Monthly Archives: March 2021

ಶ್ರೀ ರಾಮಾನುಜ ವೈಭವ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ

ಉಪದೇಶ ರತ್ತಿನ ಮಾಲೈಯಿನಲ್ಲಿ, ಮಣವಾಳ ಮಾಮುನಿಗಳು , ಶ್ರೀ ರಂಗನಾಥನು ಎಲ್ಲರೂ ನಮ್ಮ ಸಂಪ್ರದಾಯಕ್ಕೆ ರಾಮಾನುಜರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸಲು ನಮ್ಮ ಸಂಪ್ರದಾಯವನ್ನು ಎಮ್ಪೆರುಮಾನಾರ್ ದರಿಸನಮ್ (ರಾಮಾನುಜ ದರ್ಶನಮ್) ಎಂಬ ಹೆಸರನ್ನು ನೀಡಿದ್ದಾರೆ .ರಾಮಾನುಜರು ಈ ಸಂಪ್ರದಾಯದ ಸ್ಥಾಪಕಾಚಾರ್ಯರಲ್ಲ, ಸಂಪ್ರದಾಯದ ಒಬ್ಬರೇ ಆಚಾರ್ಯರಲ್ಲ, ಆದರೆ ಇವರು ಈ ಸಂಪ್ರದಾಯವನ್ನು ಸದಾ ನೆಲೆಸುವಂತೆ ದೈಢವಾಗಿ ಸ್ಥಾಪಿಸಿದ ಕಾರಣದಿಂದ ,ಸ್ತವ್ಯರಾಗಿದ್ದಾರೆ. ಪ್ರಯತ್ನದಿಂದ ಭಗವಂತನ ವೈಭವವನ್ನು ಹೇಳಲು ಸಾಧ್ಯವಾದುರೂ, ರಾಮಾನುಜರ ವೈಭವವು ಅನಂತವಾದ ಕಾರಣ ಒಬ್ಬರಿಗೂ ಅದನ್ನು ಅರಿತು ಹೇಳುವುದು ಕಠಿಣ . ನಮಗೆ ಗುರುಪರಂಪರೆಯಿಂದ ಸಿಕ್ಕಿರುವ ಇವರ ಸಂಬಂಧದಿಂದ ಲಭಿಸಿರುವ ಶಕ್ತಿಯಿಂದ ರಾಮಾನುಜರ ವೈಭವವನ್ನು ಅನುಭವಿಸೋಣ.

ಅವತಾರ ಹಾಗು ಬಾಲ್ಯದ ದಿನಗಳು

ಏಲ್ಲರು ತಿಳಿದಂತಹ ಈ ಶ್ಲೋಕದಂತೇ

“ಅನಂತಃ ಪ್ರಥಮಮ್ ರೂಪಮ್ ಲಕ್ಷ್ಮಣಶ್ಚ ತತಃ ಪರಮ್ ಬಲಭದ್ರಸ್ ತೃಥೀಯಸ್ತು ಕಲೌ ಕಶ್ಚಿದ್ ಭವಿಷ್ಯತಿ”,ಆದಿಶೇಷನು, ವಿವಿಧ ಯುಗಗಳ್ಳಲ್ಲಿ ಧರಿಸಿದ ವಿವಿಧ ರೂಪಗಳನ್ನು ಹಾಗು ಕಲಿಯುಗದ ಅವತಾರದ ಬಗ್ಗೆ ಹೇಳಲಾಗಿದೆ. ಶ್ರೀ ರಾಮಾನುಜರು ಕಲಿಯುಗದ ಆದಿಶೇಶನ ಅವತಾರವೆಂದು ಚರ್ಮೋಪಾಯ ನಿರ್ಣಯಂ ಎಂಬ ಗ್ರಂತದಲ್ಲಿ ಸ್ಥಾಪಿಸಲಾಗಿದೆ.

ರಾಮಾನುಜ ನೂಟ್ರಂದಾದಿಯಲ್ಲಿ ಅಮುದನಾರ್, ಎಂಪೆರುಮಾನಾರಿನ ಅವತಾರವು, ಭಗವಂತನ ಅವತಾರಕ್ಕಿಂತಲೂ ಶ್ರೇಷ್ಟವಾದದ್ದೆಂದು, “ಮಣ್ಮಿಸೈ ಯೋನಿಗಳ್ ತೋರುಮ್ ಪಿರಂದು ಎಂಗಳ್ ಮಾದವನೇ ಕಣ್ಣುರ ನಿರ್ಕಿಲುಮ್ ಕಾಣಗಿಲ್ಲಾ ಉಲಗೋರ್ಗಳೆಲ್ಲಾಮ್ ಅಣ್ಣಲ್ ಇರಾಮಾನುಸನ್ ವಂದು ತೋನ್ರಿಯ ಅಅಪ್ಪೊಳುದೇ ನಣ್ಣೊರು ಜ್ಞಾನಂ ತಲೈಕ್ಕೊಂಡು ನಾರಣರ್ಕಾಯಿನರೇ” ಎಂದು ಹೇಳುತ್ತಾರೆ.

ಮಾಮುನಿಗಳು ಹೀಗೆ ಹೇಳುತ್ತಾರೆ, “ನಮ್ಮ ನಾಯಕನಾದ (ಶೇಶಿ-ಸ್ವಾಮಿ) ಶ್ರೀಮನ್ನಾರಾಯಣನೇ ಹಲವಾರು ರೂಪಗಳಲ್ಲಿ ಅವತರಿಸಿದರು, ಲೌಕೀಕ ಜನರು ಅವನನ್ನು ನಾಯಕನಾಗಿ ಒಪ್ಪಲಿಲ್ಲ, ಆದರೆ ಎಂಪೆರುಮಾನಾರ್ ಅವತರಿಸಿದ ಕೂಡಲೆ(ಶ್ರೀಭಾಷ್ಯಾದಿ ಗ್ರಂತಗಳನ್ನು ಭೋದಿಸಿದ ನಂತರ), ಲೌಕೀಕ ಜನರಲ್ಲಿಯೂ ನಿಜವಾದ ಜ್ಞಾನ ಹುಟ್ಟಿ, ಭಗವಂತನ ನಿಜವಾದ ದಾಸರದರು.(ಶೇಶಭೂತ)

ಮಾಮುನಿಗಳು ತಮ್ಮ ಆರ್ತಿ ಪ್ರಬಂಧದಲ್ಲಿಯೂ ಶ್ರೀ ರಾಮಾನುಜರ ಅವತಾರವನ್ನು ಹೀಗೆ ಹೊಗಳುತ್ತಾರೆ, “ಎನೈಪ್ಪೋಲ್ ಪಿಳೈ ಸೆಯ್ವಾರ್ ಇವ್ವುಲಗಿಲ್ ಉಣ್ಡೊ, ಉನೈಪ್ಪೋಲ್ ಪೊರುಕ್ಕ ವಲ್ಲಾರ್ ಉಣ್ಡೋ ಅನೈತ್ತುಲಗುಮ್ ವಾಳಪ್ ಪಿರನ್ದ ಎತಿರಾಸ ಮಾಮುನಿವಾ ಏಳೈಕ್ಕು ಇರನ್ಗಾಯ್ ಇನಿ”. ಇದರ ಅರ್ಥ ,”ನನ್ನ ಹಾಗೆ ತಪ್ಪುಗಳನ್ನೇ ಮಾಡುವವರುಂಟೇ ಮತ್ತು ನಿಮ್ಮ ಹಾಗೆ ಇದನ್ನೆಲ್ಲ ತಾಳ್ಮೆಯಿಂದ ಸಹಿಸುವರುಂಟೇ? ಯತಿಗಳ(ಸನ್ಯಾಸಿಯರ ರಾಜರಂತೆ,ನಾಯಕನಂತೆ) ಎಲ್ಲರನ್ನು ಉದ್ದರಿಸಲು ಅವತರಿಸಿದವರೇ, ದಯವಿಟ್ಟು ನನಗೆ ಸಹಾಯಮಾಡಿ.

ಇದರಿಂದ ,ಎಲ್ಲರ ದುಃಖವನ್ನು ದೂರಮಾಡಿ ,ಭಗವಂತನ ಸೇವೆಮಾಡಲು ಪರಮಪದಕ್ಕೆ ಉದ್ಧರಿಸಲು ಭಗವತ್ ರಾಮಾನುಜರು ಅವತರಿಸಿದರೆಂದು ನಾವು ಅರಿಯುತ್ತೇವೆ.

ಭಗವದ್ರಾಮಾನುಜರು ಕೇಶವಸೋಮಯಾಜಿಯಾರ್ ಹಾಗು ಕಾಂತಿಮತಿ ಅಮ್ಮಾಳಿನವರ ಪುತ್ರರು. ಇವರ ಸೋದರ ಮಾವರಾದ ಪೆರಿಯ ತಿರುಮಲೈ ನಂಬಿಯವರು ಇವರಿಗೆ “ಇಳೈಯಾಳ್ವಾರ್” ಎಂಬ ಹೆಸರನ್ನು ನೀಡಿದರು. ಹಾಗು ರಾಮಾನುಜರನ್ನು ತಾಪ ಸಂಸ್ಕಾರದ ಮೂಲಕ ಶ್ರೀವೈಷ್ಣವದೋಳಗೆ ಉಪಕ್ರಮಿಸಿದರು

ಅವರ ವಿದ್ಯಾಭ್ಯಾಸದ ದಿನಗಳಲ್ಲಿ, ಭೇದಾಭೇದ ದರ್ಶನ (ಬ್ರಹ್ಮಮ್/ಆತ್ಮ ಏಕಕಾಲದಲ್ಲಿ ಭಿನ್ನವಾಗಿ ಹಾಗು ಏಕ/ಸಮವಾಗಿರುವುದನ್ನು ಪ್ರವರ್ತಿಸುವ ಸಂಪ್ರದಾಯ) ಪ್ರವರ್ತಕರಾಗಿದ್ದ ಯಾದವಪ್ರಕಾಶರಿಂದ ವೇದಾಂತವನ್ನು ಕಲಿತರು. ನಮಗೆ ಬರುವ ಸಂದೇಹವೇನೆಂದರೆ, ಎದುರಾಳಿ ದರ್ಶನದ ಆಚಾರ್ಯರಿಂದ ಏಕೆ ಕಲಿಯಬೇಕು? ನಮ್ಮ ಹಿರಿಯರು ಅದು ಆ ದರ್ಶನವನ್ನು ಸಂಪೂರ್ಣವಾಗಿ ಅರಿತು ಅದರ ಲೋಪಗಳನ್ನು ತೋರಿ, ವಿಶಿಷ್ಟಾದ್ವೈತವನ್ನು ಸ್ಥಾಪಿಸಲು ಹೀಗೆ ಮಾಡಿದರು.

ಪೂರ್ವಪಕ್ಷವನ್ನು, ನಮ್ಮ ಸಿದ್ಧಾಂತವನ್ನು ಸ್ಥಾಪಿಸಲು, ತೆಳಿಯುವುದರ ಮಹತ್ವದ ಬಗ್ಗೆ, ಪೆರಿಯವಾಚ್ಚಾನ್ಪಿಳ್ಳೈಯವರು ತುಣ್ನೆ ಆಚಾರ್ಯ ನಮ್ಪಿಳ್ಳೈಯನ್ನು ಹೊಗಳುವ ಮಾತುಗಳಿಂದ ಅರಿಯಬಹುದು. ಪೆರಿಯ ತಿರುಮೊಳಿಯ 5.8.7ಇನ ಪಾಸುರದ “ಅನ್ತಣನ್ ಒರುವನ್”(ವಿಶೇಷ ಬ್ರಾಹ್ಮಣ) ವಿಶ್ಲೇಷಿಸುವ ವೇಳೆಯಲ್ಲಿ ಇವರು “ಮುರ್ಪಡ ದ್ವಯತ್ತೈಕ್ ಕೇಟ್ಟು, ಇತಿಹಾಸ ಪುರಾಣನ್ಗಳೈಯುಮ್ ಅತದಿಗರಿತ್ತು, ಪರಪಕ್ಷ ಪ್ರತಿಕ್ಷೇಪತ್ತುಕ್ಕುಡಲಾಗ ನ್ಯಾಯಮೀಮಾಮ್ಸೈಕಳುಮ್ ಅದಿಗರಿತ್ತು, ಪೋತುಪೋಕ್ಕುಮ್ ಅರುಳಿಚೆಯಲಿಲೇಯಾಮ್ಪಡಿ ಪಿಳ್ಳೈಯೈಪ್ಪೋಲೇ ಅದಿಗರಿಪ್ಪಿಕ್ಕ ವಲ್ಲವನೈಯಿರೇ ಒರುವನ್ ಎನ್ಬತು” (ನಂಪಿಳ್ಳಯವರಂತೆ ,ಯಾರು ದ್ವಯವನ್ನು ಮೊದಲು ಕಲಿತು, ನಂತರ ಇತಿಹಾಸ ಹಾಗು ಪುರಾಣಗಳನ್ನು ಕಲಿತು, ಪರಪಕ್ಷವನ್ನು ವಾದದಲ್ಲಿ ಗೆಲ್ಲಲು ನ್ಯಾಯ ಹಾಗು ಮೀಮಾಂಸೆಯನ್ನು ಕಲಿತು, ತಮ್ಮ ಸಮಯವನ್ನು ಆಳ್ವಾರರ ಅರುಳಿಚೆಯಲ್ಗಳನ್ನು ಕಲಿಯುವುದರಲ್ಲಿ ಹಾಗು ಭೋದಿಸುವುದರಲ್ಲಿ ಕಳಿಯುತ್ತಾರೋ,ಅವರನ್ನು “ವಿಶೇಷ ಬ್ರಾಹ್ಮಣ” ಎಂದು ಕರಿಯಬಹುದು.

ಯಾದವಪ್ರಕಾಶರ ಬಳಿ ವಿದ್ಯಾಭ್ಯಾಸದ ವೇಳೆಯಲ್ಲಿ ಯಾದವಪ್ರಕಾಶರು ಹಾಗು ಇವರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಶ್ರೀ ರಾಮಾನುಜರು ತಮ್ಮಲ್ಲಿದ್ದ ವೇದಾಂತದ ನೈಪುಣ್ಯದಿಂದ ಹಾಗು ಅದನು ಇತರರಿಗೆ ಭೋದಿಸುವ ಸಾಮರ್ಥ್ಯದಿಂದ ಖ್ಯಾತರಾದರು. ಇದನ್ನು ತಾಳಲಾಗದೆ ಯದವಪ್ರಕಶರ ಶಿಶ್ಯರು ಅವರನ್ನು ಕೊಲ್ಲಲು ಕಾಶಿಯಾತ್ರೆಯ ನೆಪವನ್ನು ರಚಿಸಿದರು. ಆದರೆ ಸಮಯೋಚಿತವಾದ ಗೋವಿಂದರ(ರಾಮನುಜರನ್ನು ಕೊಲ್ಲುವ ಪ್ರಯತ್ನವನ್ನು ಅರಿತವರು) ಮಾತನ್ನು ಕೇಳಿ ,ಬೇಟೆಗಾರ ದಂಪತಿಗಳ ರೂಪ ದರಿಸಿದ ಪೆರುಂದೇವಿ ತಾಯಾರ್ ಹಾಗು ಶ್ರೀ ವರದರಾಜ ಪೆರುಮಾಳಿನ (ದೇವಪೆರುಮಾಳ್) ಸಹಾಯದಿಂದ ಕಾಡಿನಿಂದ ತಪ್ಪಿಸಿಕ್ಕೋಂಡು, ಕಾಂಚಿಪುರಕ್ಕೆ ಹಿಂತಿರುಗಿದರು

ಪಂಚಸಂಸ್ಕಾರಗಳಿಂದ ಸಂಕೃತರಾಗುತ್ತಾರೆ

ಈ ಸಮಯದಲ್ಲಿ ಶ್ರೀ ರಾಮಾನುಜರಿಗೆ, ದೇವಪ್ಪೆರುಮಾಳಿಗೆ ತುಂಬಾ ಆತ್ಮೀಯರಾಗಿದ್ದಂತಹ ತಿರುಕ್ಕಚ್ಚಿ ನಂಬಿಗಳೊಂದಿಗೆ ಭೇಟಿಯಾಯಿತು. ಪೂವಿರುಂದುವಲ್ಲಿಯಿನವರಾದ ನಂಬಿಗಳು ಪ್ರತಿನಿತ್ಯ ದೇವಪ್ಪೆರುಮಾಳಿಗೆ ತಿರುವಾಳವಟ್ಟ ಕೈಂಕರ್ಯವನ್ನು ಮಾಡುತ್ತಿದ್ದರು. ಇವರು ಯಾಮುನಾಚಾರ್ಯರ ಶಿಷ್ಯರಾಗಿದ್ದರು. ಆವರಬಗ್ಗೆ ಇದ್ದ ಪ್ರೀತಿ ಹಾಗು ಅಭಿಮಾನದ ಕಾರಣ ದೇವಪ್ಪೆರುಮಾಳ್ ಅವರೊಂದಿಗೆ ಸಂಭಾಷಿಸುದ್ದಿದ್ದರು. ರಾಮಾನುಜರು ನಂಬಿಗಳ ಸೂಚನೆಯಂತೆ ದೇವಪ್ಪೆರುಮಾಳಿಗೆ ತೀರ್ಥ ಕೈಂಕರ್ಯ ( ಒಂದು ಬಾವಿಯಿಂದ ನೀರು ತರುವ) ಪ್ರತಿದಿನ ಮಾಡುತ್ತಿದ್ದರು.  ಈ ಸಮಯದಲ್ಲಿ, ರಾಮಾನುಜರಿಗೆ ರಕ್ಷಮಾಂಬಾಳಿನೊಂದಿಗೆ ವಿವಾಹವಾಯಿತು ಹಾಗು ಕಾಂಚೀಪುರದಲ್ಲೆ ನೆಲೆಸಿದರು. ತಮ್ಮಲ್ಲಿ ಇದ್ದ ಕೆಲವು ಸಂದೇಹಗಳ ಪರಿಷ್ಕಾರವನ್ನು ದೇವಪ್ಪೆರುಮಾಳಿನಿಂದಲೇ ಪಡೆಯಲು, ನಂಬಿಗಳಲ್ಲಿ (ತಮ್ಮ ಸಂದೇಹಗಳನ್ನು ಹೇಳದೆ) ದೇವಪ್ಪೆರುಮಾಳನ್ನು ಕೇಳಲು ಪ್ರಾರ್ಥಿಸಿದರು.

ನಂಬಿಗಳು ಶ್ರೀ ರಾಮಾನುಜರ ಪ್ರಶ್ನೆಗಳನ್ನು ಪೆರುಮಾಳಲ್ಲಿ ಕೇಳುತ್ತಾರೆ ಹಾಗು ಪೆರುಮಾಳ್, ಅದಕ್ಕೆ ಸಮಾಧಾನದಂತೆ, ಆರು ವಾಕ್ಯಗಳನ್ನು ನೀಡುತ್ತಾರೆ. ಅವು:

1. ನಾನೆ ಪರದೇವತೆ
2.ಜೀವಾತ್ಮ ಹಾಗು ಪರಮಾತ್ಮರ ಮದ್ಯೆ ಭೇದವುಂಟು
3.ಪ್ರಪತ್ತಿಯೆಂದು ಹೆಸರಾದ ಶರಣಾಗತಿಯೇ ನನ್ನನ್ನು ಸೇರುವ ಉಪಾಯ(ಮಾರ್ಗ)
4.ಹೀಗೆ ನನ್ನಲ್ಲಿ ಶರಣಾದವರು, ಅಂದರೆ ಪ್ರಪನ್ನರಿಗೆ ,ದೇಹದ ಕೊನೆಯಗಳಿಗೆಯಲ್ಲಿ ಸ್ಮರಣೆಯ(ಅಂತಿಮಸ್ಮೃತಿ) ಅಗತ್ಯವಿಲ್ಲ, (ನಾನೇ{ಭಗವಾನ್} ಅವನನ್ನು ಸ್ಮರಿಸುವೆನು).
5.ಅವರ ದೇಹಯಾತ್ರೆಯ ಕೊನೆಯಲ್ಲಿ ಮೋಕ್ಷವನ್ನು ಹೋಂದುವರು.
6.ಮಹಾಪೂರ್ಣರೆಂದು ಕರೆಯಪಡುವ ಪೆರಿಯನಂಬಿಗಳನ್ನು ಅಚಾರ್ಯರನ್ನಾಗಿ ಸ್ವೀಕರಿಸಿ.
ಇದು ರಾಮಾನುಜರ ಜೀವನವನ್ನೇ ನಿರ್ಧಾರಿಸುವ ಘಟನೆಯಾಯಿತು.

ತಿರುಕ್ಕಚ್ಚಿನಂಬಿಗಳು ಇದನ್ನು ರಾಮಾನುಜರಿಗೆ ತಿಳಿಸಿ, ಅವರ ಅಭಿಪ್ರಾಯಕ್ಕೆ ಅಣುಗುಣವಾಗಿತ್ತೇ ಎಂದು ಕೇಳಿದರು. ರಾಮಾನುಜರು ಒಪ್ಪಿಗೆ ಸೂಚಿಸುತ್ತಾರೆ ,ನಂಬಿಗಳು ಪೆರುಮಾಳ್ ಹಾಗು ರಾಮಾನುಜರ ಅಭಿಪ್ರಾಯಗಳಲ್ಲಿದ್ದ ಹೋಲಿಕೆಯನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ಕೂಡಲೆ ಪೆರಿಯನಂಬಿಗಳನ್ನು ಸಂದರ್ಶಿಸಲು ಶ್ರೀರಂಗದ ಕಡೆ ಹೊರಡುತ್ತಾರೆ.

ಪೆರಿಯ ನಂಬಿಗಳು, ನಾಥಮುನುಗಳ ಮೊಮ್ಮಗನಾದ ಆಳಾವಂದಾರಿನ ಪ್ರಧಾನ ಶಿಷ್ಯರಾಗಿದ್ದರು. ಮುಂಚೆ, ಸಂಪ್ರದಾಯದ ಪ್ರಧಾನ ಆಚಾರ್ಯಾರಾಗಿದ್ದ, ಆಳವಂದಾರ್, ಕಾಂಚೀಪುರಕ್ಕೆ ಹೋಗಿದ್ದಾಗ, ಅವರು ರಾಮಾನುಜರನ್ನು ಸಂಪ್ರಾದಾಯದ ಪ್ರಾಧಾನದ ಆಚಾರ್ಯರಾಗಲು ತಮ್ಮ ದಿವ್ಯ ಕಟಾಕ್ಷದಿಂದ ಆಶಿರ್ವದಿಸಿದರು. ರಾಮಾನುಜರೂ ಆಳವಂದಾರಿನ ಶಿಷ್ಯರಾಗಲು ಬಯಿಸುತಿದ್ದರು. ಆದರೆ, ರಾಮಾನುಜರು ಆಳವಂದಾರನ್ನು ಸಂದರ್ಶಿಸಲು ಶ್ರೀರಂಗಕ್ಕೆ ಹೋದಾಗ, ರಾಮಾನುಜರು ಕಾವೆರಿಯ ದಡವನ್ನು ಸೇರುವುದೋಳಗೆ ಆಳವಂದಾರ್ ಮೂರು ಅತೃಪ್ತ ಬಯಕೆಗಳೋಂದಿಗೆ ಪರಮಪದಿಸಿದ್ದರು (ದೇಹವನ್ನು ತ್ಯಜಿಸಿದ್ದರು). ಆವು:

1. ಪರಾಶರ ಹಾಗು ವ್ಯಾಸ ಮಹರ್ಷಿಗಳಿಗೆ ಕೃತಜ್ಞತೆಯನ್ನು ತೋರುವುದು.

2.ಶ್ರೀ ನಮ್ಮಾಳ್ವಾರಿಗೆ ಕೃತಜ್ಞತೆಯನ್ನು ತೋರುವುದು.

3.ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆಯುವುದು.

ಆಳವಂದಾರಿನ ಚರಮ ವಿಮಲ ತಿರುಮೇನಿಯಲ್ಲಿ ( ಚರಮ-ಕೊನೆಯ, ವಿಮಲ-ಪರಿಶುದ್ದವಾದ ) ಮಡಿಚಿದ ಮೂರು ಬೆರಳುಗಳನ್ನು, ನೋಡಿ, ಆಳವಂದಾರಿನ ಇಚ್ಛೆಗಳನ್ನು ನೆರವೇರಿಸುವರೆಂದು ಸಂಕಲ್ಪಿಸಿದರು, ಕೋಡಲೆ ಮಡಿಚಿದ್ದ ಬೆರಳುಗಳು ತೆರದವು. ಅವರು ನಿರಾಶೆಯಿಂದ ಕಾಂಚೀಪುರಕ್ಕೆ ಹಿಂತಿರುಗಿ , ಆಲ್ಲಿನ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೋಂಡರು.
ಈ ಸಮಯದಲ್ಲಿ ಶ್ರೀರಂಗದಲ್ಲಿ, ಶ್ರೀವೈಷ್ಣವರು ಪೆರಿಯ ನಂಬಿಗಳನ್ನು, ರಾಮಾನುಜರನ್ನು ಪಂಚಸಂಸ್ಕಾರದಿಂದ ಮತ್ತೆ ಸಂಪ್ರದಾಯಕ್ಕೆ ತಂದು ,ಅವರನ್ನು ಪೋಷಿಸಿ ಸಂಪ್ರದಾಯದ ಆಚಾರ್ಯರಾಗಿ ತಯಾರಿಸಲು ಪ್ರಾರ್ಥಿಸಿದರು. ಪೆರಿಯ ನಂಬಿಗಳು ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಲು ಕಾಂಚೀಪುರಕ್ಕೆ ಹೊರಟರು.

ಅವರಿಬ್ಬರು ಕಾಂಚೀಪುರದ ಹತ್ತಿರದಲ್ಲಿರುವ ಮದುರಾಂತಕಮ್ ಎಂಬ ಊರಿನಲ್ಲಿ ಭೇಟಿಯಾದರು. ಶ್ರೀ ರಾಮಾನುಜರು ಏರಿ ಕಾತ್ತ ರಾಮಾರ ಸನ್ನದಿಗೆ ಹೋದಾಗ, ಸಪರಿವಾರರಾಗಿದ್ದ ಪೆರಿಯ ನಂಬಿಗಳನ್ನು ಕಂಡು ವಂದನೆಗಳನ್ನು ಸಲ್ಲಿಸಿ, ಅವರನ್ನು ಶಿಷ್ಯರನ್ನಾಗಿ ಸ್ಪೀಕರಿಸಲು ಪ್ರಾರ್ಥಿಸಿದರು. ನಂಬಿಗಳು, ಕಾಂಚೀಪುರಕ್ಕೆ ಹೋಗಿ ಅಲ್ಲಿಯೆ ಪಂಚಸಂಸ್ಕಾರವನ್ನು ಮಾಡಬಹುದಲ್ಲವೆ ಎಂದು ಹೇಳುತ್ತಾರೆ. ಶ್ರೀ ರಾಮಾನುಜರು, ಈ ಜಗತ್ತಿನಲ್ಲಿ ಎಲ್ಲವು ಎಷ್ಟು ಅಶಾಶ್ವತವೆಂದರೆ ಅವರು ಈಗಾಗಲೇ ಆಳವಂದಾರರ ಶಿಷ್ಯರಾಗುವ ಅವಕಾಶವನ್ನು ಕಳೆದುಕೊಂಡರು, ಮತ್ತೆ ಇಂತಹ ಘಟನೆಯಾಗಬಾರದು ಎನ್ನುವ ಕಾರಣದಿಂದ ಅವರು ಅಂದೇ ಪಂಚಸಂಸ್ಕಾರವನ್ನು ಅನುಗ್ರಹಿಸಲು ನಿರ್ಬಂಧಿಸಿದರು, ನಂಬಿಗಳು ಒಪ್ಪುತ್ತಾರೆ. ಈ ವಿದದಲ್ಲಿ ಶ್ರೀ ರಾಮಾನುಜರು, ಶಾಸ್ತ್ರದಲ್ಲಿ ವಿಹಿತವಾದ ರೀತಿಯಲ್ಲಿ ಆಚಾರ್ಯರನ್ನು ಸ್ವೀಕರಿಸುವ ಮಹತ್ವದ ಬಗ್ಗೆ ತೋರುತ್ತಾರೆ. ಈ ಘಟನೆಯ ನಂತರ ಎಲ್ಲರು ಕಾಂಚೀಪುರವನ್ನು ಸೇರುತ್ತಾರೆ ಹಾಗು ಪೆರಿಯ ನಂಬಿಗಳು ಅವರ ಕುಟುಂಬದವರು ಸ್ವಲ್ಪಕಾಲ ಆಲ್ಲೇ ಇರಲು ನಿರ್ದರಿಸುತ್ತಾರೆ. ತಿರುಕ್ಕಚ್ಚಿ ನಂಬಿಗಳು ಪೆರಿಯ ನಂಬಿಗಳನ್ನು ಕಾಂಚೀಪುರಕ್ಕೆ ಸ್ವಾಗತಿಸುತ್ತಾರೆ .ಪೆರಿಯ ನಂಬಿಗಳು ದೇವಪ್ಪೆರುಮಾಳಿಗೆ ಮಂಗಳಾಶಾಸನವನ್ನು ಮಾಡುತ್ತಾರೆ.

