ನಿಜವಾದ ಸ್ವಭಾವದ ಸಾರ) – ಭಾಗವತ ಶೇಷತ್ವಮ್ (ಭಾಗವತಗಳ ಸೇವಕನಾಗಲು).ಪೆರಿಯ ತಿರುಮೊಳಿ 8.10.3 ನಲ್ಲಿ ತಿರುಮಂಗೈ ಆಳ್ವಾರ್ ತಿರುಮಂತ್ರ (ಅಷ್ಟಾಕ್ಷರಿ )ಸಾರವನ್ನು ಸ್ವತಃ ಎಂಪೆರುಮಾನ್ಗೆ “ ನಿನ್ ತಿರುವೆಟ್ಟೆಳುತ್ತುಂ ಕಱ್ಱು ನಾನ್ ಉಱ್ಱದುಂ ಉನ್ನಡಿಯಾರ್ಕ್ಕಡಿಮೈ ಕಣ್ಣಪುರತ್ತುಱೈಯಮ್ಮಾನೇ “ ( நின் திருவெட்டெழுத்தும் கற்று நான் உற்றதும் உன்னடியார்க்கடிமை கண்ணபுரத்துறையம்மானே- ತಿರುಕಣ್ಣಪುರತ್ತು ಸ್ವಾಮಿ ! ತಿರುಮಂತ್ರದ ಅರ್ಥ ತಿಳಿದ ನಂತರ ನಾನು ನಿಮ್ಮ ಭಕ್ತರ ಸೇವಕ ಎಂದು ತಿಳಿದುಕೊಂಡೆ  ) . ನಾನ್ಮುಗನ್ ತಿರುವಂದಾದಿ 18 ನೇ “ ಏತ್ತಿಯಿರುಪ್ಪಾರೈ ವೆಲ್ಲುಮೇ ಮಱ್ಱವರೈಚ್ ಚಾತ್ತಿಯಿರುಪ್ಪರ್ ತವಮ್ “ ( ஏத்தியிருப்பாரை வெல்லுமே மற்றவரைச் சாத்தியிருப்பார் தவம்- ಭಗವಂತನ ಮೇಲಿನ ಭಕ್ತಿಗಿಂತ ಭಕ್ತರ ಮೇಲಿನ ಶ್ರದ್ಧೆ ಹೆಚ್ಚು) ಪಾಸುರದಲ್ಲಿ  ಎತ್ತಿ ತೋರಿಸಿದ್ದಾರೆ . ಅಂತಹ ಭಕ್ತರಿಗೆ ಶರಣಾದವರ ಸ್ಥಿತಿ ಹೆಚ್ಚು. ಶ್ರೀ ರಾಮಾಯಣದಲ್ಲಿ, ಲಕ್ಷ್ಮಣನ್ ಮತ್ತು ಭರತನು ಸಂಪೂರ್ಣವಾಗಿ ಶ್ರೀರಾಮನಿಗೆ ಶರಣಾದರು. ಶತ್ರುಗ್ನಾಳ್ವಾನ್ ಭರತನನ್ನೇ ಸರ್ವಸ್ವವಾಗಿ ಹೊಂದಿದ್ದರು. “ಶತೃಘ್ನೊ  ನಿತ್ಯ ಶತೃಘ್ನ:”( சத்ருக்நோ நித்யசத்ருக்ந: – ಶಾಶ್ವತ ಅಡಚಣೆಯನ್ನು ಗೆದ್ದವನು) ಎಂದು ಶ್ರೀ ರಾಮಾಯಣದಲ್ಲಿ ಹೇಳಲಾಗಿದೆ. ನಮ್ಮ ಪೂರ್ವಾಚಾರ್ಯರು “ಶತ್ರುಗ್ನಾಳ್ವಾನ್ ಶ್ರೀರಾಮನ ಸೌಂದರ್ಯ ಮತ್ತು ಮಂಗಳಕರ ಗುಣಗಳನ್ನು ಜಯಿಸಿದರು/ಅಲಕ್ಷಿಸಿದರು ಮತ್ತು ಭರತನಿಗೆ ಸಂಪೂರ್ಣವಾಗಿ ಸೇವೆ ಸಲ್ಲಿಸುತ್ತಿದ್ದರು” ಎಂದು ವಿವರಿಸಿದ್ದಾರೆ. ತಿರುವಾಯ್ಮೊಳಿ 8.10.3 ರಲ್ಲಿ ನಮ್ಮಾಳ್ವಾರ್ ಅವರು “ಅವನದಡಿಯಾರ್ ಸಿರುಮಾಮಾನಿಸರಾಯ್  ಎನ್ನೈಯಾಂಡಾರ್”( அவனடியார் சிறுமாமனிசராய் என்னையாண்டார்) ಎಂದು ಹೇಳುತ್ತಾರೆ. ಸಿಱುಮಾಮನಿಸರ್ – ಎಂಪೆರುಮಾನ್‌ಗೆ ಸಂಪೂರ್ಣವಾಗಿ ಶರಣಾದವರು, ಗಾತ್ರದಲ್ಲಿ ಚಿಕ್ಕವರಾಗಿದ್ದರೂ ಜ್ಞಾನ ಮತ್ತು ಅಭ್ಯಾಸದಲ್ಲಿ ಶ್ರೇಷ್ಠರು. ಅಂತಹ ಭಕ್ತರು ತಮ್ಮ ಒಡೆಯರು ಎಂದು ನಮ್ಮಾಳ್ವಾರ್ ಹೇಳುತ್ತಾರೆ. ಅಂತಹ ಭಕ್ತರು ಇರುವಾಗ ಅವರನ್ನು ನಿರ್ಲಕ್ಷಿಸಿ ಎಂಪೆರುಮಾನ್‌ನ ಪಾದಕಮಲಗಳಿಗೆ ಸೇವೆ ಸಲ್ಲಿಸುವುದು ಹೇಗೆ? ಜೀವಾತ್ಮದ ನೈಜ ಸ್ವರೂಪಕ್ಕೆ, ಭಗವತ್ ಕೈಂಕರ್ಯಕ್ಕಿಂತ ಭಾಗವತ ಕೈಂಕರ್ಯವು ಹೆಚ್ಚು ಸೂಕ್ತವಾಗಿದೆ. ಹೀಗಾಗಿ, ಭಾಗವತ ಕೈಂಕರ್ಯಕ್ಕೆ ಭಗವತ್ ಕೈಂಕರ್ಯವು ಅಡ್ಡಿಯಾಗಿದೆ.

ಮುಂದಿನ ಲೇಖನದಲ್ಲಿ ನಾವು ಮುಂದಿನ ವಿಭಾಗವನ್ನು ಮುಂದುವರಿಸುತ್ತೇವೆ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://ponnadi.blogspot.com/2013/12/virodhi-pariharangal-1.html

ಅರ್ಖೈವ್ ಮಾಡಲಾಗಿದೆ :  http://ponnadi.blogspot.com 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org