ಅಂತಿಮೋಪಾಯ ನಿಷ್ಠೈ – 3 – ಶಿಷ್ಯ ಲಕ್ಷಣಮ್

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಅಂತಿಮೋಪಾಯ ನಿಷ್ಠೈ

<< ಹಿಂದಿನ ಲೇಖನವನ್ನು

ಶಿಷ್ಯ ಲಕ್ಶಣದ ಬಗ್ಗೆ ಹೆಚ್ಚು ವಿವರಗಳು:

 • ಉಪದೇಶ ರತ್ತಿನ ಮಾಲೈ 72 – ಇರುಳ್ ತರುಮಾ ಜ್ಞಾಲತ್ತೇ ಇನ್ಬಮುಱ್ಱು ವಾೞುಮ್ ತೆರುಳ್ ತರುಮಾ ದೇಸಿಕನೈಚ್ ಚೇರ್ನ್ತು – ಅಂಧಕಾರಭರಿತವಾಗಿರುವ ಈ ವಿಶ್ವದಲ್ಲಿ ದಿವ್ಯದೇಶದ ಭಗವಾನ್ ಹಾಗು ಭಾಗವತರನ್ನು ಸೇವಿಸುತ್ತಿರುವ ಆಚಾರ್ಯನಲ್ಲಿ ನಾವು ಶರಣಾಗಬೇಕು.
 • ಪೆರಿಯಾೞ್ವಾರ್ ತಿರುಮೊೞಿ 4.4.2 – ಕುಱ್ಱಮಿನ್ಱಿ ಗುಣಮ್ ಪೆರುಕ್ಕಿ ಗುರುಕ್ಕಳುಕ್ಕು ಅನುಕೂಲರಾಯ್ ಶಿಷ್ಯನು ಅನಘನಾಗಿ ಹಾಗು ಸದಾ ಆಚಾರ್ಯನಿಗೆ ಅಭಿಮುಖನಾಗಿರಬೇಕು
 • ನಾನ್ಮುಗನ್ ತಿರುವನ್ತಾದಿ 18 – ವೇಱಾಗ ಏತ್ತಿಯಿರುಪ್ಪಾರೈ ವೆಲ್ಲುಮೇ ಮಱ್ಱವರೈಚ್ ಚಾರ್ತ್ತಿಯಿರುಪ್ಪಾರ್ ತವಮ್ – ಭಾಗವತರನ್ನು ಆರಾಧಿಸುವವರ ತಪಸ್ಸು ಭಗವದ್-ಆರಾದಕರ ತಪಸಿಗಿಂತಲೂ ಶ್ರೇಷ್ಠವಾದದ್ದು.
 • ನಾಚಿಯಾರ್ ತಿರುಮೊೞಿ 10.10 – ವಿಟ್ಟುಚಿತ್ತರ್ ತನ್ಗಳ್ ದೇವರೈ ವಲ್ಲಪರಿಸು ವರುವಿಪ್ಪರೇಲ್ ಅತು ಕಾಣ್ಡುಮೇ – ಪೆರಿಯಾೞ್ವಾರ್ ಕೃಷ್ಣನ್ನು ಅಹ್ವಾನಿಸಿ ಹೇಗಾದರು ಬರೆಸಿದರೆ, ಆಗ ಅವನನ್ನು ನೋಡುವೆ.
 • ಕಣ್ಣಿನುನ್ಚಿರುತಾಮ್ಬು ತನಿಯನ್ – ವೇಱೊನ್ಱುಮ್ ನಾನಱಿಯೇನ್ – ನಮ್ಮಾೞ್ವಾರಿನ್ನು ಬಿಟ್ಟರೆ ಇನ್ನೋಂದನ್ನು (ಇನ್ನೋಬ್ಬರನ್ನು) ತಿಳಿಯೆ.
 • ಕಣ್ಣಿನುಂಚಿರುತಾಮ್ಬು ತನಿಯನ್ – ವೇರೋನ್ರಮ್ ನಾನರಿಯೇನ್ -ನಮ್ಮಾೞ್ವಾರನ್ನು ಹೋರಪಡಿಸಿ ಇನ್ನೋಂದು ವಸ್ತುವನ್ನು (ಇನ್ನೋಬ್ಬರಾಗಲಿ) ನಾನರಿಯೆ
 • ಕಣ್ಣಿನುಂಚಿರುತಾಮ್ಬು 2 – ದೇವುಮಱ್ಱಱಿಯೇನ್ – ನಮ್ಮಾೞ್ವಾರನ್ನು ಬಿಟ್ಟು ಇನ್ನೋಂದು ದೈವವನ್ನು ನಾನು ಅರಿಯೆ.
 • ಶ್ರೀ ರಾಮಾಯಣಮ್ – ಶತ್ರುಘ್ನೋ ನಿತ್ಯಶತ್ರುಘ್ನಃ – ಶತ್ರುಘ್ನಾೞ್ವಾನು ರಾಮನನ್ನು ಸೇವಿಸುವ ಇಚ್ಛೆಯನ್ನೂ ಜಯಿಸಿ ಎಂದೂ ಭರತಾೞ್ವಾನಲ್ಲಿ ಭಕ್ತಿಯಿಂದಿದದ್ದರು ಹಾಗು ಅವರನ್ನೆ ಸೇವಿಸುತಿದ್ದರು.
 • ಶ್ರೀವಚನ ಭೂಷಣಮ್ 411 – ವಡುಗ ನಂಬಿ ಆೞ್ವಾನೈಯುಮ್ ಆಣ್ಡಾನೈಯುಮ್ ಇರುಕಱೈಯರೆನ್ಬರ್ ) – (ಎಂಪೆರುಮಾನಾರಿಗೇ ಪೂರ್ಣ ಶರಣಾದ) ವಡುಗ ನಂಬಿಗಳು ಕೂರತ್ತಾೞ್ವಾನ್ ಹಾಗು ಮುದಲಿಯಾಣ್ಡಾನನ್ನು ನೋಡಿ ನೀವು ಎಂಪೆರುಮಾನ್ ಹಾಗು ಎಂಪೆರುಮಾನಾರ್ ಇಬ್ಬರನ್ನು ಆಲಂಬಿಸುದ್ದೀರಿ (ಅವರಂತೋ ಎಂಪೆರುಮಾನಾರನ್ನೇ ಪೂರ್ಣವಾಗಿ ಆಶ್ರಯಿಸಿದ್ದಾರೆ)
 • ರಾಮಾನುಸ ನೂಱ್ಱನ್ತಾದಿ 1 – ಇರಾಮಾನುಸನ್ ಚರಣಾರವಿನ್ದಮ್ ನಾಮ್ ಮನ್ನಿ ವಾೞ ನೆನ್ಜೇ ಸೊಲ್ಲುವೋಮ್ ಅವನ್ ನಾಮನ್ಗಳೇ – ಎಂಪೆರುಮಾನಾರಿನ ಪಾದಪಂಕಜಗಳಲ್ಲಿ ನಿಶ್ಚಲ ಭಕ್ತಿಗಾಗಿ ನಾವು ಸದಾ ಶ್ರೀ ರಾಮಾನುಜರ ನಾಮಗಳನ್ನು ಪಠಿಸುತ್ತಿರಬೇಕು.

ರಾಮಾನುಸ ನೂಱ್ಱಂತಾದಿ 28 – ಇರಾಮಾನುಸನ್ ಪುಗೞ್ ಅನ್ಱಿ ಎನ್ ವಾಯ್ ಕೊಂಜಿಪ್ ಪರವಕಿಲ್ಲಾತು, ಎನ್ನ ವಾೞ್ವಿನ್ಱು ಕೂಡಿಯತೇ- ಶ್ರೀರಾಮಾನುಜರ ಕಲ್ಯಾಣಗುಣಗಳನ್ನೆ ಸ್ತುತಿಸಿತ್ತಿರುವ ನನ್ನ ಜೀವನವು ಈಗ ಎಷ್ಟು ವಿಲಕ್ಷಣವಾಗಿದೆ.

