Monthly Archives: May 2023

ಮುಮುಕ್ಷುಪ್ಪಡಿ ಸೂತ್ರಮ್ 21 – 25

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಪೂರ್ಣ ಸರಣಿ

<< ಹಿಂದಿನ ಲೇಖನವನ್ನು

ಸೂತ್ರಮ್ – 21

ಪರಿಚಯ: ಲೋಕಾಚಾರ್‍ಯರು, ಈ ಮೂರು ಪದರದ ಉಪಾಯಗಳನ್ನು ಮೀರಿದವರಿಗೆ ಮಂತ್ರವು ಏನನ್ನು ಕೊಡುತ್ತದೆ ಎಂದು ವಿವರಿಸಲು ಮುಂದುವರೆಯುತ್ತಾರೆ.

ಪ್ರಪತ್ತಿಯಿಲೇ ಇೞಿಂದವರ್ಗಳುಕ್ಕು ಸ್ವರೂಪ ಜ್ಞಾನತ್ತೈ ಪಿಱಪ್ಪಿತ್ತು ಕಾಲಕ್ಷೇಪತ್ತುಕ್ಕುಮ್ ಬೋಗತ್ತುಕ್ಕುಮ್ ಹೇತುವೈ ಇರುಕ್ಕುಮ್.

ಸರಳ ಅರ್ಥ: ಯಾರು ಪ್ರಪತ್ತಿಯನ್ನು (ಸಂಪೂರ್ಣ ಶರಣಾಗತಿ) ಅಳವಡಿಸಿಕೊಂಡಿರುತ್ತಾರೋ, ಇದು ಆತ್ಮದ ಬಗ್ಗೆ ಜ್ಞಾನವನ್ನು (ಸ್ವರೂಪ ಜ್ಞಾನ ಅಥವಾ ಶೇಷತ್ವಮ್) ಉತ್ಪಾದಿಸುತ್ತದೆ. ಮತ್ತು ಇದು ಕಾಲದ ಸರಿಯಾದ ಬಳಕೆಯನ್ನು ಮತ್ತು ಆನಂದವನ್ನು ಪಡೆಯಲು (ಎಂಪೆರುಮಾನರ) ಕಾರಣವಾಗುತ್ತದೆ.

ವ್ಯಾಖ್ಯಾನಮ್: ಆಚರಿಸಲು ಕಷ್ಟವಾಗಿರುವಂತಹ ಈ ಮೊದಲು ವಿಸ್ತಾರವಾಗಿ ವಿವರಿಸಿರುವ ಆಚರಣೆಗಳು ಅವುಗಳು ಕ್ಲಿಷ್ಟವಾಗಿರುವುದಲ್ಲದೆ, ಆತ್ಮದ ನೈಜ ಸ್ವಭಾವಕ್ಕೆ ತದ್ ವಿರುದ್ಧವಾಗಿರುವುವು. ಯಾರು ಪ್ರಪತ್ತಿಯನ್ನು ಮಾತ್ರ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೋ, ಅದನ್ನು ಸುಲಭವಾಗಿ ಅಳವಡಿಸಿಕೊಳ್ಳಲೂ ಸಾಧ್ಯ, ಮತ್ತು ಅದು ಆತ್ಮದ ಒಳ ಸ್ವರೂಪಕ್ಕೆ ಸಮವಾಗಿ, ಪೂರಕವಾಗಿ ಅದನ್ನು ಆಚರಿಸುವವರಿಗೆ ತನ್ನ , ಭಗವಂತನ ಮತ್ತು ತಾನು ಭಗವಂತನ ಮೇಲೆ ಇರುವ ಸಂಪೂರ್ಣ ಅವಲಂಬನೆಯ ಜ್ಞಾನವನ್ನು ಪ್ರತಿಪಾದಿಸುತ್ತದೆ. ರಹಸ್ಯವಾಗಿರುವ ಆಳವಾದ ಸೂತ್ರಗಳ ಮೇಲೆ ಧ್ಯಾನಿಸುವುದನ್ನು ಆನಂದಿಸುವಂತೆ ಮತ್ತು ಸಮಯವನ್ನು ಸರಿಯಾಗಿ ವ್ಯಯಗೊಳ್ಳುವಂತೆ ಮಾಡುತ್ತದೆ. ತಿರುಮಂಗೈ ಆಳ್ವಾರರು ಪೆರಿಯ ತಿರುಮೊೞಿ 6-10-6 ರಲ್ಲಿ ಈ ಮಂತ್ರವು ಹೇಗೆ ಆನಂದವನ್ನು ಕೊಡುತ್ತದೆ ಎಂದು ಹೇಳಿದ್ದಾರೆ:

“ಎನಕ್ಕು ಎನ್‍ಱುಮ್ ತೇನುಮ್ ಪಾಲುಮ್ ಅಮುದಮಾನ ತಿರುಮಾಲ್ ತಿರುನಾಮಮ್”

(ತಿರುಮಾಲಿನ ದಿವ್ಯ ನಾಮವು ನನಗೆ ನಿರಂತರವಾಗಿ ಸವಿಯಾಗಿರುವ ಜೇನು, ಹಾಲು , ಅಮೃತದಂತೆ.) ಯಾರು ಈ ಮೂರು ಪದಾರ್ಥಗಳನ್ನು ಸೇವಿಸುತ್ತಾರೋ ಅವರಿಗೆ ಸಹಜವಾಗಿ ಸವಿಯಿರುವಂತೆ, ಅವನ ನಾಮವೂ ತನ್ನಲ್ಲಿಯೇ ಪರಮಾನಂದವನ್ನು ಹೊಂದಿದೆ ಮತ್ತು ಪ್ರಪನ್ನಾಧಿಕಾರಿಗಳಿಗೆ ಅಮಿತವಾದ ಆನಂದವನ್ನು ಉಂಟುಮಾಡುತ್ತದೆ.

ಸೂತ್ರಮ್ – 22

ಪರಿಚಯ: ಲೋಕಾಚಾರ್‍ಯರು ನಂತರದಲ್ಲಿ ಈ ಮಂತ್ರದಿಂದ ಆಕಾಂಕ್ಷಿಗಳು ಅವರಿಗೆ ಸೂಕ್ತವಾದ ಎಲ್ಲಾ ಜ್ಞಾನವನ್ನೂ ಪಡೆಯಲು ಅತ್ಯಂತ ಅನುಕೂಲಕರವಾಗಿದೆ ಎಂದು 22ನೆಯ ಸೂತ್ರದಲ್ಲಿ ತಿಳಿಸಿದ್ದಾರೆ.

“ಮಱ್ಱೆಲ್ಲಾಮ್ ಪೇಸಿಲುಮ್” ಎಂಗಿಱಪಡಿಯೇ ಅಱಿಯ ವೇಣ್ಡುಮ್ ಅರ್ಥಮೆಲ್ಲಾಮ್ ಇದುಕ್ಕುಳ್ಳೇ ಉಣ್ಡು.

