ವಿರೋಧಿ ಪರಿಹಾರನ್ಗಳ್ – 1 ಬುನಾದಿ

ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮ

ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ . ವೇ ರಾಮಾನುಜಮ್  ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಇಂಗ್ಲಿಷ್ ಅನುವಾದವನ್ನು ಪಾಲಿಸಿ ಕನ್ನಡ ಅನುವಾದವನ್ನು  ವೀಕ್ಷಿಸುತ್ತಿದ್ದೇವೆ.  ಇಡೀ ಸರಣಿಯನ್ನು https://srivaishnavagranthamskannada.wordpress.com/virodhi-pariharangal/ ನಲ್ಲಿ ವೀಕ್ಷಿಸಬಹುದು.

  1. ಸ್ವರ್ಗತ್ತುಕ್ಕು ಸಂಸಾರಂ ವಿರೋಧಿ (ஸ்வர்க்கத்துக்கு ஸம்ஸாரம் விரோதி) -ಸಂಸಾರಂ ( ಇಲ್ಲಿ  ಇದು ಪ್ರಸ್ತುತ ದೇಹಕ್ಕೆ ಸಂಪರ್ಕ ಹೊಂದಿದ ) ಸ್ವರ್ಗ ಸುಖಗಳಿಗೆ  ಅಡ್ಡಿಯಾಗಿದೆ .

ಸ್ವರ್ಗ ಎಂದರೆ ಸಾಮಾನ್ಯವಾಗಿ ದೇವತೆಗಳ ಸ್ವರ್ಗೀಯ ಗ್ರಹಗಳು . ಇಂದ್ರನ ಗ್ರಹವನ್ನು ಸ್ವರ್ಗ ಎಂದು ಕರೆಯಲಾಗಿದೆ. ಈ ಭೂಲೋಕದಲ್ಲಿ ಇಲ್ಲದಿರುವಂತ ಸಂತೋಷಗಳು ಸ್ವರ್ಗದಲ್ಲಿ ತುಂಬಿವೆ. ಆದರೆ ಸ್ವರ್ಗದ ಮಾರ್ಗ ಪಡೆಯಲು, ಅನೇಕ ತಪಸ್ಸುಗಳನ್ನು ಮಾಡಬೇಕು. ಸಂಸಾರಂ, ಈ ಸಂದರ್ಭದಲ್ಲಿ ಭೂಲೋಕದಲ್ಲಿ ಕರ್ಮ ಫಲದಿಂದ ಇರುವ ಬದುಕು. ಇವಗಳನ್ನು ಸಾಮಾನ್ಯವಾಗಿ ತಪಸ್ಸಿಗೆ ಅಡ್ಡಿ ಎಂದು ಭಾವಿಸಲಾಗಿದೆ. ಸ್ವಂತ ದೇಹ, ದೈಹಿಕ ಸಂಬಂಧಿಗಳು (ಹೆಂಡತಿ, ಮಕ್ಕಳು, ಇತ್ಯಾದಿ), ಆಸ್ತಿಗಳು (ಭೂಮಿ, ಸಂಪತ್ತು, ಇತ್ಯಾದಿ) ತಪಸ್ಸಿಗೆ ಅಡಚಣೆಗಳು ಮತ್ತು ಆದ್ದರಿಂದ  ಅವುಗಳನ್ನು  ತ್ಯಜಿಸಬೇಕು.

ಐಹಿಕ ಸಂತೋಷಗಳು- ಸ್ವರ್ಗಕ್ಕೆ ಅಡೆತಡೆ

ಅನುವಾದಕರ ಟಿಪ್ಪಣಿ- “ಜ್ಯೋತಿಷ್ಟೋಮೇನ ಸ್ವರ್ಗ ಕಾಮೋ ಯಜೇತ “ ಸ್ವರ್ಗವನ್ನು ಅಪೇಕ್ಷಿಸುವವರು ಜ್ಯೋತಿಷ್ಟೋಮವನ್ನು ಮಾಡಬೇಕಾದ ಮುಖ್ಯಾಂಶಗಳನ್ನು ನೆನಪಿಸಿಕೊಳ್ಳಬಹುದು – ಇದು ಅತ್ಯಂತ ಕಠಿಣತೆಯ ಅಗತ್ಯವಿರುವ ಒಂದು  ರೀತಿಯ ಹೋಮ/ಯಾಗ

2. ಸ್ವರ್ಗೇಚ್ಚುವುಕ್ಕು ಐಹಿಕ ಸುಕಂ ವಿರೋಧಿ (ஸ்வர்க்கேச்சுவுக்கு ஐஹிக ஸுகம் விரோதி) ಪರಲೋಕದ ಸುಖಗಳನ್ನು ಬಯಸುವವರಿಗೆ ಈ ಭೂಮಂಡಲದಲ್ಲಿ ಸುಖಭೋಗಗಳು ಅಡ್ಡಿಯಾಗುತ್ತವೆ.