ರಾಮಾನುಸ ನೂಱ್ಱಂತಾದಿ 45 – ಪೇಱೊನ್ಱು ಮಱ್ಱಿಲ್ಲೈ ನಿನ್ ಚರಣನ್ಱಿ, ಅಪ್ಪೇರಳಿತ್ತಱ್ಕು ಆಱೊನ್ಱುಮ್ ಇಲ್ಲೈ ಮಱ್ಱಚ್ ಚರಣನ್ಱಿ – ಅಮುದನಾರ್ ಎಮ್ಪೆರುಮಾನಾರಿಗೆ , “ನನ್ನ ಜೀವನದಲ್ಲಿ ನಿಮ್ಮ ಪಾದಪಂಕಜಗಳನ್ನು ಸೇವಿಸುವುದೇ ಲಕ್ಷ್ಯವು, ಅದರ ಸಾದನೆಗೆ ದಾರಿಯೂ ಆಗಿದೆ”

ರಾಮಾನುಸ ನೂಱ್ಱಂತಾದಿ 48 – ನಿಗರೀನ್ಱಿ ನಿನ್ಱ ಎನ್ ನೀಚತೈಕ್ಕು ನಿನ್ನರುಳಿನ್ ಕಣ್ ಅನ್ಱಿಪ್ ಪುಘಲ್ ಒನ್ಱುಮಿಲ್ಲೈ ಅರ್ಟ್ಕುಮ್ ಅಖ್ತೇ ಪುಗಲ್ – ಅಸಂಖ್ಯಾತವಾಗಿರುವ ನನ್ನ ದೋಷಗಳಿಗೆ ನಿಮ್ಮ ಕರುಣೆಯೋಂದೇ ಶುದ್ಧಿ. ನಿಮ್ಮ ದಯೆಯನ್ನು ಸ್ಫುರಿಸಲೂ ನಾನೇನು ಮಾಡಬೇಕದದ್ದಿಲ್ಲ ನನ್ನನ್ನು ನೀವು ನೋಡುತ್ತಲೇ ಅದು ತಾನೆ ಪ್ರವಹಿಸುವುದು.

ರಾಮಾನುಸ ನೂಱ್ಱಂತಾದಿ 56 – ಇರಾಮಾನುಸನೈ ಅಡೈನ್ತಪಿನ್ ಎನ್ವಾಕ್ಕುರೈಯಾತು ಎನ್ ಮನಮ್ ನಿನೈಯಾತು ಇನಿ ಮಱ್ಱೊನ್ಱೈಯೇ – ಶ್ರೀರಾಮಾನುಜರನ್ನು ಅಶ್ರಯಿಸಿದ ಮೇಲೆ ನನ್ನ ಪದಗಳು ಇನ್ನೊಬ್ಬರ ಕೀರ್ತಿಯನ್ನು ಹಾಡದು ಹಾಗು ನನ್ನ ಮನಸ್ಸು ಇನ್ನೊಂದರನ್ನು ಚಿಂತಿಸುವುದಿಲ್ಲ.

ರಾಮಾನುಸ ನೂಱ್ಱಂತಾದಿ 79 – ಇರಾಮಾನುಸನ್ ನಿಱ್ಕ ವೇಱು ನಮ್ಮೈ ಉಯ್ಯಕ್ಕೊಳ್ಳವಲ್ಲ ದೆಯ್ವಮ್ ಇಂಗು ಯಾತೆನ್ಱುಲರಂತು ಅವಮೇ ಐಯಪ್ಪಡಾ ನಿಱ್ಪರ್ ವೈಯತ್ತುಳ್ಳೋರ್ ನಲ್ಲಱಿವಿೞಂತೇ-ನಿಜಜ್ಞಾನವನ್ನು ನೀಡಿ ಎಲ್ಲರನ್ನು ಉದ್ಧರಿಸಲು ಎಮ್ಪೆರುಮಾನಾರ್ ಕಾಯುತ್ತಿರುವಾಗ, ತಮ್ಮ ಮೂಡತೆಯಿಂದ ತಮ್ಮನ್ನು ಉದ್ಧರಿಸುವ ದೈವನ್ನು ಹುಡುಕುತ್ತಿರುವ ಜನತೆಯಬಗ್ಗೆ ಚಿಂತಿಸುತಿದ್ದೇನೆ.

ರಾಮಾನುಸ ನೂಱ್ಱಂತಾದಿ 104 – ಕೈಯಿಲ್ ಕನಿಯನ್ನ ಕಣ್ಣನೈಕ್ ಕಾಟ್ಟಿತ್ ತರಿಲುಮ್ ಉನ್ಱನ್ ಮೆಯ್ಯಿಲ್ ಪಿಱಂಗಿಯ ಚೀರನ್ಱಿ ವೇಣ್ಡಿಲನ್ ಯಾನ್ -(ತನ್ನ ಭಕ್ತರಲ್ಲಿ ಆತನ ಸೌಂದರ್ಯ ಸೌಶೀಲ್ಯಗಳಿಗೆ ಪ್ರಸಿದ್ಧನಾದ) ಕಣ್ಣನನ್ನು (ಶ್ರೀಕೃಷ್ಣನನ್ನು) ತೋರಿದರೂ ನನಗೆ ನಿಮ್ಮ ದಿವ್ಯ ರೂಪ ಹಾಗು ಗುಣಗಳೆ ಲಕ್ಷ್ಯ ಹೋರತು ಬೆರೊಂದಲ್ಲ.

ರಾಮಾನುಸ ನೂಱ್ಱಂತಾದಿ 106 – ಇರುಪ್ಪಿಡಮ್ ವೈಕುಂತಮ್ ವೇಂಕಟಮ್ ಮಾಲಿರುನ್ಚೋಲೈಯೆನ್ನುಮ್ ಪೊರುಪ್ಪಿಡಮ್ ಮಾಯನುಕ್ಕೆಂಬರ್ ನಲ್ಲೋರ್, ಅವೈ ತನ್ನೊಡುಮ್ ವಂದಿರುಪ್ಪಿಡಮ್ ಮಾಯನಿರಾಮಾನುಸನ್ ಮನತ್ತು ಇನ್ಱವನ್ ವಂದಿರುಪ್ಪಿಡಮ್ ಎಂದನ್ ಇದಯತ್ತುಳ್ಳೇ ತನಕ್ಕಿನ್ಬುಱವೇ – ಮಹಾತ್ಮರು ಶ್ರೀಮನ್ನಾರಾಯಣನ ವಾಸವು ಶ್ರೀವೈಕುಂಠ ತಿರುವೇಂಕಟ (ತಿರುಮಲೆ) ತಿರುಮಾಲಿರುಂಚೋಲೆಯಾದಿಗಳೆನ್ನುತ್ತಾರೆ ಅಂತಃ ಭಗವಂತನು ತನ್ನ ಪರಿವಾರದೋಂದಿಗೆ ಶ್ರೀರಮಾನುಜರ ಸುಂದರ ಹೃದಯದಲ್ಲಿರುವನು. ಇಂತಃ ರಾಮಾನುಜರು ಸದಾ ಸಂತೋಷದಿಂದ ನನ್ನ ಹೃದಯದಲ್ಲಿದ್ದಾರೆ.

ರಾಮಾನುಸ ನೂಱ್ಱಂತಾದಿ 108 – ನಂತಲೈಮಿಸೈಯೇ ಪೊಂಗಿಯ ಕೀರ್ತ್ತಿ ಇರಾಮಾನುಸನಡಿಪ್ ಪೂಮನ್ನವೇ – ಶ್ರೀರಮಾನುಜರ ಇಂತಃ ಕೀರ್ತಿಯುತ ಪಾದಪಂಕಜಗಳು ನನ್ನ ಶಿರಸ್ಸನ್ನು ಅಲಂಕರಿಸಲಿ.

ಅನುವಾದಕರ ಟಿಪ್ಪಣಿ: ಮೇಲಿನ ಪಾಸುರಗಳಿಂದ ಹೇಗೆ ಶಿಷ್ಯನು ಆಚಾರ್ಯನನ್ನು ಧ್ಯಾನಿಸಬೇಕು, ಅವರನ್ನು ಸೇವಿಸಲು ಯತ್ನಿಸುವುದು ಹಾಗು ಪ್ರಸನ್ನಗೊಳ್ಳಿಸುವುದು ಮೇಲಿನ ಪಾಸುರಗಳಿಂದ ಸ್ಥಾಪಿಸಲಾಗಿದೆ. ಮುಂದಿನ ಭಾಗದಲ್ಲಿ ಅರುಳಾಳ ಪೆರುಮಾಳ್ ಎಮ್ಪೆರುಮಾನಾರಿನ ಜ್ಞಾನ ಸಾರದಿಂದ ಹಲವಾರು ಪಾಸುರಗಳು ಉದಾಹರಿಸಲಾಗಿದೆ.

ಜ್ಞಾನ ಸಾರ- 30
ಮಾಡುಮ್ ಮನೈಯುಮ್ ಮಱೈ ಮುನಿವರ್
ತೇಡುಮ್ ಉಯರ್ ವೀಡುಮ್ ಸೆನ್ನೆಱಿಯುಮ್ – ಪೀಡುಡೈಯ
ಎಟ್ಟೆೞುತ್ತುಮ್ ತಂದವನೇ ಎನ್ಱಿರಾದಾರ್ ಉಱವೈ

ವಿಟ್ಟಿಡುಗೈ ಕಣ್ಡೀರ್ ವಿದಿ
ಶಾಸ್ತ್ರಾನುಸಾರವಾಗಿ ತನ್ನ ಎಲ್ಲಾ ಸ್ವತ್ತು (ಐಹಿಕ ಸಂಪತ್ತು- ಭೂಮಿ, ಭಾರ್ಯಾ/ ಭರ್ತಾದಿಗಳು ಹಾಗು ಕೈಂಕರ್ಯವೆಂಬ ದೈವಿಕ ಸಂಪತ್ತು) ಅಷ್ಠಾಕ್ಷರಮಹಾಮಂತ್ರದ ಅರ್ಥಗಳನ್ನು ಉಪದೇಶಿಸಿದ ಆಚಾರ್ಯನಿಗೆ ಸೇರಿದವು ಎಂದು ತಿಳಿಯದವರ ಸಂಗವನ್ನು ತ್ಯಜಿಸಬೇಕು.