ರಾಮಾನುಜರು ಪೆರಿಯ ನಂಬಿಗಳು ಅವರ ಮನೆಯ ಒಂದು ಭಾಗದಲ್ಲಿ ಇರುವಂತೆ ವ್ಯವಸ್ತೆಯನ್ನು ಮಾಡಿಕೊಡುತ್ತಾರೆ. ಪೆರಿಯ ನಂಬಿಗಳು ಹಾಗು ಅವರ ಪರಿವಾರ ಆರು (6) ತಿಂಗಳು ಅಲ್ಲೇ ಇರುತ್ತಾರೆ ಹಾಗು ದಿವ್ಯ ಪ್ರಬಂಧ, ರಹಸ್ಯಾದಿಗಳನ್ನು ಬೋಧಿಸಿದರು.

ಸನ್ನ್ಯಾಸ ಆಶ್ರಮವನ್ನು ಸ್ವೀಕರಿಸುತ್ತಾರೆ

ಓಮ್ಮೆ ಶ್ರೀವೈಷ್ಣವರೊಬ್ಬರು ರಾಮಾನುಜರ ಮನೆಗೆ ಬರುತ್ತಾರೆ ಹಾಗು ಅವರ ಹಸಿವನ್ನು ನೀಗಿಸಲು ಆಹಾರವೇನಾದರು ನೀಡಲು ಕೇಳುತ್ತಾರೆ ಆದರೆ ರಾಮಾನುಜರ ಪತ್ನಿ ‘ಏನು ಇಲ್ಲವೆಂದು’ ಹೇಳುತ್ತಾರೆ.ಆ ಶ್ರೀವೈಷ್ಣವನು ದುಃಖಿತನಾಗಿ ಹೊರಡುತ್ತಾನೆ. ರಾಮನುಜರು ಅಡಿಗೆ ಮನೆಯಲ್ಲಿ ನೊಡಿದಾಗ, ಬಹಳಷ್ಟು ಅನ್ನ ಇದ್ದದನ್ನು ಕಂಡು ಅವರ ಪತ್ನಿ ಮೇಲೆ ಕೊಪಗೊಳ್ಳುತ್ತಾರೆ. ಮುಂದೊಮ್ಮೆ ರಕ್ಷಮಾಂಬಾಳ್ (ಶ್ರೀ ರಾಮಾನುಜರ ಪತ್ನಿ) ತಿರುಕ್ಕಚ್ಚಿ ನಂಬಿಗಳ ಕಡೆ ಅನುಚಿತವಾಗಿ ವರ್ತಿಸುತ್ತಾರೆ. ಒಮ್ಮೆ ತಿರುಕ್ಕಚ್ಚಿ ನಂಬಿಗಳನ್ನು ಶ್ರೀ ರಾಮಾನುಜರು ಅವರ ಮನೆಗೆ ಪ್ರಸಾದವನ್ನು ಸ್ವೀಕರಿಸಲು, ತದ ನಂತರ ಆ ಉಚ್ಚಿಶ್ಟವನ್ನು (ಪ್ರಸಾದವನ್ನು ಸ್ವೀಕರಿಸಿದ ನಂತರ ಮಿಕ್ಕಿದ ಸ್ವಲ್ಪ ಅನ್ನ) ತಾವು ಸ್ವೀಕರಿಸಲು ಅವರನ್ನು ಕರೆದರು, ಆಗ ಅವರ ಪತ್ನಿ ಮಿಕ್ಕಿದ ಎಲೆ-ಅನ್ನವನ್ನು ತ್ಯಾಜ್ಯವನ್ನಾಗಿ ಕಂಡು, ತಿರುಕ್ಕಚ್ಚಿ ನಂಬಿಗಳ ಮಹಾತ್ಮ್ಯವನ್ನು ಹಾಗು ರಾಮಾನುಜರ ಆಸೆಯನ್ನು ಅರಿಯದೆ ,ಅದನ್ನು ಮನೆಯ ಹೊರ ಹಾಕಿ ಮನೆಯನ್ನು ಶುದ್ಧಿಗೊಳಿಸುತ್ತಾರೆ.

ಕೊನೆಯಲ್ಲಿ ಪೆರಿಯ ನಂಬಿಗಳ ಪತ್ನಿಯು ಹಾಗು ರಾಮಾನುಜರ ಪತ್ನಿಯವರ ನಡುವೆ ಬಾವಿಯಲ್ಲಿ ನೀರು ತರುವ ವೇಳೆಯಲ್ಲಿ ಜಗಳವೊಂದು ನಡೆಯಿತು. ಇದರಿಂದ ಮನನೊಂದ ಪೆರಿಯ ನಂಬಿಗಳು ರಾಮಾನುಜರಿಗೆ ಏನು ಹೇಳದೆ ಶ್ರೀರಂಗಕ್ಕೆ ಹೊರಡುತ್ತಾರೆ. ಇದನ್ನು ತಿಳಿದಾಗ ರಾಮನುಜರು ತುಂಬ ದುಃಖಿತರಾಗುತ್ತಾರೆ.

ಅವರ ಮನಸ್ಸು ಭಗವಂತನಲ್ಲೆ ಸ್ಥಿತವಾಗಿದೆ, ಸನ್ನ್ಯಾಸಾಶ್ರಮವನ್ನು ಸ್ವೀಕರಿಸಲು ನಿರ್ಧರಿಸಿದರು. ಕಾಂಚೀಪುರದ ವರದರಾಜ ಸ್ವಾಮಿಯ ದೇವಾಲಯದ ಅನಂತ ಸರಸ್ಸಿನಲ್ಲಿ ಸ್ನಾನವನ್ನು ಮಾಡೆ ದೇವಪ್ಪೆರುಮಾಳನ್ನೇ ತಮ್ಮ ಆಚರ್ಯರನ್ನಾಗಿ ಸ್ವೀಕರಿಸಿ ಸನ್ನ್ಯಾಸಿಗೆ ಸೂಕ್ತವಾದ ತ್ರಿದಂಡ-ಕಾಶಾಯಗಳನ್ನು ಪಡೆದರು. ದೇವಪ್ಪೆರುಮಾಳ್ ಇದನ್ನು ಅಂಗೀಕರಿಸಿ “ರಾಮಾನುಜ ಮುನಿ” ಎಂಬ ಹೆಸರನ್ನು ಒಂದು ಮಠವನ್ನು ಪ್ರಸಾದಿಸುತ್ತಾರೆ.ಇದನ್ನು ಕೇಳಿದ ಕೂಡಲೆ, ಕೂರತ್ತಾಳ್ವಾನ್ ಹಾಗು ಮುಡಲಿಯಾಂಡಾನ್ ಕಾಂಚೀಪುರದಲ್ಲಿ ರಾಮಾನುಜರಿಂದ ಪಂಚ ಸಂಸ್ಕಾರಗಳನ್ನು ಸ್ವೀಕರಿಸಿ ಸತತವಾಗಿ ಅವರನ್ನು ಸೇವಿಸುತ್ತಿದ್ದರು. ಯಾದವಪ್ರಕಾಶರು ಅವರ ತಾಯಿಯ ಸಲಹೆಯಂತೆ ಅವರೂ ರಾಮಾನುಜರ ಶಿಶ್ಯರಾಗುತ್ತಾರೆ. ಹೀಗೆ ಶ್ರೀ ವರದರಾಜರು ರಾಮಾನುಜ ಮುನಿಗಳಗಿ ಸನ್ನ್ಯಾಸಾಶ್ರಮವನ್ನು ನಿರ್ವಹಿಸಿದರು.

ಶ್ರೀ ರಾಮಾನುಜರು ಯತಿರಾಜರಂತೆ (ಸನ್ನ್ಯಾಸಿಯರ ನಾಯಕ) ಪ್ರಸಿದ್ಧರಾಗುತ್ತಾರೆ, ತಮ್ಮ ಉದಾತ್ತ ಮನಸಿನಿಂದ ಯಾದವಪ್ರಕಾಶರನ್ನು ತಮ್ಮ ಶಿಶ್ಯರನ್ನಾಗಿ ಸ್ವೀಕರಿಸಿ, ಅವರಿಗೆ ಸನ್ನ್ಯಾಸಾಶ್ರಮವನ್ನು ಪ್ರಸಾದಿಸಿದಿಸಿ ಗೋವಿಂದ ಜೀಯರ್ರೆಂಬ ಹೆಸರನ್ನು ನೀಡುತ್ತಾರೆ. ಆವರಿಂದ ,ಶ್ರೀವೈಷ್ಣವ ಸನ್ನ್ಯಾಸಿಯರ ನಡುವಳಿಕೆಗೆ ಪ್ರಮಾಣವೆಂದು ಭಾವಿಸಲಾಗಿರುವ ಯತಿಧರ್ಮ ಸಮ್ಮುಚ್ಚಯವೆಂಬ ವಿಸ್ತರವಾದ ಗ್ರಂಥವನ್ನು ಬರೆಸುತ್ತಾರೆ . ಶ್ರೀ ರಾಮಾನುಜರ ಉದಾತ್ತ ಗುಣಗಳಿಂದ (ತಮ್ಮನು ಒಮ್ಮೆ ಕೊಲಲ್ಲು ಪ್ರಯತ್ನಿಸಿದ) ಯಾದವಪ್ರಕಾಶರನ್ನು ಸ್ವೀಕರಿಸಿದರು ಹಾಗು ಅಮೂಲ್ಯವಾದ ಕೈಂಕರ್ಯದಲ್ಲಿ ತೊಡಗಿಸಿದರು.

ಶ್ರೀರಂಗಕ್ಕೆ ಆಗಮಿಸುತ್ತಾರೆ.

ಸಂಪ್ರದಾಯವನ್ನು ಪೊಷಿಸಿ ಪ್ರವರ್ತಿಸಲು ಶ್ರೀರಂಗನಾಥನು ರಾಮಾನುಜರನ್ನು ಶ್ರೀರಂಗಕ್ಕೆ ಕಳುಹಿಸಲು ಕಾಂಚೀಪುರದ ವರದರಾಜರಲ್ಲಿ ಬೇಡುತ್ತಾರೆ. ಆದರೆ ಶ್ರೀ ವರದರಾಜನು ಒಪ್ಪುವುದಿಲ್ಲ. ಹೇಗಾದರು ರಾಮಾನುಜರನ್ನು ಶ್ರೀರಂಗಕ್ಕೆ ತರಲು ಒಂದು ಉಪಾಯಾವನ್ನು ರಚಿಸುತ್ತಾರೆ. ಶ್ರೀರಂಗನಾಥನು , ತಮ್ಮ ಸಂಗೀತದಿಂದ ಶ್ರೀ ವರದರಾಜನನ್ನು ಸಂತೋಷಗೊಳಿಸಿ, ರಾಮಾನುಜರನ್ನು (ಬಹುಮಾನವಾಗಿ) ಅವರಿಂದ ಕೇಳಲು ಕಳುಹಿಸಿದರು. ಅರೆಯರ್ ಕಾಂಚೀಪುರಕ್ಕೆ ಹೋಗುತ್ತಾರೆ ಹಾಗು ತಿರುಕ್ಕಚ್ಚಿ ನಂಬಿಗಳ ಮುಖಾಂತರ ವರದರಾಜರನ್ನು ದರ್ಶಿಸಿ ಅವರ ಮುಂದೆ ಹಾಡಿ, ಭಗವಾಂತನನ್ನು ಸಮ್ಮೊಹಗೊಳಿಸುತ್ತಾರೆ. ಭಗವಂತನು,”ನೀವು ಏನು ಕೇಳಿದರು ಅದನ್ನು ಪ್ರಸಾದಿಸುತ್ತೇವೆ.” ಎಂದು ಹೇಳುತ್ತಾರೆ. ಅರೆಯರ್ ಸ್ವಾಮಿಗಳು ಶ್ರೀ ರಾಮಾನುಜರನ್ನು ಅವರೋಂದಿಗೆ ಶ್ರೀರಂಗಕ್ಕೆ ಕಳುಹಿಸಲು ಬೇಡಿದರು. ಶ್ರೀ ವರದರಜರು ನಿರ್ಗಮನ ದುಃಖಜನಕವಾದರೂ, ಮಾತನ್ನು ಕೊಟ್ಟ ಕಾರಣ, ಯತಿರಾಜರನ್ನು ಅವರೋಂದಿಗೆ ಕಳುಹಿಸುತ್ತಾರೆ. ಉಡೈಯವರು ತಮ್ಮ ನೈಪುಣ್ಯದಿಂದ ದೇವಸ್ಥಾನದ ಕಾರ್ಯಗಳಲ್ಲಿ ಸುದಾರಣೆಯನ್ನು ತರಲಾರಂಬಿಸಿದರು.

ಹೀಗೆ ಶ್ರೀ ರಾಮಾನುಜರು, ಶ್ರೀರಂಗದಲ್ಲಿ ವಾಸಿಸಿದರು ಹಾಗು ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸಿದರು.

ಕಾಳಹಸ್ತಿಯಲ್ಲಿ ಶಿವನ ಭಕ್ತನಾಗಿ ವಾಸಿಸುತ್ತಿದ, (ಯಾದವಪ್ರಕಾಶರೋಂದಿಗೆ ಹೊರಟ ಯಾತ್ರೆಯಲ್ಲಿ ತಮ್ಮ ಜೀವವನ್ನು ರಕ್ಶಿಸಿದ ) ತಮ್ಮ ಗೋವಿಂದರನ್ನು ತಿದ್ದಲು, ಪೆರಿಯ ನಂಬಿಗಳನ್ನು ತಮ್ಮ ಶಿಕ್ಷಣದ ಮುಖಾಂತರ, ಅವರನ್ನು ತಿದ್ದಿ , ಮತ್ತೆ ಸಂಪ್ರದಾಯಕ್ಕೆ ತರಲು ಪ್ರಾರ್ಥಿಸಿದರು. ರಾಮಾನುಜರ ಪ್ರಾರ್ಥನೆಯಂತೆ, ಪೆರಿಯ ತಿರುಮಲೈ ನಂಬಿಗಳು, ಕಾಳಹಸ್ತಿ ಹೋದರು ಹಾಗು, ನಿಷ್ಟೆಯಿಂದ ಶಿವನನ್ನು ಆರಾದಿಸುತ್ತಿದದ, ಗೋಂವಿಂದರನ್ನು ದಿವ್ಯಪ್ರಬಂದ ಹಾಗು ಆಳವಂದಾರಿನ ಸ್ತೋತ್ರ ರತ್ನದ ಉಪದೇಶದಿಂದ ಶ್ರೀಮನ್ನಾರಾಯಣನ ಪರತ್ವವನ್ನು ಸ್ಥಾಪಿಸಿ , ಉಪದೇಶಗಳನ್ನು ಕೆಲವು ಬಾರಿ ಕೇಳಿ ಅವರ ಮನಸು ಶುದ್ಧವಾಗಿ ರುದ್ರನಲ್ಲಿದ್ದ ಅಭಿಮನವನ್ನು ಬಿಟ್ಟು ಪೆರಿಯ ತಿರುಮಲೈ ನಂಬಿಗಳ ಪಾದಕಮಲಗಳಲ್ಲಿ ಶರಣಾದರು, ಪೆರಿಯ ತಿರುಮಲೈ ನಂಬಿಗಳು ಅವರನ್ನು ಸಂತೋಷದಿಂದ ಸ್ವೀಕರಿಸಿ ಪಂಚಸಂಸ್ಕಾರವನ್ನು ಮುಖ್ಯ ಅರ್ಥಗಳನ್ನು ಪ್ರಸಾದಿಸಿ ತಿರುಮಲೇಯಲ್ಲೆ ಅವರಿಂದ ಸೇವಿತರಾಗಿದ್ದರು

ಶ್ರೀರಂಗದಲ್ಲಿ,ಯತಿರಾಜರಿಗೆ ಹಾಗು ಅರೈಯರ್ರಿಗೆ ಸಂತೋಷದ ಸ್ವಾಗತ ಲಭಿಸಿತು. ಅವರು ಪೆರಿಯ ಪೆರುಮಾಳನ್ನು ದರ್ಶಿಸುತ್ತಾರೆ. ಆವರನ್ನು ಹರ್ಷದಿಂದ ಸ್ವಾಗತಿಸಿ, ಯತಿರಾಜರಿಗೆ ಉಡೈಯವರ್ (ಸಾಂಸಾರಿಕ{ಲೀಲ ವಿಭೂತಿ} ಹಾಗು ಆದ್ಯಾತ್ಮಿಕ{ನಿತ್ಯ ವಿಭೂತಿ} ಲೋಕಗಳ ನಾಥ) ಎಂಬ ಬಿರುದು ನೀಡಿ, ಹಾಗು ಅವರು ವಾಸಿಸಲು ಒಂದು ಮಠವನ್ನು ನಿಗದಿಸಿ ನೀಡಿ, ಹಾಗು ದೇವಸ್ಥಾನದ ಕಾರ್ಯಗಳ ಸುದಾರಣೆಯಲ್ಲಿ ನಿರತರಾಗಲು ಹೇಳುತ್ತಾರೆ. ಹಾಗು, ಶ್ರೀ ರಾಮಾನುಜರ ಏಲ್ಲ ಸಂಬಂದಿಗಳಿಗೆ ಖಚಿತವಾಗಿ ಮೋಕ್ಷವನ್ನು ಹೊಂದುವರೆಂದು ಹೇಳಿದರು. ಉಡೈಯವರು ಕೃತಜ್ಞತೆಯಿಂದ ಪೆರಿಯ ನಂಬಿಗಳು ಮಾಡಿದ ಉಪಕಾರವನ್ನು ಸ್ಮರಿಸಿದರು ಹಾಗು ಉಡೈಯವರು ನೈಪುಣ್ಯದಿಂದ ದೇವಸ್ಥಾನದ ಕಾರ್ಯಗಳ ಸುದಾರಣೆಯನ್ನು ತರಲಾರಂಬಿಸಿದರು.

ಹೀಗೆ ಶ್ರೀ ರಾಮಾನುಜರು, ಶ್ರೀರಂಗದಲ್ಲಿ ವಾಸಿಸಿದರು ಹಾಗು ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸಿದರು.

ಕಾಳಹಸ್ತಿಯಲ್ಲಿ ಶಿವನ ಭಕ್ತನಾಗಿ ವಾಸಿಸುತ್ತಿದ, (ಯಾದವಪ್ರಕಾಶರೋಂದಿಗೆ ಹೊರಟ ಯಾತ್ರೆಯಲ್ಲಿ ತಮ್ಮ ಜೀವವನ್ನು ರಕ್ಷಿಸಿದ ) ಗೋವಿಂದರನ್ನು ತಿದ್ದಲು, ಪೆರಿಯ ನಂಬಿಗಳನ್ನು ತಮ್ಮ ಶಿಕ್ಷಣದ ಮುಕಾಂತರ, ಅವರನ್ನು ತಿದ್ದಿ , ಮತ್ತೆ ಸಂಪ್ರದಾಯಕ್ಕೆ ತರಲು ಪ್ರಾರ್ಥಿಸಿದರು. ರಾಮಾನುಜರ ಪ್ರಾರ್ಥನೆಯಂತೆ, ಪೆರಿಯ ತಿರುಮಲೈ ನಂಬಿಗಳು, ಕಾಳಹಸ್ತಿಗೆ ಹೋದರು ಹಾಗು, ನಿಶ್ಟೆಯಿಂದ ಶಿವನನ್ನು ಆರಾಧಿಸುತ್ತಿದ್ದ, ಗೋಂವಿಂದರನ್ನು ತಿದ್ದಲು ಆಳವಂದಾರಿನ ಸ್ತೋತ್ರ ರತ್ನ ಮತ್ತು, ದಿವ್ಯ ಪ್ರಬಂಧಗಳನ್ನು ಬೋಧಿಸಿ ಶ್ರೀಮನ್ನಿಯಣನ ಪರತ್ವವನ್ನು ವಿವರಿಸಿದರು .ಈ ಉಪದೇಶಗಳನ್ನು ಕೇಳಿ, ಶುದ್ಧಗೊಂಡು ಗೋವಿಂದರ ಮನಸ್ಸು, ರದ್ರನ ಮೇಲಿದ್ದ ತನ್ನ ರುಚಿಯನ್ನು ಬಿಟ್ಟು , ಪೆರಿಯ ತಿರುಮಲೈ ನಂಬಿಗಳ ಪಾದಾರವಿಂದಗಳನ್ನು ಆಶ್ರಯಿಸಿದರು. ಅವರನ್ನು ಸಂತೋಷದಿಂದ ಸ್ವೀಕರಿಸಿ, ಪಂಚಸಂಸ್ಕಾರವನ್ನು ನಿರ್ವಹಿಸಿ, ಅವರೋಂದಿಗೆ ಕರೆದುಕೋಂಡು ಹೋಗುತ್ತಾರೆ. ಗೋವಿಂದರು ತಿರುಮಲೈಯಲ್ಲೆ ನಂಬಿಗಳಿಗೆ ಎಲ್ಲಾ ವಿಧಗಳಲ್ಲೂ ಸೇವಿಸುವರು ಹಾಗು ಎಲ್ಲಾ ಅಗತ್ಯ ಅರ್ಥಗಳನ್ನು ಅವರಿಂದ ಅರಿತರು. (ಸ್ವಲ್ಪ ಕಾಲದ) ನಂತರ ಗೋವಿಂದರು ಶಾಶ್ವತವಾಗಿ ,ಶ್ರೀ ರಾಮಾನುಜರೊಂದಿಗೆ ಶ್ರೀರಂಗದಲ್ಲೆ ಇದ್ದುಬಿಟ್ಟರು. (ಮುಂದೆ ಬರುವ ಸಂಚಿಕೆಯಲ್ಲಿ ನಾವು ನೀಡುತ್ತೇವೆ)

ಅವರ ಆಚಾರ್ಯರು:

ಶ್ರೀ ರಾಮಾನುಜರು ಪೆರಿಯ ನಂಬಿಗಳ ತಿರು ಮಾಳಿಗೈಗೆ ಹೋಗಿ, ಎಲ್ಲಾ ಮುಖ್ಯ ಅರ್ಥಗಳನ್ನು ಭೋದಿಸಲು ಪ್ರಾರ್ಥಿಸುತ್ತಾರೆ. ಪೆರಿಯ ನಂಬಿಗಳು ಪ್ರಸನ್ನರಾಗಿ,ಅತಿದಿವ್ಯ ಮಂತ್ರವಾದ ದ್ವಯದ ಅರ್ಥಗಳನ್ನು ಭೋದಿಸಿ, “ಈ ವಿಧದಲ್ಲಿ ಇನ್ನೂ ಅರಿಯಬೇಕಾದದ್ದಿದೆ, ಅವನ್ನು ಆಳವಂದಾರಿನ ಪ್ರಿಯ ಶಿಷ್ಯರಾದ ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಕಲಿಯಿರಿ.” ಎಂದು ಹೇಳಿದರು.

ಶ್ರೀ ರಾಮಾನುಜರು ಕೂಡಲೆ, ತಿರುಕ್ಕೋಷ್ಟಿಯೂರಿಗೆ ಹೊರಟರು.ಅವರು ತಿರುಕ್ಕೋಷ್ಟಿಯೂರಿನಲ್ಲಿ ತಿರುಕ್ಕೋಷ್ಟಿಯೂರ್ ಆಗಮಿಸಿ, ಅಲ್ಲಿನ ನಿವಾಸಿಯರನ್ನು ನಂಬಿಗಳ ತಿರುಮಾಳಿಗೆಯು ಎಲ್ಲಿದೆಯೆಂದು ಕೇಳುತ್ತಾರೆ. ಅವರು ತೋರಿದ ಸ್ಥಳದಿಂದ, ಪ್ರತಿ ಹೆಜ್ಜೆಗೂ ಪ್ರಣಾಮಿಸುತ್ತಲೇ ತಿರು ಮಾಳಿಗೈ ಗೆ ಹೋಗುತ್ತಾರೆ. ಅದುವರೆಗು ನಂಬಿಗಳ ಮಹಿಮೆಯನ್ನರಿಯದ ಆಲ್ಲಿನ ಜನರು ಆಶ್ಚರ್ಯಚಕಿತರಾಗುತ್ತಾರೆ. ಶ್ರೀ ರಾಮಾನುಜರು ನಂಬಿಗಳ ಪಾದಾರವಿಂದಗಳಿಗೆ ಶಾಷ್ಟಾಂಗ ನಮಸ್ಕಾರವನ್ನು ಸಲ್ಲಿಸಿ ರಹಸ್ಯಾರ್ಥಗಳನ್ನು ಉಪದೇಶಿಸಲು ಪ್ರಾರ್ಥಿಸುತ್ತಾರೆ. ಅವನ್ನು ಉಪದೇಶಿಸಲು ತಿರುಕ್ಕೋಷ್ಟಿಯೂರ್ ನಂಬಿಗಳು ಆಸಕ್ತಿ ತೋರದ ಕಾರಣ ದುಃಖದಿಂದ ಶ್ರೀರಂಗಕ್ಕೆ ಹಿಂತಿರುಗಿದರು.