ಹಿಂದಿನ ಬಿಂದುವನ್ನು ಹೋಲುತ್ತದೆ. ಪರಲೋಕದಲ್ಲಿ ಸುಖಭೋಗಗಳನ್ನು ಅನುಭವಿಸುವ ಇಚ್ಛೆಯುಳ್ಳವನಿಗೆ ಈ ಲೋಕದಲ್ಲಿನ ವ್ಯವಹಾರ/ಆನಂದಗಳು ಅಡ್ಡಿಗಳಾಗಿವೆ. ಐಹಿಕ ಭೋಗಗಳ ಕಡೆಗೆ ಹೆಚ್ಚು ಬಾಂಧವ್ಯವಿದ್ದರೆ, ಅದು ಸ್ವರ್ಗೀಯ ವಾಸಸ್ಥಾನಗಳನ್ನು ಅನುಸರಿಸುವುದನ್ನು ಮಿತಿಗೊಳಿಸುತ್ತದೆ.

3. ಆತ್ಮಾನುಭವತ್ತುಕ್ಕು ಸ್ವರ್ಗಾನುಭವಂ ವಿರೋಧಿ (ஆத்மானுபவத்துக்கு ஸ்வர்க்கானுபவம் விரோதி )  ಒಬ್ಬರ ಸ್ವಂತ ಆತ್ಮವನ್ನು ಆನಂದಿಸಲು ಸ್ವರ್ಗೀಯ ಆನಂದವು ಒಂದು ಅಡಚಣೆಯಾಗಿದೆ.

ಸ್ವರ್ಗಾನುಭವ – ಆತ್ಮಾನುಭವಕ್ಕೆ ಅಡಚಣೆ

ಆತ್ಮಾನುಭವ ಕೈವಲ್ಯಂ ಎಂಬ ಒಂದು ಬಗೆಯ ಮೋಕ್ಷ. ಕೈವಲ್ಯಂ ಎಂದರೆ ವಿರಜಾ ನದಿಯನ್ನು ದಾಟಿ ಶ್ರೀವೈಕುಂಠವನ್ನು ತಲುಪುವುದು , ಭೌತಿಕ ದೇಹದಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದು ಮತ್ತು ಆತ್ಮವನ್ನು ಆನಂದಿಸುವುದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು (ಜೀವಾತ್ಮ) . ಸಂಸಾರದಲ್ಲಿ (ಲೀಲಾ ವಿಭೂತಿ -ಭೌತಿಕ ಲೋಕ  ) ಮರುಜನ್ಮ ಇಲ್ಲದಿರುವುದರಿಂದ ಇದನ್ನು ಮೋಕ್ಷದ ಒಂದು ಬಗೆ ಎಂದು ಭಾವಿಸಲಾಗಿದೆ. ಸ್ವರ್ಗದಲ್ಲಿನ ಆನಂದವು ಪುಣ್ಯಗಳಿರುವವರೆಗೆ ಮಾತ್ರ ಇರುತ್ತದೆ (ಪೂಜ್ಯ ಕರ್ಮ). “ಕ್ಷೀಣೇ  ಪುಣ್ಯೇ ಮರ್ತ್ಯಲೋಕಂ ವಿಶಂತಿ “ ಎಂದು ವಿವರಿಸಿದ  ಹಾಗೆ ಸದ್ಗುಣಗಳು ದಣಿದ ನಂತರ, ಸಂಸಾರದಲ್ಲಿ ಕೆಟ್ಟ ಪ್ರಯಾಣವನ್ನು ಮುಂದುವರಿಸಲು ಒಬ್ಬರು ಐಹಿಕ ಗ್ರಹಗಳಿಗೆ ಹಿಂತಿರುಗಬೇಕು.

