ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಗುರುಪರಂಪರೆ

ಶ್ರೀಮನ್ ನಾರಾಯಣ ಶ್ರೀದೇವಿ (ಶ್ರೀ ಮಹಾಲಕ್ಷ್ಮಿ), ಭೂದೇವಿ, ನೀಳಾದೇವಿ ಮತ್ತು ನಿತ್ಯಸೂರಿಗಳೊಂದಿಗೆ ಪರಮಪದದಲ್ಲಿ

ಈ ಹಿಂದಿನ ಲೇಖನದಲ್ಲಿ ನಾವು ಗುರುಪರಂಪರೆಯ ವೈಭವಗಳನ್ನು ತಿಳಿದುಕೊಂಡೆವು. ಈಗ ನಾವು ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.

ಶ್ರೀಮನ್ ನಾರಾಯಣನು ಅನಂತವಾದ ಮತ್ತು ಅದ್ಭುತವಾದ ಕಲ್ಯಾಣಗುಣಗಳಿಂದ ಕೂಡಿದ ಸರ್ವೋಚ್ಚನಾದ ದೇವನು. ತನ್ನ ದೈವಿಕ ಮತ್ತು ನಿರುಪಾಧಿಕ ಕೃಪೆಯಿಂದಾಗಿ, ಆತನು ಕೆಲವರು ಆಯ್ದ ಜೀವಾತ್ಮರನ್ನು ಆಳ್ವಾರುಗಳಾಗುವಂತೆ (ಶ್ರೀಮನ್ ನಾರಾಯಣನ ಕುರಿತು ನಿರ್ಮಲವಾದ ಮತ್ತು ಅನನ್ಯವಾದ ಭಕ್ತಿಯನ್ನು ಬೋಧಿಸಿದ ಶ್ರೇಷ್ಠ ಸಂತರು) ಅನುಗ್ರಹಿಸಿದನು. ತಾನು ನಿತ್ಯಸೂರಿಗಳ (ನಿರಂತರವೂ ಸ್ವತಂತ್ರರಾದ ಆತ್ಮರು) ಮತ್ತು ಮುಕ್ತಾತ್ಮರ (ಮೋಕ್ಷವನ್ನು ಪಡೆದ ಆತ್ಮರು) ಅಪ್ರತಿಮ ಪ್ರಭುವಾಗಿದ್ದರೂ ಸಹ, ಶ್ರೀಮನ್ ನಾರಾಯಣನು ತನ್ನ ಒಂದು ಸಂಕಟವನ್ನು ತೊಡೆದುಹಾಕಲು ಬಯಸಿದನು.

ಆತನ ಸಂಕಟವು ಬದ್ಧಾತ್ಮರು ಈ ಭೌತಿಕ ಪ್ರಪಂಚದಲ್ಲಿ ಕಷ್ಟಪಡುವುದರಿಂದ ಉಂಟಾದುದು. ಆತನು ಪ್ರತಿಯೊಬ್ಬರ ಪರಮಪ್ರಧಾನ ತಂದೆಯಾದ್ದರಿಂದ, ಭೌತಿಕ ಪ್ರಪಂಚದಲ್ಲಿ ಜನನ ಮತ್ತು ಮರಣಗಳ ಚಕ್ರದಲ್ಲಿ ಸಿಲುಕಿಕೊಂಡಿರುವ ತನ್ನ ಮಕ್ಕಳ ಕಷ್ಟವನ್ನು ಆತನಿಂದ ಸಹಿಸಿಕೊಳ್ಳಲಾಗಲಿಲ್ಲ. ಯಾರಾದರೂ ಪ್ರಶ್ನಿಸಬಹುದು – ಸರ್ವೋಚ್ಛನಾದ ದೇವನಿಗೆ ಸಂಕಟ/ದುಃಖ ಇರುವುದುಂಟೇ ಎಂದು – ಏಕೆಂದರೆ ಆತನು ಸತ್ಯ ಕಾಮ (ತನ್ನ ಎಲ್ಲ ಬಯಕೆಗಳನ್ನೂ ಈಡೇರಿಸಿಕೊಳ್ಳಬಲ್ಲವನು) ಮತ್ತು ಸತ್ಯ ಸಂಕಲ್ಪ (ಏನನ್ನಾದರೂ ಸಾಧಿಸಬಲ್ಲವನು). ನಮ್ಮ ಆಚಾರ್ಯರುಗಳು ವಿವರಿಸಿರುವುದೇನೆಂದರೆ ಕಷ್ಟಪಡುತ್ತಿರುವ ಜೀವಾತ್ಮರಿಗಾಗಿ ಸಂಕಟವನ್ನು ಅನುಭವಿಸುವುದೂ ಆತನ ಒಂದು ಕಲ್ಯಾಣ ಗುಣ. ಹೇಗೆ ಒಬ್ಬ ಸರ್ವಶಕ್ತನಾದ ತಂದೆಯು ತನ್ನ ಒಬ್ಬ ಮಗನೊಡನೆ ಸಂತೋಷವಾಗಿ ಜೀವಿಸುತ್ತಿದ್ದರೂ ಸಹ, ತನ್ನಿಂದ ದೂರವಾಗಿರುವ ತನ್ನ ಇನ್ನೊಬ್ಬ ಮಗನು ಕಷ್ಟಪಡುತ್ತಿರುವ ಬಗ್ಗೆ ಚಿಂತಿಸುತ್ತಿರುತ್ತಾನೋ, ಹಾಗೆಯೇ ಭಗವಂತನೂ ಸರ್ವಶಕ್ತನಾಗಿದ್ದರೂ ಕೂಡ, ಸಂಸಾರದಲ್ಲಿ ಅನಾದಿಕಾಲದಿಂದ ಅಜ್ಞಾನದಿಂದ ಆವೃತರಾಗಿ, ನಿಜವಾದ ಜ್ಞಾನದ ಅಭಾವದಿಂದಾಗಿ ಪಾಡುಪಡುತ್ತಿರುವ ಜೀವಾತ್ಮರುಗಳನ್ನು ಕಂಡು ಸಂಕಟವನ್ನು ಅನುಭವಿಸುತ್ತಾನೆ.

ಈ ರೀತಿಯಾಗಿ ಕಷ್ಟಪಡುತ್ತಿರುವ ಜೀವಾತ್ಮರುಗಳ ಉದ್ಧಾರವು ಸುಗಮವಾಗಲು, ಆತನು ಸೃಷ್ಟಿಯ ಸಮಯದಲ್ಲಿ ಜೀವಾತ್ಮರಿಗೆ ಶರೀರ ಮತ್ತು ಇಂದ್ರಿಯಗಳನ್ನು ನೀಡುತ್ತಾನೆ, ಶಾಸ್ತ್ರಗಳನ್ನು ತಿಳಿಯಪಡಿಸುತ್ತಾನೆ, ಸ್ವತಃ ಈ ಭೌತಿಕ ಪ್ರಪಂಚದಲ್ಲಿ ಶ್ರೀ ರಾಮ, ಕೃಷ್ಣ, ಇತ್ಯಾದಿ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಇವೆಲ್ಲವುಗಳ ನಂತರವೂ, ಜೀವಾತ್ಮರುಗಳು ನಿಜವಾದ ಜ್ಞಾನವನ್ನು ವಾಸ್ತವಿಕವಾಗಿ ಅರಿಯಲು ಮತ್ತು ಆತನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ಇಚ್ಛಿಸುವುದಿಲ್ಲ. ಹೇಗೆ ಒಬ್ಬ ಬೇಡನು ಒಂದು ಜಿಂಕೆಯನ್ನು ಹಿಡಿಯಲು ಇನ್ನೊಂದು ಪಳಗಿದ ಜಿಂಕೆಯನ್ನು ಬಳಸುತ್ತಾನೋ ಹಾಗೆ ಶ್ರೀಮನ್ ನಾರಾಯಣನು ಜೀವಾತ್ಮರುಗಳನ್ನು ಈ ಭೌತಿಕ ಪ್ರಪಂಚದಲ್ಲಿರುವ ಇತರ ಜೀವಾತ್ಮರುಗಳ ಮೂಲಕ ಉದ್ಧರಿಸಲು ನಿರ್ಧರಿಸುತ್ತಾನೆ. ಹೀಗೆ ಆತನು ಕೆಲವರನ್ನು ಆರಿಸಿಕೊಳ್ಳುತ್ತಾನೆ, ಅವರಿಗೆ ದಿವ್ಯ ಜ್ಞಾನವನ್ನು ಅನುಗ್ರಹಿಸುತ್ತಾನೆ ಮತ್ತು ಅವರನ್ನು ಆಳ್ವಾರುಗಳಾಗಿ ಮಾಡುತ್ತಾನೆ. ಅಳ್ವಾರ್ ಎಂದರೆ ಭಗವದ್ವಿಷಯಗಳಲ್ಲಿ ತನ್ಮಯರಾಗಿರುವವರು ಎಂದರ್ಥ. ಈ ಆಳ್ವಾರುಗಳು, ವೇದ ವ್ಯಾಸರು ಶ್ರೀ ಭಾಗವತದಲ್ಲಿ ಭವಿಷ್ಯ ನುಡಿದಿರುವಂತೆ, ಭಾರತ ದೇಶದ ದಕ್ಷಿಣ ಭಾಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಅವತರಿಸಿದರು. ನಾವು ಹಿಂದಿನ ಲೇಖನಗಳಲ್ಲಿ ಆಳ್ವಾರುಗಳ ಬಗ್ಗೆ ಈಗಾಗಲೇ ನೋಡಿದ್ದೇವೆ.

ಆಳ್ವಾರುಗಳು ಶ್ರೀಮನ್ ನಾರಾಯಣನನ್ನು ವೈಭವೀಕರಿಸುವ ಅನೇಕ ಪಾಶುರಗಳನ್ನು ಸಂಯೋಜಿಸಿದರು. ಈ ಪಾಶುರಗಳು ಒಟ್ಟು ಸರಿಸುಮಾರು ೪೦೦೦ ಪದ್ಯಗಳು ಮತ್ತು ಅದರಿಂದಾಗಿ ೪೦೦೦ ದಿವ್ಯಪ್ರಬಂಧಗಳೆಂದು ಹೆಸರಾಗಿವೆ. ದಿವ್ಯ ಎಂದರೆ ದೈವಿಕವಾದದ್ದು ಮತ್ತು ಪ್ರಬಂಧ ಎಂದರೆ ಸಾಹಿತ್ಯ (ಸ್ವತಃ ಭಗವಂತನನ್ನೇ ಗ್ರಹಿಸುವಂತಹುದು). ಭಗವಂತನನ್ನು ಅರ್ಚಾ ರೂಪದಲ್ಲಿ ಹೊಂದಿರುವ ಆಳ್ವಾರುಗಳು ವೈಭವೀಕರಿಸಿದ ವಿವಿಧ ಕ್ಷೇತ್ರಗಳು ದಿವ್ಯದೇಶಗಳೆಂದು ಹೆಸರಾಗಿವೆ. ದಿವ್ಯದೇಶಗಳು ಒಟ್ಟು ೧೦೮ ಇರುವುದಾಗಿ ಹೇಳಲಾಗಿದೆ. ಅವುಗಳಲ್ಲಿ ೧೦೬ ಭಾರತ ದೇಶದ ವಿವಿಧ ಪ್ರಾಂತ್ಯಗಳಲ್ಲಿವೆ (ನೇಪಾಳವೂ ಸೇರಿ). ಕ್ಷೀರಾಬ್ಧಿಯು ಭೌತಿಕ ಪ್ರಪಂಚದಲ್ಲಿಯೇ ಸ್ಥಾಪಿತವಾಗಿದ್ದರೂ ನಮಗೆ ತಲುಪಲಾಗದಷ್ಟು ಬಹು ದೂರದಲ್ಲಿದೆ. ಪರಮಪದವು ಆಧ್ಯಾತ್ಮಿಕ ಪ್ರಪಂಚದಲ್ಲಿದ್ದು ಮುಕ್ತಿ ಪಡೆದ ನಂತರ ತಲುಪಬಹುದಾಗಿದೆ. ಶ್ರೀರಂಗಮ್ ಪ್ರಾಥಮಿಕ ದಿವ್ಯದೇಶವೆಂದು ಪರಿಗಣಿಸಲ್ಪಟ್ಟಿದೆ ಮತ್ತು ತಿರುಮಲ, ಕಾಂಚೀಪುರಮ್, ತಿರುವಲ್ಲಿಕ್ಕೇಣಿ, ಅಳ್ವಾರ್ ತಿರುನಗರಿ, ಇತ್ಯಾದಿಗಳು ಕೆಲವು ಪ್ರಮುಖ ದಿವ್ಯದೇಶಗಳಾಗಿವೆ. ಭಗವಂತನು ಇದು ಅಭಿವ್ಯಕ್ತಿಗಳನ್ನು ಹೊಂದಿರುವನೆಂದು ಹೇಳಲಾಗಿದೆ – ಸರ್ವೋಚ್ಚ ಅಧಿಪತಿಯಾಗಿ ಪರಮಪದದಲ್ಲಿ, ವ್ಯೂಹ ರೂಪದಲ್ಲಿ ಕ್ಷೀರಾಬ್ಧಿಯಲ್ಲಿ, ಅಂತರ್ಯಾಮಿಯಾಗಿ (ಜೀವಿಗಳಲ್ಲಿ ವಾಸಿಸುವ ಪರಮಾತ್ಮನ ರೂಪದಲ್ಲಿ), ವಿಭವ (ಶ್ರೀ ರಾಮ, ಕೃಷ್ಣ, ಇತ್ಯಾದಿ ಅವತಾರಗಳಲ್ಲಿ) ಮತ್ತು ಕಡೆಯದಾಗಿ ಅರ್ಚಾ ರೂಪದಲ್ಲಿ. ಈ ಎಲ್ಲ ರೂಪಗಳಲ್ಲಿ ಪ್ರತಿಯೊಬ್ಬರೂ ಎಲ್ಲ ಸಮಯದಲ್ಲಿಯೂ ಸಮೀಪಿಸಬಹುದಾದ ಅರ್ಚಾ ರೂಪವು ಅತ್ಯಂತ ಉದಾತ್ತವಾದದ್ದೆಂದು ಪರಿಗಣಿಸಲ್ಪಟ್ಟಿದೆ. ನಮ್ಮ ಪೂರ್ವಾಚಾರ್ಯರುಗಳು ದಿವ್ಯದೇಶಗಳನ್ನು ತಮ್ಮ ಪ್ರಾಣವನ್ನಾಗಿ ನೋಡಿಕೊಂಡಿದ್ದರು ಮತ್ತು ತಮ್ಮ ಜೀವನವನ್ನು ಆ ದಿವ್ಯದೇಶಗಳ ಭಗವಂತ ಮತ್ತು ಭಾಗವತರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅಧಿಕ ಮಾಹಿತಿಗಾಗಿ   ಇಲ್ಲಿಗೆ ಭೇಟಿ ನೀಡಿ: http://koyil.org.

ದಿವ್ಯಪ್ರಬಂಧಗಳು ವೇದ/ವೇದಾಂತಗಳ ಸಾರವನ್ನು ಸರಳವಾದ ಮತ್ತು ಪರಿಶುದ್ಧವಾದ ತಮಿಳಿನಲ್ಲಿ ತೆರೆದಿಟ್ಟವು. ಈ ದಿವ್ಯಪ್ರಬಂಧಗಳ ಪೂರ್ಣ ಉದ್ದೇಶವು ನಿಜವಾದ ಜ್ಞಾನವನ್ನು ಪ್ರಸರಿಸುವುದರ ಮೂಲಕ ಜೀವಾತ್ಮರುಗಳನ್ನು ಉದ್ಧರಿಸುವುದಾಗಿತ್ತು. ಆಳ್ವಾರುಗಳ ಕಾಲದ ಅನೇಕ ಶತಮಾನಗಳ ನಂತರ ನಾಥಮುನಿಗಳು ಮೊದಲ್ಗೊಂಡು, ಮಧ್ಯದಲ್ಲಿ ಶ್ರೀ ರಾಮಾನುಜರು ಮತ್ತು ಕಡೆಯದಾಗಿ ಮಾಮುನಿಗಳು, ಹೀಗೆ ಅನೇಕ ಆಚಾರ್ಯರುಗಳು ಅವತರಿಸಿದರು ಮತ್ತು ಆಳ್ವಾರುಗಳ ದಿವ್ಯಸಂದೇಶವನ್ನು ಉಪದೇಶಿಸಿದರು. ಕಡಿಮೆ ಜ್ಞಾನವುಳ್ಳ ಜನರು ಆಳ್ವಾರುಗಳ ಪಾಶುರಗಳನ್ನು ಸರಳವಾದ ತಮಿಳು ಹಾಡುಗಳೆಂದು ಪರಿಗಣಿಸಿದರೆ, ಅತ್ಯಂತ ಜ್ಞಾನಿಗಳಾದ ಆಚಾರ್ಯರುಗಳು, ಈ ಪಾಶುರಗಳು ಶ್ರೀಮನ್ ನಾರಾಯಣನೇ ಉಪಾಯ (ಈ ಭೌತಿಕ ಪ್ರಪಂಚದಿಂದ ಉದ್ಧರಿಸಲು) ಮತ್ತು ಉಪೇಯ (ಆಧ್ಯಾತ್ಮಿಕ ಪ್ರಪಂಚದಲ್ಲಿ, ನಿರಂತರವಾಗಿ ಶ್ರೀಮನ್ ನಾರಾಯಣನ ಸೇವೆ ಮಾಡುತ್ತಾ ತನ್ನ ನಿಜ ಸ್ವಭಾವದಲ್ಲಿ ಸ್ಥಾಪಿತವಾಗಿರುವುದು) , ಎಂಬ ಅಂತಿಮ ತತ್ತ್ವವನ್ನು ಈ ಪಾಶುರಗಳು ತೆರೆದಿಟ್ಟಿರುವುದಾಗಿ ಪ್ರತಿಪಾದಿಸಿದರು. ನಮ್ಮ ಪೂರ್ವಾಚಾರ್ಯರುಗಳು ದಿವ್ಯಪ್ರಬಂಧಗಳನ್ನು ಸಂಪೂರ್ಣವಾಗಿ ಆಸ್ವಾದಿಸಿದರು ಮತ್ತು ತಮ್ಮ ಜೀವನವನ್ನು, ಈ ಪಾಶುರಗಳನ್ನು ಅರಿಯುವುದಕ್ಕಾಗಿ, ಬೋಧಿಸುವುದಕ್ಕಾಗಿ ಮತ್ತು ಅದರಂತೆ ಜೀವಿಸುವುದಕ್ಕಾಗಿ, ಕೇಂದ್ರೀಕರಿಸಿದರು.

ನಮ್ಆಳ್ವಾರ್ ಎರಡೂ ಪಕ್ಕದಲ್ಲಿ ಮಧುರಕವಿ ಅಳ್ವಾರ್ ಮತ್ತು ನಾಥಮುನಿಗಳೊಂದಿಗೆ

ಆಳ್ವಾರುಗಳ ನಂತರ, ಇತಿಹಾಸದಲ್ಲಿ ದಿವ್ಯಪ್ರಬಂಧಗಳು ಕಳೆದುಹೋದ ಒಂದು ಅಂಧಕಾರದ ಕಾಲವಿತ್ತು. ಅಂತಿಮವಾಗಿ, ನಾಥಮುನಿಗಳು ಬಹು ಕಷ್ಟದಿಂದ  ನಮ್ಆಳ್ವಾರ್ರ ಜನ್ಮಸ್ಥಳವಾದ ಅಳ್ವಾರ್ ತಿರುನಗರಿಯನ್ನು ಪತ್ತೆಹಚ್ಚಿದರು ಮತ್ತು  ನಮ್ಆಳ್ವಾರ್ರ ದಿವ್ಯ ಕೃಪೆಯಿಂದಾಗಿ ಅವರು ಎಲ್ಲ ೪೦೦೦ ದಿವ್ಯಪ್ರಬಂಧಗಳನ್ನು ಅವುಗಳ ಅರ್ಥದೊಂದಿಗೆ ಕಲಿತುಕೊಂಡರು. ನಾಥಮುನಿಗಳು ೪೦೦೦ ದಿವ್ಯಪ್ರಬಂಧಗಳನ್ನು ನಾವು ಈ ದಿನ ಕಾಣುವಂತೆ ೪ ಭಾಗಗಳಾಗಿ ವಿಂಗಡಿಸಿದರು, ಅದನ್ನು ತಮ್ಮ ಶಿಷ್ಯರಿಗೆ ಬೋಧಿಸಿದರು ಮತ್ತು ಈ ದಿವ್ಯಪ್ರಬಂಧಗಳ ಪ್ರಾಮುಖ್ಯತೆಯನ್ನು ಪ್ರಕಟಪಡಿಸಿದರು. ಅವರು ನಮ್ಮಾಳ್ವಾರರ ಬಗ್ಗೆ ದೃಢವಾದ ಭಕ್ತಿಯನ್ನು ತೋರಿಸಿದ ಮಧುರಕವಿ ಆಳ್ವಾರರನ್ನು ಗೌರವಿಸುವ ಸಲುವಾಗಿ, ಕಣ್ಣಿನುಣ್ ಚಿರು ತಾಮ್ಬು ಪಾಶುರವನ್ನು೪೦೦೦ ದಿವ್ಯಪ್ರಬಂಧಗಳಲ್ಲಿ ಸೇರಿಸಿದರು


ಶ್ರೀ ರಾಮಾನುಜರು

ಆದಿಶೇಷನ ಅವತಾರವೆಂದು ಪರಿಗಣಿಸಲಾದ ಮತ್ತು ಒಂದು ಶತಮಾನದ ನಂತರ ಜನಿಸಿದ ಶ್ರೀ ರಾಮಾನುಜರು (ಎಂಪೆರುಮಾನಾರ್) ಯಾಮುನಾಚಾರ್ಯರ ಅಪೇಕ್ಷೆಯಂತೆ ಹಲವು ಆಚಾರ್ಯರುಗಳ ಕೆಳಗೆ ಅಧ್ಯಯನ ಮಾಡುವ ಮೂಲಕ ಈ ದಿವ್ಯಪ್ರಬಂಧಗಳನ್ನು ಪಡೆದರು. ಅವರು ನಂತರ ಆಳ್ವಾರುಗಳ ವೈಭವಗಳನ್ನು ಮತ್ತು ಅವರ ಕೃತಿಗಳನ್ನು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಸರಿಸಿದರು, ಮತ್ತು ಈ ಶ್ರೀವೈಷ್ಣವ ಸಂಪ್ರದಾಯದ ಪ್ರಸಾರವನ್ನು ಅತ್ಯಂತ ಸುಗಮವಾಗಿಸಿದರು. ಅವರ ಈ ಮಹತ್ವದ ಕೊಡುಗೆಯಿಂದಾಗಿ ಈ ಸಂಪ್ರದಾಯವು ಶ್ರೀ ರಾಮಾನುಜ ದರ್ಶನವೆಂದು ಸಾಕ್ಷಾತ್ ಶ್ರೀರಂಗನಾಥನಿಂದಲೇ ಹೆಸರಿಸಲ್ಪಟ್ಟಿತು. ಇದಲ್ಲದೆ, ಅವರ ಶ್ರೇಷ್ಠತೆಯಿಂದಾಗಿ ಶ್ರೀ ರಾಮಾನುಜರನ್ನು ವೈಭವೀಕರಿಸಿ ತಿರುವರಂಗತ್ತು ಅಮುದನಾರ್ ಅವರು ರಚಿಸಿದ ರಾಮಾನುಜ ನೂಟ್ರನ್ದಾದಿಯು ೪೦೦೦ ದಿವ್ಯಪ್ರಬಂಧಗಳಲ್ಲಿ ಆಚಾರ್ಯರುಗಳಿಂದ ಸೇರಿಸಲ್ಪಟ್ಟಿತು. ಈ ರಾಮಾನುಜ ನೂಟ್ರನ್ದಾದಿಯು ಪ್ರಪನ್ನ ಗಾಯತ್ರೀ ಎಂದು ಶ್ಲಾಘಿಸಲ್ಪಟ್ಟಿದೆ – ಎಲ್ಲಾ ಪ್ರಪನ್ನರುಗಳೂ (ಶರಣಾಗತರಾದವರು) ಪ್ರತಿದಿನ ಕಡ್ಡಾಯವಾಗಿ ಪಠಿಸಬೇಕಾದುದು, ಹೇಗೆ ಬ್ರಾಹ್ಮಣರುಗಳು ಪ್ರತಿದಿನವೂ ಗಾಯತ್ರಿ ಮಂತ್ರವನ್ನು ಪಠಿಸುತ್ತಾರೋ ಹಾಗೆ.