ಶ್ರೀರಂಗಕ್ಕೆ ಬಂದ ನಂತರವೂ, ಅವರು ರಹಸ್ಯಾರ್ಥಗಳನ್ನು ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಅರಿಯಲು ತ್ವರಿಸುತ್ತಿದ್ದರು. ಒಮ್ಮೆ ಶ್ರೀರಂಗಕ್ಕೆ ಬಂದ ನಂಬಿಗಳು ಅಲ್ಲಿಂದ ಹೊರಡುತ್ತಿರುವಾಗ ನಮ್ಪೆರುಮಾಳ್, ಶ್ರೀ ರಾಮಾನುಜರಿಗೆ ರಹಸ್ಯಾರ್ಥಗಳನ್ನು ಉಪದೇಶಿಸಲು ಆದೆಶಿಸಿದರು. ನಂಬಿಗಳು ಅವನ್ನು (ರಹಸ್ಯಾರ್ಥಗಳನ್) ನಿಷ್ಟೆಯಿಂದ ಸೇವೆ ಸಲ್ಲಿಸದ ಶಿಷ್ಯನಿಗೆ ಉಪದೇಶಿಸಬಾರದೆಂದು ಶಾಸ್ತ್ರ ಹೆಳುತ್ತದೆಂದು ನಮ್ಪೆರುಮಾಳಿಗೆ ಹೇಳಿದರು. ನಮ್ಪೆರುಮಾಳ್,ಒಬ್ಬ ಶಿಷ್ಯನ ಎಲ್ಲಾ ಲಕ್ಷಣಗಳು ಅವರಲ್ಲಿದ್ದ ಕಾರಣ, ಅವರಿಗೆ ಉಪದೇಶಿಸುವುದರಲ್ಲಿ ಯಾವ ದೋಷವೂ ಇಲ್ಲವೆಂದು ಹೇಳಿದರು. ಶ್ರೀ ರಾಮಾನುಜರು ನಂತರ ತಿರುಕ್ಕೋಷ್ಟಿಯೂರಿಗೆ ಹೋಗತ್ತಾರೆ, ಆಗ ನಂಬಿಗಳು ಉಪದೇಶಿಸದೆ ಇನ್ನೊಂದು ಬಾರಿ ಬರಲು ಹೇಳುತ್ತಾರೆ. ಇದು ಹೀಗೆಯೆ ಹದಿನೆಂಟು ಬಾರಿ ನಡೆಯಿತು. ಅವರು ಅದನ್ನು ಕಲಿಯಲು ತ್ವರಿಸುತ್ತಿದ್ದರು ;ಇನ್ನೂ ಕಲಿಯುವ ಕಾಲಾವಕಾಶ ಬರಲಿಲ್ಲವೆಂಬ ದುಃಖವನ್ನು ತಿರುಕ್ಕೋಷ್ಟಿಯೂರ್ ನಂಬಿಗಳ ಒಬ್ಬ ಶಿಷ್ಯರಿಗೆ ಹೇಳುತ್ತಾರೆ. ಆ ಶಿಷ್ಯರು ನಂಬಿಗಳಿಗೆ ತಿಳಿಸಿದರು. ಕೊನೆಯಲ್ಲಿ ನಂಬಿಗಳು ಅಂಗೀಕರಿಸಿ , ಗೀತೆಯ ಚರಮ ಶ್ಲೋಕಾರ್ಥವನ್ನು ಉಪದೇಶಿಸುತ್ತಾರೆ.ಅನರ್ಹರಿಗೆ ಉಪದೇಶಿಸಬೇಡಿ ಯೆಂದು ಹೇಳಿದರು. ಆದರೆ ಆಸೆಯಿರುವವರಿಗೆಎಲ್ಲಾ ಶ್ರೀ ರಾಮಾನುಜರು ಅರ್ಥಗಳನ್ನು ಉಪದೇಶಿಸಿದರು. ಇದನ್ನು ಕೇಳಿ ತುಂಬಾ ಕೋಪಗೊಂಡ ನಂಬಿಗಳು, ಶ್ರೀ ರಾಮಾನುಜರನ್ನು ಕರೆದರು. ಶ್ರೀ ರಾಮಾನುಜರು ರಹಸ್ಯಾರ್ಥಗಳನ್ನು ಅರಿತವರೆಲ್ಲ , ಈ ಜ್ಞಾನದಿಂದ ಉದ್ಧರಿಸುತ್ತಾರೆ, ಇಂತಹಾ ಅವರ ದಾರಾಳ ಹೃದಯವನ್ನರಿತ ನಂಬಿಗಳು ಅವರನ್ನು ‘ಎಮ್ಪೆರುಮಾನಾರ್’ (ಶ್ರೀಮನ್ನಾರಾಯಣನಿಗಿಂತ ಶ್ರೇಷ್ಠರು)ಎಂದು ಹೊಗಳುತ್ತಾರೆ. ನಮ್ಮ ಸಂಪ್ರದಾಯವು ನಂತರ ಎಮ್ಪೆರುಮಾನಾರ್ ದರ್ಶನವೆಂದೇ(“ಶ್ರೀ ರಾಮಾನುಜ ದರ್ಶನ”) ಪ್ರಿಸಿದ್ಧವಾಯಿತು. ಎಮ್ಪೆರುಮಾನಾರ್ ನಂತರ ಆ ರಹಸ್ಯಾರ್ಥಗಳನ್ನು ಕೂರತ್ತಾಳ್ವಾನ್ ಹಾಗು ಮುದಲಿಯಾಂಡಾನಿಗೆ ಉಪದೇಶಿಸಿದರು.

ನಂತರ ತಿರುವಾಯ್ಮೊಳಿಯನ್ನು ಕಲಿಸಲು ತಿರುಮಲೈ ಆಣ್ಡಾನಿಗೆ ತಿರುಕ್ಕೋಷ್ಠಿಯೂರ್ ನಂಬಿಗಳು ಹೇಳಿದರು. ಎಮ್ಪೆರುಮಾನಾರ್ ಉತ್ಸಾಹದಿಂದ ಕಲಿತರು. ಕೆಲವೊಮ್ಮೆ ಆಣ್ಡಾನ್ ಹಾಗು ಎಮ್ಪೆರುಮಾನಾರಿನ ನಡುವೆ ಪಾಸುರದ ಅರ್ಥ ನಿರ್ವಾಹದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದವು, ಹಾಗು ತಿರುವಾಯ್ಮೊಳಿ ಯ “ಅಱಿಯಾಕ್ ಕಾಲತ್ತುಳ್ಳೇ” (2.3.3) ಪಾಸುರದಲ್ಲಿ ಎಮ್ಪೆರುಮಾನಾರ್ ಪಾಸುರಗಳಿಗೆ ಬಿಹ್ನ ಅರ್ಥಗಳನ್ನು ನೀಡುವುದರಿಂದ , ಆರೆಯರ್ ಕೋಪಗೊಂಡು ಕಾಲಕ್ಷೇಪವನ್ನು ನಿಲ್ಲಿಸಿದರು.ಈ ಸುದ್ದಿ ಕೇಳಿದ ಕೂಡಲೆ ತಿರುಕ್ಕೋಷ್ಟಿಯೂರ್ ನಂಬಿಗಳು ಶ್ರೀರಂಗಕ್ಕೆ ಧಾವಿಸಿ ಬರುತ್ತಾರೆ. ಅವರು ಎಮ್ಪೆರುಮಾನಾರಿನ ಮಹತ್ತ್ವವನ್ನು ಹೇಳಿ, ಕಾಲಕ್ಷೇಪವನ್ನು ಮುಂದುವರೆಸಲು ಹೇಳುತ್ತಾರೆ. ಮತ್ತೊಂದು ಭಿನ್ನಾಭಿಪ್ರಾಯವುಂಟಾದಾಗ “ಆಳವಂದಾರ್ ಹೀಗೆ ಅರ್ಥ ಹೇಳುತ್ತಿರಲಿಲ್ಲ” ವೆಂದು ಎಮ್ಪೆರುಮಾನಾರ್ ಹೇಳಿದರು; ಆಣ್ಡಾನ್,”ನೀವು ಎಂದೂ ಆಳವಂದಾರನ್ನು ಸಂದಿಸಿದಿಲ್ಲ, ಅವರ ಅಭಿಪ್ರಾಯ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದಾಗ ಎಂಪರುಮಾನಾರ್ ” ನಾನು ಆಳವಂದಾರಿಗೆ ಏಕಲವ್ಯನಂತಹ ಶಿಷ್ಯನು” ಎಂದು ಹೇಳಿದರು. ಆಣ್ಡಾನ್ ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಎಮ್ಪೆರುಮಾನಾರಿನ ವೈಭವದ ಬಗ್ಗೆ ಕೇಳಿದ್ದನ್ನೇ ಎಮ್ಪೆರುಮಾನಾರಿಂದಲೇ ಕಂಡರು.ಅವರು ಎಮ್ಪೆರುಮಾನರನ್ನು ಒಂದು ವಿಶೇಷ ಅವತಾರವೆಂದು ಕಂಡು, ಅವರು ಆಳವಂದಾರಿನಿಂದ ಕಲಿಯಲಾಗದ ಅರ್ಥಗಳನ್ನು ಎಮ್ಪೆರುಮಾನಾರಿಂದ ಕಲಿಯಬಹುದೆಂದು ಅವರಿಗೆ ವಿಶೇಷ ಗೌರವವನ್ನು ನೀಡಿದರು.

ತಿರುವಾಯ್ಮೊಳಿಯ ನಂತರ ಮತ್ತೆ ಪೆರಿಯ ನಂಬಿಗಳ ಬಳಿ ಹೋದಾಗ , ನಂಬಿಗಳು ತಿರುವರಂಗಪ್ಪೆರುಮಾಳ್ ಅರೈಯರಿಗೆ ಸೇವೆ ಸಲ್ಲಿಸಿ ರಹಸ್ಯಾರ್ಥಗಳನ್ನು ಅವರಿಂದ ಕಲಿಯಲು ಹೇಳಿದರು. ಎಮ್ಪೆರುಮಾನಾರ್ ಅರಿಯರ್ ಬಳಿ ಹೋಗಿ ನಿಷ್ಟೆಯಿಂದ ಆರು ಮಾಸಗಳ ಕಾಲ ಅವರಿಗಾಗಿ ಹಾಲನ್ನು ಕಾಯಿಸುತಿದ್ದರು ಹಾಗು ಅರಿಷಿಣವ ಅರೆಯುವ ಕೈಂಕರ್ಯ ಸೇವಿಸುತ್ತಿದ್ದರು. ಒಮ್ಮೆ ಎಮ್ಪೆರುಮಾನಾರ್ ಅರ್ಪಿಸಿದ ಅರಿಷಿಣ ಅವರಿಗೆ ತುಂಬ ಪ್ರಿಯವಾಗಿ ತೊರಲಿಲ್ಲವೆಂದು ಮುಖದಲ್ಲಿ ವ್ಯಕ್ತವಾದದನ್ನು ಕಂಡು ,ಕೂಡಲೆ ಮತ್ತೊಮ್ಮೆ ಅವರು ಪ್ರಿಯವಾಗುವ ರೀತಿಯಲ್ಲಿ ಲೇಪಿಸಲು ಅರಿಶಿಣವನ್ನು ತಯಾರಿಸಿದರು ; ಸುಪ್ರಸನ್ನರಾದ ಅರೆಯರ್ ತುಂಬ ರಹಸ್ಯವಾದ “ಚರಮೊಪಾಯವನ್ನು”- ಆಚಾರ್ಯರನ್ನು ಆಶ್ರಯಿಸಿರುವುದನ್ನು, ಉಪದೇಶಿಸುತ್ತಾರೆ.

ಎಮ್ಪೆರುಮಾನಾರೇಕೆ ಐವರು ಆಚಾರ್ಯರಿಂದ ಕಲಿಯಬೇಕೆಂಬ ಸಂದೆಹ ನಮಗೆ ಬರಬಹುದು. ಉತ್ತರ- ಹೇಗೆ ಒಬ್ಬ ರಾಜನು ಕೆಲವು ಮಂತ್ರಿಗಳನ್ನು ನೇಮಿಸಿ ತನ್ನ ಮಗನನ್ನು ರಾಜಕುಮಾರನಾಗಿ ರೂಪಿಸುತ್ತಾರೊ, ಹಾಗೆಯೇ ಆಳವಂದಾರ್ ತಮ್ಮ ಶಿಷ್ಯರಿಗೆ ತಮ್ಮ ಜ್ಞಾನನಿಧಿಯನ್ನು ನೀಡಿ ಸೂಕ್ತ ಕಾಲದಲ್ಲಿ ಉಪದೇಶಿಸಲು ಆಜ್ಞೆ ನೀಡಿದರು. ಎಮ್ಪೆರುಮಾನಾರ್ ಆಳವಂದಾರಿಗೆ ತುಂಬಾ ಪ್ರಿಯರಾದ ಕಾರಣ, ಆಳವಂದಾರಿನ ಎಲ್ಲ ಶಿಷ್ಯರಿಗು ಶ್ರೀ ರಾಮಾನುಜರ ಬಗ್ಗೆ ತುಂಬ ಗೌರವ ಹಾಗು ಪ್ರೀತಿಯಿತ್ತು.

ಗದ್ಯ ತ್ರಯವನ್ನು ಸಮರ್ಪಿಸುತ್ತಾರೆ

ನಂತರ ಒಂದು ಪಂಗುನಿ ಉತ್ತಿರದ ಶುಭ ದಿನದಂದು ಶ್ರೀರಂಗನಾಯಕಿ-ಶ್ರೀರಂಗನಾಥನ ಸೇರ್ತಿಯ ದಿನದಂದು ಅವರ ಮುಂದೆ ಗದ್ಯ ತ್ರಯವನ್ನು ರಚಿಸಿ ಪಠಿಸುತ್ತಾರೆ ಹಾಗು ಗೃಹದಲ್ಲಿ ಭಗವತ್ ಆರಾಧನ ವಿಧಿಯನ್ನು ವಿವರಿಸುವ ನಿತ್ಯ ಗ್ರಂಥವನ್ನು ರಚಿಸುತ್ತಾರೆ

ಈ ಸಮಯದಲ್ಲಿ ಎಮ್ಪೆರುಮಾನಾರ್ ಶ್ರೀರಂಗದಲ್ಲಿ ಭಿಕ್ಷಾಟನೆಯಿಂದ ಉಧರ ಭರಣವನ್ನು ಮಾಡುತ್ತಿದ್ದರು. ಶ್ರೀರಂಗದ ದೇವಸ್ಥಾದಲ್ಲಿ ಅವರು ಮಾಡಿದ ತಿದ್ದುಪಾಡನ್ನು ಒಪ್ಪದ ಕೆಲವರು ಒಂದು ಮಹಿಳೆಯ ಮುಖಂತರ ಅವರಿಗೆ ವಿಷಭರಿತವಾದ ಅನ್ನವನ್ನು ಭಿಕ್ಷೆಯಾಗಿನೀಡಲು ನಿರ್ಬಂಧಿಸಿದರು. ಅವಳಿಗೆ ಇಛ್ಚೆಯಿಲ್ಲದಿದ್ದರೂ, ವಿಷಭರಿತವಾದ ಭಿಕ್ಷೆಯಾನ್ನು ನೀಡಿದಳು, ಎಮ್ಪೆರುಮಾನಾರ್ ಅವಳ ಮುಖವನ್ನು ಕಂಡು, ಎನೊ ಸರಿಯಿಲ್ಲವೆಂದು ಅರಿತು ಅದನ್ನು ಸೇವಿಸದೆ ಕಾವೇರಿ ನದಿಯಲ್ಲಿ ಅರ್ಪಿಸಿ ಉಪವಾಸದಲ್ಲಿದ್ದರು.

ತಿರುಕ್ಕೋಷ್ಟಿಯೂರ್ ನಂಬಿಗಳು ಇದನ್ನು ಕೇಳಿದ ಕೂಡಲೆ ಶ್ರೀರಂಗಕ್ಕೆ ಬಂದರು. ಬಿಸಿಲಿನಿಂದ ಕುದಿಯುತ್ತಿರುವ ಕಾವೇರಿಯ ದಡದಲ್ಲಿ ನಂಬಿಗಳನ್ನು ಸ್ವಾಗತಿಸಲು ಬಂದರು. ನಂಬಿಗಳನ್ನು ಕಂಡ ಕೂಡಲೆ ಶಾಶ್ಟಾಂಗ ನಮಸ್ಕಾರವನ್ನು ಸಲ್ಲಿಸೆ, ಮೇಲೆರಲು ಅಪ್ಪಣೆಗಾಗಿ ಕಾಯುತ್ತಿದ್ದರು. ನಂಬಿಗಳು ಮಾಡಿದ ತಡವನ್ನು ತಾಳರದ (ಎಮ್ಪೆರುಮಾನಾರಿನ ಶಿಷ್ಯರಾದ) ಕಿಡಾಂಬಿ ಆಚ್ಚಾನ್ , ಎಮ್ಪೆರುಮಾನಾರನ್ನು ಕುದಿಯುತ್ತಿದ್ದ ಮರಳಿನೆಂದೆ ಮೇಲಕ್ಕೆ ಎತ್ತಿ, “ಇಂತಹ ಶ್ರೇಷ್ಟ ಆಚಾರ್ಯರನ್ನು ,ಈ ತಾಪದಲ್ಲಿ ಹೇಗೆ ಬಿಡುವಿರಿ?” ಎಂದು ಕೇಳಿದರು. ನಂಬಿಗಳು, “ನನ್ನನು ಮರ್ಯಾದಿಸದೆ, (ಅವರು ಶರೀರದ ಮೇಲಿದ್ದ ವಿಶೇಷ ಕಾಳಜಿಯಿಂದ) ಅವರನ್ನು ಎತ್ತಿದ ಕಾರಣ , ನೀವೇ ಎಮ್ಪೆರುಮಾನಾರಿಗೆ ಆಡಿಗೆ ಮಾಡಲು ಸೂಕ್ತ ವ್ಯಕ್ತಿ.” ಎಂದು ಹೇಳಿದರು.

ಯಜ್ಞ ಮೂರ್ತಿಯನ್ನು ಗೆಲ್ಲುವುದು

ಒಮ್ಮೆ ವಾರಣಾಸಿಯಲ್ಲಿ ಹಲವಾರು ವಿದ್ವಾಂಸರನ್ನು ಗೆದ್ದು, ಅಲ್ಲೇ ಸನ್ನ್ಯಾಸಾಶ್ರಮವನ್ನು ಸ್ವೀಕರಿಸಿದ, ಪುರಸ್ಕಾರ-ಶಿಷ್ಯ ಸಂಪನ್ಮಯರಾದ ಮಾಯಾವಾದ ವಿದ್ವಾನ್- ಯಜ್ಞ ಮೂರ್ತಿಯೆಂಬವರು ಶ್ರೀ ರಾಮಾನುಜರ ವೈಭವನ್ನು ಕೇಳಿ ಶ್ರೀರಂಗಕ್ಕೆ ಬಂದರು. ಅವರು ಶ್ರೀ ರಾಮನುಜರನ್ನು ಒಂದು ವಾದಕ್ಕೆ ಆಹ್ವಾನಿಸಿದರು. ಶ್ರೀ ರಾಮಾನುಜರು ಅಂಗೀಕರಿಸಿದರು. ಯಜ್ಞ ಮೂರ್ತಿಯು, “ನಾನು ವಾದದಲ್ಲಿ ಸೋತುಹೊದರೆ, ನಿಮ್ಮ ಪಾದುಕೆಗಳನ್ನು ನನ್ನ ಶಿರಸ್ಸಿನ ಮೇಲೆ ಧರಿಸಿ, ನಿಮ್ಮ ಹೆಸರನ್ನು ಹಾಗು ಸಿದ್ಧಾಂತವನ್ನು ಸ್ವೀಕರಿಸಿದರು. ಉಡೈಯವರು,”ನಾನು ಸೊತರೆ ಗ್ರಂಥ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿದರು.” ಅವರಿಬ್ಬರ ನಡೂವೆ 17 ದಿನಗಳ ಕಾಲ ಭೀಕರ ವಾದವು ನಡೆಯಿತು. ಹದಿನೇಳನೆಯ ದಿನದಂದು ಯಜ್ಞ ಮೂರ್ತಿಯು ಗೆಲ್ಲುವಂತಿತ್ತು ಹಾಗು ಗರ್ವದಿಂದ ಹೊರ ಬಂದರು. ಶ್ರೀ ರಾಮಾನುಜರು ದುಃಖಿತರರಾಗಿ ಅವರ (ಮಠದ ಪೆರುಮಾಳಾದ) ಪೇರರುಳಾಳಪೆರುಮಾಳಿಗೆ ,”ಆಳ್ವಾರ್ರಿಂದ ಆಳವಂದಾರಿನಂತಹ ಮಹನೀಯರಿಂದ ಪೊಶಿಸಲ್ಪಟ್ಟ ಈ ಸಂಪ್ರದಾಯವು ನನ್ನಿಂದ ಸೋಲುತ್ತಿದೆ ಮತ್ತು ಮಾಯಾವಾದಿಯಿಂದ ನಾಶವಾಗುತ್ತಿದೆ. ಇದೇ ನಿಮ್ಮ ಇಛ್ಚೆಯಾಗಿದ್ದರೆ, ಹಾಗೆಯೆ ನಡೆಯಿಲಿ.” ಎಂದು ಹೇಳಿ ಏನು ಪ್ರಸಾದ ಸ್ವೀಕರಿಸದೆ ಶಯನಿಸಿದರು. ಅವರ ಸ್ವಪ್ನದಲ್ಲಿ ಪೆರುಮಾಳ್ ಪ್ರಕಾಶಿಸಿ ಆಳವಂದಾರಿನ ಗ್ರಂಥಗಳಿಂದ ಯಜ್ಞ ಮೂರ್ತಿಯನ್ನು ಗೆಲ್ಲಲ್ಲು ಹೇಳಿದರು. ಬೆಳಿಗೆ ಏಳಿ ಹೊಸ ಉತ್ಸಾಹದಿಂದ ಮಠದ ಪೆರುಮಾಳಿಗೆ ವಿದಾಯ ಹೇಳಿ ಹೊರಟರು ಅವರ ಗಂಭೀರ ನಡೆಯನ್ನು ನೋಡಿದ ಜ್ಞಾನಿಯಾದ ಯಜ್ಞ ಮೂರ್ತಿಯು ಇದರಲ್ಲಿ ದೈವಶಕ್ತಿ ಇದೆಯೆಂದು ಅರಿತು ತಮ್ಮ ಸೋಲನ್ನು ಒಪ್ಪತ್ತಾರೆ. ಆಶ್ಚರ್ಯಪಟ್ಟ ಶ್ರೀ ರಾಮಾನುಜರು,”ವಾದವನ್ನು ಮುಂದುವರಿಸುವ ಇಛ್ಚೆಯಿಲ್ಲವೊ ?” ಎಂದು ಕೇಳುತ್ತಾರೆ. “ಪೆರಿಯ ಪೆರುಮಾಳೇ ನಿಮ್ಮೊಂದಿಗೆ ಸಂಭಾಶಿಸಿದ ಕಾರಣ, ನೀವು ಪೆರಿಯ ಪೆರುಮಾಳ್ ಬೇರೆಯಲ್ಲವೆಂದು ಅರಿತೆನು. ನಾನು ಮತ್ತೆ ನಿಮ್ಮ ಮುಂದೆ ಬಾಯಿತೆರುವುದಿಲ್ಲ.” ಆದರೆ ಶ್ರೀ ರಾಮಾನುಜರು ಬ್ರಹ್ಮನ ಶ್ರೇಷ್ಠ ಗುಣಗಳನ್ನು ವಿವರಿಸಿ ಮಾಯಾವಾದ ಸಿದ್ಧಾಂತವನ್ನು ನಿರಸಿಸಿದರು.ಮನವರಿಕೆಯಾದ ಯಜ್ಞ ಮೂರ್ತಿಯು ತನ್ನ ಏಕ ದಂಡವನ್ನು ಮುರಿದು (ಮಾಯಾವಾದಿಯರ ಬಳಿಯಿರುವ ಒಂದು ದಂಡ) ಶ್ರೀ ರಾಮಾನುಜರಲ್ಲಿ ಅವರಿಗೆ ತ್ರಿದಂಡ ಸನ್ನ್ಯಾಸವನ್ನು ನೀಡಲು ಬೇಡಿದರು .ಪೇರರುಳಾರಪ್ಪೆರುಮಾಳಿನ ದಿವ್ಯ ಅನುಗ್ರಹವನು ನೆನೆಯುತ್ತಾ ಶ್ರೀ ರಾಮಾನುಜರು ಅವರಿಗೆ “ಅರುಳಾಳಪ್ ಪೆರುಮಾಳ್ ಎಮ್ಪೆರುಮಾನಾರ್” ಎಂದು ಹೆಸರು ಮುುಡಿಸಿದರು, ಶ್ರೀ ರಾಮಾನುಜರು ಸ್ವತಹ ದಿವ್ಯ ಪ್ರರಬಂಧವನ್ನು ಮತ್ತು ಅದರ ಒಳ ಅರ್ಥಗಳನ್ನು ಅವರಿಗೆ ಬೋಧಿಸಿದರು. ಅವರು ಭಕ್ತಿಯಿಂದ ಶ್ರೀ ರಾಮಾನುಜರರೊಂದಿಗೇ ಇದ್ದು ಬಿಟ್ಟರು .

ತಿರುಮಲೈ ಯಾತ್ರೆ ಹಾಗು ಕೈಂಕರ್ಯಗಳು

ಉಡೈಯವರು ಆಳ್ವಾನ್, ಆಣ್ಡಾನ್ ಹಾಗು ಅರುಳಾಳಪ್ ಪೆರುಮಾಳ್ ಎಮ್ಪೆರುಮಾನಾರಾದಿ ಶಿಷ್ಯರಿಗೆ ಶ್ರೀರಂಗದಲ್ಲಿ ಭೋದಿಸುತ್ತಿದ್ದರು. ಅವರನ್ನು ಆಶ್ರಯಿಸಲು ಹಲವಾರು ವಿದ್ವಾನರು ಶ್ರೀರಂಗಕ್ಕೆ ಆಗಮಿಸಿದರು. ಅನಂತಾಳ್ವಾನ್, ಎಚ್ಚಾನ್ ,ತೊಂಡನೂರ್ ನಂಬಿ ಹಾಗು ಮರುದೂರ್ ನಂಬಿಗಳು ಉಡೈಯವರನ್ನು ಆಚಾರ್ಯರನ್ನಾಗಿ ಸ್ವಿಕರಿಸಲು ಬಂದಾಗ, ಅವರನ್ನು ಅರುಳಾಳಪ್ ಪೆರುಮಾಳ್ ಎಮ್ಪೆರುಮಾನಾರಿನ ಶಿಷ್ಯರನ್ನಾಗಲು ಹೇಳಿದರು. ಅವರು ಸಂತೋಶದಿಂದ ಸ್ವೀಕರಿಸಿದರು, ಆದರೆ ಅರುಳಾಳಪ್ ಪೆರುಮಾಳ್ ಎಮ್ಪೆರುಮಾನಾರ್ ಎಮ್ಪೆರುಮಾನಾರಿನ ಪಾದಗಳಲ್ಲೇ ವಿಶ್ವಾಸವನ್ನು ಹೊಂದಿರಿ ಎಂದು ಹೇಳಿದರು.ನಂತರ ಉಡೈಯವರು ತಿರುವಾಯ್ಮೊಳಿಯ ಅರ್ಥಗಳನ್ನು ಭೋದಿಸುತಿದ್ದರು, “ಒಳಿವಿಲ್ ಕಾಲಮ್” ದಶಕದ ಅರ್ಥಗಳನ್ನು ಉಪದೇಶಿಸುವ ಸಮಯದಲ್ಲಿ , “ಯಾರಾದರು ತಿರುಮಲ ತಿರುಪತಿಗೆ ಹೊಗಿ, ಅಲ್ಲಿ ಒಂದು ನಂದವನವನ್ನು ಸ್ಥಾಪಿಸಿ ,ಪ್ರತಿನಿತ್ಯವೂ ಹೂಮಾಲೆಗಳನ್ನು ತಿರುವೆಂಕಟಮುಡೈಯಾನಿಗೆ (ಶ್ರೀನಿವಾಸನಿಗೆ) ಸಮರ್ಪಿಸಲು ಸಿದ್ಧರಾಗಿರುತ್ತೀರಿ? .” ಎಂದು ಕೇಳಿದರು. ಅನಂತಾಳ್ವಾನ್ ಈ ಕೈಂಕರ್ಯಕ್ಕೆ ಸಿದ್ಧವಾಗಿದ್ದಾರೆಂದು ಹೆಳಿದರು. ಎಮ್ಪೆರುಮಾನಾರಿನ ಆಶಿರ್ವಾದದಿಂದ ತಿರುಮಲೆಗೆ ಹೋಗಿ ನಂದವನವನ್ನು ಮತ್ತು ಒಂದು ಕೊಳವನ್ನು ಸ್ಥಾಪಿಸಿ ,ನಂದವನಕ್ಕೆ “ಇರಾಮಾನುಸನ್” ಎಂಬ ಹೆಸರನ್ನು ನೀಡಿದರು ಹಾಗು ತಿರುವೆಂಕಟಮುಡೈಯಾನಿಗೆ ಸೇವಿಸುತಿದ್ದರು.