4. ಆತ್ಮಾನುಭಾವಕಾಮನುಕ್ಕು ಸ್ವರ್ಗಮ್ ವಿರೋಧಿ ( ஆத்மானுபவகாமனுக்கு ஸ்வர்க்கம் விரோதி) –  ತನ್ನನ್ನು ತಾನು ಆನಂದಿಸಲು ಬಯಸುವವನಿಗೆ ಸ್ವರ್ಗೀಯ ವಾಸಸ್ಥಾನಗಳ ಬಯಕೆಯು ಒಂದು ಅಡಚಣೆಯಾಗಿದೆ.

ದಯವಿಟ್ಟು ಹಿಂದಿನ ಅಂಶದ ವಿವರಣೆಯನ್ನು ನೋಡಿ.

5. ಭಗವತ್ ಅನುಭವತ್ತುಕ್ಕು ಆತ್ಮಾನುಭವಂ ವಿರೋಧಿ ( பகவத் அனுபவத்துக்கு ஆத்மானுபவம் விரோதி) – ಸ್ವಂತ ಆತ್ಮವನ್ನು ಆನಂದಿಸುವುದು ಭಗವಂತನನ್ನು ಆನಂದಿಸಲು ಅಡ್ಡಿಯಾಗಿದೆ

ತನ್ನನ್ನು ತಾನು ಆನಂದಿಸುವುದು- ಭಗವತ್ ಅನುಭವಕ್ಕೆ ಅಡಚಣೆ

ಭಗವತ್ ಅನುಭವ ಎಂದರೆ ಭಗವಾನ್ ಅನ್ನು ಅವರ ದಿವ್ಯ ಗುಣಗಳು, ಸುಂದರ ರೂಪಗಳು , ಉಭಯ ವಿಭೂತಿ ಐಶ್ವರ್ಯ ( ಎರಡೂ  ಲೋಕಗಳನ್ನು ನಿಯಂತ್ರಿಸುವ ಶಕ್ತಿ ) -ನಿತ್ಯ ವಿಭೂತಿ ( ಆದ್ಯಾತ್ಮಿಕ ಲೋಕ  ) ಮತ್ತು ಲೀಲಾ  ವಿಭೂತಿ ( ಭೌತಿಕ ಲೋಕ  ) ಇತ್ಯಾದಿಗಳನ್ನು ಆನಂದಿಸುವುದು. ಇಂತಹ ಸಂತೋಷವುಳ್ಳ ಅನುಭವಗಳು ಅವನ ಕಡೆಗೆ  ಪ್ರೀತಿಗೆ(ಭಕ್ತಿ, ಪ್ರೀತಿ, ಬಾಂಧವ್ಯ) ಕಾರಣವಾಗುತ್ತದೆ. ಸಂತೋಷ ಅನುಭವದಿಂದ ಬಂದ ಅಂತಹ ಬಾಂದವ್ಯ  ಭಗವಾನ್ ಕಡೆಗೆ ಕೈಂಕರ್ಯಕ್ಕೆ (ಸೇವೆ) ಕಾರಣವಾಗುತ್ತದೆ. ಅಂತಹ ಪ್ರೀತಿಯ ಸೇವೆಯು ಮತ್ತೆ ಶಾಶ್ವತ ಆನಂದಕ್ಕೆ ಕಾರಣವಾಗುತ್ತದೆ. ಪರಮಪದದಲ್ಲಿ (ಶ್ರೀ ವೈಕುಂಠಂ) ಅಂತಹ ಆನಂದವನ್ನು ಅನಿಯಮಿತ ಆನಂದದಾಯಕ ಮೋಕ್ಷಂ ಎಂದು ಕರೆಯಲಾಗುತ್ತದೆ. ಒಬ್ಬರ ಸ್ವಂತ ಆತ್ಮವನ್ನು ಆನಂದಿಸುವುದು ಆನಂದದಾಯಕವಾಗಿದ್ದರೂ, ಭಗವತ್ ಅನುಭವಕ್ಕೆ ಹೋಲಿಸಿದರೆ, ಇದು ತುಂಬಾ ಅತ್ಯಲ್ಪವಾಗಿದೆ. ಹೀಗಾಗಿ, ಭಗವತ್ ಅನುಭವಕ್ಕೆ ತನ್ನನ್ನು ಆನಂದಿಸುವ ಬಯಕೆ ಅಡ್ಡಿಯಾಗಿದೆ. ಭಾಷಾಂತರಕಾರರ ಟಿಪ್ಪಣಿ: ಜೀವಾತ್ಮವು ಸ್ವಾಭಾವಿಕವಾಗಿ ಜ್ಞಾನಮಯಂ (ಜ್ಞಾನದಿಂದ ತುಂಬಿದೆ) ಮತ್ತು ಆನಂದಮಯಮ್ (ಆನಂದದಿಂದ ತುಂಬಿದೆ ) ಆಗಿರುತ್ತದೆ . ಆದ್ದರಿಂದ, ಆತ್ಮವನ್ನು  ಆನಂದಿಸುವುದು ಆಸಕ್ತಿದಾಯಕ ನಿರೀಕ್ಷೆಯಂತೆ ಕಾಣಿಸಬಹುದು, ಆದರೂ ಆತ್ಮವು  ಸ್ವತಃ ಅಣು  ಸ್ವರೂಪಂ  (ಪರಮಾಣು ಸ್ವಭಾವ) ಆಗಿರುವುದರಿಂದ ಇದು ಬಹಳ ಅತ್ಯಲ್ಪವಾಗಿದೆ. ಆದರೆ ಭಗವಾನ್ ವಿಭು (ಶ್ರೇಷ್ಠ ಮತ್ತು ಎಲ್ಲಾ ವ್ಯಾಪಿಸಿರುವ) ಮತ್ತು ಅವನ ಜ್ಞಾನಮ್ ಮತ್ತು ಆನಂದವನ್ನು  ಆತ್ಮದ ಅತ್ಯಂತ ಸೀಮಿತವಾದ ಜ್ಞಾನಮ್ ಮತ್ತು ಆನಂದಕ್ಕೆ ಹೋಲಿಸಿದರೆ ಅಪರಿಮಿತವಾಗಿದೆ.