 

ನಂಪಿಳ್ಳೈ ಕಾಲಕ್ಷೇಪ ಗೋಷ್ಠಿ

ಈ ಸಂದರ್ಭದಲ್ಲಿ ನಂಪಿಳ್ಳೈ ಒಬ್ಬ ಪ್ರಮುಖ ಆಚಾರ್ಯರು ಎಂಬುದನ್ನು ಉಲ್ಲೇಖಿಸಬೇಕು (ಪರಂಪರೆಯಲ್ಲಿ ಎಂಪೆರುಮಾನಾರ್, ಎಂಬಾರ್, ಭಟ್ಟರ್ ಮತ್ತು ನಂಜೀಯರ್ ನಂತರ ಬಂದವರು). ಅವರು ಶ್ರೀರಂಗಮ್ ನಲ್ಲಿ ವಾಸಿಸುತ್ತಿದ್ದರು ಮತ್ತು ತಮ್ಮ ಕಾಲದಲ್ಲಿ ಶ್ರೀವೈಷ್ಣವ ಸಂಪ್ರದಾಯದ ಮುಖ್ಯಸ್ಥರಾಗಿದ್ದರು. ಅವರ ಕಾಲದಲ್ಲಿಯೇ ಶ್ರೀರಂಗಮ್ ನಲ್ಲಿ ೪೦೦೦ ದಿವ್ಯಪ್ರಬಂಧಗಳ ಅರ್ಥಗಳಿಗೆ ಬಹು ಪ್ರಾಮುಖ್ಯತೆ ದೊರಕಿತು. ಅವರು ಪೆರಿಯ ಪೆರುಮಾಳ್ರ (ಶ್ರೀ ರಂಗನಾಥ) ಗರ್ಭಗುಡಿಯ ಸಮೀಪದಲ್ಲಿಯೇ ಪ್ರತಿದಿನವೂ ಉಪನ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಕ್ಷಾತ್ ಪೆರಿಯ ಪೆರುಮಾಳ್ ಕೂಡ ಅವರ ಉಪನ್ಯಾಸವನ್ನು ಕೇಳಲು ಎದ್ದು ನಿಂತು ಕಿಟಕಿಯ ಮೂಲಕ ನೋಡುತ್ತಿದ್ದರೆಂದು ವಿವರಿಸಲ್ಪಟ್ಟಿದೆ. ನಂಪಿಳ್ಳೈ ಅವರ ಶಿಷ್ಯರುಗಳೂ ಸಹ ದಿವ್ಯಪ್ರಬಂಧಗಳ ಅರ್ಥಗಳನ್ನು ಪ್ರಸಾರ ಮಾಡುವುದರಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿದರು. ನಂಪಿಳ್ಳೈ ಅವರ ಶಿಷ್ಯರಲ್ಲೊಬ್ಬರಾದ ವ್ಯಾಖ್ಯಾನ ಚಕ್ರವರ್ತಿ ಎಂದು ಹೆಸರಾದ ಪೆರಿಯವಾಚ್ಚಾನ್ ಪಿಳ್ಳೈ ಅವರು ಎಲ್ಲ ದಿವ್ಯಪ್ರಬಂಧಗಳಿಗೂ ವ್ಯಾಖ್ಯಾನಗಳನ್ನು ಬರೆದರು ಮತ್ತು ಅವರ ಕೊಡುಗೆಯನ್ನು ನಮ್ಮ ಆಚಾರ್ಯರುಗಳು ಬಹುವಾಗಿ ಕೊಂಡಾಡಿದ್ದಾರೆ. ನಂಪಿಳ್ಳೈ ಅವರ ಇನ್ನೊಬ್ಬರು ಶಿಷ್ಯರಾದ ವಡಕ್ಕು ತಿರುವೀದಿ ಪಿಳ್ಳೈ ಅವರು ತಿರುವಾಯ್ಮೊಳಿ ಕುರಿತು ನಂಪಿಳ್ಳೈ ಅವರ ಉಪನ್ಯಾಸಗಳನ್ನು ದಾಖಲಿಸಿದ್ದಾರೆ ಮತ್ತು ಈ ಗ್ರಂಥವು ಈಡು ೩೬೦೦೦ ಪಡಿ ಎಂದು ಕರೆಯಲ್ಪಟ್ಟಿದೆ (ತಿರುವಾಯ್ಮೊಳಿ ಕುರಿತು ಅತ್ಯಂತ ಮಾನ್ಯತೆ ಪಡೆದ ವ್ಯಾಖ್ಯಾನ).


ಪಿಳ್ಳೈ ಲೋಕಾಚಾರ್ಯರ್ ಕಾಲಕ್ಷೇಪ ಗೋಷ್ಠಿ

ನಂಪಿಳ್ಳೈ ಅವರ ಕಾಲದ ನಂತರ ಪಿಳ್ಳೈ ಲೋಕಾಚಾರ್ಯರು ಈ ಸತ್ ಸಂಪ್ರದಾಯವನ್ನು ಮುನ್ನಡೆಸಿದರು ಮತ್ತು ದಿವ್ಯಪ್ರಬಂಧಗಳ ಅತ್ಯಂತ ರಹಸ್ಯವಾದ ಎಲ್ಲ ವಿಷಯಗಳನ್ನೂ ತಮ್ಮ ರಹಸ್ಯ ಗ್ರಂಥದಲ್ಲಿ ದಾಖಲಿಸಿದರು. ಈ ರಹಸ್ಯ ವಿಷಯಗಳು ಅನೇಕ ಆಚಾರ್ಯರುಗಳಿಂದ ವಿವಿಧ ಕಾಲಗಳಲ್ಲಿ ವಿವಿಧ ಗ್ರಂಥಗಳಲ್ಲಿ ವಿವರಿಸಲ್ಪಟ್ಟಿವೆ. ಪಿಳ್ಳೈ ಲೋಕಾಚಾರ್ಯರು ಅವುಗಳನ್ನು ಸಂಗ್ರಹಿಸಿದರು ಮತ್ತು ತಮ್ಮ ೧೮ ಪ್ರಾಥಮಿಕ ಕೃತಿಗಳಲ್ಲಿ ಅವುಗಳನ್ನು ದಾಖಲಿಸಿದರು. ಆದರೆ ಅವರ ಜೀವನದ ಅಂತ್ಯಕಾಲದಲ್ಲಿ ಶ್ರೀರಂಗಂನಲ್ಲಿ ಮೊಘಲ್ ಆಕ್ರಮಣಕಾರರ ರೂಪದಲ್ಲಿ ದುರಂತವು ಸಂಭವಿಸಿ ಅಲ್ಲಿಯ ಎಲ್ಲವೂ ನಾಶವಾಯಿತು. ಪಿಳ್ಳೈ ಲೋಕಾಚಾರ್ಯರು ನಂಪೆರುಮಾಳರ (ಶ್ರೀರಂಗನಾಥ – ಉತ್ಸವರ್) ಸುರಕ್ಷಿತ ಪ್ರಯಾಣಕ್ಕೆ ಏರ್ಪಾಡು ಮಾಡಿದರು ಮತ್ತು ನಂಪೆರುಮಾಳರ ಜೊತೆ ಆಕ್ರಮಣಕಾರರಿಂದ ತಪ್ಪಿಸಿಕೊಂಡರು. ಪ್ರಯಾಣದ ಸ್ವಲ್ಪ ದೂರದ್ಲಲಿಯೇ, ಆ ಇಳವಯಸ್ಸಿನಲ್ಲಿ ಕಾಡಿನಲ್ಲಿ ಕಷ್ಟಕರವಾದ ಆ ಪ್ರಯಾಣದಿಂದಾಗಿ ಅವರು ಪರಮಪದವನ್ನು ಸೇರಿದರು. ಇದಾದ ನಂತರ ಇಡೀ ಶ್ರೀವೈಷ್ಣವ ಸಮುದಾಯಕ್ಕೆ ಕಷ್ಟದಾಯಕವಾದ ಒಂದು ದೀರ್ಘ ಕಾಲವು ಬಂದಿತು. ಕೆಲವು ದಶಕಗಳ ನಂತರ, ಆಕ್ರಮಣಕಾರರನ್ನು ಹೊರಗಟ್ಟಿ ಶಾಂತಿಯು ನೆಲೆಸಿದ ಮೇಲೆ, ಪರಿಣಾಮವಾಗಿ ನಂಪೆರುಮಾಳರು ಶ್ರೀರಂಗಕ್ಕೆ ಹಿಂದಿರುಗಿದರು.


ಮಾಮುನಿಗಳ್ ಕಾಲಕ್ಷೇಪ ಗೋಷ್ಠಿ – ಶ್ರೀ ಶೈಲೇಶ ದಯಾಪಾತ್ರಮ್ ತನಿಯನ್ ಸಲ್ಲಿಕೆ

ಅಂತಿಮವಾಗಿ, ಸ್ವತಃ ಶ್ರೀ ರಾಮಾನುಜರ ಅವತಾರವೆಂದು ಪರಿಗಣಿಸಲಾದ, ಮಣವಾಳ ಮಾಮುನಿಗಳು ಆಳ್ವಾರ್ ತಿರುನಗರಿಯಲ್ಲಿ ಜನಿಸಿದರು. ಅವರು ತಿರುವಾಯ್ಮೊಳಿ ಪಿಳ್ಳೈ ಅವರ ಶಿಷ್ಯರಲ್ಲೊಬ್ಬರಾದರು, ಮತ್ತು ವೇದ, ವೇದಾಂತ ಮತ್ತು ದಿವ್ಯಪ್ರಬಂಧಗಳ ಎಲ್ಲಾ ರಹಸ್ಯವಾದ ಅರ್ಥಗಳನ್ನೂ ಸ್ವತಃ ತಮ್ಮ ತಂದೆಯವರಿಂದ ಮತ್ತು ತಿರುವಾಯ್ಮೊಳಿ ಪಿಳ್ಳೈ ಅವರಿಂದ ಕಲಿತರು. ತಿರುವಾಯ್ಮೊಳಿ ಪಿಳ್ಳೈ (ಅವರ ಆಚಾರ್ಯರು) ಅವರ ಆದೇಶದ ಮೇರೆಗೆ, ಅವರು ಶ್ರೀರಂಗಮ್ ತಲುಪಿದರು ಮತ್ತು ತಮ್ಮ ಉಳಿದ ಜೀವನವನ್ನು ಈ ಸತ್ ಸಂಪ್ರದಾಯವನ್ನು ಅದರ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳಿಸಲು ಮುಡಿಪಾಗಿಟ್ಟರು. ಅವರು ವೈಯಕ್ತಿಕವಾಗಿ ಎಲ್ಲಾ ಕಳೆದುಹೋದ ಸಾಹಿತ್ಯವನ್ನು ಶೋಧಿಸಿದರು, ಅಭ್ಯಸಿಸಿದರು, ಬಹು ಕಷ್ಟದಿಂದ ಅವುಗಳನ್ನು ತಾಳೆಗರಿಗಳಲ್ಲಿ ದಾಖಲಿಸಿದರು ಮತ್ತು ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಸಂರಕ್ಷಿಸಿದರು. ಸೂಕ್ತವಾಗಿ, ಅವರ ಅಸಾಧಾರಣ ಗುಣಗಳನ್ನು ಮತ್ತು ಪ್ರಯತ್ನಗಳನ್ನು ಮೆಚ್ಚಿ, ಸ್ವತಃ ಶ್ರೀ ರಂಗನಾಥನೇ ಒಂದು ಪೂರ್ಣ ವರ್ಷ ಕಾಲ ಮಾಮುನಿಗಳ ಕಾಲಕ್ಷೇಪವನ್ನು ಆಲಿಸುತ್ತಾನೆ ಮತ್ತು ಆ ಉಪನ್ಯಾಸ ಸರಣಿಯ ಅಂತ್ಯದಲ್ಲಿ, ತಾನೇ ಸ್ವತಃ ಒಬ್ಬ ಚಿಕ್ಕ ಬಾಲಕನಾಗಿ ಕಾಣಿಸಿಕೊಳ್ಳುತ್ತಾನೆ ಮತ್ತು ಮಾಮುನಿಗಳನ್ನು ತನ್ನ ಆಚಾರ್ಯರನ್ನಾಗಿ ಸ್ವೀಕರಿಸುತ್ತಾನೆ ಮತ್ತು ತನ್ನ ಅತ್ಯಂತ ಅದ್ಭುತವಾದ ಶ್ರೀಶೈಲೇಶ ದಯಾಪಾತ್ರಂ ತನಿಯನ್ ಅನ್ನು ಸಲ್ಲಿಸುತ್ತಾನೆ. ತರುವಾಯ, ವಿವಿಧ ಪರಂಪರೆಗಳಲ್ಲಿ ಬಂದ ಅನೇಕ ಆಚಾರ್ಯರುಗಳು ಈ ದಿವ್ಯಪ್ರಬಂಧಗಳನ್ನು ಬೋಧಿಸಿದರು ಮತ್ತು ಅದರಂತೆ ಜೀವಿಸಿದರು.

ಹೀಗೆ, ಭಗವಂತನ ಅಪೇಕ್ಷೆಯನ್ನು ಪೂರೈಸುವುದಕ್ಕಾಗಿ ಜೀವಾತ್ಮರುಗಳ ಉದ್ಧಾರದ ಮೇಲೆ ಗಮನವಿರಿಸಿದ ಆಳ್ವಾರುಗಳ ದಿವ್ಯಪ್ರಬಂಧಗಳು ನಮ್ಮ ಪೂರ್ವಾಚಾರ್ಯರುಗಳ ಮೂಲಕ ಇತಿಹಾಸದಲ್ಲಿ ಸಂರಕ್ಷಿಸಲ್ಪಟ್ಟಿವೆ. ಎಲ್ಲಾ ಶ್ರೀವೈಷ್ಣವರು ದಿವ್ಯಪ್ರಬಂಧಗಳನ್ನು ಕಲಿತು, ಅವುಗಳ ಸರಿಯಾದ ಅರ್ಥಗಳನ್ನು ತಿಳಿದುಕೊಂಡು, ಅದರಂತೆ ಬಾಳಬೇಕೆಂದು ಒತ್ತಿ ಹೇಳಲಾಗಿದೆ.

ಆಳ್ವಾರುಗಳು ಮತ್ತು ಅವರ ದಿವ್ಯಪ್ರಬಂಧಗಳ ಸಿಂಧುತ್ವ ಮತ್ತು ವೈಭವಗಳನ್ನು ತಿಳಿದುಕೊಳ್ಳುವುದು ಬಹು ಉಪಯುಕ್ತವಾಗಿದೆ. ಇದನ್ನು ವಿವರವಾಗಿ ತಿಳಿಸುವ ಈ ಕೆಳಗಿನ ಲೇಖನಗಳನ್ನು ಓದಿರಿ:

 

ಭಾಗ ೧ – http://ponnadi.blogspot.in/2013/02/dhivya-prabhandha-pramanya-samarthanam-1.html
ಭಾಗ ೨ – http://ponnadi.blogspot.com/2013/02/dhivya-prabhandha-pramanya-samarthanam-2.html

ಅನೇಕ ಭಾಷೆಗಳಲ್ಲಿ ವಿವಿಧ ಪ್ರಬಂಧಗಳ ಅನುವಾದಕ್ಕಾಗಿ ನಮ್ಮ ದಿವ್ಯಪ್ರಬಂಧಮ್ ಜಾಲ ಮುಖಪುಟವನ್ನು ಇಲ್ಲಿ ಸಂದರ್ಶಿಸಿ:
http://divyaprabandham.koyil.org/

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://ponnadi.blogspot.com/2015/12/simple-guide-to-srivaishnavam-dhivya-prabandham-dhesam.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

 

Advertisements

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಆಚಾರ್ಯ-ಶಿಷ್ಯ ಸಂಬಂಧ

ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು.

ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು.

ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ ಹೀಗಿದೆ: ಭಗವಂತನು ಸರ್ವಸ್ವತಂತ್ರನು. ಅವನು ಎಲ್ಲಾ ಜೀವರುಗಳ ಮೇಲೆಯೂ ತನ್ನ ಕೃಪೆಯನ್ನು ವರ್ಷಿಸುತ್ತಾನೆ. ಹಾಗೆಯೇ ಆ ಜೀವರುಗಳ ಕರ್ಮಗಳಿಗೆ ತಕ್ಕ ಫಲವನ್ನೂ ನೀಡುತ್ತಾನೆ. ಇಲ್ಲಿಯೇ ಆಚಾರ್ಯನ ಮುಖ್ಯತ್ವವಿರುವುದು. ಭಗವಂತನು (ಎಲ್ಲರಲ್ಲಿಯೂ ಇರುವ ತನ್ನ ಸತತ ಸುಕೃತಗಳಿಂದ (ಸದ್ಭಾವನೆಗಳಿಂದ)) ದಣಿವಿಲ್ಲದೆ ಎಲ್ಲ ಜೀವರುಗಳಿಗೂ ನಿಜವಾದ ಜ್ಞಾನವನ್ನು ಉಪದೇಶಿಸಿ ಆಯಾ ಜೀವರುಗಳಿಗೆ ಭಗವಂತನನ್ನಡೆಯಲು ಸಹಕರಿಸುವ ಒಬ್ಬ ಸದಾಚಾರ್ಯನನ್ನು ಹೊಂದುವಂತೆ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಈ ಸದಾಚಾರ್ಯನು ಪುರುಷಕಾರಭೂತೆಯಾದ ಶ್ರೀ ಮಹಾಲಕ್ಷ್ಮಿಯಂತೆ ತಾನೂ ಪ್ರಭಾವಶಾಲಿಯಾಗಿದ್ದು, ಈ ಜೀವಾತ್ಮನು ಎಲ್ಲ ಲೌಕಿಕ ಬಂಧಗಳಿಂದಲೂ ಮುಕ್ತನಾಗಿ ಕೇವಲ ಭಗವಂತನ ಕೃಪೆಯನ್ನೇ ಅವಲಂಬಿಸಿರುವನೆಂಬುದನ್ನು ಭಗವಂತನಿಗೆ ಮನಗಾಣಿಸುತ್ತಾನೆ.

ಭಗವಂತನು ಜೀವಾತ್ಮನ ಕರ್ಮಾನುಸಾರವಾಗಿ ಸಂಸಾರವನ್ನೂ ಕೊಡಬಲ್ಲ, ಮೋಕ್ಷವನ್ನೂ ತರಬಲ್ಲನೆಂಬುದು ಪ್ರಸಿದ್ಧಿ. ಆದರೆ ಆಚಾರ್ಯನಾದವನು ತನ್ನಲ್ಲಿ ಶರಣಾದ ಜೀವರುಗಳಿಗೆ ಎಂದಿಗಾದರೂ ಮೋಕ್ಷವೊಂದನ್ನೇ ತರುವನು. ಇಷ್ಟೇ ಅಲ್ಲದೆ, ಭಗವಂತನಲ್ಲಿ ನೇರವಾಗಿ ಹೋಗುವುದು ಅವನ ಕೈ ಹಿಡಿದು ಕಾರ್ಯ ಸಾಧಿಸುವಂತೆ; ಆಚಾರ್ಯನ ಮೂಲಕ ಅವನನ್ನು ಹೊಂದುವುದು ಅವನ ಪಾದಪದ್ಮಗಳನ್ನು ಹಿಡಿದು ಕಾರ್ಯ ಸಾಧಿಸುವಂತೆ (ಆಚಾರ್ಯರುಗಳೆಲ್ಲರೂ ಅವನ ಶ್ರೀಪಾದ ಸ್ಥಾನೀಯರಾದ್ದರಿಂದ) ಎಂಬುದು ನಮ್ಮ ಪೂರ್ವಾಚಾರ್ಯರುಗಳು ತೋರಿರುವ ಸತ್ಯ. ಭಗವಂತನು ನೇರವಾಗಿ ಜೀವಾತ್ಮರನ್ನು ಅಂಗೀಕರಿಸುವುದು ಅಪರೂಪದ ವಿಷಯ. ಆದರೆ ಒಬ್ಬ ಆಚಾರ್ಯನ ಮೂಲಕ ಜೀವಾತ್ಮರನ್ನು ಅಂಗೀಕರಿಸುವುದು ಸಾಮಾನ್ಯ/ಸೂಕ್ತ ಕ್ರಮವೆಂಬುದಾಗಿ ನಮ್ಮ ಪೂರ್ವಾಚಾರ್ಯರುಗಳೆಲ್ಲ ನಿರೂಪಿಸಿದ್ದಾರೆ.

 

ನಾವಿಲ್ಲಿ ಆಚಾರ್ಯರ ಬಗ್ಗೆ ಮಾತನಾಡುತ್ತಿರುವುದರಿಂದ ನಮ್ಮ ಆಚಾರ್ಯಪರಂಪರೆಯನ್ನು ಇಲ್ಲಿ ಅರಿಯುವುದು/ಸ್ಮರಿಸುವುದು ಸೂಕ್ತವೇ ಆಗಿದೆ. ಇದನ್ನರಿಯುವುದರಿಂದ ನಮಗೆ ಭಗವಂತನಿಂದ ಈವರೆಗೆ ಈ ಅಮೂಲ್ಯವಾದ ಜ್ಞಾನವು ಹೇಗೆ ಹರಿದು ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ನಮ್ಮಲ್ಲಿ ಅನೇಕರಿಗೆ ಈಗಾಗಲೇ ತಿಳಿದಿರಬಹುದು. ಆದರೂ ಇದನ್ನಿಲ್ಲಿ ಹಂಚಿಕೊಳ್ಳುವ ಹಂಬಲ; ಏಕೆಂದರೆ ಈ ಆಚಾರ್ಯಪರಂಪರೆಯಿಲ್ಲದೆ ಹೋಗಿದ್ದರೆ ನಾವೂ ಇತರ ಸಂಸಾರಿಗಳಂತೆಯೇ ಈ ಜಗತ್ತಿನಲ್ಲಿಯೇ ಬಿದ್ದು ಕಷ್ಟಪಡುತ್ತಿದ್ದೆವು.

ಶ್ರೀವೈಷ್ಣವ ಧರ್ಮವು (ಸನಾತನ ಧರ್ಮ) ಒಂದು ಸನಾತನ ಸಂಪ್ರದಾಯ. ಇದನ್ನು ಪೂರ್ವದಲ್ಲಿ ಅನೇಕ ಮಹನೀಯರುಗಳು ಪ್ರಚಾರಪಡಿಸಿದ್ದಾರೆ. ದ್ವಾಪರಯುಗದ ಅಂತ್ಯದಲ್ಲಿ  ದಕ್ಷಿಣ ಭಾರತದ ಹಲವಾರು ಪುಣ್ಯನದೀತೀರಗಳಲ್ಲಿ ಆಳ್ವಾರುಗಳು ಅವತರಿಸತೊಡಗಿದರು. ಕಟ್ಟಕಡೆಯ ಆಳ್ವಾರರು ಕಲಿಯುಗದ ಆರಂಭದಲ್ಲಿ ಅವತರಿಸಿದರು. ಈ ಆಳ್ವಾರುಗಳ ಅವತಾರವಿಷಯವನ್ನು ವ್ಯಾಸರು ಶ್ರೀ ಭಾಗವತದಲ್ಲಿ ಉಲ್ಲೇಖಿಸಿ ಅನೇಕ ನದೀತೀರಗಳಲ್ಲಿ ಶ್ರೀಮನ್ನಾರಾಯಣನ ಪರಮೋನ್ನತ ಭಕ್ತರು ಅವತರಿಸಿ ಭಗವಂತನ ಬಗೆಗಿನ ಜ್ಞಾನವನ್ನು ಜಗತ್ತಿನಲ್ಲಿ ಪಸರಿಸುತ್ತಾರೆಂಬುದಾಗಿ ತೋರಿಕೊಟ್ಟಿದ್ದಾರೆ. ಈ ಆಳ್ವಾರುಗಳು ಒಟ್ಟು ಹತ್ತು ಜನ: ಪೊಯ್ಗೈ ಆಳ್ವಾರ್, ಬೂದತ್ತಾಳ್ವಾರ್, ಪೇಯಾಳ್ವಾರ್, ತಿರುಮಳಿಶೈ ಆಳ್ವಾರ್, ನಮ್ಆಳ್ವಾರ್, ಕುಲಶೇಖರಾಳ್ವಾರ್, ಪೆರಿಯಾಳ್ವಾರ್, ತೊಂಡರಡಿಪ್ಪೊಡಿಯಾಳ್ವಾರ್, ತಿರುಪ್ಪಾಣಾಳ್ವಾರ್ ಮತ್ತು ತಿರುಮಂಗೈಯಾಳ್ವಾರ್. ಆಚಾರ್ಯನಿಷ್ಠರಾದ (ಆಚಾರ್ಯ ಪರತಂತ್ರರಾದ) ಮಧುರಕವಿ ಆಳ್ವಾರ್ ಮತ್ತು ಆಂಡಾಳ್ ಕೂಡ ಆಳ್ವಾರುಗಳ ಪೈಕಿ ಸೇರಿಸಲ್ಪಡುತ್ತಾರೆ (ಆಗ ಆಳ್ವಾರುಗಳ ಸಂಖ್ಯೆ ೧೨). ಆಂಡಾಳ್ ಭೂಮಿದೇವಿಯ ಅವತಾರ. ಮಿಕ್ಕೆಲ್ಲ ಆಳ್ವಾರುಗಳೂ ಭಗವಂತನಿಂದ ಈ ಸಂಸಾರದಲ್ಲಿ ಆಯ್ದುಕೊಳ್ಳಲ್ಪಟ್ಟ ಜೀವಾತ್ಮರುಗಳು. ಆಳ್ವಾರುಗಳಿಗೆ ಭಗವಂತನು ತನ್ನದೇ ಸಂಕಲ್ಪದಿಂದ ಚಿದ ಚಿದ್ ವಿಷ್ಯಯ ಎಂಬ ಮೂರು ತತ್ತ್ವಗಳ ಬಗೆಗೂ ಪರ್ಯಾಪ್ತವಾದ ಜ್ಞಾನವನ್ನು ಕರುಣಿಸಿ, ಅವರುಗಳ ಮೂಲಕ ಕಾಲಕ್ರಮದಲ್ಲಿ ಕಳೆದುಹೋಗಿದ್ದ ಭಕ್ತಿ/ಪ್ರಪತ್ತಿ ಮಾರ್ಗವನ್ನು ಪುನಃ ಸ್ಥಾಪಿಸಿದನು. ಅವರೆಲ್ಲರಿಗೂ ಭಗವಂತನು ಭೂತ-ಭವ್ಯ-ಭವಿಷ್ಯತ್ಕಾಲದ ಆಗುಹೋಗುಗಳನ್ನೆಲ್ಲ ಸಂಪೂರ್ಣವಾಗಿ ಮತ್ತು ಸುಸ್ಪಷ್ಟವಾಗಿ ತೋರಿಸಿಕೊಟ್ಟನು. ಈ ಆಳ್ವಾರುಗಳು ತಮ್ಮ ಭಗವದನುಭವದ ಕೃತಿಗಳಾದ ಅರುಳಿಚ್ಚೆಯಲ್ ಎಂದು ಪ್ರಸಿದ್ಧವಾದ ೪೦೦೦ ದಿವ್ಯಪ್ರಬಂಧಗಳನ್ನು ರಚಿಸಿದರು. ಈ ಅರುಳಿಚ್ಚೆಯಲ್ ಎಂಬ ದಿವ್ಯಪ್ರಬಂಧಗಳ ಸಾರವು  ನಮ್ಆಳ್ವಾರ್ ಅನುಗ್ರಹಿಸಿರುವ ತಿರುವಾಯ್ಮೊಳಿ ಎಂಬ ದಿವ್ಯ ಶ್ರೀಸೂಕ್ತಿಗಳಲ್ಲ ಅಡಕವಾಗಿದೆ .