ಜ್ಞಾನ ಸಾರ- 31
ವೇದಮೊರು ನಾಂಗಿನ್ ಉಟ್ಪೊದಿಂದ ಮೆಯ್ಪ್ಪೊರುಳುಮ್
ಕೋದಿಲ್ ಮನು ಮುದಲ್ ನೂಲ್ ಕೂಱುವದುಮ್ – ತೀದಿಲ್
ಶರಣಾಗತಿ ತಂದ ತನ್ ಇಱೈವನ್ ತಾಳೇ
ಅರಣಾಗುಮ್ ಎನ್ನುಮ್ ಅದು

ಶ್ರುತಿಗಳ ಸಾರವು ಹಾಗು (ಮನು ಮೊದಲಾದ) ಸ್ಮೃತಿಗಳ ಸಾರವಾದ ಅಷ್ಠಾಕ್ಷರ ಮಹಾಮಂತ್ರವು ಶರಣಾಗತಿಯ ಮಾರ್ಗವನ್ನು ತೋರುವ ಆಚಾರ್ಯನೇ ಆಶ್ರಯವೇಂದು ಹೇಳುತ್ತದೆ.

ಜ್ಞಾನ ಸಾರ- 36
ವಿಲ್ಲಾರ್ ಮಣಿ ಕೊೞಿಕ್ಕುಮ್ ವೇಂಗಡಪ್ ಪೊಱ್ ಕುನ್ಱು ಮುದಲ್
ಸೊಲ್ಲಾರ್ ಪೊೞಿಲ್ ಸೂೞ್ ತಿರುಪ್ಪತಿಗಳ್ – ಎಲ್ಲಾಮ್
ಮರುಳಾಮ್ ಇರುಳೋಡ ಮತ್ತಗತ್ತುತ್ ತನ್ ತಾಳ್
ಅರುಳಾಲೇ ವೈತ್ತ ಅವರ್

ತಮ್ಮ ನಿರ್ಹೇತುಕ ಕೃಪೆಯಿಂದ ಶಿಷ್ಯನ ಅಜ್ಞಾನವನ್ನು ದೂರಮಾಡಿಸಿದ ಆಚಾರ್ಯನಲ್ಲೇ ತಿರುವೇಂಕಟ (ಪರಮಪದ, ಕ್ಷೀರಾಬ್ಧಿ) ಮೊದಲಾದ ಭಗವಂತನ ಎಲ್ಲಾ ಧಾಮಗಳು ನೋಡಲ್ಪಡಬೇಕು.

ಜ್ಞಾನ ಸಾರ 37
ಪೊರುಳುಮ್ ಉಯಿರುಮ್ ಉಡಂಬುಮ್ ಪುಗಲುಮ್
ತೆರುಳುಮ್ ಗುಣಮುಮ್ ಸೆಯಲುಮ್ – ಅರುಳ್ ಪುರಿಂದ
ತನ್ ಆರಿಯನ್ ಪೊರುಟ್ಟಾಚ್ ಸನ್ಗ್ಕಱ್ಪಮ್ ಸೆಯ್ಬವರ್ ನೆಂಜ್ಚು
ಎನ್ನಾಳುಮ್ ಮಾಲುಕ್ಕಿಡಮ್

ಸರ್ವೇಶ್ವರನು ತಮ್ಮ ಎಲ್ಲಾ ಸಂಪತ್ತು, ಬಾಂಧವರು, ಕಾರ್ಯಾದಿಗಳನ್ನು ಆಚಾರ್ಯವಶ್ಯವನ್ನಾಗಿ ಇಟ್ಟ ಶಿಷ್ಯರ ಹೃದಯದಲ್ಲಿ ಎಂದೂ ಪ್ರೀತಿಯಿಂದಿರುವನು.

ಜ್ಞಾನ ಸಾರ 38
ತೇನಾರ್ ಕಮಲತ್ ತಿರುಮಾಮಗಳ್ ಕೊೞುನನ್
ತಾನೇ ಗುರುವಾಗಿತ್ ತನ್ ಅರುಳಾಲ್ – ಮಾನಿಡರ್ಕ್ಕಾ
ಇನ್ನಿಲತ್ತೇ ತೋನ್ಱುದಲಾಲ್ ಯಾರ್ಕ್ಕುಮ್ ಅವನ್ ತಾಳಿಣೈಯೈ
ಉನ್ನುವದೇ ಸಾಲ ಉಱುಮ್

ಶ್ರೀಮಹಾಲಕ್ಷ್ಮಿಯ ಪತಿಯಾದ ಶ್ರೀಮನ್ನಾರಾಯಣನೇ ತನ್ನ ನಿರ್ಹೇತುಕ ಕೃಪೆಯಿಂದ ಆಚಾರ್ಯನಾಗಿ ಅವತರಿಸುವದರಿಂದ ತನ್ನನ್ನು ಆಶ್ರಯಿಸುವುದೇ ಉತ್ತಮ ಮಾರ್ಗ. ಶಿಷ್ಯನು ಆಚಾರ್ಯನಲ್ಲಿ ಅನುರಾಗ/ ಭಕ್ತಿಯಿಂದಿರಬೇಕು.

ಶಿಷ್ಯನು ಆಚಾರ್ಯನ ವಿಷಯದಲ್ಲಿ ಆದರಪೂರ್ಣನಾಗಿರಬೇಕು.

ಅನುವಾದಕರ ಟಿಪ್ಪಣಿ: ಮುಂದಿನ ಭಾಗದಲ್ಲಿ ಪಿಳ್ಳೈ ಲೋಕಾಚಾರ್ಯರ ಶ್ರೀವಚನ ಭೂಷನ ಧಿವ್ಯ ಶಾಸ್ತ್ರದಲ್ಲಿ ಸುದೀರ್ಘವಾಗಿ ವಿವರಿಸಲ್ಪಟ್ಟ ಶಿಷ್ಯ ಲಕ್ಷಣವನ್ನು ಅನುಸರಿಸಿ ಇದೆ.