ಉಡೈಯವರೂ ತೀರ್ಥಯಾತ್ರೆಗೆ ಹೋಗಲು ಇಚ್ಚಿಸಿದರು ,ನಮ್ಪೆರುಮಾಳಿನ ಅನುಮತಿ ಪಡೆದು ,ತಿರುಕ್ಕೋವಲೂರ್ ಹಾಗು ಕಾಂಚೀಪುರದಲ್ಲಿ ಮಂಗಳಾಶಾಸನವನ್ನು ಮಾಡಿ ತಿರುಮಲೆಗೆ ಹೋದರು. ಉಡೈಯವರು ತಮ್ಮ ಶಿಷ್ಯರೊಂದಿಗೆ ತಿರುಮಲ ತಿರುಪತಿಯಕಡೆ ಹೊರಟರು; ಮದ್ಯ ದಾರಿ ತಪ್ಪಿ ಹೋಗುತ್ತಾರೆ, ಒಬ್ಬ ರೈತನನ್ನು ದಾರಿ ಕೇಳುತ್ತಾರೆ, ಅವನು ದಾರಿಯನ್ನು ಸ್ಪಶ್ಟವಾಗಿ ತೋರಿದಾಗ, ಅವನನ್ನು ) ಅಮಾನವನೆಂದೇ(ಶ್ರೀವೈಕುಣ್ಠಕ್ಕೆ ದಾರಿತೊರುವವರು) ಭಾವಿಸಿ ಅತಿ ಸಂತೋಷದಿಂದ ನಮಸ್ಕರಿಸಿದರು. ಕೊನೆಗೆ ತಿರುಪತಿಯಲ್ಲಿ ಸೇರಿ ತಪ್ಪಲಿನಲ್ಲಿದ್ದ ಆಳ್ವಾರುಗಳಿಗೆ ಪ್ರಾರ್ಥಿಸಿದರು. ಅವರು ತಿರುಪತಿಯಲ್ಲಿ ಸ್ವಲ್ಪ ಕಾಲ ಇದ್ದು, ಆಲ್ಲಿನ ರಾಜನನ್ನು ಅವರ ಶಿಷ್ಯರನ್ನಾಗಿ ಸ್ವೀಕರಿಸಿ ಹಲವಾರು ಶಿಷ್ಯರನ್ನು ಅಲ್ಲೇ ವಾಸಿಸಲು ನೇಮಿಸಿದರು. ಈ ಸುದ್ದಿಯನ್ನು ಕೇಳಿ ಅನಂತಾಳ್ವಾನ್ ಮೊದಲಾದ ಹಲವರು, ಉಡೈಯವರನ್ನು ಸ್ವಾಗತಿಸಿ, ಮಲೈಯನ್ನು ಏರಿ ತಿರುವೆಂಕಟಮುಡೈಯಾನಿಗೆ ಮಂಗಳಾಶಾಸನವನ್ನು ಮಾಡಲು ಪ್ರಾರ್ಥಿಸಿದರು. ಆಳ್ವಾರುಗಳು ಮಲೈಯ ಪವಿತ್ರತೆಯನ್ನು ಮನಸಿನಲ್ಲಿಟ್ಟುಕೊಂಡು ಮಲೈಯನ್ನು ಏರದಿದ್ದನ್ನು ಹೇಳಿ ಮೊದಲು ನಿರಾಕರಿಸಿದರು, ಆದರೆ ಶಿಷ್ಯರ ಬಲವಂತಕ್ಕಾಗಿ ತಪ್ಪಲಿನಲ್ಲಿ ಸ್ನಾನ ಮಾಡಿ, ಪರಮಪದದಲ್ಲಿ ಎಮ್ಪೆರುಮಾನಿನ ದಿವ್ಯ ಸಿಂಹಾಸನವನ್ನು ,ಹೇಗೆ ಭಗವದ್ಶೇಷಭೂತನು ಏರುವನೊ, ಹಾಗೆಯೆ ಮಲೈಯನ್ನು ಏರಿದರು.ಅವರು ಬಂದಾಗ ಅವರನ್ನು ಸ್ವಾಗತಿಸಲು ತಿರುಮಲೈ ನಂಬಿಗಳು ತಿರುವೆಂಕಟಮುಡೈಯಾನಿನ (ತೀರ್ಥಪ್ರಸಾದಾದಿ) ಮರ್ಯಾದೆಗಳನ್ನು ನೀಡಿ ಸ್ವಾಗತಿಸಿದರು. ಅವರ ಆಚಾರ್ಯರಲ್ಲಿ ಒಬ್ಬರಾದ ಅವರು ತಮ್ಮನು ಸ್ವಾಗತಿಸಲು ಬರಬೇಕಿತ್ತೆ ಎಂದು ,” ನನ್ನನು ಸ್ವಾಗತಿಸಲು, ನಿಮ್ಮಂತಹ ಶ್ರೇಷ್ಠರನ್ನಲ್ಲದೆ, ಸಾಮಾನ್ಯರೊಬ್ಬರು ಯಾರು ಸಿಗಲಿಲ್ಲವೇ?” ಎಂದು ಕೇಳಿದರು. ನಂಬಿಗಳು ವಿನಮ್ರತೆಯಿಂದ, “ನಾನು ಹುಡುಕಿ ನೋಡಿದೆ, ನನಗಿಂತ ಚಿಕ್ಕವರು (ಸಾಮಾನ್ಯರು) ಸಿಗಲಿಲ್ಲವೆಂದು ಹೇಳಿದರು . ಇದನ್ನು ಕೇಳಿ ಉಡೈಯವರು ಅವರ ಶಿಷ್ಯರು ಆಶ್ಚರ್ಯ ಚಕಿತರಾಗುತ್ತಾರೆ. ನಂತರ ಎಲ್ಲಾ ಜೇಯರ್, ಏಕಾಂಗಿ ದೇವಸ್ಥಾನದ ಕೈಂಕರ್ಯಪರರರು ಬಂದು, ಉಡೈಯವರನ್ನು ಸ್ವಾಗತಿಸುತ್ತಾರೆ. ಅವರು ದೇವಸ್ಥಾನದ ಪ್ರದಕ್ಷಿಣೆ ಮಾಡಿ, ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನಮಾಡಿ, ದ್ವಾದಶ ಊರ್ದ್ವ ಪುನ್ಡ್ರಗಳನ್ನು ಧರಿಸಿ ,ವರಾಹ ಪೆರುಮಾಳನ್ನು ಪ್ರಾರ್ಥಿಸಿ ,ಮುಖ್ಯ ದೇವಾಲಯವನ್ನು ಪ್ರವೇಶಿಸಿ, ಸೇನೈ ಮುದಲಿಯಾರಿಗೆ (ವಿಶ್ವಕ್ಸೇನರ್) ಪ್ರಾರ್ಥಿಸಿ ತಿರುವೆಂಕಟಮುಡೈಯಾನಿನ ಮಂಗಳಾಶಾಸನವನ್ನು ಮಾಡುತ್ತಾರೆ. ನಿತ್ಯ ಸೂರಿಗಳು ವಾಸಿಸುವಂತಹ ತಿರುಮಲೈಯಿನಲ್ಲಿ ಇರುವುದು ಸೂಕ್ತವಲ್ಲವೆಂದು , ತಿರುಪತಿಗೆ ಹಿಂತಿರುಗಲು ನಿಶ್ಚಯಿಸುತ್ತರೆ. ಆದರೆ ನಂಬಿಗಳು ಹಾಗು ಇತರರು ಇನ್ನೂ ಮೂರು ದಿನಗಳು ಆಲ್ಲೆ ಇರಲು ಒತ್ತಾಯಿಸಿದರು. ಉಡೈಯವರು ಒಪ್ಪಿ, ಏನೂ ಪ್ರಸಾದವನ್ನು ಸ್ವೀಕರಿಸದೆ ತಿರುವೆಂಕಟಮುಡೈಯಾನಿನ ಸೌಂದರ್ಯವನ್ನು ಅನುಭವಿಸುತ್ತಾ ಆಲ್ಲೇ ಇದ್ದರು. ಅವರು ಅಲ್ಲಿಂದ ಹೊರಡಲು ಅಪ್ಪಣೆ ಕೇಳಿದಾಗ, ಎಮ್ಪೆರುಮಾನ್ ಉಡೈಯವರನ್ನು ನಿತ್ಯ ವಿಭೂತಿ ಹಾಗು ಲೀಲಾ ವಿಭೂತಿಗಳಿಗೆ. ನಾಥನೆಂದು ಹೇಳಿ ( ಹಿಂದೆ ಹೇಳಿದ್ದನ್ನು) ಮತ್ತೆ ದೃಡಕರಿಸಿ ಹೊರಡಲು ಅಪ್ಪಣೆ ನೀಡಿದರು. ನಂತರ ಅವರು ತಿರುಮಲೈಯನ್ನು ಬಿಟ್ಟು ತಿರುಪತಿಯಲ್ಲಿ ಒಂದು ವರ್ಷದ ಕಾಲ ಇದ್ದು ತಿರುಮಲೈ ನಂಬಿಗಳಿಂದ ಶ್ರೀ ರಾಮಾಯಣವನ್ನು ಮತ್ತು ಅದರ ವಿಶೇಷ ಅರ್ಥಗಳನ್ನು ಕಲಿತರು. ಕಾಲಕ್ಷೇಪವು ಮುಗಿದ ನಂತರ ಶ್ರೀರಂಗಕ್ಕೆ ಹಿಂತಿರುಗಲು ಅಪ್ಪಣೆ ಕೇಳಿದರು. ತಿರುಮಲೈ ನಮ್ಬಿಗಳು ಅವರಿಗೇನಾದರು ಉಡುಗೊರೆಯನ್ನು ಕೊಡಲು ಇಚ್ಛಿಸುವುದನ್ನು  ಕಂಡು, (ತುಂಬಾ ನಿಷ್ಟೆಯಿಂದ ನಂಬಿಗಳ ಸೇವೆ ಮಾಡುತ್ತಿದ) ಗೊವಿಂದಪ್ಪೆರುಮಾಳನ್ನು, ಸಂಪ್ರದಾಯವನ್ನು ಸ್ಥಾಪಿಸಲು ಸಹಾಯವಾಗಿ ಅವರೊಂದಿಗೆ ಕಳುಹಿಸಲು ಕೋರಿದರು . ನಂಬಿಗಳು ಸಂತೋಶದಿಂದ ಗೊವಿಂದಪ್ಪೆರುಮಾಳನ್ನು ಉಡೈಯವರೊಂದಿಗೆ ಕಳುಹಿಸಿದರು, ನಂತರ ಶ್ರೀರಂಗದ ಮಡೆ ಪ್ರಯಾಣ ಪ್ರಾರಂಭಿಸಿದರು.

ಉಡೈಯವರು ಗೊವಿಂದಪ್ಪೆರುಮಾಳೊಂದಿಗೆ ಗಡಿಕಾಚಲಕ್ಕೆ. ( ಶೋಲಿಂಗೂರ್)ಹಾಗು ಅಕ್ಕಾರಕ್ಕಣಿ ಎಮ್ಪೆರುಮಾನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ನಂತರ ತಿರುಪುಟ್ಕುಳಿಗೆ ಬರುತ್ತಾರೆ ಹಾಗು ಜಟಾಯು ,ಮಹಾರಾಜರು, ಮರಗತವಲ್ಲಿ ತಾಯರ್ ಹಾಗು ವಿಜಯರಾಘವ ಪೆರುಮಾಳಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ನಂತರ , ಕಾಂಚೀಪುರದ ಸಮೀಪದಲ್ಲಿರುವ ದಿವ್ಯ ದೇಶಗಳನ್ನು ಸೇವಿಸಿ ತಿರುಕಚ್ಚಿ ನಂಬಿಗಳ ಮುಂದೆ ಬಂದರು. ಈ ಸಮಯದಲ್ಲಿ,ಅವರ ಆಚಾರ್ಯರಾದ ಪೆರಿಯ ತಿರುಮಲೈ ನಂಬಿಗಳಿಂದ ವಿರಹದ ದುಃಖದಿಂದ ಮುಖವು ಮಸುಕಾಗಿತ್ತು ಅವರ ದುಃಖದ ಕಾರಣವನ್ನರಿತ ಉಡೈಯವರು , ಅವರ ಆಚಾರ್ಯರ ದರ್ಶನಕ್ಕಾಗಿ ಕೆಲವು ಶ್ರೀವೈಷ್ಣವರೊಡನೆ ಅವರನ್ನು ಕಳುಹಿಸಿದರು. ಉಡೈಯವರು ಕಾಂಚೀಪುರದಲ್ಲಿಯೇ ಇದ್ದು ತಿರುಕಚ್ಚಿ ನಂಬಿಗಳೊಂದಿಗೆ ‘ದೇವಾದಿರಾಜ’ನಾದ ಎಮ್ಪೆರುಮಾನನ್ನು ಸೇವಿಸುತ್ತಾರೆ. ಗೋವಿಂದ ಪೆರುಮಾಳ್ ತಿರುಮಲೈ ನಿಂಬಿಗಳ ತಿರುಮಾಳಿಗೈಗೆ ಹೋಗುತ್ತಾರೆ. ಬಾಗಿಲು ಮುಚ್ಚಿದ ಕಾರಣ ಆಲ್ಲೇ ಕಾಯುತ್ತಿದ್ದರು. ಆಲ್ಲಿನ ಜನರು ತಿರುಮಲೈ ನಂಬಿಗಳಿಗೆ ಗೊವಿಂದಪ್ಪೆರುಮಾಳಿನ ಆಗಮನದ ಬಗ್ಗೆ ತಿಳಿಸಿದಾಗ ಅವರು ಬಾಗಿಲೂ ತೆರೆಯದೆ, ಉಡೈಯವರ ಬಳಿ ಹಿಂತಿರುಗಿ ಅವರನ್ನೇ ಗತಿಯಾಗಿ ಕಾಣಲು ಹೇಳಿದರು. ಗೋವಿಂದ ಪೆರುಮಾಳ್ ಅವರ ಆಚಾರ್ಯರ ಇಚ್ಛೆಯನ್ನು ಅರಿತು , ಉಡೈಯವರ ಬಳಿ ಹಿಂತಿರುಗಿದರು. ಗೋವಿಂದ ಪೆರುಮಾಳರೊಂದಿಗೆ ಹೋಗಿದ್ದ ಶ್ರೀವೈಶ್ಣವರು ನಡೆದ ಸನ್ನಿವೇಷವನ್ನು ಉಡೈಯವರಿಗೆ ಹೇಳಿದರು, ತಿರುಮಲೈ ನಂಬಿಗಳ ಅದೇಶವನ್ನು ಕೇಳಿ ಹರ್ಷಿಸುತ್ತಾರೆ.ನಂತರ ಅವರು ಕಾಂಚೀಪುರದಿಂದ ಶ್ರೀರಂಗಕ್ಕೆ ಬರುತ್ತಾರೆ.

ಶ್ರೀ ರಂಗಕ್ಕೆ ಮರಳಿದರು

ಅಲ್ಲಿನ ಶ್ರೀವೈಷ್ಣವರು ವಿಧಿಪೂರ್ವಕವಾಗಿ ಅವರನ್ನು ಸ್ವಾಗತಿಸುತ್ತಾರೆ. ಸಕ್ರಮವಾಗಿ ಪೆರಿಯ ಪೆರುಮಾಳನ್ನು ದರ್ಶಿಸಿದರು. ಪೆರಿಯ ಪೆರುಮಾಳ್ ತುಂಬ ಪ್ರೀತಿಯಿಂದ ಸ್ವಾಗತಿಸಿ, ಅವರ ಯಾತ್ರೆಯ ಬಗ್ಗೆ ವಿಚಾರಿಸಿ ತೀರ್ಥ ಶ್ರೀ ಶಟಕೋಪಾದಿ ಮರ್ಯಾದೆಗಳನ್ನು ಪ್ರಸಾಧಿಸುತ್ತಾರೆ. ನಂತರ ಶ್ರೀರಂಗದಲ್ಲಿ ಉಡೈಯವರು ಕರುಣೆಯಿಂದ ಸಿದ್ಧಾಂತಾದಿ ವಿಷಯಗಳಲ್ಲಿ ಕಾಲಕ್ಷೇಪಗಳನ್ನು ನಡೆಸುತ್ತಾರೆ.

ಗೋವಿಂದ ಪೆರುಮಾಳ್ ಸಂತೋಷದಿಂದ ಈ ಕಾಲಕ್ಷೇಪಗಳಲ್ಲಿ ಹಾಗು ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಒಮ್ಮೆ ಹಲವು ಶ್ರೀವೈಷ್ಣವರು ಗೋವಿಂದ ಪೆರುಮಾಳನ್ನು ಹೊಗಳುತಿರುತ್ತಾರೆ, ಆಗ ಗೋವಿಂದ ಪೆರುಮಾಳ್ ಅವನ್ನು(ಹೊಗಳಿಕೆಯನ್ನು) ಒಪ್ಪಿ ಸಂತೊಷಿಸುತ್ತಾರೆ. ಇದನ್ನು ಕಂಡ ಉಡೈಯವರು, “ಯಾರಾದರು ನಮ್ಮನ್ನು ಪ್ರಶಂಸಿದಾಗ, ಅದನ್ನು ನಾವು ನೇರವಾಗಿ ಒಪ್ಪಬಾರದು, ನಾವು ಇಂತಹ ಪ್ರಶಂಸೆಗೆ ಅರ್ಹರಲ್ಲವೆಂದು ಹೇಳಬೇಕು.” ಇದನ್ನು ಕೇಳಿದ ಗೋವಿಂದ ಪೆರುಮಾಳ್, “ನಾನು ಕಾಳಹಸ್ತಿಯಲ್ಲಿ ನೀಚನಾಗಿದ್ದೆನು. ಯಾರಾದರು ನನ್ನನು ಪ್ರಶಂಸಿಸಿದರೆ , ನನ್ನನು ತಿದ್ದಿ ಈ ಸ್ಥಾನಕ್ಕೆ ತಂದ ನಿಮ್ಮ ಕರುಣೆಯೇ ಕಾರಣ – ಆದ್ದರಿಂದ ಈ ಏಲ್ಲ ಪ್ರಶಂಸೆಯು ನಿಮಗೇ ಸೇರಿದ್ದು” ಎಂದು ಹೇಳಿದರು.. “ನಿಮ್ಮ ಸದ್ಗುಣಗಳು ನನಗೂ ಬರಲಿ.” ಎಂದು ಹೇಳುತ್ತಾ ಗೋವಿಂದ ಪೆರುಮಾಳನ್ನು ಉಡಯವರ್ ಆಲಿಂಗಿಸಿದರು. ಗೋವಿಂದ ಪೆರುಮಾಳ್ ಎಲ್ಲಾ ಲೌಕಿಕ ವಿಷಯಗಳಲ್ಲಿಯೂ ವೈರಾಗ್ಯದಿಂದ ಜೀವಿಸುತ್ತಿದ್ದರು ಹಾಗು ಕೊನೆಯಲ್ಲಿ ಎಮ್ಪೆರುಮಾನಾರ್, ಅವರನ್ನು ಸನ್ನ್ಯಾಸಾಶ್ರಮವನ್ನು ಸ್ವೀಕರಿಸಲು ಆದೇಶಿಸಿದರು. ಗೋವಿಂದ ಪೆರುಮಾಳ್ ಸನ್ನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ ಹಾಗು, “ಎಂಬಾರ್” ಎಂಬ ಹೆಸರನ್ನು ಎಮ್ಪೆರುಮಾನಾರಿಂದಲೇ ಪಡೆದರು.ನಂತರ ಅರುಳಾಳಪ್ ಪೆರುಮಾಳ್ ಎಮ್ಪೆರುಮಾನಾರ್ ನಮ್ಮ ಸಂಪ್ರದಾಯದ ಸಾರವನ್ನು ತಿಳಿಸುವ ಜ್ಞಾನ ಸಾರ ಹಾಗು ಪ್ರಮೇಯ ಸಾರಗಳೆಂಬ ಎರಡು ಗ್ರಂಥಗಳನ್ನು ರಚಿಸುತ್ತಾರೆ.

ಕಾಶ್ಮೀರ ಯಾತ್ರೆ ಹಾಗು ಶ್ರೀ ಭಾಷ್ಯಮ್

ವೇದಾಂತದ ಸಿದ್ಧಾಂತವನ್ನು ನಿಖರವಾಗಿ ಸ್ಥಾಪಿಸಲು, ಎಮ್ಪೆರುಮಾನಾರ್,ಕೂರತ್ತಾಳ್ವಾನ್ ಹಾಗು ಇತರ ಶಿಷ್ಯರೊಂದಿಗೆ, ಬೋಧಾಯನ ವೃತ್ತಿ ಎಂಬ ಗ್ರಂಥವನ್ನು (ಬ್ರಹ್ಮಸೂತ್ರಗಳನ್ನು ವಿವರಿಸುವ ವ್ಯಖ್ಯಾನ) ಪಡೆಯಲು ಕಾಶ್ಮೀರಕ್ಕೆ ಹೊರಡುತ್ತಾರೆ. ಶ್ರೀರಂಗಕ್ಕೆ ಹೊರಡುವ ದಾರಿಯಲ್ಲಿ ಕೆಲವರು ಡುಷ್ಕರ್ಮಿಗಳು ಗ್ರಂಥವನ್ನು ಕಿತ್ತು ಓಡಿಹೋದರು. ಗ್ರಂಥವನ್ನು ಪೂರ್ಣವಾಗಿ ಓದಲಾಗದ ಕಾರಣ ದುಃಖಿತರಾದ ಎಮ್ಪೆರುಮಾನಾರನ್ನು ಕೂರತ್ತಾಳ್ವಾನ್, ಎಮ್ಪೆರುಮಾನಾರ್ ವಿಶ್ರಾಂತಿಸುತ್ತಿದ ಸಮಯದಲ್ಲಿ, ಗ್ರಂಥವನ್ನು ಪೂರ್ಣವಾಗಿ ಓದಿದ್ದರೆಂದು ಸಂತಯಿಸಿದರು. ಶ್ರೀರಂಗಕ್ಕೆ ಹಿಂತಿರುಗಿದ ನಂತರ, ಎಮ್ಪೆರುಮಾನಾರ್ ಓದಿದಂತೆಯೆ ಬ್ರಹ್ಮ ಸೂತ್ರಗಳ ಭಾಷ್ಯವನ್ನು ಬರೆಯಲು(ಉಕ್ತಲೇಖನ) ಅವರಿಗೆ ಆದೇಶಿಸಿದರು . ಹಾಗು ಕೂರತ್ತಾಳ್ವಾನಿಗೆ ಏನಾದರೂ ಹೇಳಿದ ವಿಷಯನ್ನು ಅಂಗೀ ಕರಿಸಿದರೆ(ಅಂದರೆ ಅವರಿಗೆ ಅಭಿಪ್ರಾಯ ಭೇದವಿದ್ದಲ್ಲಿ), ಬರೆಯುವುದನ್ನು ನಿಲ್ಲಿಸಬಹುದೆಂದು ಹೇಳಿದರು. ಒಮ್ಮೆ ಅತ್ಮಾವಿನ ಸ್ವರೂಪವನ್ನು ವಿವರಿಸುವ ಸಮಯದಲ್ಲಿ, ಎಮ್ಪೆರುಮಾನಾರ್ ಅದನ್ನು ಶೇಷತ್ವಕ್ಕೆ ಪ್ರಾಮುಖ್ಯವನ್ನು ನೀಡದೆ, ಜ್ಞಾತೃತ್ವವೆಂದು ಹೇಳುತ್ತಾರೆ. ಆಳ್ವಾನ್ ಬರೆಯುವುದು ನಿಲ್ಲಿಸಿಬಿಡುತ್ತಾರೆ, ಎಕೆಂದರೆ ಆತ್ಮಾವಿನ ಶೇಷತ್ವದ ಬಗ್ಗೆ ಜ್ಞಾನವೆ ಅತ್ಮಾವಿನ ಮುಖ್ಯ ಸ್ವರೂಪ. ಎಮ್ಪೆರುಮಾನಾರ್ ಕೋಪಗೋಂಡು ಅವರು ಹೇಳಿದ್ದನ್ನೆ ಬರೆಯಲು ಹೇಳುತ್ತಾರೆ. ಆಳ್ವಾನ್ ಬರೆಯಲು ಒಪ್ಪುವುದಿಲ್ಲ ; ಎಮ್ಪೆರುಮಾನಾರ್ ಅವರ ಕೋಪವನ್ನು ವ್ಯಕ್ತ ಪಡೆಸುತ್ತಾರೆ. ನಂತರ ಕೆಲವರು ಅವರನ್ನು ಎಮ್ಪೆರುಮಾನಾರಿನ ಕಾರ್ಯದಬಗ್ಗೆ, ಅವರ ಅಭಿಪ್ರಾಯವೇನೆಂದು ಕೇಳಿದಾಗ ಅವರು, ಆಳ್ವಾನ್ ,” ಅವರು ಸ್ವಾಮಿ(ವಸ್ತುವಿನ ಯಜಮಾನ ) ನಾನು ಸ್ವತ್ತು. ಅವರು ನನ್ನನ್ನ-ಸ್ವತ್ತನ್ನು ಏನು ಮಾಡಬೇಕಾದರೂ ಮಾಡಬಹುದು. ಸ್ವಲ್ಪ ಕಾಲದ ನಂತರ ಎಮ್ಪೆರುಮಾನಾರ್ ಪ್ರಕರಣವನ್ನು ಗಮನಿಸಿ ಅವರ ತಪ್ಪನ್ನರಿತು , ಆಳ್ವಾನಲ್ಲಿ ಕ್ಷಮೆ ಕೇಳಿ ,ಸೆರಿಯಾದ ಅರ್ಥದೊಂದಿಗೆ ಮತ್ತೆ ಗ್ರಂಥವನ್ನು (ಬರೆಯಲು-ಉಕ್ತಲೇಖನಕ್ಕಾಗಿ) ಹೇಳುತ್ತಾರೆ. ಈ ರೀತಿಯಲ್ಲಿ ಶ್ರೀ ಭಾಶ್ಯಂ , ವೇದಾಂತ ದೀಪಮ್, ವೇದಾರ್ಥ ಸಂಗ್ರಹಮ್, ಹಾಗು ಗೀತಾ ಭಾಷ್ಯಗಳನ್ನು ಎಮ್ಪೆರುಮಾನಾರ್ ಅನುಗ್ರಹಿಸುತ್ತಾರೆ; ಈ ರೀತಿಯಲ್ಲಿ ಈ ತತ್ವಗಳನ್ನು ಸೆರಿಯಾಗಿ ಭೋದಿಸಲು ಇಛ್ಚಿಸಿದ ಆಳವಂದಾರಿನ ಶೋಕವನ್ನು ದೂರ ಮಾಡಿದರು.