ಆಳ್ವಾರುಗಳ ಕಾಲದ ನಂತರ ಆಚಾರ್ಯರುಗಳು ಅವತರಿಸತೊಡಗಿದರು. ನಾಥಮುನಿಗಳು, ಉಯ್ಯಕ್ಕೊಂಡಾರ್, ಮಣಕ್ಕಾಲ್ ನಂಬಿ, ಆಳವಂದಾರ್, ಪೆರಿಯ ನಂಬಿ, ಪೆರಿಯ ತಿರುಮಲೈ ನಂಬಿ, ತಿರುಕ್ಕೋಷ್ಠಿಯೂರ್ ನಂಬಿ, ತಿರುಮಾಲೈ ಆಂಡಾನ್, ಆಳ್ವಾರ್ ತಿರುವರಂಗಪ್ಪೆರುಮಾಳ್ ಅರೈಯರ್, ಎಂಪೆರುಮಾನಾರ್, ಎಂಬಾರ್, ಕೂರತ್ತಾಳ್ವಾನ್, ಮುದಲಿಯಾಂಡಾನ್, ಅರುಳಾಳಪ್ಪೆರುಮಾಳ್ ಎಂಪೆರುಮಾನಾರ್, ಅನಂತಾಳ್ವಾನ್, ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್, ಎಂಗಳಾಳ್ವಾನ್, ನಡಾದೂರಮ್ಮಾಳ್, ಭಟ್ಟರ್, ನಂಜೀಯರ್, ನಂಪಿಳ್ಳೈ, ವಡಕ್ಕುತ್ತಿರುವೀದಿಪ್ಪಿಳ್ಳೈ, ಪೆರಿಯವಾಚ್ಚಾನ್ ಪಿಳ್ಳೈ, ಪಿಳ್ಳೈ ಲೋಕಾಚಾರ್ಯರು, ಅಳಗಿಯ ಮಣವಾಳಪ್ಪೆರುಮಾಳ್ ನಾಯನಾರ್, ಕೂರಕುಲೋತ್ತಮ ದಾಸರು, ತಿರುವಾಯ್ಮೊಳಿಪ್ಪಿಳ್ಳೈ, ವೇದಾಂತಾಚಾರ್ಯರು ಮತ್ತು ಮಣವಾಳ ಮಾಮುನಿಗಳೆಂಬ ಹಲವು ಆಚಾರ್ಯರುಗಳು ಅವತರಿಸಿ ನಮ್ಮ ಸಂಪ್ರದಾಯವನ್ನು ಬೆಳೆಸಿದರು. ಈ ಆಚಾರ್ಯ ಪರಂಪರೆಯು ಎಂಪೆರುಮಾನಾರ್ ಸ್ಥಾಪಿಸಿದ ೭೪ ಸಿಂಹಾಸನಾಧಿಪತಿಗಳ ಮೂಲಕವೂ, ಎಂಪೆರುಮಾನಾರ್ ಮತ್ತು ಮಣವಾಳ ಮಾಮುನಿಗಳು ಸ್ಥಾಪಿಸಿದ ಜೀಯರ್ ಮಠಗಳ ಮೂಲಕವೂ ಇಂದಿನ ವರೆಗೂ ಹರಿದು ಬಂದಿದೆ. ಈ ಆಚಾರ್ಯರುಗಳು ಅರುಳಿಚ್ಚೆಯಲ್ ಎಂಬ ದಿವ್ಯಪ್ರಬಂಧಗಳಿಗೆ ಅನೇಕ ವ್ಯಾಖ್ಯಾನಗಳನ್ನು ಬರೆದು ಆ ಪಾಶುರಗಳ ಅರ್ಥವಿಶೇಷಗಳನ್ನು ವಿಶದವಾಗಿ ವಿವರಿಸಿದ್ದಾರೆ. ಈ ವ್ಯಾಖ್ಯಾನಗಳೇ ಅವರೆಲ್ಲರೂ ನಮಗಾಗಿ ಬಿಟ್ಟು ಹೋಗಿರುವ ದೊಡ್ಡ ನಿಧಿ. ನಾವುಗಳು ಇದನ್ನವಲಂಬಿಸಿ, ಈ ವ್ಯಾಖ್ಯಾನಗಳನ್ನು ಓದಿ   , ಭಗವದನುಭವದಲ್ಲಿ ಮುಳುಗಿರುವುದಕ್ಕಾಗಿಯೇ ಅವರು ಈ ನಿಧಿಯನ್ನು ಬಿಟ್ಟು ಹೋಗಿದ್ದಾರೆ. ಮೇಲ್ಕಂಡ ಆಚಾರ್ಯರುಗಳೆಲ್ಲರೂ ಆಳ್ವಾರುಗಳ ವಿಶೇಷ ಕೃಪೆಯ ಮೂಲಕ ಆ ಪಾಶುರಗಳ ನಿಜಾರ್ಥಗಳನ್ನರಿತು ನಮಗೆಲ್ಲ ತಿಳಿಯುವಂತೆ ಅನೇಕ ವಿಧಗಳಲ್ಲಿ ವಿವರಿಸಿದ್ದಾರೆ.

ತಮ್ಮ ಉಪದೇಶ ರತ್ತಿನಮಾಲೈ ಎಂಬ ಕೃತಿಯಲ್ಲಿ ಮಣವಾಳ ಮಾಮುನಿಗಳು ಈ ಎಲ್ಲಾ ವ್ಯಾಖ್ಯಾನಗಳು ಇರುವುದರಿಂದಲೇ ನಮಗೆ ದಿವ್ಯಪ್ರಬಂಧಗಳ ನಿಜಾರ್ಥಗಳು ತಿಳಿಯಲು ಸಾಧ್ಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ವ್ಯಾಖ್ಯಾನಗಳಿಲ್ಲದೆ ಹೋಗಿದ್ದಲ್ಲಿ ನಮ್ಮ ದಿವ್ಯಪ್ರಬಂಧಗಳೂ ಇತರ ತಮಿಳು ಸಾಹಿತ್ಯದಂತೆ ಕೆಲವು ಜ್ಞಾನಿಗಳು ಮಾತ್ರವೇ ತಿಳಿಯುವ ಸಾಹಿತ್ಯವಾಗಿರುತ್ತಿತ್ತು. ನಮ್ಮ ಪೂರ್ವಾಚಾರ್ಯರುಗಳು ಆ ಪಾಶುರಗಳ ಸಂದೇಶಗಳನ್ನು ಯಥಾರ್ಥವಾಗಿ ತಿಳಿದಿದ್ದ ಕಾರಣ ಈ ಪ್ರಬಂಧಗಳನ್ನು ಮನೆಗಳಲ್ಲೂ ದೇವಾಲಯಗಳಲ್ಲೂ ನಿತ್ಯಾನುಸಂಧಾನದ (ನಿತ್ಯ ಪಠಣದ) ಭಾಗವಾಗಿಟ್ಟರು. ಇದನ್ನು ಪ್ರತ್ಯಕ್ಷವಾಗಿ ಕಾಣಲು ನಾವು ತಿರುವಲ್ಲಿಕ್ಕೇಣಿ ದಿವ್ಯದೇಶಕ್ಕೆ ಹೋಗಿ ನೋಡಬಹುದು. ಅಲ್ಲಿ ಪ್ರತಿ ಶುಕ್ರವಾರ ನಡೆಯುವ ಶಿರಿಯ ತಿರುಮಡಲ್ ಗೋಷ್ಠಿಯಲ್ಲಿ ಐದಾರು ವರ್ಷದ ಮಕ್ಕಳೂ ಇತರ ಹಿರಿಯರಿಗಿಂತಲೂ ಜೋರಾದ

ಧ್ವನಿಯಲ್ಲಿ ಪಾಶುರಗಳನ್ನು ಸೇವಿಸುವುದನ್ನು ನಾವಲ್ಲಿ ಕಾಣಬಹುದು. ಅಲ್ಲದೆ, ನಮಗೆಲ್ಲರಿಗೂ ತಿರುಪ್ಪಾವೈ ಚಿರಪರಿಚಿತ. ಮಾರ್ಗಳಿ (ಧನುರ್ಮಾಸ) ಮಾಸದಲ್ಲಿ ಮೂರ್ನಾಲ್ಕು ವರ್ಷದ ಮಕ್ಕಳೂ ಆಂಡಾಳ್ ರಚಿಸಿದ ಅದ್ಭುತವಾದ ತಿರುಪ್ಪಾವೈ ಪಾಶುರಗಳನ್ನು ಸುಮಧುರವಾಗಿ ಪಠಿಸುವುದನ್ನು ನಾವು ಎಲ್ಲಿಯೂ ಕಾಣಬಹುದು.

ಈ ರೀತಿಯಲ್ಲಿ ನಾವು ನಮ್ಮ ಗುರುಪರಂಪರೆಯ ಮುಖ್ಯತ್ತ್ವವನ್ನರಿತು ಇದರ ಮಹಿಮೆಯನ್ನು ದಿನವೂ ಆಸ್ವಾದಿಸಬಹುದು.

ನಮ್ಮ ಪೂರ್ವಾಚಾರ್ಯರುಗಳ ಬಗೆಗೆ ಇನ್ನೂ ಹೆಚ್ಚಿನ ವಿವರಗಳನ್ನು ವಿಭಿನ್ನ ಭಾಷೆಗಳಲ್ಲಿ ತಿಳಿಯಲು ಇಲ್ಲಿಗೆ ಭೇಟಿ ನೀಡಿ: http://acharyas.koyil.org

ಆಳ್ವಾರ್‌ಗಳ್ ವಾಳಿ, ಅರುಳಿಚ್ಚೆಯಲ್ ವಾಳಿ, ತಾಳ್ವಾದುಮಿಲ್ ಕುರವರ್ ತಾಮ್ ವಾಳಿ (ಆಳ್ವಾರುಗಳು ಚಿರಕಾಲವಿರಲಿ, ದಿವ್ಯಪ್ರಬಂಧಗಳು ಚಿರಕಾಲವಿರಲಿ, ಈ ದಿವ್ಯಪ್ರಬಂಧಗಳನ್ನು ಸ್ವಯಂ ಅನುಸಂಧಾನ ಮಾಡಿ ಇತರರಿಗೂ ಉಪದೇಶಿಸಿದ ನಮ್ಮ ಶ್ರೇಷ್ಠ ಆಚಾರ್ಯರುಗಳು ಚಿರಕಾಲವಿರಲಿ) – ಉಪದೇಶ ರತ್ತಿನಮಾಲೈ – ೩.

ಅಡಿಯೇನ್ ಶ್ರೀನಿವಾಸ ರಾಮಾನುಜ ದಾಸನ್

ಮೂಲ: http://ponnadi.blogspot.com/2015/12/simple-guide-to-srivaishnavam-guru-paramparai.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಬೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ

ಶ್ರೀಃ
ಶ್ರೀಮತೇ ಶಠಕೋಪಾಯ ನಮಃ
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮದ್ವರವರಮುನಯೇ ನಮಃ
ಶ್ರೀ ವಾನಾಚಲಮಹಾಮುನಯೇ ನಮಃ

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಪಂಚ ಸಂಸ್ಕಾರ

ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ

ಹಿಂದಿನ ಲೇಖನದಲ್ಲಿ ನಾವು ಹೇಗೆ ಪಂಚಸಂಸ್ಕಾರವು ಒಬ್ಬ ಶ್ರೀವೈಷ್ಣವನ ಯಾತ್ರೆಯನ್ನು ಪ್ರಾರಂಭಿಸುತ್ತದೆಂದು ನೋಡಿದೆವು. ಅದಲ್ಲದೆ ನಾವು “ಆಚಾರ್ಯ-ಶಿಷ್ಯ ಸಂಬಂಧ” ಎಂಬ ಒಂದು ಅನನ್ಯವಾದ ಸಂಬಂಧವು ಹೇಗೆ ಆರಂಭವಾಗುತ್ತದೆಂದೂ ನೋಡಿದೆವು. ಇದು ನಮ್ಮ ಸಂಪ್ರದಾಯದಲ್ಲಿ ಒಂದು ಅತಿ ಮುಖ್ಯವಾದ ಅಂಶವಾದುದರಿಂದ, ನಾವು ಪೂರ್ವಾಚಾರ್ಯ ಶ್ರೀಸೂಕ್ತಿಗಳ ಆಧಾರದ ಮೇಲೆ ಈ ಸಂಬಂಧದ ಬಗ್ಗೆ ಸ್ವಲ್ಪ ಹೆಚ್ಚಾಗಿ ತಿಳಿದುಕೊಳ್ಳೋಣ.

ಆಚಾರ್ಯರೆಂದರೆ ಅಕ್ಷರಶ: “ಒಬ್ಬ ಶಾಸ್ತ್ರಗಳನ್ನು ಅಭ್ಯಸಿಸಿದವರು ಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಬೋಧಿಸುವವರು” ಎಂದರ್ಥ. ಶಾಸ್ತ್ರದಲ್ಲಿ ಹೀಗೂ ಹೇಳಲ್ಪಟ್ಟಿದೆ “ಒಬ್ಬ ಸಂನ್ಯಾಸಿಯೂ ಕೂಡ ವಿಷ್ಣುವಿನ ಪರತ್ವವನ್ನು ಒಪ್ಪಿಕೊಳ್ಳದಿದ್ದರೆ ಆತನನ್ನು ಒಬ್ಬ ಚಂಡಾಲನನ್ನಾಗಿಯೇ ಪರಿಗಣಿಸಬೇಕು”. ಆದ್ದರಿಂದ ಆಚಾರ್ಯರು ಒಬ್ಬ ವೈಷ್ಣವರಾಗಿರಬೇಕೆಂಬುದು ಅತ್ಯಗತ್ಯ – ಅರ್ಥಾತ್ ಶ್ರೀಮನ್ ನಾರಾಯಣನು ಸರ್ವೋಚ್ಚ ದೇವನೆಂದು ಸ್ವೀಕರಿಸುವುದು ಮತ್ತು ಪ್ರತಿಕ್ಷಣವೂ ಪ್ರತಿಯೊಂದು ಕಾರ್ಯದಲ್ಲಿಯೂ ಆತನನ್ನು ಸಂತುಷ್ಟಗೊಳಿಸಲು ಪ್ರಯತ್ನಿಸುವುದು. ನಮ್ಮ ಪೂರ್ವಾಚಾರ್ಯರು ಪಂಚಸಂಸ್ಕಾರದ ಸಮಯದಲ್ಲಿ ತಿರುಮಂತ್ರ ಉಪದೇಶ (ದ್ವಯ ಮತ್ತು ಚರಮ ಶ್ಲೋಕದೊಂದಿಗೆ) ಮಾಡುವವರನ್ನು ಮೊದಲ ಆಚಾರ್ಯರೆಂದು ಘೋಷಿಸಿದ್ದಾರೆ. ಶಿಷ್ಯ ಎಂದರೆ ಶಿಕ್ಷೆಗೆ ಈಡಾಗುವವನು (ಶುದ್ಧೀಕರಿಸಲ್ಪಡುವವನು) ಎಂದರ್ಥ. ಇದನ್ನು ಸಾಧಾರಣವಾಗಿ ಇಂಗ್ಲಿಷ್ ನಲ್ಲಿ ‘ಡಿಸೈಪಲ್’ ಎಂದು ಅನುವಾದಿಸಲಾಗುತ್ತದೆ – ಅರ್ಥಾತ್ ಕಟ್ಟುಪಾಡಿಗೆ ಒಳಪಟ್ಟವನು . ಇಲ್ಲಿ ಶಿಷ್ಯನು/ಶಿಷ್ಯಳು ಆಚಾರ್ಯರ ಮಾರ್ಗದರ್ಶನದಲ್ಲಿ ಒಂದು ಸಮರ್ಪಕವಾದ ಅಚ್ಚಿನಲ್ಲಿ ರೂಪಿತಗೊಳ್ಳುತ್ತಾರೆ.

ಉಡೈಯವರ್ – ಆಳ್ವಾನ್ (ಆದರ್ಶ ಆಚಾರ್ಯ – ಶಿಷ್ಯ), ಕೂರಮ್

ನಮ್ಮ ಪೂರ್ವಾಚಾರ್ಯರು ಆಚಾರ್ಯ ಮತ್ತು ಶಿಷ್ಯರ ಗುಣಲಕ್ಷಣಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ಪ್ರಾರಂಭದಲ್ಲಿ ಅವರು ಶಾಸ್ತ್ರಗಳ ಆಧಾರದ ಮೇಲೆ ಆಚಾರ್ಯ-ಶಿಷ್ಯರ ಸಂಬಂಧವು ಒಬ್ಬ ತಂದೆ-ಮಗನ ಸಂಬಂಧಕ್ಕೆ ಸರಿಸಮವಾದದ್ದೆಂದು ಸ್ಥಾಪಿಸಿದ್ದಾರೆ. ಒಬ್ಬ ಮಗನು ತನ್ನ ತಂದೆಗೆ ಹೇಗೆ ಅಧೀನನಾಗಿರುವನೋ ಹಾಗೆ ಒಬ್ಬ ಶಿಷ್ಯನು ತನ್ನ ಆಚಾರ್ಯರಿಗೆ ಸಂಪೂರ್ಣವಾಗಿ ಅಧೀನನಾಗಿರಬೇಕು.

ಭಗವದ್ಗೀತೆಯಲ್ಲಿ ಕಣ್ಣನ್ ಭಗವಂತನು ಹೀಗೆ ಹೇಳಿದ್ದಾನೆ “ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ, ಉಪದೇಕ್ಷನ್ತಿ ತೇ ಜ್ಞಾನಮ್ ಜ್ಞಾನಿನಸ್ತತ್ತ್ವದರ್ಶಿನ:”. ಇದು ಸುಂದರವಾಗಿ ಆಚಾರ್ಯ ಮತ್ತು ಶಿಷ್ಯರ ಗುಣಲಕ್ಷಣಗಳನ್ನು ಸಂಕ್ಷಿಪ್ತ ರೂಪದಲ್ಲಿ ತಿಳಿಸುತ್ತದೆ. ಮೊದಲ ಸಾಲಿನಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ “ನೀನು ವಿನೀತನಾಗಿ ಒಬ್ಬ ಆಚಾರ್ಯರ ಬಳಿಗೆ ಹೋಗಬೇಕು, ನಮ್ರತೆಯಿಂದ ಅವರ ಸೇವೆ ಮಾಡಬೇಕು ಮತ್ತು ವಿನಯದಿಂದ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು”. ಎರಡೆನೆಯ ಸಾಲಿನಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ “ಆಚಾರ್ಯರು ನಿಜವಾದ ತತ್ತ್ವವನ್ನು (ಅರ್ಥಾತ್ ಭಗವಾನ್) ಅರಿತಿರುವುದರಿಂದ ಅವರು ನಿನಗೆ ಆಜ್ಞಾನವನ್ನು ಬೋಧಿಸುತ್ತಾರೆ”.

ಒಬ್ಬ ಆಚಾರ್ಯರಿಂದ ನಿರೀಕ್ಷಿಸಲ್ಪಡುವ ಕೆಲವು ಗುಣಲಕ್ಷಣಗಳೇನೆಂದರೆ:

 • ಆಚಾರ್ಯರುಗಳು ಸಾಮಾನ್ಯವಾಗಿ ಪಿರಾಟ್ಟಿಯೊಂದಿಗೆ (ಶ್ರೀ ಮಹಾಲಕ್ಷ್ಮಿ) ಸಮೀಕರಿಸಲ್ಪಡುತ್ತಾರೆ – ಅವರ ಮುಖ್ಯ ಕಾರ್ಯವೆಂದರೆ ಭಗವಂತನಿಗೆ ಪುರುಷಕಾರವನ್ನು (ಪಿರಾಟ್ಟಿಯಂತೆ ಪ್ರಭಾವ) ಮಾಡುವುದು.
 • ಪಿರಾಟ್ಟಿಯಂತೆಯೇ ಅವರೂ ಸಹ ಭಗವಂತನಿಗೆ ತಾವು ಅಧೀನರೆಂದು ಒಪ್ಪಿಕೊಳ್ಳಬೇಕು, ಅವರು ಭಗವಂತನು ಮಾತ್ರವೇ ಉಪಾಯವೆಂಬುದನ್ನು ಸ್ವೀಕರಿಸಬೇಕು ಮತ್ತು ಅವರ ಕ್ರಿಯೆಗಳು ಭಗವಂತನನ್ನು ಸಂತೋಷಪಡಿಸುವುದಕ್ಕಾಗಿ ಮಾತ್ರವೇ ಇರಬೇಕು.
 • ಅವರು ಪೂರ್ಣವಾಗಿ ಕೃಪೆಯಿಂದ ಕೂಡಿರಬೇಕು – ಶಿಷ್ಯರುಗಳನ್ನು ಸ್ವೀಕರಿಸಲು, ಅವರ ಆತ್ಮಜ್ಞಾನ ಮತ್ತು ವೈರಾಗ್ಯವನ್ನು ಅಭಿವೃದ್ಧಿಪಡಿಸಲು, ಮತ್ತು ಶಿಷ್ಯರುಗಳನ್ನು ಭಗವತ್/ಭಾಗವತ ಕೈಂಕರ್ಯಗಳಲ್ಲಿ ತೊಡಗಿಸಲು.
 • ಮಾಮುನಿಗಳ ದಿವ್ಯ ಶ್ರೀಸೂಕ್ತಿಯಂತೆ, ಆಚಾರ್ಯರು ಶಿಷ್ಯರ ಆತ್ಮದ ರಕ್ಷಣೆಯಲ್ಲಿ ಮಾತ್ರವೇ ಗಮನವಿರಬೇಕು.
 • ಪಿಳ್ಳೈ ಲೋಕಾಚಾರ್ಯರು ಹೇಳುತ್ತಾರೆ “ಒಬ್ಬ ಆಚಾರ್ಯರು ತಮ್ಮ ಶಿಷ್ಯರ ಮತ್ತು ಫಲಿತಾಂಶಗಳ ಬಗ್ಗೆ ಸಮರ್ಪಕ ಜ್ಞಾನವುಳ್ಳವರಾಗಿರಬೇಕು”.
  • ಅವರು ತಾವು ಆಚಾರ್ಯರಲ್ಲ, ತಮ್ಮ ಆಚಾರ್ಯರೇ ಆಚಾರ್ಯರೆಂದು ಭಾವಿಸಬೇಕು.
  • ಅವರು ಶಿಷ್ಯನು ತಮ್ಮ ಶಿಷ್ಯನಲ್ಲ, ತಮ್ಮ ಆಚಾರ್ಯರ ಶಿಷ್ಯನೆಂದು ಭಾವಿಸಬೇಕು.
  • ಫಲಿತಾಂಶವು ಭಗವಂತನ ಮಂಗಳಾಶಾಸನವನ್ನು ಸತತವಾಗಿ ಮಾಡುವ ಒಬ್ಬ ಉತ್ತಮವಾಗಿ ಪಕ್ವನಾದ ಶಿಷ್ಯನನ್ನು ತಯಾರಿಸುವುದರ ಹೊರತು ಬೇರೇನೂ ಅಲ್ಲ ಎಂದು ಅವರು ಭಾವಿಸಬೇಕು.
 • ವಾರ್ತಾಮಾಲೈ ಗ್ರಂಥದಲ್ಲಿ ವಿವರಿಸಿರುವಂತೆ ಮತ್ತು ಶಿಷ್ಟಾಚಾರಗಳಂತೆ (ಹಿರಿಯರ ಪದ್ಧತಿಗಳು), ಆಚಾರ್ಯರು ತಮ್ಮ ಶಿಷ್ಯನನ್ನು ಅತಿ ಗೌರವದಿಂದ ಕಾಣಬೇಕು – ಏಕೆಂದರೆ ಆ ಶಿಷ್ಯನ್ನು (ಆಚಾರ್ಯರ ಅರ್ಹತೆ/ಸಾಮರ್ಥ್ಯವನ್ನು ಪರಿಶೀಲಿಸಲು ಹೋಗದೆ) ಸಂಪೂರ್ಣ ರಕ್ಷಣೆಗಾಗಿ ಕೇವಲ ಶಾಸ್ತ್ರಗಳ ಆದೇಶದ ಮೇರೆಗೆ ಆಚಾರ್ಯರ ಬಳಿಗೆ ಬಂದಿದ್ದಾನೆ.
 • ನಮ್ಮ ಪೂರ್ವಾಚಾರ್ಯರುಗಳು ವಿವರಿಸಿರುವಂತೆ ಸಾಕ್ಷಾತ್ ಭಗವಂತನೂ ಸಹ ಒಬ್ಬ ಆಚಾರ್ಯನಾಗಲು ಇಚ್ಛಿಸುತ್ತಾನೆ. ಇದರಿಂದಾಗಿಯೇ ಅವನು ನಮ್ಮ ಓರಾಣ್ ವಳಿ ಗುರು ಪರಂಪರೈಯಲ್ಲಿ ಮೊದಲ ಆಚಾರ್ಯನಾಗಿರಲು ಅಪೇಕ್ಷಿಸಿದನು. ಆತನು ತನಗೂ ಒಬ್ಬ ಆಚಾರ್ಯರು ಬೇಕೆಂದು ಇಚ್ಛಿಸಿದನು – ಇದರಿಂದಾಗಿಯೇ ಆತನು ತನಗಾಗಿ ಅತ್ಯಂತ ಪರಿಪೂರ್ಣರಾದ ಆಚಾರ್ಯರನ್ನು ಆಯ್ಕೆ ಮಾಡಿದನು – ಅವರೆಂದರೆ ಅಳಗಿಯ ಮಣವಾಳ ಮಾಮುನಿಗಳ್.