ಸೂತ್ರ 243

 • ಮೋದಲು ನಾವು ಸಂಸಾರದಲ್ಲಿರುವೆವೆಂದು ಅರಿತು, ಈ ವಿಷಯಗಳನ್ನು ಈ ರೀತಿಅಲ್ಲಿ ತೆಳಿಯ ಬೇಕು.-
  • ಅಹಂಕಾರದ (ಸ್ವಸ್ವಾತಂತ್ರ್ಯದ) ಹಾಗು ಸಾಂಸಾರಿಕ ಆಶೆಗಳಿಗೆ ಕಾರಣವಾದರಿಂದ ನಮ್ಮನ್ನು (ಪ್ರತ್ಯೇಕವಾಗಿ ಶರೀರವನ್ನು) ಆತ್ಮಾವಿನ ಪ್ರಧಾನ ಶತ್ರುವಾಗಿ
  • ವೈಷಯಿಕ ಆಸೆಗಳನ್ನು ನಮ್ಮಲ್ಲಿ ವರ್ಧಿಸಿ ಸಂಸಾರದಲ್ಲಿ ವಾಸವನ್ನು ಹೆಚ್ಚಿಸುವವ ಸಂಸಾರಿಗಳನ್ನು ಭಯಜನಕವಾದ ಸರ್ಪಗಳಂತೆ ಭಯಪಡಬೇಕು.
  • ಭಗವದ್ ವಿಷಯದಲ್ಲಿ ಆಸಕ್ತಿಯನ್ನು ಮೂಧಿಸುವವರಾಗಿ ಹಾಗು ವೈಷೈಕ ಆಕಾಂಕ್ಷೆಗಳಿಂದ ಹೋರತರುವ ಶ್ರೀವೈಷ್ಣವರನ್ನು ನಿಜವಾದ ಬಾಂಧವರಾಗಿ
  • ಆತ್ಮಾವಿಗೆ ಸದಾ ಹಿತವನ್ನು ಮಾಡುವ ಭಗವಂತನನ್ನು ತಂದೆಯಾಗಿ
  • ಆದ್ಯಾತ್ಮಿಕ ಜ್ಞಾನದ ಹಸಿವಿನಲ್ಲಿರುವ ನಮಗೆ ಜ್ಞಾನ ನೀಡುವ ಆಚಾರ್ಯನನ್ನು ಹಸಿದವನು ಆಹಾರವನ್ನು ತಿಳಿಯುವಂತಿರಬೇಕು.
  • ಜೋತೆಯಲ್ಲಿ ಭಗವದ್ ಅನುಭವವನ್ನು ಅನುಭವಿಸಬಹುದಾದ ಹಾಗು ಅವರೂ ರಸಿಸಿ ಆಸ್ವಾದಿಸಿ ನಮ್ಮನ್ನು ಭಗವದ್ ವಿಷಯವನ್ನು ಅನುಭವಿಸುವಂತೆಮಾಡುವ ಶಿಷ್ಯರನ್ನು ಅಭಿಮತವಿಷಯವನ್ನಾಗಿ
 • ಈ ಮನೋಭಾವದಿಂದ ನಾವು ಹೀಗೆ ಚಿಂತಿಸಬೇಕು:
  • ಅಹಂಕಾರವು ನಮ್ಮ ನಿಜವಾದ ಅನುಕೂಲರು ಸುಹೃದ್ಗಳಾದ ಶ್ರೀವೈಷ್ಣವರ ವಿಷಯದಲ್ಲಿ ಅನಾದರವನ್ನು ಉಂಟುಮಾಡುತ್ತದೆ.
  • ಅರ್ಥವು (ಲೌಕಿಕ ಸಂಪತ್ತು) ಅವೈಷ್ಣವರಲ್ಲಿ ಪ್ರಾವಣ್ಯವನ್ನು ಉಂಟುಮಾಡುತ್ತದೆ, ನಾವು ಧನದ ಹಿಂದೆ ಹೋಗಲಾರಂಬಿಸುವ ಕ್ಷಣವೇ ಅವೈಷ್ಣಾವರಿಂದ ಪ್ರಯೋಜನವನ್ನು ಅಪೇಕ್ಷಿಸುತ್ತ (ಎದರುನೋಡುತ್ತಾ) ಎಲ್ಲರನ್ನು ವಂದಿಸುವುದು ಪ್ರಾರಂಭಿಸಬೇಕು. ಆಗ ನಮಗೆ ಅವೈಷ್ಣವರಲ್ಲಿ (ಅವರುಮಾಡುತ್ತಿರುವ ಕಾರ್ಯದಲ್ಲಿ ದಕ್ಷರಾಗಿದ್ದರೂ, ಭಗವದ್ವಿಷಯವಲ್ಲದರಲ್ಲಿ ಈ ಆದರಭಾವವು ನಮ್ಮನ್ನು ಅದೇ ಹಾದಿಯಲ್ಲಿ ಎಳೆಯುವುದರಿಂದ ಆಪತ್ಕರ) ಆದರವು ಉಂಟಾಗುವುದು.
  • ಕಾಮವು ಪರವ್ಯಕ್ತಿಯಲ್ಲಿ (ಅವರು ನಮ್ಮನ್ನು ಉಪೇಕ್ಷಿಸಿದರೂ ಅವರಲ್ಲಿ) ಅನುರಾಗವನ್ನು ಉಂಟುಮಾಡುತ್ತದೆ, ಶ್ರೀಕೃಷ್ಣನು ಗೀತೆಯಲ್ಲಿ ಸಂಗದಿಂದ ಕಾಮವು, ಕಾಮದಿಂದ ಆಸೆ ಅದರಿಂದ ಸ್ಮೃತಿಭ್ರಂಶಾ ಅದರಿಂದ ಬುಧ್ದಿನಾಶ ಅದರಿಂದ ಕೊನೆಯಲ್ಲಿ ಸಂಸಾರದಲ್ಲಿ ಅಧೋಗತಿಯು ಏರ್ಪಡುವುದು
 • ಆಚಾರ್ಯಮುಖೇನ ಭಗವಂತನ ಅನುಗ್ರಹದಿಂದ ಶಮ ದಮಾದಿ ಆತ್ಮಗುಣಗಳು ಉಂಟಾಗಬೇಕೆ ಹೊರತು ಸ್ವಪ್ರಯತ್ನದಿಂದ ಸಾಧ್ಯವಲ್ಲವೆಂಬುದರಲ್ಲಿ ಧೃಡನಿಶ್ಚಯವಿರಬೇಕು ಹಾಗು –
  • ಲೌಕಿಕ ವ್ಯವಹಾರದಲ್ಲಿ ಸ್ಪೃಹೆಯನ್ನು ತ್ಯಜಿಸಬೇಕು
  • ಭಗವದ್ವಿಷಯದಲ್ಲಿ ತ್ವರೆಯಿರಬೇಕು
  • ಪ್ರಾಕೃತವಿಷಯಗಳಲ್ಲಿರುವ ಭೋಗ್ಯತಾಬುಧ್ದಿಯನ್ನೂ ಆದರಾತಿಶಯವು ಹೋಗಬೇಕು ಎಂದು ಅರಿಯಬೇಕು
  • ದೇಹಧಾರಣಕ್ಕಾಗಿ ಭಗವಂತನ ಪ್ರಸಾದವನ್ನು ಸೇವಿಸಬೇಕು ಅಥವಾ ತಿರುವಾರಾಧನದ ಕೊನೆಯಭಾಗವಾಗಿ ಪ್ರಸಾದವನ್ನು ಸೇವಿಸುವುದು ( ನಾವು ಆಹಾರವನ್ನು ತಯಾರಿಸಿ ಭಗವಂತನಿಗೆ ನಿವೇದಿಸಿದನಂತರ ಆ ಪ್ರಸಾದವನ್ನು, ಅರ್ಪಿಸುತ್ತಿರುವ ನಾವೂ ಒಂದು ಭಾಗವನ್ನು ಸೇವಿಸಬೇಕು).
  • ಜೀವನದಲ್ಲಿ ಕ್ಲೇಷವೇನಾದರು ಉಂಟಾದರೆ ಅದನ್ನು ಹರ್ಷದಿಂದ ಸ್ವೀಕರಿಸಬೇಕು ಅದು ನಮ್ಮ ಕರ್ಮಫಲವೇಯಾದ ಕಾರಣ- ಇಲ್ಲಿನವರೆಗು ನಾವು ಮಾಡಿದ ಪುಣ್ಯಪಾಪರಾಶಿಯಿಂದ ಅದರ ಫಲವಾಗಿ ಅವನ್ನು ಭುಜಿಸಬೇಕು ಹಾಗು ಅದರಿಂದ ನಮ್ಮ ಕರ್ಮವೇ ಕಡಿಮೆಯಾಗುತ್ತಿದೆ.
  • ಭಗವಂತನ ಕೃಪಾಫಲವಾಗಿ ಸ್ವೀಕರಿಸಬೇಕು, ಭಗವತ್-ಪ್ರಪತ್ತಿಯಿಂದ ಅವನು ಪೂರ್ವಮೇವ ನಮ್ಮ ಎಲ್ಲ ಸಂಚಿತಕರ್ಮಗಳನ್ನು ಮನ್ನಿಸಿದ್ದಾನೆ ಹಾಗು ಸಂಸಾರದಲ್ಲಿ ವಿರಸವು ಉಂಟಾಗಿ ಪರಮಪದದಲ್ಲಿ ಆರ್ತಿ ಉಂಟಾಗಲು ಸ್ವಲ್ಪದುಃಖವನ್ನು ನೀಡುತಿದ್ದಾನೆ- ಇಲ್ಲೇ ಸೌಖ್ಯಜೀವನಲಭಿಸಿದರೆ ಸಂಸಾರದಲ್ಲೇ ಸಂಗವು ಏರ್ಪಡಬಹುದು. ಆದರಿಂದ ಭಗವಂತನು ತನ್ನ ನಿರ್ಹೇತುಕಕೃಪೆಯಿಂದ ಕರ್ಮಾನುಗುಣವಾಗಿ ಸ್ವಲ್ಪ ದುಃಖವನ್ನು ನೀಡಿ ಪರಮಪದದಲ್ಲಿ ಇಚ್ಛೆಯನ್ನು ಉಂಟುಮಾಡುತ್ತಾನೆ.
  • ನಮ್ಮ ಅನುಷ್ಠಾನವನ್ನು ಭಗವತ್-ಪ್ರಾಪ್ತಿಗೆ ಉಪಾಯವೆಂಬ ಅಲೋಚನೆಯನ್ನು ತ್ಯಜಿಸಬೇಕು.ನಾವು ಭಗವಂತನು ಮಾಡಿದ ಉಪಕಾರಗಳನ್ನು ತಿಳಿದು ಎಲ್ಲವು ಭಗವತ್-ಕೈಂಕರ್ಯವಾಗಿ ಮಾಡಬೇಕು.
  • ವಿಲಕ್ಷಣಾರಾದ ಶ್ರೀವೈಷ್ಣವರ ಜ್ಞಾನ ಅನುಷ್ಠಾನದಲ್ಲಿ ವಾಂಛೆ (ಇಚ್ಛೆ/ ರುಚಿ) ಇರಬೇಕು.
  • ಜೀವಾತ್ಮರಲ್ಲಿ ತುಂಬಾ ಪ್ರೀತಿಯಿಂದ ಭಗವಂತನು ವಾಸಿಸುತ್ತಿರುವ ದಿವ್ಯದೇಶಗಳಲ್ಲಿ ಆದರಾತಿಶಯವಿರಬೇಕು.
  • ಮಂಗಳಾಶಾಸನಮಾಡಬೇಕು. ಅಪಾಯಕರವಾದ ಈ ಸಂಸಾರದಲ್ಲಿ ಭಗವಂತನಿಗೆ ಏನು ಆಗಬಾರದೆಂದು ಪ್ರಾರ್ಥಿಸಬೇಕು- ಸಮಕಾಲದಲ್ಲಿ ಹಲವಾರು ಅರ್ಚಾವಿಗ್ರಹಗಳ ಚೌರ್ಯ (ಕಳ್ಳತನ), ಪ್ರಹಾರ/ ವಿರೂಪಣಾದಿಗಳು ನಡೆಯುವಾಗ ನಾವು ಭಗವಂತನು ಎಂದು ಪ್ರಾರ್ಥಿಸಬೇಕು. ಈ ಭಕ್ತಿಯ ಅತಿಶಯ ಪೆರಿಯಾೞ್ವಾರ್, ಆಣ್ಡಾಳ್ ಎಮ್ಪೆರುಮಾನಾರಿಂದ ತೋರಲ್ಪಟ್ಟಿತ್ತು.
  • ಇತರ ವಿಷಯಗಳಲ್ಲಿ ಅರುಚಿಯಿರಬೇಕು.
  • ಪರಮಪದವನ್ನು ಸೇರುವುದರಲ್ಲಿ ಆರ್ತಿಯಿರಬೇಕು (ನಿಜವಾದ ಆಸೆ) ಪ್ರತಿದಿನವೂ ನಾವು ನಮ್ಮಾೞ್ವಾರಿನ ಹಾಗೆ ಭಗವಂತನನ್ನು ಎಂದು ಮೋಕ್ಷವನ್ನು ಪ್ರಸಾದಿಸಿ ಪರಮಪದದಲ್ಲಿ ನಿತ್ಯಕೈಂಕರ್ಯನೀಡುವನ್ನು ಎಂದು ಅತ್ತು ಕೇಳಬೇಕು.
  • ಶ್ರೀವೈಷ್ಣವರ ಮುಂದೆ ವಿನಯವನ್ನು (ಅಮಾನಿತ್ವವನ್ನು) ಅವೈಷ್ಣವರಿಗೆ ಸೇವೆಯನ್ನು ವರ್ಜಿಸಬೇಕು.
  • ಆಹಾರ-ನಿಯತಿಯನ್ನು ಪಾಲಿಸಬೇಕು. ನಿಯಮಿತ ಆಹಾರದ ಅಭ್ಯಾಸ (http://ponnadi.blogspot.in/2012/07/srivaishnava-AhAra-niyamam_28.html)
  • ಶ್ರೀವೈಷ್ಣವರ ಸಹವಾಸಕ್ಕೆ ಆಕಾಂಕ್ಷೆ
  • ಅವೈಷ್ಣವರ ಸಹವಾಸದಿಂದ ನಿವೃತ್ತಿ.