ಸರಳ ಅರ್ಥ: ನಾವು ತಿಳಿಯಲೇಬೇಕಾದ ಎಲ್ಲಾ ನಿಗೂಢ ರಹಸ್ಯಗಳನ್ನು ಈ ಮಂತ್ರವು ಹೊಂದಿದೆ. “ಮಱ್ಱೆಲ್ಲಾಮ್ ಪೇಸಿಲುಮ್” ಎಂಬ ಪಾಸುರದಲ್ಲಿ ಇದನ್ನು ತಿಳಿಯಪಡಿಸಿದೆ.

ವ್ಯಾಖ್ಯಾನಮ್: ತಿರುಮಂಗೈ ಆಳ್ವಾರರು ಅಷ್ಟಾಕ್ಷರ ಮಹಾ ಮಂತ್ರವನ್ನು ಪೆರಿಯ ತಿರುಮೊೞಿ 8-10-3 ರಲ್ಲಿ ಹೀಗೆ ಹೇಳಿದ್ದಾರೆ:

“ನಿನ್ ತಿರು ಎಟ್ಟು ಎೞುತ್ತುಮ್ ಕಱ್ಱು ಮಱ್ಱೆಲ್ಲಾಮ್ ಪೇಸಿಲುಮ್”

(ಬೇರೆ ಇದೇ ವಿಷಯಕ್ಕೆ ಸಂಬಂಧಿತವಾದದನ್ನು ಮಾತನಾಡುವಾಗ, ಈ ನಿನ್ನ ಅಷ್ಟಾಕ್ಷರ ಮಂತ್ರದ ಅರ್ಥವನ್ನು ಕಲಿಯುತ್ತೇವೆ.)

…ಏಕೆಂದರೆ ಈ ಮಂತ್ರವು ಆತ್ಮದ ಉನ್ನತಿಗಾಗಿ ಅವಶ್ಯಕವಾದ ಎಲ್ಲಾ ವಿಶಿಷ್ಟವಾದ ಅರ್ಥವನ್ನೂ , ವಿಷಯಗಳನ್ನೂ ಹೊಂದಿದೆ.


ಸೂತ್ರಮ್ – 23

ಪರಿಚಯ: ಲೋಕಾಚಾರ್‍ಯರು ಕೇಳುತ್ತಾರೆ, “ಯಾವ ಅರ್ಥಗಳನ್ನೂ ವಿಷಯಗಳನ್ನೂ ತಿಳಿದುಕೊಳ್ಳಬೇಕು?” ಮತ್ತು ಅವರೇ ಅದಕ್ಕೆ ಉತ್ತರವನ್ನು 23ನೆಯ ಸೂತ್ರದಲ್ಲಿ ವಿವರಿಸುತ್ತಾರೆ.

ಅದಾವದು ಅಂಜರ್ಥಮ್.

ಸರಳ ವಿವರಣೆ: ಅದು ಏನೆಂದರೆ, ಅರ್ಥ ಪಂಚಕಮ್ (ಐದು ಅವಶ್ಯಕ ಅರ್ಥಗಳು).

ವ್ಯಾಖ್ಯಾನಮ್: ಆ ಐದು ಅರ್ಥಗಳು ಯಾವುವೆಂದರೆ : ಆತ್ಮದ ಸ್ವರೂಪ (ಸ್ವ ಸ್ವರೂಪಮ್), ಈಶ್ವರನ ಸ್ವಭಾವ (ಪರ ಸ್ವರೂಪಮ್), ಮುಟ್ಟಬೇಕಾದ ಗುರಿಯ ಸ್ವರೂಪ (ಪುರುಷಾರ್ಥ ಸ್ವರೂಪಮ್), ಗುರಿಯನ್ನು ಮುಟ್ಟಲು ಇರುವ ಮಾಧ್ಯಮದ ಸ್ವರೂಪ (ಉಪಾಯ ಸ್ವರೂಪಮ್), ಅಂತಹ ಗುರಿಯನ್ನು ಮುಟ್ಟಲು ಇರುವ ಅಡೆತಡೆಗಳ ಸ್ವರೂಪ (ವಿರೋಧಿ ಸ್ವರೂಪಮ್).

ಇದನ್ನು ಹಾರಿತ ಸ್ಮೃತಿ 8-141 ರಲ್ಲಿ ವಿವರಿಸಲಾಗಿದೆ:

ಪ್ರಾಪ್ಯಾಸ ಬ್ರಹ್ಮಣೋ ರೂಪಮ್ ಪ್ರಾಪ್ತುಶ್ಚ ಪ್ರತ್ಯಗಾತ್ಮನಃ
ಪ್ರಾಪ್ತ್ಯುಪಾಯಮ್ ಪಲಮ್ ಪ್ರಾಪ್ತೇಸ್ತಥಾ ಪ್ರಾಪ್ತಿ ವಿರೋಧಿ ಚ।
ವದಂತಿ ಸಕಲಾ ವೇದಾಃ ಸೇತಿಹಾಸ ಪುರಾಣಕಾಃ
ಮುನಯಶ್ಚ ಮಹಾತ್ಮನೋ ವೇದ ವೇದಾರ್ಥ ವೇದಿನಃ॥

ಎಲ್ಲಾ ವೇದಗಳೂ ಮತ್ತು ಶಾಸ್ತ್ರಗಳೂ ಈ ಐದು ವಿಷಯಗಳನ್ನೇ ಎಂದರೆ ಅರ್ಥ ಪಂಚಕಮ್ ನನ್ನು ಪ್ರತಿಷ್ಠಾಪಿಸುತ್ತದೆ. ಶಾಸ್ತ್ರಗಳಲ್ಲಿ ಬಹಳ ವಿಸ್ತಾರವಾಗಿರುವ ಅರ್ಥ ಪಂಚಕಮ್‍ನನ್ನು ಈ ಮಂತ್ರದಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ ಆದ್ದರಿಂದ ಈ ಮಂತ್ರದಲ್ಲೂ ಇವು ಪ್ರಸ್ತುತವಿದೆ ಎಂದು ಹೇಳಬಹುದು. ಪ್ರಣವಮ್ ನಮ್ಮ ಒಳ ಆತ್ಮವನ್ನೂ ಅದರ ಸ್ವಭಾವವವನ್ನೂ ತೋರಿಸುತ್ತದೆ. ನಮಃ ಎಂಬುದು ವಿರೋಧಿಯನ್ನು (ಅಡಚಣೆಗಳನ್ನು) ಮತ್ತು ಉಪಾಯವನ್ನು (ಮಾಧ್ಯಮವನ್ನು) ಸೂಚಿಸುತ್ತದೆ. ನಾರಾಯಣ ಎಂಬುದು ಸ್ವಾಮಿಯ ಸ್ವಭಾವವನ್ನು (ಪರ ಸ್ವರೂಪ) ತೋರಿಸುತ್ತದೆ. ಮತ್ತು ಆಯ ಎಂಬುದು ನಮ್ಮ ಗುರಿಯನ್ನು (ಪಲ ಸ್ವರೂಪವನ್ನು) ತೋರಿಸಿಕೊಡುತ್ತದೆ.