ಒಬ್ಬ ಶಿಷ್ಯನಿಂದ ನಿರೀಕ್ಷಿಸಲ್ಪಟ್ಟ ಕೆಲವು ಗುಣಲಕ್ಷಣಗಳು ಹೀಗಿವೆ:

 • ಪಿಳ್ಳೈ ಲೋಕಾಚಾರ್ಯರು ಹೇಳುತ್ತಾರೆ:
  • ಶಿಷ್ಯನು ತನ್ನನ್ನು ಎಂಪೆರುಮಾನ್ ಮತ್ತು ಆಚಾರ್ಯರ ವಿನಾ ಎಲ್ಲವುಗಳಿಂದಲೂ ಮುಕ್ತಗೊಳಿಸಿಕೊಳ್ಳಬೇಕು (ಅದೆಂದರೆ ಐಶ್ವರ್ಯ ಮತ್ತು ಆತ್ಮಾನುಭವ) .
  • ಶಿಷ್ಯನು ಆಚಾರ್ಯರ ಸೇವೆ ಮಾಡಲು ಎಲ್ಲಾ ರೀತಿಯಲ್ಲಿಯೂ ಸದಾಕಾಲವೂ ಸಿದ್ಧನಾಗಿರಬೇಕು.
  • ಶಿಷ್ಯನು ಈ ಭೌತಿಕ ಪ್ರಪಂಚವನ್ನು ಕಂಡು ಮಾನಸಿಕವಾಗಿ ತಳಮಳಗೊಳ್ಳಬೇಕು.
  • ಶಿಷ್ಯನು ಭಗವದ್ ವಿಷಯ ಮತ್ತು ಆಚಾರ್ಯ ಕೈಂಕರ್ಯಗಳಲ್ಲಿ ಅಪೇಕ್ಷೆಯುಳ್ಳವನಾಗಿರಬೇಕು.
  • ಭಗವತ್/ಭಾಗವತ ವಿಷಯಗಳ ವೈಭವಗಳನ್ನು ತಿಳಿದುಕೊಳ್ಳುವಾಗ ಶಿಷ್ಯನು ಅಸೂಯೆಯಿಂದ ಮುಕ್ತನಾಗಿರಬೇಕು.
 • ಒಬ್ಬ ಶಿಷ್ಯನು ತನ್ನ ಎಲ್ಲ ಸಂಪತ್ತು ಆಚಾರ್ಯರಿಗೆ ಸೇರಿದ್ದೆಂದು ಭಾವಿಸಬೇಕು. ತನ್ನ ದೇಹ ಧಾರಣಕ್ಕೆ (ಮೂಲಭೂತ ಜೀವನಕ್ಕೆ) ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು.
 • ಒಬ್ಬ ಶಿಷ್ಯನು ಆಚಾರ್ಯರೇ ತನ್ನ ಸರ್ವಸ್ವವೆಂದು ಭಾವಿಸಬೇಕು, ಆಳವಂದಾರರು “ಮಾತಾ ಪಿತಾ ಯುವತಯ: … ” ಶ್ಲೋಕದಲ್ಲಿ ಹೇಳಿರುವಂತೆ.
 • ಅವನು ತನ್ನ ಆಚಾರ್ಯರ ಜೀವನಾಧಾರವನ್ನು ನೋಡಿಕೊಳ್ಳಬೇಕು.
 • ಮಣವಾಳ ಮಾಮುನಿಗಳು ಉಪದೇಶ ರತ್ತಿನ ಮಾಲೈಯಲ್ಲಿ ಹೇಳಿರುವಂತೆ “ಈ ಲೋಕದಲ್ಲಿರುವವರೆಗೆ ಒಬ್ಬನು ತನ್ನ ಆಚಾರ್ಯರಿಂದ ಒಂದು ಕ್ಷಣವೂ ದೂರವಿರಬಾರದು”.
 • ಒಬ್ಬ ಶಿಷ್ಯನು ತನ್ನ ಆಚಾರ್ಯರನ್ನು ಅವರ ಉಪಸ್ಥಿತಿಯಲ್ಲಿ ಶ್ಲಾಘಿಸಬೇಕು ಮತ್ತು ತನ್ನ ಆಚಾರ್ಯರು ತನಗೆ ನೀಡಿದ ಜ್ಞಾನದ ಬಗ್ಗೆ ಉಪಕಾರ ಸ್ಮೃತಿಯುಳ್ಳವನಾಗಿರಬೇಕು.

ಒಬ್ಬ ಶಿಷ್ಯನು ತನ್ನ ಆಚಾರ್ಯರ ಆತ್ಮ ರಕ್ಷಣೆಯನ್ನು ಮಾಡುವುದೂ (ಅರ್ಥಾತ್ ಶಿಷ್ಯನು ಆಚಾರ್ಯರಿಗೆ ಸ್ವರೂಪ ಶಿಕ್ಷಣ ಮಾಡುವುದು) ಮತ್ತು ಆಚಾರ್ಯರು ಶಿಷ್ಯನ ದೇಹ ರಕ್ಷಣೆಯನ್ನು ಮಾಡುವುದೂ (ಅರ್ಥಾತ್ ಶಿಷ್ಯನು ಆಚಾರ್ಯರು ತನ್ನ ಜೀವನಾಧಾರವನ್ನು ನೋಡಿಕೊಳ್ಳುವರೆಂದು ಅಪೇಕ್ಷಿಸುವುದು) ಅನುಚಿತವೆಂದು ವಿವರಿಸಲ್ಪಟ್ಟಿದೆ.

ಪಿಳ್ಳೈ ಲೋಕಾಚಾರ್ಯರು ವಿವರಿಸಿರುವಂತೆ, ಒಬ್ಬ ಶಿಷ್ಯನಾಗಿರುವುದು ಬಹು ಕಷ್ಟಕರವಾದದ್ದು (ಮತ್ತು ಒಬ್ಬನು ಯೋಗ್ಯನಾದ ಶಿಷ್ಯನಾಗುವುದನ್ನು ನಾವು ನಿಜವಾಗಿ ಅರಿತುಕೊಳ್ಳಲಾಗದು, ಈ ವಿಷಯದ ಬಗ್ಗೆ ಎಷ್ಟೇ ಓದಿದರೂ ಸಹ). ಇದರಿಂದಾಗಿಯೇ ಭಗವಂತನು ಸ್ವತಃ “ನರ” ಋಷಿಯ ರೂಪದಲ್ಲಿ ಬಂದು ತಿರುಮಂತ್ರವನ್ನು ಅರಿಯುವ ಸೋಗಿನಲ್ಲಿ ಹೇಗೆ ಒಬ್ಬನು ಯೋಗ್ಯನಾದ ಶಿಷ್ಯನಾಗಿರಬೇಕಂದು ತೋರಿಸಲು “ನಾರಾಯಣ” ಋಷಿಯ (ಆತನೂ ಭಗವಂತನ ಅವತಾರ) ಶಿಷ್ಯನಾದನು.

ಈ ಹಿನ್ನೆಲೆಯಲ್ಲಿ ನಾವು ಈಗ ಆಚಾರ್ಯರುಗಳ ವಿವಿಧ ವರ್ಗೀಕರಣಗಳನ್ನು ಅರಿತುಕೊಳ್ಳಲು ಪ್ರಯತ್ನಿಸೋಣ:

ಅನುವೃತ್ತಿ ಪ್ರಸನ್ನಾಚಾರ್ಯ

ಎಂಪೆರುಮಾನಾರ್ (ರಾಮಾನುಜರ್) ಗಿಂತ ಹಿಂದಿನ ಕಾಲದಲ್ಲಿ, ಆಚಾರ್ಯರುಗಳು ಭಾವೀ ಶಿಷ್ಯರನ್ನು ಸ್ವೀಕರಿಸುವ ಮುನ್ನ ಅವರ ನಿಷ್ಠೆಯನ್ನು ಪರೀಕ್ಷಿಸುತ್ತಿದ್ದರು. ಶಿಷ್ಯನು ಸ್ವೀಕಾರಕ್ಕೆ ಮುನ್ನ ತನ್ನ ಆಚಾರ್ಯರ ಗೃಹಕ್ಕೆ ಹೋಗಿ, ಅವರೊಡನೆ ವಾಸ ಮಾಡಿ ಮತ್ತು ಒಂದು ವರ್ಷ ಕಾಲ ಅವರ ಸೇವೆಯನ್ನು ಮಾಡುವುದು ವಾಡಿಕೆಯಾಗಿತ್ತು.

ಕೃಪಾ ಮಾತ್ರ ಪ್ರಸನ್ನಾಚಾರ್ಯ

ಆದರೆ ಯಾವಾಗ ಎಂಪೆರುಮಾನಾರರು ಕಲಿಯುಗದ ಲಕ್ಷಣಗಳನ್ನು ನೋಡಿದರೋ, ಅವರಿಗೆ ಅರಿವಾಯಿತು – ಆಚಾರ್ಯರುಗಳು ಹೀಗಿದ್ದರೆ ಕೇವಲ ಕೆಲವೇ ಜನರು ಮಾತ್ರ ಲೌಕಿಕ ವಿಷಯಗಳನ್ನು ತ್ಯಜಿಸಲು ಪ್ರೇರೇಪಿತರಾಗುತ್ತಾರೆ ಮತ್ತು ಅನೇಕರು ಆಚಾರ್ಯರುಗಳ ಕೋರಿಕೆಗಳನ್ನು ಈಡೇರಿಸಲು ಅಶಕ್ತರಾಗುತ್ತಾರೆ. ಆದ್ದರಿಂದ, ಅವರ ಅಪರಿಮಿತವಾದ ಕರುಣೆಯಿಂದಾಗಿ, ಎಂಪೆರುಮಾನಾರರು ನಿಯಮಗಳನ್ನು ಸಡಿಲಿಸಿದರು ಮತ್ತು ಈ ಅತ್ಯಮೂಲ್ಯವಾದ ಜ್ಞಾನವನ್ನು ಭಗವತ್ ವಿಷಯಗಳನ್ನು ಅರಿಯಲು ನಿಜವಾದ ಬಯಕೆಯಿರುವವರಿಗೆ ನೀಡಿದರು. ಆದರಿಂದ ಅರ್ಹತೆಯು “ಯೋಗ್ಯತೆಯುಳ್ಳ” ಎಂಬುದರಿಂದ “ಅಪೇಕ್ಷೆಯುಳ್ಳ” ಅಭ್ಯರ್ಥಿಗಳು ಎಂದು ಬದಲಾಯಿತು. ಅವರು ತಮ್ಮ ಶಿಷ್ಯರಿಗೂ ಸಹ ಇದೇ ಕ್ರಮವನ್ನು ಅನುಸರಿಸುವಂತೆ ಮಾರ್ಗದರ್ಶನ ಸೂತ್ರವನ್ನು ಸ್ಥಾಪಿಸಿದರು ಮತ್ತು ತಮ್ಮ ಕೃಪೆಯಿಂದಾಗಿ ಅನೇಕ ಸಹಸ್ರ ಜನರನ್ನು ಶ್ರೀವೈಷ್ಣವದ ಪರಿಧಿಯಲ್ಲಿ ತಂದರು . ಎಂಪೆರುಮಾನಾರರಿಂದ ಪ್ರಾರಂಭವಾಗಿ, ನಮ್ಮ ಆಚಾರ್ಯರುಗಳು ಕೃಪಾ ಮಾತ್ರ ಪ್ರಸನ್ನಾಚಾರ್ಯರುಗಳೆಂದು ಕರೆಯಲ್ಪಡುತ್ತಾರೆ. ಮಾಮುನಿಗಳು ಈ ತತ್ತ್ವವನ್ನು ಅದ್ಭುತವಾಗಿ ತಮ್ಮ ಉಪದೇಶ ರತ್ತಿನ ಮಾಲೈ ಪಾಶುರದಲ್ಲಿ ವಿವರಿಸಿದ್ದಾರೆ “ಓರಾಣ್ ವಳಿಯಾಯ್ ಉಪದೇಶಿತ್ತಾರ್ ಮುನ್ನೋರ್, ಏರಾರ್ ಎತಿರಾಶರ್ ಇನ್ನರುಳಾಲ್ ಪಾರುಲಗಿಲ್ ಆಶೈ ಉಡಯೋರ್ಕ್ಕೆಲ್ಲಾಮ್ ಆರಿಯರ್ಗಾಳ್ ಕೂರುಮ್ ಎನ್ರು ಪೇಶಿ ವರಂಬರುತ್ತಾರ್ ಪಿನ್”.

ಉತ್ತಾರಕ ಆಚಾರ್ಯ ಮತ್ತು ಉಪಕಾರಕ ಆಚಾರ್ಯ

“ಚರಮ ಉಪಾಯ ನಿರ್ಣಯ” ದಲ್ಲಿ – ನಾಯನಾರಾಚ್ಚಾನ್ ಪಿಳ್ಳೈ ಅವರ ಕೃತಿ – ಅವರು ಈ ಎರಡು ವಿಧದ ಆಚಾರ್ಯರನ್ನು ವಿವರಿಸುತ್ತಾರೆ. ಈ ಗ್ರಂಥವು ಎಂಪೆರುಮಾನಾರರ ಮಹಿಮೆಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.

ಉತ್ತಾರಕ ಆಚಾರ್ಯರು ಯಾರೆಂದರೆ ಒಬ್ಬರನ್ನು ಈ ಸಂಸಾರದಿಂದ ಮೇಲೆತ್ತಿ ಆತ/ಆಕೆಯನ್ನು ಸುಲಭವಾಗಿ ಪರಮಪದಕ್ಕೆ ತಲುಪಿಸಲು ಶಕ್ತರಾದವರು. ಶ್ರೀಮನ್ ನಾರಾಯಣನ್, ನಮ್ಆಳ್ವಾರ್ ಮತ್ತು ಎಂಪೆರುಮಾನಾರ್ ಇವರು ಮೂವರು ಮಾತ್ರವೇ ಉತ್ತಾರಕ ಆಚಾರ್ಯರುಗಳು ಎಂದೂ ವಿವರಿಸಲ್ಪಟ್ಟಿದೆ (ಸಹಜವಾಗಿಯೇ, ಯತಿ ಪುನರವತಾರಭೂತರಾದ ಮಣವಾಳ ಮಾಮುನಿಗಳೂ ಕೂಡ ಎರುಂಬಿ ಅಪ್ಪಾ ಅವರ ವರವರಮುನಿ ಶತಕದಲ್ಲಿ ಉತ್ತಾರಕ ಆಚಾರ್ಯರು ಎಂದು ಸ್ಥಾಪಿತರಾಗಿದ್ದಾರೆ).

 • ಶ್ರೀಮನ್ ನಾರಾಯಣನು ಪ್ರಥಮಾಚಾರ್ಯನು ಮತ್ತು ಸರ್ವಜ್ಞ, ಸರ್ವಶಕ್ತ, ಇತ್ಯಾದಿಯಾಗಿರುವುದರಿಂದ, ಆತನು ಯಾರಿಗಾದರೂ ಸುಲಭವಾಗಿ ಮೋಕ್ಷವನ್ನು ನೀಡಬಲ್ಲನು.

ಪೆರಿಯ ಪೆರುಮಾಳ್ – ಶ್ರೀರಂಗಮ್

 • ನಮ್ಆಳ್ವಾರ್ ಸಂಸಾರಿಗಳಿಗೆ ಜ್ಞಾನವನ್ನು ನೀಡಲು ಮತ್ತು ಅವರನ್ನು ಸರಿಪಡಿಸಲು ಭಗವಂತನಿಂದ ಆಯ್ಕೆಮಾಡಲ್ಪಟ್ಟವರಾದ್ದರಿಂದ, ಅವರೂ ಸಹ ಯಾರಿಗಾದರೂ ಮೋಕ್ಷವನ್ನು ನೀಡಲು ಅರ್ಹರು. ಇದು ತಿರುವಾಯ್ಮೊಳಿಯಲ್ಲಿ ಸ್ವತಃ ಅವರ ಹೇಳಿಕೆಯಿಂದಲೇ ವ್ಯಕ್ತವಾಗುತ್ತದೆ – “ಪೊನ್ನುಲಗು ಆಳಿರೋ, ಪುವನಿ ಮುಳುತು ಆಳೀರೊ”. ಅವರು ಭಗವಂತನಿಗೆ ಸಂದೇಶವಾಹಕರಾದ ಪಕ್ಷಿಗಳಿಗೆ ಹೇಳುತ್ತಾರೆ – ನಾನು ನಿಮ್ಮ ಉಪಕಾರಕ್ಕೆ ಸಂಭಾವನೆಯಾಗಿ ನಿತ್ಯ ವಿಭೂತಿ ಮತ್ತು ಲೀಲಾ ವಿಭೂತಿ ಎರಡನ್ನೂ ನೀಡಬಲ್ಲೆನು.

ನಮ್ಮಾಳ್ವಾರ್ – ಆಳ್ವಾರ್ ತಿರುನಗರಿ

 • ಎಂಪೆರುಮಾನಾರರು, ಉಡೈಯವರ್ – ಉಭಯ ವಿಭೂತಿಗಳ ನಿಯಂತ್ರಕರು – ಎಂದು ಶ್ರೀರಂಗನಾಥ ಮತ್ತು ತಿರುವೇಂಕಟಮುಡೈಯಾನ್ (ಶ್ರೀನಿವಾಸ – ತಿರುಮಲ) ಇವರಿಂದ ಘೋಷಿಸಲ್ಪಟ್ಟರು. ಅವರು ಭಗವತ್ ಅನುಭವದಲ್ಲಿ ಮಗ್ನರಾಗಿದ್ದುದು ಮಾತ್ರವಲ್ಲದೆ ಈ ಲೀಲಾ ವಿಭೂತಿಯಲ್ಲಿ ಬಹುಕಾಲ (120 ವರ್ಷಗಳು) ಬಾಳಿದರು ಮತ್ತು ಭಗವಂತನ ಉದ್ದೇಶವನ್ನು ಸಂಪೂರ್ಣವಾಗಿ ನಿರ್ವಹಿಸಿದರು. ಅವರು ಸಮರ್ಪಕವಾಗಿ ದೇವಾಲಯದ ಪೂಜೆಯನ್ನು ಪ್ರತಿಷ್ಠಾಪಿಸಿದರು, ಸಾವಿರಾರು ಶಿಷ್ಯರಿಗೆ ದೀಕ್ಷೆಯನ್ನು ನೀಡಿದರು ಮತ್ತು ಈ ದಿವ್ಯ ಸಂದೇಶವನ್ನು ಮುಂದೆ ಸಾಗಿಸಲು 74 ಸಿಂಹಾಸನಾಧಿಪತಿಗಳನ್ನು ಸ್ಥಾಪಿಸಿದರು.

                                                ಎಂಪೆರುಮಾನಾರ್ – ಶ್ರೀಪೆರುಂಬೂದೂರ್

 • ಭಗವಂತನು ಕೇವಲ ಶಾಸ್ತ್ರಗಳ ಪ್ರಕಾರವೇ ವರ್ತಿಸುತ್ತಾನೆ, ಆತನು ಜೀವಾತ್ಮರಿಗೆ ಮೋಕ್ಷವನ್ನು ನೀಡುತ್ತಾನೆ ಇಲ್ಲವೇ ಅವರನ್ನು ಸಂಸಾರದಲ್ಲಿ ಇರಿಸುತ್ತಾನೆ, ಅವರವರ ಇಚ್ಛೆ ಮತ್ತು ಕರ್ಮಗಳಿಗೆ ಅನುಗುಣವಾಗಿ. ಆದ್ದರಿಂದ, ನಾಯನಾರಾಚ್ಚಾನ್ ಪಿಳ್ಳೈ ಅವರು ಉತ್ತಾರಕತ್ವವು ಎಂಪೆರುಮಾನಾರರಲ್ಲಿ ಪರಿಪೂರ್ಣವಾಗಿದೆ ಎಂದು ನಿರ್ಣಯಿಸಿದ್ದಾರೆ.
 • ನಮ್ಆಳ್ವಾರ್ ರವರು, ಈ ಜ್ಞಾನವನ್ನು ಪಡೆದ ನಂತರ, ಅವರು ಒಬ್ಬರು ಆಳ್ವಾರರಾದ್ದರಿಂದ – ಅವರು ಸ್ವಲ್ಪ ಪರೋಪದೇಶವನ್ನು ಮಾಡಿದ್ದರೂ ಸಹ, ಅವರು ಭಗವತ್ ಅನುಭವದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ತಮ್ಮ ಸ್ವಂತ ಇಚ್ಛೆಯಂತೆ ಈ ಭೌತಿಕ ಪ್ರಪಂಚವನ್ನು ಬಹು ಚಿಕ್ಕ ವಯಸ್ಸಿನಲ್ಲಿಯೇ ತೊರೆದರು.
 • ಎಂಪೆರುಮಾನಾರರು ತಮ್ಮ ಪರಮ ಕೃಪೆಯಿಂದಾಗಿ ಈ ಅನುಗ್ರಹವನ್ನು ಇಚ್ಛೆಯುಳ್ಳ ಯಾರೊಬ್ಬರಿಗೂ ಕರುಣಿಸಿದರು ಮತ್ತು ಅವರನ್ನು ಭಗವಂತನಲ್ಲಿ ತಲುಪಿಸಿದರು.

ಹೀಗೆ, ನಾಯನಾರಾಚ್ಚಾನ್ ಪಿಳ್ಳೈ ಅವರು ಉತ್ತಾರಕತ್ವವು ಎಂಪೆರುಮಾನಾರರಲ್ಲಿ ಪೂರ್ತಿಯಾಗಿದೆ ಎಂದು ನಿರ್ಣಯಿಸಿದ್ದಾರೆ.

ಉಪಕಾರಕ ಆಚಾರ್ಯ

ಇವರು ನಮ್ಮನ್ನು ಒಬ್ಬ ಉತ್ತಾರಕ ಆಚಾರ್ಯರ ಬಳಿಗೆ ಕರೆದೊಯ್ಯಲು ಸಮರ್ಥರಾದವರು. ನಮ್ಮ ಸಂಪ್ರದಾಯದಲ್ಲಿ, ನಮ್ಮ ಸ್ವಂತ ಆಚಾರ್ಯರ ವರೆಗೆ ಎಂಪೆರುಮಾನಾರರ ಕೆಳಗೆ ಬರುವ ಎಲ್ಲ ಆಚಾರ್ಯ ಪರಂಪರೆಗಳೂ ಉಪಕಾರಕ ಆಚಾರ್ಯರೆಂದು ವರ್ಗೀಕೃತವಾಗಿವೆ. ನಾವು ಪಂಚ ಸಂಸ್ಕಾರವನ್ನು ಮಾಡಿಸಿಕೊಳ್ಳುವಾಗ, ನಮ್ಮ ಆಚಾರ್ಯರು ತಮ್ಮ ಗುರುಪರಂಪರೆಯ ಮೂಲಕ, ಆ ಜೀವಾತ್ಮನನ್ನು ಸಂಸಾರವನ್ನು ತೊರೆದು ಪರಮಪದವನ್ನು ಸೇರಲು ಇಚ್ಛಿಸುವ ವ್ಯಕ್ತಿಯನ್ನಾಗಿ, ಭಗವಂತನಲ್ಲಿಗೆ ಕರೆದೊಯ್ಯಲು ಎಂಪೆರುಮಾನಾರರಿಗೆ ವಿನಂತಿಸಿಕೊಳ್ಳುತ್ತಾರೆ.

ಉತ್ತಾರಕ ಆಚಾರ್ಯ ಮತ್ತು ಉಪಕಾರಕ ಆಚಾರ್ಯ ಇವರಿಬ್ಬರೂ ಸಮಾನವಾಗಿ ಗೌರವಿಸಲ್ಪಡಬೇಕಾದವರು – ಎಂಪೆರುಮಾನಾರರು ನಮ್ಮ ಸಂಪ್ರದಾಯದಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದರೂ ಸಹ. ಮಾಮುನಿಗಳು ತಮ್ಮ ಉಪದೇಶ ರತ್ತಿನ ಮಾಲೈಯಲ್ಲಿ ನಮಗೆ ಸರಿಯಾದ ಕ್ರಮವನ್ನು ತೋರಿಸಲು ತಿರುವಾಯ್ಮೊಳಿ ಪಿಳ್ಳೈ ಇಂದ ಪ್ರಾರಂಭಿಸಿ ಎಂಪೆರುಮಾನಾರರಲ್ಲಿ ಮುಗಿಸುತ್ತಾರೆ.

ಸಮಾಶ್ರಯಣ ಆಚಾರ್ಯ ಮತ್ತು ಜ್ಞಾನ ಆಚಾರ್ಯ

ಸಮಾಶ್ರಯಣ ಆಚಾರ್ಯರು ಯಾರೆಂದರೆ ನಮಗೆ ಪಂಚಸಂಸ್ಕಾರವನ್ನು ಮಾಡುವವರು.
ಜ್ಞಾನ ಆಚಾರ್ಯರು ನಮಗೆ ಗ್ರಂಥ ಕಾಲಕ್ಷೇಪ, ಇತ್ಯಾದಿಗಳನ್ನು ಮಾಡುವವರು; ಅದರಿಂದ ನಮ್ಮ ಆತ್ಮಜ್ಞಾನವು ಅಭಿವೃದ್ಧಿಯಾಗುತ್ತದೆ.

ಸಮಾಶ್ರಯಣ ಆಚಾರ್ಯರಿಗೆ ನಾವು ಚಿರಋಣಿಗಳಾಗಿರಬೇಕು ಮತ್ತು ಅವರಿಗೆ ಸಂಪೂರ್ಣವಾಗಿ ಶರಣಾಗತರಾಗಿರಬೇಕು, ಆದರೂ ಜ್ಞಾನ ಆಚಾರ್ಯರನ್ನೂ ಸಹ ಅಷ್ಟೇ ಗೌರವದಿಂದ ಕಾಣಬೇಕು. ಕೆಲವರಿಗೆ ಸಮಾಶ್ರಯಣ ಮತ್ತು ಜ್ಞಾನ ಆಚಾರ್ಯರು ಒಬ್ಬರೇ ಆಗಿರುತ್ತಾರೆ. ವಾಸ್ತವವಾಗಿ, ಶ್ರೀ ವಚನ ಭೂಷಣದಲ್ಲಿ ಹೇಳಿರುವಂತೆ ಪ್ರತಿಯೊಬ್ಬ ಶ್ರೀವೈಷ್ಣವರನ್ನೂ ತಮ್ಮ ಸ್ವಂತ ಆಚಾರ್ಯರಂತೆ ಗೌರವದಿಂದ ಕಾಣಬೇಕು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಒಬ್ಬ ಶಿಷ್ಯನು/ಶಿಷ್ಯಳು ತನ್ನ ಆಚಾರ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರಬೇಕು. ತಮ್ಮ ಆಚಾರ್ಯರ ಜೀವನಾಧಾರವನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವರದಾಗಿದೆ. ಒಬ್ಬರು ತಮ್ಮ ಆಚಾರ್ಯರೊಂದಿಗೆ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿರಬೇಕು ಮತ್ತು ಅವರ ಅವಶ್ಯಕತೆಗಳಲ್ಲಿ ನೆರವಾಗಬೇಕು.