ದಿವ್ಯ ದೇಶ ಯಾತ್ರ

ಕೆಲವು ಶ್ರೀವೈಷ್ಣವರು ಉಡೈಯವರಲ್ಲಿ, “ನೀವು ಪರಮತಗಳನ್ನು ಸೊಲಿಸಿ ,ನಮ್ಮ ಸಿದ್ಧಾಂತವನ್ನು ಸ್ಥಾಪಿಸಿದ್ದೀರಿ, ಈಗ ನೀವು ದಯವಿಟ್ಟು ಇತರ ದಿವ್ಯ ದೇಶಗಳನ್ನು ಸೇವಿಸಬೇಕು.” ಎಂದು ಪ್ರಾರ್ಥಿಸಿದರು. ಉಡೈಯವರು ಅಂ ಗೀಕರಿಸಿದರು. . ಅವರೊಡನೆ ನಮ್ಪೆರುಮಾಳಿನ ಬಳಿ ಹೋಗಿ , ಅವರ ಅನುಮತಿ ಕೇಳುತ್ತಾರೆ. ನಮ್ಪೆರುಮಾಳ್ ಅನುಮತಿಯನ್ನು ನೀಡುತ್ತಾರೆ.ಹಲವಾರು ಶ್ರೀವೈಷ್ಣವರೊಂದಿಗೆ ಯಾತ್ರೆಯನ್ನು ಪ್ರಾರಂಬಿಸಿ ಭಾರತದ ಹಲವಾರು ದಿವ್ಯ ದೇಶಗಳನ್ನು ಕ್ಶೇತ್ರಗಳನ್ನು ದರ್ಶಿಸುತ್ತಾರೆ. ಚೋಳ ನಾಡಿನಿಂದ ಪ್ರಾರಂಬಿಸಿ, ತಿರುಕ್ಕುಡನ್ತೈ ಹಾಗು ಇತರ ದಿವ್ಯ ದೇಶಗಳನ್ನು ದರ್ಶಿಸುತ್ತಾರೆ. ತಿರುಮಾಲಿರುನ್ಚೋಲೈಯಾದಿ ದೇವಾಲಯಗಳನ್ನು ಸೇವಿಸಿ, ತಿರುಪ್ಪುಲ್ಲಾಣಿ ಹಾಗು ಸೇತು ಸಮುದ್ರಕ್ಕೆ ಹೋಗಿ ಆಳ್ವಾರ್ ತಿರುನಗರಿಗೆ ಬರುತ್ತಾರೆ ನಮ್ಮಾಳ್ವಾರ್ ಪೊಲಿಂದು-ನಿನ್ರ-ಪಿರಾನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ಎಮ್ಪೆರುಮಾನಾರನ್ನು ಕಂಡು ನಮ್ಮಾಳ್ವಾರ್ ಸಂತೋಷದಿಂದ ಎಲ್ಲಾ ಮರ್ಯಾದೆಗಳನ್ನು ನೀಡುತ್ತಾರೆ. ಆದರ ನಂತರ ನವ ತಿರುಪತಿಯ ಎಲ್ಲಾ ದೇವಾಲಾಯಗಳನ್ನು ದರ್ಶಿಸುತ್ತಾರೆ. ಹಾಗೆಯೆ ಇತರ ಪರಮತಗಳನ್ನು ನಿರಸಿಸಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸ್ಥಾಪಿಸಿದರು

ಅವರು ತಿರುಕ್ಕುಱುನ್ಗುಡಿಗೆ ಬರುತ್ತಾರೆ. ನಂಬಿ ಉಡೈಯವರನ್ನು ಸ್ವಾಗತಿಸಿ, ಅರ್ಚಕರ ಮುಖಂತರ ಅವರೊಂದಿಗೆ ಮಾತನಾಡುತ್ತಾರೆ. “ನಾನು ಹಲವಾರು ವಿಧವಾಗಿ ಅವತರಿಸಿದರೂ ಹೆಚ್ಚು ಶಿಷ್ಯರನ್ನು ಪಡೆಯಲಾಗಲಿಲ್ಲ ಆದರೆ ನೀವು ಹೇಗೆ ಇಷ್ಟು ಜನರನ್ನು ಸರಿಪಡಿಸಿದಿರಿ?” ಎಂದು ಕೇಳಿದಾಗ, ಉಡಯವರ್ ,”ನೀವು ಶಿಷ್ಯರಾಗಿ ಕೇಳಿದರೆ ಮಾತ್ರ ಹೇಳುತ್ತೇನೆ.” ಎಂದು ಹೇಳಿದರು.ನಂಬಿಯು ತಕ್ಷಣ , ಒಂದು ಸಿಂಹಾಸನವನ್ನು ಅರ್ಪಿಸಿ, ವಿನಯದಿಂದ ಅವರ ಬಳಿ ನಿಂತನು. ಸಿಂಹಾಸನದ ಪಕ್ಕ ಕುಳಿತು, ಅವರ ಆಚಾರ್ಯರಾದು ಪೆರಿಯ ನಂಬಿಗಳು ಸಿಂಹಾಸನದಲ್ಲಿ ಆಸೀನಗಾದ್ದಂತೆ ಧ್ಯಾನಿಸಿ, ದ್ವಯ ಮಹಾ ಮಂತ್ರದ ಮಹಾತ್ಮೆಯನ್ನು ತಿಳಿಸಿ, ಅದರ ಶಕ್ತಿಯಿಂದಲೇ ಎಲ್ಲರನ್ನೂ ಈ ಸನ್ಮಾರ್ಗವನ್ನು ಒಪ್ಪುವಂತೆ ಮಾಡಿದರೆಂದು ಹೇಳಿದರು. ನಂಬಿ ಸಂತೋಷಗೊಂಡು ಶ್ರೀ ರಾಮಾನುಜರನ್ನು ಆಚಾರ್ಯನ್ನಾಗಿ ಸ್ವೀಕರಿಸುತ್ತಾರೆ ,ಹಾಗು ಎಮ್ಪೆರುಮಾನಾರ್ ಆನಂದಿಸಿ ಅವರಿಗೆ “ಶ್ರೀವೈಷ್ಣವ ನಂಬಿ” ಎಂಬ ಹೆಸರನ್ನು ನೀಡುತ್ತಾರೆ.ನಂತರ , ಉಡೈಯವರು ತಿರುವಣ್ಪರಿಸಾರಮ್, ತಿರುವಟ್ಟಾಱು ಹಾಗು ತಿರುವನಂತಪುರಗಳಿಗೆ ಹೋಗುತ್ತಾರೆ. ತಿರುವನಂತಪುರದಲ್ಲಿ ಒಂದು ಮಠವನ್ನು ಸ್ಥಾಪಿಸಿ ಹಲವಾರು ವಿದ್ವಾಂಸರನ್ನು ಆಲ್ಲಿ ಜಯಿಸುತ್ತಾರೆ. ಆ ಪ್ರಾಂತದ ಹಲವಾರು ಎಮ್ಪೆರುಮಾನಾರನ್ನು ಸೇವಿಸಿ, ಪಶ್ಚಿಮ ತೀರದ(ದಿಕ್ಕಿನ ಪ್ರದೇಶದಿಂದ ಭಾರತದ)ಉತ್ತರದಲ್ಲಿ ಮಥುರಾ ಸಾಲಗ್ರಾಮ, ದ್ವಾರಕಾ, ಅಯೋಧ್ಯಾ, ಬದರಿಕಾಶ್ರಮ್ ,ನೈಮಿಶಾರಣ್ಯಮ್ , ಗೋಕುಲ,ಗೋವರ್ಧನಮ್ ವೃಂದಾವನಾದಿಗಳಲ್ಲಿ ಮಂಗಳಾಶಾಸನವನ್ನು ಮಾಡುತ್ತಾರೆ. ಹಾಗೆಯೆ ಹಲವಾರು ಇತರ ಮತದ. ವಿದ್ವಾಂಸರನ್ನು ಜಯಿಸುತ್ತಾರೆ.

ನಂತರ ಅವರು ಕಾಶ್ಮೀರಕ್ಕೆ ಬರತ್ತಾರೆ, ಹಾಗು ಆಲ್ಲಿನ ಸರಸ್ವತೀ ದೇವಿಯ ಆದಿನದಲ್ಲೇ ಇದ್ದ ಸರಸ್ವತೀ ಬಂಡಾರಕ್ಕೆ ಹೋಗುತ್ತಾರೆ. ಸರಸ್ವತೀ ದೇವಿಯೇ ಅವರನ್ನು ಸ್ವಾಗತಿಸಿ, “ತಸ್ಯ ಯತಾ ಕಪ್ಯಾಸಮ್” ಎಂಬ ಛಾಂದೋಗ್ಯೋಪನಿಶದಿನ ವಾಕ್ಯದ ಅರ್ಥವನ್ನು ವಿವರಿಸಲು ಹೇಳಿದರು(ಈ ಶ್ಲೋಕವು ಶ್ರೀ ರಾಮಾನುಜರ ಬಾಲ್ಯದಲ್ಲಿ, ಅವರ ಹಾಗು ಅವರ ಗುರುಗಳಾದ ಯಾದವಪ್ರಕಾಶರ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡಿದ ವಾಕ್ಯ). ಅವರು ವಿಸ್ತರವಾದ ವಿವರಣದೊಂದಿಗೆ ಅರ್ಥವನ್ನು ಸ್ಥಾಪಿಸಿದಾಗ, ತುಂಬ ಪ್ರಸನ್ನಗೊಂಡು ಶ್ರೀ ಭಾಷ್ಯವನ್ನು ಅವರ ಶಿರಸ್ಸಿನ ಮೇಲೆ ಧರಿಸಿ ಅವರನ್ನು ಹೊಗಳುತ್ತಾರೆ. ಅವರು ಶ್ರೀ ರಾಮಾನುಜರಿಗೆ “ಶ್ರೀಭಾಷ್ಯಕಾರ” ಎಂಬ ಬಿರುದೊಂದನ್ನು ನೀಡಿ ಹೊಗಳುತ್ತಾರೆ ಹಾಗು ಶ್ರೀ ಹಯಗ್ರೀವನ ಒಂದು ವಿಗ್ರಹವನ್ನು ನೀಡುತ್ತಾರೆ. ಉಡೈಯವರು ಅವರ ಈ ಸಂತೊಷಕ್ಕೆ ಕಾರಣವೇನೆಂದು ಕೇಳಿದಾಗ ಅವರು, ಹಿಂದೆ ಒಮ್ಮೆ ಶಂಕರರು ಅವರ ಬಳಿ ಬಂದಿದ್ದರೆಂದು, ಇದೇ ಶ್ಲೋಕದ ಅರ್ಥವನ್ನು ಕೇಳಿದಾಗ, ಶಂಕರರು ಅದರ ಅರ್ಥವನ್ನು ನಿಖರವಾಗಿ ಹೇಳಲಾಗದೆ ಅಸಂಗತವಾದ ಅರ್ಥಗಳನ್ನು ನೀಡಿದರೆಂದೂ, ಹಾಗು,”ನೀವು ಅದರ ಸೂಕ್ತ ಅರ್ಥವನ್ನು ಹೇಳಿದ್ದೀರಿ. ಇದು ನನಗೆ ಸಂತೋಷವನ್ನು ನೀಡುತ್ತಿದೆ.” ಎಂದು ಹೇಳಿದರು. ಇದನ್ನು ಕೇಳಿದ ಹಲವಾರು ವಿದ್ವಾಂಸರು ಅವರೊಂದಿಗೆ ವಾದಕ್ಕೆ ಬರುತ್ತಾರೆ. ಇದನ್ನು ಕಂಡ ರಾಜನು ಆಶ್ಚರ್ಯ ಚಕಿತನಾಗಿ ಅವರ ಶಿಷ್ಯನಾಗುತ್ತಾನೆ. ಸೋತ ಪಂಡಿತರು ವಾಮಾಚಾರದಿಂದ ಉಡೈಯವರನ್ನು ಕೊಲ್ಲಲು ಪ್ರಯತ್ನಿಸುತ್ತಾರೆ. ಅದು ವಿಫಲವಾಗಿ, ಅವರ ನಡುವೆಯೇ ಒಂದು ಜಗಳವುಂಟಾಯಿತು, ರಾಜನು ಅವರೆಲ್ಲರನ್ನು ರಕ್ಷಿಸಲು ಪ್ರಾರ್ಥಿಸುತ್ತಾನೆ, ಎಲ್ಲರು ಶಾಂತರಗುತ್ತಾರೆ ಹಾಗು ಉಡೈಯವರ ಶಿಷ್ಯರಾಗುತ್ತಾರೆ.

ಅವರು ವಾರಣಾಸಿಗೆ ಹೊಗುತ್ತಾರೆ , ಗಂಗ ಸ್ನಾನದ ನಂತರ ಕಣ್ಡಮೆನ್ನುಮ್ ಕದಿ ನಗರಮ್ ದಿವ್ಯ ದೇಶದಲ್ಲಿ ಪ್ರಾರ್ಥಿಸುತ್ತಾರೆ. ಅವರು ಪುರುಷೋತ್ತಮ-ಧಾಮವಾದ ಜಗನ್ನಾಥ ಪೂರಿಯಲ್ಲಿ ಜಗನ್ನಾಥ ಎಮ್ಪೆರುಮಾನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ .ಮಾಯಾವಾದ ವಿದ್ವಾಂಸರನ್ನು ಸೋಲಿಸಿ ಅವರ ಮಠವನ್ನು ಸ್ಥಾಪಿಸುತ್ತಾರ್. ಶ್ರೀ ಕೂರ್ಮಮ್, ಸಿಂಹಾದ್ರಿ , ಹಾಗು ಅಹೋಬಿಲವನ್ನು ದರ್ಶಿಸುತ್ತಾರೆ

ಕೊನೆಗೆ ತಿರುವೇಂಕಟಕ್ಕೆ (ತಿರುಮಲ) ಬರುತ್ತಾರೆ. ಆ ಸಮಯದಲ್ಲಿ ಕೆಲವರು ಶೈವರು ತಿರುವೇಂಕಟಮುಡೈಯಾನಿನ ಮೂಲವರ್ ರುದ್ರನೆಂದು ವಾದಿಸಿದರು. ಉಡೈಯವರು “ನೀವು ರುದ್ರನಿಗೆ ಪ್ರತ್ಯೇಕವಾದ ಅಸ್ತ್ರಗಳು ಅಥವ ಚಿನ್ಹೆಗಳನ್ನು ಮೂಲವರಿನ ಮುಂದೆ ಇಡಿ, ನಾವು ಶಂಖ ಚಕ್ರಗಳನ್ನು ಇಡುತ್ತೇವೆ ,ಭಗವಂತನು ,ತಾನೆ ಸರಿಯಾದ ಆಯಧಗಳನ್ನು ಆರಿಸಿ ತಾನು ಯಾರೆಂದು ನಿರೂಪಿಸಲಿ.” ಎಲ್ಲರನು ಸನ್ನಿಧಿಯ ಹೊರಗೆ ಕಳುಹಿಸಿ, ಬಾಗಿಲುಗಳನ್ನು ಮುಚ್ಚಿ ,ಆ ರಾತ್ರಿ ಹಾಗೆಯೇ ಬಿಡುತ್ತಾರೆ. ಬೆಳಕು ಮೂಡಿದ ನಂತರ ಮತ್ತೆ ಬಾಗಿಲನ್ನು ತಗೆದಾಗ, ಉಡೈಯವರು ಹಾಗು ಇತರ ಶ್ರೀವೈಷ್ಣವರ ಸಂತೋಷಕ್ಕೆ ಎಮ್ಪೆರುಮಾನ್ ಶಂಖ ಚಕ್ರಗಳಿಂದ ಅಲಂಕ್ರಿತನಾಗಿದ್ದನು . ನಂತರ ಅವರು ತಿರುಪತಿಗೆ ಇಳಿದು ಅಲ್ಲಿಂದ ಹೊರಡುತ್ತಾರೆ

ಅವರು ಕಾಂಚೀಪುರಮ್, ತಿರುವಳ್ಳಿಕ್ಕೇಣಿ, ತಿರುನೀರ್ಮಲೈ ಹಾಗು ಇತರು ದಿವ್ಯ ದೇಶಗಳನ್ನು ದರ್ಶಿಸಿದರು. ಅವರು ನಂತರ ಮದುರಮಂಗಳಕ್ಕೆ ಹೊಗುತ್ತಾರೆ ಹಾಗು ತೊಂಡೈ ಮಂಗಳದಲ್ಲಿ ಹಲವಾರು ಮಾಯಾವಾದಿಗಳನ್ನು ಸೋಲಿಸುತ್ತಾರೆ. ನಂತರ ತಿರುವಹಿಂದ್ರಪುರಮ್ ಹಾಗು ಕಾಟ್ಟು ಮನ್ನಾರ್ ಕೋಯಿಲಿಗೆ ಹೊಗುತ್ತಾರೆ.

ಈ ರೇತಿಯಲ್ಲಿ ಹಲವಾರು ದಿವ್ಯ ದೇಶಗಳನ್ನು ದರ್ಶಿಸಿ, ಯಾತ್ರೆಯನ್ನು ಮುಗಿಸಿ ಶ್ರೀರಂಗಕ್ಕೆ ಹಿಂತಿರುಗಿದರು. ಅವರು ಅಮಲನಾದಿಪಿರಾನನ್ನು ಪಠಿಸಿ ಪೆರಿಯ ಪೆರುಮಾಳನ್ನು ಆರಾಧಿಸುತ್ತಾರೆ .
ಪೆರಿಯ ಪೆರುಮಾಳ್ ಅವರ ಯೋಗ ಕ್ಷೇಮವನ್ನು ಕೇಳುತ್ತಾರೆ, ಆಗ ಅವರು”ನಿಮ್ಮಬಗ್ಗೆ ಸತತವಾಗಿ ಧ್ಯಾನಿಸುತ್ತಿರುವವರಿಗೆ ಯ ಏನೂ ಚಿಂತೆಗಳಿರುವುದಿಲ್ಲ” ಎಂದು ಹೇಳುತ್ತಾರೆ. ಅವರು ಶ್ರೀರಂಗದಲ್ಲೆ ನಿತ್ಯ ಕಾರ್ಯಗಳನ್ನು ನಿರ್ವಹಿಸುತ್ತಾ ಶ್ರೀರಂಗದಲ್ಲಿಯೆ ನೆಲಸಿರುತ್ತಾರೆ.

ಭಟ್ಟರ ಅವತಾರ

ಒಮ್ಮೆ ಶ್ರೀರಂಗದಲ್ಲಿ ಮಳೆಯ ಕಾರಣದಿಂದ ಕೂರತ್ತಾಳ್ವಾನ್ ಭಿಕ್ಷೆಯನ್ನು ಯಾಚಿಸಲು ಹೊರಹೋಗಲಾಗಲಿಲ್ಲ. ಅವರು ತಮ್ಮ ಸಂಜೆಯ‌ ಅನುಷ್ಟಾನಗಳನ್ನು ಮುಗಿಸಿದರು ಆದರೆ ಏನು ಪ್ರಸಾದವನ್ನು ಸೇವಿಸುವುದಿಲ್ಲ. ನಮ್ಪೆರುಮಾಳಿಗೆ ಭೋಗವನ್ನು(ಪ್ರಸಾದವನ್ನು) ನಿವೇದಿಸುವ ಸಮಯದಲ್ಲಿ ಘಂಟಾನಾದವನ್ನು ಕೇಳಿದ ಕೂರತ್ತಾಳ್ವಾನಿನ ಧರ್ಮಪತ್ನಿ ಆಣ್ಡಾಳ್ ಅವರ ಪತಿ ಏನು ತಿನ್ನದೆ ಇದ್ದ ಸ್ಥಿತಿಯನ್ನು ಕಂಡು ದುಃಖದಿಂದ ನಮ್ಪೆರುಮಾಳಿಗೆ, “ನಿಮ್ಮ ಭಕ್ತನು ಹಸಿವಿನಿಂದಿರುವಾಗ ನೀವು ಆಹಾರವನ್ನು ರಸಿಸುತಿದ್ದೀರಿ”. ಆಕೆಯ ಮನಸನ್ನರಿತ ನಮ್ಪೆರುಮಾಳ್ ಕೂಡಲೆ ಪ್ರಸಾದವನ್ನು ಕೂರತ್ತಳ್ವಾನಿನ ತಿರುಮಾಳಿಗೈಗೆ ಕೈಂಕರ್ಯಪರ ಮೂಲಕ ಕಳುಹಿಸಿದನು. ಕೈಂಕರ್ಯಪರರ ಆಗಮನವನ್ನು ಕಂಡು ಅತ್ಯಾಶ್ಚರ್ಯಗೊಂಡ ಆಳ್ವಾನ್ ಅವರ ಪತ್ನಿಯ ಕಡೆ ನೋಡಿದರು, ಅವರ ಪತ್ನಿ ನಡೆದದ್ದನ್ನು ಹೇಳಿದರು.ಕೂರತ್ತಾಳ್ವಾನಿಗೆ ತಮ್ಮ ಸ್ಥಿತಿಯ ಕಾರಣ ಭಗವಂತನನ್ನು ನಿರ್ಬಂಧಿಸುವುದು ಸರಿ ಬೀಳಲಿಲ್ಲ ಆದರು ಎರಡು ಕೈತುತ್ತುಗಳನ್ನು ಸ್ವೀಕರಿಸಿ, ಅವರು ಸ್ವಲ್ಪ ಸೇವಿಸಿ ಉಳಿದದ್ದನ್ನು ಅವರ ಪತ್ನಿಗೆ ನೀಡಿದರು. ಆ ಎರಡು ಕೈತುತ್ತುಗಳ ಪ್ರಸಾದದಿಂದ ನಂತರ ಆಂಡಾಳಿಗೆ ಎರಡು ಸುಂದರ ಮಕ್ಕಳು ಜನಿಸುವರು. 11 ದಿನಗಳ ಅಸೌಚದ ನಂತರ 12ನೆ ದಿನದಂದು ಎಮ್ಪೆರುಮಾನಿನ ಎಮ್ಬಾರ್ ಹಾಗು ಇತರ ಶ್ರೀವೈಷ್ಣವರೊಂದಿಗೆ ಮಕ್ಕಳನ್ನು ಆಶಿರ್ವದಿಸಲು ಆಳ್ವಾನಿನ್ ತಿರುಮಾಳಿಗೈಗೆ ಬಂದರು. ಎಮ್ಪೆರುಮಾನಾರ್, ಮಕ್ಕಳನ್ನು ಅವರ ಬಳಿ ತರಲು ಎಮ್ಬಾರನ್ನು ಕಳುಹಿಸಿದರು ಎಮ್ಬಾರ್ ಭಟ್ಟರನ್ನು ತಮ್ಮ ಕೈಗಳಿಂದ ತಂದರು. ಎಮ್ಪೆರುಮಾನಾರ್ ಮಗುವನ್ನು ಪ್ರೀತಿಯಿಂದ ಎತ್ತಿ ಆಶಿರ್ವದಿಸಿದರು. ಅವರು,” ನಾನು ಈ ಮಗುವಿನಲ್ಲಿ ಒಂದು ದಿವ್ಯ ತೇಜಸ್ಸನ್ನು ಕಾಣುತಿದ್ದೇನೆ ಹಾಗು ಒಂದು ದಿವ್ಯ ಪರಿಮಳವು ಕಂಡುಬರುತ್ತಿದೆ. ನೀವು ಏನು ಮಾಡಿದಿರಿ?” ಎಮ್ಬಾರ್,”ನಾನು ದ್ವಯ ಮಂತ್ರವನ್ನು ಮಗುವಿನ ರಕ್ಷಣಕ್ಕಾಗಿ ಪಠಿಸಿದೆ” ಎಂದು ಹೇಳುತ್ತಾರೆ. ಎಮ್ಪೆರುಮಾನಾರ್ ಎಂಬಾರಿಗೆ,”ನನಗಿಂತ ಮುಂದಿದ್ದೀರೇ. ಈ ಮಗುವಿಗೆ ನೀವೇ ಆಚಾರ್ಯರಾಗಿರಿ.” ಎಂದು ಹೇಳಿದರು, ಹಾಗು ಪರಾಶರ ಮಹರ್ಶಿಗಳ ನೆನಪಿನಲ್ಲಿ , ಪರಾಶರ ಭಟ್ಟರ್ ಎಂಬ ಹೆಸರನ್ನು ನೀಡಿ , ಅವರು ಆಳವಂದಾರಿಗೆ ಕೊಟ್ಟ ಎರಡನೆ ಮಾತನ್ನು ಪೂರ್ಣಗೊಳಿಸಿದರು. ಅವರು ಎಮ್ಬಾರಿನ ಮುಖಂತರ ಪರಾಶರ ಭಟ್ಟರಿಗೆ ಪಂಚಸಂಸ್ಕಾರವನ್ನು ಪ್ರಸಾಧಿಸುತ್ತಾರೆ, ಹಾಗು ಕೂರತ್ತಳ್ವಾನಿಗೆ ಪರಾಶರ ಭಟ್ಟರನ್ನು ಪೆರಿಯ ಪೆರುಮಾಳ್ (ಶ್ರೀ ರಂಗನಾಥ) ಹಾಗು ಪೆರಿಯ ಪಿರಾಟ್ಟಿಯಾರಿಗೆ (ಶ್ರೀ ರಂಗನಾಯಕಿಗೆ) ದತ್ತು ನೀಡಲು ಆದೇಶಿಸುತ್ತಾರೆ. ಆಳ್ವಾನ್ ಅಂಗಿಕರಿಸುತ್ತಾರೆ. ಅವರ ಬಾಲ್ಯದಲ್ಲಿ ಪೆರಿಯ ಪಿರಾಟ್ಟಿಯಾರೇ ಅವರನ್ನು ನೋಡಿಕೊಳ್ಳುತ್ತಾರೆ ಹಾಗು ಪೆರುಮಾಳಿಗಾಗಿ ನಿವೇದಿಸಲು ಪೆರಿಯ ಪೆರುಮಾಳಿನ ಮುಂದಿಟ್ಟ ಭೋಗದ ಪಾತ್ರೆಯಿಂದಲೆ ಅವರ ಕೈಯಿಂದ ಪೆರುಮಾಳಿಗೆ ನಿವೆದಿಸುವ. ಮುನ್ನವೇ ತಿನ್ನುವರು, ಹಾಗು ಪೆರುಮಾಳ್ ನಂತರ ಆ ಭೋಗವನ್ನು ಸಂತೋಷದಿಂದ ಭುಜಿಸುವರು.ಅವರು ಬಾಲ್ಯದಲ್ಲೆ ಅವರ ವಯಸ್ಸನ್ನು ಮೀರುವ ಬುದ್ಧಿ ಚಾತುರ್ಯವನ್ನು ಹೊಂದಿದ್ದರು ಹಾಗು ಎಮ್ಪೆರುಮಾನಾರ್ ಹಾಗು ಎಮ್ಬಾರಿನ ನಂತರ ಸಂಪ್ರದಾಯದ ನಾಯಕರಾಗಿ ಶೋಭಿಸಿದರು.

ಎಂಬಾರಿನ ಪೂರ್ವಾಶ್ರಮದ ಅಗ್ರಜರಾದ(ತಮ್ಮ) ಶಿರಿಯ ಗೋವಿಂದ ಪೆರುಮಾಳಿಗೆ ಜನಿಸಿದ ಪುತ್ರನಿಗೆ , ನಮ್ಮಾಳ್ವಾರಿನ ನೆನಪಿನಲ್ಲಿ “ಶ್ರೀ ಪರಾಂಕುಶ ನಂಬಿ” ಎಂಬ ಹೆಸರನ್ನು ನೀಡಿ ಆಳವಂದಾರಿಗೆ ಕೊಟ್ಟ ಮೂರನೆಯ ಮತ್ತನು ಪೂರ್ಣಗೊಳಿಸಿದರು. 

ಮುಡಲಿಯಾಣ್ಡಾನಿಗೂ ಎಮ್ಪೆರುಮಾನಾರಿನ ವಿಷಯದಲ್ಲಿ ತುಂಬಾ ಪ್ರೀತಿ ಹಾಗು ಅಭಿಮಾನವಿತ್ತು, ಹಾಗು ಎಮ್ಪೆರುಮಾನಾರಿಗೂ ಮುದಲಿಯಾಂಡಾ ನಿನ ವಿಶಯದಲ್ಲಿ ಅಭಿಮಾನವಿತ್ತು. ಅವರನ್ನು ಪೆರಿಯ ನಂಬಿಗಳ ಮಗಳಾದ ಅತ್ತುಳಾಯಿನ ಸೇವಕರಾಗಿ ಕಳುಹಿಸಿದರೂ ಅವರು ಏನು ಹೆಂಜೇರದೆ ಎಮ್ಪೆರುಮಾನಾರಿನ ಅಜ್ಞೆಯನ್ನು ಪಾಲಿಸುತ್ತಾರೆ.

ಆಳವಂದಾರಿನ ಉತ್ತಮ ಶಿಷ್ಯರಾದ ಮಾರನೇರಿ ನಂಬಿಗಳ ಅಂತಿಮ ಕ್ರಿಯೆಯನ್ನು ಪೆರಿಯ ನಂಬಿಗಳು ಮಾಡಿದಾಗ ನಗರಸ್ತ ಶ್ರೀವೈಷ್ಣವರು , ಪೆರಿಯ ನಂಬಿಗಳು ಬ್ರಾಹ್ಮಣರಾಗಿ ಕೀಳು ಜಾತಿಯವರಾದ (ಚತುರ್ತ ವರ್ಣದವರಾದ) ಮಾರನೇರಿ ನಂಬಿಗಳಿಗೆ ಮಾಡಿದ ಈ ಕಾರ್ಯವನ್ನು ಒಪ್ಪಲಿಲ್ಲ. ಅವರು ಎಮ್ಪೆರುಮಾನಾರಿಗೆ ದೂರನ್ನು ನೀಡಿದಾಗ ಅವರು ಪೆರಿಯ ನಂಬಿಗಳನ್ನು ಕರೆಸಿ ಅವರ ಕಾರ್ಯಕ್ಕೆ (ಕಾರಣ) ವಿವರಣವನ್ನು ಕೇಳಿದರು . ಅವರು ಮಾರನೇರಿ ನಂಬಿಗಳ ವೈಭವವನ್ನು ವಿವರಿಸಿ ,ಅವರ ಕೃತ್ಯವನ್ನು ಸಮರ್ಥಿಸಿದರು. ಎಮ್ಪೆರುಮಾನಾರ್ ಸಂತೋಷಗೊಂಡು ತಾವು ಪೆರಿಯ ನಂಬಿಗಳ ಅಭಿಪ್ರಾಯವನ್ನು ಅಂಗೀಕರಿಸಿದ್ದರೂ, ಎಲ್ಲರನ್ನು ಒಪ್ಪಿಸಲು ವಿವರಣೆಯನ್ನು ಕೇಳಿದರೆಂದು ಹೇಳಿದರು.