ಸೂತ್ರಮ್ – 24

ಪರಿಚಯ: ಲೋಕಾಚಾರ್ಯರು ಮುಂದುವರೆಸಿ ಈ ಮಂತ್ರದ ಶ್ರೇಷ್ಟತೆಯನ್ನು 24ನೆಯ ಸೂತ್ರದಲ್ಲಿ ವಿವರಿಸಿದ್ದಾರೆ.

ಪೂರ್ವಾಚಾರ್ಯಂಗಳ್, ಇಧಿಲ್ ಅರ್ಥಮ್ ಅಱಿವಧಱ್ಕು ಮುಂಬು, ತಂಗಳೈ ಪಿಱನ್ದಾರ್ಗಳಾಗ ನಿನೈತ್ತಿಱಾರ್ಗಳ್; ಇದಿಲ್ ಅರ್ಥ ಜ್ಙಾನಮ್ ಪಿಱನ್ದ ಪಿನ್ಬು “ಪಿಱನ್ದ ಪಿನ್ ಮಱನ್ದಿಲೇನ್” ಎನ್ಗಿಱಪಡಿಯೇ ಇತ್ತೈ ಒೞಿಯ ವೇಱೊನ್ಱಾಲ್ ಕಾಲಕ್ಷೇಪಮ್ ಪಣ್ಣಿ ಅಱಿಯಾರ್ಗಳ್.

ಸರಳ ವಿವರಣೆ: ಪೂರ್ವಾಚಾರ್ಯರು ತಮ್ಮನ್ನು ತಾವು ಎಂದಿಗೂ ಈ ಅರ್ಥವನ್ನು ಅರಿಯುವುದಕ್ಕೆ ಮುಂದು ಹುಟ್ಟಿರುವುದಾಗಿ ಪರಿಗಣಿಸಿರುವುದಿಲ್ಲ. ಈ ಅರ್ಥವನ್ನು ತಿಳಿದ ಬಳಿಕ ಇದರ ಬಗ್ಗೆ ಧ್ಯಾನಿಸುವುದನ್ನು ಬಿಟ್ಟು ಮತ್ತೊಂದನ್ನು ಮಾಡುವುದರ ಬಗ್ಗೆ ಯೋಚಿಸಿರುವುದಿಲ್ಲ.

ವ್ಯಾಖ್ಯಾನಮ್: ನಮ್ಮ ಪೂರ್ವಾಚಾರ್‍ಯರುಗಳಾದ ನಾಥಮುನಿ, ಯಾಮುನಾಚಾರ್‍ಯರು, ಯತಿರಾಜರು ಮುಂತಾದವರು ಈ ಮಂತ್ರದ ಅರ್ಥವನ್ನು ತಿಳಿಯುವ ಮುಂದೆ ಹುಟ್ಟಿರುವುದಾಗಿ ತಮ್ಮನ್ನು ತಾವು ಪರಿಗಣಿಸಿರುವುದಿಲ್ಲ; ಈ ಅರ್ಥವನ್ನು ಅರಿತ ಬಳಿಕ ತಿರುಮೞಿಸೈ ಆೞ್ವಾರರು ತಮ್ಮ ದಿವ್ಯ ಸೂಕ್ತಿ ತಿರುಚ್ಚಂದವೃತ್ತಮ್ 64ನೆಯ ಪಾಸುರದಲ್ಲಿ ಹೇಳಿರುವ ಹಾಗೆ “ ಪಿಱನ್ದ ಪಿನ್ ಮಱನ್ದಿಲೇನ್” (ಇದನ್ನು ಅರಿತ ಬಳಿಕ ಅರ್ಥವನ್ನು ಮರೆತಿಲ್ಲ), ಎಂಬಂತೆ ಅವರುಗಳೆಲ್ಲಾ ಈ ಮಂತ್ರವನ್ನು ಮರೆತಿಲ್ಲ; ಇದನ್ನು ಹೊರೆತಾಗಿ, ಅವರು ತಮ್ಮ ಅಮೂಲ್ಯವಾದ ವೇಳೆಯನ್ನು ಬೇರೆ ಯಾವುದೇ ಗದ್ಯವನ್ನು ತಿಳಿದುಕೊಳ್ಳಲು ಬಳಸಿಲ್ಲ. ಅವರು ಈ ಮಂತ್ರವನ್ನು ವೇದಗಳನ್ನು ಪಠಿಸುವಾಗಲೂ, ಶಾಸ್ತ್ರಗಳನ್ನು ಪಠಿಸುವಾಗಲೂ, ಮತ್ತು ಆೞ್ವಾರರ ಅಮೃತಧಾರೆಗಳನ್ನು ಅನುಭವಿಸುವಾಗಲೂ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಈ ಮಂತ್ರವನ್ನು ಧ್ಯಾನಿಸುವಲ್ಲೇ ಕಳೆದರು ಎಂಬುದು ಉತ್ಪ್ರೇಕ್ಷೆಯಲ್ಲ.


ಸೂತ್ರಮ್ – 25

ಪರಿಚಯ: ಈ ಮಂತ್ರದ ಪ್ರಭಾವದಿಂದ ಇಚ್ಛಿತ ಗುರಿಯನ್ನು ತಲುಪಲು ಸಾಧ್ಯವಾಗುವಾಗ, ಏಕೆ ಅವರು ಇದರ ಒಳ ಅರ್ಥವನ್ನು ಅರಿಯಲು ಮತ್ತು ಅದರಲ್ಲಿ ಮುಳುಗಿಹೋಗುತ್ತಾರೆ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು 25ನೆಯ ಸೂತ್ರದಲ್ಲಿ ಅದರ ಕಾರಣವನ್ನು ವಿವರಿಸಿದ್ದಾರೆ.

ವಾಚಕತ್ತಿಱ್‍ಕಾಟ್ಟಿಲ್ ವಾಚತ್ತಿಲೇ ಊನ್ಱುಗೈಕ್ಕಡಿ ಈಶ್ವರನೇ ಉಪಾಯೋಪೇಯಮ್ ಎನ್ಱು ನಿನೈತ್ತಿರುಕ್ಕೈ.