ನಮ್ಮ ಪೂರ್ವಾಚಾರ್ಯರುಗಳ ಜೀವನದಲ್ಲಿ ಆಚಾರ್ಯ ಮತ್ತು ಶಿಷ್ಯರ ನಡುವೆ ಅನೇಕ ಅದ್ಭುತವಾದ ಘಟನೆಗಳು ನಡೆದಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ:

 • ಮಣಕ್ಕಾಲ್ ನಂಬಿ ತಮ್ಮ ಆಚಾರ್ಯರ (ಉಯ್ಯಕ್ಕೊಂಡಾರ್) ಗೃಹದಲ್ಲಿ ಅನೇಕ ಮನೆಗೆಲಸಗಳನ್ನು ಮಾಡುತ್ತಿದ್ದರು.
 • ಮಣಕ್ಕಾಲ್ ನಂಬಿ ಆಳವಂದಾರರನ್ನು ಶ್ರೀವೈಷ್ಣವದೊಳಗೆ ತರಲು ಅತೀವ ಶ್ರಮ ಪಟ್ಟರು.
 • ಎಂಪೆರುಮಾನಾರರು ಕೂರತ್ತಾಳ್ವಾನ್ ರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು, ತಾವು ಅವರ ಆಚಾರ್ಯರಾಗಿದ್ದರೂ ಸಹ.
 • ಒಮ್ಮೆ ಎಂಪೆರುಮಾನಾರರು ಕೂರತ್ತಾಳ್ವಾನ್ ರ ಬಗ್ಗೆ ಅಸಮಾಧಾನಗೊಂಡಾಗ ಆಳ್ವಾನ್ ಹೇಳಿದರು “ಅಡಿಯೇನ್ (ತಾನು) ಎಂಪೆರುಮಾನಾರರ ಆಸ್ತಿ – ನೀವು ನನ್ನನ್ನು ಏನು ಬೇಕಾದರೂ ಮಾಡಬಹುದು”.
 • ಎಂಬಾರ್ ತಮ್ಮ ಆಚಾರ್ಯರ ಹಾಸಿಗೆಯನ್ನು ಅದರ ಮೇಲೆ ಮಲಗಿ ಪರೀಕ್ಷಿಸುತ್ತಿದ್ದರು. ಇದು ಪಾಪವಲ್ಲವೇ ಎಂದು ಕೇಳಿದಾಗ, ತಮ್ಮ ಆಚಾರ್ಯರ ಹಾಸಿಗೆಯು ಅತ್ಯಂತ ಸುಖದಾಯಕವಾಗಿದ್ದರೆ ಸಾಕು, ನಾನು ಆ ಪಾಪವನ್ನು ಮಾಡಲೂ ಹಿಂದೆಗೆಯುವುದಿಲ್ಲ ಎಂದರು,
 • ಎಂಪೆರುಮಾನಾರರು ಅನಂತಾಳ್ವಾನ್ ರಿಗೆ ಪರಾಶರ ಭಟ್ಟರು ತಮ್ಮಂತೆಯೇ ಮತ್ತು ಅವರನ್ನು ಹಾಗೆಯೇ ಕಾಣಬೇಕು ಎಂದು ಹೇಳುತ್ತಾರೆ.
 • ಭಟ್ಟರು ಮತ್ತು ನಂಜೀಯರ್ ಅತ್ಯುತ್ತಮವಾದ ಸಂಭಾಷಣೆಗಳನ್ನು ನಡೆಸುತ್ತಿದ್ದರು. ನಂಜೀಯರ್ ಎಲ್ಲವನ್ನೂ ತೊರೆದರು ಮತ್ತು ಸನ್ಯಾಸಿಯಾದರು. ಒಮ್ಮೆ ಅವರು ಹೇಳಿದರು “ನನ್ನ ಆಶ್ರಮವು ಭಟ್ಟರಿಗೆ (ಅವರ ಆಚಾರ್ಯ) ನನ್ನ ಸೇವೆ ಮಾಡಲು ಅಡ್ಡಿಯಾದಲ್ಲಿ, ನಾನು ನನ್ನ ತ್ರಿದಂಡವನ್ನು ಮುರಿದುಹಾಕುತ್ತೇನೆ”.
 • ನಂಜೀಯರ್ ಅವರು ನಂಪಿಳ್ಳೈ ಅವರ ದೃಷ್ಟಿಕೋನಗಳನ್ನು ಪ್ರೋತ್ಸಾಹಿಸುತ್ತಿದ್ದರು, ಅವು ಕೆಲವು ಪಾಶುರಗಳ ಮೇಲೆ ತಮ್ಮ ಸ್ವಂತ ಅಭಿಪ್ರಾಯಕ್ಕಿಂತ ಭಿನ್ನವಾಗಿದ್ದರೂ ಸಹ.
 • ಪಿನ್ಬಳಗಿಯ ಪೆರುಮಾಳ್ ಜೀಯರ್, ನಂಪಿಳ್ಳೈ (ಅವರ ಆಚಾರ್ಯ) ಅವರು ಕಾವೇರಿಯಲ್ಲಿ ಸ್ನಾನ ಮಾಡಿ ಹಿಂದಿರುಗುವಾಗ ಅವರ ಬೆನ್ನನ್ನು ನೋಡಿ ಆನಂದಿಸುವುದಕ್ಕಾಗಿ ಮಾತ್ರವೇ, ತಾವು ಈ ಲೀಲಾವಿಭೂತಿಯಲ್ಲೇ ಇರಲು ಬಯಸುತ್ತೇನೆಂದು ಹೇಳುತ್ತಿದ್ದರು.
 • ಕೂರಕುಲೋತ್ತಮ ದಾಸರು ತಿರುವಾಯ್ಮೊಳಿ ಪಿಳ್ಳೈ ಅವರನ್ನು ಶ್ರೀವೈಷ್ಣವದೊಳಗೆ ತರಲು ಅತೀವ ಶ್ರಮ ಪಟ್ಟರು.
 • ಮಣವಾಳ ಮಾಮುನಿಗಳು ತಿರುವಾಯ್ಮೊಳಿ ಪಿಳ್ಳೈ (ಅವರ ಆಚಾರ್ಯ) ಅವರ ಆದೇಶಗಳನ್ನು ತಮ್ಮ ಜೀವನದ ಒಂದೇ ಧ್ಯೇಯವನ್ನಾಗಿ ಇಟ್ಟುಕೊಂಡಿದ್ದರು. ಅವರು ಒಮ್ಮೆ ಶ್ರೀಭಾಷ್ಯವನ್ನು ಕಲಿತರು ಮತ್ತು ಅದರ ಮೇಲೆ ಉಪನ್ಯಾಸಗಳನ್ನು ನೀಡಿದರು, ಆದರೆ ಆ ಇಡೀ ಸಮಯದಲ್ಲಿ ಅರುಳಿಚ್ಚೆಯಲ್ ಮತ್ತು ರಹಸ್ಯ ಗ್ರಂಥಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು.
 • ಶ್ರೀರಂಗನಾಥನು ಶ್ರೀದೇವಿ ಮತ್ತು ಭೂದೇವಿಯರೊಡಗೂಡಿ ತನ್ನ ಸನ್ನಿಧಿಯ ಮುಂದೆ ಒಂದು ಪೂರ್ಣ ವರ್ಷ ಕಾಲ ಮಣವಾಳ ಮಾಮುನಿ ಅವರಿಂದ ಈಡು ಕಾಲಕ್ಷೇಪವನ್ನು ಕೇಳಿದನು ಮತ್ತು ತನ್ನ ಆಚಾರ್ಯ ಸಂಭಾವನೆಯಾಗಿ ತನ್ನ ಸ್ವಂತ ಶೇಷ ಪರ್ಯಂಕವನ್ನು ನೀಡಿದನು, ಮತ್ತು ಎಲ್ಲೆಡೆಯೂ ಯಾವುದೇ ಅರುಳಿಚ್ಚೆಯಲ್ (ದಿವ್ಯಪ್ರಬಂಧ) ಗೋಷ್ಠಿಯ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಆತನ ಆದೇಶದಂತೆ ಇಂದಿಗೂ ಹಾಡಲ್ಪಡುವ ತನಿಯನ್ ಒಂದನ್ನು ತನ್ನ ಆಚಾರ್ಯರಿಗಾಗಿ ರಚಿಸಿದನು.
 • ಮಣವಾಳ ಮಾಮುನಿಗಳು ತಮ್ಮ ಸ್ವಂತ ಆಸನ, ಚಕ್ರ ಮತ್ತು ಶಂಖಗಳನ್ನು ಪೊನ್ನಡಿಕ್ಕಾಲ್ ಜೀಯರ್ ಅವರಿಗೆ ನೀಡಿದರು, ಮತ್ತು ಅವರಿಗೆ ಅಪ್ಪಾಚಿಯಾರಣ್ಣಾರಿಗೆ ಪಂಚಸಂಸ್ಕಾರವನ್ನು ಮಾಡಲು ಹೇಳಿದರು.

ಹೀಗೆ ಅನೇಕ ಘಟನೆಗಳು ನಡೆದಿವೆ, ಆದರೆ ಆಚಾರ್ಯರು ಮತ್ತು ಶಿಷ್ಯರು ಪರಸ್ಪರ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ಈ ಮೇಲೆ ಕೆಲವನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://ponnadi.blogspot.com/2015/12/simple-guide-to-srivaishnavam-acharya-sishya.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಪರಿಚಯ

ಶ್ರೀವೈಷ್ಣವರಾಗುವುದು ಹೇಗೆ?

ಪುರ್ವಾಚಾರ್ಯರುಗಳು ಹೇಳಿರುವ ಪ್ರಕಾರ ಶ್ರೀವೈಷ್ಣವರಾಗಲು ಒಂದು ವಿಧಾನವಿದೆ – ಅದೇ ಪಂಚ ಸಂಸ್ಕಾರ (ಸಂಪ್ರದಾಯಕ್ಕೆ ಉಪಕ್ರಮ).

ಸಂಸ್ಕಾರವೆಂದರೆ ಶುದ್ಧೀಕರಿಸುವ ಪ್ರಕ್ರಿಯೆ. ಇದು ಸಂಪ್ರದಾಯದಲ್ಲಿ ತೊಡಗಿಸಿಕೊಳ್ಳಲು

ಅನರ್ಹರಾದವರನ್ನು ಅರ್ಹತೆ ಹೊ೦ದಿದವರನ್ನಾಗಿ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಮೊದಲಿಗೆ ಶ್ರೀವೈಷ್ಣವರಾಗುತ್ತಾರೆ.  ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬ್ರಹ್ಮ ಯಜ್ಞದ ಮೂಲಕ ಹೇಗೆ ಸುಲಭವಾಗಿ ಬ್ರಾಹ್ಮಣರಾಗಬಹುದೋ, ಹಾಗೆಯೇ ಶ್ರೀವೈಷ್ಣವ ಕುಟುಂಬದಲ್ಲಿ ಹುಟ್ಟಿದವರಿಗೂ ಪಂಚ ಸಂಸ್ಕಾರಗಳ ಮೂಲಕ  ಶ್ರೀವೈಷ್ಣವರಾಗುವುದು ಬಹಳ ಸುಲಭ. ಆದರೆ ಬ್ರಾಹ್ಮಣ್ಯಕ್ಕಿಂತಲೂ ಶ್ರೀವೈಷ್ಣವತ್ತ್ವಕ್ಕಿರುವ ವಿಶೇಷವೇನೆಂದರೆ ಶ್ರೀವೈಷ್ಣವರಾಗಲು ಶ್ರೀವೈಷ್ಣವ ಕುಟಂಬದಲ್ಲೇ ಹುಟ್ಟಬೇಕೆಂದಿಲ್ಲ. ಏಕೆಂದರೆ, ಶ್ರೀವೈಷ್ಣವತ್ತ್ವವು ಆತ್ಮಕ್ಕೆ ಸಂಬಂಧಿಸಿರುವುದು. ಬ್ರಾಹ್ಮಣ್ಯವು ದೇಹಕ್ಕೆ/ಶರೀರಕ್ಕೆ ಸಂಬಂಧಿಸಿರುವುದು. ಶ್ರೀವೈಷ್ಣವರಲ್ಲಿ ಯಾವುದೇ ರೀತಿಯಲ್ಲಿ (ಜಾತಿ, ನಂಬಿಕೆ, ರಾಷ್ಟ್ರೀಯತೆ, ವರ್ಗ, ಸಿರಿವಂತಿಕೆ, ಇತ್ಯಾದಿ) ಭೇದ ಇರುವುದಿಲ್ಲ. ಯಾರೆಲ್ಲ ಮುಕ್ತಿ/ಮೋಕ್ಷದ ಕಡೆ ಹೋಗಲು ಹಂಬಲಿಸುತ್ತಾರೋ, ಅಂತಹವರೆಲ್ಲಾ ಶ್ರೀವೈಷ್ಣವತ್ತ್ವವನ್ನು ಸ್ವೀಕರಿಸಬಹುದು. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು – ಶ್ರೀವೈಷ್ಣವರಾದಮೇಲೆ ದೇವತಾಂತರಗಳ  (ಭಗವಂತನಿಂದ ನಿಯಂತ್ರಿಸಲ್ಪಡುವ ಬ್ರಹ್ಮ, ಶಿವ, ದುರ್ಗಾ, ಸುಬ್ರಹ್ಮಣ್ಯ, ಇಂದ್ರ, ವರುಣ,ಇತ್ಯಾದಿಗಳ) ಜೊತೆಗೆ ಮತ್ತು ಅಂತಹ ದೇವತಾಂತರ-ಸಂಬಂಧಿಗಳ ಜೊತೆಗಿನ  ಸಂಭಂದದಿಂದ ದೂರವಿರಬೇಕು.

ಪಂಚ ಸಂಸ್ಕಾರ

ಪಂಚ ಸಂಸ್ಕಾರ ಅಥವಾ ಸಮಾಶ್ರಯಣವು ಒಬ್ಬ ಚೇತನನನ್ನು ಶ್ರೀವೈಷ್ಣವನಾಗುವುದಕ್ಕೆ ಅರ್ಹತೆಯುಳ್ಳವನಾಗಿ ಸಿದ್ಧಪಡಿಸಲು ಶಾಸ್ತ್ರದಲ್ಲಿ ವಿವರಿಸಲ್ಪಟ್ಟಿರುವ ಪ್ರಕ್ರಿಯೆ. “ತಾಪ: ಪುಂಡ್ರ: ತಥಾ ನಾಮ ಮಂತ್ರೋ ಯಾಗಶ್ಚ ಪಂಚಮ:” ಎಂಬ ವಾಕ್ಯವು ಪಂಚಸಂಸ್ಕಾರದಲ್ಲಿರುವ ಐದು ವಿಧಿಗಳನ್ನು ವಿವರಿಸುತ್ತದೆ.

ಪಂಚಸಂಸ್ಕಾರದ ಐದು ವಿಧಿಗಳು ಈ ಕೆಳಕಂಡಂತೆ:

 • ತಾಪ: (ಬಿಸಿ) – ಶಂಖ ಚಕ್ರ ಲಾಂಛನ – ತೋಳುಗಳ ಮೇಲೆ ಶಂಖ ಮತ್ತು ಚಕ್ರಗಳ ಮುದ್ರಾಧಾರಣ. ಇದು ನಮ್ಮನ್ನು ಭಗವಂತನ ಸ್ವತ್ತು ಎಂಬುದಾಗಿ ಗುರುತಿಸುತ್ತದೆ. ಪಾತ್ರೆಗಳ ಮೇಲೆ ಹೇಗೆ ಅವುಗಳ ಒಡೆಯನ ಲಾಂಛನಗಳು ಮುದ್ರಿಸಲ್ಪಡುತ್ತವೋ, ಹಾಗೆಯೇ ನಮ್ಮ ತೋಳುಗಳ ಮೇಲೆ ಭಗವಂತನ ಲಾಂಛನಗಳನ್ನು ಒತ್ತಿಕೊಳ್ಳುವುದೇ ತಾಪಸಂಸ್ಕಾರ.
 • ಪುಂಡ್ರ: (ಚಿಹ್ನೆ) – ದ್ವಾದಶ ಊರ್ಧ್ವಪುಂಡ್ರ ಧಾರಣೆ – ದೇಹದ ಹನ್ನೆರಡು ಸ್ಥಳಗಳಲ್ಲಿ ಊರ್ಧ್ವಪುಂಡ್ರಗಳನ್ನು (ತಿರುಮಣ್ ಶ್ರೀಚೂರ್ಣ ರೇಖೆಗಳನ್ನು) ಧರಿಸುವುದು.
 • ನಾಮ (ಹೆಸರು) – ದಾಸ್ಯ ನಾಮ – ಆಚಾರ್ಯರು ಕೊಡುವ ಹೊಸದೊಂದು ದಾಸ್ಯ ನಾಮ (ರಾಮಾನುಜ ದಾಸನ್, ಮಧುರಕವಿ ದಾಸನ್, ಶ್ರಿವೈಷ್ಣವ ದಾಸನ್ ಇತ್ಯಾದಿ).
 • ಮಂತ್ರಃ (ಮಂತ್ರ ಉಪದೇಶ) – ಆಚಾರ್ಯರಿಂದ ರಹಸ್ಯ ಮಂತ್ರೋಪದೇಶವನ್ನು ಪಡೆದುಕೊಳ್ಳುವುದು. ಮಂತ್ರವೆಂದರೆ ಜಪಿಸುವವರನ್ನು ಕಷ್ಟಗಳಿಂದ ಪಾರುಮಾಡುವ ವಸ್ತು. ಆಚಾರ್ಯರು ಉಪದೇಶಿಸುವ ತಿರುಮಂತ್ರ, ದ್ವಯ  ಮತ್ತು ಚರಮ ಶ್ಲೋಕಗಳು ನಮ್ಮನ್ನು ಸಂಸಾರದಿಂದ ಪಾರುಮಾಡುತ್ತವೆ.
 • ಯಾಗಃ (ದೇವ ಪೂಜಾ) ನಿತ್ಯವೂ ಮನೆಯಲ್ಲಿ ಭಗವಂತನಿಗೆ ತಿರುವಾರಾಧನೆಯನ್ನು ಮಾಡಲು ಕಲಿತುಕೊಳ್ಳುವುದು.

ಪೂರ್ವಾಗತ್ಯಗಳು:

ಆಕಿಂಚನ್ಯ (ಸರ್ವಥಾ ಅಸಮರ್ಥತೆಯ ಅನುಮೋದನೆ) ಮತ್ತು ಅನನ್ಯ ಗತಿತ್ವ (ಬೇರೆ ಗತಿಯಿಲ್ಲದಿರುವಿಕೆ) – ಇವೆರಡೂ ನಮಗೆ ಭಗವಂತನಲ್ಲಿ ಶರಣಾಗಲು ಹೊಂದಿರಲೇಬೇಕಾದಂತಹ  ಬಹಳ ಮುಖ್ಯ ಗುಣಗಳು. ಇವೆರಡೂ ನಮ್ಮಲ್ಲಿದ್ದಾಗ ಮಾತ್ರ ಭಗವಂತನಲ್ಲಿ ಪರಿಪೂರ್ಣವಾಗಿ ಶರಣು ಹೊಂದಿ ಅವನಿಂದ ರಕ್ಷಿಸಲ್ಪಡುವುದು ಸಾಧ್ಯವಾಗುವುದು.

ಪಂಚ ಸಂಸ್ಕಾರದ ಧ್ಯೇಯ/ಗುರಿ:

 • ಶಾಸ್ತ್ರವು “ತತ್ತ್ವಜ್ಞಾನಾತ್ ಮೋಕ್ಷಲಾಭಃ” ಎಂದಿರುವಂತೆ ಬ್ರಹ್ಮಜ್ಞಾನ ಪಡೆದುಕೊಳ್ಳುವುದರ ಮೂಲಕವೇ ಮೋಕ್ಷ ದಕ್ಕಿಸಿಕೊಳ್ಳುವುದು ಸಾಧ್ಯ. ಆಚಾರ್ಯರಿಂದ ಅರ್ಥಪಂಚಕದ (ಬ್ರಹ್ಮ – ಭಗವಂತ, ಜೀವಾತ್ಮಾ – ಚೇತನ, ಉಪಾಯ – ಮಾರ್ಗ, ಉಪೇಯ – ಫಲ, ವಿರೋಧಿ – ಫಲಕ್ಕಿರುವ ಅಡಚಣೆ) ಬಗೆಗೆ ಅಮೂಲ್ಯ ಜ್ಞಾನವನ್ನು ಮಂತ್ರೋಪದೇಶದ ಮೂಲಕ ಪಡೆದುಕೊಳ್ಳುವುದರಿಂದ ನಮಗೆ ನಿತ್ಯವಿಭೂತಿಯಲ್ಲಿ (ಶ್ರಿಯಃಪತಿಯ ದಿವ್ಯಧಾಮದಲ್ಲಿ) ಕೈಂಕರ್ಯ ಮಾಡುವ ನಮ್ಮ ಅಂತಿಮ ಗುರಿಗೆ ಯೋಗ್ಯತೆಯುಂಟಾಗುತ್ತದೆ. ಅಲ್ಲದೆ, ನಾವು ಭಗವಂತನ ಮೇಲೆ ಪರಿಪೂರ್ಣವಾಗಿ ಅವಲಂಬಿಸಿದ್ದೇವೆ ಎಂಬುದನ್ನು ಅರಿತುಕೊಳ್ಳುವುದೇ  ನಿಜವಾದ ಜ್ಞಾನ.
 • ಈ ಜನ್ಮದಲ್ಲಿ ಆಚಾರ್ಯರ ಮತ್ತು ಶ್ರೀವೈಷ್ಣವರ ಕೈಂಕರ್ಯವನ್ನು ಅನೇಕವಿಧವಾಗಿ ಮಾಡುವುದು, ಮತ್ತು ಮನೆಗಳಲ್ಲಿ ತಿರುವಾರಾಧನೆಗಳ ಮೂಲಕವೂ, ದಿವ್ಯದೇಶಗಳಲ್ಲಿ ಇತರ ಕೈಂಕರ್ಯಗಳ ಮೂಲಕವೂ ಅರ್ಚಾವತಾರದಲ್ಲಿರುವ ಭಗವಂತನ ಕೈಂಕರ್ಯ ಮಾಡುವುದು.
 • ಈ ಮಹತ್ತರವಾದ ಸಂದೇಶವನ್ನು ಇತರರಿಗೆ ತಿಳಿಸಿ, ಅವರೂ ಆಧ್ಯಾತ್ಮಿಕವಾಗಿ ಇದರ ಮೂಲಕ ಉಪಯೋಗ ಪಡೆದುಕೊಳ್ಳಲು ಸಹಾಯ ಮಾಡುವುದು.  ಶ್ರೀ ರಾಮಾನುಜರ ಆದೇಶಗಳಲ್ಲಿ ಪ್ರಮುಖವಾದದ್ದು ಶ್ರೀ ವೈಷ್ಣವರು ಮೊದಲು ಶ್ರೀ ಭಾಷ್ಯ, ತಿರುವಾಯ್‌ಮೊೞಿಗಳನ್ನು ಕಲಿತು, ಅದನ್ನು ಬೇರೆಯವರಿಗೂ ಕಲಿಸಿಕೊಡಬೇಕು ಎಂಬುದೇ ಆಗಿದೆ.

ಇಲ್ಲಿ ಆಚಾರ್ಯರು ಜೀವಾತ್ಮ-ಪರಮಾತ್ಮರುಗಳನ್ನು ಒಂದುಗೂಡಿಸುತ್ತಾರೆ. ಸಾಧಾರಣವಾಗಿ ಶ್ರೀವೈಷ್ಣವರು ಪ್ರಪನ್ನರೆಂದು ಕರೆಯಲ್ಪಟ್ಟರೂ, ಶ್ರೀ ರಾಮಾನುಜರು ಮತ್ತು ಎಲ್ಲಾ ಪೂರ್ವಾಚಾರ್ಯರುಗಳೂ ನಾವು ಆಚಾರ್ಯನಿಷ್ಠರೆಂಬುದನ್ನು ಸ್ಪಷ್ಟವಾಗಿ ತೋರಿಕೊಟ್ಟಿದ್ದಾರೆ. ಎಂದರೆ, ನಾವು ಎಲ್ಲದಕ್ಕೂ ಆಚಾರ್ಯರನ್ನೇ ಸಂಪೂರ್ಣವಾಗಿ ಅವಲಂಬಿಸುವವರು ಎಂದರ್ಥ. ಈ ಪಂಚ ಸಂಸ್ಕಾರದಿಂದಲೇ ಆತ್ಮಕ್ಕೆ ನಿಜವಾದ ಜನನ ಎಂದು ಪರಿಗಣಿಸಲ್ಪಡುತ್ತದೆ. ಏಕೆಂದರೆ, ಪಂಚ ಸಂಸ್ಕಾರದ ಮೂಲಕವೇ ಜೀವಾತ್ಮ ತನ್ನ ಸ್ವರೂಪವನ್ನರಿತುಕೊಂಡು ಭಗವಂತನಲ್ಲಿ ಶರಣುಹೊಂದುವುದು. ಜೀವಾತ್ಮ-ಪರಮಾತ್ಮರುಗಳ ನಡುವಣ ಈ ಬೆಸುಗೆಯು ಪತಿ(ಪರಮಾತ್ಮ)-ಪತ್ನಿ(ಜೀವಾತ್ಮ) ಸಂಬಂಧದಂತೆ ಪವಿತ್ರವಾದುದರಿಂದಲೇ ಅನ್ಯ ದೇವತೆಗಳ ಸಂಬಂಧ ಕೂಡದೆಂಬುದಾಗಿ ಒತ್ತಿ ಹೇಳಲ್ಪಡುತ್ತದೆ.

ಆದ್ದರಿಂದ, ಮೇಲೆ ಹೇಳಿರುವಂತೆ ಈ ಸಂಸಾರವನ್ನು ತ್ಯಜಿಸಿ ಪರಮಪದಕ್ಕೆ ತೆರಳಿ ಶ್ರ‍ಿಯಃಪತಿಗೆ ನಿರಂತರ ಕೈಂಕರ್ಯವನ್ನು ಮಾಡುವುದೇ ಶ್ರೀವೈಷ್ಣವತ್ತ್ವದ ಮೂಲಸಿದ್ಧಾಂತ.

ಯಾರು ಪಂಚ ಸಂಸ್ಕಾರ ಮಾಡಬಹುದು?