ತಿರುನಾರಾಯಣಪುರ ಯಾತ್ರಾ

ಎಲ್ಲರು ಎಮ್ಪೆರುಮಾನಾರಿನ ಮಾರ್ಗದರ್ಶನದಲ್ಲಿ ಜೀವನ ಸಾಗಿಸುತ್ತಿರುವ ವೇಳೆಯಲ್ಲಿ, ಶೈವ ಮತಕ್ಕೆ ಅನ್ವಯಿಸಿದ ರಾಜನು, ಶಿವನ ಪರತ್ವವನ್ನು ನಿರೂಪಿಸಲು ಇಚ್ಛಿಸಿದನು. ಅವನು ವಿದ್ವಾಂಸರನ್ನು ಕರೆದು ಬಲವಂತವಾಗಿ ಶಿವನ ಪರತ್ವವನ್ನು ಆಂಗೀಕರಿಸಲು ಹೇಳುತ್ತಿದ ಆಳ್ವಾನಿನ ಶಿಷ್ಯನಾದ ನಾಲೂರಾನ್ ರಾಜನಿಗೆ ಹೇಳುತ್ತಾನೆ “ಅಲ್ಪಶ್ರುತಾರಾದ ಇವರೆಲ್ಲರು ಒಪ್ಪುವುದರಲ್ಲೇನು ಉಪಯೋಗವಿದೇ ? ಶ್ರೀ ರಾಮಾನುಜರೋ ಆಳ್ವಾನೋ ಅಂಗೀಕರಿಸಿದರೆ ಮಾತ್ರ, ಅದು ಸತ್ಯವಾಗುವುದು”. ಇದನ್ನು ಕೇಳಿದ ರಾಜನು ಶ್ರೀ ರಾಮಾನುಜರನ್ನು ತರಿಸಲು ಸೈನಿಕರನ್ನು ಅವರ ಮಠಕ್ಕೆ ಕಳುಹಿಸಿದನು. ಈ ಸಮಯದಲ್ಲಿ ಶ್ರೀ ರಾಮಾನುಜರು ಸ್ನಾನಕ್ಕೆ ಹೊರಟಿದ್ದರು, ಮಠದಲ್ಲಿದ ಆಳ್ವಾನ್ ರಾಜನ ಉದ್ದೇಶವನ್ನರಿತು, ಶ್ರೀ ರಾಮಾನುಜರಂತೆ ಕಾಷಾಯ ತ್ರಿದಂಡಗಳನ್ನು ಧರಿಸಿ ಸೈನಿಕರೊಂದಿಗೆ ರಾಜನ. ಆಸ್ಥಾನಕ್ಕೆ ಹೊರಟರು. ಅವರು ಮಠಕ್ಕೆ ಆಗಮಿಸಿದಾಗ, ವಿಷಯವನ್ನು ತಿಳಿದು, ಸನ್ನಿಹಿತ ಅಪಾಯವನ್ನರಿತು.ಅವರು ಆಳ್ವಾನಿನ ಬೆಳಿ ವಸ್ತ್ರಗಳನ್ನು ಧರಿಸಿ, ಶಿಷ್ಯರೊಂದಿಗೆ ಶ್ರೀರಂಗದಿಂದ ಹೊರಟರು. ಕೆಲವು ಸೈನಿಕರು ಅವರನ್ನು ಹಿಂಬಾಲಿಸುವುದನ್ನು ಕಂಡು ತಮ್ಮ ಶಿಷ್ಯರಿಗೆ ಮಂತ್ರಿಸಿದ ಮರಳನ್ನು ನೀಡಿದರು , ಅದನ್ನು ಪಥದಲ್ಲಿ ಚಿಮುಕಿಸಿದರು .ಸೈನಿಕರು ಆ ಮರಳನಿನ ಮೇಲೆ ಕಾಲಿಟ್ಟಾಗ ತೀವ್ರ  ನೋವಿನ ಕಾರಣ ಹಿಂಬಾಲಿಸುವ ಕಾರ್ಯವನ್ನು ಬಿಟ್ಟರು

ಎಮ್ಪೆರುಮಾನಾರ್, ಸುರಕ್ಷಿತವೆಂದು ಭಾವಿಸಲಾಗಿದ್ದ ಮೇಲುಕೋಟೆಯಕಡೆ (ತಿರುನಾರಾಯಣಪುರದ ಕಡೆ) ಪ್ರಯಾಣಿಸಲಾರಂಭಿಸಿದರು. ದಾರಿಯಲ್ಲಿ (ಎಮ್ಪೆರುಮಾನಾರಿನ ಶಿಷ್ಯರಾದ ) ನಲ್ಲಾನ್ ಚಕ್ರವರ್ತಿಯಿಂದ ಶಿಕ್ಷಿತ ಬೋಧಿಸಲ್ಪತ್ತ) ಶಿಷ್ಯರಾದ ಕೆಲವು ಬೇಡರನ್ನು ಬೆಟಿ ಮಾಡುತ್ತಾರೆ. ಆರು ದಿನಗಳು ಕಾಲಿನಲ್ಲೆ ನಡೆದು , ತುಂಬಾ ಹಸಿವಿನಿಂದಿದ್ದ ಎಲ್ಲರನ್ನು ಸ್ವಾಗತಿಸಿ , ಎಮ್ಪೆರುಮಾನಾರಿನ ಕ್ಷೇಮದ ಬಗ್ಗೆ ಕೇಳಿದರು, ಆ ಶ್ರೀವೈಷ್ಣವರು ಎಮ್ಪೆರುಮಾನಾರ್ ಅಲ್ಲೇ ಇದ್ದೆರೆಂದು ತೊರಿದಾಗ ತುಂಬಾ ಸಂತೋಷಗೊಂಡರು. ಅವರು ನೀಡಿದ ಜೇನುತುಪ್ಪಾ – ಸಿರಿದಾನ್ಯಗಳನ್ನು ಎಮ್ಪೆರುಮಾನಾರನ್ನು ಬಿಟ್ಟು ಇನ್ನೆಲ್ಲಾರು ಸ್ವೀಕರಿಸಿದರು. ಒಂದು ಬ್ರಾಹ್ಮಣ ಕುಟುಂಬ ನಿವಾಸಿಸುತ್ತಿದ ಊರಿಗೆ ಅವರು ದಾರಿ ತೋರಿ, ಆಹಾರಕ್ಕೆ ಬೇಕಾದ ಮೂಲ ಪದಾರ್ಥಗಳನ್ನು ನೀಡಿದರು.

ಆ ಬ್ರಾಹ್ಮಣನ (ಕೊನ್ಗಿಲಾಚ್ಚಾನಿನ) ಪತ್ನಿ ಎಲ್ಲರಿಗು ಪ್ರಣಾಮಗಳನ್ನು ಸಲ್ಲಿಸಿ, ಪಕ್ವ ಆಹಾರವನ್ನು ಸೇವಿಸಲು ಕೋರಿದಳು. ಆ ಶ್ರೀವೈಷ್ಣವರು ಎಲ್ಲರಿಂದಲೂ ಅವರು ಆಹಾರವನ್ನು ಸ್ವೀಕರಿಸಲು ಒಪ್ಪುವುದಿಲ್ಲ ಎಂದು ಹೇಳಿ ನಿರಾಕರಿಸಿದರು. ಆವಳು ತಕ್ಷಣ, ತಾನೂ ಎಮ್ಪೆರುಮಾನಾರಿನ ಶಿಷ್ಯೆ ಎಂದು ಹೇಳುತ್ತಾಳೆ; ಅವಳು ಸ್ವಲ್ಪ ಕಾಲ ಹಿಂದೆ ಶ್ರೀರಂಗದಲ್ಲೆ ಇದ್ದ ವೇಳೈಯಲ್ಲಿ ಪಂಚ ಸಂಸ್ಕಾರವನ್ನು ಪಡೆದಿದ್ದಳು. ಆ ದಿನಗಳಲ್ಲಿ ರಾಜರು ಹಾಗು ಮಂತ್ರಿಗಳು ಎಮ್ಪೆರುಮಾನಾರಿನ ಆಶಿರ್ವಾದವನ್ನು ಪಡೆಯಲು ಬರುತ್ತಿದ್ದರು ಆದರೆ ಅವರು ಪ್ರತಿದಿನವು ಭಿಕ್ಷೆಯನ್ನು ಯಾಚಿಸುತ್ತಿದ್ದರು. “ಇದೆಂತಹ ವೈರುಧ್ಯವೆಂದು ಕೇಳಿದಾಗ ಅವರು,”ನಾನು ಅವರಿಗೆ ಭಗವತ್ ಜ್ಞಾನವನ್ನು ಉಪದೇಶಿಸುತ್ತೇನೆ”ಎಂದರು . “ಆ ಉಪದೇಶಗಳನ್ನು ನನಗೂ ನೀಡಿ ಎಂದು ಕೇಳಿದಾಗ ಅವರು ನನಗೆ ಪಂಚಸಂಸ್ಕಾರವನ್ನು ನೀಡಿದರು. ನಾನು ನಮ್ನ ಊರಿಗೆ ಹೊರುಡುವಾಗ ಅವರ ಆಶಿರ್ವಾದವನ್ನು ಪ್ರಾರ್ಥಿಸಿದೆ, ಅವರು ತಮ್ಮ ದಿವ್ಯ ಪಾದುಕೆಗಳನ್ನು ನೀಡಿದರು .ನಂತರ ನಾವು ಇಲ್ಲಿಗೆ ಬಂದೆವು. ಎಮ್ಪೆರುಮಾನಾರ್ (ತಮ್ಮನ್ನು ಹೊರಪಡಿಸದೆ) ಅವಳು ತಯಾರಿಸಿದ ಅಹಾರವನ್ನು ಸೇವಿಸಲು ಹೇಳಿದರು, ಆದರೆ ಒಬ್ಬರನ್ನು ಅವಳು ಅಡಿಗೆ ಮಾಡುವ ವಿಧಾನವನ್ನು ಗಮನಿಸಲು ಹೇಳಿದರು. ಅಡಿಗೆಯನಂತರ ದೇವರ ಕೋಣೆಗೆ ಹೋಗಿ ಕೋಯಿಲ್ ಆಳ್ವಾರನ್ನು ಧ್ಯಾನಿಸಿದರು. ಆ ಶ್ರೀವೈಷ್ಣವನು ,ಇತರ ವಿಗ್ರಹಗಳಿಗಿಂತಲೂ ನೋಡಲು ಭಿನ್ನವಾಗಿದ್ದ ಒಂದು (ವಿಗ್ರಹದಂತಿದ್ದ) ವಸ್ತುವನ್ನು ಕಂಡನು ಹಾಗು ಇದನ್ನು ಎಮ್ಪೆರುಮಾನಾರಿಗೆ ತಿಳಿಸಿದನು. ಎಮ್ಪೆರುಮಾನಾರ್ ಅವಳನ್ನು ,”ನೀವು ಒಳಗೇನು ಮಾಡಿದಿರಿ?” ಎಂದು ಕೇಳಿದಾಗ ಅವಳು ” ಎಮ್ಪೆರುಮಾನಾರ್ ನನಗೆ ನೀಡಿದ ಅವರ ಪಾದುಕೆಗಳಿಗೆ ಪ್ರಾರ್ಥನೆ ಸಲ್ಲಿಸಿ ,ಆಹಾರವನ್ನು ನಿವೇದಿಸಿದೆನು .”ಎಂದು ಹೇಳಿದಳು. ಎಮ್ಪೆರುಮಾನಾರ್ ಪಾದುಕೆಗಳನ್ನು ಹೊರತರಲು ಹೇಳಿದಾಗ ಅವಳು ಹೊರ ತಂದಳು. ಅದು ಅವರದ್ದೇ ಎಂದರಿತು, “ನಿಮಗೆ ಇಲ್ಲಿ ಎಮ್ಪೆರುಮಾನಾರ್ ಇರುವರಾ ಎಂದು ಗೊತ್ತೇ?” ಎಂದು ಅವರು ಕೇಳಿದಾಗ ಅವಳು ದೀಪವನ್ನು ಹಿಡಿದು ಎಲ್ಲರ ಪಾದಗಳನ್ನು ಗಮನಿಸುತ್ತಾಳೆ. ಎಮ್ಪೆರುಮಾನಾರಿನ ದಿವ್ಯ ಪಾದಗಳನ್ನು ಕಂಡಾ ಅವಳು ಆಶ್ಚರ್ಯಚಕಿತಳಾಗಿ , “ಇವು ನೋಡಲು ಎಮ್ಪೆರುಮಾನಾರಿನ ದಿವ್ಯ ಪಾದಗಳ ಹಾಗೆ ತೋರುತ್ತಿದೆ, ಆದರೆ ನೀವು ಬಿಳಿವಸ್ತ್ರಗಳನ್ನು ಧರಿಸಿದ್ದೀರಿ ಆದ್ದರಿಂದ ನನಗೆ ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದಳು. ಎಮ್ಪೆರುಮಾನಾರ್ °°° , ಅವರು ಉಪದೇಶಿಸಿದ್ದನ್ನು ಹೇಳಲು ಕೇಳಿದರು. ಆವಳು ಹೇಳಿದಾಗ ಅಲ್ಲರಿಗೆ ಪ್ರಸಾದವನ್ನು ಸೇವಿಸಲು ಅನುಮತಿಸಿದರು. ಆದರೆ ಭಗವಾನಿಗೆ ಅರ್ಪಿಸದ ಕಾರಣ ಅವರು ಸ್ವೀಕರಿಸಲಿಲ್ಲ. ನಂತರ ಅವಳು ಫಲ ,ಹಾಲು ಹಾಗು ಕಲ್ಸಕ್ಕರೆಯನ್ನು ಅವರಿಗೆ ನೀಡಿದಾಗ, ಮೋದಲು ಅವರು ಪೆರುಮಾಳಿಗೆ ನಿವೇದಿಸಿ ನಂತರ ಪ್ರಸಾದವನ್ನು ಸೇವಿಸಿದರು. ಅವಳು ಎಲ್ಲ ಭಾಗವತರ ಉಚ್ಛಿಷ್ಟವನ್ನು ಸಂಗ್ರಹಿಸಿ ತನ್ನ ಪತಿಗೆ ನೀಡುತ್ತಾಳೆ ಆದರೆ ಅವಳು ಸ್ವೀಕರಿಸುವುದಿಲ್ಲ. ಯಾಕೆಂದು ಕೇಳಿದಾಗ, “ನೀವು ಎಮ್ಪೆರುಮಾನಾರನ್ನು ಆಚರ್ಯರನ್ನಾಗಿ ಸ್ವೀಕರಿಸಲಿಲ್ಲ. ಅವರು ಇಷ್ಟು ದೂರ ನಮ್ನ ಮನೆಗೆ ಬಂದಿದ್ದಾರೆ. ನೀವು ಅವರನ್ನು ಆಚರ್ಯರನ್ನಾಗಿ ಆಶ್ರಯಿಸುವಿರೆಂದು ಪ್ರಮಾಣಿಸುವುದಾದರೆ ಮಾತ್ರ ನಾನು ಪ್ರಸಾದವನ್ನು ಭುಜಿಸುವೆ.” ಎಂದು ಹೇಳಿದಳು. ಅವರು ಒಪ್ಪಿದರು ಹಾಗು ಆವಳು ಪ್ರಸಾದವನ್ನು ಭುಜಿಸಿದಳು. ಮರುದಿನ ಅವರು ಎಮ್ಪೆರುಮಾನಾರನ್ನು ಆಶ್ರಯಿಸುತ್ತಾರೆ ಹಾಗು ಎಮ್ಪೆರುಮಾನಾರ್ ಅವರಿಗೆ ಉಪದೇಶಿಸಿ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ. ಎಮ್ಪೆರುಮಾನಾರ್ ಕಾಶಾಯ-ತ್ರಿದಂಡಗಳನ್ನು ಧರಿಸಿ, ಸ್ವಲ್ಪ ದಿನಗಳ ಕಾಲ ಅಲ್ಲಿ ನಿವಸಿಸಿ, ಪಶ್ಚಿಮದ ಕಡೆ ಪ್ರಯಾಣಿಸುತ್ತಾರೆ.

ಉಡೈಯವರು ಬೌದ್ಧರು ಹಾಗು ಜೈನರಿಂದ ತುಂಬಿದ ಸಾಳಗ್ರಾಮಕ್ಕೆ ಹೊಗುತ್ತಾರೆ, ಬೌದ್ಧ -ಜೈನರು ಅವರ ಆಗಮವನ್ನು ಉದಾಸೀನತೆಯಿಂದ ಗಮನಿಸಿದರು. ಅವರು ಮದಲಿಯಾಣ್ಡಾನನ್ನು ಅವರ ದಿವ್ಯ ಪಾದಗಳನ್ನು ಉಪಯೋಗಿಸಲ್ಪಡುತಿದ್ದ ಕೊಳದಲ್ಲಿ ತೊಳೆಯಲು ಆದೇಶಿಸಿದರು ಹಾಗು ಆ ಪವಿತ್ರ ಕೊಳದಿಂದ ನೀರನ್ನು ಸೇವಿಸಿದವರೆಲ್ಲರೂ ಎಮ್ಪೆರುಮಾನಾರಿನ ಕಡೆ ಆಕರ್ಷಿತರಾದರು. ವಡುಗ ನಂಬಿಗಳು ಎಮ್ಪೆರುಮಾನಾರನ್ನೇ ಸರ್ವಸ್ವವೆಂದು ಸ್ವೀಕರಿಸಿ ಆಚಾರ್ಯ ಭಕ್ತಿಗೆ ಉತ್ತಮ ಉದಾಹರಣೆಯಾದರು. ಅವರು ತೊಂಡನೂರಿಗೆ ಹೊಗುತ್ತಾರೆ ಹಾಗು (ಆ ಪ್ರಾಂತದ ರಾಜನಾದ) ವಿಠಲ ದೇವ ರಾಯನ ಬ್ರಹ್ಮರಾಕ್ಷಸದಿಂದ ತಪಿಸಲ್ಪಟ್ಟ ಮಗಳನ್ನು ರಕ್ಷಿಸುತ್ತಾರೆ .ರಾಜನು ಸಪರಿವಾರವಾಗಿ ಎಮ್ಪೆರುಮಾನಾರಿನ ಶಿಷ್ಯರಾಗುತ್ತಾರೆ ಹಾಗು ರಾಜನಿಗೆ ‘ವಿಷ್ಣುವರ್ಧನರಾಯ’ವೆಂಬ ಹೆಸರನ್ನು ನೀಡಿದರು. ಇದನ್ನು ಕೇಳಿದ 12000 ಜೈನ ವಿದ್ವಾಂಸರು ಎಮ್ಪೆರುಮಾನಾರೊಂದಿಗೆ ವಾದಕ್ಕೆ ಬರುತ್ತಾರೆ. ಅವರು ವಾದಮಾಡುತ್ತಾರೆ- ತೆರೆಯ ಹಿಂದೆ ಅವರ ನಿಜರೂಪವಾದ ಸಾವಿರ ಶಿರಸ್ಸುಗಳನ್ನು ಹೊಂದಿರುವ ಅದಿಶೇಷನ ರೂಪವನ್ನು ತಾಳಿದರು ಹಾಗು ಏಕಕಾಲದಲ್ಲಿ ಎಲ್ಲಾ ಪ್ರಶ್ನಗಳನ್ನು ಉತ್ತರಿಸಿದರು. ಸೋತ ವಿದ್ವಾಂಸರಲ್ಲಿ ಹಲವಾರು ಅವರ ಶಿಷ್ಯರಾಗುತ್ತಾರೆ ಹಾಗು ಅವರಿಗೆ ತಮ್ಮ ವೈಭವವನ್ನು ತೋರುತ್ತಾರೆ.

ಈ ವಿಧದಲ್ಲಿ ಎಮ್ಪೆರುಮಾನಾರ್ ತೊಂಡನೂರಿನಲ್ಲಿ ವಸಿಸುತ್ತಿರುವ ಸಮಯದಲ್ಲಿ ಅವರ (ನಿತ್ಯವು ಧರಿಸುವ )ತಿರುಮಣ್ ಕ್ಕಾಪ್ಪು ಮುಗಿಯುತ್ತಾ ಬಂದಿದರಿಂದ ಅವರು ದುಃಖಿತರಾದರು. ಒಮ್ಮೆ ಅವರು ಶಯನಿಸುತ್ತಿರುವ ಕಾಲದಲ್ಲಿ , ತಿರುನಾರಾಯಣಪುರದ ಎಮ್ಪೆರುಮಾನ್ ಅವರ ಸ್ವಪ್ನದಲ್ಲಿ ,”ನಾವು ನಿಮಗಾಗಿ ತಿರುನಾರಯಣಪುರದಲ್ಲಿ ಕಾಯುತಿದ್ದೇವೆ, ನಿಮಗೆ ಬೇಕಾದ ತಿರುಮಾಣ್ ಕೂಡ ಇಲ್ಲೇ ಲಭ್ಯವಿದೆ” ಎಂದು ಹೇಳಿದರು. ರಾಜನ ಸಹಾಯದೋಂದಿಗೆ ಅವರು ಎಮ್ಪೆರುಮಾನನ್ನು ಆರಾಧಿಸಲು ತಿರುನಾರಾಯಣಪುರಕ್ಕೆ ಹೋದಾಗ, ಆಲ್ಲಿ ಯಾವುದೆ ದೇವಾಲಯವಿಲ್ಲದನ್ನು ಕಣ್ಡು ದುಃಖಿತರಾದರು.ಆಯಾಸದ ಕಾರಣ ಕೆಲವು ಕ್ಷಣಗಳ ವಿಶ್ರಾಂತಿ ತಗೆದುಕೊಂಡಾಗ, ಎಮ್ಪೆರುಮಾನ್ ಮತ್ತೆ ಅವರ ಕನಸಿನಲ್ಲಿ ಬಂದು, ಎಲ್ಲಿ ತಾನು ಮಣ್ಣಿನ್ನ ಕೆಳಗಿದ್ದನೆಂದು ಹೇಳಿದನು. ಎಮ್ಪೆರುಮಾನಾರ್ ಎಮ್ಪೆರುಮಾನನ್ನು ಭೂಮಿಯಿಂದ ಹೊರಗೆ ತಗೆದು, ನಮ್ಮಾಳ್ವಾರ್ ತಿರುನಾರಣನ್ ಎಮ್ಪೆರುಮಾನನ್ನು ತುಂಬಾ ಹೊಗಳುವ ತಿರುವಾಯ್ಮೊಳಿಯ , ಒರು ನಾಯಗಮಾಯ ದಶಕವನ್ನು ಎಮ್ಪೆರುಮಾನಿಗೆ ಸಮರ್ಪಿಸುತ್ತಾರೆ.ಅವರು ತಿರುಮಣ್ಣನ್ನು ಪಡಿಯುತ್ತಾರೆ ಹಾಗು ಶರೀರದ 12 ಸ್ಥಳಗಳಲ್ಲಿ ತಿರುಮಣ್ಣನ್ನು ಧರಿಸುತ್ತಾರೆ. ಅವರು ಊರನ್ನು ಸಿದ್ಧಗೋಳಿಸಿ ದೇವಾಲಯದ ಪುನರ್ನಿರ್ಮಾಣವನ್ನು ಮಾಡುತ್ತಾರೆ ಹಾಗು ದೇವಾಲಯದಲ್ಲಿ ಹಲವಾರು ಕೈಂಕರ್ಯಪರರನ್ನು ಏರ್ಪಡಿಸುತ್ತಾರೆ.

ಉತ್ಸವ-ಮೂರ್ತಿ ಇಲ್ಲದ ಕಾರಣ ಉತ್ಸವಗಳನ್ನು ಆಚರಿಸುವ ಸಾಧ್ಯತೆ ಇರಲಿಲ್ಲ.ಎಮ್ಪೆರುಮಾನಾರ್ ಇದರಬಗ್ಗೆಯೇ ಚಿಂತಿಸುತ್ತಿರುವ ವೇಳೆಯಲ್ಲಿ ಎಮ್ಪೆರುಮಾನ್ ,ಅವರ ಸ್ವಪ್ನದಲ್ಲಿ, “ರಾಮಪ್ರಿಯ(ಉತ್ಸವ-ಮೂರ್ತಿ) ಡೆಲ್ಹಿಯ ಬಾದ್ಶಹನ ಅರಮನೆಯಲ್ಲಿದೆ” ಎಂದು ಹೇಳಿದನು.ಎಮ್ಪೆರುಮಾನಾರ್ ತಕ್ಷಣ ಡೆಲ್ಹಿಗೆ ಹೊರಡುತ್ತಾರೆ, ಹಾಗು ರಾಜನನ್ನು ವಿಗ್ರಹವನ್ನು ಹಿಂತಿರುಗಿಸಲು ಪ್ರಾರ್ಥಿಸಿದರು. ರಾಜನು ತನ್ನ ಮಗಳ ಅಂತಃಪುರಕ್ಕೆ ಕರೆದುಕೊಂಡುಹೋಗಿ ಅಲ್ಲಿದ್ದ ವಿಗ್ರಹವನ್ನು ತೋರಿಸುತ್ತಾರೆ. ರಾಜಕುಮಾರಿ ಆ ವಿಗ್ರಹವನ್ನು ತುಂಬಾ ಪ್ರೀತಿಸಿದಳ ಹಾಗು ಪ್ರೇಮದಿಂದ ಆರೈಕೆ ಮಾಡುತಿದ್ದಳು. ಎಂಪೆರುಮಾನನ್ನು ಕಂಡು ಸುಪ್ರಸನ್ನರಾದ ಎಮ್ಪೆರುಮಾನಾರ್,”ಚೆಲ್ಲಪಿಳ್ಳೈ, ಇಲ್ಲಿ ಬಾ” ಎಂದು ಕರೆದರು.ಎಮ್ಪೆರುಮಾನ್ ತಕ್ಷಣ ಎಮ್ಪೆರುಮಾನಾರಿನ ಮಡಿಲಲ್ಲಿ ಕೂರುತ್ತಾನೆ. ಆಶ್ಚರ್ಯಗೊಂಡ ರಾಜನು ಹಲವಾರು ಅಭರಣಗಳನ್ನು ಸಮರ್ಪಿಸಿ ಎಮ್ಪೆರುಮಾನಾರೊಡನೆ ಎಮ್ಪೆರುಮಾನನ್ನು ಕಳುಹಿಸುತ್ತಾನೆ. ಎಮ್ಪೆರುಮಾನಿಂದ ವಿರಹದ ದುಃಖದಿಂದ ಹೊರಟಿದ್ದ ಎಮ್ಪೆರುಮಾನಾರಿನ ಘೋಷ್ಟಿಯನ್ನು ಹಿಮ್ಬಾಲಿಸುತ್ತಾಳೆ ರಾಜಕುಮಾರಿ. ತಿರುನರಾಯಣಪುರದ ಗುಡಿಯಲ್ಲಿ ಎಮ್ಪೆರುಮಾನ್ ,ತಾನು ಆಂಡಾಳನ್ನು ಸ್ವೀಕರಿಸಿದ ಹಾಗೆಯೇ ಇವಳನ್ನು ಸ್ವೀಕರಿಸುತ್ತಾನೆ.  ಎಮ್ಪೆರುಮಾನಾರ್ ಆವಳಿಗೆ ತುಲುಕ್ಕ ನಾಚ್ಚಿಯಾರ್ ಎಂಬ ಹೆಸರಿನಿಂದ ಎಮ್ಪೆರುಮಾನಿನ (ತಿರುವಡಿಗಳಲ್ಲಿ) ಪಾದಗಳಲ್ಲಿ ಪ್ರತಿಷ್ಟಿಸಿದರು. ಅವರು ಉತ್ಸವ-ವಿಗ್ರಹವನ್ನು ಮತ್ತೆ ಪ್ರತಿಷ್ಟಿಸಿ ಎಲ್ಲ ಉತ್ಸವಗಳನು ನಡೆಸಲಾಗುತ್ತದೆ.