6. ಭಗವತ್ ಅನುಭವ ಕಾಮನುಕ್ಕು ಆತ್ಮಾನುಭವ ಇಚ್ಛೈ ವಿರೋಧಿ ( பகவத் அனுபவ காமனுக்கு ஆத்மானுபவ இச்சை விரோதி) – ಭಗವತ್ ಅನುಭವವನ್ನು ಬಯಸುವವರಿಗೆ, ತನ್ನನ್ನು ತಾನು ಆನಂದಿಸುವುದು ಅಡಚಣೆಯಾಗಿದೆ.

ದಯವಿಟ್ಟು ಹಿಂದಿನ ಅಂಶದ ವಿವರಣೆಯನ್ನು ನೋಡಿ

7. ಗುಣನಿಷ್ಟನುಕ್ಕು ಗುಣಿ ವಿರೋಧಿ ( குணநிஷ்டனுக்கு குணி விரோதி)- ಭಗವಂತನ ಮಂಗಳಕರ ಗುಣಗಳ ಮೇಲೆ ಕೇಂದ್ರೀಕರಿಸಿದವರಿಗೆ, ಭಗವತ್ ಸ್ವರೂಪವು ಅಡಚಣೆಯಾಗಿದೆ.

ಭಗವಂತನ ಸ್ವರೂಪಂ ಅನುಭವಿಸುವುದು -, ಭಗವತ್ ಕಲ್ಯಾಣ ಗುಣಗಳನ್ನು ಅನುಭವಿಸಲು ಅಡಚಣೆಯಾಗಿದೆ.