ಸೂತ್ರ 274- ಶಿಷ್ಯನ ಸ್ವರೂಪ. ಆಚರ್ಯನಲ್ಲೇ ಪೂರ್ಣವಾಗಿ ಆಶ್ರಯಿಸಿದ ಸತ್-ಶಿಷ್ಯರಲ್ಲಿರಬೇಕಾದ ಹಲವಾರು ವಿಷಯಗಳು ಈ ಸೂತ್ರದಲ್ಲಿ ಚರ್ಚಿಸಲ್ಪಟ್ಟಿದೆ. ಅವು-

 • ವಸ್ತವ್ಯಮ್ ಆಚಾರ್ಯ ಸನ್ನಿಧಿಯುಮ್ ಭಗವದ್ ಸನ್ನಿಧಿಯುಮ್– ವಾಸಸ್ಥಳವು ಆಚಾರ್ಯನ ಸಾನಿಧ್ಯವಿರುವ (ಅವರು ವಾಸಿಸುವ) ಸ್ಥಳ ಹಾಗು (ಅದು ಸಾದ್ಯವಾಗದಿದ್ದಲ್ಲಿ) ಎಮ್ಪೆರುಮಾನ್ ವಾಸಿಸುವ ಸ್ಥಳ
 • ವಕ್ತವ್ಯಮ್ ಆಚಾರ್ಯ ವೈಭವಮುಮ್ ಸ್ವನಿಕರ್ಷಮುಮ್– ಸದಾಚಾರ್ಯನ ವೈಭವವು ಹಾಗು ದೋಷಯುಕ್ತನಾದ ತನ್ನು ನಿಕರ್ಷ ಮಾತಿಗೆ ವಿಷಯವಾಗಬೇಕು.
 • ಜಪ್ತವ್ಯಮ್ ಗುರು ಪರಮ್ಪರೈಯುಮ್ ದ್ವಯಮುಮ್- ಜಪವೋ ಅನುಸಂಧಾನವು ವಾಕ್ಯ ಗುರು ಪರಂಪರೆ ಹಾಗು ದ್ವಯ ಮಹಾಮಂತ್ರ
 • ಪರಿಗ್ರಾಹ್ಯಮ್ ಪೂರ್ವಾಚಾರ್ಯ ವಚನಮುಮ್ ಅನುಶ್ಟಾನಮುಮ್- ಪೂರ್ವಾಚರ್ಯರ ಉಪದೇಶ ಹಾಗು ಇತಿಹಾಸವನ್ನು ಸ್ವೀಕರಿಸಬೇಕು
 • ಪರಿತ್ಯಾಜ್ಯಮ್ ಅವೈಷ್ಣವ ಸಹವಾಸಮುಮ್ ಅಭಿಮಾನಮುಮ್– ಅವೈಷ್ಣವರೋಂದಿಗೆ ಯಾವ ಸಂಬಂಧವನ್ನು ಬಿಟ್ಟು, ಒಬ್ಬ ಅವೈಷ್ಣವನು ನಮ್ಮನ್ನು ತಮ್ಮ ಗುಂಪಿಗೆ ಸೇರಿದವನು ಎಂದು ತಿಳಿಯುವಂತಹ ಯಾವ ಕಾರ್ಯದಲ್ಲು ತೋಡಗಬಾರದು.
 • ಕರ್ತ್ತವ್ಯಮ್ ಆಚಾರ್ಯ ಕೈಂಕರ್ಯಮುಮ್ ಭಗವತ್ ಕೈಂಕರ್ಯಮುಮ್- ಆಚಾರ್ಯನನ್ನು ಎಮ್ಪೆರುಮಾನನ್ನು ಅವನ ದಾಸರನ್ನು ಸೇವಿಸುವುದು.

ಶಿಷ್ಯನಿಂದ ಅಪೇಕ್ಷಿತವಾದ ನಡುವಳಿಕೆಯನ್ನು ಹೆಚ್ಚು ಸೂತ್ರಗಳು ವಿವರಿಸುತ್ತವೆ.