ಶ್ರೀ ವೈಷ್ಣವತ್ತ್ವವು ಒಂದು ಚಿರಂತನವಾದ ಸಿದ್ಧಾಂತವಾದರೂ (ಇದು ಕ್ಷೀಣವಾದ ಕಾಲದಲ್ಲಿ) ಇದನ್ನು ಪುನಃ ಜಗತ್ತಿನಲ್ಲಿ ನೆಲೆಯಾಗಿಸಿದ್ದು ಆಳ್ವಾರ್, ಆಚಾರ್ಯರುಗಳು. ಶ್ರೀ ರಾಮಾನುಜರು ಶಾಸ್ತ್ರಗಳನ್ನು ಅಧ್ಯಯನ ಮಾಡಿ, ನಾಥಮುನಿಗಳು, ಆಳವಂದಾರ್ ಮೊದಲಾದ ನಮ್ಮ ಪೂರ್ವಾಚಾರ್ಯರುಗಳ ಆದೇಶದಂತೆ ಕೆಲವು ಆಚರಣೆಗಳ ಮೂಲಕ ಸಿದ್ಧಾಂತವನ್ನು ಪುನಃ ಸ್ಥಾಪಿಸಿದರು. ಅವರು ೭೪ ಸಿಂಹಾಸನಾಧಿಪತಿಗಳನ್ನು (ಆಚಾರ್ಯಪುರುಷರನ್ನು) ಪ್ರತಿಷ್ಠಾಪಿಸಿ,  ಅವರೆಲ್ಲರಿಗೂ ಸಂಸಾರವನ್ನು ತ್ಯಜಿಸಿ ಮೋಕ್ಷಾನಂದಕ್ಕೆ ಹಂಬಲಿಸುವ ಜೀವನದ ಅಂತಿಮ ಗುರಿಯನ್ನು ಚೆನ್ನಾಗಿ ಅರಿತ ಜೀವರುಗಳಿಗೆ ಪಂಚಸಂಸ್ಕಾರವನ್ನು ಮಾಡುವ ಅಧಿಕಾರವನ್ನಿತ್ತರು. ಈ ೭೪ ಸಿಂಹಾಸನಾಧಿಪತಿಗಳ ದಿವ್ಯ  ಪರಂಪರೆಯಲ್ಲಿ  ಬರುವವರು ಪಂಚಸಂಸ್ಕಾರ ಮಾಡಲು ಪೂರ್ಣ ಅಧಿಕಾರಿಗಳು.

ಶ್ರೀ ರಾಮಾನುಜರು (ಮತ್ತು ಮಣವಾಳ ಮಾಮುನಿಗಳು) ಹಲವು ಮಠಗಳನ್ನು ಸ್ಥಾಪಿಸಿ, ಅದಕ್ಕೆ ಮುಖ್ಯಸ್ಥರಾಗಿ ಜೀಯರ್ ಸ್ವಾಮಿಗಳನ್ನು (ಸಂನ್ಯಾಸಿಗಳನ್ನು) ನೇಮಿಸಿ, ಅವರ ಪರಂಪರೆಯಲ್ಲಿ ಬರುವ ಎಲ್ಲಾ ಸ್ವಾಮಿಗಳಿಗೂ ಕೂಡ ಶ್ರೀವೈಷ್ಣವರಾಗಲಿಚ್ಛಿಸುವವರಿಗೆ ಪಂಚ ಸಂಸ್ಕಾರವನ್ನು ಮಾಡಲು ಅಧಿಕಾರ ನೀಡಿದರು.

ಪಂಚ ಸಂಸ್ಕಾರ / ಸಮಾಶ್ರಯಣ ಮಾಡಿಸಿಕೊಳ್ಳುವ ದಿನ ಅನುಸರಿಸಬೇಕಾದ ವಿಧಿ ವಿಧಾನಗಳು:

 • ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಏಳಬೇಕು.
 • ಶ್ರೀಮನ್ನಾರಾಯಣ, ಆಳ್ವಾರ್‌ಗಳು ಮತ್ತು ಆಚಾರ್ಯರುಗಳನ್ನು ಧ್ಯಾನಿಸಬೇಕು. ಇದು ನಮ್ಮ ನಿಜವಾದ ಜನ್ಮದಿನ – ನಮಗೆಲ್ಲ ಜ್ಞಾನೋದಯವಾಗುವ ದಿನ.
 • ನಿತ್ಯ ಕರ್ಮಾನುಷ್ಠಾನವನ್ನು ಮುಗಿಸಬೇಕು (ಸ್ನಾನ, ಊರ್ಧ್ವಪುಂಡ್ರ ಧಾರಣೆ, ಸಂಧ್ಯಾವಂದನಾದಿಗಳು).
 • ನಿಗದಿತ ಸಮಯಕ್ಕೆ ಸರಿಯಾಗಿ ಆಚಾರ್ಯರ ಮಠ/ತಿರುಮಾಳಿಗೈಗೆ ತಲುಪಬೇಕು. ಯಥಾಶಕ್ತಿ ಹೂವು, ಹಣ್ಣು, ವಸ್ತ್ರಗಳು (ದೇವರಿಗೆ/ಆಚಾರ್ಯನಿಗೆ), ಸಂಭಾವನೆ (ಹಣ), ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದು.
 • ಸಮಾಶ್ರಯಣ ಮಾಡಿಸಿಕೊಳ್ಳಬೇಕು.
 • ಆಚಾರ್ಯರ ಶ್ರೀಪಾದ ತೀರ್ಥವನ್ನು ಸ್ವೀಕರಿಸಬೇಕು.
 • ಆಚಾರ್ಯರ ಉಪದೇಶಗಳನ್ನು ಗಮನವಿಟ್ಟು ಕೇಳಿಕೊಳ್ಳಬೇಕು.
 • ಆಚಾರ್ಯರ ಮಠ/ತಿರುಮಾಳಿಗೈಯಲ್ಲಿ ಪ್ರಸಾದವನ್ನು ಸ್ವೀಕರಿಸಬೇಕು.
 • ಆಚಾರ್ಯರ ಮಠ/ತಿರುಮಾಳಿಗೈಯಲ್ಲಿ ಆ ದಿನವನ್ನು ಕಳೆದು, ಆಚಾರ್ಯನಿಂದ ನೇರವಾಗಿ ಗುರು ಪರಂಪರೆ, ಸಂಪ್ರದಾಯ, ಇತ್ಯಾದಿಗಳ ಬಗೆಗೆ ಸಾಧ್ಯವಾದಷ್ಟು ತಿಳಿದುಕೊಳ್ಳಬೇಕು.
 • ಆ ದಿನದಂದು ಬೇರೆ ಎಲ್ಲ ಕೆಲಸಗಳನ್ನೂ (ಕಛೇರಿ ಕೆಲಸ, ಬೇರೆ ಮನೆಗೆಲಸಗಳು, ಇತ್ಯಾದಿ) ಬದಿಗಿಟ್ಟು,  ಆ ದಿನಪೂರ್ತಿ ನಮ್ಮ ಗುರುಪರಂಪರೆಯೆಡೆಗೆ ಕೃತಜ್ಞತಾ ಭಾವದೊಂದಿಗೆ ಮನಃಶಾಂತಿಯಿಂದ ಕಳೆಯಬೇಕು. ಆ ದಿನವೇ ನಮ್ಮ ಜೀವನದಲ್ಲಿ ಇನ್ನೂ ಅನೇಕ ಶಾಂತಿಯುತ ದಿನಗಳಿಗೆ ನಾಂದಿಯಾಗಬೇಕು.

ಪಂಚ ಸಂಸ್ಕಾರ ಆರಂಭವೋ ಅಥವಾ ಕೊನೆಯೋ?

ಸಾಮಾನ್ಯವಾಗಿ ಸಮಾಶ್ರಯಣವು ಒಂದು ಚಿಕ್ಕ ಪ್ರಕ್ರಿಯೆ, ಮತ್ತು ಅದುವೇ ಕೊನೆ (ನಂತರ ಮಾಡಬೇಕಾದದ್ದೇನಿಲ್ಲ) ಎಂಬ ಭಾವ ಅನೇಕರ ಮನಗಳಲ್ಲಿ ಮನೆಮಾಡಿದೆ. ಆದರೆ ಅದು ತಪ್ಪು ಪರಿಕಲ್ಪನೆ.  ಪಂಚ ಸಂಸ್ಕಾರವೆಂಬುದು ಶ್ರೀವೈಷ್ಣವತ್ತ್ವದ ಪಯಣದಲ್ಲಿ ಇರಿಸುವ ಮೊದಲ ಹೆಜ್ಜೆ. ಈ ಪಯಣದಲ್ಲಿ ಅಂತಿಮ ಗುರಿ (ಶ್ರೀಮಹಾಲಕ್ಷ್ಮೀ ಮತ್ತು ಶ್ರೀಮನ್ನಾರಾಯಣರಿಗೆ ನಿತ್ಯ ಕೈಂಕರ್ಯ ಮಾಡುವುದು) ನಿರ್ಧಾರಿತವಾಗಿದೆ.  ಈ ಗುರಿ ತಲುಪಲು ನಮಗೆ ಆಚಾರ್ಯರುಗಳು ಒಂದು ನಿರ್ದಿಷ್ಟ ಕ್ರಮ/ಪಥವನ್ನು ನೀಡಿದ್ದಾರೆ. ಅದುವೇ ಸದಾಚಾರ್ಯನ ಮೂಲಕ ಭಗವಂತನೇ ನಮ್ಮ ಉಪಾಯವೆಂದು ಅಂಗೀಕರಿಸುವಿಕೆ, ಮತ್ತು ಆ ಆಚಾರ್ಯನು ತೋರಿದ ಹಾದಿಯಲ್ಲಿ ಸಂತೋಷದಿಂದ ಮುನ್ನಡೆಯುವ ಇಚ್ಛೆ. ಈ ಕ್ರಮವನ್ನು ಯಥಾವತ್ತಾಗಿ ಅಂಗೀಕರಿಸಿ ಅದರಂತೆಯೇ ನಡೆದು ಉಜ್ಜೀವನ ಹೊಂದುವುದು ಪ್ರತಿಯೊಬ್ಬ ಜೀವನಿಗೂ ಸ್ವರೂಪಕ್ಕೆ ಒಪ್ಪುವಂಥದ್ದು, ಮತ್ತು ಅವಶ್ಯವಾಗಿ ಅನುಸರಿಸತಕ್ಕ ನಿಯಮ.

ತಮ್ಮ ಮುಮುಕ್ಷುಪ್ಪಡಿ ಸೂತ್ರ ೧೧೬ರಲ್ಲಿ ಪಿಳ್ಳೈ ಲೋಕಾಚಾರ್ಯರು, ಪಂಚಸಂಸ್ಕಾರವಾಗಿರುವ ಶ್ರೀವೈಷ್ಣವನ ಅಪೇಕ್ಷಿತ ನಡತೆಯನ್ನು ತೋರಿಸಿಕೊಟ್ಟಿದ್ದಾರೆ. ಅವು ಈ ಕೆಳಕಂಡಂತೆ:

 • ಲೌಕಿಕ ವಿಷಯಗಳ ಬಗೆಗಿರುವ ವ್ಯಾಮೋಹವನ್ನು ಸಂಪೂರ್ಣವಾಗಿ ತ್ಯಜಿಸುವುದು.
 • ಶ್ರೀಮನ್ನಾರಾಯಣನೊಬ್ಭನೇ ಗತಿಯೆಂದು ಗಟ್ಟಿಯಾಗಿ ನಂಬುವುದು.
 • ನಿತ್ಯಕೈಂಕರ್ಯದ ಸಾಕ್ಷಾತ್ಕಾರದ ಬಗ್ಗೆ ಅಪಾರ ವಿಶ್ವಾಸ ಹೊಂದಿರುವುದು.
 • ಆ ನಿತ್ಯಕೈಂಕರ್ಯವನ್ನು ಆದಷ್ಟು ಶೀಘ್ರ ಪಡೆದುಕೊಳ್ಳಲು ಸದಾ ಹಪಹಪಿಸುವುದು.
 • ಈ ಭೂಮಿಯಲ್ಲಿರುವವರೆಗೂ ಸದಾ ದಿವ್ಯದೇಶಗಳಲ್ಲಿದ್ದುಕೊಂಡು, ಭಗವಂತನ ಗುಣಾನುಭವಪೂರ್ವಕವಾಗಿ ಅವನ ಸೇವೆಗಳನ್ನು ಮಾಡುವುದು.
 • ಈ ಎಲ್ಲ ಅಂಶಗಳನ್ನೂ ಚಾಚೂತಪ್ಪದೆ ಪಾಲಿಸುತ್ತಿರುವ ಭಗವದ್ಭಕ್ತರ ಮಹಿಮೆಯನ್ನರಿತು ಅವರನ್ನು ಕಂಡು ಆನಂದಿಸುವುದು.
 • ಸದಾಕಾಲ ತಿರುಮಂತ್ರ ಮತ್ತು ದ್ವಯ ಮಹಾಮಂತ್ರಗಳನ್ನು (ಅರ್ಥಸಹಿತವಾಗಿ) ಮನಸಾರೆ ಅನುಸಂಧಾನ ಮಾಡುವುದು.
 • ಸ್ವಾಚಾರ್ಯರ ಮೇಲೆ ಅತಿಯಾದ ಭಕ್ತಿ ಹೊಂದಿರುವುದು.
 • ಭಗವಂತ ಮತ್ತು ಆಚಾರ್ಯರ ವಿಷಯದಲ್ಲಿ ಸದಾ ಕೃತಜ್ಞತೆಯೊಂದಿಗಿರುವುದು.
 • ನಿತ್ಯವೂ ನಿಜವಾದ ಜ್ಞಾನ, ವೈರಾಗ್ಯ ಮತ್ತು ಶಾಂತಿಯಿಂದ ಕೂಡಿದ ಸಾತ್ವಿಕ ಶ್ರೀವೈಷ್ಣವರ ಸಹವಾಸ ಮಾಡುವುದು.

ಈ ಮೇಲೆ ತಿಳಿಸಿರುವ ವಿಷಯಗಳ ಬಗ್ಗೆ ಇನ್ನಷ್ಟು ವಿವರಗಳಿಗೆ ನೋಡಿ: http://ponnadi.blogspot.in/2012/08/srivaishnava-lakshanam-5.html

ಇವೆಲ್ಲದರೊಂದಿಗೆ, ನಾವೆಲ್ಲರೂ ಈ ಪಂಚಸಂಸ್ಕಾರ ಪ್ರಕ್ರಿಯನ್ನು ಅದ್ಭುತವಾಗಿ ಸಂಸ್ಥೀಕರಿಸಿ, ತನ್ನ ಶಿಷ್ಯರಾದ ೭೪ ಸಿಂಹಾಸನಾಧಿಪತಿಗಳ ಮೂಲಕ ಪ್ರಚಾರ ಪಡಿಸಿದ ಭಗವದ್ರಾಮಾನುಜರಿಗೂ

ಅತ್ಯಂತ  ಕೃತಜ್ಞರಾಗಿರಬೇಕು. ಅವರು ಇಷ್ಟೆಲ್ಲ ಮಾಡಲು ಕಾರಣ – ಅವರಿಗೆ ಈ ಜೀವಕೋಟಿಯ ಮೇಲಿದ್ದ ಅಪಾರ ಅನುಕಂಪ. ಈ ಸಂಸಾರಮಂಡಲದಲ್ಲಿ ಅಜ್ಞಾನದಿಂದ ಆವೃತರಾಗಿ ಅಲೆಯುತ್ತ, ತಮ್ಮ ನಿಜಸ್ವರೂಪವಾದ ಭಗವಂತನಿಗೆ ಮಂಗಳಾಶಾಸನ ಮಾಡುವುದರಿಂದ (ಭಗವಂತನಿಗೆ ಶುಭವನ್ನಾಶಿಸುವುದರಿಂದ) ಹೊರಗುಳಿದ ಜೀವಕೋಟಿಯನ್ನು ಕಂಡು, ಅವರನ್ನೆಲ್ಲ ತಿದ್ದಿ ಸರಿದಾರಿಯಲ್ಲಿ ನಡೆಸಲು ಅವರು ಇಷ್ಟೆಲ್ಲ ಮಾಡಿದರು. ಈ ವಿಷಯಗಳ ಬಗೆಗೆ ಮುಂಬರುವ ಲೇಖನಗಳಲ್ಲಿ ತಿಳಿದುಕೊಳ್ಳಬಹುದು.

ಅಡಿಯೇನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: http://ponnadi.blogspot.in/2015/12/simple-guide-to-srivaishnavam-pancha-samskaram.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಬೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪರಿಚಯ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

<< ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

srivaishna-guruparamparai

ಶ್ರೀಮನ್ ನಾರಾಯಣನು, ತನ್ನ ಅತಿಯಾದ ಕರುಣೆಯಿಂದ, ಸಂಸಾರಿಗಳನ್ನು (ಮರಣ-ಜನನ ಎಂಬ ಸುಳಿಯಲ್ಲಿ ಸಿಲಿಕಿರುವ ಜೀವಾತ್ಮ) ಉದ್ದರಿಸಲು, ಬ್ರಹ್ಮನಿಗೆ ಸೃಷ್ಟಿಸುವ ಸಮಯದಲ್ಲಿ ಶಾಸ್ತ್ರವನ್ನು (ವೇದವನ್ನು) ತಿಳಿಯಪಡಿಸುತ್ತಾನೆ.  ವೇದವು, ವೈದಿಕರಿಗೆ ಉನ್ನತವಾದ ಪ್ರಮಾಣವು. ಪ್ರಮಾತಾ (ಆಚಾರ್ಯನ್), ಪ್ರಮೇಯವನ್ನು (ಎಂಪೆರುಮಾನ್) ಪ್ರಮಾಣದಿಂದ ಮಾತ್ರ (ಶಾಸ್ತ್ರ) ನಿರ್ಧರಿಸಲಾಗುವುದು. ಎಂಪೆರುಮಾನ್ ತನ್ನ “ಅಕಿಲ ಹೇಯ ಪ್ರತ್ಯನೀಕತ್ವಮ್” (ಎಲ್ಲಾ ಕೆಟ್ಟ ಗುಣಗಳಿಗೆ ವಿರುದ್ಧ ಗುಣಗಳು) ಮತ್ತು “ಕಲ್ಯಾಣೈಕತನತ್ವಮ್” (ಎಲ್ಲಾ ಕಲ್ಯಾಣ ಗುಣಗಳು ಅವನಲ್ಲಿ ವಾಸವಾಗಿದೆ) ಎಂಬ ಗುಣಗಳಿಂದ ಹೇಗೆ ಬೆರೆಲ್ಲದರಿಂದ ಪ್ರತ್ಯೇಕಿಸುತ್ತಾನೊ, ಹಾಗೆಯೆ ವೇದಕ್ಕು, ಬೆರೆಲ್ಲಾ ಪ್ರಮಾಣಗಳಿಗಿಂತ ಪ್ರತ್ಯೇಕವಾದ ಗುಣಗಳಿವೆ:

 • ಅಪೌರುಶೇಯತ್ವಮ್ – ಯಾರಿಂದಲೂ, ಸೃಷ್ಟಿಸಲ್ಪಟ್ಟಿಲ್ಲಾ (ಪ್ರತಿ ಒಂದು ಸೃಷ್ಟಿಯ ಸಮಯದಲ್ಲು ಎಂಪೆರುಮಾನ್, ವೇದವನ್ನು ಬ್ರಹ್ಮನಿಗೆ ಹೇಳಿಕೊಡುತ್ತಾನೆ. ಅದನ್ನು ಮುಂದಕ್ಕೆ ಬ್ರಹ್ಮ ದೇವರು ಪ್ರಸರಿಸುತ್ತಾರೆ),  ಆದ್ದರಿಂದ, ಒಬ್ಬ ವ್ಯಕ್ತಿಯ ತಪ್ಪಾಗುವ ಅನುಭವ/ಗ್ರಹಿಕೆ ಇದರಲ್ಲಿ ಬಾರದು.
 • ನಿತ್ಯಮ್ – ಶಾಶ್ವತವಾದದ್ದು – ಆರಂಭ ಮತ್ತು ಕೊನೆ ಇಲ್ಲದ – ವೇದದ ಅಧಿಪತಿಯಾದ ಎಂಪೆರುಮಾನ್, ಈ ಗುಣವನ್ನು ಮತ್ತೆ ಮತ್ತೆ ತಿಳಿಸುತ್ತಾನೆ.
 • ಸ್ವತ ಪ್ರಾಮಾಣ್ಯತ್ವಮ್ – ಎಲ್ಲಾ ವೇದವಾಕ್ಯವು ಸ್ವಯಂಪೂರ್ಣ – ಬೇರೆನೂ ಬೇಕಿಲ್ಲಾ ಇದರ ಸತ್ವವನ್ನು ಸಾಬೀತುಮಾಡಲು.

ವೇದವು ಒಂದು ವ್ಯಾಪಕವಾದ ಗ್ರಂಥ. ಸಾಮಾನ್ಯ ಮನುಷ್ಯನ ಸೀಮಿತ ಜ್ಞಾನ ಅರಿತ ವೇದವ್ಯಾಸ ದೇವರು, ವೇದವನ್ನು 4 ವೇದಗಳಾಗಿ ವಿಭಜಿಸಿದರು – ಋಗ್ವೇದ , ಯಜುರ್, ಸಾಮ ಮತ್ತು ಅಥರ್ವಣ ವೇದ.

ವೇದಾಂತವೆ, ವೇದದ ಸಾರ.  ಉಪನಿಷದ್ಗಳ ಸಂಗ್ರಹವೇ ವೇದಾಂತಮ್ – ಇವುಗಳು ದೇವರ (ಎಂಪೆರುಮಾನ್)ತುಂಬ ಆಳವಾದ ವಿಷಯವನ್ನು ತಿಳಿಸುತ್ತವೆ. ಉಪನಿಷದ್ಗಳು ಮಹಾನ್ ಋಷಿಗಳ ಕೊಡುಗೆ – ಆ ಮಹಾನ್ ಋಷಿಗಳು ಬ್ರಹ್ಮನನ್ನು (ಎಂಪೆರುಮಾನ್) ತುಂಬ ಧೀರ್ಗವಾಗಿ ಮತ್ತು ಬೇರೆ ಅಂಶಗಳಿಂದ ವಿಶ್ಲೇಷಿಸಿದ್ದಾರೆ. ವೇದವು, ಆರಾಧನೆಯ ವಿಧಿ ವಿಧಾನಗಳನ್ನು ತಿಳಿಸಿಕೊಡುತ್ತದೆ, ವೇದಾಂತವು-ಯಾರಿಗೆ ಆರಾಧನೆಯೊ, ಅವನ ಬಗ್ಗೆ ತಿಳಿಸಿಕೊಡುತ್ತದೆ. ಉಪನಿಷದ್ಗಳಲ್ಲಿ, ಪ್ರಾಕಾರಗಳು ಬಹಳ ಇವೆ, ಅದರಲ್ಲಿ ಪ್ರಮುಖವಾದದು:

 • ಐತರೇಯ
 • ಬೃಹದಾರಣ್ಯಕ
 • ಛಾನ್ದೋಗ್ಯ
 • ಇಶ
 • ಕೇನ
 • ಕಠ
 • ಕೌಶೀದಿಕಿ
 • ಮಹಾ ನಾರಾಯಣ
 • ಮಾನ್ಡುಕ್ಯ
 • ಮುಂಡಕ
 • ಪ್ರಶ್ನ
 • ಸುಭಾಲ
 • ಸ್ವೇತಸ್ವತಾರ
 • ತೈತ್ತ್ರಿಯ

ವೇದವ್ಯಾಸ ದೇವರ ಮತ್ತೊಂದು ಕೊಡುಗೆ – ಬ್ರಹ್ಮ ಸೂತ್ರಮ್ – ಇದು ಕೂಡ ವೇದಾಂತದ ಒಂದು ಭಾಗ – ಇದು ಉಪನಿಷದ್ಗಳ ಸಾರ. ವೇದ ಅನಂತವು, ವೇದಾಂತವನ್ನು ಅರ್ಥ ಮಡಿಕೊಳ್ಳಳು ತುಂಬ ಕಷ್ಟ (ಸಾಮನ್ಯ ಮನುಷ್ಯನ ಜ್ಞಾನ ವೇದ/ವೇದಾಂತದ ಸಾರದ ಅರ್ಥವನ್ನು ತಪ್ಪಾಗಿತಿಳಿದುಕೊಳ್ಳಳು ಸಾಧ್ಯವಿಧೆ ).  ಅದಕ್ಕಾಗಿ, ವೇದ/ವೇದಾಂತವನ್ನು ಸ್ಮೃತಿ, ಇತಿಹಾಸ ಮತ್ತು ಪುರಾಣ.

 • ಸ್ಮೃತಿ – ಎಲ್ಲಾ ಧರ್ಮ ಶಾಸ್ತ್ರಗಳ ಸಂಗ್ರಹಣೆ ಸ್ಮೃತಿ.  ಮಹಾನ್ ಋಷಿಗಳಾದ ಮನು, ವಿಷ್ಣು ಹರಿತ, ಯಾಗ್ಯವಲ್ಕ್ಯ..ಸಂಗ್ರಹಿಸಿರುವ ಗ್ರಂಥ
 • ಇತಿಹಾಸ – ಮಹಾಭಾರತ ಮತ್ತು ಶ್ರೀ ರಾಮಾಯಣ – ಶ್ರೀ ರಾಮಾಯಣವನ್ನು ಶರಣಾಗತಿ ಶಾಸ್ತ್ರವೆಂದು ಮತ್ತೆ ಮಾಹಾಭಾರತವನ್ನು ಪಂಚಮೋ ವೇದವೆಂದು ಪರಿಗಣಿಸಲ್ಪಟ್ಟಿದೆ
 • ಪುರಾಣ – 18 ಮುಖ್ಯವಾದ ಪುರಾಣಗಳ ಸಂಗ್ರಹ – (ಬ್ರಹ್ಮ ಪುರಾಣಮ್, ಪದ್ಮ ಪುರಾಣಮ್, ವಿಷ್ಣು ಪುರಾಣಮ್, ಇತ್ಯಾದಿ) ಮತ್ತು ಬಹುಸಂಖ್ಯೆಯ ಉಪ (ಮುನೊರ್) ಪುರಾಣಗಳ ಸಂಗ್ರಹ (ಬ್ರಹ್ಮ ದೇವರಿಂದ). ಈ 18 ಮುಖ್ಯವಾದ ಪುರಾಣಗಳಲ್ಲಿ, ಬ್ರಹ್ಮ ದೇವರು ಹೇಳಿದಂತೆ – ಯಾವಾಗ ಬ್ರಹ್ಮ ದೇವರು ಸತ್ವ ಗುಣದಲ್ಲಿರುತ್ತಾರೊ, ಆಗ ವಿಷ್ಣುವನ್ನು ವೈಭವೀಕರಿಸುತ್ತಾರೆ, ಯಾವಾಗ ಬ್ರಹ್ಮ ದೇವರು ರಜೋ ಗುಣದಲ್ಲಿರುತ್ತಾರೊ, ಆಗ ಸ್ವಯಂ (ಅಹಮ್) ವೈಭವೀಕರಿಸುತ್ತಾರೆ, ಯಾವಾಗ ಬ್ರಹ್ಮ ದೇವರು ತಮೊ ಗುಣದಲ್ಲಿರುತ್ತಾರೊ ಆಗ ಶಿವ, ಅಗ್ನಿ, ಇತ್ಯಾದಿಯರನ್ನು ವೈಭವೀಕರಿಸುತ್ತಾರೆ.