ಗುಣನಿಷ್ಟನ್ – “ ಸದಾ ಪರಗುಣಾವಿಷ್ಟ “, ಎಂಪೆರುಮಾನಿನ ಮಂಗಳಕರ ಗುಣಗಳನ್ನು ನಿರಂತರವಾಗಿ ಆನಂದಿಸುತ್ತಿರುವವನು.ಜೀವಾತ್ಮ ಪರಬ್ರಹ್ಮವನ್ನು ಕಲ್ಯಾಣ ಗುಣಗಳೊಂದಿಗೆ  ಆನಂದಿಸುವಂತೆ ಪ್ರಮಾಣಗಳು  ”ಶೋಶ್ನುತ್ತೇ “ ಎಂಬ ಶ್ರುತಿ ನಮಗೆ ತಿಳಿಸುವುದು. ಭಗವಂತನ ದಿವ್ಯ ರೂಪಗಳನ್ನು ಅನುಭವಿಸುವುದೂ ಇದರಲ್ಲಿ ಸೇರಿದೆ. “ರಸೋವೈ  ಸ:” ಎಂದರೆ ಅವನ ಮಾಧುರ್ಯವನ್ನು ಪ್ರತಿನಿಧಿಸುತ್ತವೆ. ಇದನ್ನು ಅನುಭವಿಸುವ ಮೂಲಕ ಮುಕ್ತಾತ್ಮ (ವಿಮೋಚನೆಗೊಂಡ ಆತ್ಮ) ಆನಂದವನ್ನು ಪಡೆಯುತ್ತದೆ. ಎಂಪೆರುಮಾನ್ ತನ್ನ ದಿವ್ಯ ಲೀಲೆಗಳ ಮೂಲಕ ತನ್ನ ಕಲ್ಯಾಣ ಗುಣಗಳನ್ನು ತೋರಿಸುವರು. ತಿರುವೃತ್ತಮ್ 98ನೆ ಪಾಸುರಂ” ನೆಂಜಾಲ್ ನಿನೈಪ್ಪರಿತಾಲ್ – ವೆಣ್ಣೈಯುಣೆನ್ನುಂ ಈರಚ್ ಚೊಲ್ಲೇ “(நெஞ்சால் நினைப்பரிதால் – வெண்ணெயூணென்னும் ஈரச் சொல்லே), ತಿರುವಾಯ್ಮೊಳಿ 1.3.1 ಪಾಸುರಂ “ಎತ್ತಿಱಂ ! ಉರಲಿನೋಡು ಇಣೈಂದಿರುಂದೇಂಗಿಯ ಎಳಿವೇ  “ ( எத்திறம்! உரலினோடு இணைந்திருந்தேங்கிய எளிவே) ಇತ್ಯಾದಿ ಮೂಲಕ ನಮ್ಮಾಳ್ವಾರರು ಭಗವಾನಿನ ಗುಣಗಳನ್ನು ಅನುಭವಿಸುವುದನ್ನು ಅರ್ಥ ಮಾಡಿಕೊಳ್ಳಬಹುದು . ಇದನ್ನು ಪೆರಿಯ ತಿರುವಂದಾದಿ 86 “ ಚೀರ್ ಕಲಂದ ಚೊಲ್ “( சீர் கலந்த சொல் – ಭಗವಾನಿನ ಕಲ್ಯಾಣ ಗುಣಗಳಿಂದ ಮುಳುಗಿದ ಪದಗಳು ) ನಲ್ಲಿ  ವಿವರಿಸಲಾಗಿದೆ. ಗುಣಿ ಎಂದರೆ ಭಗವಾನಿನ ದಿವ್ಯ ಸ್ವರೂಪಂ  ( ಅದು ಗುಣಂ ಇರುವವರಿಗ್ರ ಗುಣಿ ಎಂದು ಹೇಳಲಾಗಿದೆ ). ಮಹಾಯೋಗಿಗಳಿಗೂ ಸಹ  ಈ ಭಗವತ್ ಸ್ವರೂಪಂ ಅರ್ಥ ಮಾಡಿಕೊಳ್ಳಲು ಕಷ್ಟ. ಹೀಗೆ ಭಗವತ್ ಸ್ವರೂಪದ ಮೇಲೆ ಕೇಂದ್ರೀಕರಿಸುವುದು ಭಗವತ್ ಗುಣಗಳನ್ನು ಅನುಭವಿಸಲು ಮತ್ತು ಆನಂದಿಸಲು ಅಡ್ಡಿಯಾಗುತ್ತದೆ. ಇದು ಮುಂದಿನ ಹಂತಕ್ಕೆ ಹೋಲುತ್ತದೆ.

8. ಕೈಂಕರ್ಯನಿಷ್ಟನುಕ್ಕು ಭಗವತ್ ಸೌಂದರ್ಯಂ ವಿರೋಧಿ ( கைங்கர்யநிஷ்டனுக்கு பகவத் ஸௌந்தர்யம் விரோதி) ಎಂಪೆರುಮಾನಿನ  ಸೇವೆಯತ್ತ ಗಮನಹರಿಸುವವರಿಗೆ, ಎಂಪೆರುಮಾನಿನ ಸೌಂದರ್ಯವು ಅಡಚಣೆಯಾಗಿದೆ.