 • ಸೂತ್ರ 275 – ಶಿಷ್ಯನು ಶಾಸ್ತ್ರವನ್ನು ಆಲಂಬಿಸಬೇಕು, ಹಾಗು ಆಚಾರ್ಯರ ಇಚ್ಛೆಯನ್ನು ತಿಳಿದು ಆಚಾರ್ಯ-ಕೈಂಕರ್ಯ-ಪ್ರಕ್ರಿಯೆಯನ್ನು ಕಲಿಯಬೇಕು.
 • ಸೂತ್ರ 298 – ಶಿಷ್ಯನ ಜ್ಞಾನಕ್ಕೆ ವಿಷಯವು ಆಚಾರ್ಯನ ಸದ್ಗುಣಗಳು; ಶಿಷ್ಯನ ಅಜ್ಞಾನಕ್ಕೆ ವಿಷಯವು ಆಚಾರ್ಯನ ದೋಷಗಳು; ಶಿಷ್ಯನ (ಪ್ರವೃತ್ತಿ) ಶಕ್ತಿಗೆ ವಿಷಯವು ಆಚಾರ್ಯ ಕೈಂಕರ್ಯ; ಶಿಷ್ಯನ ಅಶಕ್ತಿಗೆ ವಿಷಯವು ಶಾಸ್ತ್ರ ನಿಷಿದ್ಧ ಕಾರ್ಯಗಳನ್ನು ಮಾಡುವುದು (ಅವನ್ನು ವರ್ಜಿಸಬೇಕು).
 • ಸೂತ್ರ 321 – ಸತ್-ಶಿಷ್ಯನೆಂದರೆ-
  • ಆಚಾರ್ಯ ಕೈಂಕರ್ಯದಿಂದ ಇತರವಾದ ಪ್ರಾಪ್ಯಾಂತರಗಳಲ್ಲಿ ನಿವೃತ್ತಿಯಿರುವವನು.
  • ಆಚಾರ್ಯನಿಗೆ ತಾನು ಮಾಡುವ ಶುಶ್ರೂಷೆಯಿಂದ ಸಂತೋಷಪಡಿಸಿ ತತ್ತ್ವಜ್ಞಾನವನ್ನು ಪಡೆಯಬೇಕು.
  • ಸಂಸಾರದಿಂದ ಹೋರಬರಬೇಕು ಎಂಬ ಆರ್ತಿಯಿರಬೇಕು; ಆಚಾರ್ಯರಿಂದ ಕ್ಷಣಮಾತ್ರ ವಿಶ್ಲೇಶವು ದುಸ್ಸಹವಾಗಿರಬೇಕು
  • ಆಚಾರ್ಯನು ಬೋಧಿಸಿದ ಭಗವದ್ವಿಷಯದಲ್ಲಿ ಆದರಾತಿಶಯವಿರಬೇಕು
  • ಭಗವದ್-ಭಾಗವತ (ಆಚಾರ್ಯನ ಹಾಗು ಇತರ ಶ್ರೀವೈಷ್ಣವರ) ವೈಭವವು ಶ್ರುತವಾದಾಗ (ಕೇಳಿದಾಗ) ಆಸೂಯೆಯಿಲ್ಲದವನು.
 • ಸೂತ್ರ 322 – ಆಚಾರ್ಯನನ್ನೇ ತಿರುಮಂತ್ರವೆಂದು, ತಿರುಮಂತ್ರದ ವಿಷಯವಾದ ಭಗವಂತನೆಂದೂ, ತತ್-ಫಲವಾದ ಕೈಂಕರ್ಯವೆಂದೂ, ಅವಿದ್ಯಾನಿವಾರಣೆ ಮೊದಲಾದ ಐಯಿಕಲೋಕದ ಭೋಗಗಳನ್ನಾಗಿಯೂ ಶಿಷ್ಯನು ಭಾವಿಸಬೇಕು.
 • ಸೂತ್ರ 323 – ಪರಮಾಚಾರ್ಯರಾದ ಆಳವಂದಾರ್ರೂ ಈ ಅರ್ಥವನ್ನು “ಮತಾ ಪಿತಾ ಯುವತಯಃ” ಎಂಬ ನಮ್ಮಾೞ್ವಾರಿನ ವಿಷಯದ ಶ್ಲೋಕದಲ್ಲಿ ವಿವರಿಸಿದ್ದಾರೆ ಹಾಗು ನಮ್ಮಾೞ್ವಾರ್ರನ್ನು ವೈಷ್ಣವ ಕುಲಪತಿಯೆಂದೂ (ವೈಷ್ಣವರ ನಾಯಕರೆಂದು) ಹಾಗು ನಮ್ಮಾೞ್ವಾರ್ರೇ ಸರ್ವಸ್ವವೆಂದು ಹೇಳಿದ್ದಾರೆ.
 • ಸೂತ್ರ 327- ಶಿಷ್ಯನು ಅಚಾರ್ಯನಿಗೆ ಪ್ರಿಯವಾದನ್ನು ಮಾಡುವನು.
 • ಸೂತ್ರ 328- ಶಿಷ್ಯನಿಗೆ ಆಚಾರ್ಯನ ಹರ್ಷವೇ ಲಕ್ಷ್ಯವಾಗಬೇಕು.
 • ಸೂತ್ರ 329- ಆದರಿಂದ ಶಿಷ್ಯನು ಆಚಾರ್ಯನ ಹರ್ಷದಬಗ್ಗೆ ಗಮನಿಸಬೇಕು ಅದ್ದರಿಂದಲೇ ತನ್ನ ಗರ್ವದಬಗ್ಗೆ ಚಿಂತಿಸಲು ಸಮಯವು ಇರದು.
 • ಸೂತ್ರ 330/331- ಶಿಷ್ಯನು ಆಚಾರ್ಯನ ನಿಗ್ರಹಕ್ಕೆ ಪಾತ್ರನಾದರು ಅದು ಶಿಷ್ಯನ ಹಿತಕ್ಕಾಗಿಯೇ; ಆದ್ದರಿಂದ ಶಿಷ್ಯನು ಆಚಾರ್ಯನು ಕೋಪಗೋಂಡದ್ದೇಕೇ ಎಂದು ಚಿಂತಿಸಬಾರದು.
 • ಸೂತ್ರ 333 ಶಿಷ್ಯನು ಆಚಾರ್ಯನ ದೇಹದ ಅವಶ್ಯಕತೆಗಳನ್ನು ನೋಡಿಕೋಳ್ಳುವುದು.
 • ಸೂತ್ರ 349- ಶಿಷ್ಯನು ಶರೀರವಾಸನದವರೆಗೂ (ಬದುಕಿರುವವರೆಗೂ) ಆಚಾರ್ಯನಲ್ಲಿ ಉಪಕಾರ ಸ್ಮೃತಿಯಿಂದಿರಬೇಕು; ಹಾಗು “ಆಚಾರ್ಯನು ನನ್ನ ಮನಸ್ಸನ್ನು ತಿದ್ದಿದನೆಂದು” ಹಾಗು “ಭಗವಂತನ ಆರಾಧನೆಗೆ ಪ್ರವರ್ತಿಸುವಂತೆ ಮನಸ್ಸನ್ನು ಶುದ್ಧ ಮಾಡಿದನು” ಎಂದು ಸದಾ ಚಿಂತಿಸಬೇಕು.
 • ಸೂತ್ರ 450- ಶಿಷ್ಯನು ಭಗವಂತನ ಐದೂ ರೂಪಗಳನ್ನು(ಪರ, ವ್ಯೂಹ, ವಿಭವ, ಅಂತರ್ಯಾಮಿ ಹಾಗು ಅರ್ಚಾವತಾರವನ್ನು – http://ponnadi.blogspot.in/2012/10/archavathara-anubhavam-parathvadhi.html) ತನ್ನ ಆಚಾರ್ಯನೆಂದೇ ಭಾವಿಸಿ ಶುಶ್ರೂಷೆ ಮಾಡಬೇಕು.
 • ಈ ರೀತಿಯಲ್ಲಿ ಶಿಷ್ಯನು ಆಚಾರ್ಯನ ಪಾದಪದ್ಮಗಳನ್ನೇ, ಸಂಸಾರದಲ್ಲು ಹಾಗು ಪರಮಪದದಲ್ಲಿಯೂ ಪರಮಪ್ರಾಪ್ಯವೆಂದು ಸದಾ ಚಿಂತಿಸಬೇಕು; ಇದ್ದಕ್ಕಿಂತಲು ಮಿಗಿಲಾದ ತತ್ತ್ವವು ಶಿಷ್ಯನಿಗಿಲ್ಲ.

ಶಿಷ್ಯನು ಆಚಾರ್ಯನ ಶರೀರರದ ಅವಶ್ಯಕತೆಗಳನ್ನು ತನ್ನದಂತೆಯೇ ಭಾವಿಸಿ ಅವನ್ನು ಪೂರಯಿಸಬೇಕು. ಶಿಷ್ಯನು ತನ್ನ ಧನವನ್ನು (ಅದು ಪೂರ್ವದಿಂದಲೇ ಆಚಾರ್ಯನದ್ದೇ ಎಂದು ಭಾವಿಸಬೇಕು) ಆಚಾರ್ಯನಿಗೆ ನೀಡುತಿದ್ದಾನೆ ಎಂದು ತಿಳಿದರೆ ಅದು ತನ್ನ ಜ್ಞಾನವನ್ನು ನಶಿಸುವುದು. ಆಚಾರ್ಯನ ಕರುಣೆಗೆ ಪಾತ್ರನಾಗುವುದೋಂದೆ ಸಾಲದು, ಅವನು ಪೂರ್ಣವಾಗಿ ಆಚಾರ್ಯನ ಅಧೀನದಲ್ಲಿದಲ್ಲೇ ಭಗವಂತನ ವಿಷಯದಲ್ಲಿ ಪೂರ್ಣ ಜ್ಞಾನ ಏರ್ಪಡುವುದು. ಆಚಾರ್ಯನು ಮಾಡಿದ ಉಪಕಾರಗಳಾನ್ನು ಸರ್ವದಾ ಚಿಂತಿಸಿದರೆ ತಾನು ಇನ್ನೂ ಅಜ್ಞನೆಂದೂ ಆಚಾರ್ಯನಿಂದ ಕಲಿಯಲು/ಗ್ರಹಿಸಲು ಇನ್ನು ತುಂಬಾ ಇದೆಯೆಂದು ಅರಿಯುವನು. ತನ್ನ ಆಚಾರ್ಯನ ಸೇವೆಯಲ್ಲಿ ಹಿಂದೆ ಉಪಲಭಿಸದ ಅವಕಾಶಗಳಬಗ್ಗೆ ಆಕುಲನಾಗಬೇಕು. ಶಿಷ್ಯನು ತನ್ನ ಆಚಾರ್ಯನ ಹರ್ಷ ಹಾಗು ನಿಗ್ರಹಗಳನ್ನು ಸಮವಾಗಿ ಸ್ವೀಕರಿಸಿ ಎರಡರಲ್ಲೂ ಉತ್ಕರ್ಷದಿಂದ ನಡೆದುಕೊಳ್ಳಬೆಕು. ಪ್ರಾಜ್ಞೆಯಾದ ಶ್ರೀಶಬರಿಯು ಸುಂದರತಮನಾದ ಶ್ರೀರಾಮನನ್ನು ಸ್ವಾಗತಿಸಿ, ಫಲಗಳನ್ನು ಅರ್ಪಿಸಿ, ಶ್ರೀರಾಮನ ಸೇವೆಗೂ ಮೇಲಾಗಿ ತನ್ನ ಆಚಾರ್ಯರನ್ನು (ಪರಮಪದದಲ್ಲಿ!) ಸೇವಿಸಲು ಹೋಗಲು ಅನುಮತಿಯನ್ನು ಪ್ರಾರ್ಥಿಸಿದಳು