ಇವೆಲ್ಲಾಇರವುದು ನಮ್ಮ ಜ್ಞಾನ ಬೆಳಸಿಕೊಳ್ಳಲು, ಆದರೆ ಮನುಷ್ಯ ಸಂಸಾರದ ಸಾಗರದಲ್ಲಿ ಮುಳುಗಿ, ಸಂಸಾರ ಎನ್ನುವ ಮಾಯೆಯಲ್ಲಿ ಇದ್ದಾನೆ. ಎಂಪೆರುಮಾನ್ ತಾನೆ ಸ್ವತಃ ಜನಿಸಿ (ಅವತಾರವೆತ್ತಿ) ಬಂದಾಗ, ಅವನ ಮೇಲೆ ಮನುಷ್ಯನಿಗೆ ಇರೊ ಅವಮರಿಯಾದೆ, ಕೋಪ , ಅವನ ಮೇಲೆ ಜಗಳ – ಇವೆಲ್ಲವನ್ನು ಅನುಭವಿಸುತ್ತಾನೆ. ಇದನ್ನು ಕಂಡ ಪರಮಾತ್ಮ, ಜೀವಾತ್ಮವನ್ನು ಸೃಷ್ಟಿಸುವುದು ಸೂಕ್ತವೆಂದು, ಕೆಲವು ಆಯ್ದ ಜೀವಾತ್ಮವನ್ನು ಸೃಷ್ಟಿಸಿ, ಅವರಿಗೆ ದೋಷವಿಲ್ಲದ ದೈವಿಕ ಜ್ಞಾನವನ್ನು ಕೊಡುತ್ತಾನೆ. ಈ ಜೀವತ್ಮಾಗಳಿಗೆ ಆಳ್ವಾರ್ಗಳಾಗಿ ಪ್ರಸಿದ್ಧವಾಗುತ್ತಾರೆ (ಆಳ್ವಾರ್ – ಭಗವಂತನ ಅನುಭವದಲ್ಲಿ ಅಭಿಯುಕ್ತರಾಗಿರುವರು ಎಂದು ಅರ್ಥ).  10 ಆಳ್ವಾರ್ಗಳಿದ್ದು, ಇವರಲ್ಲಿ ಮುಖ್ಯಸ್ಥರಾಗಿ ನಮ್ಮಾಳ್ವಾರ್ ((ಪ್ರಪನ್ನ ಕುಲ ಕೂಟಸ್ತರ್/ವೈಷ್ಣವ ಕುಲಪತಿ))- 10 ಆಳ್ವಾರ್ಗಳು:

 • ಪೊಯ್ಗೈ ಆಳ್ವಾರ್
 • ಭೂತತ್ತಾಳ್ವಾರ್
 • ಪೇಯ್ ಆಳ್ವಾರ್
 • ತಿರುಮಳ್ಹಿಸೈ ಆಳ್ವಾರ್
 • ನಮ್ಆಳ್ವಾರ್
 • ಕುಲಸೇಕರ ಆಳ್ವಾರ್
 • ಪೆರಿಯಾಳ್ವಾರ್
 • ತೊಣ್ಡರಡಿಪ್ಪೊಡಿ ಆಳ್ವಾರ್
 • ತಿರುಪ್ಪಾಣಾಳ್ವಾರ್
 • ತಿರುಮಂಗೈ ಆಳ್ವಾರ್

ಮಧುರಕವಿ ಆಳ್ವಾರ್ (ನಮ್ಆಳ್ವಾರ್ ಶಿಷ್ಯ) ಮತ್ತು ಆಂಡಾಳ್ (ಪೆರಿಯಾಳ್ವಾರ್ ಪುತ್ತ್ರಿ), ಇವರನ್ನು ಆಳ್ವಾರ್ ಗೋಷ್ಠಿಗೆ ಸೇರಿಸಲ್ಪಟ್ಟಿದೆ. ಭಗವಂತನ ಕೃಪಾಕಟಾಕ್ಷ ಮತ್ತು ದೈವಿಕ ಜ್ಞಾನ ಹೊಂದಿರುವ ಆಳ್ವಾರ್ಗಳು, ಎಂಪೆರುಮಾನ್/ಭಗವಂತನ ದೈವಿಕ ಜ್ಞಾನವನ್ನು ಉಪದೇಶಿಸಿದರು.  ಭಗವತ್ ಅನುಭವದಲ್ಲಿ ಮುಳಿಗಿರುವ ಆಳ್ವಾರ್ಗಳು, ಅವರ ದೃಷ್ಟಿಯು  ಎಂಪೆರುಮಾನರ ಮಂಗಳಾಶಾಸನದ ಮೇಲೆ.

ಜೀವಾತ್ಮಾವನ್ನು ಸಂಸಾರದಿಂದ ಮೇಲೆತ್ತಲು, ಎಂಪೆರುಮಾನ್, ಆಚಾರ್ಯರನ್ನು ತರುತ್ತಾನೆ (ನಾಥಮುನಿಗಳಿಂದ  ಶುರುವಾಗಿ ಮಣವಾಳ ಮಾಮುನಿಗಳ್ (ಶ್ರೀ ವರವರಮುನಿ) ವರೆಗೆ) ಭಗವತ್ ರಾಮಾನುಜರು, ಆದಿಶೇಷನ ಅವತಾರದ ವಿಶೇಷ . ಇವರು ಗುರು ಪರಂಪರೆಯ ಮಧ್ಯಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಭಗವತ್ ರಾಮಾನುಜರು, ಶ್ರೀವೈಷ್ಣವ ಸಂಪ್ರದಾಯ ಮತ್ತು ವಿಶಿಷ್ಠಾದ್ವೈತ ಸಿದ್ದಾಂತವನ್ನು ಮಹತ್ವದ/ಅತ್ಯುನ್ನತ ಮಟ್ಟಕ್ಕೆ ಎತ್ತಿಹಿಡಿದ ಮಹಾನ್ ಆಚಾರ್ಯರು. ಮಹಾನ್ ಋಷಿಗಳನ್ನು (ಪರಾಶರ, ವ್ಯಾಸ, ದ್ರಮಿಡ, ಟಂಕ, ಇತ್ಯಾದಿ) ಅನುಕರಿಸಿದ ಭಗವತ್ ರಾಮಾನುಜರು, ವಿಶಿಷ್ಠಾದ್ವೈತ ಸಿದ್ಧಾಂತವನ್ನು ದೃಢವಾಗಿ ಪ್ರತಿಷ್ಠಿಸಿದರು. ಭಗವತ್ ರಾಮಾನುಜರು, 74 ಆಚಾರ್ಯರುಗಳನ್ನ , ಸಿಂಹಾಸನಾದಿಪತಿಗಳಾಗಿ ಸ್ಥಾಪಿಸಿ, ಅವರುಗಳಿಗೆ (ಸಿಂಹಾಸನಾಧಿಪತಿಗಳಾಗಿ) ಮಾರ್ಗದರ್ಶನ ನೀಡಿರುತ್ತಾರೆ, ಏನೆಂದರೆ – ಯಾರಿಗೆ ಎಂಪೆರುಮಾನ್ನನ್ನು ಮತ್ತು ಆ ದೈವಿಕ/ದಿವ್ಯ ಜ್ಞಾನವನ್ನು ತಿಳಿದುಕೊಳ್ಳಲು ಆಸೆ/ಶ್ರದ್ದೆ ಇದೆಯೊ, ಅಂತವರಿಗೆ ಶ್ರೀವೈಷ್ಣವತ್ವಕ್ಕೆ ಕರೆತರಬೇಕು. ಭಗವತ್ ರಾಮಾನುಜರಿಂದಲೆ, ಈ ಸಂಪ್ರದಾಯವು ಪ್ರಸಿದ್ಧವಾಗಿ “ಶ್ರೀ ರಾಮಾನುಜ ದರ್ಶನಮ್” ಎಂದು ಕರೆಯಲ್ಪಟ್ಟಿತು. ಆನಂತರದಲ್ಲಿ, ಅವರೆ ಮತ್ತೆ “ಮಣವಾಳ ಮಾಮುನಿಗಳ್” ಆಗಿ ಅವತರಿಸಿ, ದಿವ್ಯ ಪ್ರಬಂಧ ಮತ್ತು ಅದರ ಅರ್ಥವನ್ನು ಪ್ರಚಾರಮಾಡಿದರು.

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: http://ponnadi.blogspot.in/2015/12/simple-guide-to-srivaishnavam-introduction.html

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ

pramanam-sastram

ಕೆಲವು ಮೂಲ ಪದಗಳು (ಶ್ರಿವೈಷ್ಣವ ಪರಿಭಾಷೆ):

 • ಆಚಾರ್ಯ, ಗುರು – ಆಧ್ಯಾತ್ಮಿಕ ಗುರು – ತಿರುಮಂತ್ರ ಉಪದೇಶ ಕೊಡುವವರು
 • ಶಿಷ್ಯ – ಗುರುವಿನ ಕೆಳಗೆ ಅಭ್ಯಾಸ ಮಡುವವನು
 • ಭಗವಾನ್ / ಭಗವಂತ – ಶ್ರೀಮನ್ ನಾರಾಯಣನ್
 • ಅರ್ಚೈ/ಅರ್ಚಾ – ಎಂಪೆರುಮಾನಾರ್ ದಯೆಯುಳ್ಳ/ಕರುಣಾಮಯವಾದ ದೈವಿಕ ವಿಗ್ರಹಗಳು – ದೇವಾಲಯದಲ್ಲಿ, ಮನೆಯಲ್ಲಿ, ಮಠದಲ್ಲಿ ಇರುವ ದೈವಿಕ ವಿಗ್ರಹಗಳು
 • ಎಂಪೆರುಮಾನ್, ಪೆರುಮಾಳ್, ಈಶ್ವರ – ಭಗವಾನ್ / ಭಗವಂತ/ ನನ್ನ ಒಡೆಯ
 • ಎಂಪೆರುಮಾನಾರ್ – ಶೀ ರಾಮಾನುಜ – ಭಗವಾನ್ / ಭಗವಂತ / ಎಂಪೆರುಮಾನ್ – ಗಿಂತಲೂ ಹೆಚ್ಚು ಸಹಾನುಭೂತಿಯುಳ್ಳವರು (ಮೇಲುಮ್ ಕರುಣೈಯುಳ್ಳವರ್)
 • ಪಿರಾನ್ – ದಯೆ / ಒಲವು ಕೊಡುವವನು – ದಯವು / ಸದಾಗಮ್ಯಮಾಯ್ ಇರುಪ್ಪವನ್
 • ಪಿರಾಟ್ಟಿ, ತಾಯಾರ್ – ಶ್ರೀ ಮಹಾಲಕ್ಷ್ಮೀ
 • ಮೂಲವರ್ – ಎಂಪೆರುಮಾನ್ ಅವರ ಪವಿತ್ರವಾದ ಗರ್ಭಗುಡಿಯೊಳಗೆ ಸ್ಥಾಪಿಸಿರುವ ವಿಗ್ರಹ
 • ಉತ್ಸವರ್ – ಎಂಪೆರುಮಾನ್ ಅವರ ಪಂಚಲೋಹ (ಬೆರೆ ಲೋಹದಲ್ಲೂ ಇರಬಹುದು) ವಿಗ್ರಹ- ಮೆರವಣಿಗೆಗೆ ಹೋಗುವ ವಿಗ್ರಹಗಳು
 • ಅಳ್ವಾರ್ಗಳು – ಸದಾ ಭಕ್ತಿಯಲ್ಲಿ ಮುಳುಗಿರುವವರು – ಭಗವಂತನ ಪರಿಪೂರ್ಣ ಆಶೀರ್ವಾದ ಹಾಗೂ ಅನುಗ್ರಹ ಪಡೆದ ವೈಷ್ಣವ ಸಂತರು. ಇವರುಗಳು ದ್ವಾಪರ ಯುಗದ ಹಂತದಿಂದ ಕಲಿ ಯುಗದ ಆರಂಭದವರೆಗೂ, ದಕ್ಷಿಣ (ಸೌತ್) ಭಾರತದಲ್ಲಿ ಜೀವಿಸಿದರು
 • ಪೂರ್ವಾಚಾರ್ಯರ್ – ಶ್ರಿಮನ್ ನಾರಾಯಣನಿಂದ ಶ್ರೀವೈಷ್ಣವ ಸಂಪ್ರದಾಯದಲ್ಲಿ ಬಂದಿರುವ ಆಧ್ಯಾತ್ಮಿಕ ಗುರುಗಳು
 • ಭಾಗವತರು, ಶ್ರೀವೈಷ್ಣವರು – ಭಗವಾನ್ ಶ್ರಿಮನ್ ನಾರಾಯಣನ ಸೇವಕರು
 • ಅರೈಯರ್ – ಇವರು ಶ್ರೀವೈಷ್ಣವರು – ಭಗವಂತನ ಮುಂದೆ ದಿವ್ಯ ಪ್ರಭಂಧಗಳನ್ನು ಹಾಡಿನಲ್ಲಿ ಹಾಗು ಭಾವಭಂಗಿಯಲ್ಲಿ ಹೇಳುವವರು
 • ಓರಾಣ್ ವಳಿ ಆಚಾರ್ಯರುಗಳು  – ಕೆಲವು ಆಯ್ಕೆಯ ಆಚಾರ್ಯರುಗಳು – ಪೆರಿಯ ಪೆರುಮಾಳ್ ರಿಂದ ಮಣವಾಳ ಮಾಮುನಿಗಳವರೆಗೂ ಸಂಪ್ರದಾಯವನ್ನು ನಡೆಸಿಕೊಂಡು ಬಂದವರು:
  • ಪೆರಿಯ ಪೆರುಮಾಳ್
  • ಪೆರಿಯ ಪಿರಾಟ್ಟಿ
  • ಸೇನೈ ಮುದಲಿಯಾರ್
  • ನಮ್ ಆಳ್ವಾರ್
  • ನಾಥಮುನಿಗಳ್
  • ಉಯ್ಯಕೊಂಡಾರ್
  • ಮಣಕ್ಕಾಲ್ ನಂಬಿ
  • ಆಳವಂದಾರ್ (ಯಾಮುನಾಚಾರ್ಯ)
  • ಪೆರಿಯ ನಂಬಿ
  • ಎಂಪೆರುಮಾನಾರ್ (ಭಗವತ್ ರಾಮಾನುಜ)
  • ಎಂಬಾರ್
  • ಭಟ್ಟರ್
  • ನಂಜಿಯರ್
  • ನಮ್ ಪಿಳ್ಳೈ
  • ವಡಕ್ಕು ತಿರುವೀದಿ ಪಿಳ್ಳೈ
  • ಪಿಳ್ಳೈ ಲೋಕಾಚಾರ್ಯರ್
  • ತಿರುವಾಯ್ಮೋಳಿ  ಪಿಳ್ಳೈ
  • ಅಳಗಿಯ ಮನವಾಳ ಮಾಮುನಿಗಳ್ (ಶ್ರೀ ವರವರಮುನಿ)
 • ದಿವ್ಯ ಪ್ರಭಂಧಮ್ – ಆಳ್ವಾರ್ಗಳ ಪಾಶುರಗಳನ್ನು ಅರುಳಿಚ್ಹೆಯಲ್ ಎಂದು ಕರೆಯಲ್ಪಡುತ್ತದೆ
 • ದಿವ್ಯ ದಂಪತಿ – ಶ್ರೀಮನ್ ನಾರಾಯಣನ್ ಮತ್ತು ಶ್ರೀ ಮಹಾಲಕ್ಷ್ಮೀ
 • ದಿವ್ಯ ದೇಶಮ್ – ಆಳ್ವಾರ್ಗಳು ವೈಭವೀಕರಿಸಿದ ಭಗವಂತನ ಕ್ಷೇತ್ರ
 • ದಿವ್ಯ ಸೂಕ್ತಿ, ಶ್ರೀ ಸೂಕ್ತಿ – ಭಗವಂತ/ಆಳ್ವಾರ್/ಆಚಾರ್ಯನ್ ಮಾತುಗಳು/ಉಪದೇಶಗಳು
 • ಅಭಿಮಾನ ಸ್ಥಳಗಳು – ಪೂರ್ವಾಚಾರ್ಯರುಗಳಿಗೆ  ಪ್ರಿಯವಾದ ಭಗವಂತನ ಸ್ಥಳಗಳು
 • ಪಾಶುರಮ್ – ಪದ್ಯ/ಶ್ಲೋಕ
 • ಪದಿಗಮ್ – ದಶಕ(10 ಪದ್ಯಗಳ/ಪಾಶುರಮ್ ಸಂಗ್ರಹ)
 • ಪತ್ತು – ನೂರು (100 ಪಾಶುರಮ್/ಪದ್ಯಗಳ ಸಂಗ್ರಹ)