ಶ್ರೀರಂಗಕ್ಕೆ ಹಿಂತಿರುಗುವುದು

ಈ ರೀತಿಯಲ್ಲಿ ತಿರುನಾರಯಣಪುರದಲ್ಲಿ ಹನ್ನೆರೆಡು ವರುಷಗಳ ಕಾಲ ವಾಸಿಸಿದರು ಹಾಗು ಹಲವಾರು ಕೈಂಕರ್ಯಗಳಲ್ಲಿ ಅನ್ವಯಿಸಿದರು ಹಾಗು ಸಂಪ್ರದಾಯವನ್ನು ವಿವರ್ದಿಸಲು ಶ್ರೀವೈಷ್ಣವರನ್ನು ಪೋಷಿಸಿದರು. ಮಾರುತಿಯಾಂಡಾನಿಂದ ಆ ಶೈವ ಚೋಳ ರಾಜನು ಸತ್ತು ಹೋದನೆಂದು ತಿಳಿದು ಸಂತೋಷಗೊಂಡು ಅವರು ಶ್ರೀರಂಗಕ್ಕೆ ಹಿಂತಿರುಗಲು ಸಿದ್ಧರಾರು. ಅವರು ಶ್ರೀರಂಗಕ್ಕೆ ಹಿಂತಿರುಗುವುದನ್ನು ಕೇಳಿದ ತಿರುನಾರಾಯಣಪುರದ ಅವರ ಶಿಷ್ಯರು ಶೋಕಸಾಗರದಲ್ಲಿ ಮುಳುಗುತ್ತಾರೆ. ಅವರನ್ನು ಸಂತಯಿಸಿ ಅವರ ವಿಗ್ರಹವನ್ನಲ್ಲಿ ಪ್ರತಿಷ್ಟಿಸಲು ಅಂಗೀಕರಿಸಿದರು. ಈ ವಿಗ್ರಹವು ” ತಮರ್ ಉಗಂದ ತಿರುಮೇನಿ” ಎಂದು ಜನಪ್ರಸಿದ್ಧವಾಯಿತು. ನಂತರ ತಿರುನಾರಯಣಪುರದಿಂದ ಶ್ರೀರಂಗಕ್ಕೆ ಆಗಮಿಸುತ್ತಾರೆ, ಹಾಗು ಪೆರಿಯ ಪಿರಾಟ್ಟಿಯಾರ್ (ಶ್ರೀರಂಗನಾಯಕಿ) ಹಾಗು ಪೆರಿಯ ಪೆರುಮಾಳಿಗೆ (ಶ್ರೀರಂಗನಾಥ) ಮಂಗಳಾಶಾಸನವನ್ನು ಮಾಡಿ ಶ್ರೀರಂಗದಿಂದಲೇ ಸಂಪ್ರದಾಯವನ್ನು ಪೋಷಿಸುತ್ತಾರೆ.

ಪೆರಿಯ ಪೆರುಮಾಳ್ ಪೆರಿಯ ಪಿರಾಟ್ಟಿಯಾರಿಗೆ ಮಂಗಳಾಶಾಸನವನ್ನುಮಾಡಿ ,ಆಲಯ ಪ್ರದಕ್ಷಿಣೆ ಯಿಂದ ಪುನರ್ವಿಕಸಿತರಾಗಿ ಎಮ್ಪೆರುಮಾನಾರ್ ಶ್ರೀವೈಷ್ಣವರೊಂದಿಗೆ ಕೂರತ್ತಳ್ವಾನಿನ ತಿರುಮಾಳಿಗೈಗೆ ಹೋಗುತ್ತಾರೆ
,ಆಳ್ವಾನ್ ಅಪಾರ ಭಕ್ತಿಯಿಂದ ಅವರ ಪಾದಗಳಿಗೆ ನಮಸ್ಕರಿಸಿ ಮೇಲೇರಲಿಲ್ಲ, ಎಮ್ಪೆರುಮಾನಾರ್ ಅವರನ್ನು ಮೇಲಕ್ಕೆತ್ತಿ ಅಪ್ಪಿಕೊಂಡು , ಕೂರತ್ತಾಳ್ವಾನ್ ಕಣ್ಣುಗಳನ್ನು ಕಳೆದುಕೊಂಡದ್ದನ್ನು ಕಂಡು ದುಃಖದಿಂದ ಮೂಕವಿಸ್ಮಿತರಾದರು . ತುಂಬಾ ದುಃಖದಿಂದ ಕಣ್ಣೀರೊಂದಿಗೆ ಗದ್ಗದಕಣ್ಠದಿಂದ ,”ನಮ್ಮ ದರ್ಶನಕ್ಕಾಗಿ(ಸಂಪ್ರದಾಯ) ನಿಮ್ನ ದರ್ಶನವನ್ನು ಕಳೆದುಕೊಂಡಿರಿ(ನೇತ್ರಗಳು). ಆಳ್ವಾನ್ ವಿನಯದಿಂದ, “ಇದಕ್ಕೆ ನಮ್ನ ಅಪಚಾರಗಳೇ ಕಾರಣವೆಂದು ಹೇಳಿದರು.” ಇದಕ್ಕೆ ಉಡೈಯವರು, “ನಿಮ್ಮಿಂದ ಒಂದು ಅಪಚಾರವಾಗಲು ಹೇಗೆ ಸಾಧ್ಯ, ನನ್ನ ಅಪಚಾರವೇ ಇದಕ್ಕೆ ಕಾರಣ. “ಎಂದು ಹೇಳಿದರು. ಕಾಲಕ್ರಮೇಣ ಎಲ್ಲರು ತಮ್ಮನ್ನು ಸ್ಥಿರಗೊಳಿಸಿಕೋಂಡು ಹಾಗು ಎಮ್ಪೆರುಮಾನಾರ್ ಅವರ ಮುಠಕ್ಕೆ ಹಿಂತಿರುಗಿದರು .

ಈ ಸಮಯದಲ್ಲಿ ಕೆಲವರು ಶ್ರೀವೈಷ್ಣವರು ಎಮ್ಪೆರುಮಾನಾರಿಗೆ ಕೆಲವು ಶೈವರು ತಿರುಚ್ಚಿತ್ರಕೂಟಮ್ (ಈಗ ಚಿದಂಬರಮೆಂದು ಕರೆಯಲ್ಪಡುತ್ತಿದೆ.) ದೇವಾಲಯವನ್ನು ನಾಶ ಮಾಡಿದರು, ಆದರೆ ಉತ್ಸವ ಮೂರ್ತಿಯನ ಸುರಕ್ಷಿತವಾಗಿ ತಿರುಪತಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಿದರು. ಅವರು ತಕ್ಷಣ ತಿರುಪತಿಗೆ ಹೊರಟರು ಹಾಗು ತಿರುಚ್ಚಿತ್ರಕೂಟದ ಭಗವಾನಿಗೆ ಸದೃಶವಾದ ಹೋಸ ಮೂಲ ಮೂರ್ತಿಯ ನಿರ್ಮಾಣಕ್ಕೆ ಆದೇಶಿಸಿದರು (ಇದನ್ನು ನಾವು ತಿರುಪತಿ ಮಲೆಗಳ ತಪ್ಪಲಿನ ಶ್ರೀ ಗೋವಿಂದರಾಜ ಪ್ಪೆರುಮಾಳ್ ಸನ್ನಿಧಿಯಾಗಿ ನೋಡುತ್ತೇವೆ). ಅವರು  ತಿರುಮಲೈಯಲ್ಲಿ ತಿರುವೇಂಟಮುಡಯಾನಿಗೆ ಮಂಗಳಾಶಾಸನವನ್ನು ಮಾಡಿ ಶ್ರೀರಂಗಕ್ಕೆ ಹೊರಡುವ ದಾರಿಯಲ್ಲಿ ಕಾಂಚೀಪುರದ ದೇವಪ್ಪೆರುಮಾಳಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ಸಂಪ್ರದಾಯದ ನಾಯಕರಾಗಿ ಆಲ್ಲೆ ವಾಸಿಸಿದರು.

ಸ್ವಲ್ಪ ಸಮಯದ ನಂತರ ಎಮ್ಪೆರುಮಾನಾರ್ ಎಲ್ಲ ಅಭಿಷ್ಟೆಗಳನ್ನು(ಆಸೆಗಳನ್ನು) ಪ್ರಸಾದಿಸುವ ದೇವಪ್ಪೆರುಮಾಳನ್ನು ಸ್ತುತಿಸಿ ತಮ್ಮ ದೃಷ್ಟಿಯನ್ನು ಪ್ರಾರ್ಥಿಸಲು ಆಳ್ವಾನನ್ನು ಆಹ್ವಾನಿಸಿದರು. ಆಳ್ವಾನ್ ಹಿಂಜರಿದರು ,ಆದರೆ ಎಮ್ಪೆರುಮಾನಾರಿನ ಒತ್ತಾಯದ ಮೇರೆಗೆ ವರದರಾಜ ಸ್ತವವನ್ನು ರಚಿಸಿ, ಅದರ ಕೊನೆಯ ಭಾಗದಲ್ಲಿ ತಮ್ಮ ಅಂತರದ ನೇತ್ರಗಳಿಂದ ಎಮ್ಪೆರುಮಾನನ್ನು ದರ್ಶಿಸಲು ಪ್ರಾರ್ಥಿಸಿದರು. ಆಳ್ವಾನ್ ಇದನ್ನು ಉಡೈಯವರಿಗೆ ವಿವರಿಸಿದಾಗ, ಇದರಿಂದ ತೃಪ್ತರಾಗದ ಉಡೈಯವರು, ಆಳ್ವಾನೊಂದಿಗೆ ಕಾಂಚೀಪುರಕ್ಕೆ ಬರುತ್ತಾರೆ ಹಾಗು ಆಳ್ವಾನಿಗೆ ವರದರಾಜ ಸ್ತವವನ್ನು ಪೂರ್ಣವಾಗಿ ದೇವಪ್ಪೆರುಮಾಳಿನ ಮುಂದೆ ಪಠಿಸಲು ಕೇಳುತ್ತಾರೆ. ಉಡೈಯವರು ಇನ್ನೊಂದು ಕಾರ್ಯಕ್ಕೆ ಹೋದ ಸಮಯದಲ್ಲಿ, ಆಳ್ವಾವಿನ ಪಠನ ಮುಗಿದಿತು. ದೇವಪ್ಪೆರುಮಾಳ್, ತಮಗಿದ್ದ ಆಸೆಯನ್ನು ಕೇಳಲು ಹೇಳುತ್ತಾರೆ. “ನಾಲೂರನು ನಾನು ಹೊಂದುವ ಗತಿಯನ್ನೆ ಅಡೈಯಬೇಕು.” ಉಡೈಯವರು ಬಂದು ಕೇಳಿದಾಗ ತಮ್ಮ ಆಸೆಯೆಂತೆ ನಡೈಯದ ಕಾರಣ ಆಳ್ವಾನ್ ಹಾಗು ಪೆರುಮಾಳಿನ ಮೇಲೆ ಕೋಪಗೋಂಡರು. ದೇವಪ್ಪೆರುಮಾಳ್ ನಂತರ ತಮ್ಮನ್ನು ಹಾಗು ಎಮ್ಪೆರುಮಾನಾರನ್ನು ದರ್ಶಿಸುವಂತೆ ನೇತ್ರಗಳನ್ನು ಅನುಗ್ರಹಿಸಿದರು. ಭಗವದನುಗ್ರಹದಿಂದ ದೇವಪ್ಪೆರುಮಾಳಿನ ದಿವ್ಯ ಅಲಂಕಾರ, ಆಭರಣಾದಿಗಳನ್ನು ಕಂಡು, ಉಡೈಯವರಿಗೆ ವಿವರಿಸಿದಾಗ ಉಡೈಯವರು ತೃಪ್ತರಾದರು.

‘ಕೋಯಿಲ್ ಅಣ್ಣರ್’ ಆಗುವುದು

ಓಮ್ಮೆ ನಾಚಿಯಾರ್ ತಿರುಮೊಳಿಯನ್ನ ಬೋಧಿಸುತ್ತಿದ್ದ ಸಮಯದಲ್ಲಿ, ನೂರು (ದೋಡ) ಪಾತ್ರೆಗಳಷ್ಟು ಅಕ್ಕಾರವಡಿಸಿಲ್( ಸಕ್ಕರೆಪೊಂಗಲ್) ಹಾಗು ನೂರು ಪಾತ್ರೆಗಳಷ್ಟು ಬೆಣ್ಣೆಯನ್ನು ತಿರುಮಾಲಿರುನ್ಜೋ ಲೈ ಎಮ್ಪೆರುಮಾನಿಗೆ ಆಣ್ಡಾಳ್ ವ್ಯಕ್ತಪಡಿಸುವ “ನಾರು ನರುಮ್ ಪೊಳಿಲ್” ಪಾಸುರವನ್ನು ವಿವರಿಸಿ ಅ ಸಮಯದಲ್ಲಿ ಆಣ್ಡಾಳಿನ ಪರವಾಗಿ ಅವನ್ನು ಅರ್ಪಿಸಲು ತಿರುಮಾಲಿರುನ್ಜೋಲೈ ದಿವ್ಯ ದೇಶಕ್ಕೆ ಹೊರಡುತ್ತಾರೆ. ಅವರು ನಂತರ ಶ್ರೀವಿಲ್ಲಿಪುತ್ತೂರಿಗೆ ಹೋಗುತ್ತಾರೆ ಹಾಗು ಆಣ್ಡಾಳ್-ರಂಗಮನ್ನಾರ್ ಎಮ್ಪೆರುಮಾನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ಒಬ್ಬ ಅಣ್ಣನಂತೆ ,ತನ್ನ ಆಸೆಯನ್ನು ನೆರವೇರಿಸಿದ ಕಾರಣದಿಂದ ಪ್ರಸನ್ನರಾಗಿ “ನಮ್ ಕೋಯಿಲ್ ಅಣ್ಣರ್” (ನನ್ನ ಶ್ರೀರಂಗದ ಅಣ್ಣ)ಎಂದು ಆಂಡಾಳ್ ಮುಡಿಸಿದಳು . ನಂತರ ಆಳ್ವಾರರ್ತಿರುನಗರಿಯಲ್ಲಿ ಆಳ್ವಾರ್-ಆದಿನಾಥರಿಗೆ ಮಂಗಳಾಶಾಸನವನ್ನು ಮಾಡಿ ಶ್ರೀರಂಗಕ್ಕೆ ಹಿಂತಿರುಗಿ ಸಂಪ್ರದಾಯವನ್ನು ಪ್ರವರ್ತಿಸಿದರು

ಅವರ ಶಿಷ್ಯರು

ಅವರು ಅಸಂಖ್ಯಾತ ಶಿಷ್ಯರನ್ನು ಹೋಂದಿದ್ದರು ಹಾಗು (ಸಂಪ್ರದಾಯದ ನಾಯಕರಾಗಿ ಎಲ್ಲರಿಗು ತತ್ತ್ವಗಳನ್ನು ಬೋಧಿಸುವವರಾದ) 74 ಸಿಂಹಾಸನಾಧಿಪತಿಗಳನ್ನು ಸ್ಥಾಪಿಸಿದರು. ಅವರ ಸಮಯದಲ್ಲಿ ಹಲವಾರು ಶ್ರೀವೈಷ್ಣವರು ವಿವಿದ ಕೈಂಕರ್ಯಗಳಲ್ಲಿ ಅನ್ವಯಿಸಿದ್ದರು

 • ಕೂರತ್ತಾಳ್ವಾನ್, ಮುದಲಿಯಾಣ್ಡಾನ್, ನಡಾದೂರ್ ಆಳ್ವಾನ್, ಭಟ್ಟರ್ ಹಾಗು ಮತ್ತಿತರರು ಶ್ರೀಭಾಷ್ಯದ ಪ್ರವರ್ತನೆಯಲ್ಲಿ ಸಹಾಯ ಮಾಡುತಿದ್ದರು
 •  ಕಿಡಾಂಬಿ ಪೆರುಮಾಳ್ ಹಾಗು ಕಿಡಾಂಬಿ ಆಚ್ಚಾನ್ ತಿರುಮಡಪಳ್ಳಿಯನ್ನು (ಪಾಕಶಾಲೆ) ನಿರ್ವಹಿಸುತಿದ್ದರು. ವಡುಗ ನಂಬಿಗಳು ಉಡೈಯವರ ಉಪಯೋಗಕ್ಕಾಗಿ ತೈಲವನ್ನು ತಯಾರಿಸುತಿದ್ದರು. ಗೋಮಡತ್ತಾಳ್ವಾನ್ ಎಮ್ಪೆರುಮಾನಾರಿನ ಮಡಿಕೆಗಳು ಹಾಗು ಪಾದರಕ್ಷೆಗಳನ್ನು ತರುತಿದ್ದರು
 • ಪಿಳ್ಳೈ ಉರಂಗವಿಲ್ಲಿ ದಾಸರ್ ಕರುವೂಲವನ್ನು(ಆಭರಣಗಳನ್ನನು) ನಿರ್ವಹಿಸುತಿದ್ದರು.
 • ಅಮ್ಮಂಗಿ ಹಾಲನ್ನು ತಯಾರಿಸುತಿದ್ದರು ಹಾಗು ಉಕ್ಕಲಾಳ್ವಾನ್ ಪ್ರಸಾದವನ್ನು ವಿನಿಯೋಗಿಸುವರು. ಉಕ್ಕಲಮ್ಮಾಳ್ ತಿರುವಾಲವಟ್ಟ ಕೈಂಕರ್ಯವನ್ನು ಮಾಡುತಿದ್ದರು.
 • ಮಾರುತಿಪ್ಪೆರಿಯಾಂಡಾನ್ ಎಮ್ಪೆರುಮಾನಾರಿನ ಉಪಯೋಗಕ್ಕಾಗಿ ಒಂದು ಚಿಕ್ಕ ಮಡಿಕೆಯನ್ನು ಹೊರುತ್ತಿದ್ದರು.
 • ಮಾರುತ್ತಿ ಚಿರಿಯಾಂಡಾನ್ ಮಠಕ್ಕೆ ಬೇಕಾದ ತರಕಾರಿಗಳನ್ನು ನಿರ್ವಹಿಸುತಿದ್ದರು.
 • ತೂಯ ಮುನಿ ವೇಳಮ್ ಶುದ್ಧ ನೀರನ್ನು ತರುತಿದ್ದರು.
 • ತಿರುವರಂಗಮಾಳಿಗೈಯಾರ್ ಶ್ರೀಭಂಡಾರವನ್ನು(ದಿನಸಿಯ ಮಳಿಗೆ) ನಿರ್ವಹಿಸುತ್ತಿದ್ದರು
 • ವಣ್ಡರ್ ಹಾಗು ಸೆಣ್ಡರ್ (ಎಂಬ ಪಿಳ್ಳೈ ಉರಂಗವಿಲ್ಲಿ ದಾಸರ ಸೋದರಳಿಯರು ) ಬಹಳಷ್ಟು ಆದಾಯವನ್ನು ರಾಜನ ಸೇವೆಯಿಂದ ಪಡೆದು ಆ ಹಣವನ್ನು ಮಠಕ್ಕೆ ನೇಡುತಿದ್ದರು.
 • ಇರಾಮಾನುಸವೇಳೈಕ್ಕಾರರ್ ಎಮ್ಪೆರುಮಾನಾರಿನ ಆರಕ್ಷಕರಾಗಿದ್ದರು
 • ಅಗಳಂಗ ನಾಟ್ಟಾಾಳ್ವಾನ್ ಇತರ ಮತದ ವಿದ್ವಾಂಸರೋಂದಿಗೆ ವಾದ ಅಮ್ಮಾಂಗಿಗಳಲ್ಲಿ ಅನ್ವಯಿಸಿದ್ದರು.
 • ಅರುಳಾಳಪೆರುಮಾಳ್ ಎಮ್ಪೆರುಮಾನಾರ್ ಎಮ್ಪೆರುಮಾನಾರಿನ ಆರಾಧನಪ್ಪೆರುಮಾಳಿಗೆ ತಿರುವಾರಾಧನೆಯನ್ನು ಮಾಡುತ್ತಿದ್ದರು.

ಅನೇಕರಿಂದ ಪ್ರಕಾಶಿಸಲ್ಪಟ್ಟ ಅವರ ಮಾಹಾತ್ಮೆ

ಉಡೈಯವರ ಮಾಹಾತ್ಮೆ ಪೆರಿಯ ಪೆರುಮಾಳ್, ತಿರುವಾರಾಧನೆಯನ್, ಪೇರರುಳಾಳನ್(ಕಾಂಚಿಪುರದ ವರದರಾಜನು), ತಿರುನರಾಯಣನು ,ತಿರುಕ್ಕುರುಂಗುಡಿ ನಂಬಿ, ನಮ್ಮಾಳ್ವಾರ್ , ಶ್ರೀಮನ್ನಾಥಮುನಿಗಳು ಶ್ರೀ ಆಳವಂದಾರ್, ಪೆರಿಯ ನಂಬಿಗಳು , ತಿರುಕ್ಕೋಷ್ಟಿಯೂರ್ ನಂಬಿಗಳು , ತಿರುಮಲೈ ನಂಬಿಗಳು, ತಿರುಮಲೈ ಅಣ್ಡನ್, ಆಳ್ವಾರ್ ತಿರುವರಂಗಪ್ಪೆರುಮಾಳ್ ಅರೈಯರ್, ಅವರ ಶಿಷ್ಯರು, ಬ್ರಹ್ಮ ರಾಕ್ಷಸ ಹಾಗು ಮೂಕನಿಂದ ಪ್ರಕಾಶಿಸಲ್ಪಟ್ಟಿತು.  .

ಅವನ್ನು  ಸಂಕ್ಷಿಪ್ತವಾಗಿ ನೋಡೋಣ

 • ಪೆರಿಯ ಪೆರುಮಾಳ್ (ಶ್ರೀರಂಗ) ನಿತ್ಯ ವಿಭೂತಿ ಲೀಲಾವಿಭೂತಿಗಳೆರಡನ್ನು ಎಮ್ಪೆರುಮಾನಾರಿನ ಕೈಗೆ ಇಷ್ಟವಿನಿಯೋಗಾರ್ಹವಾಗಿ ನೀಡಿದರು
 • ತಿರುವೇಂಕಟಮುಡೈಯಾನ್(ತಿರುಮಲೈ ತಿರುಪತಿ) ಪೆರಿಯ ಪೆರುಮಾಳಿನಿಂದ ಲಭಿಸಿದ ಬಿರುದನ್ನು ಆಮೋದಿಸಿ “ಉಡೈಯವರ್”ಎಂದು ಸ್ಥಾಪಿಸಿದರು ಹಾಗು ಉಡೈಯವರ ಆಜ್ಞೆಯಂತೆ ಮೊಸರನ್ನು ಮಾರುತಿದ್ದ ತುಂಬಯೂರ್ ಕೊಂಡಿಗೆ ಮೋಕ್ಷವನ್ನು ನೀಡಿದನು.
 • ಪೇರರುಳಾಳನ್ (ಕಾಂಚಿಪುರ) ಯಙ್ಞಮೂರ್ತಿಯನ್ನು ಸೋಲಿಸಲು ಸಹಾಯ ಮಾಡಿದರು ಹಾಗು (ಮೂಲತಃ ಇತರ ಮತದ ಆಚಾರ್ಯರು ಹಾಗು ಒಮ್ಮೆ ಎಮ್ಪೆರುಮಾನಾರಿನ ಆಚಾರ್ಯರು ಆಗಿದ್ದ)ಯಾದವ ಪ್ರಕಾಶರಿಗೆ ಉಡೈಯವರ ಶಿಷ್ಯರಾಗೆ ಸನ್ನ್ಯಾಸವನ್ನು ಅವರಿಂದಲೇ ಪಡೆಯಲು ಹೇಳಿದನು
 • ತಿರುನಾರಾಯಣನ್ (ಮೇಲ್ಕೋಟೆ) ಆ ದಿವ್ಯ ಕ್ಷೆತ್ರವನ್ನು ಪುನಃಸ್ಥಾಪಿಸಲು ಹಾಗು ತಮ್ಮ ಪ್ರೀತಿಯ ಮಗನಾಗಿ ಎತ್ತುಕ್ಕೊಂಡು ಅಪ್ಪಿಕೊಳ್ಳಲು ಅನುಮತಿಸಿದನು.
 • ಅಳಗರ್ (ತಿರುಮಾಲಿರುನ್ಜೋಲೈ) ಉಡೈಯವರ ಮಾಹಾತ್ಮೆಯನ್ನು ಎರಡು ಸನ್ನಿವೇಶಗಳಲ್ಲಿ ಹೊರಪಡಿಸಿದರು- ಆಚಾರ್ಯರ ಪರಂಪರೆಯಿಂದ ಬರುತಿದ್ದಾರೆಂದು ತಿಳಿದಿದ್ದ ಪೆರಿಯ ನಂಬಿಗಳ ವಂಶಸ್ತರನ್ನು ಉಡೈಯವರ ಶಿಷ್ಯ ಘೋಷ್ಠಿಯಲ್ಲಿ ಸೇರಲು ಆದೇಶಿಸಿದರು ಹಾಗು ಕಿಡಾಂಬಿ ಆಚ್ಚಾನಿಗೆ ಎಮ್ಪೆರುಮಾನಾರನ್ನು ಆಶ್ರಯಿಸಿದವರು ಎಂದೂ ಅನಾಥರಲ್ಲರೆಂದು ಪ್ರಕಾಶಿಸಿದನು.
 • ತಿರುಕ್ಕುರುಂಗುಡಿ ನಂಬಿಗಳು ಎಮ್ಪೆರುಮಾನಾರನ್ನು ತಮ್ಮ ಆಚಾರ್ಯರೆಂದು ಸ್ವೀಕರಿಸಿ ಶ್ರೀವೈಷ್ಣವ ನಂಬಿಗಳೆಂದು ಪ್ರಸಿದ್ದರಾದರು.
 • ನಮ್ಮಾಳ್ವಾರ್ ಜೀವಾತ್ಮರು ಈ ಸಂಸಾರದ ತಾಪವನ್ನು ಅನುಭವಿಸುವುದನ್ನು ಕಂಡು ದುಃಖಪಟ್ಟರು ಆದರೆ ಮೂಂದೆ ನಡೆಯುವ ಎಮ್ಪೆರುಮಾನಾರಿನ ಅವತಾರವನ್ನು ಕಂಡು ಸಂತೋಶದಿಂದ “ಪೊಲಿಗ! ಪೊಲಿಗ! ಪೊಲಿಗ!” ಎಂದು ಹಾಡಿದರು.
 • ಶ್ರೀಮನ್ ನಾಥಮುನಿಗಳು “ನಾವು ಉಪದೇಶಿಸಿದರೆ ಕೆಲವರಿಗೆ ಸಹಾಯವಾಗುವುದು ಆದರೆ ಶ್ರೀ ರಾಮಾನುಜರು ಉಪದೇಶಿಸಿದರೆ , ವೀರನಾರಾಯಣಪುರದ ಏರಿಯು ಎಲ್ಲರಿಗು ಸಹಾಯ ಮಾಡುವಂತೆ ಎಲ್ಲರಿಗು ಉಪಕಾರವಾಗುವುದು.
 • ಆಳವಂದಾರ್ ಇವರನ್ನು “ಆಮ್ ಮುದಲ್ವನ್”( ಸಂಪ್ರದಾಯಕ್ಕೆ ಸೂಕ್ತ ನಾಯಕರು) ಎಂದು ಹೇಳಿದರು
 • ಪೆರಿಯ ನಂಬಿಗಳು ಶ್ರೀ ರಾಮಾನುಜರ ಆಚಾರ್ಯರಾಗಿದ್ದರೂ ಇವರ ವೈಭವವನ್ನು ಮನಸಿನಲ್ಲಿಟ್ಟು ಇವರಿಗೆ ನಮಸ್ಕರಿಸಿದರು.).
 • ತಿರುಕ್ಕೋಷ್ಟಿಯೂರ್ ನಂಬಿಗಳು ಇವರಿಗೆ “ಎಮ್ಪೆರುಮಾನಾರ್” ಎಂಬ ಹೆಸರನ್ನು ನೀಡಿದರು (ಎಮ್ಪೆರುಮಾನಿಗಿಂತಲೂ ಹೆಚ್ಚು ಔದಾರ್ಯವನ್ನು ಉಳ್ಳವರು.)
 • ತಿರುಮಲೈ ಆಣ್ಡಾನ್ ಹಾಗು ಉಡೈಯವರ ನಡುವೆ ಭಿನ್ನಾಭಿಪ್ರಾಯಗಳು ಇದ್ದವು, ಆದರೆ ಉಡೈಯವರ ವೈಭವವನ್ನರಿತ ನಂತರ ಅವರನ್ನು ತುಂಬಾ ಹೊಗಳಿ ತಮ್ಮ ಮಗನನ್ನು ಅವರ ಶಿಷ್ಯರಾಗಲು ಆದೇಶಿಸಿದರು.
 • ತಿರುವರಂಗಪ್ಪೆರುಮಾಳ್ ಅರೈಯರ್ ತಮ್ಮ ಮಗನಿಗೆ “ಆಚಾರ್ಯ ಅಭಿಮಾನವನ್ನು” ಬೋಧಿಸಿದರು ಹಾಗು ಅವರನ್ನು ರಾಮಾನುಜರ ಶಿಷ್ಯ ನಾಗಲು ಹೇಳಿದರು.
 • ಉಡೈಯವರ ಶಿಷ್ಯರು ಅವರ ಪಾದಕಮಲಗಳಲ್ಲೆ ಸಂಪೂರ್ಣ ಶ್ರದ್ಧೆಯಿಂದಿದ್ದರು ಹಾಗು ಅವರನ್ನೇ ಉಪಾಯ ಎಂದು ಗತಿಯೆಂದು (ಉಪೇಯವೆಂದು) ಭಾವಿಸಿದರು.
 • ಅಮುದನಾರ್ ರಚಿಸಿದ ರಾಮಾನುಸ ನೂಟ್ರಂತಾದಿಯು ದಿವ್ಯ ಪ್ರಬಂಧದ ಭಾಗವಾಯಿತು
 • (ಪ್ರಾಂತಿಕ ರಾಜನ ಮಗಳ ಶರೀರವನ್ನು ಪ್ರವೇಶಿಸಿದ ) ಬ್ರಹ್ಮರಾಕ್ಷಸ್ಸು ಯಾದವಪ್ರಕಾಶರನ್ನು ನಿರ್ಲಕ್ಷಿಸಿಟ ರಾಮಾನುಜರನ್ನೇ ನಿತ್ಯಸೂರಿಗಳ ನಾಯಕರೆಂದು ಪ್ರಕಾಶಿಸಿತು.
 • ಎಮ್ಪೆರುಮಾನಾರಿಂದ ಅನುಗ್ರಹೀತನಾದ ಒಬ್ಬ ಮೂಗನು ಕೆಲವು ವರ್ಷಗಳ ಕಾಲ ಕಾಣೆಯಾಗಿ ಮತ್ತೆ ಬಂದಾಗ, “ಎಮ್ಪೆರುಮಾನಾರೇ ವಿಶ್ವಕ್ಸೇನರ್”ಎಂದು ಹೇಳಿ ಮತ್ತೆ ಕಾಣೆಯಾದನು.
 • ಈ ವಿದದಲ್ಲಿ ಹಲವಾರು ಉತ್ತಮ ವ್ಯಕ್ತಿಗಳು ಎಮ್ಪೆರುಮಾನಾರಿನ ವೈಭವವನ್ನು ಪ್ರಕಾಶಿಸಿದರು.ನಾಥಮುನಿಗಳಿಂದ ಪ್ರಾರಂಭಿಸಿ ಹಲವಾರು ಆಚಾರ್ಯರಿದ್ದರು, ಉಡೈಯವರ ವಿಶೇಷ ವೈಭವಕ್ಕೆ ಕಾರಣವೇನು? ಇದಕ್ಕೆ ಕಾರಣವೇನೇಂದರೆ.
 • ಶರಣ್ಯನಾಗಿ ಹಾಗು ಗೀತೋಪದೇಶದಿಂದ ಶ್ರೀ ರಾಮ ಹಾಗು ಶ್ರೀ ಕೃಷ್ಣಾವತಾರಗಳು ಇತರ ಅವತಾರಗಳಲ್ಲಿ ವಿಶೇಷವಾಗಿರುವರುವಂತೆಯೇ
 • ಆಚಾರ್ಯರ ಸಂಬಂಧದಿಂದ ಕೋಯಿಲ್(ಶ್ರೀರಂಗ) , ತಿರುಮಲೈ (ತಿರುಪತಿ), ಪೆರುಮಾಳ್ ಕೋಯಿಲ್(ಕಾಂಚೀಪುರಂ) ಹಾಗು ತಿರುನಾರಯಣಪುರಗಳು ಇತರ ದಿವ್ಯದೇಶಗಳಿಗಿಂತಲೂ ವಿಶೇಷವಾಗಿರುವರುವಂತೆಯೇ.
 • ವೇದ ,ವೇದಾಂತ ,ಪುರಾಣ ಹಾಗು ಇತಿಹಾಸಾದಿಗಳಲ್ಲಿ ಅವರ ಕೊಡುಗೆಯಿಂದ ವೇದ ವ್ಯಾಸ ಭಗವಾನ್, ಪರಾಶರ ಭಗವಾನ್, ಶುನಕ ಭಗವಾನ್, ಶುಕ ಭಗವಾನ್ ಹಾಗು ನಾರದ ಭಗವಾನ್ ಇತರ ಋಷಿಗಳಿಗಿಂತಲೂ ವಿಶೇಷವಾದ ರೀತಿಯಲ್ಲೇ
 • ಸಂಪ್ರದಾಯದ ತತ್ತ್ವ ಸಿದ್ಧಾಂತಗಳನ್ನು ಪ್ರಾಕಾಶಿಸಿದ ನಮ್ಮಾಳ್ವಾರ್ ಇತರ ಆಳ್ವಾರರಿಗಿಂತಲೂ ವಿಶೇಷವಾದ ರೀತಿಯಲ್ಲೇ
 • ಹಾಗೆಯೇ ಇವೆಲ್ಲಾ ವಿಶಯಗಳಲ್ಲೂ ಇದ್ದ ಅವರ ಕೊಡುಗೆಯಿಂದ, ಸುದೃಡವಾಗಿ ನಮ್ನ ಸಿದ್ಧಾಂತ ಸಂಪ್ರದಾಯಗಳನ್ನು ಸ್ಥಾಪಿಸಿ , ಸಂಪ್ರದಾಯದ ವರ್ದನೆಗೂ ಮಾರ್ಗ ರಚಿಸಿದ ಕಾರಣ ವಿಶೇಷರಾದರು.