ನಮ್ಮ ಜೀಯರ್ರೂ (ಮಣವಾಳ ಮಾಮುನಿಗಳೂ) ತಮ್ಮ ಆಚಾರ್ಯ ನಿಷ್ಠೆಯನ್ನು ಹಾಗು ಆಚಾರ್ಯ ನಿಷ್ಠೆಯ ವೈಶಿಷ್ಠ್ಯವನ್ನು ಉಪದೇಶ ರತ್ತಿನ ಮಾಲೈ, ಯತಿರಾಜ ವಿಂಶತಿ, ಆರ್ತಿ ಪ್ರಬಂಧ ಮೋದಲಾದ ಗ್ರಂಥಗಳಲ್ಲಿ ಪ್ರಕಾಶಿಸಿದ್ದಾರೆ.

ಉಪದೇಶ ರತ್ತಿನ ಮಾಲೈ 61
ಜ್ಞಾನಮ್ ಅನುಟ್ಟಾನಮ್ ಇವೈ ನನ್ಱಾಗವೇ ಉಡೈಯನ್ ಆನ
ಗುರುವೈ ಅಡೈಂದಕ್ಕಾಲ್
ಮಾನಿಲತ್ತೀರ್! ತೇನಾರ್ ಕಮಲತ್ ತಿರುಮಾಮಗಳ್ ಕೊೞುನನ್
ತಾನೇ ವೈಕುನ್ದಮ್ ತರುಮ್

ಲೋಕದಲ್ಲಿ ವಾಸಿಸುವವರೇ! ಜ್ಞಾನ ಅನುಷ್ಠಾನಗಲ್ಲಿ ಸುಸ್ಥಿತನಾದ ಆಚಾರ್ಯನಲ್ಲಿ ಆಶ್ರಯಿಸಿದ್ದಲ್ಲಿ, ಶ್ರೀಮನ್ನಾರಾಯಣನು ತಾನೆ ಅಂತಹ ಶಿಷ್ಯರಿಗೆ ಪರಮಪದದಲ್ಲಿ ದಿವ್ಯ ಕೈಂಕರ್ಯವನ್ನು ಸುಲಭವಾಗಿ ಅನುಗ್ರಹಿಸುವನು.

ಉಪದೇಶ ರತ್ತಿನ ಮಾಲೈ 62
ಉಯ್ಯ ನಿನೈವುಂಡಾಗಿಲ್ ಉಮ್ ಗುರುಕ್ಕಳ್ ತಮ್ ಪದತ್ತೇ ವೈಯುಮ್
ಅಂಬು ತನ್ನೈ ಇಂದ ಮಾನಿಲತ್ತೀರ್!
ಮೆಯ್ ಉರೈಕ್ಕೇನ್ ಪೈಯರವಿಲ್ ಮಾಯನ್ ಪರಮಪದಮ್ ಉಂಗ್ಕಳುಕ್ಕಾಮ್
ಕೈಯಿಲನ್ಗು ನೆಲ್ಲಿಕ್ ಕನಿ

ಲೋಕದವರೇ! ಉನ್ನತಿಗೇರಬೇಕಾದರೆ, ನಿಮ್ಮ ಆಚಾರ್ಯನಲ್ಲಿ ಪೂರ್ಣ ಭಕ್ತಿಯನ್ನು ವರ್ಧಿಸಿ. (ಶೇಷ ಶಯನನಾದ) ಭಗವಂತನ ವಾಸಸ್ಥಾನವಾದ ಪರಮಪದವು ಹಸ್ತದಲ್ಲಿರುವ ಫಲದಂತೆ (ಹಣ್ಣಿನಂತೆ) ಸುಲಭವಾಗಿ ಪ್ರಾಪ್ಯವಾಗಿರುವುದು.

ಉಪದೇಶ ರತ್ತಿನ ಮಾಲೈ 64
ತನ್ ಆರಿಯನುಕ್ಕುತ್ ತಾನ್ ಅಡಿಮೈ ಸೆಯ್ವದು
ಅವನ್ ಇನ್ನಾಡು ತನ್ನಿಲ್ ಇರುಕ್ಕುಮ್ ನಾಳ್
ಅನ್ನೇರ್ ಅಱಿನ್ದುಮ್ ಅದಿಲ್ ಆಸೈ ಇನ್ಱಿ
ಆಚಾರಿಯನೈಪ್ ಪಿರಿನ್ದಿರುಪ್ಪಾರ್ ಆರ್ ಮನಮೇ! ಪೇಸು

ತತ್ತ್ವಜ್ಞಾನವನ್ನು ಅಧ್ಯಾಯಿಸುವಾಗ ಶಿಷ್ಯನು ಆಚಾರ್ಯನನ್ನು ಸೇವಿಸಬೇಕು. ತನ್ನ ಆಚಾರ್ಯದಿಂದ ವಿಶ್ಲೇಷಿಸುವುದನ್ನು ಚಿಂತಿಸಲೇಬಾರದು.

ಉಪದೇಶ ರತ್ತಿನ ಮಾಲೈ 65
ಆಚಾರಿಯನ್ ಸಿಚ್ಚನ್ ಆರುಯಿರೈಪ್ ಪೇಣುಮವನ್
ತೇಸಾರುಮ್ ಸಿಚ್ಚನವನ್ ಸೀರ್ ವಡಿವೈ ಆಸೈಯುಡನ್ ನೋಕ್ಕುಮವನ್ ಎನ್ನುಮ್
ನುಣ್ಣಱಿವೈಕ್ ಕೇಟ್ಟು ವೈತ್ತುಮ್
ಆರ್ಕ್ಕುಮ್ ಅನ್ನೇರ್ ನಿಱ್ಕೈ ಅರಿದಾಮ್

ಆಚಾರ್ಯನು ಶಿಷ್ಯನ ಆತ್ಮಹಿತದ ವಿಷಯದಲ್ಲಿ ಚಿಂತಿಸಬೇಕು (ಅದು ಲಕ್ಷ್ಯವಾಗಬೇಕು). ಶಿಷ್ಯನು ಆಚಾರ್ಯನ ದಿವ್ಯ ವಿಗ್ರಹದ (ಶರೀರದ) ವಿಷಯದಲ್ಲಿ ಚಿಂತಿಸಬೇಕು(ಅದು ಲಕ್ಷ್ಯವಾಗ ಬೇಕು). ಈ ಗಾ ಅರ್ಥವನ್ನು ತಿಳಿದರೂ ಕೂಡ ಅನುಷ್ಠಿಸುವುದು ಬಹಳಾ ಕಷ್ಟ.

ಉಪದೇಶ ರತ್ತಿನ ಮಾಲೈ 66
ಪಿಂಬೞಗರಾಮ್ ಪೆರುಮಾಳ್ ಸೀಯರ್
ಪೆರುನಂಹಿವತ್ತಿಲ್ ಅಂಬದುವುಮಱ್ಱು
ಮಿಕ್ಕ ಆಸೈಯಿನಾಲ್ ನಂಪಿಳ್ಳೈಕ್ಕಾನ ಅಡಿಮೈಗಳ್ ಸೆಯ್
ಅನ್ನಿಲೈಯೈ ನನ್ನೆಂಜ್ಚೇ! ಊನಮಱ ಎಪ್ಪೊೞುದುಮ್ ಓರ್

ಓ ಪ್ರಿಯವಾದ ಮನಸ್ಸೇ! ಆಚಾರ್ಯರಾದ ನಂಪಿಳ್ಳೈಯಿನ ಸೇವೆಯಲ್ಲಿ ನಿರತರಾದ ಪಿಂಬೞಗರಾಮ್ ಪೆರುಮಾಳ್ ಜೀಯರ್ ಪರಮಪದಕ್ಕೆ ಹೋಗುವುದೂ ಇಚ್ಛಿಸಲಿಲ್ಲ. ಇಂತಹ ನಿಷ್ಠೆ ಹಾಗು ನಿಷ್ಠಾವಾಂತರಾದ ಶಿಷ್ಯರನ್ನು ಸದಾ ಧ್ಯಾನಿಸು.