ಎಂಪೆರುಮಾನಿನ  ಸೇವೆಯತ್ತ ಗಮನಹರಿಸುವುದು – ಸೇವೆ ಮಾಡುವುದಕ್ಕೆ ಅಡಚಣೆ ( ಇಳಯ ಪೆರುಮಾಳ್ ಸದಾ ಪೆರುಮಾಳಿಗೆ ಸೇವೆ ಸಲ್ಲಿಸುತ್ತಿದರು  )

ಕೈಂಕರ್ಯನಿಷ್ಟರ್ – ಇಳಯಪೆರುಮಾಳ್ (ಲಕ್ಷ್ಮಣ ) ಹೇಳಿದಂತೆ “ಅಹಂ ಸರ್ವಂ ಕರಿಷ್ಯಾಮಿ “ ( அஹம் ஸர்வம் கரிஷ்யாமி – ನಾನು ನಿಮಗೆ ಎಲ್ಲವನ್ನೂ ಮಾಡುವೆನು ) ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಎಲ್ಲಾ ಸಮಯದಲ್ಲೂ ಭಗವಂತನ ಮೇಲೆ ಸಂಪೂರ್ಣವಾಗಿ ಗಮನಹರಿಸಿರುವವನು. ಒಮ್ಮೆ ನಾವು ಅವನ ದೈವಿಕ ಸೌಂದರ್ಯವನ್ನು ಅನುಭವಿಸಲು ಪ್ರಾರಂಭಿಸಿದಾಗ, ನಮ್ಮ ದೃಷ್ಟಿ ಮತ್ತು ಮನಸ್ಸು ಅವನ ಮೇಲೆ ಸ್ಥಿರವಾಗಿರುತ್ತದೆ ಮತ್ತು ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುತ್ತದೆ. ಇದು ಎಂಪೆರುಮಾನ್‌ಗೆ ನಮ್ಮ ಸೇವೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಪಿಳ್ಳೈ ಲೋಕಾಚಾರ್ಯರು ಮುಮುಕ್ಷುಪ್ಪದಿ ಸೂತ್ರಂ 187 ರಲ್ಲಿ “ಸೌಂಧರ್ಯಂ ಅಂತರಾಯಮ್” (ஸௌந்தர்யம் அந்தராயம்) – ಭಗವಂತನ ಸೌಂದರ್ಯವು ಒಂದು ಅಡಚಣೆಯಾಗಿದೆ. ಸ್ವಾಭಾವಿಕ ಸ್ಥಾನವೆಂದರೆ – ಭಗವಾನ್ ಗುರು ಮತ್ತು ಜೀವಾತ್ಮನು ಸೇವಕ. ಭಗವಂತನ ಗುಣಗಳನ್ನು ಅನುಭವಿಸುವ ಮೂಲಕ, ಜೀವಾತ್ಮನು ಭಗವಂತನ ಕಡೆಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ತರುವಾಯ ಅಂತಹ ಮಹಿಮಾನ್ವಿತ ಎಂಪೆರುಮಾನ್‌ನ ಸೇವೆ ಮಾಡುವ ಬಯಕೆಯನ್ನು ಬೆಳೆಸಿಕೊಳ್ಳುತ್ತಾನೆ. ಇದು ಜೀವಾತ್ಮದ ಸ್ವರೂಪಕ್ಕೆ ಸರಿಹೊಂದುತ್ತದೆ, ಅದು ಶೇಷತ್ವಂ (ದ್ವಿತೀಯ/ಸೇವಕನಾಗಿರುವುದು). ಇದು ಅಪೇಕ್ಷಣೀಯವೂ ಆಗಿದೆ. ಒಮ್ಮೆ ಗಮನವು ಎಂಪೆರುಮಾನ್‌ನ ದಿವ್ಯ ಸೌಂದರ್ಯದತ್ತ ಸಾಗಿದರೆ ಅದು ಕೈಂಕರ್ಯವನ್ನು ಮಾಡಲು ಅಡ್ಡಿಯಾಗುತ್ತದೆ. ಹೀಗಾಗಿ, ಕೈಂಕರ್ಯವನ್ನು ಕೇಂದ್ರೀಕರಿಸಿದವರಿಗೆ ಭಗವಂತನ ಸೌಂದರ್ಯವು ಅಡಚಣೆಯಾಗಿದೆ.