ಅವರ ಕೋನೆಯ ದಿನಗಳು

ಅವರೇ ಆಳ್ವಾರಿನ ಪಾದಕಮಲಗಳಾಗಿದ್ದು, ಆಳ್ವಾರ್ ತಾಮೇ ಎಮ್ಪೆರುಮಾನಾರಿನ ಅವತಾರವನ್ನು “ಪೊಲಿಗ! ಪೊಲಿಗ! ಪೊಲಿಗ!” ದಶಕದಲ್ಲಿ ಸೂಚಿಸಿದ ಕಾರಣ ಉಡೈಯವರ ಶಿಷ್ಯರು ಅಚಂಚಲ ಶ್ರದ್ಧ ಹಾಗು ಆಚಾರ್ಯ ನಿಶ್ಠೆಯಿಂದಿದ್ದರು. ಆಳ್ವಾರಿನ ತಿರುವಾಯ್ಮೊಳಿಯಿಂದ ನಮ್ನ ಸಂಪ್ರದಾಯವನ್ನು ಸ್ಥಾಪಿಸಿದ ಕಾರಣ ಅವರು ಆಳ್ವಾರಿನ ನೇರ ಶಿಷ್ಯರನ್ನಾಗಿ ಭಾವಿಸಬಹುದು. ಎಂದೂ ಬೇಟಿಮಾಡದಿದ್ದರೂ ಆಳವಂದಾರಿನ ಇಚ್ಛೆಯನ್ನರಿತು ನೆರವೇರಿಸಿದ ಕಾರಣ ಅವರ ನೇರ ಶಿಷ್ಯರಾಗಿ ಭಾವಿಸಬಹುದು.

ಒಮ್ಮೆ ಉಡೈಯವರು ಶರಣಾಗತಿಯ ತತ್ತ್ವಗಳನ್ನು ಶ್ರೀರಾಮಾಯಣದಿಂದ ಉಪದೇಶಿಸುವ ವೇಳೆಯಲ್ಲಿ ವಿಭೀಶಣ ಶರಣಾಗತಿಯ ಪ್ರಕರಣದಲ್ಲಿ ಗೊಂದಲಕ್ಕೊಳಗಾದ ಪಿಳ್ಳೈ ಉರಂಗವಿಲ್ಲಿ ದಾಸರನ್ನು ಕಂಡ ಉಡೈಯವರು ಕಾರಣವನ್ನು ಕೇಳಿದಾಗ ಅವರು, “ಎಲ್ಲವನ್ನು ಬಿಟ್ಟು ರಾಮನಲ್ಲಿ ಶರಣಾದ ವಿಭೀಶಣನೇ ಅಂಗೀಕಾರಕ್ಕೆ ಕಾಯಬೇಕಾಗಿತ್ತೆಂದರೆ, ನಮ್ನ ಗತಿಯೇನು ? ನಮಗೆ ಮೋಕ್ಷ ಲಭಿಸುವುದೇ ?” ಎಂದು ಕೇಳಿದರು,ಉಡೈಯವರು  “ಪುತ್ರ! ಕೇಳು, ನಾನು ಮೋಕ್ಷವನ್ನು ಹೋಂದಿದರೆ ನೀನು ಮೋಕ್ಷವನ್ನು ಹೋಂದುವೆ, ಪೆರಿಯ ನಂಬಿಗಳಿಗೆ ಮೋಕ್ಷವು ಲಭಿಸಿದರೆ ನನಗೆ ಲಭಿಸುವುದು, ಆಳವಂದಾರಿಗೆ ಮೋಕ್ಷ ಲಭಿಸಿದರೆ ಪೆರಿಯ ನಂಬಿಗಳಿಗೆ ಮೋಕ್ಷವು ಲಭಿಸುವುದು ಹೀಗೇ ನಮ್ಮಾಳ್ವಾರಿನವರೆಗು ಹೋದರೆ, ನಮ್ಮಾಳ್ವಾರ್ ಅವರ ತಿರುವಾಯ್ಮೊಳಿಯಲ್ಲಿ ತಮಗೆ ಮೋಕ್ಷಸಿಕ್ಕಿದೆಯೆಂದು ಹೇಳಿದರಿರುವುದರಿಂದ ನಿನಗೆ ಮೋಕ್ಷ ಖಚಿತ.” ಎಂದು ಅವರನ್ನು ಸಾಂತ್ವಾನಿಸಿದರು. 

ಎಮ್ಪೆರುಮಾನಾರೇ ಮೋಕ್ಷಕ್ಕೆ ಉಪಯವೆಂದು, ಅವರನ್ನು ಅವರ ಭಕ್ತರನ್ನು ಸೇವಿಸುವುದೇ ಉಪೇಯವೆಂದು ರಾಮಾನುಸ ನೂಟ್ರಂತಾದಿಯಲ್ಲಿ ಅಮುದನಾರ್ ಸ್ಥಾಪಿಸಿದ್ದಾರೆ.

ಭವಿಷ್ಯದಲ್ಲಿಯೂ ಸಹ ಅವರನ್ನು ಆರಾಧಸಲು ಅನುಕೂಲವಾಗುವಂತೆ, ಅವರ ಒಂದು ಮೂರ್ತಿಯನ್ನು ತಯಾರಿಸಿ ಅವರ ಜನ್ಮ ಸ್ಥಾನವಾದ ಶ್ರೀಪೆರುಮ್ಬೂದೂರಿನಲ್ಲಿ ಪ್ರತಿಷ್ಠಾಪಿಸಲು ಅನುಮತಿಸಲು ಮುಡಲಿಯಾಣ್ಡಾನ್ ಎಮ್ಪೆರುಮಾನಾರನ್ನು ಕೇಳಿದರು. ಎಮ್ಪೆರುಮಾನಾರಿನ ಆಜ್ಞೆಯಂತೆ, ಅವರ ಪೂರ್ಣ ತೃಪ್ತಿಗೆ ಕಾರಣವಾಗುವಂತೆ ಶ್ರದ್ಧಯಿಂದ ಶ್ರೀರಂಗದಲ್ಲಿ ತಯಾರಿಸಲಾಗಿತ್ತು. ಎಮ್ಪೆರುಮಾನಾರ್ ಅದನ್ನು ಆಲಿಂಗಿಸಿ ಗುರು ಪುಷ್ಯದಂದು (ತೈ ಪೂಸಮ್) ಪ್ರತಿಷ್ಠಾಪಿಸಲು ಕಳುಹಿಸಿದರು.

ಉಡೈಯವರು ವೈಭವದಿಂದ 120 ವರ್ಷಗಳ ಕಾಲ ಜೀವಿಸಿದರು. ಸಂಸಾರವನ್ನು ಬಿಟ್ಟು ನಿತ್ಯಸೂರಿಗಳೊಂದಿಗೆ ಶ್ರೀವೈಕುಣ್ಠದಲ್ಲಿ ಇರಲು ಇಚ್ಛಿಸಿ ,ಪೆರಿಯ ಪಿರಾಟ್ಟಿಯಾರ (ಶ್ರೀರಂಗನಾಯಕಿ) ಪುರುಶಕಾರದೊಂದಿಗೆ ಗದ್ಯ ತ್ರಯವನ್ನು ಪಠಿಸಿ ಪೆರಿಯ ಪೆರುಮಾಳನ್ನು (ಶ್ರೀರಂಗನಾಥ) ಆಶ್ರಯಿಸಿ ಕೂಡಲೆ ಈ ಶರೀರದಿಂದ ಬಿಡಿಸಲು ಪ್ರಾರ್ಥಿಸಿದರು. ಎಮ್ಪೆರುಮಾನ್ ಇಂದಿನಿಂದ ಏಳು (7) ದಿನಗಳಲ್ಲಿ ಮೋಕ್ಷವನ್ನು ಹೋಂದುವಿರಿ ಎಂದು ಹೇಳಿದರು. “ನನ್ನ ನೇರ ಅಥವಾ ಪರೋಕ್ಷ ಸಂಬಂಧವನ್ನು ಹೋಂದಿರುವರೆಲ್ಲರು ನಾನು ಹೋಂದಿದ (ಈ) ಲಾಭವೇ ಪ್ರಾಪ್ತಿಸಲಿ “,ಎಂದು ಪ್ರಾರ್ಥಿಸಿದರು . ಎಮ್ಪೆರುಮಾನ್ ಸಂತೋಷದಿಂದ ಅಂಗೀಕರಿಸಿದರು. ಅವರು ಗಾಂಭೀರ್ಯದಿಂದ , ಪೆರಿಯ ಪೆರುಮಾಳಿಗೆ ವಿದಾಯವನ್ನು ಹೇಳಿ ಮಠಕ್ಕೆ ಹೋರಟರು.  ಮೂರು ದಿನಗಳ ಕಾಲ ತಮ್ಮ ಶಿಷ್ಯರುಗೆ ಆಶ್ಚರ್ಯಕರ ವಿಶೇಷಾರ್ಥಗಳನ್ನು ವರ್ಷಿಸಿದನ್ನು ಕಂಡು ಅವರು ,”ನೀವು ಇದಕ್ಕಿದ್ದಂತೆ ಇಷ್ಟು ಆಶ್ಚರ್ಯಕರ ವಿಶೇಷಾರ್ಥಗಳನ್ನು ಏಕೆ ಉಪದೇಶಿಸುವಿರಿ” ಎಂದು ಚಿಂತಿಸುವ ವೇಳೆಯಲ್ಲಿ , ಮಾಹಿತಿಯನ್ನು ಇನ್ನು ಮರೆಮಾಡಲಾರದೆ ಕರುಣೆಯಿಂದ, “ನಾನು ಇಂದಿನಿಂದ ನಾಲಕ್ಕು ದಿನಗಳಲ್ಲಿ ಪರಮಪದವನ್ನು ಹೋದಲು ಇಚ್ಛಿಸಿದೆ, ಪೆರುಮಾಳೂ ಅಂಗೀಕರಿಸಿದರು” ಎಂದು ಹೇಳಿದರು. ಇದನ್ನು ಕೇಳಿ ದುಃಖಿತರಾದ ಅವರ ಶಿಷ್ಯರು,ನೀವು ನಮ್ಮನ್ನು ಬಿಟ್ಟ ಕೂಡಲೇ ನಾವು ಪ್ರಾಣವನ್ನು ತ್ಯಜಿಸುವೆವೆಂದು ಹೇಳಿದರು. ಎಮ್ಪೆರುಮಾನಾರ್,” ನೀವು ಹಾಗೆ ಮಾಡಿದರೆ ನನ್ನೊಂದಿಗೆ ನಿಮಗೆ ಸಂಬಂಧವರುವುದಿಲ್ಲ ಹಾಗಾಗಿ ಹೀಗೆ ಮಾಡಡಿರಿ” ಎಂದು ಹೇಳಿ ಸಾಂತ್ವಾನಿಸಿದರು.

ಎಮ್ಪೆರುಮಾನಾರ್ ವಿಶೇಷವಾದ ಉಪದೇಶವನ್ನು ಎಲ್ಲರಿಗು ನೀಡಿದರು ಹಲವಾರು ಶಿಷ್ಯರನ್ನು ಕೆಲವು ಕಾರ್ಯಗಳಿಗೆ ನೇಮಿಸಿದರು. ಎಲ್ಲರು ಕೂರತ್ತಳ್ವಾನಿನ ಕುಮಾರರಾದ ಪರಾಶರ ಭಟ್ಟರೋಂದಿಗೆ ಸಹಕರಿಸಿ ಎಂದು ಆದೇಶಿಸಿದರು ಹಾಗು ಎಲ್ಲರು ತಮ್ಮಿಂದ ಏನಾದರೂ ಅಪಚಾರು ಸಂಭವಿಸಿದಲ್ಲಿ ಕ್ಷಮೆಯನ್ನು ಕೇಳಿದರು ಮತ್ತೆ ಕೊನೆಯ ಉಪದೇಶವನ್ನು ನೀಡಿದರು. ಇತರರ ಗುಣಗಳನ್ನು ಪ್ರಶಂಸಿಸಿ ಸಹೋದರರಂತೆ ಸಹಕಾರದ ಭಾವನೆಯಿಂದಿರಿ. ಪ್ರತ್ಯುಪಕಾರವನ್ನು ಅಪೇಕ್ಷಿಸದೆ ಕೈಂಕರ್ಯದಲ್ಲಿ ಮನವನ್ನು ಇಡಲು ಹೇಳಿದರು ,ಹಾಗು ತುಂಬ ಮುಖ್ಯವಾಗಿ ಎಂದೂ ಶ್ರೀವೈಷ್ಣವರನ್ನು ದ್ವೇಶಿಸದಿರಿ ಹಾಗು ಎಂದೂ ಲೌಕಿಕ ಸಂಸಾರಿಗಳನ್ನು ಪ್ರಶಂಸಿಸದಿರಿ.

ಭಟ್ಟರನ್ನು ಪೆರಿಯ ಪೆರುಮಾಳಿನ ಸನ್ನಿಧಿಯ ಮುಂದೆ ತಂದು ತೀರ್ಥಾದಿ ಮರ್ಯಾದೆಗಳನ್ನು ಪ್ರಸಾದಿಸಿ, ಎಲ್ಲರಿಗು ಭಟ್ಟರ್ ಸಂಪ್ರದಾಯದ ಮಾರ್ಗದರ್ಶನವನ್ನು ಮಾಡುವರು. ಭಟ್ಟರನ್ನು ಮೇಲುಕೋಟೆಗೆ ಹೋಗಿ (ನಂತರ ಕಾಲದಲ್ಲಿ ನಂಜೀಯರೆಂದು ಹೆಸರು ಪಡೆಯುವ) ವೇದಾಂತಿಯನ್ನು ತಿದ್ದಲು ಆದೇಶಿಸಿದರು. ವಯಸಿನಲ್ಲಿ ಶ್ರೇಷ್ಟರಾದ ಎಮ್ಬಾರಿನಬಳಿ ಭಟ್ಟರ್ ಕಲಿತರು.

ಅವರು ಪರಮಪದಿಸುವ ದಿನದಂದೂ ಅವರು ಸ್ನಾನ ,ದ್ವಾದಶ ಊರ್ದ್ವ-ಪುಣ್ಡ್ರ-ಧಾರಣ ಸಂಧ್ಯಾ ವಂದನಾದಿ ನಿತ್ಯಾನುಷ್ಠಾನಗಳು ಅವರ ಆರಾಧನೆ ಭಗವಾನಿಗೆ ತಿರುವಾರಾಧನದ ನಂತರ ಗುರುಪರಂಪರೆಯನ್ನು ಧ್ಯಾನಿಸುತ್ತಾ ಪದ್ಮಾಸನದಲ್ಲಿ ಆಸೀನರಾಗಿ ,ಮನವನ್ನು ಪರವಾಸುದೇವನಿನಲ್ಲಿಟ್ಟು, ಆಳವಂದಾರಿನ ಸುಂದರ ರೂಪವನ್ನು ಧ್ಯಾನಿಸುತ್ತಾ ಶಯನಿಸುತ್ತಾ ಕಣ್ಣು ತೆರೆದೇ ತಮ್ಮ ಶಿರಸ್ಸನ್ನು ಎಂಬಾರಿನ ಮಡಿಲಿನಲ್ಲಿಟ್ಟು ವಡುಗ ನಂಬಿಗಳ ಮಡಿಲಿನಲ್ಲಿ ಅವರ ದಿವ್ಯ ಪಾದಗಳನ್ನಿಟ್ಟು ಆದಿಶೇಷನಂತೆ ತೇಜೋಮಯವಾದ ರೂಪವದಲ್ಲಿ ಪರಮಪದಿಸಿದರು .ಇದನ್ನು ಕಂಡ ಶಿಷ್ಯರು ಬೇರಿಲ್ಲದ ಮರಗಳಂತೆ ನೆಲಕ್ಕೆ ಬಿದ್ದು ಕಣ್ಣೀರಿಟ್ಟರು ಸ್ವಲ್ಪ ಕಾಲದ ನಂತ ಸಾಂತ್ವಾನಿಸಿಕೋಣ್ಡರು, ಪೆರಿಯ ಪೆರುಮಾಳ್ ತನ್ನ ನಷ್ಟವನ್ನು ( ಪರಮಪದನಾಥನ ಲಾಭವನ್ನು) ಕಂಡು ದುಃಖದಿಂದ ತಾಂಬೂಲವನ್ನು ಸೇವಿಸಲು ನಿರಾಕರಿಸಿದರು ಹಾಗು ಆಲಯ ಮರ್ಯಾದೆಗಳನ್ನು ಉತ್ತಮ ನಂಬಿಯೋಂದಿಗೆ ಕಳುಹಿಸಿದನು. ಮಠದಲ್ಲಿ ಎಮ್ಪೆರುಮಾನಾರಿನ ವಿಮಲ ಚರಮ ತಿರುಮೇನಿಯನ್ನು (ಕೊನೆಯದದ ಶುದ್ಧವಾದ ದಿವ್ಯ ತಿರುಮೇನಿ) ಸ್ನಾನಿಸಿ ,ಊರ್ದ್ವಪುಣ್ಡ್ರ ಧರಿಸಿ, ಧೂಪ-ದೀಪಗಳನ್ನು ಸಮರ್ಪಿಸಿದರು ; ಎಮ್ಪೆರುಮಾನಾರಿನ ಅಭಿಮಾನ ಪುತ್ರರಾದ ಪಿಳ್ಳಾನ್ ಚರಮ ಸಂಸ್ಕಾರಗಳನ್ನು ನೆರವೇರಿಸಿದರು ಶ್ರೀರಂಗದ ಶ್ರೀವೈಷ್ಣವರು ಎಲ್ಲ ಕಾರ್ಯಗಳನ್ನು ವೈಭವದಿಂದ, ಉಪನಿಷತ್ ಗೋಷ್ಠಿ, ದಿವ್ಯ ಪ್ರಭಂದಾದ್ಯಯನ ,ವಾದ್ಯ , ಅರೈಯರ್ ಸೇವೆ , ಸ್ತೋತ್ರಪಾಠದೊಂದಿಗೆ ಪುಷ್ಪಗಳು ಆಚರಿಸಲಾಗಿತ್ತು. ಪೆರಿಯ ಪೆರುಮಾಳಿನ ಆದೇಶದಂತೆ ಯತಿ ಸಂಸ್ಕಾರ ವಿದಿಯಂತೆ ನಂಪೆರುಮಾಳಿನ ವಸಂತ ಮಂಟಪದಲ್ಲಿ ಭೂ ಸ್ಥಾಪನೆ ಮಾಡಲಾಯಿತು. ಪೆರಿಯ ಪೆರುಮಾಳಿನ ಆದೇಶದಂತೆ ಮುಡಲಿಯಾಣ್ಡಾನ್ ಎಮ್ಪೆರುಮಾನಾರಿನ ತಿರುವರಸುವಿನ ಮೇಲೆ ಒಂದು ವಿಶೇಶ ಮೂರ್ತಿಯನ್ನು ಪ್ರತಿಷ್ಟಿಸಿದರು.

ನಂತರ ಎಮ್ಪೆರುಮಾನಾರ್ ಪರಮಪದಿಸಿದರೆಂದು ಕೇಳಿ ತುಂಬಾ ಶ್ರೀವೈಷ್ಣವರು ದುಃಖಿತರಾದರು, ಹಲವಾರು ಎಮ್ಪೆರುಮಾನಾರಿನಿಂದ ದೂರವಿಲ್ಲದೆ ಅದೇ ಕ್ಷಣವೆ ಪ್ರಾಣತ್ಯಜಿಸಿದರು. ಶ್ರೀರಂಗಕ್ಕೆ ಬಂದ ಶ್ರೀವೈಷ್ಣವರು ಅವರೋಂದಿಗೆ ಭಟ್ಟರಾಗಿ ಇದ್ದರೆಂದು ಸಂತೋಷಿಸಿ ತಮ್ಮನ್ನು ಸಾಂತ್ವಾನಿಸಿಕೋಂಡರು.

ಈ ರೀತಿಯಲ್ಲಿ ಎಲ್ಲರ ಉದ್ಧಾರಕ್ಕಾಗಿ ಒಂದು ಸಾರ್ಥಕ ಜೀವನವನ್ನು ಜೀವಿಸಿದರು. ಎಮ್ಪೆರುಮಾನಿನ ವೈಭವವನ್ನು ವಿವರಿಸಲು ಶಕ್ಯವಾದರೂ ಎಮ್ಪೆರುಮಾನಾರಿನ ವೈಭವವನ್ನು ವಿವರಿಸಲು ಸಾದ್ಯವಿಲ್ಲ. ಎಮ್ಪೆರುಮಾನಿನ ಸಹಸ್ರಾಬ್ದಿಯ (ಸಾವಿರದ ತಿರುನಕ್ಷತ್ರ) ಪಥದಲ್ಲಿ ಅವರ ಜೀವನ ಹಾಗು ವೈಭವವನ್ನು ಅನುಭಸಿದೆವು. ಈ ಅನುಭವವು ನಮ್ನ ಹೃದಯದಲ್ಲಿ ಎಂದೂ ಇದ್ದು ಶ್ರದ್ಧಾವಂತ ರಾಮಾನುಜ ದಾಸರಾಗಿರೋಣ


ಶ್ರೀಮನ್ ಮಹಾಭೂತಪುರೇ ಶ್ರೀಮತ್ ಕೇಶವ ಯಜ್ವನಃ |
ಕಾಂತಿಮತ್ಯಾಮ್ ಪ್ರಸೂದಾಯ ಯತಿರಾಜಾಯ ಮಂಗಳಮ್

ಶ್ರೀಮತೇ ರಮ್ಯಜಾಮಾತೃ ಮುನೀಂದ್ರಾಯ ಮಹಾತ್ಮನೇ ।
ಶ್ರೀರಂಗವಾಸಿನೇ ಭೂಯಾತ್ ನಿತ್ಯಶ್ರೀರ್ ನಿತ್ಯ ಮಂಗಳಮ್ ॥

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ: http://ponnadi.blogspot.com/2017/04/sri-ramanuja-vaibhavam.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org