ಅವರ ಯತಿರಜ ವಿಂಶತಿಯಲ್ಲಿ ಮಾಮುನಿಗಳು “ರಾಮಾನುಜಮ್ ಯತಿಪತಿಮ್ ಪ್ರಣಮಾಮಿ ಮೂರ್ದ್ನಾ” (ಶ್ರೀರಾಮಾನುಜರ ಚರಣಾಂಬೋಜನ್ನು (ಶಿರಸಾ) ನಮಸ್ಕರಿಸುತಿದ್ದೇನೆ) ಎಂದು ಪ್ರಾರಂಭಿಸಿ, “ತಸ್ಮಾತ್ ಅನನ್ಯ ಸರಣೋ ಭವತಿ ಇತಿ ಮತ್ವಾ” (ಶ್ರೀರಾಮಾನುಜರು ಬಿಟ್ಟು ಇನ್ನೋಂದು ಶರಣಿಲ್ಲ ) ಎಂದು ಮುಗಿಸಿದರು. ಇಪತ್ತೂ ಶ್ಲೋಕಗಳಲ್ಲಿ ಶ್ರೀರಾಮಾನುಜರ ಕರುಣೆಗಾಗಿ ಪ್ರಾರ್ಥಿಸಿದ್ದಾರೆ ಹಾಗು ತಮ್ಮ ಆಚಾರ್ಯರಾದ ತಿರುವಾಯ್ಮೊೞಿ ಪಿಳ್ಳೈಯಿನ ಆಜ್ಞೆಯಂತೇ ಶ್ರೀರಾಮಾನುಜರ ಸೇವಿಸಲು ತ್ವರಿಸಿದ್ದಾರೆ (ಶ್ರೀರಾಮಾನುಜರ ವಿಷಯದಲ್ಲಿದ ಮಾಮುನಿಗಳ ವಿಶೇಷ ಅಭಿಬಾನವನ್ನು (ಭಕ್ತಿಯನ್ನು) ನೋಡಿದ ತಿರುವಾಯ್ಮೋೞಿ ಪಿಳ್ಳೈಯವರಿಂದ ಅವರಿಗೆ ಭವಿಷ್ಯದಾಚಾರ್ಯ ಸನ್ನಿಧಿಯಲ್ಲಿ ದಿನನಿತ್ಯದ ಕೈಂಕರ್ಯದ ಭಾಗ್ಯ ಲಭಿಸಿತು)

ಕೊನೆಯಲ್ಲಿ ಆರ್ತಿ ಪ್ರಬಂದದಲ್ಲಿ 55, ಮಾಮುನಿಗಳು ತಮ್ಮ ಸ್ವರೂಪವನ್ನು ಕಂಡು ಹರ್ಷಿಸುತ್ತಾರೆ.

ತೆನ್ನರಂಗರ್ ಸೀರರುಳುಕ್ಕು ಇಲಕ್ಕಾಗಪ್ ಪೆಱ್ಱೋಮ್
ತಿರುವರಂಗಮ್ ತಿರುಪ್ಪತಿಯೇ ಇರುಪ್ಪಾಗಪ್ ಪೆಱ್ಱೋಮ್
ಮನ್ನಿಯ ಸೀರ್ ಮಾಱನ್ ಕಲೈ ಉಣವಾಗಪ್ ಪೆಱ್ಱೋಮ್
ಮದುರಕವಿ ಸೊಲ್ಪಡಿಯೇ ನಿಲೈಯಾಗಪ್ ಪೆಱ್ಱೋಮ್
ಮುನ್ನವರಾಮ್ ನಮ್ ಕುರವರ್ ಮೊೞಿಗಳ್ ಉಳ್ಳಪ್ ಪೆಱ್ಱೋಮ್
ಮುೞುತುಮ್ ನಮಕ್ಕವೈ ಪೊೞುತು ಪೋಕ್ಕಾಗಪ್ ಪೆಱ್ಱೋಮ್
ಪಿನ್ನೈ ಒನ್ಱು ತನಿಲ್ ನೆಂಜು ಪೇರಾಮಲ್ ಪೆಱ್ಱೋಮ್
ಪಿಱರ್ ಮಿನುಕ್ಕಮ್ ಪೊಱಾಮೈ ಇಲ್ಲಾಪ್ ಪೆರುಮೈಯುಮ್ ಪೆಱ್ಱೋಮೇ

ಶ್ರೀರಂಗನಾಥನ ಪೂರ್ಣಾನುಗ್ರಹವು ನನಗೆ ಲಭಿಸಿದೆ ( ಒಂದು ಪೂರ್ಣವರ್ಷದ ಅವದಿ ಈಡು ಕಾಲಕ್ಷೇಪವನ್ನು ಮಾಮುನಿಗಳಿಂದ ಕೇಳಿ ತದನಂತರ ತಮ್ಮ ಆಚಾರ್ಯನೆಂದೇ ಅಂಗೀಕರಿಸಿ “ಶ್ರೀಶೈಲೇಶ ದಯಾಪಾತ್ರಮ್” ತನಿಯನನ್ನು ಸಮರ್ಪಿಸಿದ ನಂಪೆರುಮಾಳಿಂದ ಗೌರವಿಸಲ್ಪಟ್ಟರು )
ಶ್ರೀರಂಗದಲ್ಲೇ ವಾಸಿಸಲು ನಂಪೆರುಮಾಳ್ (ನನಗೆ) ಆಜ್ಞಾಪಿಸಿದ್ದಾರೆ
ನಮ್ಮಾೞ್ವಾರಿನ ಪಾಸುರಗಳಾನ್ನೇ ಧಾರಕವಾಗಿ ಅನುಭವಿಸಲು ಅನುಗ್ರಹಿಸಲ್ಪಟ್ಟಿದ್ದೇನೆ
ಮಧುರಕವಿ ಆೞ್ವಾರಿನಂತೆಯೆ ಆಚಾರ್ಯ ನಿಷ್ಠೆಯ ಹಾದಿಯಲ್ಲಿ ನಡೆಯುವ ಅನುಗ್ರಹವು ನನಗೆ ಲಭಿಸಿದೆ.
ಆೞ್ವಾರ್/ ಪೂರ್ವಾಚಾರ್ಯರ ಶ್ರೀಸೂಕ್ತಿಗಳನ್ನೇ ಧ್ಯಾನಿಸುವ ಅನುಗ್ರಹವು ನನಗೆ ಲಭಿಸಿದೆ.
ಕಾಲವನ್ನು ಪೂರ್ಣವಾಗಿ ಅವರ ಗ್ರಂಥಗಳಲ್ಲಿಯೇ ಕಲಿಯುವ ಅನುಗ್ರಹವು ನನಗೆ ಲಭಿಸಿದೆ.
ಆೞ್ವಾರ್/ ಪೂರ್ವಾಚಾರ್ಯರ ಶ್ರೀಸೂಕ್ತಿಗಳಲ್ಲದರಲ್ಲಿ ಮನಸ್ಸು ನಿಲ್ಲದಂತಿರುವ ಅನುಗ್ರಹವು ನನಗೆ ಲಭಿಸಿದೆ.
ಇತರ ಶ್ರೀವೈಷ್ಣವರ ಉತ್ಕರ್ಷವನ್ನು ಕಂಡು ಮಾತ್ಸರ್ಯಪಡದಂತಿರುವ ಅನುಗ್ರಹವು ನನಗೆ ಲಭಿಸಿದೆ.

ಅನುವಾದಕರ ಟಿಪ್ಪಣಿ: ಇಲ್ಲಿಂದ ಆರಂಭಿಸಿ ನಮ್ಮ ಪೂರ್ವಾಚಾರ್ಯರು ತಮ್ಮ ಮೊದಲ 3 ಲೇಖನಗಳಲ್ಲಿ ವಿವರಿಸಿದ ಆಚಾರ್ಯ ನಿಷ್ಠೆಯನ್ನು ಪ್ರತ್ಯಕ್ಷವಾಗಿ ನಿರೂಪಿಸಿದ ಐತೀಹ್ಯಗಳಾನ್ನು ನೋಡೋಣ.

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಮೂಲ : http://ponnadi.blogspot.com/2013/06/anthimopaya-nishtai-3.html

ಆರ್ಕೈವ್ ಮಾಡಲಾಗಿದೆ – https://srivaishnavagranthamskannada.wordpress.com

ಪ್ರಮೇಯಮ್ (ಗುರಿ) – http://koyil.org
ಪ್ರಮಾಣಮ್ (ಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಬೋಧಕರು) – http://guruparamparai.wordpress.com
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – http://pillai.koyil.org

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s