ಸರಳ ಅರ್ಥ: ಆ ಪದಗಳಲ್ಲಿ ಮುಳುಗಿರುವುದರ ಬದಲು, ಪದಾರ್ಥದಲ್ಲಿ (ಆ ವಸ್ತುವಲ್ಲಿ) ಮುಳುಗುವುದಕ್ಕೆ ಕಾರಣ; ಈಶ್ವರನೇ ಉಪಾಯಮ್ (ದಾರಿ, ಮಾರ್ಗ) ಮತ್ತು ಉಪೇಯಮ್ (ಗಮ್ಯಸ್ಥಾನ, ಗುರಿ) ಎಂದು ಅವರು ತಿಳಿದಿರುವುದರಿಂದ.

ವ್ಯಾಖ್ಯಾನಮ್: ಈ ಪದಕ್ಕೇ ಅಂತಹ ಶಕ್ತಿಯಿದ್ದರೂ, ಅದೇ ಮರ್ಗವೂ ಮತ್ತು ಗುರಿಯೂ, ಮತ್ತು ಅದನ್ನು ಸಾಧಿಸಲು ಪೂರಕವಾಗಿದ್ದರೂ ಹಾಗೂ ಅದಕ್ಕೆ ಮಿಗಿಲಾಗಿದ್ದರೂ, ನಮ್ಮ ಆಚಾರ್‍ಯರುಗಳು ಆ ಪದಾರ್ಥದಲ್ಲಿಯೇ ಮುಳುಗಿದ್ದರು (ಸ್ವಾಮಿಯಲ್ಲಿಯೇ) ಏಕೆಂದರೆ ಅನ್ಯರಂತೆ ಅವರು ಈ ಮಂತ್ರವನ್ನು ಸ್ವಾಮಿಯನ್ನು ಪಡೆಯಲು ಬೇರೆ ವಿಧಗಳನ್ನು ಅವರು ಪರಿಗಣಿಸದೇ ಆಚಾರ್ಯರು ಈಶ್ವರನಿಗೇ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಮಾರ್ಗ ಮತ್ತು ಗುರಿ ಎರಡೂ ಆಗಿ.

ಆದ್ದರಿಂದ ಮೂರನೆಯ ಸೂಕ್ತಿಯಿಂದ ಇದುವರೆಗೆ ಲೋಕಾಚಾರ್‍ಯರು ಅತ್ಯಂತ ಅದ್ಭುತವಾಗಿ ವಿವರಿಸಿದ್ದಾರೆ:

  • ಈ ಮಂತ್ರವು ಅತ್ಯಂತ ಶ್ರೇಷ್ಠವಾದ ಮಂತ್ರವಾಗಿರುವುದರಿಂದ ಇದನ್ನು ಬೇರೆ ಪದಗಳನ್ನು ಉಚ್ಛರಿಸುವಂತೆ ಸಾಮಾನ್ಯವಾಗಿ ಉಚ್ಚರಿಸಬಾರದು.
  • ಈ ಮಂತ್ರವು ತಾನು ಒಂದೇ ಮಂತ್ರವಾಗಿದೆ ಏಕೆಂದರೆ ಇದನ್ನು ಈಶ್ವರನು ತಾನೇ ಗುರು ಮತ್ತು ಶಿಷ್ಯನಾಗಿ ಬಹಿರಂಗ ಪಡಿಸಿರುತ್ತಾನೆ.
  • ಇದರ ಸಾಟಿಯಿಲ್ಲದ ಸ್ಥಾನವು ಇತರ ಮಂತ್ರಗಳಿಗೆ ಮತ್ತು ಶಾಸ್ತ್ರಗಳಿಗೆ ಹೋಲಿಸಿದಾಗ.
  • ಇದರ ಅಸಾಧಾರಣ ಶಕ್ತಿ ಸಾಮರ್ಥ್ಯವು ಇದನ್ನು ಸರಿಯಾದ ಮರ್ಯಾದೆಯೊಂದಿಗೆ ಪಠಿಸದೇ ಇದ್ದಾಗಲೂ.
  • ಭಕ್ತರ ಎಲ್ಲಾ ಅಪೇಕ್ಷೆಗಳನ್ನೂ ಪೂರೈಸುವ ಸಾಮರ್ಥ್ಯವು.
  • ಕರ್ಮ ಮತ್ತು ಇತರ ಯೋಗಗಳಿಗೆ ಪೂರಕವಾಗಿರುವ ಸ್ವಭಾವ.
  • ಪವಿತ್ರವಾದ ಮತ್ತು ಗುಟ್ಟಾಗಿರುವ ವಿಷಯಗಳನ್ನು ಕಲಿಸಲು ಮತ್ತು ಯಾರು ಕಲಿಯುತ್ತರೋ ಅವರಿಗೆ ಶ್ರೇಷ್ಠತೆಯನ್ನು ಪರಿಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ
  • ನಮ್ಮ ಮನಸ್ಸಿನಲ್ಲಿ ಅತ್ಯಂತ ಉನ್ನತವಾದ ಭಾವನೆಗಳನ್ನು ಹುಟ್ಟಿಸಲು ಸಹಕಾರಿಯಾಗಿರುವ ಇದರ ಸ್ವಭಾವ.

ಆದ್ದರಿಂದ ಎಲ್ಲರಿಗೂ ಈ ಮಂತ್ರದ ಶ್ರೇಷ್ಠತೆಯನ್ನು ತಿಳಿಯ ಪಡಿಸಲು ಅವರು ಈ ಸೂಕ್ತಿಗಳನ್ನು ಬರೆದಿರುತ್ತಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ


ಮೂಲ : https://srivaishnavagranthams.wordpress.com/2020/06/10/mumukshuppadi-suthrams-21-25/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