ಶ್ರೀ ವೈಷ್ಣವರು ಸಾಮಾನ್ಯವಾಗಿ ಉಪಯೊಗಿಸುವ ಪದಗಳು ಅದರ ನಿರ್ದಿಷ್ಟ ಅರ್ಥಗಳು

 • ಕೋಯಿಲ್ – ಶ್ರೀರಂಗಂ
 • ತಿರುಮಲೈ – ತಿರುವೆಂಕಟಮ್, ತಿರುಮಾಲಿರುನ್ಚೋಲೈ
 • ಪೆರುಮಾಳ್ ಕೋಯಿಲ್ – ಕಾಂಚೀಪುರಂ
 • ಪೆರುಮಾಳ್ – ಶ್ರೀ ರಾಮ
 • ಇಳಯ ಪೆರುಮಾಳ್ – ಲಕ್ಷ್ಮಣ
 • ಪೆರಿಯ ಪೆರುಮಾಳ್ – ಶ್ರೀರಂಗನಾಥನ್ (ಮೂಲವರ್)
 • ನಮ್ ಪೆರುಮಾಳ್ – ಶ್ರೀರಂಗನಾಥನ್ (ಉತ್ಸವರ್)
 • ಆಳ್ವಾರ್ – ನಮ್ ಆಳ್ವಾರ್
 • ಸ್ವಾಮಿ – ಶ್ರೀ ರಾಮಾನುಜ
 • ಜೀಯರ್, ಪೆರಿಯ ಜೀಯರ್ – ಮಣವಾಳ ಮಾಮುನಿಗಳ್
 • ಗುಣಮ್ – ಭಗವತ್ ಗುಣಗಳು
  • ಪರತ್ವಮ್ – ಪ್ರಾಬಲ್ಯ
  • ಸೌಲಭ್ಯಮ್ – ಸುಲಭವಾಗಿ ಲಭಿಸುವ
  • ಸೌಶೀಲ್ಯಮ್ – ಹೃದಯ ವೈಶಾಲ್ಯ
  • ಸೌಂದರ್ಯಮ್ – ದೈಹಿಕ ಸೌಂದರ್ಯ
  • ವಾತ್ಸಲ್ಯಮ್ – ವಾತ್ಸಲ್ಯ
  • ಮಾಧುರ್ಯಮ್ – ಮಾಧುರ್ಯ
  • ಕೃಪೈ, ಕರುಣೈ, ದಯಾ, ಅನುಕಂಪ – ಕರುಣೆ,ದಯೆ
 • ರೂಪಮ್ – ಆಕಾರ/ರೂಪ
 • ಸ್ವರೂಪಮ್ – ಸ್ವಭಾವ
 • ಮೋಕ್ಷಮ್ – ಮೋಕ್ಷ – ಸಂಸಾರ ಬಂಧನದಿಂದ ಬಿಡುಗಡೆ.
  • ಭಗವತ್ ಕೈಂಕರ್ಯ ಮೋಕ್ಷಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಪರಮಪದದಲ್ಲಿ ಸೇವೆಯಲ್ಲಿ ತೊಡಗಿರುವುದು.
  • ಕೈವಲ್ಯಮ್ – ಸಂಸಾರ ಬಂಧನದಿಂದ ಬಿಡುಗಡೆಯಾದಮೇಲೆ ಶಾಶ್ವತವಾಗಿ ಸ್ವಯಂ ಸ೦ತೋಷದಲ್ಲಿ ಕಳೆಯುವುದು
 • ಕರ್ಮ – ಕ್ರಿಯೆ – ಪುಣ್ಯ / ಪಾಪ ಎಂತಲೂ ಅರ್ಥ
 • ಶಾಸ್ತ್ರಮ್ – ನಮ್ಮ ದಿನ ನಿತ್ಯ ಕರ್ಮ/ಕ್ರಿಯೆಗಳಿಗೆ ಮಾರ್ಗದರ್ಶನ ಕೊಡುವ ಅಧಿಕೃತ ಗ್ರಂಥಗಳು – ವೇದ, ವೇದಾಂತ, ಪಂಚರಾತ್ರಮ್, ಇತಿಹಾಸ, ಪುರಾಣ, ಆಳ್ವಾರ್ ದಿವ್ಯ ಪ್ರಬಂಧಗಳು, ಆಚಾರ್ಯಗಳ ಕೃತಿಗಳು– ಸ್ತೋತ್ರ, ವ್ಯಾಖ್ಯಾನ
 • ಕರ್ಮ ಯೋಗಮ್, ಜ್ಞಾನ ಯೋಗಮ್, ಭಕ್ತಿ ಯೋಗಮ್ – ಭಗವಂತನನ್ನು ಸೇರಲು ಮಾರ್ಗ
 • ಪ್ರಪತ್ತಿ, ಶರಣಾಗತಿ – ಶರಣಾಗತಿ – ಭಗವಂತನೆ ಉಪಾಯ
 • ಆಚಾರ್ಯ ನಿಷ್ಟೈ – ಪ್ರಪನ್ನನ್ನು ಆಚಾರ್ಯರ ಪಾದ ಕಮಲದಲ್ಲಿ ಆಶ್ರಯ ಪಡೆದಿರುವುದರಿಂದ ಅವರನ್ನು ಆಚಾರ್ಯ ನಿಷ್ಟರ್ಗಳೆಂದು ಕರೆಯುವರು
 • ಆಚಾರ್ಯ ಅಭಿಮಾನಮ್ – ಆಚಾರ್ಯರ ಅಭಿಮಾನ ಪಡೆಯುವುದು
 • ಪಂಚ ಸಂಸ್ಕಾರಮ್ (ಸಮಾಶ್ರಯಣಮ್) – ನಮ್ಮನ್ನು ಸಂಸಾರ ಮತ್ತು ಪರಮಪದ ಕೈಂಕರ್ಯ/ಸೇವೆಗೆ ಸಿದ್ಧಪಡಿಸಲು ನಡೆಯುವ ಶುದ್ಧೀಕರಣ ಪ್ರಕ್ರಿಯೆ. ಇದರಲ್ಲಿ ಕೆಳಗಿನ ವಿಷಯಗಳು ಒಳಗೊಂಡಿದೆ:
  • ತಾಪ (ಬಿಸಿ)- ಶಂಖ ಚಕ್ರ ಲಾಂಚನಮ್ – ನಮ್ಮ ಭುಜದ ಮೇಲೆ ಇಡುವ ಶಂಖ ಚಕ್ರ ಮುದ್ರಣ. ನಾವು ಎಂಪೆರುಮಾನಾರ್ ಸ್ವತ್ತು ಎಂದು ಗುರುತಿಸಬಲ್ಲದು.
  • ಪುಣ್ಡ್ರ (ಚಿಹ್ನೆ) – ದ್ವಾದಶ ಊರ್ಧ್ವ ಪುಣ್ಡ್ರ ಧಾರಣಮ್ – ದೇಹದ 12 ಅಂಗಾಂಗಗಳಲ್ಲಿ ತಿರುಮಣ್ ಮತು ಶ್ರೀಚೂರ್ಣವನ್ನು ಧರಿಸಿಕೊಳ್ಳುವುದು.
  • ನಾಮ (ಹೆಸರು) – ದಾಸ್ಯ ನಾಮಮ್ – ಆಚಾರ್ಯರ್ ಹೊಸ ಹೆಸರನ್ನು ಇಡುವುದು – ರಾಮಾನುಜ ದಾಸನ್, ಶ್ರಿವೈಷ್ಣವ ದಾಸನ್, ಮಧುರಕವಿ ದಾಸನ್.
  • ಮಂತ್ರ – ಮಂತ್ರೋಪದೇಶಮ್ – ಆಚಾರ್ಯರಿಂದ ರಹಸ್ಯ ಮಂತ್ರೋಪದೇಶ ಪಡೆಯುವುದು – ಮಂತ್ರ ಎಂದರೆ ದುಃಖ/ಸಂಕಟವನ್ನು ಶಮನಗೊಳಿಸುವ ಶಕ್ತಿ. ಕೆಳಗಿನ 3 ರಹಸ್ಯ ಮಂತ್ರಗಳು ನಮ್ಮನ್ನು ಸಂಸಾರ ಬಂಧನದಿಂದ ಬಿಡುಗಡೆ ಮಾಡುತ್ತದೆ:
   • ತಿರುಮಂತ್ರಮ್
   • ದ್ವಯಮ್
   • ಚರಮಶ್ಲೋಕಮ್
  • ಯಾಗ – ದೇವ ಪೂಜಾ – ತಿರುವಾರಾಧನ ಕ್ರಮವನ್ನು ಕಲಿಯುವುದು
  • ಹೆಚ್ಚಿನ ವಿವರಗಳಿಗಾಗಿ – http://ponnadi.blogspot.in/2015/12/rahasya-thrayam.html
 • ಕೈಂಕರ್ಯಮ್ – ಭಗವಾನ್, ಆಳ್ವಾರ್, ಆಚಾರ್ಯನ್, ಭಾಗವತರ ಸೇವೆ
 • ತಿರುವಾರಾಧನಮ್ – ಎಂಪೆರುಮಾನ್ ಪೂಜೆ
 • ತಿರುವುಳ್ಳಮ್ – ದೈವಿಕ ಹೃದಯ / ಬಯಕೆ
 • ಶೇಷಿ – ಒಡೆಯ/ಯಜಮಾನ
 • ಶೇಷ – ಸೇವಕ
 • ಶೇಷತ್ವಮ್ – ಎಂಪೆರುಮಾನ್ ಸೇವೆಗೆ ಸಿದ್ಧವಾಗಿ ಇರುವುದು
 • ಪಾರತಂತ್ರಿಯಮ್ – ಎಂಪೆರುಮಾನ್  (ಭಗವಂತ) ಸೇವೆಗೆ ಸಂಪೂರ್ಣವಾಗಿ ಮೀಸಲಾಗಿರುವುದು
 • ಸ್ವಾತಂತ್ರಿಯಮ್ – ಸ್ವತಂತ್ರ
 • ಪುರುಷಕಾರಮ್ – ಶಿಫಾರಸು/ಸೂಚನೆ/ಸಮಾಧಾನ – ಅರ್ಹತೆ ಇಲ್ಲದ ಜೀವಾತ್ಮಾವನ್ನು ಒಪ್ಪಿಕೊಳ್ಳಲು ಶ್ರೀ ಮಹಾಲಕ್ಷ್ಮೀ ಅಮ್ಮನವರು (ತಾಯಾರ್), ಎಂಪೆರುಮಾನಿಗೆ (ಭಗವಂತ) ಶಿಫಾರಸು ಮಾಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆಚಾರ್ಯರನ್ನು ಶ್ರೀ ಮಹಾಲಕ್ಷ್ಮೀ ಅಮ್ಮನವರ (ತಾಯಾರ್) ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ಇದನ್ನು ಯಾರು ನಿರ್ವಹಿಸುತ್ತಾರೋ, ಅವರಿಗೆ ಕೆಳಗಿನ 3 ಗುಣಗಳು ಇರಬೆಕು:
  • ಕೃಪೈ – ಬಳಲುತ್ತಿರುವ ಜೀವಾತ್ಮಗಳ ಮೇಲೆ ಕರುಣೆ.
  • ಪಾರತಂತ್ರಿಯಮ್ – ಎಂಪೆರುಮಾನ್ (ಭಗವಂತ) ಸೇವೆಗೆ ಸಂಪೂರ್ಣವಾಗಿ ಆಶ್ರಿತ ಸ್ಥಿತಿಯಲ್ಲಿ ಇರುವುದು.
  • ಅನನ್ಯರ್ಹತ್ವಮ್ – ಸಂಪೂರ್ಣವಾಗಿ ಎಂಪೆರುಮಾನ್ (ಭಗವಂತ) ಸೇವೆಗೆ ಮೀಸಲಾಗಿರುವುದು
 • ಅನ್ಯ ಶೇಷತ್ವಮ್ – ಯಾರಿಗಾದರೂ ಸೇವೆ ಮಾಡುವುದು (ಎಂಪೆರುಮಾನ್ (ಭಗವಂತ) ಮತ್ತು ಭಾಗವತರನ್ನು ಬಿಟ್ಟು)
 • ವಿಷಯಾಂತರಮ್ – ಲೌಕಿಕ ಸಂತೋಷಗಳು/ ವಿಷಯಗಳು
 • ದೇವತಾಂತರಮ್ – ಬೇರೆ/ಇತರ ಜೀವಾತ್ಮವನ್ನು ದೇವಾ ಎಂದು ತಪ್ಪಾಗಿ ತಿಳಿದುಕೊಳ್ಳುವುದು (ಎಂಪೆರುಮಾನ್ (ಭಗವಂತ) ) ಈ ಲೌಕಿಕ ಪ್ರಪಂಚವನ್ನು ಸುಗಮವಾಗಿ ಕಾರ್ಯಮಾಡಲು ಅನೇಕ ಜೀವಾತ್ಮವನ್ನು ನೇಮಕ ಮಾಡಿದ್ಹಾನೆ. ಅವರುಗಳು ಕೂಡ ಕರ್ಮಾನುಸಾರವಾಗಿ ಈ ಲೌಕಿಕ ಪ್ರಪಂಚಕ್ಕೆ ಬದ್ಧರಾಗಿರುತ್ತಾರೆ
 • ಸ್ವಗತ ಸ್ವೀಕಾರಮ್ – ಎಂಪೆರುಮಾನ್ (ಭಗವಂತ)/ಆಚಾರ್ಯರನ್ನು ಒಪ್ಪಿಕೊಳ್ಳುವುದು
 • ಪರಗತ ಸ್ವೀಕಾರಮ್ – ಭಗವಾನ್/ಆಚಾರ್ಯ ಅವರ ಸ್ವೈಚ್ಚೆ ಇಂದ ನಮ್ಮನ್ನು ಒಪ್ಪಿಕೊಳ್ಳುವುದು..
 • ನಿರ್ಹೇತುಕ ಕೃಪಾ – ಜೀವಾತ್ಮನ ಪ್ರಚೋದನೆ ಇಲ್ಲದೆ ಭಗವಂತನ ನಿರಂತರ ಕರುಣೆ
 • ಸಹೇತುಕ ಕೃಪಾ – ಜೀವಾತ್ಮನ ಸ್ವಂತ ಪ್ರಯತ್ನದಿಂದ ಭಗವಂತನ ನಿರಂತರ ಕರುಣೆಗೆ ಪ್ರಚೋದಿಸುವುದು
 • ನಿತ್ಯ – ನಿತ್ಯ ಸೂರಿಯರು – ಪರಮಪದದಲ್ಲಿ ಎಂಪೆರುಮಾನ್  ಸೇವೆ ಸದಾಕಾಲ ನಿರಂತರವಾಗಿ ಮಾಡುವವರು. ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
 • ಮುಕ್ತ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡು ಕ್ರಮೇಣ ಕರ್ಮಗಳಿಂದ ಮುಕ್ತನಾಗಿ ಪರಮಪದವನ್ನು ಸೇರುವ ಜೀವಾತ್ಮ. ಇದರಿಂದ ಅವರುಗಳು ಸದಾಕಾಲ ಶುದ್ಧ ಮತ್ತು ಶಾಶ್ವತವಾಗಿ ಪರಮಪದದಲ್ಲಿ ಇರುವವರು
 • ಬದ್ದ – ಲೌಕಿಕ ಪ್ರಪಂಚದಲ್ಲಿ ಸಿಲುಕಿಕೊಂಡಿರುವವರು – ಸಂಸಾರಿ
 • ಮುಮುಕ್ಷು – ಮೋಕ್ಷವನ್ನು ಇಚ್ಚೇ ಪಡುವವರು
 • ಪ್ರಪನ್ನ – ಎಂಪೆರುಮಾನ್/ಭಗವಂತನಿಗೆ ಶರಣಾಗತನಾಗಿರುವವ:
  • ಆರ್ತ ಪ್ರಪನ್ನ – ಲೌಕಿಕ ಪ್ರಪಂಚದ ದುಃಖಗಳಿಂದ ಒಮ್ಮೆಗೆ ಬಿಡುಗಡೆ/ಮುಕ್ತಿ ಪಡೆಯಬೇಕು ಎಂಬ ಇಚ್ಚೇ ಉಳ್ಳವವರು
  • ದ್ರುಪ್ತ ಪ್ರಪನ್ನ – ಭಗವಂತನಲ್ಲಿ ಶರಣಾಗತಿಯಾಗಿ, ಭಗವಂತನಿಗೂ ಮತ್ತು ಭಾಗವತರಿಗೂ ಸ್ವಲ್ಪ ಕಾಲ ಈ ಲೌಕಿಕ ಪ್ರಪಂಚದಲ್ಲಿ ಸೇವೆ ಮಾಡಿ, ನಂತರ ಕ್ರಮೇಣ ಪರಮಪದದಲ್ಲಿ ಸೇವೆ ಮಾಡಲು ಇಚ್ಚೇ ಉಳ್ಳವರು
 • ತೀರ್ಥಮ್ – ಪವಿತ್ರ ತೀರ್ಥ
 • ಶ್ರೀಪಾದ ತೀರ್ಥಮ್ – ಚರಣಾಮೃತಮ್  – ಆಚಾರ್ಯನ್ ಕಮಲ ಪಾದಗಳನ್ನು ತೊಳೆದಿರುವ ನೀರು/ತೀರ್ಥ
 • ಭೋಗಮ್ – ಭಗವಂತನಿಗೆ ನೈವೆದ್ಯಕ್ಕೆ ಇರುವ ಆಹಾರ (ಅಥವಾ ಯಾವುದಾದರು ತಿನ್ನುವ ಪದಾರ್ಥ)
 • ಪ್ರಸಾದಮ್ – ಭಗವಂತನಿಗೆ ನೈವೆದ್ಯವಾಗಿರುವ ಆಹಾರ. ಇದನ್ನು ತರುವಾಯ ಶ್ರೀ ವೈಷ್ಣವರು ಸೇವಿಸುತ್ತಾರೆ
 • ಉಚ್ಚಿಷ್ಟಮ್– ಉಳಿದಿರುವ ಪ್ರಸಾದಮ್ – ವಿನಿಯೋಗವಾಗಿ ಉಳಿದಿರುವ ಪ್ರಸಾದ – ಮತ್ತವರು ಉಂಡು ಉಳಿದಿರುವ ಪ್ರಸಾದವೆಂದು ಅರ್ಥವಾಗುತ್ತದೆ. ಸಂದರ್ಭವನ್ನು ನೋಡಿ ಅರ್ಥವನ್ನು ತಿಳಿಯಬೇಕು
 • ಪಡಿ – ಭೋಗಮ್
 • ಸಾತ್ತುಪ್ಪಡಿ – ತೇದ ಶ್ರೀಗಂಧ
 • ಶಟಾರಿ, ಶ್ರೀ ಸಟಕೋಪಮ್, ಇತ್ಯಾದಿ. – ಶ್ರೀಮನ್ ನಾರಾಯಣನ ಪಾದ ಕಮಲಗಳು. ನಮ್ಮಾಳ್ವಾರರನ್ನು ಶ್ರೀ ಸಟಕೋಪಮ್ ಎಂದು ಕರೆಯಲಾಗುತ್ತದೆ. ಅವರನ್ನು ಎಂಪೆರುಮಾನ್ ಪಾದ ಕಮಲಗಳೆಂದು ಪರಿಗಣಿಸಲಾಗಿದೆ
  ಮದುರಕವಿಗಳ್ – ನಮ್ ಆಳ್ವಾರ್ ಪಾದ ಕಮಲ.

  • ಶ್ರೀ ರಾಮಾನುಜಮ್ – ನಮ್ ಆಳ್ವಾರ್ ಪಾದ ಕಮಲ ಆಳ್ವಾರ್ ತಿರುನಗರಿಯಲ್ಲಿ
  • ಶ್ರೀ ರಾಮಾನುಜಮ್ – ಎಲ್ಲಾ ಆಳ್ವಾರರ ಪಾದ ಕಮಲ
  • ಮುದಲಿಯಾಣ್ಡಾನ್ – ಶ್ರೀ ರಾಮಾನುಜರ ಪಾದ ಕಮಲ
  • ಪೊನ್ನಡಿಯಾಮ್ ಸೆನ್ಕಮಲಮ್ – ಮಾಮುನಿಗಳ ಪಾದ ಕಮಲ
  • ಸಾಮಾನ್ಯವಾಗಿ ಪಟ್ಟ/ವಿಶ್ವಾಸಉಳ್ಳ ಶಿಷ್ಯನನ್ನು ಗುರುಗಳ ಪಾದ ಕಮಲವೆಂದು ಪರಿಗಣಿಸಲಾಗುತ್ತದೆ. ಉದಾಹರಣೆ: ಪರಾಸರ ಭಟ್ಟರ್, ಎಂಬಾರರ  ಪಾದ ಕಮಲ, ನನ್ಜೀಯರ್ ಭಟ್ಟರರ ಪಾದ ಕಮಲ, ನಂಪಿಳ್ಳೈ ನನ್ಜೀಯರರ ಪಾದ ಕಮಲ, ಇತ್ಯಾದಿ…
 • ವಿಭೂತಿ – ಸಂಪತ್ತು/ಸಿರಿ
 • ನಿತ್ಯ ವಿಭೂತಿ – ಪರಮಪದಮ್/ಶ್ರೀವೈಕುಂಟಮ್
 • ಲೀಲಾ ವಿಭೂತಿ – ಸಂಸಾರ – ಲೌಕಿಕ ಸಂತೋಷಗಳು/ ಲೌಕಿಕ ಪ್ರಪಂಚ
 • ಅಡಿಯೇನ್, ದಾಸನ್ – ನಾನು/ನನ್ನ ಅನ್ನುವ ಬದಲಿಗೆ ವಿನಮ್ರವಾಗಿ ಹೇಳುವುದು
 • ದೇವರೀರ್, ದೇವರ್, ಶ್ರೀಮಾನ್ – ಮತೊಬ್ಬ ಶ್ರೀವೈಷ್ಣವರನ್ನು ಕರೆಯುವ ವಿಧಿ – ನಿಮ್ಮ ಕೃಪೆ
 • ಎಳ್ಹುನ್ದರಳುತಲ್ – ಬರಬೇಕು, ಕುಳಿತುಕೊಳಬೇಕು
 • ಕಣ್ ವಳರುತಲ್ – ನಿದ್ರಾವಸ್ಥೆ
 • ನೀರಾಟ್ಟಮ್ – ಸ್ನಾನ
 • ಶಯನಮ್ – ವಿಶ್ರಮಿಸು
 • ಶ್ರೀಪಾದಮ್ – ಪಲ್ಲಕ್ಕಿಯಲ್ಲಿ ಭಗವಾನ್/ಆಳ್ವಾರ್/ಆಚಾರ್ಯರನ್ನು ಒಯ್ಯುವುದು
 • ತಿರುವಡಿ – ಪಾದ ಕಮಲ (ಹನುಮಂತ ಎಂದು ಆಗುತ್ತದೆ)
 • ವ್ಯಾಖ್ಯಾನಮ್ – ವ್ಯಾಖ್ಯಾನ
 • ಉಪನ್ಯಾಸಮ್ – ಉಪನ್ಯಾಸ
 • ಕಾಲಕ್ಷೇಪಮ್ – ಗ್ರಂಥಗಳಲ್ಲಿ ಇರುವುದನ್ನು ಓದಿ, ಅದರ ಮೂಲ ಪಠ್ಯದ ಆಧಾರದಮೆಲೆ, ಅರ್ಥ ಮತ್ತು ವಿವರಣೆಯನ್ನು ಕೊಡುವುದು
 • ಅಶ್ಟ ದಿಗ್ಗಜರ್ – ಶಿಷ್ಯರನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಮಣವಾಳ ಮಾಮುನಿಗಳವರು 8 ಆಚಾರ್ಯರುಗಳನ್ನು ಸ್ಥಾಪಿಸಿದರು.
 • 74 ಸಿಂಹಾಸನಾಧಿಪತಿ – ಶಿಷ್ಯರನ್ನು ಶ್ರೀವೈಷ್ಣವ ಸಂಪ್ರದಾಯಕ್ಕೆ ಉಪಕ್ರಮಿಸಲು ಮತ್ತು ಸತ್ ಸಂಪ್ರದಾಯವನ್ನು ವ್ಯಾಪಕವಾಗಿ ಪ್ರಚಾರಮಾಡಲು, ಶ್ರಿ ರಾಮಾನುಜರು 74 ಆಚಾರ್ಯರುಗಳನ್ನು ಸ್ಥಾಪಿಸಿದರು.

ತತ್ವಶಾಸ್ತ್ರದ ಸಂಬಂಧಿತ ಪದಗಳು:

 • ವಿಶಿಷ್ಟಾದ್ವೈತಮ್ – ಬ್ರಹ್ಮಮ್ (ಭಗವಾನ್)/ ಭಗವಂತನ ಚಿತ್ ಮತ್ತು ಅಚಿತ್ ಲಕ್ಷಣಗಳನ್ನು ವಿವರಿಸುವ ತತ್ವಶಾಸ್ತ್ರ
 • ಸಿದ್ಧಾಂತಮ್ – ಸಿದ್ಧಾಂತ
 • ಮಿಥುನಮ್ – ದ೦ಪತಿಗಳು – ಪೆರುಮಾಳ್ ಮತ್ತು ಪಿರಾಟ್ಟಿ
 • ಏಕಾಯನಮ್ – ನಾರಾಯಣನ ಶ್ರಿಯ:ಪತಿತ್ವಕ್ಕೆ (ಶ್ರೀ ಮಹಾಲಕ್ಷ್ಮೀ ಅಮ್ಮನವರ ಒಡೆಯ) ಪ್ರಾಮುಖ್ಯತೆ ನೀಡದೆ, ಅವನ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದು
 • ಮಾಯಾವಾದಮ್ –
 • ಆಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳುವವರು
 • ನಾಸ್ತಿಕ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
 • ಭಾಹ್ಯ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಳ್ಳದವರು
 • ಕುದ್ರುಶ್ಟಿ – ಶಾಸ್ತ್ರವನ್ನು ಪ್ರಮಾಣಮ್ ಎಂದು ಒಪ್ಪಿಕೊಂಡು, ಅನುಕೂಲಕ್ಕೆತಕ್ಕಂತೆ ತಪ್ಪು ಅರ್ಥಕೊಡುವುದು
 • ಆಪ್ತ – ನಂಬಲಾರ್ಹ ಮೂಲ/ಜೊತೆ
 • ಪ್ರಮಾ – ಮಾನ್ಯ ಜ್ಞಾನ
 • ಪ್ರಮೇಯಮ್ – ಮಾನ್ಯ ಜ್ಞಾನದ ವಸ್ತು
 • ಪ್ರಮಾತಾ – ಮಾನ್ಯ ಜ್ಞಾನವನ್ನು ಕೊಡುವವರು
 • ಪ್ರಮಾಣಮ್ – ಮಾನ್ಯ ಜ್ಞಾನವನ್ನು ಪಡೆಯವ ರೀತಿ/ಮಾರ್ಗ
  • ಪ್ರತ್ಯಕ್ಷಮ್ – ಇಂದ್ರಿಯಗಳಿಂದ ನೇರ ವೀಕ್ಷಣೆಯನ್ನು ಪಡೆಯುವುದು
  • ಅನುಮಾನಮ್ – ಹಿಂದಿನ ವೀಕ್ಷಣೆಯ ಆಧಾರದಮೇಲೆ ಪಡೆದ ಜ್ಞಾನ
  • ಶಬ್ದಮ್ – ಶಾಸ್ತ್ರಗಳು ಹೇಳಿರುವ ಪದಗಳು/ವಾಕ್ಯಗಳು
 • ತತ್ವ ತ್ರಯಮ್ – ಪ್ರಪನ್ನನ್ನು ತಿಳಿದುಕೊಳ್ಳಬೇಕ್ಕಾದ 3 ವಾಸ್ತವಿಕತೆ
  • ಚಿತ್, ಚೇತನಮ್, ಜೀವಾತ್ಮಾ – ಆತ್ಮ, ಚೇತನ, ಜೀವಾತ್ಮಾ
  • ಅಚಿತ್, ಅಚೇತನಮ್, ಪ್ರಕ್ರುತಿ – ಭೌತಿಕ ವಸ್ತು, ನಿರ್ಜೀವ
  • ಈಶ್ವರ – ಭಗವಾನ್ ಶ್ರೀಮನ್ ನಾರಾಯಣನ್.
  • ಹೆಚ್ಚಿನ ವಿವರಗಳಿಗಾಗಿ – http://ponnadi.blogspot.in/p/thathva-thrayam.html
 • ರಹಸ್ಯ ತ್ರಯಮ್- 3 ರಹಸ್ಯ ಮಂತ್ರಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವ ಮಂತ್ರಗಳು (ಹೆಚ್ಚಿನ ವಿವರಗಳಿಗಾಗಿ – http://ponnadi.blogspot.com/2015/12/rahasya-thrayam.html).
  • ತಿರುಮಂತ್ರಮ್ – ಅಷ್ಟಾಕ್ಷರ ಮಹಾ ಮಂತ್ರ
  • ದ್ವಯಮ್- ದ್ವಯ ಮಹಾ ಮಂತ್ರಮ್
  • ಚರಮ ಸ್ಲೋಕಮ್- “ಸರ್ವ ದರ್ಮಾನ್ ಪರಿತ್ಯಜ್ಯ…” ಗೀತಾ ಸ್ಲೋಕ. ರಾಮ ಚರಮ ಸ್ಲೋಕ (ಸಕ್ರುದೇವ ಪ್ರಪನ್ನಾಯ) ಮತ್ತು ವರಾಹ ಚರಮ ಸ್ಲೋಕ (ಸ್ತಿತೇ ಮನಸಿ).
 • ಅರ್ತ ಪಂಚಕಮ್ – 5 ಅಗತ್ಯಯುಳ್ಳ ತತ್ವಗಳು – ಪಂಚಸಂಸ್ಕಾರದ ಸಮಯದಲ್ಲಿ ಆಚಾರ್ಯರು ಉಪದೇಶ ಮಾಡುವರು (ಹೆಚ್ಚಿನ ವಿವರಗಳಿಗಾಗಿ – http://ponnadi.blogspot.com/2015/12/artha-panchakam.html).
  • ಜೀವಾತ್ಮಾ- ಚೇತನಾತ್ಮಕ
  • ಪರಮಾತ್ಮಾ – ಭಗವಾಂತ
  • ಉಪೇಯಮ್, ಪ್ರಾಪ್ಯಮ್ – ಸಾಧಿಸಬೆಕಾದ ಗುರಿ – ಕೈಂಕರ್ಯಮ್
  • ಉಪಾಯಮ್ – ಗುರಿಯನ್ನು ಸಾಧಿಸಲು ಹಿಡಿದಿರುವ/ಉಪಯೊಗಿಸುವ ಮಾರ್ಗ
  • ವಿರೋಧಿ – ಗುರಿಯನ್ನು ಸಾಧಿಸುವಾಗ ಬರುವ ಅಡಚಣೆಗಳು
 • ಆಕಾರ ತ್ರಯಮ್ – ಜೀವಾತ್ಮಾ ಅವಶ್ಯವಾಗಿ ತಿಳಿದುಕೊಳ್ಳಬೆಕಾದ 3 ಗುಣಗಳು:
  • ಅನನ್ಯ ಶೇಷತ್ವಮ್– ಭಗವಂತನೊಬ್ಭನೆ ಒಡೆಯನೆಂದು ಒಪ್ಪಿಕೊಳ್ಳುವುದು
  • ಅನನ್ಯ ಶರಣತ್ವಮ್ – ಭಗವಂತನೊಬ್ಭನೆ ಆಶ್ರಯ
  • ಅನನ್ಯ ಭೋಗ್ಯತ್ವಮ್ – ಭಗವಂತನೊಬ್ಭನೆ ಸಂತೋಶವನ್ನು ಅನುಭವಿಸುವುದು
 • ಸಾಮಾನಾದಿಕರಣ್ಯಮ್- ಒಂದು ಅಥವಾ ಹೆಚ್ಚಿನ ಲಕ್ಷಣ/ಗುಣಗಳಿಗೆ ಒಂದೇ ತಳಹದಿ/ಆಧಾರ ಹೊಂದಿರುವುದು. ಉದಾಹರಣೆ: ಮ್ರುದ್ ಗಟಮ್ (ಮಣ್ಣಿನ ಮಡಿಕೆ) – ಮಡಿಕೆ ಆಧಾರ, ಮಣ್ಣು ಮತ್ಹು ಮಡಿಕೆ 2 ಲಕ್ಷಣಗಳು. ಮತ್ತೊಂದು ಉದಾಹರಣೆ: “ಶುಕ್ಲ: ಪಟ:” (ಬಿಳಿ ಬಟ್ಟೆ) – ಬಟ್ಟೆ ಆಧಾರವಾಗುವುದು, ಇದರಲ್ಲಿ 2 ಗುಣ/ಲಕ್ಷಣ ಇದೆ “ಬಿಳಿ” & “ಬಟ್ಟೆ”. ಸಾಮಾನಾದಿಕರಣ್ಯಮ್ ಎನ್ನುವುದು ಒಂದು ವಿವರವಾದ ವಿಷಯ, ಸಂಸ್ಕ್ರತ ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
 • ವೈಯದಿಕರಣ್ಯಮ್ – ಎರಡು ಅಥವಾ ಹೆಚ್ಚಿನ ಅಂಶಗಳಿಗೆ ವಿವಿಧ ಆಧಾರ/ತಳಹದಿಗಳು. ಇದರ ವಿವರವಾದ ವಿಷಯ, ಸಂಸ್ಕ್ರತ  ವಿದ್ವಾಂಸರಿಂದ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬಹುದು.
 • ಸಮಶ್ಟಿ ಸೃಷ್ಟಿ – ಭಗವಂತನು ಪಂಚ ಭೂತಗಳಿಂದ ಸೃಷ್ಟಿ ಮಾಡಿ, ಅದಕ್ಕೆ ಬ್ರಹ್ಮನಾಗಿ/ಬ್ರಹ್ಮನಂತೆ ಜೀವಾತ್ಮವನ್ನು ಇಡುತ್ತಾನೆ. ಇಲ್ಲಿಯವರೆಗೆ ಸಮಷ್ಟಿ ಸೃಷ್ಟಿ ಎಂದು ಕರಿಯಲ್ಪಡುತ್ತದೆ.
 • ವ್ಯಶ್ಟಿ ಸೃಷ್ಟಿ – ಭಗವಂತನು ಬ್ರಹ್ಮನಿಗೆ, ಋಷಿಗಳಿಗೆ,ಇತ್ಯಾದಿ.., ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದುಕೊಂಡು) ವಿವಿಧವರ್ಣದ ರೂಪಗಳನ್ನು ಒಂದಿರುವ ಸೃಷ್ಟಿಗಳನ್ನು ಸೃಷ್ಟಿಸಲು ಅಧಿಕಾರ ನೀಡುವನು.
 • ವ್ಯಶ್ಟಿ ಸಂಹಾರಮ್- ಭಗವಂತನು ರುದ್ರರಿಗೆ (ಶಿವ), ಅಗ್ನಿ ದೇವರಿಗೆ , ಇತ್ಯಾದಿ, ಇವರುಗಳಿಗೆ (ಅಂತರ್ಯಾಮಿಯಾಗಿ ಇದ್ದು ಕೊಂಡು) ನಾಶಮಾಡುವ ಅಧಿಕಾರ ನೀಡುವನು
 • ಸಮಶ್ಟಿ ಸಂಹಾರಮ್ – ಭಗವಂತನೆ ಎಲ್ಲಾ ಪಂಚ ಭೂತಗಳಿಂದ ಸೃಷ್ಟಿಸಿರುವ ಸೃಷ್ಟಿಯನ್ನು ಮತ್ತಿತರ ಎಲ್ಲಾ ಸೃಷ್ಟಿಗಳನ್ನು ತಾನೆ ನಾಶ ಮಾಡುವನು.

ಹೆಚ್ಚಿನ ವಿವರಗಳಿಗೆ: http://kaarimaaran.com/downloads.html

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: https://srivaishnavagranthams.wordpress.com/readers-guide/

ರಕ್ಷಿತ ಮಾಹಿತಿ:  https://srivaishnavagranthamskannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org