9. ಭಾಗವತ ಕೈಂಕರ್ಯ ನಿಷ್ಟನುಕ್ಕು ಭಗವತ್ ಕೈಂಕರ್ಯಂ  ವಿರೋಧಿ (பாகவத கைங்கர்ய நிஷ்டனுக்கு பகவத் கைங்கர்யம் விரோதி) – ಭಾಗವತರ (ಭಕ್ತರಿಗೆ) ಸೇವೆಯಲ್ಲಿ ಗಮನಹರಿಸಿರುವವರಿಗೆ ಭಗವತ್ ಕೈಂಕರ್ಯ (ಭಗವಂತನ ಸೇವೆ) ಒಂದು ಅಡಚಣೆಯಾಗಿದೆ.

ಭಗವತ್ ಕೈಂಕರ್ಯ (ಭಗವಂತನ ಸೇವೆ) ಗಮನಹರಿಸುವವರಿಗೆ – ಭಾಗವತ ಕೈಂಕರ್ಯ ಅಡಚಣೆ

ಜೀವಾತ್ಮದ ಸ್ವಾಭಾವಿಕ ಸ್ಥಿತಿಯು ಭಗವತ್ ಧಾಸ್ಯತ್ವ (ಭಗವಾನ್‌ನ ಸೇವಕನಾಗಿರುವುದು) ಮತ್ತು ಸಂಪೂರ್ಣವಾಗಿ ಎಂಪೆರುಮಾನ್‌ನ ವಿಲೇವಾರಿಯಾಗಿರುವುದು. ಇನ್ನೂ ಮುಖ್ಯವಾದದ್ದು – ಸ್ವರೂಪ ಯಥಾತ್ಮ್ಯಮ್ (ನಿಜವಾದ ಸ್ವಭಾವದ ಸಾರ) – ಭಾಗವತ ಶೇಷತ್ವಮ್ (ಭಾಗವತಗಳ ಸೇವಕನಾಗಲು).ಪೆರಿಯ ತಿರುಮೊಳಿ 8.10.3 ನಲ್ಲಿ ತಿರುಮಂಗೈ ಆಳ್ವಾರ್ ತಿರುಮಂತ್ರ (ಅಷ್ಟಾಕ್ಷರಿ )ಸಾರವನ್ನು ಸ್ವತಃ ಎಂಪೆರುಮಾನ್ಗೆ “ ನಿನ್ ತಿರುವೆಟ್ಟೆಳುತ್ತುಂ ಕಱ್ಱು ನಾನ್ ಉಱ್ಱದುಂ ಉನ್ನಡಿಯಾರ್ಕ್ಕಡಿಮೈ ಕಣ್ಣಪುರತ್ತುಱೈಯಮ್ಮಾನೇ “ ( நின் திருவெட்டெழுத்தும் கற்று நான் உற்றதும் உன்னடியார்க்கடிமை கண்ணபுரத்துறையம்மானே- ತಿರುಕಣ್ಣಪುರತ್ತು ಸ್ವಾಮಿ ! ತಿರುಮಂತ್ರದ ಅರ್ಥ ತಿಳಿದ ನಂತರ ನಾನು ನಿಮ್ಮ ಭಕ್ತರ ಸೇವಕ ಎಂದು ತಿಳಿದುಕೊಂಡೆ  ) . ನಾನ್ಮುಗನ್ ತಿರುವಂದಾದಿ 18 ನೇ “ ಏತ್ತಿಯಿರುಪ್ಪಾರೈ ವೆಲ್ಲುಮೇ ಮಱ್ಱವರೈಚ್ ಚಾತ್ತಿಯಿರುಪ್ಪರ್ ತವಮ್ “ ( ஏத்தியிருப்பாரை வெல்லுமே மற்றவரைச் சாத்தியிருப்பார் தவம்- ಭಗವಂತನ ಮೇಲಿನ ಭಕ್ತಿಗಿಂತ ಭಕ್ತರ ಮೇಲಿನ ಶ್ರದ್ಧೆ ಹೆಚ್ಚು) ಪಾಸುರದಲ್ಲಿ  ಎತ್ತಿ ತೋರಿಸಿದ್ದಾರೆ . ಅಂತಹ ಭಕ್ತರಿಗೆ ಶರಣಾದವರ ಸ್ಥಿತಿ ಹೆಚ್ಚು. ಶ್ರೀ ರಾಮಾಯಣದಲ್ಲಿ, ಲಕ್ಷ್ಮಣನ್ ಮತ್ತು ಭರತನು ಸಂಪೂರ್ಣವಾಗಿ ಶ್ರೀರಾಮನಿಗೆ ಶರಣಾದರು. ಶತ್ರುಗ್ನಾಳ್ವಾನ್ ಭರತನನ್ನೇ ಸರ್ವಸ್ವವಾಗಿ ಹೊಂದಿದ್ದರು. “ಶತೃಘ್ನೊ  ನಿತ್ಯ ಶತೃಘ್ನ:”( சத்ருக்நோ நித்யசத்ருக்ந: – ಶಾಶ್ವತ ಅಡಚಣೆಯನ್ನು ಗೆದ್ದವನು) ಎಂದು ಶ್ರೀ ರಾಮಾಯಣದಲ್ಲಿ ಹೇಳಲಾಗಿದೆ. ನಮ್ಮ ಪೂರ್ವಾಚಾರ್ಯರು “ಶತ್ರುಗ್ನಾಳ್ವಾನ್ ಶ್ರೀರಾಮನ ಸೌಂದರ್ಯ ಮತ್ತು ಮಂಗಳಕರ ಗುಣಗಳನ್ನು ಜಯಿಸಿದರು/ಅಲಕ್ಷಿಸಿದರು ಮತ್ತು ಭರತನಿಗೆ ಸಂಪೂರ್ಣವಾಗಿ ಸೇವೆ ಸಲ್ಲಿಸುತ್ತಿದ್ದರು” ಎಂದು ವಿವರಿಸಿದ್ದಾರೆ. ತಿರುವಾಯ್ಮೊಳಿ 8.10.3 ರಲ್ಲಿ ನಮ್ಮಾಳ್ವಾರ್ ಅವರು “ಅವನದಡಿಯಾರ್ ಸಿರುಮಾಮಾನಿಸರಾಯ್  ಎನ್ನೈಯಾಂಡಾರ್”( அவனடியார் சிறுமாமனிசராய் என்னையாண்டார்) ಎಂದು ಹೇಳುತ್ತಾರೆ. ಸಿಱುಮಾಮನಿಸರ್ – ಎಂಪೆರುಮಾನ್‌ಗೆ ಸಂಪೂರ್ಣವಾಗಿ ಶರಣಾದವರು, ಗಾತ್ರದಲ್ಲಿ ಚಿಕ್ಕವರಾಗಿದ್ದರೂ ಜ್ಞಾನ ಮತ್ತು ಅಭ್ಯಾಸದಲ್ಲಿ ಶ್ರೇಷ್ಠರು. ಅಂತಹ ಭಕ್ತರು ತಮ್ಮ ಒಡೆಯರು ಎಂದು ನಮ್ಮಾಳ್ವಾರ್ ಹೇಳುತ್ತಾರೆ. ಅಂತಹ ಭಕ್ತರು ಇರುವಾಗ ಅವರನ್ನು ನಿರ್ಲಕ್ಷಿಸಿ ಎಂಪೆರುಮಾನ್‌ನ ಪಾದಕಮಲಗಳಿಗೆ ಸೇವೆ ಸಲ್ಲಿಸುವುದು ಹೇಗೆ? ಜೀವಾತ್ಮದ ನೈಜ ಸ್ವರೂಪಕ್ಕೆ, ಭಗವತ್ ಕೈಂಕರ್ಯಕ್ಕಿಂತ ಭಾಗವತ ಕೈಂಕರ್ಯವು ಹೆಚ್ಚು ಸೂಕ್ತವಾಗಿದೆ. ಹೀಗಾಗಿ, ಭಾಗವತ ಕೈಂಕರ್ಯಕ್ಕೆ ಭಗವತ್ ಕೈಂಕರ್ಯವು ಅಡ್ಡಿಯಾಗಿದೆ.

ಮುಂದಿನ ಲೇಖನದಲ್ಲಿ ನಾವು ಮುಂದಿನ ವಿಭಾಗವನ್ನು ಮುಂದುವರಿಸುತ್ತೇವೆ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : https://ponnadi.blogspot.com/2013/12/virodhi-pariharangal-1.html

ಅರ್ಖೈವ್ ಮಾಡಲಾಗಿದೆ :  http://ponnadi.blogspot.com 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s