೪೦೦೦ ದಿವ್ಯಪ್ರಬಂದ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ

ಶ್ರೀಮನ್ನಾರಾಯಣನು ಆಯ್ದ ಕೆಲವು ಜೀವಾತ್ಮಗಳಿಗೆ ದೋಷವಿಲ್ಲದ ದಿವ್ಯಜ್ಞಾನವನ್ನು, ಪರಿಪೂರ್ಣ ಭಕ್ತಿಯನ್ನು ಅನುಗ್ರಹಿ, ಅವರನ್ನು ಆಳ್ವಾರರುಗಳನ್ನಾಗಿ ಸೃಷ್ಠಿಸಿದನು. ಆಳ್ವಾರರು ಶ್ರೀಮನ್ನಾರಾಯಣನನ್ನು ಕೊಂಡಾಡಿ ಸ್ತುತಿಸುವ ಅನೇಕ ಪದ್ಯಗಳನ್ನು (ಪಾಶುರಮ್) ರಚಿಸಿದ್ದಾರೆ. ಈ ಪದ್ಯಗಳು ಸುಮಾರು ೪೦೦೦ ಶ್ಲೋಕಗಳವರೆಗೆ ಒಟ್ಟುಗೂಡುತ್ತವೆ ಆದ್ದರಿಂದ ಅವುಗಳನ್ನು ೪೦೦೦ ದಿವ್ಯ ಪ್ರಬಂಧ ಎಂದು ಕರೆಯಲಾಗುತ್ತದೆ. ದಿವ್ಯ ಎಂದರೆ ದೈವಿಕ, ಅತಿಮಾನುಷ ಮತ್ತು ಪ್ರಬಂಧ ಎಂದರೆ ಸಾಹಿತ್ಯ (ಭಗವಂತನನ್ನೇ ಸೆರೆಹಿಡಿಯುವಂಥದ್ದು, ಅವನ ಭಕ್ತಿಯಲ್ಲಿ ಪೂರ್ಣವಾಗಿ ಮುಳುಗಿ ಅನುಭವಿಸಿದ ದಿವ್ಯಾನುಭವಗಳನ್ನು ಒಳಗೊಂಡದ್ದು). ಆಳ್ವಾರರು ತಮ್ಮ ಪದ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ (ಸ್ಥಳಗಳು) ಅರ್ಚಾರೂಪದಲ್ಲಿರುವ ಭಗವಂತನನ್ನು ವೈಭವೀಕರಿಸಿದ್ದಾರೆ. ಆ ಕ್ಷೇತ್ರಗಳು ದಿವ್ಯದೇಶಗಳೆಂದು (ಪವಿತ್ರ ಸ್ಥಳಗಳು) ಪ್ರಸಿದ್ಧವಾದವು. ದಿವ್ಯದೇಶಗಳು ಒಟ್ಟು ೧೦೮ ಇವೆ. ಅವುಗಳಲ್ಲಿ ೧೦೬, ಭರತ ದೇಶದ (ನೇಪಾಳ ಸೇರಿದಂತೆ) ವಿವಿಧ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಕ್ಷೀರಾಬ್ಧಿ (ಕ್ಷೀರಸಾಗರ) ಭೌತಿಕ ಕ್ಷೇತ್ರದಲ್ಲಿ (ಪ್ರಾಕೃತ ಜಗತ್ತು) ನೆಲೆಗೊಂಡಿದ್ದರೂ, ನಮಗೆ ತಲುಪಲು ತುಂಬಾ ದೂರದಲ್ಲಿದೆ. ಪರಮಪದವು ವಿಮೋಚನೆಯ (ಮುಕ್ತಿ, ಮೋಕ್ಷ) ನಂತರ ತಲುಪುವ ಆಧ್ಯಾತ್ಮಿಕ ಕ್ಷೇತ್ರವಾಗಿದೆ. ಶ್ರೀರಂಗವನ್ನು ಪ್ರಧಾನ ದಿವ್ಯದೇಶವೆಂದು ಪರಿಗಣಿಸಲಾಗಿದೆ ಮತ್ತು ತಿರುಮಲ, ಕಾಂಚಿಪುರಂ, ತಿರುವಳ್ಳಿಕ್ಕೇಣಿ, ಆಳ್ವಾರ್ ತಿರುನಗರಿ ಇತ್ಯಾದಿ, ಕೆಲವು ಪ್ರಮುಖ ದಿವ್ಯದೇಶವೆಂದು. ಭಗವಂತನು ಐದು ನೆಲೆಗಳನ್ನು (ರೂಪಗಳನ್ನು) ಹೊಂದಿದ್ದಾನೆ – ಪರವಾಸುದೇವ ಮೂರ್ತಿಯಾಗಿ ಪರಮಪದದಲ್ಲಿ, ವ್ಯೂಹಮೂರ್ತಿಯಾಗಿ ಕ್ಷೀರಾಬ್ದಿಯಲ್ಲಿ, ಅಂತರ್ಯಾಮಿಯಾಗಿ (ಸಕಲ ಚೇತನರ ಒಳಗೆ ವಾಸಿಸುವ), ವಿಭವಮೂರ್ತಿಯಾಗಿ (ಶ್ರೀ ರಾಮ ಕೃಷ್ಣಾದಿ ಅವತಾರಗಳು) , ಅರ್ಚಾರೂಪಿಯಾಗಿ. ಇವುಗಳಲ್ಲಿ ಅರ್ಚಾವತಾರವೇ ಉದಾತ್ತವಾದ, ಪರಿಪೂರ್ಣವಾದ ನೆಲೆಯಾಗಿದೆ. ಇದು ಸಕಲ ಚೇತನರೂ ಸದಾಕಾಲವೂ ಭಗವಂತನನ್ನು ಅನುಭವಿಸಲು ಸುಲಭಸಾಧ್ಯವಾದ ನೆಲೆಯಾಗಿದೆ. ನಮ್ಮ ಪೂರ್ವಾಚಾರ್ಯರು ಧಿವ್ಯಾಧೇಶಗಳನ್ನು ತಮ್ಮ ಜೀವನವನ್ನಾಗಿ ಮಾಡಿಕೊಂಡಿದ್ದರು ಮತ್ತು ಅಂತಹ ದಿವ್ಯದೇಶಗಳಲ್ಲಿ ಭಗವಾನ್ ಮತ್ತು ಭಾಗವತರ ಸೇವೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಹೆಚ್ಚಿನ ಮಾಹಿತಿಗಾಗಿ http://koyil.org ಗೆ ಭೇಟಿ ಕೊಡಿ.

ದಿವ್ಯ ಪ್ರಬಂದವು ವೇದ/ವೇದಾಂತದ ಸಾರವನ್ನು ಸರಳ ಮತ್ತು ಪರಿಶುದ್ಧವಾದ ತಮಿಳು ಭಾಷೆಯಲ್ಲಿ ಒಳಗೊಂದು ದಿವ್ಯಸೂಕ್ತಿಯಾಗಿ ಹೊರಹೊಮ್ಮಿದೆ. ಈ ದಿವ್ಯ ಪ್ರಬಂಧಗಳ ಸಂಪೂರ್ಣ ಉದ್ದೇಶವು ಜೀವಾತ್ಮರ ಅಜ್ಞಾನವನ್ನು ಸಂಪೂರ್ಣವಾಗಿ ಕಳೆದು, ಭಕ್ತಿರೂಪಾಪನ್ನವಾದ ಜ್ಞಾನವನ್ನು ನೀಡಿ ಉನ್ನತಿಯನ್ನು ನೀಡುವುದೇ ಆಗಿದೆ. ಆಳ್ವಾರರ ಕಾಲದ ನೂರಾರು ವರ್ಷಗಳ ನಂತರ, ನಾಥಮುನಿಗಳಿಂದ ಪ್ರಾರಂಭವಾಗಿ ಅನೇಕ ಆಚಾರ್ಯರು, ಶ್ರೀ ರಾಮಾನುಜರನ್ನು ಕೇಂದ್ರೀಕರಿಸಿ ಮಾಮುನಿಗಳವರೆಗೆ ಕಾಣಿಸಿಕೊಂಡು ಆಳ್ವಾರರ ದಿವ್ಯ ಸಂದೇಶವನ್ನು ಸಾರಿದರು. ಮಂದಬುದ್ಧಿಯುಳ್ಳ ಜನರು ಆಳ್ವಾರರ ಪದ್ಯಗಳನ್ನು ಸರಳವಾದ ತಮಿಳು ಹಾಡುಗಳೆಂದು ಪರಿಗಣಿಸಿದರೂ, ಅಪರಿಮಿತ ಜ್ಞಾನವುಳ್ಳ ಆಚಾರ್ಯರು ಈ ಪದ್ಯಗಳು ಸರ್ವ ಶಾಸ್ತ್ರಾರ್ಥ ಸಾರತಮವಾದ, ಪರಮತಾತ್ಪರ್ಯವನ್ನು ನಿರೂಪಿಸುವ, ಶ್ರೀಮಾನ್ ನಾರಾಯಣನೇ ಸಾಧನ (ಈ ಭೌತಿಕ ಪ್ರಪಂಚದಿಂದ ಜೀವಾತ್ಮರನ್ನು ಮೇಲಕ್ಕೆತ್ತಲು) ಮತ್ತು ಗುರಿ (ಪರಮಪದದಲ್ಲಿ – ಆಧ್ಯಾತ್ಮಿಕ ಜಗತ್ತಿನಲ್ಲಿ ಶ್ರೀಮಾನ್ ನಾರಾಯಣನಿಗೆ ಶಾಶ್ವತ ಸೇವೆಯ ನಿಜವಾದ ಸ್ವರೂಪದಲ್ಲಿ ನೆಲೆಗೊಳ್ಳಲು) ಎಂದು ಸ್ಥಾಪಿಸಿದರು. ನಮ್ಮ ಪೂರ್ವಾಚಾರ್ಯರು ದಿವ್ಯ ಪ್ರಬಂಧಗಳನ್ನು ಸಂಪೂರ್ಣವಾಗಿ ಆಸ್ವಾದಿಸಿದರು ಮತ್ತು ಅವರ ಸಮಗ್ರ ಜೀವನವನ್ನು ದಿವ್ಯಪ್ರಬಂದದ ಕಲಿಕೆ, ಕಲಿಸುವುದು ಮತ್ತು ಈ ದಿವ್ಯ ವಾಕ್ಯಗಳಿಗನುಸಾರವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರಲ್ಲಿ ಮುಡಿಪಾಗಿಟ್ಟಿದ್ದರು.

ಪ್ರಬಂದಲೆಖಕರುಪಾಶುರಗಳ ಎಣಿಕೆ

ಮೊದಲನೇ ಸಾವಿರ (ಮುದಲಾಯಿರಂ)

ತಿರುಪ್ಪಲ್ಲಾಂಡುಪೆರಿಯಾಳ್ವಾರ್೧೨
ಪೆರಿಯಾಳ್ವಾರ್ತಿರುಮೊಳಿ೪೬೧
ತಿರುಪ್ಪಾವೈಆಂಡಾಳ್೩೦
ನಾಚ್ಚಿಯಾರ್ ತಿರುಮೊಳಿಆಂಡಾಳ್೧೪೩
ಕಣ್ಣಿನುನ್ ಚಿರುತ್ತಾಮ್ಬುಮಧುರಕವಿ ಆಳ್ವಾರ್೧೧
ಪೆರುಮಾಳ್ ತಿರುಮೊಳಿಕುಲಶೇಖರ ಆಳ್ವಾರ್೧೦೫
ತಿರುಚ್ಚಂದ ವಿರುತ್ತಮ್ತಿರುಮಳಿಸೈಪ್ಪಿರಾನ್೧೨೦
ತಿರುಮಾಲೈತೊಂಡರಡಿಪ್ಪೊಡಿ  ಆಳ್ವಾರ್೪೫
ತಿರುಪ್ಪಳ್ಳಿಯೆಳುಚ್ಚಿತೊಂಡರಡಿಪ್ಪೊಡಿ  ಆಳ್ವಾರ್೧೦
ಅಮಲನಾದಿಪಿರಾನ್ ತಿರುಪ್ಪಾಣ್  ಆಳ್ವಾರ್೧೦

ಎರಡನೇ ಸಾವಿರ (ಇರಂಡಾಮ್ ಆಯಿರಂ)

ಪೆರಿಯ ತಿರುಮೊಳಿತಿರುಮಂಗೈ ಆಳ್ವಾರ್೧೦೮೪
ತಿರುಕ್ಕುರುಂತಾಂಡಗಮ್  ತಿರುಮಂಗೈ ಆಳ್ವಾರ್೨೦
ತಿರುನೆಡುಂತಾಂಡಗಮ್  ತಿರುಮಂಗೈ ಆಳ್ವಾರ್೩೦

ಇಯರ್ಪಾ

ಮುದಲ್ ತಿರುವಂದಾದಿಪೊಯ್ಗೈ ಆಳ್ವಾರ್೧೦೦ 
ಇರಂಡಾಮ್ ತಿರುವಂದಾದಿಬೂತತ್ತಾಳ್ವಾರ್  ೧೦೦
ಮೂನ್ರಾಮ್ ತಿರುವಂದಾದಿಪೇಯ್ ಆಳ್ವಾರ್೧೦೦
ನಾನ್ಮುಗಂ ತಿರುವಂದಾದಿತಿರುಮಳಿಸೈ ಆಳ್ವಾರ್೯೬
ತಿರುವಿರುತ್ತಮ್ನಮ್ಮಾಳ್ವಾರ್ ೧೦೦
ತಿರುವಾಸಿರಿಯಮ್ ನಮ್ಮಾಳ್ವಾರ್ 
ಪೆರಿಯ ತಿರುವಂದಾದಿನಮ್ಮಾಳ್ವಾರ್ ೮೭  
ತಿರುವೆಳುಕೂಟ್ರಿರುಕೈತಿರುಮಂಗೈ ಆಳ್ವಾರ್
ಸಿರಿಯ ತಿರುಮಡಲ್ತಿರುಮಂಗೈ ಆಳ್ವಾರ್
ಪೆರಿಯ ತಿರುಮಡಲ್ತಿರುಮಂಗೈ ಆಳ್ವಾರ್
ರಾಮಾನುಜ ನೂತ್ತಂದಾದಿತಿರುವರಂಗತ್ತುಅಮುದನಾರ್೧೦೮

ನಾಲ್ಕನೇ ಸಾವಿರ (ನಾಂಗಾಮ್ ಆಯಿರಂ)

ತಿರುವಾಯ್ಮೊಳಿನಮ್ಮಾಳ್ವಾರ್೧೧೦೨

ಅಡಿಯೇನ್ ಗೋದಾ ರಾಮಾನುಜ ದಾಸಿ

ಮೂಲ : https://srivaishnavagranthams.wordpress.com/2023/05/18/4000-dhivyaprabandham/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

ಅನಧ್ಯಯನ ಕಾಲ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ

ಅಧ್ಯಯನ ಅಂದರೆ ಕಲಿಕೆ, ಅಭ್ಯಸಿಸು, ಪಠಿಸು, ಮನನಮಾಡು ಇತ್ಯಾದಿ. ವೇದವನ್ನು ಆಚಾರ್ಯರಿಂದ ಕೇಳುವ ಮೂಲಕ ಮತ್ತು ಅದನ್ನು ಪುನರಾವರ್ತಿಸುವ ಮೂಲಕ ಅವರ ಅಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ದೈನಂದಿನ ಅನುಷ್ಟಾನಗಳ ಭಾಗವಾಗಿ ವೇದ ಮಂತ್ರಗಳನ್ನು ನಿಯಮಿತವಾಗಿ ಪಠಿಸಲಾಗುತ್ತದೆ. ಅನಧ್ಯಯನ ಎಂದರೆ ಕಲಿಕೆ/ಪಾಠ ಮಾಡುವುದನ್ನು ತಡೆಯುವುದು, ವಿರಾಮ ನೀಡುವುದು. ವರ್ಷದ ಕೆಲವು ಸಮಯಗಳಲ್ಲಿ ವೇದವನ್ನು ಪಠಿಸುವುದಿಲ್ಲ. ಈ ಸಮಯವನ್ನು ಶಾಸ್ತ್ರದ ಇತರ ಭಾಗಗಳಾದ ಸ್ಮೃತಿ, ಇತಿಹಾಸಗಳು, ಪುರಾಣಗಳು ಇತ್ಯಾದಿಗಳನ್ನು ಕಲಿಯಲು ಬಳಸಿಕೊಳ್ಳಲಾಗುತ್ತದೆ. ಹಾಗೂ, ವರ್ಷವಿಡೀ ಬರುವ ಅಮವಾಸ್ಯೆ, ಪೌರ್ಣಮಿ, ಪ್ರಥಮೆ ಮುಂತಾದ ದಿನಗಳು ವೇದವನ್ನು ಕಲಿಯಲು ಅನುಕೂಲಕರವಾಗಿಲ್ಲ. ಹಾಗೇ, ದ್ರಾವಿಡ ವೇದ (೪000 ದಿವ್ಯ ಪ್ರಬಂಧ) ವನ್ನು ಸಂಸ್ಕೃತ ವೇದಕ್ಕೆ ಸಮಾನವೆಂದು ಪರಿಗಣಿಸಲಾಗಿರುವುದರಿಂದ, ನಿರ್ದಿಷ್ಟ ಅವಧಿಯಲ್ಲಿ ದಿವ್ಯ ಪ್ರಬಂಧವನ್ನು ಕಲಿಯದ/ಪಠಿಸದಿರುವ ಸಂಪ್ರದಾಯವಿದೆ.

ಅನಧ್ಯಯನ ಕಾಲವು ತಿರುಕಾರ್ತಿಕೈ (ಕಾರ್ತಿಕ ಮಾಸದ) ದೀಪೋತ್ಸವದ ಮರುದಿನ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ, ಇದು ದೇವಾಲಯಗಳಲ್ಲಿ ಅಧ್ಯಯನ-ಉತ್ಸವ ಮುಗಿದ ನಂತರ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ತೈ ಹಸ್ತದಲ್ಲಿ ದಿವ್ಯಪ್ರಬಂಧ ವಾಚನವನ್ನು ಪುನರಾರಂಭಿಸುವ ಪರಿಪಾಠವಿದೆ.

ಶ್ರೀರಂಗಂದಲ್ಲಿ ವೈಕುಂಠ ಏಕಾದಶಿಯ ಸಮಯದಲ್ಲಿ ತಿರುವಾಯ್ಮೊಳಿಯನ್ನು ಪಠಿಸುವ ಮೂಲಕ ನಮ್ಮಾಳ್ವಾರರ  ಪರಮಪದ ಯಾತ್ರೆಯನ್ನು ವೈಭವೀಕರಿಸಲು ತಿರುಮಂಗೈ ಆಳ್ವಾರರು ಈ ಅಧ್ಯಯನ ಉತ್ಸವವನ್ನು ಮೊದಲು ಆಯೋಜಿಸಿದರು. ತರುವಾಯ, ಶ್ರೀಮಾನ್ ನಾಥಮುನಿಗಳು ಎಲ್ಲಾ ಆಳ್ವಾರರ ಪ್ರಬಂಧಗಳ ವಾಚನಗೋಷ್ಠಿಯನ್ನು ಆಯೋಜಿಸಿದರು. ಎಂಪೆರುಮಾನಾರ್ ಇದನ್ನು ಎಲ್ಲಾ ದಿವ್ಯದೇಶಗಳಲ್ಲಿ ಆಚರಿಸಲು ವ್ಯವಸ್ಥೆ ಮಾಡಿದರು. ನಮ್ಮ ನಂತರದ ಆಚಾರ್ಯರು ಈ ಸಂಪ್ರದಾಯವನ್ನು ಅದ್ಧೂರಿಯಾಗಿ ಮುಂದುವರೆಸಿದರು.

ಅನಧ್ಯಯನ ಕಾಲದಲ್ಲಿ ಏನು ಕಲಿಯಬೇಕು ಮತ್ತು ಪಠಿಸಬೇಕು?

ಕೆಲವು  ತ್ವರಿತ ಸೂಚನೆಗಳು ಇಲ್ಲಿವೆ:

  • ಸಾಮಾನ್ಯವಾಗಿ ದೇವಾಲಯಗಳಲ್ಲಿ, ಅನಧ್ಯಯನ ಕಾಲದ ಸಮಯದಲ್ಲಿ, ತಿರುಪ್ಪಾವೈ ಬದಲಿಗೆ ಉಪದೇಶರತ್ತಿನಮಾಲೈ ಮತ್ತು ಕೋಯಿಲ್ ತಿರುವಾಯ್ಮೊಳಿ/ರಾಮಾನುಸ ನೂತ್ತಂದಾದಿಯ ಬದಲಿಗೆ ತಿರುವಾಯ್ಮೊಳಿ ನೂತ್ತಂದಾದಿಯನ್ನು ಪಠಿಸಲಾಗುತ್ತದೆ.
  • ಮಾರ್ಹಳಿ ತಿಂಗಳಲ್ಲಿ ತಿರುಪ್ಪಳ್ಳಿಯೆಳುಚ್ಚಿ/ತಿರುಪ್ಪಾವೈ ಪಾರಾಯಣ ಪುನರಾರಂಭವಾಗುತ್ತದೆ.
  • ದೇವಾಲಯಗಳಲ್ಲಿ, ಅಧ್ಯಯನ ಉತ್ಸವದ ಸಮಯದಲ್ಲಿ, ಎಲ್ಲಾ ೪000 ಪಾಸುರಗಳನ್ನು ಒಮ್ಮೆ ಪಠಿಸಲಾಗುತ್ತದೆ
  • ಮನೆಗಳಲ್ಲಿ, ತಿರುವಾರಾಧನೆಯ ಸಮಯದಲ್ಲಿ, ೪000 ದಿವ್ಯ ಪ್ರಬಂಧದಿಂದ ಪಾಸುರಗಳನ್ನು ಅನಧ್ಯಯನ ಕಾಲದಲ್ಲಿ ಪಠಿಸಲಾಗುವುದಿಲ್ಲ, (ಮಾರ್ಹಳಿ ತಿಂಗಳಲ್ಲಿ ದೇವಸ್ಥಾನಗಳಲ್ಲಿಯೂ ಅದೇ ತತ್ವ – ತಿರುಪ್ಪಾವೈ ಮತ್ತು ತಿರುಪ್ಪಳ್ಳಿಯೆಳುಚ್ಚಿಯನ್ನು ಪಠಿಸಲಾಗುತ್ತದೆ.
    • ಕೋಯಿಲ್ ಆಳ್ವಾರರನ್ನು ತೆರೆಯುವ ಸಮಯದಲ್ಲಿ, ನಾವು ಜಿತಂತೇ ಸ್ಥೋತ್ರವನ್ನು (ಮೊದಲ 2 ಶ್ಲೋಕಗಳು) ಪಠಿಸುತ್ತೇವೆ (“ಕೌಸಲ್ಯ ಸುಪ್ರಜಾ ರಾಮ” ಶ್ಲೋಕ, “ಕೂರ್ಮಾದಿನ್ ” ಶ್ಲೋಕ (ಇವುಗಳನ್ನು ಸಾಮಾನ್ಯವಾಗಿ ಪಠಿಸಲಾಗುತ್ತದೆ) ಮತ್ತು ನೇರವಾಗಿ ಬಾಗಿಲನ್ನು ತೆರೆಯುತ್ತೇವೆ. ಹಾಗೇ ಬಾಗಿಲು ತೆರೆಯುವಾಗ ಹೃದಯ/ಮನಸ್ಸಿನಲ್ಲಿ ಆಳ್ವಾರರ ಪಾಸುರಗಳನ್ನು ಸ್ಮರಿಸುವುದಕ್ಕೆ/ಧ್ಯಾನಮಾಡುವುದಕ್ಕೆ ಅಡ್ಡಿಯಿಲ್ಲ.
    • ಅದೇ ರೀತಿ ತಿರುಮಂಜನದ ಸಮಯದಲ್ಲಿ, ವೇದ ಸೂಕ್ತಗಳನ್ನು ಪಠಿಸಿದ ನಂತರ, ನಾವು “ವೆಣ್ಣೆಯ್ಯಳೈOದ ಕುಣುಂಗುಂ” ಪದಿಗಂ ಮತ್ತು ಕೆಲವು ಹೆಚ್ಚುವರಿ ಪಾಸುರಗಳನ್ನು ಪಠಿಸುತ್ತೇವೆ – ಅನಧ್ಯಯನ ಕಾಲದ ಸಮಯದಲ್ಲಿ, ನಾವು ಕೇವಲ ಸೂಕ್ತಗಳೊಂದಿಗೆ ನಿಲ್ಲಿಸುತ್ತೇವೆ.
    • ಮಂತ್ರ ಪುಷ್ಪ ಸಮಯದಲ್ಲಿ, ನಾವು ಸಾಮಾನ್ಯವಾಗಿ “ಸೆನ್ರಾಲ್ ಕುಡೈಯಾಂ” ಪಾಸುರವನ್ನು ಪಠಿಸುತ್ತೇವೆ. ಅನಧ್ಯಯನ ಕಾಲದ  ಸಮಯದಲ್ಲಿ, ನಾವು ಅದರ ಬದಲಿಗೆ “ಎಂಪೆರುಮಾನಾರ್ ದರಿಶನಂ ಎನ್ರೇ” ಪಾಸುರವನ್ನು ಪಠಿಸುತ್ತೇವೆ.
    • ಸಾಟ್ರುಮೊರೈ ಸಮಯದಲ್ಲಿ, ನಾವು “ಸಿತ್ತಂ ಸಿರುಕಾಲೇ”, “ವಂಗಕ್ಕಡಲ್” ಮತ್ತು “ಪಲ್ಲಾಂಡು ಪಲ್ಲಾಂಡು” ಪಾಶುರಗಳ ಬದಲು “ಉಪದೇಶ ರತ್ನಮಾಲೈ”, “ತಿರುವಾಯ್ಮೊಳಿ ನೂತ್ತಂದಾದಿ”, ಪಾಶುರಗಳನ್ನು ಪಠಿಸಿ “ಸರ್ವದೇಶ ದಶಾ ಕಾಲೇ” ಮತ್ತು ವಾಳಿ ತಿರುನಾಮಮ್ ಅನ್ನು ಪಠಿಸುತ್ತೇವೆ.
    • ಅನಧ್ಯಯನ ಕಾಲವು ಸಂಸ್ಕೃತದಲ್ಲಿರುವ ಪೂರ್ವಾಚಾರ್ಯರ ಸ್ತೋತ್ರ ಗ್ರಂಥಗಳನ್ನು ಮತ್ತು ಜ್ಞಾನ ಸಾರಂ ಪ್ರಮೇಯ ಸಾರಂ, ಸಪ್ತ ಗಾದೈ, ಉಪದೇಶ ರತ್ನಮಾಲೈ, ತಿರುವಾಯ್ಮೊಳಿ ನೂತ್ತಂದಾದಿ ಇತ್ಯಾದಿ ತಮಿಳು ಪ್ರಬಂಧಗಳನ್ನು ಹಾಗು, ತನಿಯನ್ಗಳು ಮತ್ತು ಆಚಾರ್ಯರ ವಾಳಿ ತಿರುನಾಮಗಳನ್ನು ಕಲಿತು ಪಠಿಸಲು ಸೂಕ್ತ ಸಮಯವಾಗಿದೆ.

ಅಲ್ಲದೆ, ಈ ಸಮಯದಲ್ಲಿ ರಹಸ್ಯ ಗ್ರಂಥಗಳನ್ನು ಕಲಿಯಲು ತೊಡಗಬಹುದು ಮತ್ತು ಅದನ್ನೇ ಕಂಠಪಾಠ ಮಾಡಬಹುದು.

ಅಡಿಯೇನ್ ಗೋದಾ ರಾಮಾನುಜ ದಾಸಿ

ಮೂಲ : https://srivaishnavagranthams.wordpress.com/2023/05/18/anadhyayana-kalam/

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org